ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/10/2020
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 150/2020 ಕಲಂ. 457, 380 ಐ.ಪಿ.ಸಿ : ಇಂದು ದಿನಾಂಕ 24.10.2020 ರಂದು ರಾತ್ರಿ 9-00 ಗಂಟೆಗೆ ಅಜರ್ಿದಾರ ಠಾಣೆಗೆ ಬಂದು ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ. 23.10.2020 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಫಿಯರ್ಾದಿ ಮಲಗಿಕೊಂಡಿದ್ದು, ರಾತ್ರಿ 2 ಗಂಟೆ ಸುಮಾರಿಗೆ ಯಾರೋ ಕಳ್ಳರು ಊರಲ್ಲಿ ಬಂದಿದ್ದಾರೆ ಅಂತ ಊರ ಜನ ಕೂಗಾಡುತ್ತಿದ್ದಾಗ ಸಪ್ಪಳ ಕೇಳಿ ಎದ್ದು ಕೇಳಲಾಗಿ ಯಾರೋ ಕಳ್ಳರು ಊರಲ್ಲಿ ಬಂದಿದ್ದಾರೆ ಅಂತ ತಿಳಿಸಿದಾಗ ಮನೆಯನ್ನು ಚೆಕ ಮಾಡಿ ನೋಡಿಕೊಂಡಾಗ ಫಿಯರ್ಾದಿಯ ದೇವರ ಮನೆಯ ಕೋಣೆ ಬಾಗಿಲು ಚಿಲಕ ತೆಗೆದಿದ್ದು ಕಂಡು ಬಂದಿದ್ದು ನಮ್ಮ ಮನೆಯಲ್ಲಿಟ್ಟಿದ್ದ ಒಂದು ಕಬ್ಬಿಣದ ತಗಡಿನ ಪೆಟ್ಟಿಗೆ ನೋಡಲಾಗಿ ಕಾಣಿಸದಿದ್ದಾಗ ಮನೆಯ ಸುತ್ತಲಿನವರಿಗೆ ಮನೆ ಕಳುವಾಗಿದೆ ಮನೆಯಲ್ಲಿಯ ಬಂಗಾರ, ಬೆಳ್ಳಿ ಆಭರಣ ಮತ್ತು ಹಣ ಇಡುವ ಒಂದು ಕಬ್ಬಿಣದ ತಗಡಿನ ಪೆಟ್ಟಿಗೆಯನ್ನು ಯಾರೋ ಹೊತ್ತುಕೊಂಡು ಹೋಗಿದ್ದಾರೆ ಅಂತ ತಿಳಿಸಿ ಹುಡುಕಾಡಿದ್ದು, ದೊಡ್ಡ ಭೀಮರಾಯ ತಂದೆ ನರಸಣ್ಣ ಕುಂಚೆಟ್ಟಿ ಇವರ ಜಮೀನದಲ್ಲಿ ಪೆಟ್ಟಿಗೆ ಒಡೆದು ಬಿಸಾಕಿದ್ದು ಕಂಡುಬಂದಿರುತ್ತದೆ. ಫಿಯರ್ಾದಿ ಸದರಿ ಪೆಟ್ಟಿಗೆಯನ್ನು ಊರಿನ ಜನರಿಗೆ ತೋರಿಸಿ ಮನೆಲ್ಲಿ ಕಳುವಾದ ಪೆಟ್ಟಿಗೆ ಇದೆ ಇರುತ್ತದೆ ಇದರಲ್ಲಿ ನಾವು 1) 6 ಮಾಸಿ ಬಂಗಾರದ ಬೋರಮಳ ಸರ ಅಕಿ. 15,000/- ರೂ. 2) 6 ಮಾಸಿ ಯಡ್ಡಳ್ಳಿ ಗುಂಡ ಅ.ಕಿ. 15,000/- ರೂ, 3) 6 ಮಾಸಿಯ ಒಂದು ಜೊತೆ ಜುಮುಕಿ ಬೆಂಡೊಲಿ ಅ.ಕಿ. 15,000/-ರೂ. 4) 3 ಬೆಳ್ಳಿಯ ಉಡುದಾರ 15 ತೊಲೆ ಅಕಿ. 6,000/- ರೂ. 5) 2 ಜೊತೆ ಬೆಳ್ಳಿ ಕಾಲ ಚೈನ 10ತೊಲೆ ಅ.ಕಿ. 4,000/- ರೂ. 6) ನಗದು ಹಣ 20,000/- ರೂ. ಇದ್ದ ಬಗ್ಗೆ ಮತ್ತು 7)ಒಂದು ಇನಫಿನಿಕ್ಸ್ ಕಂಪನಿ ಮೊಬೈಲ್ ಮತ್ತು ಅದರಲ್ಲಿನ ಏರಟೆಲ ಸಿಮ ನಂ.7259738708, 8197704467 ಅ.ಕಿ. 5,000/- ರೂ. ಒಟ್ಟು ಅಂದಾಜು 80,000/-ರೂ. ಮೌಲ್ಯದ ಆಭರಣ, ಹಣ ಮತ್ತು ಮೊಬೈಲ್ ಕಳ್ಳತನವಾದ ಬಗ್ಗೆ ತಿಳಿಸಿದ್ದು, ದಿನಾಂಕ. 23.10.2020 ರ ರಾತ್ರಿ 10-00 ಗಂಟೆಯಿಂದ ದಿನಾಂಕ. 24.10.2020 ರ ರಾತ್ರಿ 2-00 ಗಂಟೆ ವರೆಗಿನ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ದೇವರ ಕೊಣೆ ಬಾಗಿಲು ಚಿಲಕ ತೆಗೆದು ಅದರಲ್ಲಿದ್ದ ಬೆಳ್ಳಿ, ಬಂಗಾರದ ಆಭರಣ ಮತ್ತು ಹಣ ಇಡುವ ಕಬ್ಬಿಣದ ತಗಡಿನ ಪೆಟ್ಟಿಗೆಯನ್ನು ಮತ್ತು ಚಾಜರ್ಿಂಗ ಇಟ್ಟಿದ್ದ ಒಂದು ಇನಫಿನಿಕ್ಸ್ ಕಂಪನಿ ಮೊಬೈಲನ್ನು ಅಂದಾಜು ಮೌಲ್ಯ 80,000/- ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಂಡು. ಬೆಳ್ಳಿ, ಬಂಗಾರ ಆಭರಣ ಮತ್ತು ನಗದು ಹಣ ಮತ್ತು ಮೊಬೈಲನ್ನು ಪತ್ತೆ ಹಚ್ಚಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ 19/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ: 24/10/2020 ರಂದು 8.30 ಎಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಶಂಕರಗೌಡ ತಂದೆ ಮಲಕಪ್ಪಗೌಡ ಬಿರಾದಾರ ವಯಾ|| 73 ಜಾ|| ರೆಡ್ಡಿ ಉ|| ನಿವೃತ್ತ ಶಿಕ್ಷಕರು ಸಾ|| ಗುಂಡಕನಾಳ ತಾ|| ತಾಳಿಕೋಟಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ನನಗೆ 2 ಜನ ಗಂಡುಮಕ್ಕಳಿದ್ದು, ಹಿರಿಯ ಮಗನಾದ ಶರಣಗೌಡ ತಂದೆ ಶಂಕರಗೌಡ ಬಿರಾದಾರ ಈತನು ಕೆಂಭಾವಿಯಲ್ಲಿ ಮನೆ ಮಾಡಿಕೊಂಡು ಇದ್ದು ಹಾಗೂ ಇನ್ನೊಬ್ಬ ಮಗನಾದ ವಿರುಪಾಕ್ಷಿ ಈತನು ಮಹಾರಾಷ್ಟ್ರದ ಅಕ್ಕಲಕೋಟದಲ್ಲಿ ವಾಸವಾಗಿರುತ್ತಾನೆ. ಶರಣಗೌಡ ಈತನಿಗೆ ಅಖಿಲೇಶ ಹಾಗೂ ಅಂಕಿತಾ ಎಂಬ ಎರಡು ಜನ ಮಕ್ಕಳಿರುತ್ತಾರೆ. ನಮ್ಮ ಗುಂಡಕನಾಳ ಸೀಮಾಂತರದಲ್ಲಿ ನನ್ನ ಹೆಸರಿನಲ್ಲಿ ಸವರ್ೇ ನಂ 75/1 ನೇದ್ದರಲ್ಲಿ 3 ಎಕರೆ ಹೊಲವಿದ್ದು, ಸದರಿ ಹೊಲದಲ್ಲಿ ತೊಗರಿ ಬೆಳೆ ಮಾಡುತ್ತಿದ್ದೆವು. ನಾನು ಹೃದಯ ಖಾಯಿಲೆಯಿಂದ ಬಳಲುತ್ತಿದ್ದರಿಂದ ನನ್ನ ಹೆಸರಿನಲ್ಲಿದ್ದ ಹೊಲವನ್ನು ನನ್ನ ಹಿರಿಯ ಮಗನಾದ ಶರಣಗೌಡ ಈತನು ನೋಡಿಕೊಂಡು ಹೋಗುತ್ತಿದ್ದನು. ಹೋ`ದ ವರ್ಷ ಸದರಿ ಹೊಲದಲ್ಲಿ ತೊಗರಿ ಬೆಳೆ ಮಾಡಿದ್ದು, ಸದರಿ ಬೆಳೆ ಸಲುವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಗುಂಡಕನಾಳ ದಲ್ಲಿ 45,000/- ರೂ. ಸಾಲ ಹಾಗೂ ಕೈಗಡವಾಗಿ 3ಲಕ್ಷ ಸಾಲ ಮಾಡಿಕೊಂಡಿದ್ದು ಇರುತ್ತದೆ. ಹೋದ ವರ್ಷ ಸರಿಯಾದ ಮಳೆ ಬಾರದೆ ಬೆಳೆ ಹಾಳಾಗಿ ಹೋಗಿ ಬ್ಯಾಂಕಿನ ಸಾಲ ಹಾಗೂ ಕೈಗಡ ಸಾಲ ಹಾಗೇ ಉಳಿದು ಸದರಿ ಸಾಲ ಹೇಗೆ ತೀರಿಸುವದು ಅಂತ ಮಗ ಚಿಂತೆ ಮಾಡುತ್ತಾ ಕುಳಿತುಕೊಳ್ಳುತ್ತಿದ್ದನು ನಾನು ಈ ವರ್ಷ ಸರಿಯಾದ ಬೆಳೆ ಬಂದರೆ ಸಾಲ ತೀರಿಸೋಣ ಅಂತ ತಿಳಿ ಹೇಳಿದ್ದೆನು. ಹೀಗಿದ್ದು ನಿನ್ನೆ ದಿನಾಂಕ: 23/10/2020 ರಂದು 7:00 ಪಿಎಮ್ ಸುಮಾರಿಗೆ ಸೊಸೆಯಾದ ನಿರ್ಮಲಾ ಇವರು ನನಗೆ ಫೋನ್ ಮಾಡಿ ಮಗನಾದ ಶರಣಗೌಡ ಈತನು ಹೊಲದ ಉಳುಮೆ ಸಲುವಾಗಿ ಮಾಡಿಕೊಂಡ ಸಾಲದ ಭಾದೆಯಿಂದ ಮಾನಸಿಕವಾಗಿ ನೊಂದು ವಿಷ ಸೇವನೆ ಮಾಡಿದ್ದು, ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ತಂದು ಸೇರಿಕೆ ಮಾಡಿದಾಗ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದಾಗ ನಾನು ನನ್ನ ಮಗ ವಿರುಪಾಕ್ಷಿ, ಹೆಂಡತಿ ಲಕ್ಷ್ಮೀಬಾಯಿ ನಾವು 3 ಜನರು ಬಂದು ನೋಡಿ ವಿಚಾರಿಸಲು ನನ್ನ ಮಗನು ಕೃಷಿ ಚಟುವಟಿಕೆ ಸಲುವಾಗಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕ ಗುಂಡಕನಾಳದಲ್ಲಿ 45,000/- ರೂ ಸಾಲ ಹಾಗೂ ಕೈಗಡ 3ಲಕ್ಷ ಸಾಲ ಮಾಡಿಕೊಂಡು ಸದರಿ ಸಾಲದ ಭಾದೆಯಿಂದ ತನ್ನ ಮನೆಯಲ್ಲಿ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಮೃತಪಟ್ಟಿದ್ದು, ಸದರಿಯವನ ಸಾವಿನಲ್ಲಿ ನಮಗೆ ಯಾವುದೇ ಸಂಶಯ ಇರುವುದಿಲ್ಲ ಕಾರಣ ತಾವು ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ 19/2020 ಕಲಂ: 174 ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡೆನು.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 151/2020 ಕಲಂ: 380 ಐ.ಪಿ.ಸಿ: ಇಂದು ದಿನಾಂಕ 24-10-2020 ರಂದು 9-30 ಎ.ಎಮ್ ಕ್ಕೆ ಡಾ|| ರಾಹುಲ್ ಕುಲಕಣರ್ಿ ಪ್ರಾಂಶುಪಾಲರು ಶಾರಧಾ ಆಯುವರ್ೇಧಿಕ್ ಮೆಡಿಕಲ್ ಕಾಲೇಜ್ ಮುಂಡ್ರಗಿ ರೋಡ ಯಾದಗಿರಿ ರವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ರೂಪದಲ್ಲಯ ಅಜೀ ಫಿರ್ಯಾಧಿಯನ್ನು ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ಗೌಸ ಪಾಷಾರವರು ಸಾ; ಧೊರನಹಳ್ಳಿ ಇವರು ಈ ಹಿಂದೆ 09-10-2020 ರವರೆಗೆ ನಮ್ಮ ಕಾಲೇಜಿನಲ್ಲಿ ವಾಚಮೇನ್ ಆಗಿ ಕೆಲಸ ನಿರ್ವಹಿಸಿರುತ್ತಾರೆ. ಅವರು ಕುಡಿದ ಅಮಲಿನಲ್ಲಿ ಕಾಲೇಜು ಆವರಣದಲ್ಲಿ ಬರುತ್ತಿದ್ದ ಕಾರಣ ಅವರನ್ನು ಕಾಲೇಜಿನ ವಾಚಮೇನ ಕೆಲಸದಿಂದ ತೆಗೆದು ಹಾಕಿದ್ದು ಆದರೂ ಅವರು ದಿನಾಂಕ ಸುಮಾರು 6-30 ಪಿ.ಎಮ್ ದಿಂದ 7 ಪಿ.ಎಮ್ ದ ಸಮಯದಲ್ಲಿ ಮತ್ತೆ ಕಾಲೇಜಿಗೆ ಬಂದು ಕಾಲೇಜಿನ ಗೇಟ್ ಬಳಿ ಇರುವ ಗಿಡಗಳ ಕೆಳಗೆ ಮಲಗಿದಾಗ ಅವರನ್ನು ಎಚ್ಚರಿಸಲು ಪ್ರಯತ್ನಿಸಿದಾಗ ಪ್ರತಿಕ್ರಿಯಿಸದ ಕಾರಣ ಹಾಗೇಯೇ ಬಿಟ್ಟು ಹೋಗಿದ್ದು ಇರುತ್ತದೆ. ದಿನಾಂಕ 18-10-2020 ರಂದು ಬೆಳಗ್ಗೆ 2:00 ಗಂಟೆ ಸುಮಾರಿಗೆ ಕಾಲೇಜಿನ ವಾಚಮೇನ್ ರೌಂಡ್ಸ ಮಾಡಿದಾಗ ಪ್ರಾಂಶುಪಾಲರ ಕೊಠಡಿ ಸ್ವ ವೃತ್ತ ವಿಭಾಗದ ಕೊಠಡಿಗಳು ಬಾಗಿಲು ತೆರೆದ ಸ್ಥಿತಿಯಲ್ಲಿ ಹಾಗೂ ತಾಮ್ರದ ಗಣೇಶನ ವಿಗ್ರಹವು ಕೂಡಾ ಇರಲಿಲ್ಲಾ. ಈ ಕಳ್ಳತನ ಗೌಸ ಪಾಷಾರವರು ಮಾಡಿರಬಹುದೆಂದು ಸಂಶಯವಿರುತ್ತದೆ ಅಂತಾ ಅಜರ್ಿ ಫಿರ್ಯಾಧಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 151/2020 ಕಲಂ 380 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ: 152/2020 ಕಲಂ: 279, 337, 338 ಐ.ಪಿ.ಸಿ: ದಿನಾಂಕ 24-10-2020 ರಂದು 1-30 ಎ.ಎಮ್ ಫಿರ್ಯಾಧಿದಾರರು ಬುಲೇರೋ ಗೂಡ್ಸ ಪಿಕಪ್ ವಾಹನದ ನಂಬರ ಎಮ್.ಎಚ್.-40/ಬಿಜಿ-1341 ನೆದ್ದರ ತಮ್ಮ ಗೆಳೆಯನಾದ ಚನ್ನಪ್ಪಾ ತಂದೆ ಬಾಸು ರಾಠೊಡ ಸಾ: ಜೀನಕೇರಾ ಇವರನ್ನು ಮೋಟಾರ ಸ್ಯಕಲ್ ಮೇಲೆ ಹಿಂದುಗಡೆ ಕೂಡಿಸಿಕೊಂಡು ರಾಮಸಮುದ್ರ ಗ್ರಾಮದಿಂದ ಜೀನಕೇರಾ ತಾಂಡಾಕ್ಕೆ ಹೋರಟಾಗ ರಾಮಸಮುದ್ರ-ರಾಯಚೂರು ರೋಡಿನ ಮೇಲೆ ಮೈಲಾಪೂರ ಗ್ರಾಮದ ಗ್ರಾಮದ ಎರಡನೇ ಗೇಟ್ ಹತ್ತಿರ ಹಳಗೇರಾ ಕ್ರಾಸ ಸಮೀಪ ಹೋಗುತ್ತಿದ್ದಂತೆ ಎದುರುಗಡೆಯಿಂದ ಒಂದು ಬುಲೇರೋ ಗೂಡ್ಸ ಪಿಕಪ್ ವಾಹನದ ನಂಬರ ಎಮ್.ಎಚ್-40/ಬಿಜಿ-1341 ನೆದ್ದರ ಚಾಲಕನಾದ ಬಾಬಾ ತಂದೆ ಖತಾಲಸಾಬ ಸಾ; ಕಿಲ್ಲನಕೇರಾ ಇತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಲಾರಿಗೆ ಓವರ ಟೇಕ ಮಾಡುವ ಭರದಲ್ಲಿ ತನ್ನ ಚಾಲನೇಯ ಮೇಲಿನ ನಿಯಂತ್ರಣ ಕಳೆದುಕೊಂಡು ಫಿರ್ಯಾಧಿಯ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿದ ಪ್ರಯುಕ್ತ ಮೋಟಾರ ಸೈಕಲ್ ಮೇಲೆ ಕುಳಿತ ಫಿರ್ಯಾಧಿ ಮತ್ತು ಇನ್ನೊಬ್ಬ ಇಬ್ಬರೂ ಸಾಧಾ ಮತ್ತು ಬಾರಿ ಗಾಯಹೊಂದಿದ್ದು ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ: 134/2020 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 24-10-2020 ರಂದು ರಾತ್ರಿ 07-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನಸಲವಾಯಿ ಗ್ರಾಮದ ಆಂಜನೇಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 2500=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ ಒಂದು ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.134/2020 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 123/2020 ಕಲಂ 324, 504, 506 ಸಂಗಡ 34 ಐಪಿಸಿ : ದಿನಾಂಕ 23/10/2020 ರಂದು ರಾತ್ರಿ 8 ಗಂಟೆ ಸುಮಾರಿಗೆ ಫಿಯರ್ಾದಿ ಮತ್ತು ಅವನ ಅಣ್ಣ ಅಣ್ಣಂದಿರು ತಮ್ಮ ಸಂಸಾರಿಕ ವಿಷಯದಲ್ಲಿ ಬಾಯಿ ಮಾತಿನ ತಕರಾರು ಮಾಡುತ್ತಿದ್ದಾಗ ಪಕ್ಕದ ಮನೆಯ ಆರೋಪಿತರು ಬಂದು ಯಾಕ್ರಲೇ ಮಕ್ಕಳ್ಯಾ ನೀವು ನಮಗ ಬೈಯಕತ್ತೀರಿ ಅಂತ ಅವಾಚ್ಯವಾಗಿ ಬೈದು ತೆಕ್ಕೆ ಕುಸ್ತಿಗೆ ಬಿದ್ದು ಒತ್ತಿ ಹಿಡಿದುಕೊಂಡು ಕಲ್ಲು ಬಡಿಗೆಯಿಂದ ಹೊಡೆದು ತಲೆಗೆ ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 266/2020 ಕಲಂ 78 (3) ಕೆ.ಪಿ ಕೆ.ಪಿ ಆಕ್ಟ : ಇಂದು ದಿನಾಂಕ 24/10/2020 ರಂದು ಸಾಯಂಕಾಲ 16-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ್ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು, ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 24/10/2020 ರಂದು ಮಧ್ಯಾಹ್ನ 12-30 ಗಂಟೆಗೆ ಠಾಣೆಯಲ್ಲಿದ್ದಾಗ, ಶಹಾಪೂರದ ಪಿಲ್ಟರ್ ಬೆಡ್ ಏರಿಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 78/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿಮಾಡಿಕೊಂಡು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಧ್ಯಾಹ್ನ 13-30 ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮಧ್ಯಾಹ್ನ 13-55 ಗಂಟೆಗೆ ದಾಳಿ ಮಾಡಿ ಆರೋಪಿ ನಿಂಗಪ್ಪ ತಂದೆ ಚಂದಪ್ಪ ಹೈಯ್ಯಾಳಕರ ವಯ 35 ವರ್ಷ ಜಾತಿ ಕಬ್ಬಲಗ ಉಃ ಮಟಕಾ ನಂಬರ ಬರೆದುಕೊಳ್ಳುವದು ಸಾಃ ಪಿಲ್ಟರ ಬೆಡ್ ಶಹಾಪೂರ. ಈತನನ್ನು ವಶಕ್ಕೆ ಪಡೆದುಕೊಂಡು ಈತನಿಂದ ನಗದು ಹಣ 1175 =00 ರೂಪಾಯಿ, ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಮಧ್ಯಾಹ್ನ 14-00 ಗಂಟೆಯಿಂದ 15-00 ಗಂಟೆಯ ಅವಧಿಯಲ್ಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ ಆರೋಪಿತನ ವಿರುದ್ದ ಠಾಣೆ ಗುನ್ನೆ ನಂ 266/2020 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 267/2020.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 24/10/2020 ರಂದು 21-20 ಗಂಟೆಗೆ ಸ|| ತ|| ಪಿಯರ್ಾದಿ ಚಂದ್ರಕಾಂತ ಪಿ.ಎಸ್.ಐ. (ಕಾ.ಸೂ) ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 24/10/2020 ರಂದು 5-50 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಹಬ್ಬಳ್ಳಿ ಗ್ರಾಮದ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ಠಾಣೆಯ ಎನ್ ಸಿ. 79/2020 ನ್ನೇದ್ದನ್ನು ಧಾಖಲಿಸಿಕೊಂಡು ಸದರಿ ವ್ಯೆಕ್ತಿಯ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ವ್ಯವಹಾರ ಮಾಡಿ 18-15 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ.164. ಸುರೇಶ ಪಿ.ಸಿ.200. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಸುರೇಶ ಪಿ.ಸಿ 200. ರವರಿಗೆ 18-20 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 18-25 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.ಮಾನ್ಯ ಡಿವೈ.ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಎಲ್ಲರು ಖಾಸಗಿ ಜೀಪ ನ್ನೇದ್ದರಲ್ಲಿ ಕುಳಿತುಕೊಂಡು ದಾಳಿ ಕುರಿತು ಠಾಣೆಯಿಂದ 18-30 ಗಂಟೆಗೆ ಹೊರಟೇವು. ನೇರವಾಗಿ ಹಬ್ಬಳ್ಳಿ ಗ್ರಾಮದ ಹನುಮಾನ ಗುಡಿಯ ಹತ್ತಿರ ಸ್ಪಲ್ಪ ದೂರದಲ್ಲಿ 19-10 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪಿನಿಂದ ನಾವು ಎಲ್ಲರು ಇಳಿದು ಅಲ್ಲಿಂದ ಹನುಮಾನ ಗುಡಿಯ ಹತ್ತಿರ ನಡೆದುಕೊಂಡು ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 19-15 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ಚೆನ್ನಾರೆಡ್ಡಿ ತಂದೆ ಸಿದ್ರಾಮರೆಡ್ಡಿ ಯಳವಾರ ವ|| 40 ಜಾ|| ರೆಡ್ಡಿ ಉ|| ಮಟಕಾಬರೆದುಕೊಳ್ಳೂವದು ಸಾ|| ಹಬ್ಬಳ್ಳಿ ತಾ|| ಶಹಾಪೂರ ಅಂತ ಹೇಳಿದನು. ಈತನ ಹತ್ತಿರ ನಗದು ಹಣ 1430-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಹಾಗೂ 2 ಮಟಕಾ ಚೀಟಿಗಳು, ಸಿಕ್ಕಿದ್ದು ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 1430-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 19-20 ಗಂಟೆಯಿಂದ 20-20 ಗಂಟೆಯವರೆಗೆ ಹನುಮಾನ ಗುಡಿಯ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 21-00 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ 21-20 ಗಂಟೆಗೆ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 267/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:-. 228/2020 ಕಲಂ: 78 () ಕೆ.ಪಿ. ಕಾಯ್ದೆ: ಇಂದು ದಿನಾಂಕ:24/10/2020 ರಂದು 5 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ ಪಿಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:24/10/2020 ರಂದು 3 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಪೂರ ಪಟ್ಟಣದ ಬಸ್ಸ ನಿಲ್ದಾಣದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮನೋಹರ್ ಹೆಚ್.ಸಿ-105 2) ಶ್ರೀ ಮಂಜುನಾಥ ಹೆಚ್ಸಿ-176 3) ಶ್ರೀ ಪರಮೇಶ್ ಪಿಸಿ-142, ಮತ್ತು 4) ಜೀಪ್ ಚಾಲಕ ಶ್ರೀ ಮಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರಿ ಮರೆಪ್ಪ ತಂದೆ ಹಣಮಂತ ರಾಯಗೇರಿ ವಯಾ:20 ವರ್ಷ ಉ:ಬೇಕರಿ ಕೆಲಸ ಜಾತಿ:ಬೇಡರ ಸಾ:ಸಿದ್ದಾಪೂರ 2) ಶ್ರೀ ಕೃಷ್ಣಾ ತಂದೆ ಮಂಜುನಾಥ ಅಂಬಿಗೇರ ವಯಾ:19 ವರ್ಷ ಉ:ಕೂಲಿ ಜಾತಿ:ಕಬ್ಬಲಿಗ ಸಾ:ಸಿದ್ದಾಪೂರ ತಾ|| ಸುರಪುರ ಇವರನ್ನು 3-15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 3-30 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 03-40 ಪಿ.ಎಮ್ ಕ್ಕೆ ಸುರಪೂರ ಬಸ್ಸ ನಿಲ್ದಾಣದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಬಸ್ಸ ಸ್ಟ್ಯಾಂಡ ಕಂಪೌಂಡ ಮರೆಯಾಗಿ ನಿಂತು ನೋಡಲು ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 03-45 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬೀಮಣ್ಣ ತಂದೆ ದೇವಿಂದ್ರಪ್ಪ ಕೊಳ್ಳೂರ ವಯಾ:45 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ಸಿದ್ದಾಪೂರ ತಾ|| ಸುರಪುರ ಅಂತಾ ತಿಳಿಸಿ ತಾನು ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 3060=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 03-45 ಪಿ.ಎಮ್ ದಿಂದ 04-45 ಪಿ.ಎಮ್ದ ವರೆಗೆ ಸ್ಥಳದಲ್ಲಿಯೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು 05 ಪಿ.ಎಂ.ಕ್ಕೆ ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 229/2020 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ:24/10/2020 ರಂದು 8-30 ಪಿ.ಎಂ ಸುಮಾರಿಗೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚಂದ್ರಶೇಖರ ಪಿ.ಎಸ್.ಐ. (ಕಾ&ಸು-2) ಸಾಹೇಬರು 4 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡುದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:24/10/2020 ರಂದು 5-30 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ರತ್ತಾಳ ಸೀಮಾಂತರದ ಬಾಲಪ್ಪ ಮಾದಿಗ ಇವರ ಹೊಲದ ಹತ್ತಿರ ಸರಕಾರಿ ಗುಡ್ಡದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಈಶ್ವರಪ್ಪ ಹೆಚ್.ಸಿ-114, 3) ಶ್ರೀ ಸುಭಾಶ ಸಿಪಿಸಿ-174, 4) ಶ್ರೀ ವಿರೇಶ ಪಿಸಿ-374 5) ಶ್ರೀ ಮಾನಯ್ಯ ಸಿಪಿಸಿ 372 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು ಇಬ್ಬರು ಪಂಚರಾದ 1) ಶ್ರೀ ಗುರುಪ್ರಸಾದ ತಂದೆ ಗೋವಿಂದಪ್ಪ ಟಣಕೇದಾರ ವಯಾ:27 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ: ದೇವರಗೋನಾಲ ತಾ|| ಸುರಪುರ 2) ಶ್ರೀ ಮಲ್ಲಪ್ಪ ತಂದೆ ಮಾನಪ್ಪ ತೆಳಗಿನಮನಿ ವಯಾ:27 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ದೇವರಗೋನಾಲ ತಾ|| ಸುರಪುರ ಇವರನ್ನು 6 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6:15 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33 .ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು 6-45 ಪಿ.ಎಂ ಕ್ಕೆ ರತ್ತಾಳ ಸೀಮಾಂತರದ ಬಾಲಪ್ಪ ಮಾದಿಗ ಇವರ ಹೊಲದ ಹತ್ತಿರ ಹೋಗಿ ಜೀಪ ನಿಲ್ಲಿಸಿ, ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ರತ್ತಾಳ ಸೀಮಾಂತರದ ಬಾಲಪ್ಪ ಮಾದಿಗ ಇವರ ಹೊಲದ ಹತ್ತಿರ ಇರುವ ಸರಕಾರಿ ಗುಡ್ಡದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 6:50 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 4ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಹೊನ್ನಯ್ಯ ತಂದೆ ಮಲ್ಲಯ್ಯ ಕೊಂಗಂಡಿಕರ್ ವಯಾ:33 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ದೇವರಗೋನಾಲ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2500/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಹಣಮಂತ್ರಾಯ ತಂದೆ ಮಾನಪ್ಪ ಶಹಾಪೂರಕರ್ ವಯಾ: 30 ವರ್ಷ ಜಾ:ಉಪ್ಪಾರ ಉ:ಒಕ್ಕಲುತನ ಸಾ:ದೇವರಗೋನಾಲ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 3500/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಬಸವರಾಜ ತಂದೆ ಮಲ್ಲಿಕಾಜರ್ುನ್ ಶೇಳ್ಳಗಿ ವಯಾ:31 ವರ್ಷ ಜಾ:ಲಿಂಗಾಯತ ಉ:ಡ್ರೈವರ್ ಸಾ:ಸತ್ಯಂಪೇಠ ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2050/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಅಯ್ಯಪ್ಪ ತಂದೆ ದೊಡ್ಡಪ್ಪ ಜಾಲಹಳ್ಳಿ ವಯಾ:31 ವರ್ಷ ಜಾ: ಲಿಂಗಾಯತ ಉ:ಗೌಂಡಿ ಕೆಲಸ ಸಾ:ಸತ್ಯಂಪೇಠ ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 5050/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 5550/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 18650/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 6-50 ಪಿ.ಎಮ್ ದಿಂದ 7:50 ಪಿ.ಎಮ್ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದು ಇರುತ್ತದೆ. 4 ಜನ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 229/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 102/2020 78 (3) ಕೆ.ಪಿ ಯಾಕ್ಟ : ಇಂದು ದಿನಾಂಕ:24/10/2020 ರಂದು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಮಾಡುತ್ತಾ ವಜ್ಜಲ ಗ್ರಾಮಕ್ಕೆ ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಶ್ರೀಮತಿ. ಮರೆಮ್ಮ ತಂದೆ ಬಸವರಾಜ ಹರಿಜನ ಸಾ:ವಜ್ಜಲ ಇವಳ ಹೊಲ ಸವರ್ೆ ನಂ.43ಪೋಟ1/1 ರಲ್ಲಿ 4ಎಕರೆ 14 ಗುಂಟೆ ಜಮೀನನ್ನು 1 ಪಾಟರ್ಿ ಆರೋಪಿತನು ಖರೀದಿಸಿದ್ದು ಸದರಿಯವನಿಗೆ 2ನೇ ಪಾಟರ್ಿ ಆರೋಪಿತರು ತಕರಾರು ಮಾಡುತ್ತಿದ್ದು ಹೋಲವನ್ನು ಉಳಿಮೆ ಮಾಡದಂತೆ ಸದರಿ ವಿಷಯದಲ್ಲಿ ಪರ ವಿರೋದಿ ಗುಂಪುಗಳಾಗಿದ್ದು, ಹಾಗೇ ಬಿಟ್ಟಲ್ಲಿ ಗ್ರಾಮದಲ್ಲಿ ಅಶಾಂತಿ ಉಂಟಾಗಿ ಹೊಡೆದಾಟವಾಗಿ ಕೊಲೆ & ರಕ್ತಪಾತಗಳಾಗುವ ಸಂಭವ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ ಮದ್ಯಾಹ್ನ 12.45 ಗಂಟೆಗೆ ಬಂದು ಈ ಕೆಳಕಂಡವರ ವಿರುದ್ದ ಮುಂಜಾಗೃತ ಕ್ರಮ ಕುರಿತು ಠಾಣೆ ಪಿ.ಎ.ಆರ್ ನಂ:11/2020 ಕಲಂ. 107 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.