ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/11/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 100/2020 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 07/11/2020 ರಂದು 3-30 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಇಂದು ದಿನಾಂಕ.07/11/2020 ರಂದು 12-00 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಬಂಡಿಗೇರಾ ಏರಿಯಾದ ಪಿರಗಾಸಾಹೇಬ ದಗರ್ಾ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವರು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 3-20 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 3-30 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.100/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 127/2020 ಕಲಂ: 87 ಕೆ.ಪಿ ಎಕ್ಟ್ : ಇಂದು ದಿನಾಂಕ:07/11/2020 ರಂದು 7-30 ಪಿಎಮ್ ಕ್ಕೆ ಶ್ರೀ ಎಮ್.ಡಿ ಅಜೀಜ್ ಪಿ.ಎಸ್.ಐ (ಅವಿ) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೇನಂದರೆ ನಾನು ಇಂದು ದಿನಾಂಕ: 07/11/2020 ರಂದು ಕೊಂಕಲ್ ಕ್ರಾಸ ಹತ್ತಿರ ಇದ್ದಾಗ ನನಗೆ ಮಾಹಿತಿ ಬಂದಿದ್ದೇನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಕಲ್ ಗ್ರಾಮದ ಚಂದ್ರಶೇಖರಯ್ಯ ತಂದೆ ಶಿವಶಂಕ್ರಯ್ಯ ಹಿರೆಮಠ ಇವರ ಮನೆ ಮುಂದೆ ಬರುವ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಸದರಿ ಜೂಜುಕೋರರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡ ಲಗತ್ತಿಸಲಾಗಿದೆ ಎಂದು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 127/2020 ಕಲಂ: 87 ಕೆಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 85/2020 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:07/11/2020 ರಂದು 3:45 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ದಿನಾಂಕ:07.11.2020 ರಂದು 1:00 ಪಿ.ಎಮ್.ಕ್ಕೆ ತಾವು ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಗುಪ್ತ ಮಾಹಿತಿ ಸಿಬ್ಬಂದಿಯಾದ ಯಲ್ಲಪ್ಪ ಹೆಚ್.ಸಿ-117 ರವರು ನನಗೆ ತಿಳಿಸಿದ್ದು ಎನೇಂದರೆ ಕೊಡೇಕಲ್ಲ ಗ್ರಾಮದಲ್ಲಿನ ಶ್ರೀ ಗದ್ದೆಮ್ಮ ದೇವಿಯ ಕಟ್ಟೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1ರೂಪಾಯಿಗೆ 80ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ ಮೇಲ್ ಮೂಲಕ ರವಾನಿಸಿ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮೂಲಕ ದಿನಾಂಕ:07/11/2020 ರಂದು 3:42 ಪಿ.ಎಮ್.ಕ್ಕೆ ಬಂದಿದ್ದು ಇರುತ್ತದೆ. ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:85/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 5:50 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 1180/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. ಅಬಿಷೇಕ ತಂದೆ ನಾಗರಾಜ ಪವ್ಹಾರ ವ|| 19ವರ್ಷ ಜಾ|| ಹಿಂದೂ ಮರಾಠ ಉ|| ಕೂಲಿ ಕೆಲಸ ಸಾ|| ರೊಡಲಬಂಡಾ ಕ್ಯಾಂಪ ತಾ||ಲಿಂಗಸ್ಗೂರ ಜಿ|| ರಾಯಚೂರ
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ: 277/2020 ಕಲಂ 78 (3) ಕೆ.ಪಿ ಕೆ.ಪಿ ಆಕ್ಟ : ಇಂದು ದಿನಾಂಕ 07/11/2020 ರಂದು ಸಾಯಂಕಾಲ 17-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ್ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು, ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು, ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 07/11/2020 ರಂದು ಮಧ್ಯಾಹ್ನ 13-30 ಗಂಟೆಗೆ ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ದೋರನಹಳ್ಳಿ ಗ್ರಾಮದ ಹಳ್ಳೆರಾಯನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 83/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿಮಾಡಿಕೊಂಡು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಧ್ಯಾಹ್ನ 14-45 ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮಧ್ಯಾಹ್ನ 15-15 ಗಂಟೆಗೆ ದಾಳಿ ಮಾಡಿ ಆರೋಪಿ ಅಬ್ದುಲ್ ತಂದೆ ಭೀಮಯ್ಯ ಗುತ್ತೆದಾರ ವಯ 28 ವರ್ಷ ಜಾತಿ ಈಳಗೇರ ಉಃ ಮಟಕಾ ನಂಬರ ಬರೆದುಕೊಳ್ಳುವದು ಸಾಃ ದೋರನಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ ಈತನನ್ನು ವಶಕ್ಕೆ ಪಡೆದುಕೊಂಡು ಈತನಿಂದ ನಗದು ಹಣ 1420=00 ರೂಪಾಯಿ, ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಮಧ್ಯಾಹ್ನ 15-20 ಗಂಟೆಯಿಂದ 16-20 ಗಂಟೆಯ ಅವಧಿಯಲ್ಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು, ಸದರಿ ಆರೋಪಿತನಿಗೆ ವಿಚಾರಿಸಿದಾಗ ಮಟಕಾ ನಂಬರ ಚೀಟಿಗಳು ಗ್ರಾಮದ ಚಂದ್ರಶೇಖರ ತಂದೆ ಸಾಯಬಣ್ಣ ಪಾಲ್ಕಿ ವಯ 26 ವರ್ಷ ಜಾಃ ಕಬ್ಬಲಿಗ ಸಾಃ ದೊರನಳ್ಳಿ ಈತನಿಗೆ ಕೊಡುತ್ತೇನೆ 100 ರೂಪಾಯಿಗೆ 15 ರೂಪಾಯಿ ಕಮೀಷನ್ ನೀಡುತ್ತಾನೆ ಅಂತ ಹೇಳಿರುತ್ತಾನೆ. ಸದರಿ ಆರೋಪಿತರ ವಿರುದ್ದ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ ಆರೋಪಿತನ ವಿರುದ್ದ ಠಾಣೆ ಗುನ್ನೆ ನಂ 277/2020 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ: 132/2020 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 07/11/2020 ರಂದು 12.15 ಪಿ.ಎಮ್.ಕ್ಕೆ ಶಿರವಾಳ ಗ್ರಾಮದ ಬೀರಪ್ಪ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 1.10 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 2 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2450=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 133/2020 ಕಲಂ 323, 324, 504, 506 ಸಂಗಡ 34 ಐಪಿಸಿ : ಫಿಯರ್ಾದಿ ಮತ್ತು ಆರೋಪಿತರು ಅಣ್ಣತಮ್ಮಂದಿರಿದ್ದು ಫಿಯರ್ಾದಿಯು ತನ್ನ ದೊಡ್ಡಪ್ಪನ ಹೊಲವನ್ನು ಖರೀದಿ ಮಾಡಿದ್ದು ಆರೋಪಿತನು ಹೊಲ ರಜಿಸ್ಟ್ರೇಶನ್ ಆಗದಂತೆ ತಕರಾರು ಅಜರ್ಿ ಹಾಕಿದ್ದರಿಂದ ಫಿಯರ್ಾದಿಯು ದಿನಾಂಕ:06/11/2020 ರಂದು 8.30 ಎ.ಎಮ್. ಸುಮಾರಿಗೆ ಆರೋಪಿತನಿಗೆ ಕೇಳಲು ಹೋದಾಗ ಆರೋಪಿತರು ಫಿಯರ್ಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ರಾಡಿನಿಂದ ಹೊಡೆದು ತಲೆಗೆ ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 134/2020 ಕಲಂ 341, 323, 504, 506 ಸಂಗಡ 34 ಐಪಿಸಿ : ಫಿಯರ್ಾದಿಯ ಚಿಕ್ಕಪ್ಪನು ಒಂದು ತಿಂಗಳ ಹಿಂದೆ ಪಿತ್ರಾಜರ್ಿತ ಹೊಲದಲ್ಲಿ 2 ಎಕರೆ 10 ಗುಂಟೆ ಹೊಲವನ್ನು ಆರೋಪಿ ಅಮಿನುದ್ದೀನ್ ಇವನ ಹೆಸರಿಗೆ ರಜಿಸ್ಟ್ರೇಶನ್ ಮಾಡಿಸುತ್ತಿರುವ ವಿಷಯ ಗೊತ್ತಾಗಿ ಸದರಿ ಹೊಲದಲ್ಲಿ ನನಗೂ ಪಾಲು ಬರಬೇಕು ಅಂತಾ ಕೋರ್ಟಗೆ ಹೋಗಿ ತಕರಾರು ಅಜರ್ಿ ಸಲ್ಲಿಸಿದ್ದರಿಂದ ದಿನಾಂಕ:06/11/2020 ರಂದು 8 ಎ.ಎಮ್. ಸುಮಾರಿಗೆ ಆರೋಪಿತರು ಫಿಯರ್ಾದಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.