ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/01/2021
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ-16/2021 ಕಲಂ 323, 307, 498(ಎ), 354, 342, 504, 506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ: ಇಂದು ದಿನಾಂಕ: 19/01/2021 ರಂದು 11.00 ಎ.ಎಂ.ಕ್ಕೆ ಪ್ರಕರಣದ ಫಿಯರ್ಾದಿ ಶ್ರೀಮತಿ ಶ್ವೇತಾ ಗಂ/ ಅಯ್ಯನಗೌಡ @ ಮಲ್ಲು ಪಾಟೀಲ್ ಸಾ|| ಬಾಪುಗೌಡ ನಗರ ಶಹಾಪುರ ತಾ||ಶಹಾಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದರ ಸಾರಾಂಶವೇನೆಂದರೆ, ದಿನಾಂಕ:31/05/2010 ರಂದು ಶ್ರೀ ದಿಗ್ಗಿ ಸಂಗಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮದುವೆ ನೆರವೇರಿದ್ದು, ಆ ಸಮದಯದಲ್ಲಿ ಫಿಯರ್ಾದಿಯ ತಂದೆಯವರು ವರನಿಗೆ 1) 30 ತೊಲೆ ಬಂಗಾರ, 5 ಲಕ್ಷ ನಗದು, 2 ಲಕ್ಷ ಮೌಲ್ಯದ ಸಾಮಾನುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ 4 ತಿಂಗಳ ವರೆಗೆ ಫಿಯರ್ಾದಿಗೆ ಆರೋಪಿತರು ಚನ್ನಾಗಿ ನೋಡಿಕೊಂಡಿದ್ದು, ನಂತರದ ದಿನಗಳಲ್ಲಿ ಆರೋಪಿತನಿಗೆ ಶಹಾಪುರದಲ್ಲಿ ಮನೆ ಕಟ್ಟಿಸಿಕೊಡಿ, ಅವನು ಮಾಡುತ್ತಿರ ವ್ಯಾಪಾರಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಿ, 5 ಎಕರೆ ಜಮೀನು ಕೊಡಿ, ಹಣ ಕೊಡಿ ಅಂತಾ ಪ್ರತಿ ದಿನ ವರದಕ್ಷಿಣೆ ಕಿರುಕುಳ ನೀಡುತ್ತಾ ಅವಾಚ್ಯವಾಗಿ ಬೈಯುತ್ತಾ, ಹೊಡೆ ಬಡೆ ಮಾಡುತ್ತಾ ಮದುವೆಯಾದಾಗಿನಿಂದ ಸುಮಾರು 10 ವರ್ಷಗಳ ವರೆಗೆ ಕಿರುಕುಳ ಮುಂದುವರೆಸಿದ್ದು, ಹಾಗೂ ಒಮ್ಮೊಮ್ಮೆ 2-3 ದಿವಸಗಳ ವರೆಗೆ ರೂಮಿನಲ್ಲಿ ಕೂಡಿ ಹಾಕಿ ಊಟ ನೀರು ಕೊಡದೆ ಕಿರುಕುಳ ನೀಡಿರುತ್ತಾರೆ. ಹಿರಿಯರ ಮುಂದೆ ನ್ಯಾಯಾ ಪಂಚಾಯತಿ ಮಾಡಿಸಿದಾಗ ಸ್ವಲಪ್ಪ ದಿವಸ ಚೆನ್ನಾಗಿ ನೋಡಿಕೊಂಡು ಪುನಃ ಕಿರುಕುಳ ನೀಡುವುದನ್ನು ಮುಂದುವರೆಸಿಕೊಂಡು ಬಂದಿದ್ದು, ಇರುತ್ತದೆ. ದಿನಾಂಕ:24/12/2020 ರಂದು ಫಿಯರ್ಾದಿಯ ಅಣ್ಣನ ಮದುವೆಗೆ ಆರೋಪಿತರು ತಾವು ಹೋಗುವುದಿಲ್ಲ ಮನೆಯನ್ನು ನನ್ನ ಹೆಸರಿಗೆ ಮಾಡಿದರೆ ಮಾತ್ರ ಮದುವೆಗೆ ಬರುತ್ತೇವೆ ನೀನು ಮದುವೆಗೆ ಹೋಗಬೇಡ ನೀನು ಒಂದು ವೇಳೆ ಮದುವೆಗೆ ಹೋದಲ್ಲಿ ನಿನ್ನ ಜೀವ ಹೊಡೆಯುತ್ತೇವೆ ಅಂತಾ ಅಂದು ಫಿರ್ಯದಿಗೆ ಹೆದರಿಸಿದ್ದರು. ಆಗ ಫಿಯರ್ಾದಿ ತನ್ನ ಅಣ್ಣನ ಮದುವೆಗೆ ಹೋಗದೆ ಇರುವುದಕ್ಕೆ ಆಗದೆ ಇದ್ದುದರಿಂದ ಇರುವ ಒಬ್ಬ ಅಣ್ಣನ ಮದುವೆಗೆ ಹೋಗಿ ಮದುವೆ ಮುಗಿಸಿಕೊಂಡು ಮರಳಿ ಗಂಡನ ಮನೆಗೆ ಹೋದಾಗ ಫಿಯರ್ಾದಿಗೆ ಮನೆಯಲ್ಲಿ ಕರೆದುಕೊಳ್ಳದೆ ಹೊರಗೆ ಹಾಕಿದ್ದರಿಂದ ಫಿಯರ್ಾದಿ ನನ್ನ ತವರು ಮನೆಯಲ್ಲಿಯೇ ಇದ್ದರು. ದಿನಾಂಕ: 15/01/2021 ರಂದು ರಾತ್ರಿ 10.00 ಪಿ.ಎಂ. ಸುಮಾರಿಗೆ ಆರೋಪಿತರು ಫಿಯರ್ಾದಿಯ ತವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ನೀನು ಜೀವಂತ ಬದುಕ್ಕಿದ್ದರೆ ನನಗೆ ತೊಂದರೆ ಆಗುತದೆ ನಿನ್ನನ್ನು ಸಾಯಿಸಿದರೇನೆ ನನಗೆ ಸಮಾಧಾನ ಅಂತ ಜೋರಾಗಿ ಕೂಗಾಡುತ್ತಾ ಫಿಯರ್ಾದಿಯ ಗಂಡ ಫಿಯರ್ಾದಿಗೆ, ಕೆಳಗೆ ಕೆಡವಿ ಸಾಯಿಸುವ ದುರುದ್ದೇಶದಿಂದ ಕುತ್ತಿಗೆ ಹಿಸುಕಿ ಸಾಯಿಸಲು ಪ್ರಯತ್ನಿಸುತ್ತಿದ್ದಾಗ, ಬಿಡಿಸಲು ಬಂದ ಫಿಯರ್ಾದಿ ತಾಯಿಗೆ ರಾಜು ಪಾಟೀಲ್ ಇವನು ಕಾಲಿನಿಂದ ಒದ್ದಿದ್ದು, ಮಹಾಂಗೌಡ ಪಾಟೀಲನು ಕೆಳಗೆ ಬಿದ್ದಿದ್ದ ಫಿಯರ್ಾದಿಯ ಕೂದಲು ಹಿಡಿದು ಎಳೆದಿದ್ದು, ಶೋಭಾ ಇವಳು ಕಾಲಿನಿಂದ ಒದ್ದಿದ್ದು, ಆಗ ಸಾಕ್ಷಿದಾರರು ಬಂದು ಜಗಳ ಬಿಡಿಸಿದಾಗ ಎಲ್ಲರೂ ಫಿಯರ್ಾದಿ ಮತ್ತು ಅವರ ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಏನು ಮಾಡಿಕೊಳ್ಳುತ್ತಿರಿ ಮಾಡಿಕೊಳ್ಳಿ ಅಂತಾ ಹೇಳಿ ಎಲ್ಲರೂ ಅಲ್ಲಿಂದ ಹೊರಟು ಹೋಗಿದ್ದು, ತಮ್ಮ ಹಿರಿಯರೊಂದಿಗೆ ವಿಚಾರಣೆ ಮಾಡಿ ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದಿರುತ್ತೇನೆ. ಕಾರಣ ನನಗೆ ವರದಕ್ಷಿಣೆ ಕಿರುಕುಳ ಕೊಟ್ಟು ನನ್ನ ಕೊಲೆಗೆ ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ನನ್ನ ಗಂಡ ಮತ್ತು ಅವರ ಕುಟುಂಬದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-16/2021 ಕಲಂ 323, 307, 498(ಎ), 354, 342, 504, 506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂಬರ 17/2021 ಕಲಂ 87 ಕೆ.ಪಿ ಆಕ್ಟ : ಇಂದು ದಿನಾಂಕ 19/01/2021 ಸಾಯಂಕಾಲ 20-15 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್. ಹಿರೇಮಠ ಶಹಾಪುರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 19/01/2021 ರಂದು ರಾತ್ರಿ 7-30 ಪಿ.ಎಂ ಕ್ಕೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೈಯಾಳ (ಬಿ) ಗ್ರಾಮದ ಹೈಯಾಳ ಲಿಂಗೇಶ್ವರ ಗುಡಿಯ ಹತ್ತಿರ ಕೆಲವು ಜನರು ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಜೂಜಾಟವಾಡುತ್ತಿದ್ದಾರೆ ಅಂತ ಮಾಹಿತಿ ಬಂದಿದ್ದು, ಸದರಿ ಮಾಹಿತಿಯು ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು 8-05 ಪಿ.ಎಂ.ಕ್ಕೆ ಅನುಮತಿ ನೀಡಿದ್ದು, ಅದರ ಪ್ರತಿಯನ್ನು ಲಗತ್ತಿಸಿ ಜ್ಞಾಪನ ನೀಡಿದ ಪ್ರಕಾರ ಠಾಣೆ ಗುನ್ನೆ ನಂಬರ 17/2021 ಕಲಂ 87 ಕೆ.ಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಳ್ಳಲಾಗಿದೆ. ನಂತರ ದಾಳಿ ಮಾಡಿ ಜೂಜಾಟ ಆಡುತಿದ್ದ 5 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 4530=00 ರೂಪಾಯಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
ಶಹಾಪೂರ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 02/2021 ಕಲಂ 174 ಸಿ.ಆರ್.ಪಿ.ಸಿ ಃ ಇಂದು ದಿನಾಂಕ 19/01/2021 ರಂದು 8:10 ಎ.ಎಂ ಕ್ಕೆ ಪಿರ್ಯಾದಿ ದೇವಿಂದ್ರಪ್ಪ ತಂದೆ ಮಲ್ಲಯ್ಯ ವ|| 45 ಜಾ|| ಮಾದಿಗ ಉ|| ಗೌಂಡಿ ಸಾ|| ಗುಂಡಗುತರ್ಿ ಇದ್ದು, ನನಗೆ 5 ಜನ ಮಕ್ಕಳಿದ್ದು ಹೀರಿಯ ಮಗಳಾದ ಉಮಾದೇವಿಗೆ ಮದುವೇ ಮಡಿಕೊಟ್ಟಿದ್ದು, ಶೇಖಮ್ಮ ವ|| 18 ವರ್ಷ, ಮಲ್ಲಮ್ಮ ವ||16 ವರ್ಷ ಮಲ್ಲಿಕಾಜರ್ುನ 14 ವರ್ಷ, ರೇಖಮ್ಮ 11 ವರ್ಷ ಹೆಂಡತಿ ಮಕ್ಕಳೊಂದಿಗೆ ಕೂಲಿ ಮತ್ತು ಗೌಂಡಿ ಕೇಲಸ ಮಾಡಿಕೊಂಡು ಉಪಜೀವಿಸುತ್ತಿದ್ದು, ನನ್ನ ಮಗಳಾದ ಶೆಖಮ್ಮ ಇವಳು ಮೈಲಾರಪ್ಪನ ಮಗ ಶರಣಬಸಪ್ಪ ಜೋತೆ ಪ್ರೀತಿಸುತ್ತಿದ್ದು, ನಾವೂ ಮದುವೆ ಮಾಡುತ್ತವೆ ಎಂದು ಹೇಳಿದ್ದವು ಮತ್ತು ಹುಡಗನ ಮನೆಯವರ ಅವರು ಒಪ್ಪಿರುತ್ತಾರೆ, ಹೀಗಿದ್ದು, ದಿನಾಂಕ 18/01/2021 ರಂದು ನಾನು ಮತ್ತು ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಊಟಾ ಮಾಡಿ ಮಲಗಿದ್ದು, ರಾತ್ರಿ 12 ಗಂಟೆ ಸುಮಾರಿಗೆ ನನ್ನ ಮಗಳಾದ ಶೇಖಮ್ಮ ಇವಳು ನನ್ನ ಹೆಂಡತಿಯಾದ ಸುಲೋಚನ ಇವಳಿಗೆ ಎಬ್ಬಸಿ ಹೋರಗೆ ಹೋಗಿ ಏಕಿ ಮಾಡಿ ಬಂದು ಮಲಗಿದ್ದು, ನಂತರ ದಿನಾಂಕ 19/01/2021 ರಂದು ನಮ್ಮ ಜಾತಿಯ ಮೈಲಾರಪ್ಪನವರ ಮನೆ ಕಡೆ ಆಳುವ ಶಬ್ದ ಕೇಳಿ, ನಾವೂ ನಮ್ಮ ಮಗಳನ್ನು ಮನೆಯಲ್ಲಿ ನೋಡಿದೇವು ಅವಳು ಮನೆಯಲ್ಲಿ ಇರಲಿಲ್ಲಾ, ನಾವೂ ಕೂಡಲೇ ಮೈಲಾರಪ್ಪನ ಅಣ್ಣ ಮಲ್ಲಪ್ಪ ಇವರ ಮನಗೆ ಹೋಗಿ ನೋಡಲಾಗಿ ನನ್ನ ಮಗಳಾದ ಶೇಖಮ್ಮ ಮತ್ತು ಶರಣಬಸಪ್ಪ ಇಬ್ಬರೂ ಪರಸ್ಪರ ಪ್ರೀತಿಸಿ ದೈರ್ಯಕಳೆದುಕೊಂಡು ನೆಣುಹಾಕಿಕೊಂಡು ಮೃತಪಟ್ಟಿದ್ದು,ಕಾರಣ ನನ್ನ ಮಗಳಾದ ಶೇಖಮ್ಮ ವ|| 18 ವರ್ಷ ಮತ್ತು ನಮ್ಮ ಸಹ ಜಾತಿಯ ಮೈಲಾರಪ್ಪನವರ ಮಗನಾದ ಶರಣಬಸಪ್ಪ ತಂದೆ ಮೈಲಾರಪ್ಪ ಅಚ್ಚಗೇರ ವ|| 24 ವರ್ಷ ಜಾ|| ಎಸ್.ಸಿ ಮಾದಿಗ ಸಾ|| ಗುಂಡಗುತರ್ಿ ಇವರಿಬ್ಬರೂ ಸುಮಾರು ತಿಂಗಳಿಂದ ಪರಸ್ಪರ ಪ್ರೀತಿಮಾಡುತ್ತಿದ್ದು ನಾವೂ ಮತ್ತು ಹುಡಗನ ಕಡೆಯವರು ಮದುವೇ ಮಾಡುತ್ತೆವೆ ಎಂದು ಹೇಳಿದರು ದಿನಾಂಕ 19/01/2021 ರಂದು ರಾತ್ರಿ 12 ಗಂಟೆಯಿಂದ ಬೇಳಿಗ್ಗೆ 6 ಗಂಟೆ ಒಳಗೆ ದೈರ್ಯ ಕಳೆದುಕೊಂಡು ಮಲ್ಲಪ್ಪ ಅಚ್ಚಗೆರಿ ಇವರ ಮನೆಯಲ್ಲಿ ಜಂತಿಗೆ ಸೀರೆಯಿಂದ ನೆಣುಹಾಕಿಕೊಂಡು ಮೃತಪಟ್ಟಿದ್ದು ಯಾರ ಮೇಲೆ ಯಾವೂದೆ ರೀತಿಯಾ ಸಂಸಾಯ ಇರುವದಿಲ್ಲಾ ಅಂತಾ ವಿರೇಶ ತಂದೆ ಭಾಗಣ್ಣ ಇವರ ಕೈಯಿಂದ ಹೇಳಿ ಬರೆಸಿದ್ದು ನೀಜವಿರುತ್ತದೆ ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು ಮಾನ್ಯರಲ್ಲಿ ವಿನಂತಿ . ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 02/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 07/2021 ಕಲಂ: 379 ಐಪಿಸಿ: ಇಂದು ದಿನಾಂಕ 19/01/2021 ರಂದು 6:00 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಎಂ.ಡಿ.ದಾವೂದ ತಂದೆ ಚಂದಾಹುಸೇನ ವ:26 ವರ್ಷ ಉ:ವ್ಯಾಪಾರ ಜಾ:ಮುಸ್ಲಿಂ ಸಾ:ನಾರಾಯಣಪೂರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ದಿ|| 12/12/2020 ರಂದು 8:00 ಪಿ.ಎಂ ದಿಂದ ದಿನಾಂಕ 13/12/2020 ರ ಮದ್ಯಾಹ್ನ 12:00 ಪಿ.ಎಂ ದ ಮದ್ಯದ ಅವದಿಯಲ್ಲಿ ಪಿಯರ್ಾದಿದಾರರು ತಮ್ಮ ಮನೆಯ ಮುಂದಿನ ಅಂಗಳದಲ್ಲಿ ನಿಲ್ಲಿಸಿದ ತಮ್ಮ ಹಿರೋ ಕಂಪನಿಯ ಸ್ಪೆಲಂಡರ್ ಪ್ಲಸ್ ಮೋಟರ ಸೈಕಲ್ ನಂ ಕೆ.ಎ.33 ಯು-7740 ಅಕಿ:20000/- ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಪಿಯರ್ಾದಿ
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- ಕಲಂ: 279, 337, 338 ಐಪಿಸಿ : ಇಂದು ದಿನಾಂಕ: 19/01/2021 ರಂದು ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಭೀಮಣ್ಣ ಹೆಚ್.ಸಿ-146 ಗೋಗಿ ಠಾಣೆ ಸದರಿ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಖಾಜಾಸಾಬ ತಂದೆ ಯುಸೂಫ್ಸಾಬ ಶೇಖ್ ವಯಾ:45 ಉ: ಕೂಲಿ ಜಾ: ಮುಸ್ಲಿಂ ಸಾ: ಹಾರಣಗೇರಾ ತಾ: ಶಹಾಪೂರ ರವರ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 07.30 ಬಂದಿದ್ದು, ಸದರಿ ಹೇಳಿಕೆ ಪಿಯರ್ಾದಿ ಸಾರಂಶ ಏನಂದರೆ, ಇಂದು ದಿನಾಂಕ: 19/01/2021 ರಂದು ನನ್ನ ಮತ್ತು ನನ್ನ ತಮ್ಮನಾದ ಗೂಡುಸಾಬ ತಂದೆ ಯುಸೂಫಸಾಬ ಶೇಖ ವಯಾ;35 ವರ್ಷ ಉ:ಕೂಲಿ ಜಾ: ಮುಸ್ಲೀಂ ಸಾ: ಹಾರಣಗೇರಾ ತಾ: ಶಹಾಪೂರ ಇಬ್ಬರದು ಶಹಾಪೂರ ಕೋರ್ಟಲ್ಲಿ ಕೆಲಸ ಇದ್ದುದರಿಂದ, ಕೋರ್ಟಗೆ ಹೋಗುವ ಕುರಿತು ನಮ್ಮ ಜೋತೆಯಲ್ಲಿ ನಮ್ಮ ಅಣ್ಣತಮ್ಮಕಿಯ ಪೈಕಿ ನಮ್ಮ ತಮ್ಮನಾದ ಬಸೀರಸಾಬ ತಂದೆ ಹುಸೇನಸಾಬ ದೇವಾಪೂರ ವಯಾ:35 ಉ: ಕೂಲಿ ಜಾ: ಮುಸ್ಲಿಂ ಸಾ: ಹಾರಣಗೇರಾ ಇವರಿಗೆ ನಮ್ಮ ಕೆಲಸದ ಸಂಬಂದವಾಗಿ ಶಹಾಪೂರ ಕ್ಕೆ ಹೋಗಿ ಬರೋಣ ಅಂತಾ ಕರೆದುಕೊಂಡು ಮೋಟಾರ ಸೈಕಲ್ ನಂ:ಕೆಎ-33-ಎಕ್ಷ-4929 ನೇದ್ದರ ಮೇಲೆ ಹಾರಣಗೇರಾ ದಿಂದ ದರ್ಶಪೂರ ಮಾರ್ಗವಾಗಿ ಶಹಾಪೂರಕ್ಕೆ ಹೋಗುತ್ತಿದ್ದೇವು, ಬಸಿರಸಾಬ ದೇವಾಪೂರ ಈತನು ಮೋಟಾರ ಸೈಕಲ್ ನಡೆಸುತ್ತಿದ್ದನು, ನಾನು ಮಧ್ಯದಲ್ಲಿ ಕುಳಿತಿದ್ದು ನಮ್ಮ ತಮ್ಮನಾದ ಗೂಡುಸಾಬ ನನ್ನ ಹಿಂದೆ ಕುಳಿತಿದ್ದನು, ಮೂರು ಜನರು ಕುಳಿತು ಮೋಟಾರ್ ಸೈಕಲ್ ಮೇಲೆ ಶಹಾಪೂರ ಕಡೆಗೆ ಹೋಗುತ್ತಿದ್ದಾಗ 11.30 ಎಎಂ ಸುಮಾರಿಗೆ ಶಹಾಪೂರ-ಸಿಂದಗಿ ಮೇನ್ ರೋಡಿನ ಗೋಗಿ ಕೆರೆಯ ಮೇಲ್ಬಾಗದಲ್ಲಿನ, ಹಳ್ಳದ ಬ್ರೀಜ್ ಹತ್ತಿರ ರೋಡಿನಲ್ಲಿ ಹೋಗುವಾಗ ಬಸೀರಸಾಬ ಈತನು ಸದರಿ ಮೋಟಾರ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ರೋಡಿನಲ್ಲಿ ಹೋಗಿ ಬರುವ ವಾಹನಗಳಿಗೆ ಸೈಡಕೊಡಲು ಹೋಗಿ ನಿಯಂತ್ರಣ ತಪ್ಪಿ ಮೋಟಾರ ಸಯಕಲ್ ಸ್ಕೀಡ ಮಾಡಿ ಅಫಘಾತ ಮಾಡಿದ್ದು, ನಾವುಗಳು ಮೂರು ಜನರು ಮೋಟಾರ್ ಸೈಕಲ್ ಸಮೇತವಾಗಿ ರೋಡಿನ ಪಕ್ಕದಲ್ಲಿ ಬಿದ್ದಿದ್ದು, ಅಷ್ಟರಲ್ಲಿ ನಮ್ಮೂರಿನ ಕಡೆಯಿಂದ ನಮ್ಮ ಹಿಂದಿನಿಂದ ಸೋಮರಾಯ ತಂದೆ ಚನ್ನಬಸ್ಸಪ್ಪ ಬೇವಿನಕಟ್ಟಿ, ಅಯ್ಯಪ್ಪ ತಂದೆ ಅಂಬ್ಲಪ್ಪ ಬೇವಿನಕಟ್ಟಿ ಇವರುಗಳು ನೋಡಿ ಬಂದು ನಮಗೆ ಎಬ್ಬಿಸಿ ಕೂಡಿಸಿದರೂ, ನೋಡಲಾಗಿ ನನಗೆ ಬಲಗಣ್ಣಿನ ಹುಬ್ಬಿನ ಮೇಲೆ ತರಚಿದಗಾಯ, ಬಲಗೈ ಮುಷ್ಠಿಯ ಹತ್ತಿರ ತರಚಿದಗಾಯವಾಗಿದ್ದು, ಟೋಂಕಕ್ಕೆ ಹಿಂಬಾಗದಲ್ಲಿ ಭಾರಿಗುಪ್ತ ಪೆಟ್ಟಾಗಿತ್ತು, ನಮ್ಮ ತಮ್ಮನಾದ ಗೂಡುಸಾಬ ತಂದೆ ಯುಸೂಪಸಾಬ ಇವನಿಗೆ ಬಲಗೈಬುಜದ ಮೇಲೆ ತರಚಿದಗಾಯ, ಬಲಗಡೆಯ ಮುಖಕ್ಕೆ ತರಚಿದಗಾಯ, ಬಲಗಾಲಿನ ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ಎಡಗೈ ಮುಂಗೈಗೆ ತರಚಿದಗಾಯವಾಗಿರುತ್ತದೆ. ಮೋಟಾರ ಸೈಕಲ್ ನಡೆಸುತ್ತಿದ್ದ ಬಸೀರಸಾಬ ಈತನಿಗೆ ಬಲಗೈ ಮುಡ್ಡಿಗೆ ಗುಪ್ತಪೆಟ್ಟಾಗಿರುತ್ತದೆ. ಮೂರು ಜನರಿಗೆ ಸೋಮರಾಯ ತಂದೆ ಚನ್ನಬಸ್ಸಪ್ಪ ಬೇವಿನಕಟ್ಟಿ, ಅಯ್ಯಪ್ಪ ತಂದೆ ಅಂಬ್ಲಪ್ಪ ಬೇವಿನಕಟ್ಟಿ ಇವರುಗಳು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಇಂದು ನಾವು ಕುಳಿತು ಹೊರಟಿದ್ದ ಮೋಟಾರ್ ಸೈಕಲ್ ನಂ: ಕೆಎ-33-ಎಕ್ಷ-4929 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸ್ಕೀಡ್ ಮಾಡಿ ಅಪಘಾತ ಮಾಡಿದ ಬಸಿರಸಾಬ ತಂದೆ ಹುಸೇನಸಾಬ ದೇವಾಪೂರ ಸಾ: ಹಾರಣಗೇರಾ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 06/2021 ಕಲಂ: 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರಿ ಗ್ರಾಮಿಣ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 07/2021 ಕಲಂ 323, 324. 307. 504. 506 ಸಂಗಡ 34 ಐಪಿಸಿ: ಇಂದು ದಿನಾಂಕ 19-01-2021 ರಂದು 1-45 ಪಿ.ಎಮ ಕ್ಕೆ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ನಾಗರಾಜ ತಂದೆ ಭೀಮಯ್ಯಾ ಬಂಡಿವಡ್ಡರ ವಯಾ:55 ಉ: ಒಕ್ಕಲುತನ ಜಾ: ವಡ್ಡರ ಸಾ:ಇಂಗನಕಲ್ ತಾ: ಚಿತಾಪೂರ ಹಾ:ವ:ಅಬ್ಬೆತುಮಕೂರ ತಾ:ಜಿ: ಯಾದಗಿರಿ ಇವರಿಗೆ ವಿಚಾರಿಸಿದಾಗ ಅವರು ತಡವಾಗಿ ಹೇಳಿಕೆ ನೀಡಿದ್ದೆನೆಂದರೆ ಇಂದು ದಿನಾಂಕ 19-01-2021 ರಂದು 11-30 ಗಂಟೆ ಸುಮಾರಿಗೆ ನಾನು ಸದರಿ ರೋಶನರಾಜು ಇವರ ಹೋಲ ಸವರ್ೇ ನಂ: 202ರಲ್ಲಿ ಎಂದಿನಂತೆ ಕೂಲಿ ಕೆಲಸ ಮಾಡುತ್ತಿದ್ದೆನು. ಆಗ ಅಲ್ಲಿಯೇ ಹೋಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಹಾಬಾಜಖಾನ ತಂದೆ ಸರದಾಖಾನ ಮತ್ತು ಅವರ ಜೋತೆಯಲ್ಲಿ ಪಾಶಾ ತಂದೆ ಲಾಡ್ಲಾಪಟೇಲ್ ಎಂಬುವವರೂ ಕೂಡಾ ಇದ್ದರು. ಅದೇ ವೇಳೆಗೆ ಅಬ್ಬೆತುಮಕೂರು ಗ್ರಾಮದ 1) ಸಿದ್ದಪ್ಪಾ ತಂದೆ ಬಾಲಪ್ಪಾ ದೊರೆ ಇವರ ಮಕ್ಕಳಾದ 2) ಪರಮಣ್ಣಾ ತಂದೆ ಸಿದ್ದಪ್ಪಾ ದೊರೆ 3) ಸಾಬು ತಂದೆ ಸಿದ್ದಪ್ಪಾ ದೊರೆ ಹಾಗೂ 4) ಬಸಮ್ಮಾ ತಂದೆ ಸಿದ್ದಪ್ಪಾ ದೊರೆ ಇವರೆಲ್ಲರೂ ಕೈಯ್ಯಲ್ಲಿ ಕೊಡಲಿ ಮತ್ತು ಬಡಿಗೆಯನ್ನು ಹಿಡಿದುಕೊಂಡು ಹಕಾರಿ ಹೊಡೆಯುತ್ತಾ ರೋಶನರಾಜು ಇವರ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದವರೇ ಎಲ್ಲರೂ ಕೂಡಿ ನನಗೆ ಎಲೇ ಬೋಸಡಿ ಮಗನೇ ನಿನಗೆ ಈ ಮೊದಲಿನಿಂದಲೂ ಈ ಹೋಲದಲ್ಲಿ ಕೆಲಸ ಮಾಡಬೇಡ ಈ ಹೋಲ ನಮ್ಮ ಹಿರಿಯರಿಂದ ಬಂದ ಹೋಲವಿದೆ ಅಂತಾ ಹೇಳುತ್ತಾ ಬಂದರೂ ಕೂಡಾ ನೀನು ನಮ್ಮ ಮಾತು ಕೇಳುತ್ತಿಲ್ಲಾ ನಿನಗೆ ಸೊಕ್ಕು ಬಾಲ ಬಂದಿದೆ ಸೂಳೇ ಮಗನೇ ಇವತ್ತು ನಿನಗೆ ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ಅಂದವರೇ ಅವರಲ್ಲಿ ಸಿದ್ದಪ್ಪಾ ಇತನು ತನ್ನ ಕೈಯ್ಯಲ್ಲಿದ್ದ ಕೊಡಲಿಯಿಂದ ನನ್ನ ತೆಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ಸತ್ತೆನೆಪ್ಪೋ ಅಂತಾ ಕೆಲಗಡೆ ಬಿದ್ದು ಒದ್ದಾಡುತ್ತಿದ್ದಾಗ ಪರಮಣ್ಣಾ ಇತನು ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನ್ನ ಬಲತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಇನ್ನೂಳಿದ ಸಾಬು ತಂದೆ ಸಿದ್ದಪ್ಪಾ ದೊರೆ ಹಾಗೂ ಬಸಮ್ಮಾ ತಂದೆ ಸಿದ್ದಪ್ಪಾ ದೊರೆ ಇವರಿಬ್ಬರೂ ನನಗೆ ಮನಸ್ಸಿಗೆ ಬಂದ ಹಾಗೇ ಹೊಟ್ಟೆಗೆ ಮತ್ತು ಪಕ್ಕೆಗೆ ಒದ್ದರು. ಆಗ ನಾನು ಒದರಾಡುವುದು ಚೀರಾಡುವುದು ಮಾಡುತ್ತಿದ್ದಾಗ ಶಹಾಬಾಜಖಾನ ತಂದೆ ಸರದಾಖಾನ ಮತ್ತು ಅವರ ಜೋತೆಯಲ್ಲಿ ಪಾಶಾ ತಂದೆ ಲಾಡ್ಲಾ ಪಟೇಲ್ ಇಬ್ಬರೂ ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಅವರು ಬಿಡಿಸಿಕೊಳ್ಳದಿದ್ದರೇ ಅವರೆಲ್ಲರೂ ಕೂಡಿ ನನಗೆ ಕೊಲೆ ಮಾಡುತ್ತಿದ್ದರು. ಈ ರೀತಿಯಾಗಿ ಈ ಮೇಲ್ಕಂಡ ಮೂರು ಜನರು ತಮ್ಮ ಕೈಯ್ಯಲ್ಲಿ ಕಡಲಿ ಮತ್ತು ಬಡಿಗೆ ಹಿಡಿದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನಗೆ ಕೊಡಲಿಯಿಂದ ಮತ್ತು ಬಡಿಗೆಯಿಂದ ಹೊಡೆದು ಮತ್ತು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸಿದ ಈ ಮೇಲ್ಕಂಡ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಘಟನೆಯ ಬಗ್ಗೆ ಮನೆಯಲ್ಲಿ ನಮ್ಮ ಹಿರಿಯರೊಂದಿಗೆ ವಿಚಾರಣೆ ಮಾಡಿ ಫಿರ್ಯಾಧಿ ಕೊಡಲು ತಡವಾಗಿರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು ಮರಳಿ 4-50 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2020 ಕಲಂ 323, 324, 307, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಯಾದಗಿರಿ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 05/2021 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ :- ಇಂದು ದಿನಾಂಕ 19/01/2021 ರಂದು ಸಾಯಂಕಾಲ 5-30 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಮೆಡಿಕಲ್ ಕಾಲೇಜ್ ಕ್ರಾಸ್ ಹತ್ತಿರದ ಎಸ್ಸಾರ್ ಪೆಟ್ರೋಲ್ ಬಂಕ್ ಮುಂದಿನ ಮುಖ್ಯ ರಸ್ತೆ ಮೇಲೆ ಮುಖ್ಯ ಈ ಕೇಸಿನ ಫಿಯರ್ಾದಿಯ ಮಗನಾದ ಗಾಯಾಳು ವಸಂತ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-32, ಇಕೆ-3310 ನೇದ್ದನ್ನು ಯಾದಗಿರಿ ಕಡೆಯಿಂದ ವಾಡಿ ಕಡೆಗೆ ನಡೆಸಿಕೊಂಡು ಹೋಗುತ್ತಿದ್ದಾಗ ಆರೋಪಿತನು ತನ್ನ ಆಟೋ ಟಂ,ಟಂ ನಂಬರ ಕೆಎ-33, 8346 ನೇದ್ದನ್ನು ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಗಾಯಾಳು ವಸಂತ ಈತನಿಗೆ ಬಲಗಾಲಿನ ತೊಡೆಗೆ, ಮೊಣಕಾಲು ಕೆಳಗೆ ಭಾರೀ ರಕ್ತಗಾಯವಾಗಿ ರಕ್ತ ಹೊರಬರುತ್ತಿದ್ದು, ಕಾಲು ಮುರಿದಿರುತ್ತದೆ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ. ಮೋಟಾರು ಸೈಕಲ್ ಹಿಂಬದಿ ಸವಾರನಿಗೆ ಬಲಗಾಲಿನ ತೊಡೆಗೆ, ಬೆನ್ನಿಗೆ ಭಾರೀ ಗುಪ್ತಗಾಯವಾಗಿರುತ್ತದೆ ಈ ಘಟನೆಯ ನಂತರ ಆಟೋ ಚಾಲಕನು ಆಟೋವನ್ನು ಘಟನಾ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಆತನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ದೂರು ನೀಡಿದ್ದು ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.05/2021 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.