ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/10/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 150/2020 ಕಲಂ: 279, 337, 338 ಐ.ಪಿ.ಸಿ : ಇಂದು ದಿನಾಂಕ 20-10-2020 ರಂದು 3-30 ಪಿ.ಎಮ್ ಫಿರ್ಯಾಧಿದಾರರು ತಮ್ಮ ಮೋಟಾರ ಸೈಕಲ್ ನಂ: ಕೆ.ಎ-03/ಟಿ.ಎಕ್ಸ-350 ನೆದ್ದರ ಮೇಲೆ ಗಾಯಾಳು ಶಾಂತಗೌಡ ತಂದೆ ಬಸಣ್ಣಾಗೌಡ ಪೋಲಿಸ್ ಪಾಟೀಲ್ ವಯಾ: 47 ಸಾ; ಯರಗೋಳ ಇವರನ್ನು ಮೋಟಾರ ಸ್ಯಕಲ್ ಮೇಲೆ ಹಿಂದುಗಡೆ ಕೂಡಿಸಿಕೊಂಡು ನಾಲವಾರದಿಂದ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಬರಲು ಯರಗೋಳ ದಿಂದ ಹೊರಟು ಯರಗೋಳ-ನಾಲವಾರ ರೋಡಿನ ಮೇಲೆ ಲಿಂಗಾರೆಡ್ಡಿ ಮಾನೇಗಾರ ಇವರ ಹಳೆಯ ಲೈಟಿನ ಕಂಬದ ಫ್ಯಾಕ್ಟರಿ ಹತ್ತಿರ ಹೋದಾಗ ಎದುರುಗಡೆಯಿಂದ ಅಂದರೆ ನಾಲವಾರ ಕಡೆಯಿಂದ ಆರೋಪಿತನು ತನ್ನ ಟವೇರಾ ಕಾರ ನಂ: ಕೆ.ಎ-19/ಎಎ-8987 ನೆದ್ದು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಫಿರ್ಯಾಧಿಯ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿದ್ದರಿಂ ಈ ಘಟನೆಯಲ್ಲಿ ಫಿರ್ಯಾಧಿ ಮತ್ತು ಶಾಂತಗೌಡ ತಂದೆ ಬಸಣ್ಣಾಗೌಡ ಪೋಲಿಸ್ ಪಾಟೀಲ್ ಇಬ್ಬರೂ ಬಾರಿ ಗಾಯಹೊಂದಿದ್ದು ಇರುತ್ತದೆ.
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 147/2020 ಕಲಂ 279, 337, 338 ಐಪಿಸಿ: ಇಂದು ದಿನಾಂಕ 20.10.2020 ರಂದು ಸಾಯಂಕಾಲ 5-00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕಾಶಿನಾಥ ತಂದೆ ಮಲ್ಲೇಶಪ್ಪ ಕೂಲೂರದೋರ ವ|| 28 ವರ್ಷ, ಜಾ|| ಎಸ್. ಸಿ ಹರಿಜನ ಉ|| ಸರಕಾರಿ ಕಿರಿಯ ಆರೋಗ್ಯ ಸಹಾಯಕ ಸಾ|| ಕೋಟಗಾರ ವಾಡಾ ಯಾದಗಿರಿ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿನಾಂಕ. 20.10.2020 ರಂದು ಫಿಯರ್ಾದಿ ಪುಟಪಾಕ ಗ್ರಾಮದಿಂದ ಮೋಟಾರ ಸೈಕಲ್ ನಂ.ಕೆ.ಎ-33 ಕ್ಯೂ-4640 ನೇದ್ದರ ಮೇಲೆ ಯಾದಗಿರಿಗೆ ಹೊರಟಾಗ ಗುರುಮಠಕಲ- ಯಾದಗಿರಿ ಮೇನ ರೋಡ ಮೇಲೆ ಮಧ್ಯಾಹ್ನ. 3-30 ಗಂಟೆ ಸುಮಾರಿಗೆ ಪಸಪೂಲ್ ಗೇಟ ಹತ್ತಿರ ಮಧ್ಯದ ರೋಡಿನ ಮೇಲೆ ಗುರುಮಠಕಲ ಕಡೆಯಿಂದ ಹಿಂದೆ ಹೊರಟಿದ್ದ ಕೆ.ಎ-05 ಎಮ್.ಎಮ್.- 1809 ಮಾರುತಿ ಸುಜುಕಿ ವಸರ್ಾ ಮಿನಿ ವ್ಯಾನ ಚಾಲಕ ಶರಣಕುಮಾರ ತಂದೆ ತುಳಜಾರಾಮ ಗಾಜರೆ ವಯ|| 34 ವರ್ಷ, ಜಾ|| ಡೋಹರ ಉ|| ಚಾಲಕ ಸಾ|| ಶಿಬರ ಕಟ್ಟಾ ವಾರ್ಡ ನಂ-4 ಹಳೇ ಶಹಾಬಾದ ರೋಡ ತಾ|| ಶಹಾಬಾದ ಜಿ|| ಕಲಬುರಗಿ ಹಾ||ವ|| ಸಜರ್ಾಪೂರ ಮೇನ ರೋಡ ಹಾಲನಾಯಕನಳ್ಳಿ ಬೆಂಗಳೂರ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿ ಬೈಕಗೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತಪಡಿಸಿದ್ದು, ಸದರಿ ಅಪಘಾತದಲ್ಲಿ ಫಿಯರ್ಾದಿಗೆ ಬಲಗಾಲ ಮೊಣಕಾಲು ಕೆಳಗೆ ಮತ್ತು ಪಾದದ ಹಿಮ್ಮಡಿ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಎಡಗಾಲಿಗೆ ಮತ್ತು ಮುಖಕ್ಕೆ ತೆರಚಿದ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ. ನಂತರ ಸದರಿ ಮಿನಿ ವ್ಯಾನದಲ್ಲಿದ್ದ ರಾಣೋಜಿ ತಂದೆ ತುಳಜಾರಾಮ ಗಜರೆ ಇವರು ಫಿಯರ್ಾದಿಗೆ ಮೇಲಕ್ಕೆ ಎಬ್ಬಿಸಿ ತಮ್ಮ ವಾಹನದಲ್ಲಿಯೇ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಕರೆದುಕೊಂಡು ಬಂದಿದ್ದು. ಅಪಘಾತವಾದ ಬಗ್ಗೆ ಫೋನ ಮೂಲಕ ವಿಷಯ ಗೊತ್ತಾಗಿ ಫಿಯರ್ಾದಿ ಮಾವ ಮರಲಿಂಗಪ್ಪ ತಂದೆ ಭೀಮರಾರ ಕೂಲುರ ಇವರು ಸದರಿ ಆಸ್ಪತ್ರೆಗೆ ಬಂದು ಫಿಯರ್ಾದಿಗೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಸದರಿ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿಯರ್ಾದಿ ಸಾರಾಂಶ ಇರುತ್ತದೆ.