ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/10/2020
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 151/2020 ಕಲಂ 279, 337, 338 ಐಪಿಸಿ : ಇಂದು ದಿನಾಂಕ 26.10.2020 ರಂದು ಸಮಯ ಮಧ್ಯಾಹ್ನ 12:10 ಗಂಟೆಗೆ ಫಿರ್ಯಾದಿ ಮತ್ತು ಆತನ ಅಕ್ಕ ವಿಜಯಲಕ್ಷ್ಮಿ ಹಾಗೂ ಮಗಳು ಭಾರತಿ ಮೂರು ಜನರು ಕೂಡಿಕೊಂಡು ತಮ್ಮ ಸ್ಕೂಟಿ ನಂಬರ ಕೆಎ-33-ಡಬ್ಲೂ-3316 ನೇದ್ದರ ಮೇಲೆ ವಿಜಯ ದಶಮಿಯ ಪ್ರಯುಕ್ತ ಬಂಗಾರವನ್ನು ತರುವ ಸಲುವಾಗಿ ನಾರಾಣಪೇಠ ಕಡೆಗೆ ಹೋಗುತ್ತಿದ್ದಾಗ ಎಸ್.ಹೆಚ್.-16 ರ ಮೇಲೆ ಅರಕೇರಾ(ಕೆ) ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹತ್ತಿರ ರೋಡಿನ ಮೇಲೆ ರಾಮಸಮುದ್ರ ಕಡೆಯಿಂದ ಬಂದ ಕಾರ್ ನಂಬರ ಕೆಎ-32-ಎಮ್.-9168 ನೇದ್ದರ ಚಾಲಕನಾದ ಆರೋಪಿತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಓವರ್ ಟೇಕ್ ಮಾಡುವ ಅವಸರದಲ್ಲಿ ತನ್ನ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೇ ಎಡಗಡೆಯಿಂದ ಡಿಕ್ಕಿಪಿಡಿಸಿ ಮುಂದಕ್ಕೆ ಎಳೆದುಕೊಂಡು ಹೋಗಿದ್ದರ ಪರಿಣಾಮವಾಗಿ ಸ್ಕೂಟಿಯ ಮೇಲಿದ್ದ ಗಾಯಾಳುದಾರರಿ ಭಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ ನಂತರ ಆರೊಪಿತನು ಗಾಯಾಳುದಾರರಿಗೆ ಚಿಕಿತ್ಸೆ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ ಬಗ್ಗೆ ಫಿರ್ಯಾದಿಯು ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 151/2020 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 124/2020 ಕಲಂ 143,147,323,354(ಎ),354(ಬಿ),504,506 ಸಂ 149 ಐಪಿಸಿ : ದಿನಾಂಕ: 26/10/2020 ರಂದು 5 ಪಿ.ಎಮ್. ಸುಮಾರಿಗೆ ಫಿಯರ್ಾದಿಯ ತಂಗಿ ದಾವಲಬಿ ಇವಳು ತಮ್ಮ ಹೊಲದಲ್ಲಿ ಕಸ ಆರಿಸುತ್ತಿರುವಾಗ ಆರೋಪಿತನು ಅವಳ ಹಿಂದಿನಿಂದ ಹೋಗಿ ಕುತ್ತಿಗೆ ಹಿಡಿದು ಮಲಗೋಣ ಬಾ ಅಂತಾ ಕರೆದಾಗ ಅವಳು ನಿರಾಕರಿಸಿದ್ದಕ್ಕೆ ಕೆಳಗೆ ಕೆಡವಿ ಅವಳ ಮೇಲೆ ಕುಳಿತು, ಸೀರೆ ಎತ್ತಿ ಬಿಚ್ಚಲು ಪ್ರಯತ್ನಿಸಿ ಮಾನಭಂಗ ಮಾಡಲು ಪ್ರಯತ್ನಿಸಿದಾಗ ಅವಳು ಅವನಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಫಿಯರ್ಾದಿಗೆ ವಿಷಯ ತಿಳಿಸಿರುತ್ತಾಳೆ. ಫಿಯರ್ಾದಿಯು ಆರೋಪಿತನ ಮನೆಗೆ ಹೋಗಿ ವಿಚಾರಿಸಿದ್ದಕ್ಕೆ ಆರೋಪಿತನು ಇತರೆ ಆರೋಪಿತರಿಗೆ ಶಿರವಾಳದಿಂದ ಕರೆಸಿ ಎಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.