ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/01/2021
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ 11/2021 ಕಲಂ 379 ಐಪಿಸಿ: ಸಾರಾಂಶವೇನೆಂದರೆ, ನಾನು ನನ್ನ ಉಪಜೀವನಕ್ಕಾಗಿ ಒಂದು ಅಪ್ಪೆ ಆಟೋ ತೆಗೆದುಕೊಂಡೊದ್ದು, ಅದರ ನಂ ಕೆ.ಎ 33 ಎ 0950, ಇಟಿರಟಿಜ ಓಠ-ಘ2ಆ3273700, ಅಚಿ ಓಠ-ಒಃಘಿ0000ಚಈಕಆ495132, ಅಂತಾ ಇರುತ್ತದೆ. ಆಟೋದ ಅಂದಾಜು ಕಿಮ್ಮತ್ತು 85,000/- ರೂಪಾಯಿಗಳು. ಈ ಆಟೋದಲ್ಲಿ ನಾನು ದಿನಾಲು ನಮ್ಮೂರಿನಿಂದ ಯಾದಗಿರಿಗೆ ಪ್ಯಾಶಿಂಜಾರ್ಗಳನ್ನು ತೆಗೆದುಕೊಂಡು ಹೋಗುವುದು ಬರುವುದು ಮಾಡುತ್ತೇನೆ. ಹೀಗಿದ್ದು ಪ್ರತಿ ನಿತ್ಯದಂತೆ ನಿನ್ನೆ ದಿನಾಂಕ 25/01/2021 ರಂದು ಮಧ್ಯಾಹ್ನ 01-00 ಗಂಟೆಗೆ ನಾನು ನನ್ನ ಆಟೋದಲ್ಲಿ ನಮ್ಮೂರಿನ ಪ್ಯಾಶಿಂಜರ ತೆಗೆದುಕೊಂಡು ಬಂದು ಯಾದಗಿರಿ ಹಳೆ ಬಸ್ ನಿಲ್ದಾಣದ ಹತ್ತಿರ ಅವರಿಗೆ ಇಳಿಸಿ ನನ್ನ ಆಟೋವನ್ನು ಲೋಕಾಯುಕ್ತ ಕಛೇರಿಯ ಮುಂದುಗಡೆ ಕಂಪೌಂಡ್ ಹತ್ತಿರ ನಿಲ್ಲಿಸಿ, ನಾನು ಸಂತೆ ಮಾಡಿಕೊಳ್ಳಲು ಸುಭಾಷ್ ಚೌಕ್ ಕಡೆಗೆ ಬಂದೆನು. ಸಂತೆ ಮಾಡಿಕೊಂಡು ಮರಳಿ 02-00 ಪಿ.ಎಂ ಸುಮಾರಿಗೆ ಆಟೋ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ನನ್ನ ಆಟೋ ಕಾಣಲಿಲ್ಲ. ಸುತ್ತ-ಮುತ್ತ ಅಲ್ಲಿ, ಅಲ್ಲಿ ನೋಡಿದರೂ ನನ್ನ ಆಟೋ ಕಾಣದೇ ಇದ್ದಾಗ ಯಾದಗಿರಿಯ ಚಿತ್ತಾಪೂರ ರಸ್ತೆಯಲ್ಲಿ ಮೆಕ್ಯಾನಿಕ್ ಅಂಗಡಿ ಇಟ್ಟುಕೊಂಡಿದ್ದ ನನ್ನ ತಮ್ಮ ಅಬ್ದುಲ್ ರಜಾಕ ತಂದೆ ಖಾಸಿಂಸಾಬ್ ವರಕೋರ ಮತ್ತು ನಮ್ಮ ಸಂಬಂಧಿ ಅಬ್ದುಲ್ ಅಜೀಜ್ ತಂದೆ ಮಹಿಬೂಬ್ಸಾಬ್ ಮೆಕ್ಯಾನಿಕ್ ಸಾ|| ಇಬ್ಬರೂ ನಾಯ್ಕಲ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನನಗೆ ವಿಚಾರಿಸಿದರು. ಎಲ್ಲರು ಕೂಡಿ ಯಾದಗಿರಿಯ ವಿವಿಧ ಕಡೆಗಳಲ್ಲಿ ನನ್ನ ಆಟೋ ನೋಡಿದರೂ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಆಟೋವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಆಟೋವನ್ನು ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ಮಾನ್ಯರು ನನ್ನ ಆಟೋವನ್ನು ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 11/2021 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 14/2021 ಕಲಂ. ಮಹಿಳೆ ಮತ್ತು ಮಗು ಕಾಣೆಯಾದ ಬಗ್ಗೆ: ಇಂದು ದಿನಾಂಕ. 26.01.2021 ರಂದು ಮಧ್ಯಾಹ್ನ 2.00 ಗಂಟೆಗೆ ಶ್ರೀಮತಿ ಭೀಮಮ್ಮ ಗಂಡ ತಾಯಪ್ಪ ಜೇಗರ ವಯ|| 60 ವರ್ಷ, ಜಾ|| ಮಾದಿಗ ಉ|| ಮನೆಕೆಲಸ ಸಾ|| ನೀಲಹಳ್ಳಿ ತಾ||ಜಿ|| ಯಾದಗಿರಿ ಇವಳು ಠಾಣೆಗೆ ಬಂದು ಹಾಜರಾಗಿ ಒಂದು ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ. 24.01.2021 ರಂದು ರಾತ್ರಿ ನನ್ನ ಭಾವನ ಮಗ ನರಸಪ್ಪ ತಂದೆ ಭೀಮರಾಯ ಜೇಗರ ಇವರು ನನಗೆ ಫೋನ ಮಾಡಿ ನನ್ನ ಸೊಸೆ ಹಣಮಂತಿ ಇವಳು ತನ್ನ ಮಗ ಆತ್ಮನನ್ನು ಕರೆದುಕೊಂಡು ದಿನಾಂಕ. 24.01.2021 ರಂದು ಬೆಳಿಗ್ಗೆ 10.00 ಗಂಟೆಗೆ ಸೈದಾಪೂರಕ್ಕೆ ಆಸ್ಪತ್ರೆಗೆ ಹೋಗಿ ಬರುವದಾಗಿ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ. ಎಲ್ಲಾ ಕಡೆಗೆ ಹುಡುಕಾಡಿದ್ದು ಎಲ್ಲಿಯು ಸಿಕ್ಕಿರುವದಿಲ್ಲ. ಕೊನೆಯದಾಗಿ ಹಣಮಂತಿ ಇವಳನ್ನು ನೀಲಹಳ್ಳಿ ಗ್ರಾಮದ ವೀರಭದ್ರ ತಂದೆ ಸಾಬಣ್ಣ ಮೇತ್ರಿ ಇವರು ಸಾಯಂಕಾಲ 4.00 ಗಂಟೆ ಸುಮಾರಿಗೆ ಸೈದಾಪೂರ ಮಾಕರ್ೆಟನಲ್ಲಿ ನೋಡಿರುತ್ತಾನೆ. ಅಂತ ತಿಳಿಸಿದನು. ನಂತರ ನಾನು ಎಲ್ಲಾ ಕಡೆಗೂ ನಮ್ಮ ಸಂಬಂಧಿಕರಿಗೆ ಫೋನ ಮಾಡಿ ವಿಷಯ ತಿಳಿಸಿ ವಿಚಾರಿಸಿದ್ದು ನನ್ನ ಸೊಸೆ ಹಣಮಂತಿ ಗಂಡ ಹಣಮಂತ ಜೇಗರ ವಯ|| 26 ವರ್ಷ, ಜಾ|| ಮಾದಿಗ ಮತ್ತು ನನ್ನ ಮೊಮ್ಮಗ ಆತ್ಮನ ತಂದೆ ಹಣಮಂತ ಜೇಗರ ವಯ||3 ವರ್ಷ, ಜಾ|| ಮಾದಿಗ ಇಬ್ಬರೂ ಸಾ|| ನೀಲಹಳ್ಳಿ ತಾ||ಜಿ|| ಯಾದಗಿರಿ ಇವರ ಸುಳಿವು ಸಿಕ್ಕಿರುವದಿಲ್ಲ. ಕಾಣೆಯಾದ ನನ್ನ ಸೊಸೆ ಹಣಮಂತಿ ಇವಳ ಚಹರೆ ದುಂಡು ಮುಖ, ಸಾದಾಕಪ್ಪು ಮೈಬಣ್ಣ ಸದೃಢ ಮೈಕಟ್ಟು, ನೆಟ್ಟನೆಯ ಮೂಗು, ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು ಹೊಂದಿರುತ್ತಾಳೆ. ಎತ್ತರ 5' 2 ಇದ್ದು, ಮೈಮೇಲೆ ನೀಲಿ ಚೌಕಡಿ ಸೀರೆ ಮತ್ತು ಬಿಳಿ -ನೀಲಿ ಹೂವಿನ ಜಂಪರ ಧರಿಸಿದ್ದು ಇರುತ್ತದೆ. ನನ್ನ ಮೊಮ್ಮಗ ಆತ್ಮನ ಇವನು ದುಂಡು ಮುಖ, ಸಾದಾ ಕಪ್ಪು ಮೈಬಣ್ಣ, ಸಾದಾರಣ ಮೈಕಟ್ಟು, ತಲೆಯಲ್ಲಿ 2 ಇಂಚು ಕಪ್ಪು ಕೂದಲು ಇದ್ದು, ಅಂದಾಜು ಎತ್ತರ 3' 2'' ಇದ್ದು, ಮೈಮೇಲೆ ಕೆಂಪು ಟೀಶರ್ಟ, ಹಳದಿ ಹಾಫ ಚಡ್ಡಿ ಧರಿಸಿರುತ್ತಾನೆ. ಕಾರಣ ನನ್ನ ಸೊಸೆ ಮತ್ತು ಮೊಮ್ಮಗ ಕಾಣೆಯಾದ ಬಗ್ಗೆ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಳಬೇಕು ಅಂತ ಅಂತ ದೂರು ಇರುತ್ತದೆ.
ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 08/2021 ಕಲಂ 279, 337 ಐ.ಪಿ.ಸಿ: ದಿನಾಂಕ: 26/01/2021 ರಂದು 4.30 ಪಿ.ಎಮ್ ಸುಮಾರಿಗೆ ಫಿಯರ್ಾದಿಯು ತನ್ನ ಬಸ್ ನಂ:ಕೆಎ-32, ಎಫ್-2147 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿಯಿಂದ ಶಹಾಪುರ ಕಡೆಗೆ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಕೋರಿಕೆ ಬಸ್ ನಿಲ್ದಾಣದ ಹತ್ತಿರ ಹೊರಟಾಗ ಬಸ್ ಹಿಂದಿನಿಂದ ಆರೋಪಿತನು ತನ್ನ ಬೊಲೆರೊ ಪಿಕಪ್ ಜೀಪ್ ನಂ:ಕೆಎ-32, ಡಿ-3194 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಬಸ್ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಸದರಿ ಅಪಘಾತದಲ್ಲಿ ಆರೋಪಿತನಿಗೆ ಸಾದಾ ರಕ್ತಗಾಯ ಮತ್ತು ಗುಪ್ತಗಾಯಗಳಾದ ಬಗ್ಗೆ ದೂರು ನೀಡಿದ್ದು ಇರುತ್ತದೆ.