ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/10/2020

By blogger on ಶುಕ್ರವಾರ, ಅಕ್ಟೋಬರ್ 2, 2020



                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/10/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 90/2020 ಕಲಂ; 420 ಐಪಿಸಿ : ಇಂದು ದಿನಾಂಕ. 02/10/2020 ರಂದು 7-30 ಪಿಎಂಕ್ಕೆ ಶ್ರೀ ರಾಜಶೇಖರ ತಂದೆ ಶರಣಪ್ಪ  ಲದ್ದಿ ವಃ 40 ವರ್ಷ ಉಃ ಹಣ್ಣಿನ ವ್ಯಾಪಾರ ಸಾಃ ಗೂಗಲವಾಡಿ ಗಾಂಧಿ ಚೌಕ ಯಾಧಗಿರಿ ಈತನು ಒಂದು ದೂರು ಅಜರ್ಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ನನ್ನ ತಂದೆಗೆ ಇಬ್ಬರೂ ಹೆಂಡತಿಯರಿದ್ದು, ನಾನು ಮೊದಲನೆಯ ಹೆಂಡತಿಯ ಮಗ, ನನ್ನ ಅಣ್ಣ ಪ್ರಕಾಶ ತಂ. ಶರಣಪ್ಪ ಲದ್ದಿ ಈತನು ನನ್ನ ತಂದೆಯ ಎರಡನೇ ಹೆಂಡತಿಯ ಮಗ, ಈಗ ಸುಮಾರು 20 ವರ್ಷಗಳ ಹಿಂದೆ ನಾನು ನನ್ನ ಅಣ್ಣ ಬೇರೆ, ಬೇರೆ ಮನೆಗಳಲ್ಲಿ ವಾಸವಾಗಿದ್ದು ನನ್ನ ಅಣ್ಣ ತನ್ನ ಉಪ ಜೀವನಕ್ಕಾಗಿ ಬಾಂಬೆಯಲ್ಲಿ ಹೋಗಿ ಹೆಂಡತಿ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾನೆ ನನ್ನ ಅಣ್ಣ ಪ್ರಕಾಶ ಈತನಿಗೆ ಕುಟುಂಬದ ಹಾಗೂ ಇತರೆ ಅಡಚಣೆಗಾಗಿ ನನ್ನ ಹತ್ತಿರ ಬಂದು ಅತೀನಮ್ರತೆಯಿಂದ ನನಗೆ ಹಣದ  ಅವಶ್ಯಕತೆ ಇದೆ ನಾನು ನನ್ನ ಮನೆ ಮಾರಾಟ ಮಾಡಿದ ನಂತರ ನಿನಗೆ ಹಣ ಹಿಂದುರುಗಿಸುತ್ತೇನೆ ಎಂದು ವಿನಂತಿಸಿಕೊಂಡ ಆಗ ನಾನು ಅವನ ತೊಂದರೆಯನ್ನು ಮನವರಿಕೆ ಮಾಡಿಕೊಂಡು ದಿನಾಂಕ 14/06/2017, 09/08/2018  ಎರಡು ಹಂತವಾಗಿ ಐದು ಲಕ್ಷದಂತೆ ಒಟ್ಟು 10 ಲಕ್ಷ ರೂಪಾಯಿ ಕೊಟ್ಟಿರುತ್ತೇನೆ ಅದಲ್ಲದೇ ನನ್ನ ಅಕ್ಕಳಾದ ಪುಷ್ಪ ಗಂಡ ದಿ: ನಾಗರಾಜ ಗುಗ್ಗಳ ಸಾ: ರಾಯಚೂರ ಇವರು ಕೂಡ ನನ್ನ ಅಣ್ಣನಿಗೆ ದಿನಾಂಕ 23/05/2018 ರಂದು 4,50,000 ರೂಪಾಯಿ ಹಣ ನಗದು ರೂಪವಾಗಿ ಕೊಟ್ಟಿರುತ್ತಾರೆ ಸದರಿ ಹಣ ಒಂದು ವರ್ಷದ ಒಳಗಾಗಿ ಹಿಂದುರುಗಿಸುತ್ತೇನೆ ಅಂತಾ ಪ್ರಮಾಣ ಮಾಡಿ ತಿಳಿಸಿರುತ್ತಾನೆ ಸದರಿ ಅವಧಿ ಮುಗಿದು ಎರಡು ವರ್ಷಗಳಾದರೂ ಕೂಡ ನನ್ನ ಅಣ್ಣ ಹಾಗೂ ನನ್ನ ಅಕ್ಕಳಿಗೆ ಹಣ ಮರು ಪಾವತಿ ಮಾಡದೇ ಮೋಸ ಮಾಡಿರುತ್ತಾನೆ ನಂತರ ನನ್ನ ಅಣ್ಣನಿಗೆ ಪೋನ ಮಾಡಿ ಹಣ ಕೋಡುವಂತೆ ಕೇಳಿದಾಗ ಅತನು ನನಗೆ ನಿನ್ನಾಗಾಲಿ, ನಿನ್ನ ಅಕ್ಕಳಾಗಲಿ ನನಗೆ ಯಾವುದೇ ಹಣ ಕೊಟ್ಟಿಲ್ಲ ಅಂತಾ ಹೇಳುತ್ತಿದಾನೆ. ಕಾರಣ ನನ್ನ ಅಣ್ಣ ಪ್ರಕಾಶ ಈತನು ನನ್ನೀಂದ 10,00,000/- ರೂಪಾಯಿ ಮತ್ತು ನನ್ನ ಅಕ್ಕ ಪುಷ್ಪಳಿಂದ 4,50,000/- ರೂಪಾಯಿ ತೆಗೆದುಕೊಂಡು ಹೋಗಿದ್ದು ಮರಳಿ ಕೊಡದೇ ಮೋಸ ಮಾಡಿರುತ್ತಾನೆ. ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 90/2020 ಕಲಂ. 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                              


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 89/2020 ಕಲಂ: 78(6) ಕೆ.ಪಿ.ಆಕ್ಟ್ : ಇಂದು ದಿನಾಂಕ.02/10/2020 ರಂದು ರಾತ್ರಿ 01-30 ಎಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ:01/10/2020 ರಂದು 8:15 ಪಿ.ಎಮ್. ಸುಮಾರಿಗೆ ಯಾದಗಿರಿ ನಗರದ ಆಸರ ಮೊಹಲ್ಲಾ ಏರಿಯಾದಲ್ಲಿ ಯಾರೋ ಒಬ್ಬ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದಾನೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಅವರ ಮೇಲೆ ದಾಳಿ ಕೈಗೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ನಂತರ ದಿನಾಂಕ:01/10/2020 ರಂದು ರಾತ್ರಿ 11:40 ಗಂಟೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ದಾಳಿ ಕುರಿತು ಹೊರಟು ಯಾದಗಿರಿ ನಗರದ ಆಸರ ಮೊಹಲ್ಲಾದ ಹಬೀಬ ಕಿರಾಣಿ ಅಂಗಡಿ ಮುಂದುಗಡೆ ಇಂದು ದಿನಾಂಕ; 02/10/2020 ರಂದು ರಾತ್ರಿ 00:20 ಗಂಟೆಗೆ ದಾಳಿ ಕೈಗೊಂಡು  ಎಮ್.ಡಿ ಹುಸೇನ ತಂದೆ ಶೇಖ್ ಮಹಿಬೂಬ ಪಟೇಲ್ ವ;26 ಜಾ; ಮುಸ್ಲಿಂ ಉ; ಮೊಬೈಲ ರಿಚಾರ್ಜ ಅಂಗಡಿ ಸಾ; ಆಸರ ಮೊಹಲ್ಲಾ ಯಾದಗಿರಿ ಈತನಿಗೆ ವಶಕ್ಕೆ ಪಡೆದುಕೊಂಡು ಅವರಿಂದ 1)ನಗದು ಹಣ ರೂ.7750/- 2) ಒಂದು ಒಪ್ಪೋ ಕಂಪನಿ ಮೊಬೈಲ್ ಅ.ಕಿ.ರೂ.500/-ರೂ. ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಪಂಚನಾಮೆ ಕೈಗೊಂಡಿದ್ದು ಇರುತ್ತದೆ. ಮೇಲ್ಕಂಡ ಆರೋಪಿತನನ್ನು ಹಾಗು ಜಪ್ತಿಪಂಚನಾಮೆಯನ್ನು ಮುದ್ದೆಮಾಲಿನೊಂದಿಗೆ ಈ ಕೂಡ ತಮಗೆ ಒಪ್ಪಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡಿದ್ದು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ್ದರಿಂದ ಠಾಣೆ ಗುನ್ನೆ ನಂ.89/2020 ಕಲಂ.78(6) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 116/2020 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 01/10/2020 ರಂದು 02:00 ಪಿ.ಎಮ್.ಕ್ಕೆ ಸಾದ್ಯಾಪೂರ ಗ್ರಾಮದ ಹನುಮಾನ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 4.30 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 06 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 6900/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ: 67/2020 ಕಲಂ: 323,354,504,506, ಸಂಗಡ 34 ಐಪಿಸಿ : ಇಂದು ದಿನಾಂಕ 02/10/2020 ರಂದು 10:00 ಎ.ಎಂ ಕ್ಕೆ ಶ್ರೀಮತಿ ಲಕ್ಷ್ಮಿ ಗಂಡ ಸಂಜೀವ ಕಠಾರೆ ವ:30 ವರ್ಷ ಉ:ವ್ಯಾಪಾರ ಜಾ:ಭಾವಸಾರ ಕ್ಷತ್ರಿಯ ಸಾ:ನಾರಾಯಣಪೂರ ಇವರು ಠಾಣೆಗೆ ಹಾಜರಾಗಿ ಒಂದುಕನ್ನಡದಲ್ಲಿ ಬರೆದ ಗಣಕಯಂತ್ರದಲ್ಲಿ ಟೈಪುಮಾಡಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವನೆಂದರೆ ನಾರಾಯಣಪೂರ ಗ್ರಾಮದಲ್ಲಿ ನಮ್ಮ ಮನೆ ಹಾಗೂ ಶಾಂತಪ್ಪ ತಂದೆ ನಿಂಗಪ್ಪ ಮೇಸ್ತಕ ರವರ ಮನೆಗಳು ಒಂದು ಕಡೆ ಇದ್ದು ನಾವು ದಿನಾಂಕ 10/12/2019 ರಂದು ನಾರಾಯಣಪೂರ ಗ್ರಾಮದ ಮಲ್ಲಯ್ಯ ತಂದೆ ಗುರುಪಾದಯ್ಯ ಕಂಠಿಮಠ ಇವರ ಮನೆ ಸಂಖ್ಯೆ 3/54 ಮನೆಯನ್ನು ಖರಿದಿಸಿದ್ದು ಇರುತ್ತದೆ. ಸದರಿ ಮನೆಯ ಎದುರುಗಡೆ ಸ್ವಲ್ಪ ಖುಲ್ಲಾ ಜಾಗೆ ಇದ್ದು ಅದರ ಎದರುಗಡೆ  ಶಾಂತಪ್ಪ ಮೇಸ್ತಕ ಇವರ ಮನೆ ಇರುತ್ತದೆ. ನಾವು ಮಲ್ಲಯ್ಯ ರವರ ಮನೆ ಖರಿದಿಸಿದ್ದು ಶಾಂತಪ್ಪ ಮೇಸ್ತಕ ರವರಿಗೆ ಇಷ್ಟವಿರಲಿಲ್ಲ ಅದೆ ಕಾರಣಕ್ಕೆ ನಾವು ಮನೆ ಖರಿಸಿದ ನಂತರ ಶಾಂತಪ್ಪ ಮುಸ್ತಕ ಈತನು ಸಣ್ಣ ಪುಟ್ಟ ಕಾರಣಗಳಿಗೆ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿದ್ದು ನಾವು ಅದನ್ನೆಲ್ಲಾ ಸಹಿಸಿಕೊಂಡು ಸುಮ್ಮನಾಗಿದ್ದೇವು. ಶಾಂತಪ್ಪ ಮೇಸ್ತಕ ನಾವು ಖರಿದಿಸಿದ ಮನೆಯ ಮುಂದಿನ ಖುಲ್ಲಾ ಜಾಗೆಯಲ್ಲಿ ದಿನಾಂಕ 30/09/2020 ಸಮಯ 10:30 ಗಂಟೆಗೆ ಶೌಚಾಲಯ ನಿಮರ್ಾಣಮಾಡುತ್ತಿದ್ದು ಆಗ ನಾನು ಅಲ್ಲಿಗೆ ಹೋಗಿ ಶಾಂತಪ್ಪನಿಗೆ ಶೌಚಾಲಯವನ್ನು ನಮ್ಮ ಮನೆಯ ಮುಂದಿನ ಜಾಗದಲ್ಲಿ ಏಕೆ ಕಟ್ಟುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಶಾಂತಪ್ಪ ತಂದೆ ನಿಂಗಪ್ಪ ಮೇಸ್ತಾಕ ಇವನು ಒಮ್ಮಿಂದೊಮ್ಮೇಲೆ ನನ್ನ ಮೈಮೇಲೆ ಬಂದು ಲೇಸೂಳಿ , ಲೇ ರಂಡಿ ಇಲ್ಲಿ ನಿನ್ನದೇನು ಐತಿ ಈ ಜಾಗದಲ್ಲಿ ಬೋಸುಡಿ ಎಂದು ಅವಾಚ್ಯ ಶಬ್ದಗಳಿಂದ ಬೈದು ನನ್ನ ಬಟ್ಟೆಯನ್ನು ಹಿಡಿದು ಎಳೆದಾಡಿ ನನಗೆ ಅವಮಾನ ಮಾಡಿ ನನ್ನ ತಲೆಯ ಕೂದಲನ್ನು ಹಿಡಿದು ಎಳೆದಾಡಿ ಕೈಯಿಂದ ನನ್ನ ಬೆನ್ನಿಗೆ , ಕಪಾಳಕ್ಕೆ ಹೊಡೆದು ಗುಪ್ತ ಪೆಟ್ಟುಮಾಡಿದ್ದಾನೆ ನಾವು ಜಗಳ ಮಾಡುವದನ್ನು ನೋಡಿ ಅಲ್ಲಿಯೇ ಪಕ್ಕದಲ್ಲಿ ಇದ್ದ ನಾನಪ್ಪ ತಂದೆ ನಿಂಗಪ್ಪ ಮೇಸ್ತಾಕ, ಶೋಭಾ ಗಂಡ ಶಾಂತಪ್ಪ ಮೇಸ್ತಾಕ, ದೇವಪ್ಪ ಗಂಡ ನಾನಪ್ಪ ಮೇಸ್ತಾಕ ಇವರೆಲ್ಲರೂ ಕೂಡಿ ಅಲ್ಲಿಗೆ ಬಂದು ಅವರಲ್ಲಿಯ ನಾನಪ್ಪ ತಂದೆ ನಿಂಗಪ್ಪ ಮೇಸ್ತಕ ಈತನು ಬೋಸುಡಿ ಸೂಳಿ ಈ ಜಾಗದಲ್ಲಿ ನೀನ್ನದೇನು ಇದೆ ನಾವು ಏನು ಬೇಕಾದರು ಮಾಡುತ್ತೇವೆ ಅಂತಾ ನನಗೆ ಅವಾಚ್ಯವಾಗಿ ಬೈದನು ನಂತರ ಶೋಭಾ ಗಂಡ ಶಾಂತಪ್ಪ ಮೇಸ್ತಕ ಇವಳು ಬೋಸುಡಿ ಸೂಳಿನ ಈಂಗ ಬಿಟ್ಟರ ಇವಳು ಬಹಳ ಮಾತನಾಡುತ್ತಾಳೆ ಎಂದು ಬಂದು ನನ್ನ ತೆಕ್ಕೆ ಕುಸ್ತಿಗಿ ಬಿದ್ದು ನನ್ನನ್ನು ಕೆಳಗೆ ಕೆಡುವಿ ಕಾಲಿನಿಂದ ನನ್ನ ಬೆನ್ನಿಗೆ ಒದ್ದಿರುತ್ತಾಳೆ ಅವರಲ್ಲಿಯ ದೇವಮ್ಮ ಗಂಡ ನಾನಪ್ಪ ಮೇಸ್ತಾಕ ಇವಳು ನನಗೆ ಈ ಸೂಳಿನ ಬಿಡಬ್ಯಾಡರಿ ಖಲಾಸ ಮಾಡರಿ ಅಂತಾ ನನಗೆ ಜೀವದ ಬೆದರಿಕೆ ಹಾಕಿದಳು ಆಗ ನಾನು ಚೀರಾಡುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮ ತಂದೆ ನಾರಾಯಣ ತಂದೆ ಲಕ್ಷ್ಮಣ ಲೋಕರೆ ಹಾಗೂ ನಮ್ಮ ತಾಯಿ ವಂದನಾ ಗಂಡ ನಾರಾಯಣ ಲೋಕರೆ ಹಾಗೂ ಅಮರೇಶ ತಂದೆ ಲಕ್ಷ್ಮಣ್ಣ ಲೋಕರೆ, ವಿಜಯಕುಮಾರ ತಂದೆ ಮಾರುತಿ ಖೆಮಕರ ರವರು ಬಂದು ಬಿಡಿಸಿದ್ದು ಇರುತ್ತದೆ. ನಾನು ನಿನ್ನೆ ದಿನ ಘಟನೆಯ ಬಗ್ಗೆ ನಮ್ಮ ಸಮಾಜದವರೊಂದಿಗೆ ಹಾಗೂ ನಮ್ಮ ಮನೆಯವರೊಂದಿಗೆ ಪಿಯರ್ಾದಿ ಕೊಡುವ ಬಗ್ಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ಠಾಣೆಗೆ ಪಿಯರ್ಾದಿಕೊಟ್ಟಿದ್ದು ಇರುತ್ತದೆ ಆದ್ದರಿಂದ ನನಗೆ ಅವಾಚ್ಯವಾಗಿ ಬೈದು ನನಗೆ ಹೊಡೆಬಡೆ ಮಾಡಿ ಅವಮಾನ ಮಾಡಿದ ಮೇಲೆ ನಮೂದಿಸಿದವರ ಮೇಲೆ ಕೇಸು ಮಾಡಲು ಪಿಯರ್ಾದಿ ಅಜರ್ಿಕೊಟ್ಟಿದ್ದು ಇರುತ್ತದೆ. ಅಂತಾ ನೀಡಿದ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 67/2020 ಕಲಂ 323,354,504,506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:-  95/2020 87  ಕೆ.ಪಿ ಯಾಕ್ಟ : ಇಂದು ದಿನಾಂಕ:02/10/2020 ರಂದು 17.15 ಗಂಟೆಗೆ ಹುಣಸಗಿ ವೃತ್ತ ಕಚೇರಿಯ ಸಿಪಿಐ ಸಾಹೇಬರಾದ ಶ್ರೀ ದೌಲತ್ ಎನ್ ಕೆ  ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಇಸ್ಲಾಂಪುರ ಸೀಮಾಂತರ ಕೆಂಭಾವಿ ರೋಡಿನ ದಂಡೆಗೆ ಒಂದು ಬೇವಿನ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು, ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:95/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.ನಂತರ ಮಾನ್ಯ ಸಿಪಿಐ ಸಾಹೇಬರಾದ ಶ್ರೀ ದೌಲತ್.ಎನ್.ಕೆ ರವರು ಠಾಣೆಗೆ 19.10 ಗಂಟೆಗೆ ಮರಳಿ ಠಾಣೆಗೆ ಬಂದು 6 ಜನ ಆರೋಪಿತರು & ನಗದು ಹಣ 19300/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಹಾಜರಪಡಿಸಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ, 1) ಕಾಶಿನಾಥ ತಂದೆ ಬಸವಂತ್ರಾಯ ಗುಂಡಕನಾಳ ವಯ:43 ವರ್ಷ ಜಾ:ಲಿಂಗಾಯತ ಉ:ಒಕ್ಕಲತನ ಸಾ:ಕೋಳಿಹಾಳ ತಾ:ಹುಣಸಗಿ. 2) ನೇದ್ದವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ದೇವಿಂದ್ರಪ್ಪ ತಂದೆ ಕರಿಕಲ್ಲಪ್ಪ ಬಪ್ಪರಗಿ ವಯ:43 ವರ್ಷ ಜಾ:ಉಪ್ಪಾರ ಉ:ಕೂಲಿಕೆಲಸ ಸಾ:ಇಸ್ಲಾಂಪುರ ತಾ:ಹುಣಸಗಿ 3) ನೇದ್ದವನ ಹೆಸರು ವಿಚಾಇರಿಸದ್ದು, ತನ್ನ ಹೆಸರು ಮಂಜುನಾಥ ತಂದೆ ರಾಮಣ್ಣ ಮೂಲಿಮನಿ ವಯ:31 ವರ್ಷ ಜಾ:ಉಪ್ಪಾರ ಉ:ಒಕ್ಕಲತನ ಸಾ:ಇಸ್ಲಾಂಪುರ ತಾ:ಹುಣಸಗಿ 4) ನೇದ್ದವನ ಹೆಸರು ವಿಚಾರಿಸಿದ್ದು, ರಾಮಕೃಷ್ಣ ತಂದೆ ಹಳ್ಳೆಪ್ಪ ಅಗ್ನಿ ವಯ:43 ವರ್ಷ ಜಾ:ಉಪ್ಪಾರ ಉ:ಒಕ್ಕಲತನ ಸಾ:ಇಸ್ಲಾಂಪುರ ತಾ:ಹುಣಸಗಿ 5) ನೇದ್ದವನ ಹೆಸರು ವಿಚಾರಿಸಿದ್ದು, ಕೃಷ್ಣಪ್ಪ ತಂದೆ ಅಂಬ್ರಪ್ಪ ದೊಡ್ಡಮನಿ ವಯ:42 ವರ್ಷ ಜಾ:ಉಪ್ಪಾರ ಉ:ಒಕ್ಕಲತನ ಸಾ:ಇಸ್ಲಾಂಪುರ ತಾ:ಹುಣಸಗಿ 6) ನೇದ್ದವನ ಹೆಸರು ವಿಚಾರಿಸಿದ್ದು, ಗುರಣ್ಣ ತಂದೆ ಹಣಮಂತ್ರಾಯ ಹದನೂರ ವಯ:41 ವರ್ಷ ಜಾ:ಉಪ್ಪಾರ ಉ:ಒಕ್ಕಲತನ ಸಾ:ಇಸ್ಲಾಂಪುರ


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 96/2020 498(ಎ) 504, 506 ಐಪಿಸಿ : ದಿನಾಂಕ:24/09/2020 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ತನ್ನ ತವರು ಮನೆಯಾದ ಕೊಳಿಹಾಳ ದೊಡ್ಡ ತಾಂಡಾಕ್ಕೆ ಹೋಗಲು ತಯಾರಾದಾಗ ಆರೋಪಿತನು ನನಗೆ ಹಾರ್ಟ ಆಪರೇಶನ್ ಆದರೂ ಸಹ ನಿನ್ನ ತವರು ಮನೆಯವರು ನನಗೆ ಮಾತನಾಡಿಸಲು ಬಂದಿಲ್ಲ, ನೀನೇಕೆ ಹೋಗುತ್ತಿ ಅಂತಾ ಅಂದು, ನೀನು ನಿನ್ನ ತವರು ಮನೆಗೆ ಹೋಗಬೇಡ ಹೋದರೆ, ವಾಪಸು ಬಂದಾಗ ಮನೆಯಲ್ಲಿ ಇಟ್ಟುಕೊಳ್ಳುವದಿಲ್ಲ ಅಂತಾ ಲಂಭಾಣಿ ಬಾಷೆಯಲ್ಲಿ ಮನಸ್ಸಿಗೆ ಬಂದಂತೆ ಬೈದು ಮಾನಸಿಕ ಕಿರುಕುಳ ಕೊಟ್ಟು ಹಾಗೂ ಜೀವದ ಬೆದರಿಕೆ ಹಾಕಿದ್ದರಿಂದ ಫಿರ್ಯಾದಿಯು ಮನ ನೊಂದು ತನ್ನ ಮಗನಿಗೆ ಕ್ರಿಮಿನಾಶಕ ಔಷಧಿ ಕುಡಿಸಿ ತಾನೂ ಕುಡಿದು, ಇಲಾಜು ಹೊಂದಿ ಗುಣಮುಖವಾಗಿ ಇಂದು ದಿನಾಂಕ:02/10/2020 ರಂದು ಬಂದು ಠಾಣೆಗೆ ದೂರು ಕೊಟ್ಟ ಬಗ್ಗೆ ಅಪರಾಧ.  

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!