ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/01/2021
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ. 279. 304(ಎ) ಐಪಿಸಿ 187 ಐ.ಎಮ್.ವಿ. ಆಕ್ಟ : ಇಂದು ದಿನಾಂಕ: 28-01-2021 ರಂದು ಬೆಳಿಗ್ಗೆ 10-00 ಗಂಟೆಗೆ ಫಿಯರ್ಾದಿ ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೆನೆಮದರೆ ನನ್ನ ಮಗಳಾದ ರೇಣುಕಾ ಈಕೆಗೆ ಕಾಳಬೆಳಗುಂದಿ ಗ್ರಾಮಕ್ಕೆ ಕೊಟ್ಟಿದ್ದು ಆಕೆ ಇವಾಗ ಡೆಲೆವರಿಗೆ ಅಂತಾ ಬೆಳಗುಂದಿ ಗ್ರಾಮಕ್ಕೆ ಬಂದಿರುತ್ತಾಳೆ ನನ್ನ ಮಗಳ ಮಗನಾದ ನರೇಶ ವ|| 3 ವರ್ಷ ಇವನಿಗೆ ಕಾಮಣಿ ಆಗಿದ್ದರಿಂದ ಅಲಲ್ಲಿ ತೋರಿಸಿದರು ಆರಾಮ ಆಗದ ಕಾರಣ ಬೀಗರು ನೆಂಟರು ನಮಗೆ ಹಳಿಗೇರಾ ಗ್ರಾಮದಲ್ಲಿ ಕಾಸಗಿ ಔಷಧಿ ತೋರಿಸಿರಿ ಆರಾಮ ಆಗುತ್ತದೆ ಅಂತಾ ಹೇಳಿದ್ದರು. ಅದಕ್ಕೆ ನನ್ನ ಮಗಳ ಮಗನಿಗೆ ಹಳಿಗೇರಾ ಗ್ರಾಮದಲ್ಲಿ ತೋರಿಸಬೇಕಂತ ಇಂದು ದಿನಾಂಕ: 28-01-2021 ರಂದು ಬೆಳಿಗ್ಗೆ 06-00 ಗಂಟೆಗೆ ನನ್ನ ಗಂಡ ಶಿವಪ್ಪ ಮತ್ತು ನಮ್ಮ ಮೈದುನನ ಮಗ ರಮೇಶ ಇವರು ನಮ್ಮ ಮೋಟರ ಸೈಕಲ್ ನಂ. ಕೆಎ-36 ಇಎ-1816 ನೇದ್ದನ್ನು ತೆಗೆದುಕೊಂಡು ನರೇಶ ಈತನಿಗೆ ಕರೆದುಕೊಂಡು ಹಳಿಗೇರಿಗೆ ಹೋಗಿ ಔಷಧಿ ಕುಡಿಕೊಂಡು ಬರುತ್ತೇವೆ ಅಂತಾ ಹೇಳಿ ಹೋದರು ಆಗ ಮೋಟರ ಸೈಕಲನ್ನು ನಮ್ಮ ಮೈದುನನ ಮಗ ರಮೇಶ ಇತನು ನಡೆಸಿಕೊಂಡು ಹೋದನು. ದಿನಾಂಕ: 28-01-2021 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ಮೈದುನನ ಮಗ ರಮೇಶ ಈತನು ಪೊನ್ ಮಾಡಿ ತಿಳಿಸಿದ್ದೇನೆಂದರೆ ನಾವು ಹಳಿಗೇರಿಗೆ ಹೋಗುವಾಗ ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ನೀಲಹಳ್ಳಿ ಕ್ರಾಸ ಹತ್ತಿರ ಅಪಘಾತವಾಗಿದೆ ಅಪ್ಪ ಮಾತಾಡುತಿಲ್ಲ ಬೇಗ ಬರ್ರಿ ಅಂತಾ ತಿಳಿಸಿದ್ದರಿಂದ ಆಗ ನಾನು ಮತ್ತು ನನ್ನ ಮಗ ಶರಬಯ್ಯ ಇಬ್ಬರು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡ ರೋಡಿನ ಮೇಲೆ ಬಿದ್ದಿದ್ದನು ಆತನಿಗೆ ನೋಡಲಾಗಿ ಎಡಗಾಲಿನ ಮೊಣಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿತ್ತು, ಹಣಗೆ ಮತ್ತು ಬಾಯಿಗೆ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದನು. ಆಗ ನಾನು ನಮ್ಮ ರಮೇಶನಿಗೆ ಹೇಗಾಯಿತು ಅಂತಾ ಕೇಳಲಾಗಿ ನಾನು ನಮ್ಮ ಮೋಟರ ಸೈಕಲ ಮೆಲೆ ಬೆಳಗುಂದಿ ಗ್ರಾಮದಿಂದ ಹಳಿಗೇರಾ ಗ್ರಾಮಕ್ಕೆ ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ನೀಲಹಳ್ಳಿ ಕ್ರಾಸ ಹತ್ತಿರ ಬೆಳಿಗ್ಗೆ 06-40 ಗಂಟೆ ಸುಮಾರಿಗೆ ಹೋಗುತ್ತಿರುವಾಗ ಯಾವೊದೊ ಒಂದು ಲಾರಿ ಚಾಲಕನು ತಾನು ನಡೆಸುವ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಎದುರಿಗೆ ಬರುತ್ತಿರುವದನ್ನು ನೋಡಿ ನಾನು ನನ್ನ ಮೋಟರ ಸೈಲಕನ್ನು ರೋಡಿನ ಮೇಲೆ ನಿಲ್ಲಿಸಿದೆನು ಆಗ ದೊಡ್ಡಪ್ಪ ಮೋಟರ ಸೈಕಲದಿಂದ ಕೆಳಗೆ ಇಳಿಯುತ್ತಿರುವಾಗ ಆಗ ಲಾರಿ ಚಾಲಕನು ದೊಡ್ಡಪ್ಪನಿಗೆ ಡಿಕ್ಕಿಪಡಿಸಿಕೊಂಡು ಲಾರಿಯನ್ನು ನಿಲ್ಲಿಸದೆ ವೇಗವಾಗಿ ರಾಯಚೂರ ಕಡೆಗೆ ಹೋದನು ನನಗೆ ಮತ್ತು ನರೇಶನಿಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಅಂತಾ ತಿಳಿಸಿದನು.ಕಾರಣ ನನ್ನ ಗಂಡ ಶಿವಪ್ಪ ತಂದೆ ಯಂಕಪ್ಪ ಬರಕಿ ವ|| 48 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಬೆಳಗುಂದಿ ಈತನಿಗೆ ಅಪಘಾತಪಡಿಸಿ ಲಾರಿಯನ್ನು ನಿಲ್ಲಿಸದೆ ಓಡಿಸಿಕೊಂಡು ಹೋದ ಯಾವುದೊ ಲಾರಿ ಚಾಲಕನ ಮೇಲೆ ಸೂಕ್ತ ಸೂಕ್ತ ಕಾನೂನು ಕ್ರಮ ಜರುಗಿಸಬೇಕುಅಂತಾ ನೀಡಿದ ಪಿಯರ್ಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.15/2021 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ. ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 03/2021 ಕಲಂ. 174 (ಸಿ) ಸಿಆರ್ಪಿಸಿ : ಇಂದು ದಿನಾಂಕ:28/01/2021 ರಂದು 8:40 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀಮತಿ ಜವ್ಹರಾ ಜಬೀನ್ ಗಂಡ ಮಹ್ಮದ್ ಆಶಮಿದ ಅಲಿ @ಮಕ್ಬುಲ್ ಅಲಿ ಸಾ:ಮುಲ್ಲಾ ಮೋಹಲ್ಲಾ ಸುರಪೂರ ಇವರ ಠಾಣೆಗೆ ಹಾಜರಾಗಿ ಪಿಯರ್ಾದಿ ನೀಡಿದ್ದೆನೆಂದರೆ ನಾನು ನನ್ನ ಗಂಡ ಇಬ್ಬರೂ ಹಾಗೂ ನಮ್ಮ ಸಾಕು ಮಗಳಾದ ಸುಮಯ್ಯ ನಾವೆಲ್ಲರೂ ಸುಳ ಸಂಸಾರವನ್ನು ನಡೆಸಿಕೊಂಡು ಇಲ್ಲಿಯವರೆಗೆ ಬಂದಿರುತ್ತೆವೆ. ನನ್ನ ಗಂಡನು ಗುತ್ತಿಗೆ ಆಧಾರದ ಮೇಲೆ ಮನೆ ಕಟ್ಟಡ ಕೆಲಸವನ್ನು ಮಾಡಿಕೊಂಡು 30-40 ಕಟ್ಟಡ ಕಾಮರ್ಿಕರೊಂದಿಗೆ ಸುರಪೂರದಲ್ಲಿ ಹಾಗೂ ಶಹಾಪೂರ ತಾಲೂಕದಲ್ಲಿ ಸುಮಾರು ಮನೆ ಕಟ್ಟಡ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಂಡು ಉಪಜೀವಿಸಿಕೊಂಡು ಇರುತ್ತೆವೆ. ಹೀಗಿರುವಾಗ ಕೆಲವೊಂದು ಕಟ್ಟಡಗಳನ್ನು ಸಂಪೂರ್ಣಗೊಂಡಿದ್ದು ಇನ್ನು ಕೆಲವು ಕಟ್ಟಡಗಳು ಮುಗಿಯುವ ಹಂತದಲ್ಲಿದ್ದವು ಇವುಗಳನ್ನು ಮೆಂಟೆನನ್ಸಿಗಾಗಿ ದಿನ ನಿತ್ಯ ಬೆಳಿಗ್ಗೆ 6 ಗಂಟೆಗೆ ಎದ್ದು ನಮಾಜ ಮುಗಿಸಿಕೊಂಡು ನಂತರ ಸೈಟಗಳಿಗೆ ಹೋಗಿ ಬೇಟಿ ಮತ್ತೆ ಪುನಃ 8:30 ನಿ.ಕ್ಕೆ ಮನೆಗೆ ಬರುತ್ತಿದ್ದನು. ಎಂದಿನಂತೆ ಇಂದು ದಿನಾಂಕ:28/01/2021 ರಂದು 6 ಗಂಟೆಗೆ ಎದ್ದು ನಮಾಜ ಮಾಡಿಕೊಂಡು ದಿವಳಗುಡ್ಡದ ಹಸೀನಾ ಬಾನು ಮೇಡಂ ಮನೆ ಕಟ್ಟುವ ಸ್ಥಳಕ್ಕೆ ಹೋಗಿರುತ್ತಾನೆ. ಆಗ ಈತನು ತನ್ನಲ್ಲಿ ಕೆಲಸ ಮಾಡುತ್ತಿರುವ ಧರ್ಮರಾಜ ಎನ್ನುವ ಲೇಬರಿಗೆ ಪೋನ ಮುಖಾಂತರ ಕರೆ ಮಾಡಿ ನಾನು ಸೈಟ್ ಮೇಲೆ ಇರುತ್ತೆನೆ. ನೀನು ಬಾ ಎಂದು ಪೋನ ಮುಖಾಂತರ ತಿಳಿಸಿರುತ್ತಾನೆಂದು ನನಗೆ ಧರ್ಮರಾಜ ಪೋನ ಮುಖಾಂತರ 7-15 ನಿ.ಕ್ಕೆ ಪೋನ ಮಾಡಿರುತ್ತಾನೆ. ನಾನು 15 ನಿಮಿಷ ಬಿಟ್ಟು ಹೋಗುವಷ್ಟರಲ್ಲಿ ನಿನ್ನ ಗಂಡ ನೇಣು ಹಾಕಿಕೊಂಡಿರುತ್ತಾನೆಂದು ನನಗೆ ಪೋನಿನ ಮುಖಾಂತರ ಧರ್ಮರಾಜನು ತಿಳಿಸಿದನು. ಈ ಹಿಂದೆ 2-3 ದಿವಸದ ಹಿಂದೆ ಮತ್ತು ನಿನ್ನೆ ರಾತ್ರಿಯೂ ಸಹ ನನ್ನ ಗಂಡನು ಅಸಮದಾನವಾಗಿ ವತರ್ಿಸುವುದು ಸಿಟ್ಟು ಸಿಟ್ಟು ಮಾಡುವುದು ಆತನ ನಡುವಳಿಕೆಯಲ್ಲಿ ಪತಿವರ್ತನೆ ಕಂಡಿದ್ದು ಯಾಕೆ ಎಂದು ಕೇಳಿದಾಗ ಯಾವುದೇ ಉತ್ತರ ನೀಡದೇ ರಾತ್ರಿ ತಡವಾಗಿ ಬರುವದು ಮಾಡುತ್ತಿದ್ದನು. ನಿನ್ನೆ ರಾತ್ರಿ ನಾನು ಸುಮಾರು ಪೋನ ಮಾಡಿರುತ್ತೆನೆ. ನಿನ್ನೆ ರಾತ್ರಿ 11 ಗಂಟೆಗೆ ಮನೆಗೆ ಬಂದಿರುತ್ತಾನೆ. ತಡವಾಗಿ ಬರಲು ಕಾರಣ ನನಗೇನು ಗೋತ್ತಿರುವದಿಲ್ಲ. ಆದರೂ ಇತನಿಗೆ ಕೆಲವು ಪೋನ ಕರೆಗಳ ಮೂಲಕ ಕರೆಯಿಸುತ್ತಿದ್ದರು. ಅವರು ಯಾರು ಏನು ಅನ್ನುವು ನನಗೆ ಹೇಳುತ್ತಿರಲಿಲ್ಲ. ಆದರೆ ಹಣದ ವ್ಯವಹಾರದ ಯಾವುದಾದರು ಸಮಸ್ಯೆಗಳು ಇರಬಹುದು ಎಂದು ನನಗೆ ತಿಳಿದು ಬಂದಿರುತ್ತದೆ. ಆದರೆ ಈತನಿಗೆ ಮಾನಸಿಕವಾಗಿ ತೊಂದರೆ ಕೊಡುವದು ಯಾರು ಅಂತ ನನಗೆ ಗೊತ್ತಿರುವದಿಲ್ಲ. ಸದರಿ ದಿವಳಗುಡ್ಡದಲ್ಲಿ ಹಸೀನಾಬಾನು ಮೇಡಂ ಇವರ ಕಟ್ಟುತ್ತಿರುವ ಮನೆಗೆ ಹೋಗಿ ನೋಡಲಾಗಿ ನನ್ನ ಗಂಡನು ಪ್ಲಾಸ್ಟಿಕ ವೈರ್ ಹಗ್ಗದಿಂದ ನೇಣು ಹಾಕಿಕೊಂಡು 7:45 ಎ.ಎಮ್ ಕ್ಕೆ ಮೃತಪಟ್ಟಿರುತ್ತಾನೆ. ಆದ್ದರಿಂದ ನನ್ನ ಗಂಡನು ಆತ್ಮಹತ್ಯೆ ಮಾಡಿಕೊಳ್ಳುವದಕ್ಕೆ ಸಾಧ್ಯವಿಲ್ಲ ಏಕೆಂದರೆ ಆತನಾತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನನಗೆ ಸಂಶಯವಿರುತ್ತದೆ. ಈ ಆತ್ಮಹತ್ಯೆ ಹಿಂದೆ ಯಾರೂ ಇರುವದನ್ನು ಪತ್ತೆ ಹಚ್ಚಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ದೂರು ಸಲ್ಲಿಸುತ್ತಿದ್ದೆನೆ. ಅಂತ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.03/2021 ಕಲಂ 174 (ಸಿ) ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 12/2021 ಕಲಂ: 302 ಸಂಗಡ 34 ಐಪಿಸಿ : ದಿನಾಂಕ:11/01/2021 ರಂದು 9-00 ಪಿ.ಎಂ ಕ್ಕೆ ಶ್ರೀಮತಿ ಮಾನಮ್ಮ ಗಂಡ ಮರೆಪ್ಪ ಪೊಲೀಸ್ ಗೌಡರ ಸಾಃ ಬೇವಿನಾಳ(ಎಸ್.ಹೆಚ್) ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:11/01/2021 ರಂದು ನನ್ನ ಗಂಡನಾದ ಮರೆಪ್ಪ ಇತನು ಸಾಯಂಕಾಲ ನಮ್ಮ ಮನೆಯಿಂದ ಕುರಿ ದೊಡ್ಡಿ ಕಡೆಗೆ ಹೊರಟಿದ್ದಾಗ 6:00 ಪಿಎಂ ಸುಮಾರಿಗೆ ನಮ್ಮೂರಿನ ಯಂಕಪ್ಪ ತಂದೆ ಹಣಮಪ್ಪ ತಳವಾರ ಇವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ನಿಶ್ಚಿತಾರ್ಥ ಕ್ರಾರ್ಯಕ್ರಮದಲ್ಲಿ ಅಡಿಗೆ ಮಾಡಲು ಒಲೆ ಹಚ್ಚಿ ಎಣ್ಣೆ ಕಾಯಿಸಿ ಪುರಿ ಹಾಗೂ ಬಜಿ ಮಾಡಿ ಮುಗಿದ ಬಳಿಕ ಕಾದ ಎಣ್ಣೆಯ ಕಡಾಯಿ ಕೆಳಗಡೆ ಇಟ್ಟಿದ್ದರು. ಆಗ ಕಳೆದ ಗ್ರಾಮ ಪಂಚಾಯತ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ ನನ್ನ ಗಂಡನೊಂದಿಗೆ ವೈಷಮ್ಯ ಬೆಳಿಸಿಕೊಂಡಿರುವ ನಮ್ಮೂರಿನ ಪರಿಶಿಷ್ಟ ಜಾತಿಯ 1) ಭೀಮಣ್ಣ ತಂದೆ ಗೋವಿಂದಪ್ಪ ಬಟ್ಟರ, 2) ಹಣಮಂತ ತಾಯಿ ರಂಗಮ್ಮ ಸಾಸಗೇರಿ, 3) ಹಣಮಪ್ಪ ತಂದೆ ಶಿವಪ್ಪ ಜಾಲಹಳ್ಳಿ, 4) ತಿಮ್ಮಪ್ಪ ತಾಯಿ ಆದೇಮ್ಮ ತಳವಾರ ಇವರೆಲ್ಲರೂ ನನ್ನ ಗಂಡನಿಗೆ ಎಲೇ ಸೂಳೆ ಮಗನೆ ಊರಲ್ಲಿ ನಿನ್ನದು ಬಹಳ ಆಗ್ಯಾದ, ನಮ್ಮ ಮಾತಿಗೆ ಬೆಲೆ ಕೊಡಲ್ಲ, ನಮ್ಮ ವಿರುದ್ದವಾಗಿ ತಿರುಗಾಡಿತ್ತಿ ಏನು ಅಂತಾ ಅಂದವರೆ ಅವರಲ್ಲಿ ಭೀಮಣ್ಣನು ಕೈಯಿಂದ ನನ್ನ ಗಂಡನ ಕಪಾಳಕ್ಕೆ ಹೊಡೆದನು. ಹಣಮಂತ ಮತ್ತು ಹಣಮಪ್ಪ ಇಬ್ಬರೂ ಕಾಲಿನಿಂದ ಒದ್ದರು. ನಂತರ ತಿಮ್ಮಪ್ಪ ಇತನು ನನ್ನ ಗಂಡಿನಿಗೆ ಕೈಯಿಂದ ನುಕಿಸಿ ಕೊಟ್ಟಿದ್ದರಿಂದ ನನ್ನ ಗಂಡನು ಕಾದ ಎಣ್ಣೆ ಕಡಾಯಿಯಲ್ಲಿ ಬಿದ್ದಿದ್ದರಿಂದ ಬೆನ್ನಿಗೆ ಎರಡು ಕೈಗಳಿಗೆ, ಹಾಗೂ ಎಡಗಾಲಿಗೆ ಸುಟ್ಟಗಾಯಗಳಾಗಿರುತ್ತವೆ. ಆಗ ನಮ್ಮೂರಿನ ಸಾಹೇಬಗೌಡ ಪೊಲೀಸ್ ಪಾಟೀಲ್, ಮಲ್ಲಯ್ಯ ತಂದೆ ತಿಪ್ಪಣ್ಣ ರೊಡ್ಡರ, ವಿಜಯಕುಮಾರ ತಂದೆ ದೇವಿಂದ್ರಪ್ಪ ಇವರು ಬಿಡಿಸಿರುತ್ತಾರೆ. ಆಗ ಅವರೆಲ್ಲರೂ ನನ್ನ ಗಂಡನಿಗೆ ಇನ್ನೊಮ್ಮೆ ನಮಗೆ ವಿರೋದ ಮಾಡಿದ್ದರೆ ನಿನಗೆ ಖಲಾಸ ಮಾಡುತ್ತೇವೆ ಮಗನೆ ಅಂತಾ ಜೀವದ ಬೇದರಿಕೆ ಹಾಕಿ ಹೋದರು. ನಂತರ ನಾವು ಒಂದು ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಚಿಕಿತ್ಸೆಗಾಗಿ ಸುರಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 12/2021 ಕಲಂ: 323, 324, 504, 506 ಸಂ. 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿಯ ಗಾಯಾಳು ಮರೆಪ್ಪ ತಂದೆ ಶೆಳ್ಳಿಗೆಪ್ಪ ಇತನು ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಯಲ್ಲಿ ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕಃ 28/01/2021 ರಂದು 10-30 ಎ.ಎಮ್ ಕ್ಕೆ ಸುಟ್ಟಗಾಯಗಳ ಭಾದೆಯಿಂದ ಮೃತಪಟ್ಟಿರುವ ಬಗ್ಗೆ ಡೆತ್ ಎಮ್.ಎಲ್.ಸಿ ತಿಳಿಸಿದ್ದರಿಂದ ಆಸ್ಪತ್ರೆಗೆ ಭೇಟಿನೀಡಿ ಫಿಯರ್ಾದಿಯ ಹೇಳಿಕೆ ಪಡೆದುಕೊಂಡು ಸದರಿ ಪ್ರಕರಣದಲ್ಲಿ ಕಲಂ. 302 ಐ.ಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ :- 13/2021 ಕಲಂ 341, 323, 504, 506, 109 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 28-01-2021 ರಂದು 1 ಪಿ.ಎಮ ಕ್ಕೆ ಫಿರ್ಯಾಧಿದಾರರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಸವೆನೆಂದರೆ ನಮ್ಮೂರಿನ ಸೀಮಾಂತರದಲ್ಲಿ ರೋಶನರಾಜು ಎಂಬುವವರು ಹೋಲ ಸವರ್ೇ ನಂ: 202 ಮತ್ತು 205 ಖರೀಧಿ ಮಾಡಿದ್ದು, ಅವರು ಖರೀದಿ ಮಾಡಿದ ಹೋಲ ನಮ್ಮ ಹಿರಿಯರಿಂದ ಬಂದ ಹೋಲ ಅಂತಾ ಗೊತ್ತಾದಾಗ ನಮ್ಮ ಮತ್ತು ಅವರ ಮಧ್ಯ ತಕರಾರುಗಳು ಆಗುತ್ತಾ ಬಂದಿರುತ್ತವೆ. ಈ ಹೋಲದಲ್ಲಿ ನಾಗರಾಜ ತಂದೆ ಭೀಮಯ್ಯಾ ಬಂಡಿವಡ್ಡರ ಇತನು ಕೂಲಿ ಕೆಲಸ ಮಾಡುತ್ತಿದ್ದು ಅವನು ಸದರಿ ಹೋಲದಲ್ಲಿ ಕೂಲಿ ಕೆಲಸ ಮಾಡುವಾಗ ನಾವು ಆತನಿಗೆ ಈ ಹೋಲದ ನಿರ್ಣಯ ಆಗುವತನಕ ಈ ಹೋಲದಲ್ಲಿ ಕೆಲಸ ಮಾಡಬೇಡ ಅಂತಾ ಕೇಳಿ ತಾಕಿತು ಮಾಡಿದ್ದರೂ ಕೂಡಾ ಆತನು ಆ ಹೋಲದಲ್ಲಿ ಕೆಲಸ ಮಾಡುತ್ತಾ ಬಂದಿರುತ್ತಾನೆ. ಹೀಗಿದ್ದು ಇಂದು ದಿನಾಂಕ 19-01-2021 ರಂದು ಬೆಳಗ್ಗೆ 11-30 ಗಂಟೆ ಸುಮಾರಿಗೆ ನನ್ನ ಗಂಡ ಮತ್ತು ಹಾಗೂ ನನ್ನ ಮಗನಾದ ಪರಮಣ್ಣಾ ಹಾಗೂ ನನ್ನ ಸಮಾಜದ ವೀರಪಣ್ಣಾ ತಂದೆ ನಾಗಪ್ಪಾ ದೋರೆ ಎಲ್ಲರೂ ಕೂಡಿ ಸದರಿ ರೋಶನರಾಜು ಇವರು ಖರೀಧಿ ಮಾಡಿದ ಹೋಲ ಸವರ್ೇ ನಂ: 202 ನೆದ್ದರ ಹತ್ತಿರ ಹೋದಾಗ ಆ ಹೋಲದಲ್ಲಿ ಆರೋಪಿ ನಾಗರಾಜ ಇತನು ಇತನು ಕೂಲಿ ಕೆಲಸ ಮಾಡುತ್ತಿದ್ದು ಫಿರ್ಯಾಧೀ ಗಂಡ ಆತನಿಗೆ ನಿನಗೆ ಈ ಮೊದಲಿನಿಂದಲೂ ಈ ಹೋಲದಲ್ಲಿ ಕೆಲಸ ಮಾಡಬೇಡ ಈ ಹೋಲ ನಮ್ಮ ಹಿರಿಯರಿಂದ ಬಂದ ಹೋಲವಿದೆ ಅಂತಾ ಹೇಳುತ್ತಾ ಬಂದರೂ ಕೂಡಾ ನೀನು ನಮ್ಮ ಮಾತು ಕೇಳುತ್ತಿಲ್ಲಾ ನೀನು ಈ ರೀತಿ ಮಾಡುವುದು ಸರಿಯಲ್ಲಾ ಅಂತಾ ಅಂದಾಗ ಆರೋಪಿತನು ಭೋಸಡಿ ಮಕ್ಕಳೇ ನಮಗೆ ಎದುರು ಮಾತಾಡುತ್ತಿರೇನು, ಇವತ್ತು ನಿಮಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ನನ್ನ ಗಂಡ ಮತ್ತು ಮಗನಿಗೆ ಸುತ್ತುಗಟ್ಟಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಇಬ್ಬರಿಗೂ ಹೊಡೆದು ಇನ್ನೊಮ್ಮೆ ಇಲ್ಲಿಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿದ್ದು ಇರುತ್ತದೆ. ಮತ್ತು ಈ ಘಟನೆಗೆ ಇನ್ನೂ ಮೂರು ಜನರು ಪ್ರಚೋಧನೆ ನೀಡಿದ್ದಾರೆ ಅಂತಾ ಗೊತ್ತಾಗಿದ್ದು ಈ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾಧಿ ಸಾರಾಂಶದ ಮೇರೆಗೆ ಗುನ್ನೆ ದಾಖಲಾಗಿರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 12/2021 ಕಲಂ: 323, 498 (ಎ), 504, 506, 34 ಐಪಿಸಿ : ಇಂದು ದಿ: 28/01/2021 ರಂದು 1.45 ಪಿಎಮ್ಕ್ಕೆ ಶ್ರೀಮತಿ ಲಲಿತಾ ಗಂಡ ಕುಮಾರ ಚವ್ಹಾಣ ವಯಾ|| 20 ಜಾ|| ಲಂಬಾಣಿ ಉ|| ಕೂಲಿಕೆಲಸ ಸಾ|| ಏವೂರ ದೊಡ್ಡ ತಾಂಡಾ ಹಾ.ವ|| ಕಿರದಳ್ಳಿ ತಾಂಡಾ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾವು 3 ಜನ ಮಕ್ಕಳಿದ್ದು, ಅದರಲ್ಲಿ 2 ಜನ ಗಂಡುಮಕ್ಕಳು, ನಾನು ಒಬ್ಬಳೆ ಹೆಣ್ಣುಮಗಳಿರುತ್ತೇನೆ. ನನ್ನ ಎರಡು ಜನ ಅಣ್ಣಂದಿರಾದ ಸಿದ್ದು ಮತ್ತು ಶಿವಕುಮಾರ ಇವರು ಮದುವೆ ಮಾಡಿಕೊಂಡು ದುಡಿಯಲು ಪೂನಾಕ್ಕೆ ಹೋಗಿರುತ್ತಾರೆ. ನನ್ನ ತವರು ಮನೆ ಕಿರದಳ್ಳಿ ತಾಂಡಾವಾಗಿದ್ದು ಸುಮಾರು 10 ತಿಂಗಳ ಹಿಂದೆ ಅಂದರೆ ದಿನಾಂಕ: 29/05/2020 ರಂದು ನನಗೆ ಏವೂರ ದೊಡ್ಡ ತಾಂಡಾದ ಕುಮಾರ ತಂದೆ ಲಾಲೂ ಚವ್ಹಾಣ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನನ್ನ ಗಂಡ ಕುಮಾರ ಈತನು ಮದುವೆಯಾದಾಗಿನಿಂದ ಸುಮಾರು 1 ತಿಂಗಳವರೆಗೆ ನನ್ನೊಂದಿಗೆ ಚೆನ್ನಾಗಿದ್ದವನು, ಇಲ್ಲಿಯವರೆಗೂ ನನ್ನೊಂದಿಗೆ ಯಾವುದೇ ದೈಹಿಕ ಸಂಪರ್ಕ ಹೊಂದಿರುವದಿಲ್ಲ. ಮದುವೆಯಾದ 1 ತಿಂಗಳಿಂದ ಈಚೆಗೆ ದಿನಾಲು ನನ್ನ ಗಂಡ ಕುಮಾರ ತಂದೆ ಲಾಲು ಚವ್ಹಾಣ ಹಾಗೂ ಅತ್ತೆ ಶಾಣಿಬಾಯಿ ಗಂಡ ಲಾಲೂ ಚವ್ಹಾಣ ಸಾ|| ಇಬ್ಬರೂ ಏವೂರ ದೊಡ್ಡ ತಾಂಡಾ ಇವರು ದಿನಾಲು ನನಗೆ ನೀನು ಚೆನ್ನಾಗಿಲ್ಲ, ನಿನಗೆ ಯಾವುದೇ ಅಡಿಗೆ ಮಾಡಲು ಬರುವದಿಲ್ಲ, ನೀನು ನಮಗೆ ಇಷ್ಟವಿರುವದಿಲ್ಲ ಅಂತ ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ನಾನು ಈ ವಿಷಯವನ್ನು ನಮ್ಮ ತಾಯಿಯಾದ ಕಮಲಿಬಾಯಿ ಇವರಿಗೆ ಆಗಾಗ ಫೋನ್ ಮುಖಾಂತರ ತಿಳಿಸಿದ್ದು ಅವರು ಆಯಿತು ನಾವು ಬಂದು ಹೇಳುತ್ತೇವೆ ಅಂತ ತಿಳಿ ಹೇಳಿದ್ದರು. ಅದರಂತೆ ನಮ್ಮ ತಾಂಡಾದಿಂದ ನಮ್ಮ ತಾಯಿ ಕಮಲಿಬಾಯಿ, ನಮ್ಮ ಅಣ್ಣ ಸಿದ್ದು, ಕಿರದಳ್ಳಿ ತಾಂಡಾದ ಪ್ರಮುಖರಾದ ಚಂದ್ರಶೇಖರ ತಂದೆ ಲಕ್ಷ್ಮಣರಾವ್ ರಾಠೋಡ ಇವರೆಲ್ಲರು ಏವೂರ ದೊಡ್ಡ ತಾಂಡಾಕ್ಕೆ ಬಂದು ನನ್ನ ಗಂಡ ಹಾಗೂ ಅತ್ತೆಗೆ ತಿಳಿ ಹೇಳಿದ್ದರು. ಹೀಗಿದ್ದು, ದಿನಾಂಕ: 17/01/2021 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡ ಕುಮಾರ ಹಾಗೂ ಅತ್ತೆ ಶಾಣಿಬಾಯಿ ಈ ಎರಡೂ ಜನರು ಸೇರಿ ಸೂಳೆ ನೀನು ಸರಿಯಾಗಿಲ್ಲ, ನಿನಗೆ ಯಾವುದೇ ಕೆಲಸ ಮಾಡಲು ಬರುವದಿಲ್ಲ, ನೀನು ದರಿದ್ರದವಳಿದ್ದೀ ಅಂತ ನನಗೆ ಅವಾಚ್ಯವಾಗಿ ಬೈದು ಇಬ್ಬರೂ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದು ಮನೆಯಿಂದ ಹೊರಗೆ ಹಾಕಿದ್ದು, ಅಲ್ಲದೆ ಇನ್ನೊಂದು ಸಲ ನಮ್ಮ ಮನೆಯೊಳಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದರು. ನಾನು ರಾತ್ರಿ ಪೂತರ್ಿ ನಮ್ಮ ಮನೆಯ ಅಂಗಳದಲ್ಲಿಯೇ ಮಲಗಿಕೊಂಡು ದಿನಾಂಕ: 18/01/2021 ರಂದು ಬೆಳಿಗ್ಗೆ ನನ್ನ ಅಣ್ಣ ಸಿದ್ದು ಈತನಿಗೆ ನಾನು ಫೋನ್ ಮಾಡಿ ನಡೆದ ವಿಷಯ ತಿಳಿಸಿದಾಗ, ಆತನು ನಮ್ಮ ಏವೂರ ದೊಡ್ಡ ತಾಂಡಾಕ್ಕೆ ಬಂದು ನನ್ನನ್ನು ಕರೆದುಕೊಂಡು ನಮ್ಮ ಕಿರದಳ್ಳಿ ತಾಂಡಾಕ್ಕೆ ಬಂದಿದ್ದು ಇರುತ್ತದೆ. ಇಲ್ಲಿಯವರೆಗೆ ನಮ್ಮ ತಾಂಡಾದ ಪ್ರಮುಖರಲ್ಲಿ ಹಾಗೂ ನಮ್ಮ ಮನೆಯವರಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 12/2021 ಕಲಂ: 323, 498ಎ, 504, 506, 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 21/2021 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 28/01/2021 ರಾತ್ರಿ 20-10 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ. (ಅ.ವಿ) ಇವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೆನೆಂದರೆ, ಇಂದು ದಿನಾಂಕ 28/01/2021 ರಂದು ರಾತ್ರಿ 7-45 ಗಂಟೆಯ ಸುಮಾರಿಗೆ ಠಾಣೆಯಲ್ಲಿ ಇದ್ದಾಗ ಪಿ. ಐ. ಸಾಹೇಬರಿಗೆ ಬಂದ ಮಾಹಿತಿಯನ್ನು ನನಗೆ ತಿಳಿಸಿದ್ದೆನೆಂದರೆ. ದೋರನಹಳ್ಳಿ ಗ್ರಾಮದ ಬಿದರಾಣಿ ಕ್ರಾಸ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಮುಂದಿನ ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 21/2021 ಕಲಂ 78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಂತರ ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 1630=00 ರೂಪಾಯಿ ಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ :-09/2021 ಕಲಂ 341, 323, 504, 506 ಸಂಗಡ 34 ಐಪಿಸಿ : ದಿನಾಂಕ:24/01/2021 ರಂದು ಮುಂಜಾನೆ ಫಿಯರ್ಾದಿಯು ತನ್ನ ಹೊಲಕ್ಕೆ ಹೋಗಿ ನೋಡಲಾಗಿ ಆರೋಪಿತರು ಫಿಯರ್ಾದಿಯ ಹೊಲದ ಮಧ್ಯಭಾಗದಿಂದ ಕವಲಿ ಮಾಡಿಕೊಂಡು ತಮ್ಮ ಹೊಲಕ್ಕೆ ನೀರು ತೆಗೆದುಕೊಂಡಿರುವುದು ಕಂಡು ಮುಂಜಾನೆ 9 ಗಂಟೆ ಸುಮಾರಿಗೆ ಫಿಯರ್ಾದಿಯು ಅರೋಪಿತರ ಹತ್ತಿರ ಹೋಗಿ ಇನ್ನೊಮ್ಮೆ ಈ ರೀತಿ ಕವಲಿ ಮಾಡಿ ನೀರು ತೆಗೆದುಕೊಂಡರೆ ಸರಿ ಇರುವದಿಲ್ಲ ಅಂತಾ ಅಂದು ತನ್ನ ಹೊಲದ ಕಡೆಗೆ ಹೊರಟಾಗ ಆರೋಪಿತರು ಫಿಯರ್ಾದಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.