ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/01/2021
ಯಾದಗಿರಿ ನಗರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 09/2021 ಕಲಂ. ಮನುಷ್ಯಕಾಣೆ: ಇಂದು ದಿನಾಂಕ; 24/01/2021 ರಂದು 11-15 ಎಎಮ್ ಕ್ಕೆ ಪಿರ್ಯಾಧಿದಾರರಾದ ಅಮರೇಶ ತಂದೆ ಗುರುನಾಥರೆಡ್ಡಿ ಕುರಕುಂದಿ ವ;28 ಜಾ; ಲಿಂಗಾಯತರೆಡ್ಡಿ ಉ; ವ್ಯಾಪಾರ ಸಾ; ಬಲಕಲ್ ತಾ; ಶಹಾಪೂರ ಜಿ; ಯಾದಗಿರಿ ಹಾ.ವ; ಮಾತಾಮಾಣಿಕೇಶ್ವರಿ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ತಂದೆ ತಾಯಿಗೆ ನಾವು ಇಬ್ಬರು ಮಕ್ಕಳಿದ್ದು ನಮ್ಮ ಅಕ್ಕ ರೇಖಾ ಇವಳಿಗೆ ಮದುವೆಯಾಗಿದ್ದು ಸದ್ಯ ನಾನು ನಮ್ಮ ತಂದೆ ತಾಯಿಯೊಂದಿಗೆ ಯಾದಗಿರಿಯಲ್ಲಿ ಜಿರಾಕ್ಸ ಅಂಗಡಿಯ ವ್ಯಾಪಾರ ಮಾಡಿಕೊಂಡು ಮಾತಾಮಾಣಿಕೇಶ್ವರಿ ನಗರದಲ್ಲಿ ಬಾಡಿಗೆ ಮನೆಮಾಡಿಕೊಂಡು ವಾಸವಿರುತ್ತೇವೆ. ನಮ್ಮ ತಂದೆ ಗುರುನಾಥರೆಡ್ಡಿ ತಂದೆ ರಾಮರೆಡ್ಡಿ ಕುರಕುಂದಿ ವ;53 ಜಾ; ಲಿಂಗಾಯತರೆಡ್ಡಿ ಉ; ಒಕ್ಕಲುತನ ಸಾ; ಬಲಕಲ್ ತಾ; ಶಹಾಪೂರ ಹಾ.ವ; ಮಾತಾಮಾಣಿಕೇಶ್ವರಿ ನಗರ ಯಾದಗಿರಿ ಈತನು ಮನೆಯ ಸಂಸಾರದ ವಿಚಾರಕ್ಕಾಗಿ ಅಲ್ಲಲ್ಲಿ ಸಾಲ ಮಾಡಿದ್ದು, ಸಾಲದ ಹಣ ವಾಪಸ್ಸು ಕೊಡಲು ಆಗದ ಕಾರಣ ಯಾವಾಗಲು ಚಿಂತೆ ಮಾಡುತ್ತಾ ಇರುತ್ತೀದ್ದರು. ನಾವು ಮನೆಯಲ್ಲಿ ಚಿಂತೆ ಮಾಡಬೇಡಿ ಇಂದಲ್ಲಾ ನಾಳೆ ದುಡಿದು ಸಾಲದ ಹಣ ತಿರಿಸೋಣಾ ಅಂತಾ ಸಮಾಧಾನ ಮಾಡಿದ್ದೆವು. ಆದರು ಕೂಡಾ ಮನೆಯಲ್ಲಿ ಯಾವಾಗಲೂ ಸಾಲದ ಬಗ್ಗೆ ಚಿಂತೆ ಮಾಡುತ್ತಾ ಇದ್ದರು. ಹಿಗೀದ್ದು ನನ್ನ ತಂದೆ ದಿನಾಂಕ.05/05/2020 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನನ್ನ ತಂದೆ ಗುರುನಾಥರೆಡ್ಡಿ ಈತನು ನನಗೆ ದೇವಾಪೂರದಲ್ಲಿ ಒಬ್ಬರಿಂದ ಹಣ ಬರಬೇಕಿದ್ದು ಅಲ್ಲಿಗೆ ಹೋಗಿ ಹಣ ಪಡೆದುಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವನು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ನಂತರ ನನ್ನ ತಂದೆಯ ಬಗ್ಗೆ ನಾನು ಮತ್ತು ಮನೆಯವರು ಕೂಡಿಕೊಂಡು ಎಲ್ಲಾ ಕಡೆಗೆ ವಿಚಾರಿಸಿದರೂ ಕೂಡಾ ಸಿಕ್ಕಿರುವುದಿಲ್ಲಾ. ನಮ್ಮ ತಂದೆ ಗುರುನಾಥರೆಡ್ಡಿ ಈತನು ಸಂಸಾರದ ಅಡಚಣೆಗಾಗಿ ಸಾಲ ಮಾಡಿದ್ದು, ಸಾಲದ ಹಣ ಹಿಂದಿರುಗಿಸಲು ಆಗದ ಕಾರಣ ಮನೆ ಬಿಟ್ಟು ಹೋಗಿದ್ದು ಇಲ್ಲಿಯವರೆಗೆ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಆದ್ದರಿಂದ ನಾವು ಎಲ್ಲಾಕಡೆ ವಿಚಾರಿಸಿ ಹುಡುಕಾಡಲಾಗಿ ನನ್ನ ತಂದೆ ಗುರುನಾಥರೆಡ್ಡಿ ಈತನು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು ಕಾಣೆಯಾದ ನನ್ನ ತಂದೆ ಚಹರೆ ಪಟ್ಟಿ :-ಸಾದ ಕಪ್ಪು ಬಣ್ಣ, ದುಂಡನೆಯ ಮುಖ, ಎತ್ತರ 5 ಪೀಟ್ 7 ಇಂಚು ಎತ್ತರ, ವಯಸ್ಸು; 53 ವರ್ಷ, ಸಾಧಾರಣ ಮೈಕಟ್ಟು, ಮೈಮೇಲೆ ಬಿಳಿಬಣ್ಣದ ಉದ್ದನೆ ತೋಳಿನ ಶರ್ಟ, ಬಿಳಿ ಬಣ್ಣದ ಧೋತ್ರ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಕಾರಣ ಕಾಣೆಯಾದ ನನ್ನ ತಂದೆ ಗುರುನಾಥರೆಡ್ಡಿ ತಂದೆ ಈತನಿಗೆ ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.09/2021 ಕಲಂ. ಮನುಷ್ಯಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 13/2021, ಕಲಂ,323,354,504.506. ಐ ಪಿ ಸಿ : ಇಂದು ದಿನಾಂಕ: 24-01-2021 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ಸಲ್ಲಿಸಿದ ಸಾರಂಶವೇನೆಂದರೆ ದಿನಾಂಕ: 24-01-2021 ರಂದು ಬೆಳಿಗ್ಗೆ 10-00 ಗಂಟೆಗೆ ಕಡೆಚೂರ ಗ್ರಾಮದ ಪಂಚಾಯಿತಿಯಲ್ಲಿ ಅಂಗನವಾಡಿ ಟೀಚರ ರವರ ಮಿಟಿಂಗ ಇರುವದರಿಂದ ನಾನು ಅಲ್ಲಿಗೆ ಹೊಗಿದ್ದು ನಾನು ಬೆಳಿಗ್ಗೆ 10-30 ಗಂಟೆಗೆ ಪಂಚಾಯಿತಿ ಹತ್ತಿರ ಇರುವಾಗ ಆರೋಪಿತನು ಹಣ ಕೊಡು ಅಂತಾ ಕೇಳಿದ್ದು ಆಗ ನಾನು ಹಣ ಕೊಡುವದಿಲ್ಲ ಅಂತಾ ಹೇಳಿದಾಗ ಅವನು ಅವಾಚ್ಯವಾಗಿ ಲೇ ಸುಳೆ ಮಗಳೆ ಅಂತಾ ಬೈದು ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದು ಸೀರೆ ಹಿಡುದು ಜಗ್ಗಾಡಿ ಅವಮಾನ ಮಾಡಿ ನೀನು ಊರಿಗೆ ಹೆಂಗ ಬರುತ್ತಿ ಮಗಳೆ ನೋಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯಾಧಿ ಸಾರಂಶ.
ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 07/2021 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 24/01/2021 ರಂದು 06:00 ಪಿ.ಎಮ್.ಕ್ಕೆ ಭೀ.ಗುಡಿ ಯುಕೆಪಿ ಕ್ಯಾಂಪನ ಪಂಪ ಹೌಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 8.15 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 06 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 15,900/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ, 09/2020 ಕಲಂ: 143,147,148,323,324,504,506 ಸಂಗಡ 149 ಐಪಿಸಿ: ಇಂದು ದಿನಾಂಕ 24.01.2021 ರಂದು 08-30 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಹಮ್ಮದ ರಿಜ್ವಾನ ತಂದೆ ಚಿನ್ನುಮಿಯಾ ಕಲಕೇರಿ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶಏನಂದರೆ, ನಮ್ಮ ಮನೆ ಹಾಗೂ ಶೈಬಾಜ ಬೇಗಂ ಗಂಡ ಮೊಯುದ್ದೀನ ಜಮಾದಾರ ಇವರ ಮನೆ ಆಜುಬಾಜು ಇದ್ದು, ಅಲ್ಲದೇ ಸದರಿಯವರು ನಮ್ಮ ಜಾಗದಲ್ಲಿ ಮನೆ ಕಟ್ಟುತ್ತಿದ್ದು ಆದರೂ ನಾಲ್ಕು ಜನ ದೊಡ್ಡವರ ಮಾತಿನಂತೆ ಸದರಿಯವರಿಗೆ ತಮ್ಮ ಮನೆಯ ಮೇಲೆ ಸಣ್ಣ ಕಿಟಕಿ (ವೆಂಟಿಲೇಟರ) ಬಿಡುವಂತೆ ಹೇಳಿದ್ದು ಅದಕ್ಕೆ ಒಪ್ಪಿದ್ದರಿಂದ ನಾವು ಸುಮ್ಮನಿದ್ದೆವು. ಹೀಗಿದ್ದು ದಿನಾಂಕ 20/01/2021 ರಂದು ರಾತ್ರಿ ನಮ್ಮ ಮನೆಯವರೆಲ್ಲರು ಕೂಡಿಕೊಂಡು ಜನತಾ ಕಾಲೋನಿಯಲ್ಲಿ ಕಾರ್ಯಕ್ರಮವಿದ್ದ ಕಾರಣ ಹೋಗಿದ್ದೆವು. ಮರಳಿ ಬರುವಷ್ಟರಲ್ಲಿ ಅಂದಾಜು ರಾತ್ರಿ 11.30 ಗಂಟೆ ಸುಮಾರಿಗೆ ದೊಡ್ಡ ಕಿಟಕಿ ಬಿಟ್ಟು ಪತ್ರಾಸ ಹಾಕುತ್ತಿದ್ದು ಆಗ ನಾನು ಹೋಗಿ, ಮೊದಲು ಹೇಳಿದ ಪ್ರಕಾರ ಕಿಟಕಿ ತೆಗೆದು ವೆಂಟಿಲೆಟರ ಹಾಕದೆ ಏಕೆ ಪತ್ರಾಸ ಹಾಕಿದ್ದೀರಿ ಅಂತ ಅಂದಾಗ 1) ಶೈಬಾಜ ಬೇಗಂ ಗಂಡ ಮೊಯುದ್ದೀನ ಜಮಾದಾರ 2) ನಜ್ಮಾ ಬೇಗಂ ಗಂಡ ಪೀರಪಾಶಾ ಖಾಜಿ 3) ನಯೂಮ ತಂದೆ ಪೀರಪಾಶಾ ಖಾಜಿ 4) ಐಮದ ತಂದೆ ಪೀರಪಾಶಾ ಖಾಜಿ 5) ರಶೀದ ತಂದೆ ಖುಷರ್ಿದ ಜಾಗಿರದಾರ 6) ಇಪರ್ಾನ ತಂದೆ ಎಕ್ಬಾಲಸಾಬ ಜಾಗಿರದಾರ 7) ಜಾವೀದ ತಂದೆ ಚಾಂದಪಾಶಾ ಜಮಾದಾರ 8) ಇಮ್ರಾನ ತಂದೆ ಎಕ್ಬಾಲಸಾಬ ಜಾಗಿರದಾರ ಈ ಎಲ್ಲಾ ಜನರು ಕೂಡಿಬಂದವರೇ ಸೂಳೆಮಗನೆ ನಮಗೆ ಕೇಳುವವರು ನೀನು ಯಾರು ನಮ್ಮ ಮನೆ ನಮಗೆ ತಿಳಿದ ಹಾಗೆ ಕಟ್ಟುತ್ತೇವೆ ಅಂತ ಅಂದಾಗ ನಾನು, ಈ ಮೊದಲು ಮಾತಾಡಿದಂತೆ ವೆಂಟಿಲೇಟರ ಬಿಡಬೇಕು ಅಂತ ಹೇಳಿದರೂ ಹಾಗೇ ಪತ್ರಾಸ ಹಾಕಿದ್ದೀರಿ ಅಂತ ಅಂದಾಗ ಎಲ್ಲರು ಈ ಸೂಳೆಮಗನ ಸೊಕ್ಕು ಬಾಳ ಆಗಿದೆ ಅಂತ ಕೈಯಿಂದ ಹೊಡೆಯುತ್ತಾ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನನಗೆ ಇಫರ್ಾನ ಈತನು ರಾಡಿನಿಂದ ಎಡಗೈ ಬೆರಳಿಗೆ ಹೊಡೆದು ರಕ್ತಗಾಯ ಹಾಗೂ ಹೆಡಕಿನ ಹತ್ತಿರ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಮ್ಮ ತಂದೆ ಚಿನ್ನುಮಿಯಾ ಹಾಗೂ ತಮ್ಮನಾದ ಮಹಮ್ಮದ ಉಮರ ಇವರು ಬಿಡಿಸಿಕೊಳ್ಳಲು ಬಂದಾಗ ಸದರಿ ಇಬ್ಬರಿಗೂ ನೆಲಕ್ಕೆ ಕೆಡವಿ ಎಲ್ಲರು ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದೆಯುತ್ತಿದ್ದಾಗ ತಮ್ಮನಾದ ಮಹಮ್ಮದ ಉಮರ ಈತನಿಗೆ ರಶೀದ, ಶೈಬಾಜ ಬೇಗಂ ಹಾಗೂ ಇಫರ್ಾನ ಈ ಮೂರು ಜನರು ಕಲ್ಲು ತೆಗೆದುಕೊಂಡು ಎದೆಗೆ ಹಾಗೂ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದರು. ನಂತರ ನಾವೆಲ್ಲರು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಸಲಾವುದ್ದೀನ ಹಳಿಸಗರ, ಫಯಾಜ ಜಾಗಿರದಾರ, ಸಮೀರ ಕಲಕೇರಿ ಈ ಮೂರು ಜನರು ಬಂದು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರು ಮಕ್ಕಳೆ ನಮ್ಮ ಮನೆಯ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾವು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಹೋಗಿ ನನಗೂ ಹಾಗೂ ನಮ್ಮ ತಮ್ಮ ಮಹಮ್ಮದ ಉಮರ ಈತನಿಗೆ ಬಾಳ ತ್ರಾಸ ಆಗುತ್ತಿದ್ದರಿಂದ ವ್ಶೆದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಉಪಚಾರ ಪಡೆದುಕೊಂಡು ನಿನ್ನೆ ದಿ: 23/01/2021 ರಂದು ಮನೆಗೆ ಬಂದು ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು, ಕಾರಣ ಮೇಲ್ಕಾಣಿಸಿದ 8 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 09/2021 ಕಲಂ 143,147,148,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.