ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/01/2021
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್. ನಂ 01/2021 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ 06-01-2021 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾಧಿದಾರನಾದ ಶ್ರೀ ಈಶಪ್ಪ ತಂದೆ ನಾಗಪ್ಪ ಭಜಂತ್ರಿ ವಯಾಃ 38 ವರ್ಷ ಜಾಃ ಭಜಂತ್ರಿ ಉಃ ಕೂಲ ಕಸಬು ಸಾಃ ಅಬ್ಬೆತುಮಕುರ ತಾ:ಜಿ: ಯಾದಗಿರಿ ಈತನು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದರ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದನಿದ್ದು ಕೂಲ ಕಸಬು ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಮಾಡುತ್ತೇನೆ. ನಮ್ಮ ತಂದೆ-ತಾಯಿಗೆ ಐದು ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿದ್ದು. ಹೀಗೆ ಒಟ್ಟು ಆರು ಜನರಿದ್ದು, ನಾವು ಐದು ಜನ ಅಣ್ಣ ತಮ್ಮಮದಿರು ಬೇರೆ ಬೇರೆಯಾಗಿ ಜೀವನ ಮಾಡುತ್ತೇನೆ, ನನ್ನ ತಮ್ಮನಾದ ಬಸವರಾಜ ಈತನು ಸುಮಾರು 10-12 ವರ್ಷಗಳಿಂದ ಠಾಣೆಗುಂದಿ ಕೆ.ಇ.ಬಿ ಸಬ್ ಸ್ಟೇಷನ (ವಿದ್ಯುತ ಪ್ರಸರಣ ನಿಗಮ) ನಲ್ಲಿ ಹೆಲ್ಪರ ಅಂತಾ ಕೆಲಸ ಮಾಡುತ್ತಿದ್ದನು. ಹೀಗಿದ್ದು ಇಂದು ದಿನಾಂಕ 06-01-2021 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಬಸವರಾಜ ಈತನು ಮನೆಯಲ್ಲಿದ್ದಾಗ ಠಾಣಾಗುಂದಿ ಸಬ್ ಸ್ಟೇಷನದ ಲೈನಮ್ಯಾನನಾದ ಮರಿಲಿಂಗಪ್ಪ ಈತನು ಅಬ್ಬೆತುಮಕೂರು ಗ್ರಾಮಕ್ಕೆ ಬಂದು ಬಸವರಾಜ ಈತನಿಗ ಕರೆದುಕೊಂಡು ಅರಕೇರಾ ಗ್ರಾಮಪಂಚಾಯತ ವಾಟರ ಸಪ್ಲೈ 25 ಕೆ.ಬಿ ಟ್ರಾನ್ಸಪಾರಂ ಸುಟ್ಟಿದ್ದು. ಸದರಿ ಸುಟ್ಟ ಟ್ರಾನ್ಸಫಾರಂ ಜಾಗಕ್ಕೆ ಮೊತ್ತೊಂದು ಹೊಸ ಟ್ರಾನ್ಸಫಾರಂ ಕೂಡಿಸುವದಿದೆ ಅಂತಾ ಹೇಳಿದಾಗ ಆಗ ನಮ್ಮ ತಮ್ಮ ಮತ್ತು ಮರಿಲಿಂಗ ಇಬ್ಬರೂ ಕೂಡಿಕೊಂಡು ಹೋದರು. ನಾನು ಹೊಲಕ್ಕೆ ನೀರು ಬಿಡುವ ಸಂಬಂಧ ಪೈಪ ತೆಗೆದುಕೊಂಡು ಹೋಲಕ್ಕೆ ಹೋದಾಗ 11-20 ಗಂಟೆಯವಾಗಿದ್ದು. ಅದೇ ಸಮಯದಲ್ಲಿ ಮರಿಲೀಂಗ ಈತನು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ನಿನ್ನ ತಮ್ಮನಾದ ಬಸವರಾಜ ಈತನು ಟ್ರಾನ್ಸಫಾರಂ ಕೂಡಿಸುವಾಗ ಒಮ್ಮಿಂದ ಒಮ್ಮಲೇ ವಿದ್ಯುತ ಹರಿದು ಬಸವರಾಜ ಈತನು ಕಂಬದ ವಿದ್ಯುತ ವಾಯರದಿಂದ ಶಾಖ ಹೊಡೆದು ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಆಗ ನಾನು ನಿನ್ನ ತಮ್ಮನ್ನು ಬಿಡಸಲು ಹೋದಾಗ ನನಗೆ ಕೈ ಕಾಲುಗಳಿಗೆ ಸುಟ್ಟಗಾಯಗಳು ಆಗಿರುತ್ತೇವೆ ನೀನು ಬೇಗ ಬನ್ನಿರಿ ಅಂತಾ ತಿಳಿಸಿದನು. ನಾನು ಹೊಲದಿಂದ ಮನೆಗೆ ಬಂದು ಮನೆಯಲ್ಲಿದ್ದ ನಮ್ಮ ತಮ್ಮ ಹೆಂಡತಿಯಾದ ಹುಸೇನಮ್ಮ, ನನ್ನ ಹೆಂಡತಿಯಾದ ಬೀಮವ್ವ ನನ್ನ ಅಣ್ಣ ಹೆಂಡತಿಯಾದ ಮಹಾದೇವಿ ನನ್ನ ಅಣ್ಣನಾದ ಸಾಬಣ್ಣ ಎಲ್ಲರೂ ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ತಮ್ಮ ಬಸವರಾಜ ಈತನು ಕಂಬದಲ್ಲಿ ವಿದ್ಯುತ ವಾಯರ ತಗುಲಿ ವಿದ್ಯುತ ಶಾಕದಿಂದ ಮೃತಪಟ್ಟಿದ್ದು ಇರುತ್ತದೆ. ಈ ಮೇಲಿನಂತೆ ಘಟನೆ ಜರುತ್ತದೆ. ಸದರಿ ಘಟನೆ ಇಂದು ದಿನಾಂಕ 06-01-2021 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಜರುಗಿರುತ್ತದೆ. ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು. ಸದರಿಯವನ ಸಾವಿನಲ್ಲಿ ಯಾವದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಗಣಕಯಂತ್ರದಲ್ಲಿ ಹೇಳಿ ಗಣಕೀರಣ ಮಾಡಿಸಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 01/2021 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:- 03/2021 ಕಲಂ: 489(ಎ), 504, 506, 302 ಐ.ಪಿ.ಸಿ : ಇಂದು ದಿನಾಂಕ; 06.01.2021 ರಂದು ರಾತ್ರಿ 09.30 ಗಂಟೆಗೆ ಪಿರ್ಯಾಧಿ ಮಲ್ಲಪ್ಪ ತಂದೆ ದೊಡ್ಡ ಸಾಬಣ್ಣ ನಕಲೊರ ವಯಾ-30 ವರ್ಷ ಜಾತಿ-ಬೇಡರು ಉ-ಕೂಲಿ ಕೆಲಸ ಸಾ-ಇಂದಿರಾ ನಗರ ಗ್ರಾಮೀಣ ಪೊಲೀಸ್ ಠಾಣೆ ಹಿಂದುಗಡೆ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಸಾರಂಶವೇನೆಂಧರೆ ನಮ್ಮತಂದೆ ತಾಯಿಗೆ ನಾವು 4 ಜನ ಮಕ್ಕಳಿರುತ್ತೇವೆ ಎಲ್ಲರಿಗೂ ಮದುವೆಯಾಗಿರುತ್ತದೆ. ನಮ್ಮ ತಂದೆ ಸಾಬಣ್ಣ ನನ್ನ ತಾಯಿಗೆ 50 ಸಾವಿರ ಹಣ ಕೊಡು ಅಂತ ದಿನಾಲು ನನ್ನ ತಾಯಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರಕುಳ ಕೊಟ್ಟು ಪ್ರಾಣ ಬೆದರಿಕೆ ಹಾಕುತ್ತಾ ಬಂದಿರುತ್ತಾನೆ., ನನ್ನ ತಂದೆ ಕುಡಿಯುವ ಅಭ್ಯಾಸ ಇರುವುದರಿಂದ , ಕುಡಿದಾಗ ಈ ರೀತಿ ಜಗಳ ಮಾಡುತ್ತಿರುತ್ತಾನೆ. ನಂತರ ಸರಿ ಹೋಗುತ್ತಾನೆಂದು ಸುಮ್ಮನಿದ್ದೇವು. ದಿನಾಂಕ: 05.01.2021 ರಂದು ಯಾದಗಿರಿ ನಗರದ ವಾಲ್ಮೀಕಿ ನಗರದ ನನ್ನ ಚಿಕ್ಕಪ್ಪನಾದ ಚಂದ್ರಾಮ ತಂದೆ ಶಿವಪ್ಪ ಇವರ ಮಗನ ಜವಳ ಕಾರ್ಯಕ್ರಮ ಇದ್ದುದ್ದರಿಂದ ಮನೆಯಲ್ಲಿ ಎಲ್ಲರೂ ಹೋಗಿದ್ದೇವು. ದಿನಾಂಕ: 06.01.2021 ರಂದು ನಮ್ಮ ಸಂಬಂಧಿಕರೇಲ್ಲರೂ ಮಾತಾನಾಡುತ್ತಾ ಕುಳಿತ್ತಿದ್ದಾಗ ನಮ್ಮ ತಂದೆ ದೊಡ್ಡ ಸಾಬಣ್ಣ ಈತನು ನನ್ನ ತಾಯಿಗೆ 50 ಸಾವಿರ ರೂ ಹಣ ಕೊಡು ಅಂತ ಕೇಳಿದಾಗ ನಮ್ಮ ದುಡ್ಡು ಇಲ್ಲ ಅಂದಾಗ ಹೊಲ ಮಾರಿ ಹಣ ಕೊಡುವುದಿಲ್ಲ ಅಂತ ನನ್ನ ಹತ್ತಿರ ಜಗಳ ಮಾಡಿ ನನ್ನ ತಾಯಿಗೆ ಚಾಕುವಿನಿಂದ ಹೊಟ್ಟೆಗೆ ತಿವಿದು ಕೊಲೆ ಮಾಡಿರುತ್ತಾನೆ ಅಂತ ದೂರಿನ ಸಾರಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಗುನ್ನೆನಂ: 03/2021 ಕಲಂ: 498(ಎ), 504, 506, 302 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಢು ತನಿಖೆ ಕೈಗೊಂಡಿರುತ್ತೇನೆ.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 03/2021 ಕಲಂ: 143, 147, 148, 323, 324, 307, 354, 504, 506 ಸಂ 149 ಐಪಿಸಿ : ಇಂದು ದಿನಾಂಕ:06/01/2021 ರಂದು 8:15 ಪಿಎಮ್ಕ್ಕೆ ಪಿಯರ್ಾದಿ ಬೋರಮ್ಮ ಗಂಡ ಶರಣಗೌಡ ಪಾಟೀಲ್ ವ|| 48ವರ್ಷ ಜಾ|| ಹಿಂದೂ ಕುರುಬರ ಉ|| ಕೂಲಿ ಕೆಲಸ ಸಾ|| ಕರೇಕಲ್ಲ ಇವರು ಠಾಣೆಯಲ್ಲಿ ಹಾಜರಾಗಿ ನೀಡಿದ ಅಜರ್ಿಯ ಸಾರಾಂಶವೆನೇಂದರೆ ನಾನು ಮತ್ತು ನನ್ನ ಗಂಡನಾದ ಶರಣಗೌಡ ತಂದೆ ಭೀಮನಗೌಡ ಪಾಟೀಲ್ ಇಬ್ಬರೂ ದಿನಾಂಕ:01/01/2021 ಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮ ಗಿರಣಿ ಮನೆಯಲ್ಲಿದ್ದಾಗ ಅದೇ ಸಮಯಕ್ಕೆ ನಮ್ಮೂರವರಾದ 1) ನಬೀಸಾಬ ತಂದೆ ಅಬ್ದುಲಸಾಬ ದೋಣಿ 2) ಹಣಮಂತ್ರಾಯ ತಂದೆ ಶಂಕ್ರಪ್ಪ ನಾಗೂರ 3) ಹಣಮಂತ್ರಾಯ ತಂದೆ ಬಸಪ್ಪ ಕ್ಯಾಸಪ್ಪನಳ್ಳಿ, 4) ದೇವಪ್ಪ ತಂದೆ ಗುರಪ್ಪ ದೊಡ್ಡಮನಿ 5) ಮಲ್ಲಪ್ಪ ತಂದೆ ಬಸಪ್ಪ ಕ್ಯಾಸಪ್ಪನಳ್ಳಿ, 6) ನಾಗಪ್ಪ ತಂದೆ ಶಂಕ್ರಪ್ಪ ನಾಗೂರ 7) ಲಾಳೆಸಾಬ ತಂದೆ ಅಬ್ದುಲಸಾಬ ದೋಣಿ, 8) ಮೈನೂದ್ದಿನ ತಂದೆ ಅಬ್ದುಲಸಾಬ ದೋಣಿ, 9) ಮೈಬೂಬಸಾಬ ತಂದೆ ಅಬ್ದುಲಸಾಬ ದೋಣಿ, 10) ಶಾಹಿದ ತಂದೆ ಲಾಳೆಸಾಬ ದೋಣಿ, 11) ದ್ಯಾಮಣ್ಣ ತಂದೆ ಶಂಕ್ರಪ್ಪ ನಾಗೂರ 12) ಯಲ್ಲಪ್ಪ ತಂದೆ ಶಂಕ್ರಪ್ಪ ನಾಗೂರ 13) ಶಂಕ್ರಪ್ಪ ತಂದೆ ಹಣಮಂತ್ರಾಯ ನಾಗೂರ 14) ಬಸವರಾಜ ತಂದೆ ರಂಗಪ್ಪ ನಾಗೂರ 15) ಅಶೋಕ ತಂದೆ ಹಣಮಂತ್ರಾಯ ನಾಗೂರ 16) ಚನ್ನಪ್ಪ ತಂದೆ ದೇವಪ್ಪ ದೊಡ್ಡಮನಿ 17) ಮೈಹಿಬೂಬ ತಂದೆ ಅಲ್ಲಸಾಬ ದೋಣಿ ಇವರೆಲ್ಲರೂ ಸೇರಿ ಗುಪ್ಪು ಕಟ್ಟಿಕೊಂಡು ಬಂದು ಕೈಯಲ್ಲಿ ಕಲ್ಲು, ರಾಡು ಬಡಿಗೆಯನ್ನು ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ಕೇ ಕೇ ಹಾಕುತ್ತನ ನನ್ನ ಗಂಡನಿಗೆ ಲೇ ಭೋಸೂಡಿ ಸೂಳೆ ಮಗನೆ ಊರಲ್ಲಿ ನಿನ್ನ ತಿಂಡಿ ಬಹಳ ಆಗಿದೆ ಹೊರಗೆ ಬಾ ಅಂತಾ ಕೂಗಾಡುತ್ತಿದ್ದಾಗ ನಾನು ಮತ್ತು ನನ್ನ ಗಂಡ ಗಾಬರಿಗೊಂಡು ಮನೆಯಿಂದ ಹೊರಗೆ ಬಂದಾಗ ನಬಿಸಾಬ ತಂದೆ ಅಬ್ದುಲಸಾಬ ದೋಣಿ ಈತನು ಈ ಸೂಳಿ ಮಗನಿಗೆ ಇವತ್ತು ಬಿಡುವದು ಬ್ಯಾಡ ಊರಲ್ಲಿ ಹೇಂಗ್ ಜಾತ್ರೆ ಮಾಡುತ್ತಾನೆ ಭೋಸುಡಿ ಮಗ ನೋಡಿಯೇ ಬಿಡೋಣ ಅಂತಾ ಅಂದವನಗೆ ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಗಂಡನ ತಲೆಯ ಮೇಲೆ ಹೊಡೆಯಲು ಬಂದಾಗ ನನ್ನ ಗಂಡನು ತಪ್ಪಿಸಿಕೊಂಡನು ಇಲ್ಲಂದ್ರೆ ನನ್ನ ಗಂಡನು ಸ್ಥಳದಲ್ಲಿಯೇ ಕೊಲೆ ಆಗುತ್ತಿದ್ದನು ಆಗ ನಾನು ನಡುವೆ ಬಿಡಿಸಲು ಚಿರಾಡುತ್ತಾ ಹೋದಾಗ ಹಣಮಂತ್ರಾಯ ತಂದೆ ಶಂಕ್ರಪ್ಪ ನಾಗೂರ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಯ ಮೇಲೆ ಹೊಡಲು ಬಂದಾಗ ನಾನು ತಪ್ಪಿಸಿಕೊಂಡಾಗ ಆ ಏಟು ನನ್ನ ಬೆನ್ನಿಗೆ ಬಿದ್ದು ಒಳಪೆಟ್ಟು ಆಗಿರುತ್ತದೆ. ನಂತರ ಹಣಮಂತ್ರಾಯ ತಂದೆ ಬಸಪ್ಪ ಕ್ಯಾಸಪ್ಪನಳ್ಳಿ, ದೇವಪ್ಪ ತಂದೆ ಗುರಪ್ಪ ದೊಡ್ಡಮನಿ ಇವರು ನನ್ನ ಕೂದಲು ಹಿಡಿದು ನೆಲಕ್ಕೆ ಕೆಡವಿ ಜಗ್ಗಾಡುತ್ತಿದ್ದಾಗ ನನ್ನ ಗಂಡನು ನಡುವೆ ಬಂದಾಗ ಮಲ್ಲಪ್ಪ ತಂದೆ ಬಸಪ್ಪ ಕ್ಯಾಸಪ್ಪನಳ್ಳಿ, ನಾಗಪ್ಪ ತಂದೆ ಶಂಕ್ರಪ್ಪ ನಾಗೂರ, ಲಾಳೆಸಾಬ ತಂದೆ ಅಬ್ದುಲಸಾಬ ದೋಣಿ, ಮೈನೂದ್ದಿನ ತಂದೆ ಅಬ್ದುಲಸಾಬ ದೋಣಿ, ಮೈಬೂಬಸಾಬ ತಂದೆ ಅಬ್ದುಲಸಾಬ ದೋಣಿ, ಶಾಹಿದ ತಂದೆ ಲಾಳೆಸಾಬ ದೋಣಿ, ದ್ಯಾಮಣ್ಣ ತಂದೆ ಶಂಕ್ರಪ್ಪ ನಾಗೂರ, ಇವರೆಲ್ಲರೂ ಸೇರಿ ನನ್ನ ಗಂಡನಿಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆದು ಕಾಲಿನಿಂದ ಒದೆಯ ಹತ್ತಿದಾಗ ಯಲ್ಲಪ್ಪ ತಂದೆ ಶಂಕ್ರಪ್ಪ ನಾಗೂರ ಶಂಕ್ರಪ್ಪ ತಂದೆ ಹಣಮಂತ್ರಾಯ ನಾಗೂರ, ಬಸವರಾಜ ತಂದೆ ರಂಗಪ್ಪ ನಾಗೂರ, ಅಶೋಕ ತಂದೆ ಹಣಮಂತ್ರಾಯ ನಾಗೂರ, ಚನ್ನಪ್ಪ ತಂದೆ ದೇವಪ್ಪ ದೊಡ್ಡಮನಿ, ಮೈಹಿಬೂಬ ತಂದೆ ಅಲ್ಲಸಾಬ ದೋಣಿ ಇವರೆಲ್ಲರೂ ಸೇರಿ ನನಗೆ ಮತ್ತು ನನ್ನ ಗಂಡನಿಗೆ ಈ ಸೂಳಿ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವತೆಗೆಯುತ್ತೇವೆ ಅಂತಾ ಜೀವದಬೇದರಿಕೆ ಹಾಕುತ್ತಿದ್ದಾಗ ಪರಶುರಾಮ ತಂದೆ ದೇವಪ್ಪ ದೊಡ್ಡಮನಿ, ಹಣಮಂತ್ರಾಯ ತಂದೆ ಬಸವಂತಪ್ಪ ಮಲಗಲದಿನ್ನಿ, ರತ್ನಪ್ಪ ತಂದೆ ನವಲಪ್ಪ ಪೂಜಾರಿ, ಜುಮ್ಮಣ್ಣ ತಂದೆ ಬಸಪ್ಪ ಆಲ್ಯಾಳ, ನಿಂಗಪ್ಪ ತಂದೆ ದೇವಪ್ಪ ಆಲ್ಯಾಳ, ಸಿದ್ದಣ್ಣ ತಂದೆ ದೇವಪ್ಪ ದೊಡ್ಡಮನಿ, ಪ್ರಕಾಶ ತಂದೆ ಬಸಪ್ಪ ಹರಿಜನ, ಮುತ್ತಪ್ಪ ತಂದೆ ಹಣಮಂತ್ರಾಯ ಕುಚಬಾಳ ಇವರೆಲ್ಲರೂ ಕೂಡಿಸಿಕೊಂಡು ಜಗಳವನ್ನು ಬಿಡಿಸಿರುತ್ತಾರೆ. ಇವರು ಜಗಳ ಬಿಡಿಸದಿದ್ದರೆ ನನ್ನ ಗಂಡನಿಗೆ ಅವರುಗಳು ಕೊಲೆ ಮಾಡುತ್ತಿದ್ದರು ಕಾರಣ ನನಗೆ ಮತ್ತು ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ಬಂದು ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ನನಗೆ ಒಳಪೆಟ್ಟಾಗಿದ್ದು ಆಸ್ಪತ್ರೆಗೆ ಕಳುಹಿಸಬೇಕು. ನಾನು ಮತ್ತು ನನ್ನ ಗಂಡ ಊರಲ್ಲಿಯ ಅವರಿಗೆ ಅಂಜಿ ತಡವಾಗಿ ಅವರ ಕಣ್ಣು ತಪ್ಪಿಸಿಕೊಂಡು ಇಂದು ಠಾಣೆಗೆ ಬಂದು ದೂರನ್ನು ಸಲ್ಲಿಸುತ್ತಿದ್ದು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿಯ ಸಾರಾಶಂದ ಮೇಲಿಂದ ನಾರಾಯಣಪೂರ ಪೊಲೀಸ್ ಠಾಣಾ ಗುನ್ನೆ ನಂ.03/2021 ಕಲಂ: 143, 147, 148, 323, 324, 307, 354, 504, 506 ಸಂ 149 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.