ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/10/2020

By blogger on ಶನಿವಾರ, ಅಕ್ಟೋಬರ್ 17, 2020



                      ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/10/2020 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 146/2020 ಕಲಂ 279  ಐಪಿಸಿ : ಇಂದು ದಿನಾಂಕ 05-10-2020 ರಂದು ಆರೋಪಿತನು ತನ್ನ ಲಾರಿ ನಂ  ಕೆ.ಎ-16/ಬಿ-7303 ನೆದ್ದರಲ್ಲಿ ಕೋಡ್ಲಾದ ಶ್ರೀ ಸಿಮೇಂಟ್ ಫ್ಯಾಕ್ಟರಿಯಿಂದ ಸೀಮೇಂಟ ಲೋಡ ಮಾಡಿಕೊಂಡು ಹತ್ತಿಕುಣಿ ಮಾರ್ಗವಾಗಿ ಬಳ್ಳಾರಿಗೆ ಹೋಗುವಾಗ ಆರೋಪಿತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಸೌದಾಗರ ತಾಂಡಾ ಕ್ರಾಸಿನಲ್ಲಿ ಲಾರಿ ಪಲ್ಟಿ ಮಾಡಿ ಲಾರಿಯನ್ನು ಜಖಂ ಗೊಳಿಸಿದ್ದು ಇರುತ್ತದೆ ಅಂತಾ ಫಿರ್ಯಾಧಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿದ್ದು ಇರುತ್ತದೆ.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 120/2020 ಕಲಂ: 87 ಕೆ.ಪಿ ಎಕ್ಟ್ : ದಿನಾಂಕ: 07/10/2020 ರಂದು 11-30 ಎಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಜ್ಞಾಪನ ಪತ್ರ ಕೊಟ್ಟಿದ್ದರ ಸಾರಾಂಶವೇನಂದರೆ ಈ ಮೂಲಕ ನಿಮಗೆ ಜ್ಞಾಪನ ಪತ್ರ ನೀಡುವುದೇನಂದರೆ ಇಂದು ದಿನಾಂಕ: 07/10/2020 ರಂದು ನಾನು ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ಮತ್ತು ಎಮ್.ಡಿ ಅಜೀಜ್ ಪಿ.ಎಸ್.ಐ (ಅವಿ) ಇಬ್ಬರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ನಮಗೆ ಮಾಹಿತಿ ಬಂದಿದ್ದೇನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಾಲ ಗ್ರಾಮದ ಚನ್ನಾರೆಡ್ಡಿಗೌಡ ಮಾಲಿಪಾಟಿಲ್ ಇವರ ಖಾಲಿ ಜಾಗದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಸದರಿ ಜೂಜುಕೋರರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡ ಲಗತ್ತಿಸಲಾಗಿದೆ ಎಂದು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 120/2020 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 255/2020. ಕಲಂ 87 ಕೆ.ಪಿ.ಆಕ್ಟ : ಇಂದು ದಿನಾಂಕ: 07-10-2020 ರಂದು 7:45 ಪಿ.ಎಮ್.ಕ್ಕೆ ಮಾನ್ಯ ಡಿ.ಎಸ್.ಪಿ. ಸಾಹೇಬರು ಸುರಪೂರ ಉಪವಿಭಾಗ ರವರು ಠಾಣೆಗೆ ಬಂದು  ಒಂದು ಜ್ಞಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಸಾರಾಂಶವೇನಂದರೆ ಇಂದು ದಿನಾಂಕ:07-10-2020 ರಂದು 7:00 ಪಿ.ಎಂ ಕ್ಕೆ  ಭಾತ್ಮೀದಾರರಿಂದ ತಿಳಿದು ಬಂದಿದ್ದೇನೆಂದರೆ, ಶಹಾಪೂರ ಠಾಣಾ ವ್ಯಾಪ್ತಿಯ ಶಹಾಪುರ ನಗರದ ಹಾಲಭಾವಿ ರೋಡ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು ಖಚಿತಪಡಿಸಿಕೊಂಡು ನಂತರ ಶಹಾಪೂರ ಪೊಲೀಸ್ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ಇದ್ದ ಸಾರಾಶಂದ ಮೇಲಿಂದ ಠಾಣೆ ಗುನ್ನೆ ನಂ.255/2020 ಕಲಂ. 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಮಾನ್ಯ ಡಿ.ಎಸ್.ಪಿ. ಸಾಹೇಬರು ನಂತರ ದಾಳಿ ಮಾಡಿ ಒಟ್ಟು 8 ಜನ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು 25,200/- ರೂ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು  ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.  


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ: 142/2020  ಕಲಂ 379 ಐ.ಪಿ.ಸಿ :   ಇಂದು ದಿನಾಂಕ 07.10.2020 ರಂದು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಸ.ತಫರ್ೇ ಫಿಯರ್ಾದಿಯಾಗಿ ಪಿ.ಎಸ್.ಐ ರವರು ಠಾಣೆಗೆ ಬಂದು  ನೀಡಿದ ಸಾರಾಂಶವೇನೆಂದರೆ,  ಫಿಯರ್ಾದಿಯವರು ವಿಶ್ರಾಂತಿಯಲ್ಲಿದ್ದಾಗ ಶ್ರೀ ಸದಾಶಿವ ಸೋನಾವಣೆ ಪಿ.ಐ. ಡಿ.ಸಿ.ಐ.ಬಿ ಘಟಕ ಯಾದಗಿರಿರವರು ಫೋನ ಮೂಲಕ ನೀಡಿದ ಮಾಹಿತಿಯಂತೆ  ಪಸಪುಲ  ಕಡೆಯಿಂದ ಗುರುಮಠಕಲ ಕಡೆಗೆ ಎರಡೂ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ ಬಗ್ಗೆ  ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರನ್ನು ಠಾಣೆಗೆ ಬರಮಾಡಿಕೊಂಡು ದಾಳಿಯ ಬಗ್ಗೆ ವಿವರಿಸಿ ಸಮಯ ಬೆಳಿಗ್ಗೆ 4-00 ಗಂಟೆಗೆ ಚಿನ್ನಾಕಾರ ಬಸ್ಟ್ಯಾಂಡ ಹತ್ತಿರ ನಿಂತು ನೋಡಲಾಗಿ ಯಾದಗಿರಿ ಕಡೆಯಿಂದ ಗುರುಮಠಕಲ ಕಡೆಗೆ ಎರಡು ಟ್ರ್ಯಾಕ್ಟರ ಬರುತ್ತಿರುವದನ್ನು ಕಂಡು ಜೀಪಿನಿಂದ ಕೆಳಗೆ ಇಳಿದು ಎರಡೂ ಟ್ಯಾಕ್ಟರಗಳನ್ನು ನಿಲ್ಲಿಸಿ ನೋಡಿ, ಸದರಿ ಎರಡೂ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ ಅದರಲ್ಲಿ 1) ಒಂದು ಮೆಸ್ಸೆ ಫರಗೂಸನ ಟ್ಯಾಕ್ಟರ ಇಂಜಿನ. ನಂ. ಕೆ.ಎ-33, ಟಿ.ಎ-9267 ಮತ್ತು ಟ್ರಾಲಿ ನಂ. ಕೆ.ಎ-33, ಟಿ.ಬಿ- 1224 ಇದ್ದು, ಅದರ ಚಾಲಕ ಮತ್ತು ಮಾಲಿಕ ಈಶಪ್ಪ ತಂದೆ ಮಲ್ಲಯ್ಯ ಮೈಲಾರಿ ವಯ|| 30 ವರ್ಷ, ಜಾ|| ಕುರುಬರ ಉ|| ಟ್ಯಾಕ್ಟರ ಚಾಲಕ ಸಾ|| ರಾಮಸಮುದ್ರ ತಾ||ಜಿ|| ಯಾದಗಿರಿಯಿದ್ದು, ಸದರಿ ಟ್ಯಾಕ್ಟರ ಅ.ಕಿ.2,00,000/- ರೂ. ಇದ್ದು ಮರಳು ಮುದ್ದೆಮಾಲು ಅ.ಕಿ.2,000/- ಇರುತ್ತದೆ.  ಸದರಿಯವನು ಮರಳನ್ನು ಪಸಪೂಲ್ ಗ್ರಾಮದ ನರಸಪ್ಪ ತಂದೆ ಸಾಬಣ್ಣ ಕುಂಬಾರ ಸಾ|| ಪಸಪೂಲ ಗ್ರಾಮ ಇವರ ಜಮೀನುದಲ್ಲಿ ಒಂದು ಟ್ಯಾಕ್ಟರ ಟ್ರಾಲಿಗೆ 1,000/- ರೂ. ಹಣವನ್ನು ನೀಡಿ ಅಕ್ರಮವಾಗಿ ತುಂಬಿಕೊಂಡು ಯಾವುದೇ ಸಂಬಂಧಪಟ್ಟ ಇಲಾಖೆಯಿಂದ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸಕರ್ಾರಕ್ಕೆ ಯಾವುದೇ ರಾಜಧನ ತುಂಬದೆ ಮತ್ತು ರಾಯಲಿಟಿ ಪಡೆದುಕೊಳ್ಳದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸ್ವಂತ ಲಾಭಗೋಸ್ಕರ ಗುರುಮಠಕಲ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ತಿಳಿಸಿದ್ದು, 2) ಒಂದು ಮಹೇಂದ್ರಾ ರೆಡ ಕಲರ ಟ್ಯಾಕ್ಟರ ಇಂಜಿನ ನಂ. ಕೆಎ-33, ಟಿಎ-7533 ಟ್ರಾಲಿ ನಂ. ಕೆಎ-33, ಟಿಎ-7534 ಅದರ ಚಾಲಕ ಅಂಜಪ್ಪ ತಂದೆ ನರಸಪ್ಪ ಮುನೆಪ್ಪೋಳ್ ವಯ|| 32 ವರ್ಷ, ಜಾ|| ಮಾದಿಗ ಉ|| ಟ್ಯಾಕ್ಟರ ಚಾಲಕ ಸಾ|| ಕಟ್ಟಲಗೇರಾ ಏರಿಯಾ ಗುರುಮಠಕಲ ಸದರಿ ಟ್ಯಾಕ್ಟರ ಅ.ಕಿ.2,00,000/- ರೂ. ಮರಳು ಮುದ್ದೆಮಾಲು ಅ.ಕಿ.2,000/- ರೂ. ಟ್ಯಾಕ್ಟರ ಮಾಲಿಕನ ಹೆಸರು ಲಕ್ಷ್ಮಪ್ಪ ತಂದೆ ಭೀಮಪ್ಪ ವಯ|| 60 ವರ್ಷ, ಜಾ|| ಕಬ್ಬಲಿಗ ಉ|| ಟ್ಯಾಕ್ಟರ ಮಾಲಿಕ ಸಾ|| ಬೋರಬಂಡಾ ತಾ||ಗುರುಮಠಕಲ ಜಿ||ಯಾದಗಿರಿ ಅಂತ ತಿಳಿಸಿದ್ದು,ಸದರಿಯವನು ಮರಳನ್ನು ತಮ್ಮ ಟ್ಯಾಕ್ಟರ ಮಾಲಿಕರು ಹೇಳಿದಂತೆ ಪಸಪೂಲ್ ಗ್ರಾಮದ ನರಸಪ್ಪ ತಂದೆ ಸಾಬಣ್ಣ ಕುಂಬಾರ ಸಾ|| ಪಸಪೂಲ ಗ್ರಾಮ ಇವರ ಜಮೀನುದಲ್ಲಿ ಒಂದು ಟ್ಯಾಕ್ಟರ ಟ್ರಾಲಿಗೆ 1,000/- ರೂ. ಹಣವನ್ನು ನೀಡಿ ಅಕ್ರಮವಾಗಿ ತುಂಬಿಕೊಂಡು ಯಾವುದೇ ಸಂಬಂಧಪಟ್ಟ ಇಲಾಖೆಯಿಂದ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸಕರ್ಾರಕ್ಕೆ ಯಾವುದೇ ರಾಜಧನ ತುಂಬದೆ ಮತ್ತು ರಾಯಲಿಟಿ ಪಡೆದುಕೊಳ್ಳದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತಮ್ಮ ಮಾಲಿಕನು ಹೇಳಿದಂತೆ ತಮ್ಮ ಮಾಲಿಕನ ಲಾಭಗೋಸ್ಕರ ಗುರುಮಠಕಲ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ತಿಳಿಸಿದ್ದು, ಸದರಿ ಮರಳು ತುಂಬಿದ ಎರಡೂ ಟ್ಯಾಕ್ಟರಗಳನ್ನು ಹಾಜರಿದ್ದ ಪಂಚರ ಸಮಕ್ಷಮದಲ್ಲಿ ಚಿನ್ನಾಕಾರ ಗ್ರಾಮದ ಬಸ್ಟ್ಯಾಂಡ ಎದುರಿನ ಯಾದಗಿರಿ-ಗುರುಮಠಕಲ ರೋಡಿನ ಮೇಲೆ ಬೆಳಿಗ್ಗೆ 4-00 ಗಂಟೆಯಿಂದ 5-00 ಗಂಟೆವರೆಗಿನ ಅವಧಿಯಲ್ಲಿ ನಮ್ಮ ಸರಕಾರಿ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ನಮ್ಮ ಸಮಕ್ಷಮದಲ್ಲಿ ಎರಡೂ ಮರಳು ತುಂಬಿದ ಟ್ಯಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ಇಬ್ಬರೂ ಟ್ಯಾಕ್ಟರ ಚಾಲಕರನ್ನು ಪಿ.ಎಸ್.ಐರವರು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಜಪ್ತಿ ಪಂಚನಾಮೆ ಪ್ರಕಾರ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಸದರಿಯವರ ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 142.2020 ಕಲಂ. 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಕೊಂಡಿದ್ದು ಅದೆ.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!