ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/01/2021

By blogger on ಸೋಮವಾರ, ಜನವರಿ 25, 2021

                                




                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/01/2021

 ಶೋರಾಪುರ ಪೊಲೀಸ ಠಾಣೆ ಗುನ್ನೆ ನಂ:- 02/2021 ಕಲಂ. 174 ಸಿಆರ್ಪಿಸಿ: ಇಂದು ದಿನಾಂಕ:25/01/2021 ರಂದು 7 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರಳಾದ ಶ್ರೀಮತಿ ಸಂಗೀತಾ ಗಂಡ ಮಲ್ಲಪ್ಪ ಕರೆಗಾರ ಸಾ:ತಿಮ್ಮಾಪೂರ ಇವರು ನೀಡಿದ ಅಜರ್ಿ ಸಾರಾಂಶವೆನೆಂದರೆ ನಾನು ಸುಮಾರು 3 ವರ್ಷಗಳ ಹಿಂದೆ ನಮ್ಮ ಸಂಬಂಧಿಕರಲ್ಲಿ ನಿಂಗಪ್ಪ ಕರೆಗಾರ ಸಾ:ತಿಮ್ಮಾಪೂರ ಇವರ ಮಗ ಮಲ್ಲಪ್ಪ ಇವರೊಂದಿಗೆ ಮದುವೆಯಾಗಿರುತ್ತದೆ. ನಮಗೆ ಇನ್ನು ಮಕ್ಕಳಾಗಿರುವದಿಲ್ಲ. ನನ್ನ ಗಂಡನ ಅಣ್ಣ ತಮ್ಮಂದಿರು 4 ಜನರಿದ್ದು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಅವಳಿಗೆ ಮದುವೆಯಾಗಿರುತ್ತದೆ. ನನ್ನ ಗಂಡನಿಗೆ ಸೂಮಾರು 3-4 ವರ್ಷಗಳಿಂದ ಹೊಟ್ಟೆ ನೋವು ಇದ್ದು ಅವನಿಗೆ ಎಲ್ಲ ಕಡೆ ಖಾಸಗಿ ಆಸ್ಪತ್ರೆ ಮತ್ತು ಗಿಡಮೂಲಿಕೆ ಆಸ್ಪತ್ರೆಗಳು ತೋರಿಸಿರುತ್ತೆವೆ. ಆದರು ಕಡಿಮೇ ಆಗಿರುವದಿಲ್ಲ. ಆಗಾಗ ಹೊಟ್ಟೆ ನೋವು ಇದೆ ಅಂತ ಅನ್ನುತ್ತಿದ್ದನು. ನನಗೆ ಸಾಯುವಂಗ ಆಗಿದೆ ಹೊಟ್ಟೆ ನೋವು ತಾಳದೆ ಅಂತ ಹೇಳುತ್ತಿದ್ದನು ಆಗ ನಾನು ಮತ್ತು ಅವರ ತಂದೆ ತಾಯಿಗಳು ಸಮದಾನ ಹೇಳುತ್ತಿದ್ದೇವು. ಮತ್ತೆ ಬೇರೆಕಡೆ ದವಾಖಾನೆಗೆ ತೋರಿಸಿದರಾತು ಸಮದಾನ ಮಾಡಿಕೊ ಅಂತ ಹೇಳುತ್ತಿದ್ದೇವು. ಹಾಗೂ ನನ್ನ ಗಂಡ ಮಲ್ಲಪ್ಪನು ಸರಾಯಿ ಕುಡಿಯುವ ಚಟವುಳ್ಳನಾಗಿದ್ದನು. ನಿನ್ನ ದಿನಾಂಕ:24/01/2021 ರಂದು ಮನೆಯ್ಲಲಿದ್ದಾಗ ನನ್ನ ಮೈದುನಿಗೆ ನನ್ನ ಗಂಡನು ರಾತ್ರಿ 9 ಗಂಟೆ ಸುಮಾರಿಗೆ ಪೋನ ಮಾಡಿ ಹೇಳಿದ್ದೆನೆಂದರೆ ನಾನು ಹಸನಾಪೂರ ಕ್ಯಾಂಪ್ ಹತ್ತಿರ ಹನುಮಾನ ಮಂದಿರ ಹಿಂದುಗಡೆ ಇವತ್ತು ನನಗೆ ಹೊಟ್ಟೆ ನೋವು ವಿಪರಿತ ಇದ್ದುದ್ದರಿಂದ ನನಗೆ ತಾಸ್ರು ತಾಳಿಕೊಳ್ಳದಾಗದೆ ಬೆಳೆಗೆ ಹೊಡೆಯುವ ಕ್ರೀಮಿನಾಷಕ ಔಷದಿ ಸೇವಿಸಿರುತ್ತೆನೆ ಅಂತ ಹೇಳಿರುತ್ತಾನೆ. ಅದಕ್ಕೆ ನಾನು ಮಾವ ನಿಂಗಪ್ಪ ಗಂಡನ ಅಣ್ಣಂದಿರು ಅಯ್ಯಪ್ಪ, ರಾಜಶೇಖರ, ರವಿಕುಮಾರು ಅತ್ತೆ ಮಲ್ಲಮ್ಮ ಎಲ್ಲರೂ ಕೂಡಿ ಹೋಗಿ ನೋಡಿ ಒಂದು ಖಾಸಗಿ ವಾಹನದಲ್ಲಿ ರಾತ್ರಿ 9:40 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆ. ಅಲ್ಲಿಯ ವೈದ್ಯರು ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ಹೇಳಿದ್ದರಿಂದ ಕಲಬುರಗಿಗೆ ಹೋಗುವಾಗ ಮಾರ್ಗ ಮದ್ಯದಲ್ಲಿ ಕೃಷ್ಣಾಪೂರ ಹತ್ತಿರ ಉಪಚಾರ ಫಲಕಾರಿ ಆಗದೇ ರಾತ್ರಿ 11:40 ಪಿ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಮರಳಿ ನನ್ನ ಗಂಡನ ಶವವನ್ನು ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ತಂದು ಶವಗಾರ ಕೋಣೆಯಲ್ಲಿ ಹಾಕಿರುತ್ತೆವೆ. ರಾತ್ರಿ ಆಗಿದ್ದರಿಂದ ಇಂದು ದಿನಂಕ:25/01/2021 ರಂದು ಬೆಳಿಗ್ಗೆ 7 ಎ.ಎಮಕ್ಕ ಠಾಣೆಗೆ ಬಂದು ಹೇಳಿಕೆ ನೀಡಿರುತ್ತೆನೆ. ನನ್ನ ಗಂಡನು ಹೊಟ್ಟೆ ನೋವು ತಾಳದೇ ಕ್ರೀಮಿನಾಷಕ ಔಷದ ಸೇವಿಸಿ ಮೃತಪಟ್ಟಿರುತ್ತಾನೆ. ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ. ಅಂತ ಮುಂದಿನ ಕಾನೂನು ಕ್ರಮ ಜರುಗಿಸಲು ಪಿಯರ್ಾದಿ ನೀಡಿದ್ದರಿಂದ ಠಾಣಾ ಯು.ಡಿ.ಆರ್. ನಂ. 02/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರಡಿಯಲ್ಲಿ ಪ್ರಕರಣ ದಾಕಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ :- ಗುನ್ನೆ ನಂ: 10/2021 ಕಲಂ 379 ಐಪಿಸಿ:    ಇಂದು ದಿನಾಂಕ: 25/01/2021 ರಂದು 1-30 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಒಂದು ಜ್ಞಾಪನ ಪತ್ರವನ್ನು  ಮುಂದಿನ ಕ್ರಮಕ್ಕಾಗಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 25/01/2021 ರಂದು ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜಗನ್ನಾಥರೆಡ್ಡಿ ಹೆಚ್.ಸಿ.10 ಜೀಪ್ ಚಾಲಕ ಮತ್ತು ಸಾಬರೆಡ್ಡಿ ಪಿಸಿ-379, ಇವರೊಂದಿಗೆ ಠಾಣೆಯ ಜೀಪ್ ನಂಬರ ಕೆಎ.33.ಜಿ.0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತಾ ಕೆ.ಜಿ.ಬಿ ಕ್ರಾಸ  ಮುಖಾಂತರ ಕನಕ ಕ್ರಾಸ ಕಡೆಗೆ ಹೋಗುತ್ತಿರುವಾಗ 12-30 ಪಿಎಮ್ ಸುಮಾರಿಗೆ ದಗರ್ಾ ಕ್ರಾಸದಲ್ಲಿ ಒಂದು ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದು ಆಗ ನಾವು ಸದರಿ ಟ್ರಾಕ್ಟರ ನಿಲ್ಲಿಸಿ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಮಲ್ಲಪ್ಪ ತಂದೆ ಭೀಮಶಪ್ಪ ಹರಿಜನ ವ;24 ಜಾ; ಮಾದಿಗ ಉ; ಚಾಲಕ ಸಾ; ತಪ್ಪಡಗೇರಾ ಯಾದಗಿರಿ ಅಂತಾ ತಿಳಿಸಿದ್ದು, ನಂತರ ಟ್ರಾಕ್ಟರನ್ನು ಪರಿಶೀಲಿಸಲಾಗಿ ಒಂಖಖಇಙ ಈಇಖಉಗಖಔಓ 1035 ಆ ಕಂಪನಿಯ ಟ್ರಾಕ್ಟರ ಇದ್ದು ನೊಂದಣಿ ಸಂಖ್ಯೆ ಇರುವುದಿಲ್ಲ. ಟ್ರಾಕ್ಟರ ಇಂಜಿನ ನಂ. ಖ337ಃ11438 ಚೆಸ್ಸಿ ನಂ. ಒಇಂ661ಇ5ಉಎ2204984 ನೇದ್ದು ಇದ್ದು ಟ್ರಾಲಿ ಪರಿಶೀಲಿಸಲು ನೊಂದಣಿ ಸಂಖ್ಯೆ ಮತ್ತು ಚೆಸ್ಸಿ ನಂಬರ ಇರುವುದಿಲ್ಲ. ನಂತರ ಚಾಲಕನಿಗೆ ಟ್ರಾಕ್ಟರದಲ್ಲಿ ಮರಳು ತುಂಬಿದ ಬಗ್ಗೆ ವಿಚಾರಿಸಲು ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದೇವೆ. ನಾನು ಟ್ರಾಕ್ಟರ ಚಾಲನೆ ಮಾಡುತ್ತಿದ್ದು ಟ್ರಾಕ್ಟರ ಮಾಲೀಕನು ಮಂಜುನಾಥ ತಂದೆ ಬಸವರಾಜ ಚಿಂತನಳ್ಳಿ ಸಾ; ಕೋಲಿವಾಡ ಯಾದಗಿರಿ ಈತನು ಇರುತ್ತಾನೆ ನಾನು ಮತ್ತು ಟ್ರಾಕ್ಟರ ಮಾಲೀಕ ಮಂಜುನಾಥ ಇಬ್ಬರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತ್ತಿದ್ದೇವೆ ಅಂತಾ ತಿಳಿಸಿದನು. ನಂತರ ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದಿಂದ ಟ್ರಾಕ್ಟರ ಚಾಲಕನ ಸಮೇತ ಠಾಣೆಗೆ 1-00 ಪಿಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ, ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರಾಕ್ಟರ ಇಂಜಿನ ನಂ. ಖ337ಃ11438 ಚೆಸ್ಸಿ ನಂ. ಒಇಂ661ಇ5ಉಎ2204984 ನೇದ್ದು ಇದ್ದು ಟ್ರಾಲಿ ನಂಬರ ಇರುವುದಿಲ್ಲ. ಅ.ಕಿ.3,00,000/-ರೂ, ಮತ್ತು ಮರಳು ಅ.ಕಿ.1,000/-ರೂ ನೇದ್ದವುಗಳನ್ನು ಮತ್ತು ಆರೋಪಿತನಿಗೆ ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿದ ಫಿರ್ಯಾಧಿಯನ್ನು 1-30 ಪಿಎಮ್ ಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ, ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆರವರಿಗೆ ಟ್ರಾಕ್ಟರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.10/2021 ಕಲಂ.379 ಐಪಿಸಿ  ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 12/2021 ಕಲಂ 454, 457, 380 ಐಪಿಸಿ: ಇಂದು ದಿನಾಂಕ 25/01/2021 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ವಿಧ್ಯಾ ಸಜ್ಜನ ಗಂಡ ಸುನೀಲ ಸಜ್ಜನ ವಯಾಃ 47 ವರ್ಷ ಜಾಃ ಸಜ್ಜನ ಉಃ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಅಲ್ಲಿಪೂರ ಇವರು ಠಾಣೆಗೆ ಬಂದು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಅಜರ್ಿ ಸಲ್ಲಿಸಿದ್ದೆನೆಂದರೆ ನಾನು ವಿಧ್ಯಾ ಸಜ್ಜನ ಗಂಡ ಸುನೀಲ ಸಜ್ಜನ ವಯಾಃ 47 ವರ್ಷ ಜಾಃ ಲಿಂಗಾಯತ ಗಾಣಿಗ ಉಃ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಅಲ್ಲಿಪೂರ ಬರೆದುಕೊಡುವ ಅಜರ್ಿಯನೆಂದರೆ ಅಲ್ಲಿಪೂರ ಪ್ರೌಢ ಶಾಲೆಯಲ್ಲಿ ನಾನು ಮತ್ತು ಇತರೆ ಒಟ್ಟು 11 ಜನ ಸಿಬ್ಬಂಧಿಯವರು ಕೆಲಸ ಮಾಡುತ್ತೆವೆ, ಈಗ ಸುಮಾರು ಒಂದು ವರ್ಷದ ಹಿಂದೆ ನಮ್ಮ ಶಾಲೆಗೆ ಸರಕಾರದಿಂದ 10 ಲೆನಾವೋ ಕಂಪನಿಯ ಕಂಪ್ಯೂಟರ ಸಿಸ್ಟಮಗಳು ಮಂಜುರಾಗಿ ಬಂದಿದ್ದು, ಅವುಗಳನ್ನು ಈಗಾಗಲೇ ಶಾಲೆಯ ಕಂಪ್ಯೂಟರ ಕೋಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ, ಹೀಗಿದ್ದು ದಿನಾಂಕ 23/01/2021 ರಂದು ಬೆಳಿಗ್ಗೆ ಎಂದಿನಂತೆ ನಾನು ಮತ್ತು ನನ್ನ ಎಲ್ಲಾ ಸಿಬ್ಬಂಧಿಯವರು ಬೆಳಿಗ್ಗೆ 10-00 ಗಂಟೆಗೆ ಶಾಲೆಗೆ ಹೋಗಿ ನೇತಾಜಿ ಸುಭಾಶ್ಚಂದ ಬೋಸ್ ಜಯಂತಿ ಆಚರಣೆ ಮಾಡಿ ಎಲ್ಲಾ  ಸಿಬ್ಬಂಧಿಯವರು ಮಧ್ಯಾಹ್ನ 2-00 ಗಂಟೆಯವರೆಗೆ ಶಾಲೆಯಲ್ಲಿ ಉಳಿದು ನಂತರ ಶಾಲೆಗೆ ಎಥಾ ಪ್ರಕಾರ ಬೀಗ ಹಾಕಿ ಅಲ್ಲದೇ ಕಂಪ್ಯೂಟರದ ಪ್ರತ್ಯೇಕ ಕೊಣೆಗೆ ಕೂಡಾ ಬೀಗ ಹಾಕಿ ಎಲ್ಲರೂ ನಮ್ಮ ನಮ್ಮ ಮನೆಗೆ ಬಂದೆವು, ಹೀಗಿದ್ದು ಇಂದು ದಿನಾಂಕ 25/01/2021 ರಂದು ಪ್ರತಿನಿತ್ಯದಂತೆ ಇಂದು ಕೂಡಾ ಬೆಳಿಗ್ಗೆ 9-30 ಗಂಟೆಗೆ ನಾನು ಮತ್ತು ನಮ್ಮ ಸಿಬ್ಬಂಧಿಯವರಾದ 1)ನಾಗರೆಡ್ಡಿ ತಂದೆ ಸಾಯಬಣ್ಣ ಅಕ್ಕಿ 2)ಕುಃ ರಾಜೇಶ್ವರಿ ತಂದೆ ಮಲ್ಲಪ್ಪ 3)ಪೂಣರ್ಿಮಾ ಗೋಣಿ 4)ಶ್ರೀ ಶರಣಗೌಡ ತಂದೆ ಗೋಲ್ಲಾಳಪ್ಪಗೌಡ ಬಿರಾದಾರ 5)ಶ್ರೀ ರವೀಂದ್ರ ತಂದೆ ಮಾರುತಿ ದಮ್ಮಣ್ಣ 6)ಶ್ರೀಮತಿ ಶ್ರೀದೇವಿ ಗಂಡ ಜಗದೀಶ ನೂಲಿನವರ 7)ಶ್ರೀಮತಿ ದ್ರಾಕ್ಷಾಯಿಣಿ ಗಂಡ ರಂಗನಾಥ ದ್ವಿ.ದ.ಸ. 8)ಶ್ರೀಮತಿ ಸುಜ್ಞಾನಿ ಗಂಡ ಶಿವಲಿಂಗಪ್ಪ ಸಿಪಾಯಿ ಮತ್ತುಮೂರು ಜನ ಅಡಿಗೆಯವರಾದ 9)ಕುಃ ಹಣಮಂತಿ 10)ಲಲಿತಾಬಾಯಿ ಗಂಡ ರಾಜು 11)ಶ್ರೀಮತಿ ಅಮೀನಾ ಗಂಡ ಶಂಕರ ರಾಠೋಡ ಎಲ್ಲರೂ ಕೂಡಿಕೊಂಡು ಶಾಲೆಗೆ ಹೋದೆವು, ನಾವೆಲ್ಲರೂ ಬೆಳಗಿನ ಪ್ರಾರ್ಥನೆ ಮತ್ತು ಮತದಾರ ದಿನದ ಪ್ರಯುಕ್ತ ಪತಿಜ್ಞಾವಿದಿ ಯಲ್ಲಿ ತೊಡಗಿದ್ದಾಗ ನಮ್ಮ ಶಾಲೆಯ ಸಿಪಾಯಿಯವರಾದ ಶ್ರೀಮತಿ ಸುಜ್ಞಾನಿ ಗಂಡ ಶಿವಲಿಂಗಪ್ಪ ಇವರು ನಮ್ಮ ಹತ್ತಿರ ಬಂದು ಕಂಪ್ಯೂಟರ ಕೋಣೆಗೆ ಹಾಕಿದ ಬೀಗ ಮುರಿದು ಬಾಗಿಲು ಖುಲ್ಲಾ ಆಗಿದೆ ಅಂತಾ ಗಾಬರಿಯಿಂದ ತಿಳಿಸಿದಾಗ ಕೂಡಲೆ ನಾವೆಲ್ಲರೂ ಅಲ್ಲಿಗೆ ಹೋಗಿ ನೋಡಲಾಗಿ ಕಂಪ್ಯೂಟರ ಕೋಣೆಗೆ ಹಾಕಿದ ಬಾಗಿಲಿನ ಕೀಲಿ ಮುರಿದು ಕೆಳಗಡೆ ಬಿದ್ದು, ಬಾಗಿಲು ಖೂಲ್ಲಾ ಆಗಿತ್ತು, ಆಗ ನಾವೆಲ್ಲರೂ ಗಾಬರಿಯಾಗಿ ಒಳಗಡೆ ಹೋಗಿ ನೋಡಲಾಗಿ ಕಂಪ್ಯೂಟರ ರೂಮನಲ್ಲಿ ಅಳವಡಿಸಿದ 10 ಕಂಪ್ಯೂಟರಗಳ ಪೈಕಿ 8 ಕಂಪ್ಯೂಟರಗಳು ಅಲ್ಲಿ ಕಾಣಲಿಲ್ಲ, ಆಗ ನಾವೆಲ್ಲರೂ ಕೂಡಿಕೊಂಡು ನಮ್ಮ ಶಾಲೆಯ ಸುತ್ತಮುತ್ತ ಹುಡುಕಾಡಿ ನೋಡಲಾಗಿ ಎಲ್ಲೂ ಕಂಪ್ಯೂಟರಗಳು ಕಾಣಲಿಲ್ಲ, ಈ ಎಂಟು ಕಂಪ್ಯೂಟರಗಳು ಯರೋ ಕಳ್ಳರು ಬಾಗಿಲ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿದ್ದಾರೆ ಖಾತ್ರಿ ಮಾಡಿಕೊಂಡು ಕೂಡಲೇ ಈ ವಿಷಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದೆವು, ಕಳುವಾದ ಒಂದು ಕಂಪ್ಯೂಟರ ಕಿಮ್ಮತ್ತು 37,188/ರೂ ಯಂತೆ ಒಟ್ಟು 8 ಕಂಪ್ಯೂಟರಗಳ ಕಿಮ್ಮತ್ತು 2,97,504/ರೂ ಆಗುತ್ತದೆ, ಈ ಎಲ್ಲಾ ಕಂಪ್ಯೂಟರಗಳು ದಿನಾಂಕ 23/01/2021 ರಂದು ಮಧ್ಯಾಹ್ನ 2-30 ಗಂಟೆಯಿಂದ ಇಂದು ದಿನಾಂಕ 25/01/2021 ರಂದು ಬೆಳಿಗ್ಗೆ 9-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಕಂಪ್ಯೂಟರ ಕೋಣೆಗೆ ಹಾಕಿದ ಬಾಗಿಲದ ಕೀಲಿಯನ್ನು ಮುರಿದು ಕೋಣೆಯಲ್ಲಿ ಅಳವಡಿಸಿದ 8 ಕಂಪ್ಯೂಟರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಕೊಂಡು, ವಿಧ್ಯಾಥರ್ಿಗಳ ಹಿತದೃಷ್ಟಿಯಿಂದ ಆದಷ್ಟು ಬೇಗನೇ ಕಳ್ಳತವಾಗಿರುವ ಕಂಪ್ಯೂಟರಗಳನ್ನು ಹುಡುಕಿಕೊಡಲು ಕೋರುತ್ತಿದ್ದೆವೆ, ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ ಸುಧಿರ್ಗವಾಗಿ ವಿಚಾರಣೆ ಮಾಡಿ ಈಗ ಠಾಣೆಗೆ ಬಂದು ಅಜರ್ಿ ಸಲ್ಲಿಸುತ್ತಿದ್ದೆವೆ, ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 12/2021 ಕಲಂ 457, 454, 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,  

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 12/2021 ಕಲಂ: 379 ಐಪಿಸಿ: ಇಂದು ದಿನಾಂಕ: 25/01/2021 ರಂದು 9-15 ಪಿಎಮ್ ಕ್ಕೆ ಶ್ರೀ ಮಹಾಂತೇಶ ಗ್ರಾ. ಲೇಖಾಪಾಲಕ ಬಬಲಾದ ಮತ್ತು ಇತರರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾವುಗಳಾದ ಮಾನ್ಯ ತಹಸೀಲ್ದಾರರು ವಡಗೇರಾ, ಮಹಾಂತೇಶ ಗ್ರಾ. ಲೇ ಬಬಲಾದ, ದೇವರಾಜ ಎಮ್.ಎಸ್. ಗ್ರಾ. ಲೇ ಗುಲಸರಂ, ಸಿದ್ದನಗೌಡ ಕಂದಾಯ ನಿರೀಕ್ಷಕರು ದೋರನಹಳ್ಳಿ ಇವರು ದಿನಾಂಕ: 25/01/2021 ರಂದು ರಾತ್ರಿ 8-20 ರ ಸುಮಾರಿಗೆ ಅಕ್ರಮ ಮರಳು ಪರಿಶೀಲನೆ ಮಾಡಲು ತೆರಳಿದಾಗ ಕೆ.ಎ 32 ಸಿ 7152 ರ ಡ್ರೈವರ ಮಹಿಬೂಬ ತಂದೆ ಖಾದ್ರಿ ಪಟೇಲ್ ಸಾ:ಗುಲಬಗರ್ಾ (9892906688) ರ, ಮಾನ್ಯ ತಹಸೀಲ್ದಾರರು ಹಾಗೂ ಅಧಿಕಾರಿಗಳು ಸೇರಿ ಭಾರತ ಬೆಂಜ್ ಗಾಡಿಗೆ ಕೈ ಮಾಡಿ ನಿಲ್ಲಲು ತಿಳಿಸಿದರು, ಸಹ ನಿಂತಿರುವುದಿಲ್ಲ. ನಂತರ ಬೆನ್ನಹತ್ತಿ ತೆರಳಿ ಹಿಡಿದು ಗುಲಸರಂ-ಗಡ್ಡೆಸೂಗೂರು ಗೇಟ ಹತ್ತಿರ ನಿಲ್ಲಿಸಿ, ಪರಿಶೀಲಿಸಿದಾಗ ಡ್ರೈವರ ಗಾಡಿ ಖಾಲಿ ಇದೆ ಮರಳು ಇಲ್ಲ ಅಂತಾ ಹೇಳಿದಾಗ ಪರಿಶೀಲಿಸಿದಾಗ ಗಾಡಿಯಲ್ಲಿ ಅಂದಾಜು 6-8 ಟ್ರ್ಯಾಕ್ಟರ ಅಷ್ಟು ಅಕ್ರಮ ಮರಳನ್ನು ರಾಜಧನ (ರಾಯಲ್ಟಿ) ಇಲ್ಲದೆ ಹೊಡೆಯುತ್ತಿದ್ದದ್ದು ಇರುತ್ತದೆ. ಕಾರಣ ಮುಂದಿನ ಕ್ರಮಕ್ಕೆ ದೂರು ಎಂದು ಕೊಟ್ಟ ದೂರಿನ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 12/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ, 10/2021 ಕಲಂ: 143,147,148,323,324,354,504,506 ಸಂಗಡ 149 ಐಪಿಸಿ: ಇಂದು ದಿನಾಂಕ 25.01.2021 ರಂದು 08-15 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶೈಬಾಜ ಬೇಗಂ ಗಂಡ ಮೈನುದ್ದೀನ ಜಮಾದಾರ ಸಾ|| ನಾಡಗೌಡ ಓಣಿ ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿಸಾರಾಂಶವೇನೆಂದರೆ, ನಮ್ಮ ಮನೆ ಹಾಗೂ ಚಿನ್ನುಮಿಯಾ ಕಲಕೇರಿ ಇವರ ಮನೆ ಆಜುಬಾಜು ಇದ್ದು, ನಾವು ನಮ್ಮ ಜಾಗದಲ್ಲಿ ಮನೆ ಕಟ್ಟುತ್ತಿದ್ದು, ನಮ್ಮ ಮನೆಗೆ ವೆಂಟಿಲೇಟರ ಬಿಟ್ಟಿದ್ದು, ವೆಂಟಿಲೇಟರ ಬಿಡಬೇಡ ಅಂತ ಚಿನ್ನುಮಿಯಾ ಹಾಗೂ ಆತನ ಮಕ್ಕಳು ನನ್ನ ಜೊತೆ ಹಗೆತನ ಸಾದಿಸುತ್ತಿದ್ದರು. ದಿನಾಂಕ 19/01/2021 ರಂದು ರಾತ್ರಿ 11.30 ಗಂಟೆ ಸುಮಾರಿಗೆ ನಮ್ಮ ಮನೆಗೆ ವೆಂಟಿಲೇಟರ ಕೂಡಿಸಿ, ಪತ್ರಾಸ ಹಾಕಿರುವ ವಿಷಯದಲ್ಲಿ ನಮ್ಮ ಪಕ್ಕದ ಮನೆಯ 1) ಚಿನ್ನುಮಿಯಾ ತಂದೆ ಮಹಮ್ಮದ ಮೌಲಾನಾ ಕಲಕೇರಿ 2) ಮಹಮ್ಮದ ರಿಜ್ವಾನ ತಂದೆ ಚಿನ್ನುಮಿಯಾ ಕಲಕೇರಿ 3) ಮಹಮ್ಮದ ಉಮರ ತಂದೆ ಚಿನ್ನುಮಿಯಾ ಕಲಕೇರಿ 4) ಮಹಮ್ಮದ ಮೌಲಾನಾ ತಂದೆ ಅಬ್ದುಲ ರಹೇಮಾನ ಕಲಕೇರಿ 5) ಅವೇಶ ತಂದೆ ಮಹಮ್ಮದ ಮೌಲಾನಾ ಕಲಕೇರಿ 6) ಸಮೀರ ತಂದೆ ಶಮಶುದ್ದೀನ ಕಲಕೇರಿ 7) ಜುಲೇಕಾ ಬೇಗಂ ಗಂಡ ಚಿನ್ನುಮಿಯಾ ಕಲಕೇರಿ 8) ರಫೀಯಾ ಬೇಗಂ ಗಂಡ ಚಿನ್ನುಮಿಯಾ ಕಲಕೇರಿ 9) ಶಾಹೀದಾ ಬೇಗಂ ಗಂಡ ಫಯುಮ್ ಜಾಗಿರದಾರ ಇವರೆಲ್ಲರೂ ಕೂಡಿ ನಮ್ಮ ಮನೆಯ ಮುಂದೆ ಬಂದವರೇ ಲೇ ಸೂಳಿ ಶೈಬಾಜಿ ನಮ್ಮ ಮನೆ ಕಡೆ ವೆಂಟಿಲೇಟರ ಏಕೆ ಬಿಟ್ಟಿರುವಿ, ಅಂತ ಎಲ್ಲರೂ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಮಹಮ್ಮದ ರಿಜ್ವಾನ ಈತನು ಅಲ್ಲಿಯೇ ಬಿದ್ದ ಕಬ್ಬಿಣದ ರಾಡಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಶಮೀರ ಹಾಗೂ ಮಹಮ್ಮದ ಉಮರ ಈ ಎರಡೂ ಜನರು ನನ್ನ ಮೈಮೇಲಿನ ಬಟ್ಟೆ ಹಾಗೂ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ಚಿನ್ನುಮಿಯಾ ಈತನು ಕೈಯಿಂದ ನನ್ನ ಕಪಾಳಕ್ಕೆ ಹಾಗೂ ಬೆನ್ನಿಗೆ ಹೊಡೆದು ಗುಪ್ತಗಾಯಪಡಿಸಿದನು. ನಂತರ ನನಗೆ ಎಲ್ಲರೂ ಕೂಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಅಹಿಮದ ತಂದೆ ಪೀರಪಾಶಾ, ನಯುಮ ಖಾಜಿ ಹಾಗೂ ರಫೀಕ ಹುಸೇನ ತಂದೆ ಖುದಾಬಕ್ಷ ಖಾಜಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರು ಸೂಳಿ ವೆಂಟಿಲೇಟರ ತೆಗೆದರೆ ಸರಿ ಇಲ್ಲದಿದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ನನಗೆ ಮನೆಯಲ್ಲಿ ಯಾರೂ ಗಂಡಸರು ಇಲ್ಲದೇ ಇರುವದರಿಂದ ನಾನು ಖಾಸಗಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಮನೆಯಲ್ಲಿಯೇ ಇದ್ದೆನು. ಇಂದು ನನಗೆ ಬಹಳ ತ್ರಾಸ ಆಗುತ್ತಿದ್ದರಿಂದ ನಮ್ಮ ಜನಾಂಗದ ಮುಖಂಡರಿಗೆ ತಿಳಿಸಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ 9 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಂಡು ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿಕೊಡಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 10/2021 ಕಲಂ 143,147,148,323,324, 354,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!