ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/01/2021
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 11/2021.ಕಲಂ. 379. ಐ.ಪಿ.ಸಿ. : ಇಂದು ದಿನಾಂಕ 15/01/2021 ರಂದು ಮದ್ಯಾಹ್ನ 14-00 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ವಿರೇಂದ್ರ ಸಿಂಗ್ ತಂದೆ ಸಾವಂತ ಸಿಂಗ್ ಚವ್ಹಾಣ ವ|| 52 ಜಾ|| ರಜಪೂತ ಉ|| ಹತ್ತಿಗುಡೂರ ಸೋಲಾರ್ ಪ್ಲಾಂಟನಲ್ಲಿ ಮ್ಯಾನೇಂಜರ ಸಾ|| ಚಾರನೊಂದ ತಾ|| ಜಿ|| ಹಿಸಾರ ರಾಜ್ಯ-ಹರಿಯಾಣ ಇವರು ಠಾಣೆಗೆ ಹಾಜರಾಗಿ ಒಂದು ಇಂಗೀಷನಲ್ಲಿ ಕೈಯಲ್ಲಿ ಬರೆದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ, ನಾನು ಅದಾನಿ ಇಫ್ರಾಸ್ಟ್ರಕ್ಚರ ಮ್ಯಾನೆಜ್ಮೆಂಟ್ ಸವರ್ಿಸ್ಸ ಲೀಮಿಟೆಡ್ ಹತ್ತಿಗುಡೂರದ ಸೋಲಾರ ಪ್ಲಾಂಟನಲ್ಲಿ 2017 ರಿಂದ ಕೆಲಸಮಾಡುತ್ತಿದ್ದು ಇರುತ್ತದೆ. ಸದರಿ ಹತ್ತಿಗೂಡೂರದ ಸೋಲಾರ ಪ್ಲಾಂಟನಲ್ಲಿ ಈ ಕೆಳಗಿನ ವಸ್ತು ಕಳ್ಳತನವಾದವುಗಳು 1] ದಿನಾಂಕ: 22/11/2020 ರಂದು 7-00 ಪಿ.ಎಂ. ಯಿಂದ 23/11/2020 ರಂದು ಬೆಳಿಗ್ಗೆ 6 ಗಂಟೆಯ ಅವದಿಯಲ್ಲಿ ಅಂದಾಜು 4 ಕಿ.ಮೀ. ಡಿ.ಸಿ.ಕೆಬಲ್ ಅಂ: ಕಿ: 50,000=00 ರೂ2] ದಿನಾಂಕ:25/12/2020 ರಂದು 7-00 ಪಿ.ಎಂ. ಯಿಂದ 26/12/2020 ರಂದು 6-00 ಎ,ಎಂ, ಅವದಿಯಲ್ಲಿ ಅಂದಾಜು 6 ಕಿ.ಮೀ. ಡಿ.ಸಿ.ಕೆಬಲ್ ಅಂ: ಕಿ: 70,000=00 ರೂ3] ದಿನಾಂಕ: 03/01/2021 ರಂದು 7-00 ಪಿ.ಎಂ.ಯಿಂದ 04/01/2021 ರಂದು 6-00 ಎ.ಎಂ. ಅವದಿಯಲ್ಲಿ ಅಂದಾಜು 6 ಕಿ.ಮೀ. ಡಿ.ಸಿ.ಕೆಬಲ್ ಅಂ: ಕಿ: 70,000=00 ರೂ ಸದರಿ ಕಳ್ಳತನವಾದ ವಸ್ತುವನ್ನು ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋಗಿದ್ದು ಅವುಗಳನ್ನು ಪತ್ತೆಮಾಡಿ ಕೊಡಲು ಕಾನೂನು ಕ್ರಮ ಕೈಕೊಳಬೆಕು, ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 11/2021 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿ ಕೊಂಡ ತನಿಕೆ ಕೈಕೊಂಡೆನು.
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 04/2021 ಕಲಂ 143, 147, 148, 323, 324, 504, 506 ಸಂ 149 ಐಪಿಸಿ :-ದಿನಾಂಕ 14/01/2021 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಅವನ ಅಣ್ಣ ಇಬ್ಬರೂ ಮೋಟಾರ ಸೈಕಲ್ ಮೇಲೆ ಕುಳಿತು ಹೊಲಕ್ಕೆ ಹೋಗುತ್ತಿದ್ದರು, ಆಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾಧಿ ಮತ್ತು ಅವನ ಅಣ್ಣನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಮತ್ತು ಕಲ್ಲಿನಿಂದ ಫಿರ್ಯಾಧಿಗೆ ಮತ್ತು ಅವನ ತಮ್ಮನಿಗೆ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿದ್ದು ಮತ್ತು ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿರಿ ಮಕ್ಕಳೇ ಇನ್ನೊಂದು ಸಲ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.
ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ :- 05/2021 ಕಲಂ 143, 147, 323, 504, 506 ಸಂ 149 ಐಪಿಸಿ : ದಿನಾಂಕ 14/01/2021 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ತನ್ನ ಹೊಲದಿಂದ ಮನೆ ಕಡೆಗೆ ಬರುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಫಿರ್ಯಾಧಿಗೆ ಹೊಡೆಬಡೆ ಮಾಡಿದ್ದು ಮತ್ತು ಕಾಲಿನಿಂದ ಒದ್ದಿರುತ್ತಾರೆ, ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿದಿ ಮಗನೇ ಇನ್ನೊಂದು ಸಲ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.
ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ :- ಯು.ಡಿ.ಆರ್ ನಂ.01/2021 ಕಲಂ: 174 ಸಿ.ಆರ್.ಪಿ.ಸಿ : ದಿನಾಂಕ 04.01.2021 ರಂದು ಸಾಯಂಕಾಲ 7:30 ರಂದು ಮೃತಳು ಕಂದಕೂರ ಗ್ರಾಮದ ತನ್ನ ಮನೆಯಲ್ಲಿ ಅಡುಗೆ ಮಾಡಲು ಸ್ಟೂವ್ ಹಚ್ಚಿದಾಗ ಆಶ್ಮಿಕವಾಗಿ ಸ್ಟೋವ್ ಬ್ಲಾಸ್ಟ ಆಗಿದ್ದು ಆ ಬಿಂಕಿಯು ಮೃತಳ ಸೀರೆ ಸಿಡಿದು ಮೈ ಕೈಗೆ ಸುಟ್ಟ ಗಾಯಗಳಾಗಿ ಉಪಚಾರಕಾಗಿ ಯಾದಗಿರಿ ಆಸ್ಪತ್ರಗೆ ಸೇರಿಕೆಯಾಗಿ ನಂತರ ಹೆಚ್ಚಿನ ಉಪಚಾರಕ್ಕಾಗಿ ರೀಮ್ಸ್ ಆಸ್ಪತ್ರೆ ರಾಯಚೂರಕ್ಕೆ ಸೇರಿಕೆಯಾಗಿ ಅಲ್ಲಿ ದಿನಾಂಕ:05.01.2021 ರಿಂದ 15.01.2021 ರ ವರೆಗೆ ಉಪಚಾರ ಪಡೆದಿದ್ದು. ಇಂದು ಬೆಳಿಗ್ಗೆ 7:30 ಗಂಟೆಗೆ ಉಪಚಾರ ಫಲಿಸದೇ ಸುಟ್ಟ ಗಾಯದ ಭಾದೆಯಿಂದ ಮೃತಪಟ್ಟಿದ್ದು. ದೆತ್ ಎಮ್ಎಲ್ಸಿ ವಿಚಾರಣೆ ಕುರಿತು ರೀಮ್ ಆಸ್ಪತ್ರೆಗೆ ಬೇಟಿ ನೀಡಿದಾಗ ರೀಮ್ಸ್ ಆಸ್ಪತ್ರೆಯಲ್ಲಿ ಈ ಬಗ್ಗೆ ಮೃತಳ ತಾಯಿಯು ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಯು.ಡಿ.ಆರ್. ನಂಬರ 01/2021 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.