ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/01/2021
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂಬರ 14/2021 ಕಲಂ 279, 337, 304(ಎ) ಐ.ಪಿ.ಸಿ : ಇಂದು ದಿನಾಂಕ 18/01/2021 ರಂದು ಸಾಯಂಕಾಲ 17-00 ಗಂಟೆಗೆ ಫಿರ್ಯಾದಿ ಶ್ರೀ ದಾವೂದ ತಂ/ ಅಬ್ದುಲ್ನಬಿಸಾಬ ಸೈಯದ್ ವ|| 33 ವರ್ಷ ಜಾ|| ಮುಸ್ಲಿಂ ಉ|| ಗೌಂಡಿ ಕೆಲಸ ಸಾ|| ಮದಿನಾ ಕಾಲೋನಿ ಎಂ.ಎಸ್.ಕೆ. ಮಿಲ್ ಹತ್ತಿರ ಕಲಬುಗರ್ಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ: 18/01/2021 ರಂದು ದೇವದುರ್ಗದಲ್ಲಿ ಫಿಯರ್ಾದಿಯ ತಮ್ಮ ಮಹಿಬೂಬನ ನಿಶ್ಚಿತಾರ್ಥ ಕಾರ್ಯಕ್ರಮ ಇದ್ದುದರಿಂದ, ಫಿಯರ್ಾದಿಯವರು ಕಲಬುರಗಿಯಿಂದ ಈಚರ್ ವಾಹನ ಬಾಡಿಗೆ ಮಾಡಿಕೊಂಡು, ಕಲಬುಗರ್ಿಯಿಂದ ಬೆಳಿಗ್ಗೆ 11.00 ಎ.ಎಂ.ಕ್ಕೆ ಹೊರಟು 2.00 ಗಂಟೆ ಸುಮಾರಿಗೆ ಹತ್ತಿಗುಡೂರ ಹತ್ತಿರ ಬಂದು ವಾಹನ ನಿಲ್ಲಿಸಿದ್ದು, ಫಿಯರ್ಾದಿಯ ತಂಗಿಯು ತನ್ನ ಗಂಡನಾದ ಸೈಯದವಾಸಿಂ ಪಟೇಲ್ ತಂ/ ಮಲಂಗಪಟೇಲ್ ಸೈಯದ್ ವಯ 34 ಸಾಃ ಸ್ಟೇಷನ್ ಏರಿಯಾ ಯಾದಗಿರಿ ಇವರೊಂದಿಗೆ ಮೋಟರ್ ಸೈಕಲ್ ನಂಬರ ಕೆಎ-33-ಎಲ್-4803 ನೇದ್ದರ ಮೇಲೆ ಬಂದಿದ್ದು, ನಂತರ ಫಿಯರ್ಾದಿಯು ತನ್ನ ತಂಗಿಗೆ ಈಚರ್ ವಾಹನದಲ್ಲಿ ಕೂಡಿಸಿ ದೇವದುರ್ಗಕ್ಕೆ ಕಳುಹಿಸಿ ನಂತರ ಫಿಯರ್ಾದಿಯು ತನ್ನ ತಂಗಿಯ ಗಂಡನೊಂದಿಗೆ ಮೋಟರ ಸೈಕಲ್ ನಂ-ಕೆಎ-33-ಎಲ್-4803 ನೇದ್ದರಲ್ಲಿ ಹಿಂದೆ ಕುಳಿತುಕೊಂಡು ದೇವದುರ್ಗ ಕಡೆಗೆ ಹೊರಟರು. ಅಂದಾಜು 3.00 ಪಿ.ಎಂ. ಸುಮಾರಿಗೆ ಶಹಾಪುರ-ದೇವದುರ್ಗ ರಸ್ತೆಯಲ್ಲಿ ಬೀರನೂರು ಕ್ರಾಸ್ ದಾಟೀ ಅಂದಾಜು 1 ಕಿ.ಮೀ ದೂರದಲ್ಲಿರುವ ರಸ್ತೆ ತಿರುವಿನಲ್ಲಿ ಹೊರಟಿದ್ದಾಗ ಸೈಯದವಾಸಿಂ ಪಟೇಲನು ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಮೋಟರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ಎಡ ಸೈಡಿಗೆ ಮೋಟರ ಸೈಕಲ್ ಸ್ಕಿಡ್ಡಾಗಿ ಬಿದ್ದ ಪರಿಣಾಮ ಫಿಯರ್ಾದಿಯ ಭಾವ ಸೈಯದ್ವಾಸಿಂ ಪಟೇಲನಿಗೆ ತಲೆಗೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ತನಗೆ ಎಡ ಭುಜಕ್ಕೆ ಒಳಪೆಟ್ಟು, ಮೂಗಿಗೆ ತರಚಿದ ಗಾಯ, ಎಡ ಮೊಳಕಾಲಿಗೆ ತರಚಿದ ಗಾಯವಾಗಿರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣನಾದ ತನ್ನ ಭಾವ ಸೈಯದ್ವಾಸಿಂ ಪಟೇಲ್ ತಂ/ ಮಲಂಗ್ ಪಟೇಲ್ ಸೈಯದ ವ|| 34 ವರ್ಷ ಸಾ|| ಸ್ಟೇಷನ್ ಏರಿಯಾ ಯಾದಗಿರಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 14/2021 ಕಲಂ 279, 337, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂಬರ 15/2021 ಕಲಂ ಮನುಷ್ಯ ಕಾಣೆ : ಇಂದು ದಿನಾಂಕ 18/01/2021 ರಂದು 20.10 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಮತಿ ಬಿಪಾಶ ಗಂಡ ಜಮೀಲ ಅಹ್ಮದ ಶೇಖ ವ|| 45 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಸಾ|| ಜಾಲಗಾರ ಓಣಿ ಶಹಾಪೂರ ನನಗೆ 6 ಜನ ಮಕ್ಕಳಿದ್ದು 1] ತನ್ವೀರ ವ|| 26 ವರ್ಷ, 2] ಜಬೀನ ಬೇಗಂ ವ|| 24 ವರ್ಷ, 3] ಶಬೀಬ ಅಹ್ಮದ ವ|| 22 ವರ್ಷ, 4] ಹೀನಾ ಕೌಸರ್ ವ|| 20 ವರ್ಷ, 5] ಅಪಸನಾ ಬೇಗಂ, 18 ವರ್ಷ, ಪರಜಾನ ಬೇಗಂ ವ|| 16 ವರ್ಷ ಇದ್ದು, ನನ್ನ ಮೂರು ಹೀರಿಯ ಮೂರು ಹೆಣ್ಣು ಮಕ್ಕಳಿಗೆ ಮದುವೆ ಮಡಿಕೊಟ್ಟಿದ್ದು ಉಳಿದ ನನ್ನ ಮಕ್ಕಳು ಮತ್ತು ನನ್ನ ಗಂಡ ಕೂಲಿ ಕೇಲಸ ಮಾಡಿಕೊಂಡು ಉಪ ಜೀವಿಸುತ್ತಿದ್ದು, ಹೀಗಿದ್ದು ದಿನಾಂಕ 09/01/2021 ರಂದು ನಾನು ಸ್ವಲ್ಪ ಕೇಲಸವಿದ್ದ ಕಾರಣ ನನ್ನ ತವರು ಮನೆಯಾದ ಕಲಬುರಗಿಗೆ ಮುಂಜಾನೆ 10:00 ಎ.ಎಂಕ್ಕೆ ಹೋಗಿದ್ದು, ನನ್ನ ಗಂಡ ಮತ್ತು ನನ್ನ ಮಗ ಶಬೀಬ ಅಹ್ಮದ ಕೂಲಿ ಕೇಲಸ ಕುರಿತು ಹೋರಗೆ ಹೋಗಿದ್ದು, ಮನೆಯಲ್ಲಿ ನನ್ನ ಕಿರಿಯ ಮಕ್ಕಳಾದ ಅಫಸಾನ ಬೇಗಂ ಮತ್ತು ಪರಜಾನ ಬೇಗಂ ಇಬ್ಬರೂ ಮನೆಯಲ್ಲಿದ್ದರು, ನಾನು ಸಾಯಂಕಾಲ 07:30 ಪಿ.ಎಂ ಸುಮಾರಿಗೆ ನಾನು ಕಲಬುರಗಿಯಿಂದ ಮರಳಿ ಮನೆಗೆ ಬಂದೆನು, ಮನೆಯಲ್ಲಿ ನನ್ನ ಕಿರಿಯ ಮಗಳಾದ ಪರಜಾನ ಬೇಗಂ ಬಹಳ ಗಾಬರಿಯಲ್ಲಿ ಇದ್ದು ನಾನು ಏಕೆ ಏನಾಯಿತು ಎಂದು ಕೇಳಿದ್ದು, ಸದರ ನನ್ನ ಮಗಳು ಪರಜಾನ ಬೇಗಂ ಇವಳು ನನಗೆ ತಿಳಿಸಿದ್ದೆನಂದರೆ, ನಾವೂ ಮನೆಯಲ್ಲಿ ಕೇಲಸ ಮುಗಿಸಿ ಕುಳುತ್ತಿದ್ದಾಗ ಅಂದಾಜು 2 ಗಂಟೆ ಗೆ ಅಕ್ಕ ಅಫಸಾನ ಬೇಗಂ ನಾನು ಮೇಡಿಕಲ್ ಶಾಫ ಹೋಗಿ ಸಾಬೂನ ಮತ್ತು ಕ್ರೀಮ ತೆಗಿದುಕೊಂಡು ಬರುತ್ತಿನಿ ಅಂತಾ ಹೇಳಿ ಹೋಗಿದ್ದು ಇಲ್ಲಿವರೆಗೆ ಮರಳಿ ಮನೆಗೆ ಬಂದಿರುವದಿಲ್ಲಾ ಅಂತಾ ತಿಳಿಸಿದ್ದು ನಾನೂ ಕೂಡಲೇ ನನ್ನ ಗಂಡ ಜಮೀಲ ಅಹ್ಮದ , ನನ್ನ ಮಗ ಶಬೀಬ ಅಹ್ಮದ ಗೆ ಪೋನಿನಲ್ಲಿ ವಿಷಯ ತಿಳಿಸಿದ್ದು ಅವರ ಬಂದು ನಾವೇಲ್ಲರೂ ಕೂಡ ಶಹಾಪೂರ, ತರಕಾರಿ ಮಾಕರ್ೆಟ, ಬಸ್ ನಿಲ್ದಾಣ, ಸಿ.ಬಿ ಕಮಾನ ಎಲ್ಲಾ ಕಡೆ ಹುಡಕಾಡಿದರೂ ಸಿಕ್ಕಿರುವದಿಲ್ಲಾ, ನಂತರ ನಮ್ಮ ಬಂದು ಬಳಗದವರಿಗೆ ಪೋನ ನಲ್ಲಿ ವಿಚರಿಸಲಾಗಿ ಯಾರ ಬಂದಿರುವದಿಲ್ಲಾ ಅಂತಾ ತಿಳಿಸಿದ್ದು, ನಂತರ ನಾನು ಮತ್ತು ನನ್ನ ಮಗ, ಕಲಬುರಗಿ, ಸುರಪೂರ, ಯಾದಗಿರ ಎಲ್ಲಾ ಕಡೆ ಹುಡಕಾಡಿದರೂ ಸಿಕ್ಕಿರುವದಿಲಾ ಎಲ್ಲಾ ಕಡೆ ಹುಡಕಾಡಿ ತಡವಾಗಿ ಬಂದು ದೂರು ಅಜರ್ಿ ನೀಡಿದ್ದು ಇರುತ್ತದೆ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 15/2021 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ.ಗುಡಿ.ಪೊಲೀಸ್ ಠಾಣೆ ಗುನ್ನೆ ನಂ:- 04/2021 ಕಲಂ 323,324,354,504,506 ಸಂ 34 ಐಪಿಸಿ: ದಿನಾಂಕ:16/01/2021 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಫಿಯರ್ಾದಿ ತನ್ನ ಮನೆಯ ಮುಂದೆ ಕುಳಿತಾಗ ಆರೋಪಿತರು ಬಂದವರೇ ಎಲ್ಲಿ ನಿನ್ನ ಮಗ ರಿಯಾಜ, ಎಲ್ಲಿ ಬಚ್ಚಿಟ್ಟೀರಿ ಆ ಭೋಸಡಿ ಮಗನಿಗೆ ಅಂತಾ ಒದರಾಡುತ್ತಿರುವಾಗ ನನ್ನ ಮಗ ಇಲ್ಲ ಯಾಕೆ ಏನಾಗಿದೆ ಅಂತಾ ಕೇಳಿದಾಗ ಆರೋಪಿ ನಬಿಲಾಲ್ ಈತನು ನಿನ್ನ ಮಗ ನನ್ನ ಮಗಳಿಗೆ ನಬಿಲಾಲ ನಾಯ್ಕೋಡಿ ಈತನು ನಿನಗೆ ಇಷ್ಟಪಟ್ಟಿದ್ದಾನೆ, ಅವನಿಗೆ ಮಾಡ್ಕೋತೀದಿಲ್ಲ ಅಂತಾ ಕೇಳಿದ್ದಾನೆ ಎಲ್ಲಿದ್ದಾನೆ ನಿನ್ನ ಮಗ ಹೊರಗೆ ಕರಿ ಅಂತಾ ಅಂದಾಗ ಫಿಯರ್ಾದಿಯು ನನ್ನ ಮಗ ಅಂಥವನಲ್ಲ ನೀವು ತಪ್ಪು ತಿಳಕೊಂಡೀರಿ ಅಂತಾ ಅಂದಾಗ ಆರೋಪಿತನು ಎಲೆ ಭೋಸಡಿ ಮಗಳೆ ನೀನು ನಮಗೆ ಬುದ್ದಿವಾದ ಹೇಳ್ತೀದಿ ಅಂತಾ ಬೈದವನೇ ಅವಮಾನ ಮಾಡುವ ಉದ್ದೇಶದಿಂದ ನನ್ನ ಕೈಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿದ್ದು ಉಳಿದ ಆರೋಪಿತರು ಸಹ ಕೈಗಳಿಂದ ಬಡಿಗೆಯಿಂದ ಹೊಡೆಬಡೆ ಮಾಡಿ ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 05/2021 ಕಲಂ, 87 ಕೆ.ಪಿ ಆ್ಯಕ್ಟ್: ದಿನಾಂಕ 18/01/2021 ರಂದು 10.50 ಪಿಎಂ ಕ್ಕೆ ಶ್ರೀ. ಸೋಮಲಿಂಗಪ್ಪ ಪಿಎಸ್ಐ (ಅ.ವಿ) ರವರು ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಮತ್ತು ಒಂದು ವರದಿ ಹಾಜರ ಪಡೆಸಿದ್ದು ಅದರ ಸಾರಂಶ ಏನಂದರೆ, ಶೆಟ್ಟಿಕೆರಾ ಸೀಮಾಂತರದಲ್ಲಿ ಬಾದ್ಯಾಪೂರ ರೋಡಿನ ಪಕ್ಕದಲ್ಲಿನ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತರ ಮೇಲೆ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 07 ಜನರನ್ನು ಹಿಡಿದಿದ್ದು ಆರೋಪಿತರಿಂದ ನಗದು ಹಣ ರೂ. 10480=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು ಮತ್ತು 08 ಮೋಟಾರ ಸೈಕಲಗಳನ್ನು 08.45 ಪಿಎಮ್ ದಿಂದ 10.00 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 10.15 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ, ಜಪ್ತಿ ಪಂಚನಾಮೆ ಮತ್ತು ಮುದ್ದೇ ಮಾಲು ಆರೋಪಿತರನ್ನು ಹಾಜರಪಡಿಸಿದ್ದರಿಂದ, ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 05/2021 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 21/2021 ಕಲಂ 87 ಕೆ.ಪಿ. ಕಾಯ್ದೆ: ಇಂದು ದಿನಾಂಕ: 18-01-2021 ರಂದು7ಪಿ.ಎಂ.ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸಾಹೇಬರು8ಜನಆರೋಪಿತರೊಂದಿಗೆಠಾಣೆಗೆ ಬಂದುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:18/01/2021 ರಂದು 4 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಸತ್ಯಂಪೇಠ ಸೀಮಾಂತರದ ಮಹಾದೇವಪ್ಪ ಶುಕ್ಲಾಇವರ ಹೋಲದ ಹತ್ತಿರಇರುವ ಶ್ರೀ ಹನುಮಾನದೇವರಗುಡಿಯ ಹತ್ತಿರ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್ಸಿ-105, 3) ಶ್ರೀ ಮಂಜುನಾಥ ಪಿಸಿ-271, 4) ಶ್ರೀ ಶರಣಗೌಡ ಪಿಸಿ-218, 5) ಶ್ರೀ ಪರಮೇಶ ಪಿಸಿ-142, 6) ಶ್ರೀ ಮಾನಯ್ಯ ಪಿಸಿ-372, 7) ಶ್ರೀ ಮಹಾದೇವ ಪಿಸಿ-126, 8) ಕುಮಾರ ಪಿಸಿ-139ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರುಇಬ್ಬರು ಪಂಚರಾದ 1) ಶ್ರೀ ಸಾಬಣ್ಣತಂದೆ ಸಂಜೀವಪ್ಪಗುಜ್ಜಲರ್ ವ|| 30 ವರ್ಷಜಾ|| ಬೇಡರ ಉ|| ಗೌಂಡಿ ಸಾ|| ಸತ್ಯಂಪೇಠತಾ|| ಸುರಪುರ 2) ಶ್ರೀ ರಾಜಾಅಪ್ಪರಾವ್ ನಾಯಕತಂದೆರಾಜಾ ಮುದ್ದುಕೃಷ್ಣ ನಾಯಕ ವ|| 46 ವರ್ಷಜಾ|| ನಾಯಕ ಉ|| ಒಕ್ಕಲುತನ ಸಾ|| ಸತ್ಯಂಪೇಠತಾ|| ಸುರಪುರಇವರನ್ನು 4:30 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 4:45 ಪಿ.ಎಂ ಕ್ಕೆ ಠಾಣೆಯಜೀಪ್ ನಂ. ಕೆಎ-33.ಜಿ-0238 ನೇದ್ದರಲ್ಲಿಠಾಣೆಯಿಂದ ಹೊರಟು 5:15 ಪಿ.ಎಂ ಕ್ಕೆ ಸತ್ಯಂಪೇಠ ಸೀಮಾಂತರದ ಮಹಾದೇವಪ್ಪ ಶುಕ್ಲಾಇವರ ಹೋಲದ ಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಶ್ರೀ ಹನುಮಾನದೇವರಗುಡಿಯ ಹತ್ತಿರ ಸಾರ್ವಜನಿಕಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೇಲೆಅವರ ಮೇಲೆ 5:20 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು 08 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಗೋಪಾಲ ತಂದೆ ಭೀಮಣ್ಣದೇವರಮನಿ ವ|| 35 ವರ್ಷಜಾ|| ಬೇಡರು ಉ|| ಕೂಲಿ ಸಾ|| ಸತ್ಯಂಪೇಠ ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1020/- ರೂಗಳು ವಶಪಡಿಸಿಕೊಳ್ಳಲಾಯಿತು. 2) ನಿಂಗಣ್ಣತಂದೆ ನಿಂಗಪ್ಪ ಹೊಸಮನಿ ವ|| 45 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ದಿವಳಗುಡ್ಡ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1800/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಮರೆಪ್ಪತಂದೆ ಪಿಡ್ಡಪ್ಪ ಕೊಳ್ಳಿ ವ|| 50 ವರ್ಷಜಾ|| ಕುರುಬರ ಉ|| ಹೊಟೆಲ್ ಕೆಲಸ ಸಾ|| ದಿವಳಗುಡ್ಡ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಶಿವಪ್ಪ ತಂದೆ ಹಣಮಂತ ಮೇದಾರಗೋಳ ವ|| 31 ವರ್ಷಜಾ||| ಬೇಡರು ಉ|| ಗೌಂಡಿಕೆಲಸ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1100/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಭೀಮಣ್ಣತಂದೆಅಯ್ಯಪ್ಪದೇವರಗೋನಾಲ ವ|| 45 ವರ್ಷಜಾ|| ಬೇಡರು ಉ|| ಕೂಲಿ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಗೋಪಾಲ ತಂದೆ ಬಸಪ್ಪ ಶಾಖಾಪೂರ ವ|| 35 ವರ್ಷಜಾ|| ಬೇಡರು ಉ|| ಗೌಂಡಿಕೆಲಸ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1150/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಭೀಮಣ್ಣತಂದೆ ಹಣಮಂತ ಗಾಳೆನವರ ವ|| 33 ವರ್ಷಜಾ|| ಮಾದಿಗ ಉ|| ಗೌಂಡಿ ಕೆಲಸ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 850/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಬಸವರಾಜತಂದೆಕಿರಿಲಿಂಗಪ್ಪ ಸಿಂದಗಿ ವ|| 56 ವರ್ಷಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1250/- ರೂಗಳು ವಶಪಡಿಸಿಕೊಳ್ಳಲಾಯಿತು.ಇದಲ್ಲದೆ ಪಣಕ್ಕೆಇಟ್ಟ ಹಣ 12,200/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 21,370/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 5:20 ಪಿ.ಎಮ್ ದಿಂದ 6:20 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ8ಜನಆರೋಪಿತರು ಮತ್ತು ಮುದ್ದೆಮಾಲನ್ನುಠಾಣೆಗೆತಂದು ಹಾಜರುಪಡಿಸುತ್ತಿದ್ದು, ಸದರಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲುವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 21/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 05/2021 ಕಲಂ: 78 (3) ಕೆ.ಪಿ ಯಾಕ್ಟ್: ದಿನಾಂಕ 18/01/2021 ರಂದು 11:30 ಎ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 09:30 ಎ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಟಗಿ ಗ್ರಾಮದ ಶ್ರೀ ಧರ್ಮಲೀಂಗೇಶ್ವರ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 05/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 02:40 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 1100/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 06/2021 ಕಲಂ: 78 (3) ಕೆ.ಪಿ ಯಾಕ್ಟ್: ದಿನಾಂಕ 18/01/2021 ರಂದು 05:10 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 04:30 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಟಗಿ ಗ್ರಾಮದ ಕಿತ್ತುರು ರಾಣಿ ಚನ್ನಮ್ಮ ವೃತ್ತದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 06/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 08:10 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 810/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.