ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/09/2020

By blogger on ಶುಕ್ರವಾರ, ಸೆಪ್ಟೆಂಬರ್ 25, 2020

 


                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/09/2020 

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 92/2020 ಕಲಂ: 302 ಐಪಿಸಿ : ಇಂದು ದಿನಾಂಕ:25/09/2020 ರಂದು ಬೆಳಿಗ್ಗೆ  10.30 ಗಂಟೆಗೆ ಪಿಯರ್ಾದಿಯಾದ ಸುರೇಶ ತಂದೆ ಬಾಬು ಚವ್ಹಾಣ ಸಾ:ಶ್ರೀನಿವಾಸಪೂರ ತಾಂಡಾ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರು ನೀಡಿದ್ದು ಏನೆಂದರೆ ದಿನಾಂಕ:24/09/2020 ರಂದು ಬೆಳಿಗ್ಗೆ ಪಿಯರ್ಾದಿ ಹೆಂಡತಿ ನೀಲಾಬಾಯಿಗೆ, ಮಾವನಾದ ಬಾಬು ಚವ್ಹಾಣ ಇವರು ನೀಲಾಬಾಯಿಗೆ ತವರು ಮನೆಗೆ ಹೋಗುವ ವಿಷಯದಲ್ಲಿ  ನಿಮ್ಮ ತವರು ಮನೆಯವರು ನನಗೆ ಹಾರ್ಟ ಆಪರೇಶನ್ ಆದರೂ ನಮ್ಮ ಮನೆಗೆ ಬಂದು ಮಾತನಾಡಿಸಿಲ್ಲಾ ನೀನು ಯಾಕೆ ನಿಮ್ಮ ತವರು ಮನೆಗೆ ಹೋಗುತ್ತಿ ಅಂದಾ ಬೈದಿದ್ದಕ್ಕೆ ಪಿಯರ್ಾದಿ ಹೆಂಡತಿ ನೀಲಾಬಾಯಿ ಮಾನಸಿಕ ಮಾಡಿಕೊಂಡು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ತನ್ನ ಮಗನಾದ ಸಂಪತ್ ಈತನಿಗೆ ಮನೆಯಲ್ಲಿದ್ದ ಕ್ರೀಮಿನಾಶಕವನ್ನು ಜಭರದಸ್ತಿಯಿಂದಾ 2 ಬೂಚ ಕುಡಿಸಿ, ನಂತರ ಮಗಳಾದ ಕುಮಾರಿ ಸ್ನೇಹಾ ಇವಳಿಗೆ ಸಹ ಕುಡಿಸಲ ಹೋದಾಗ ಓಡಿ ಹೋಗಿದ್ದು, ನಂತರ ನೀಲಾಬಾಯಿ ತಾನು ಕೂಡಾ ಅದೇ ಕ್ರೀಮಿನಾಶಕ ಸೇವನೆ ಮಾಡಿ ಮನೆಯಲ್ಲಿ ಒದ್ದಾಡುವಾಗ, ಸ್ನೇಹಾ ಇವಳು ಅಕ್ಕಪಕ್ಕದ ಮನೆಯರಿಗೆ ಕ್ರೀಮಿನಾಶಕ ಔಷದ ಕುಡಿದ ಬಗ್ಗೆ ತಿಳಿಸಿದಾಗ ಬಾಜು ಮನೆಯವರಾದ ನಿಂಗಪ್ಪ ರಾಠೋಡ, ಇವರು ಪಿಯರ್ಾದಿಗೆ ವಿಷಯ ತಿಳಿಸಿ ನಂತರ ನಿಂಗಪ್ಪ ರಾಠೋಡ ಈತನು ಆನಂದನೊಂದಿಗೆ ಮೋಟಾರ್ ಸೈಕಲ್ ಮೇಲೆ ಸಂಪತ್ ಈತನಿಗೆ ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಗೆ ತಂದು ಸೇರಿಕೆ ಮಾಡಿದ್ದು, ನೀಲಾಬಾಯಿಗೆ ತಿರುಪತಿ ತಂದೆ ಸಕ್ರೆನಾಯಕ ಇವರು ಒಂದು ಅಟೋದಲ್ಲಿ ತಂದು ಹುಣಸಗಿ ಸರಕಾರಿ ದವಾಖಾನೆಗೆ ತಂದು ಸೇರಿಕೆ ಮಾಡಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕೆಂದು ನೀಲಾಬಾಯಿ ಮತ್ತು ಸಂಪತ್ ಇವರಿಗೆ ವಿಜಯಪುರ ದವಾಖಾನೆಗೆ ಒಯ್ಯುವಾಗ ಮಾರ್ಗ ಮದ್ಯ ತಾಳಿಕೋಟಿ ಸಮೀಪ್ ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ಸಂಪತ್ ಮೃತಪಟ್ಟಿದ್ದು ಇರುತ್ತದೆ. ನೀಲಾಬಾಯಿ ಇವಳಿಗೆ ವಿಜಯಪುರ ದವಾಖಾನೆಗೆ ಸೇರಿಕೆ ಮಾಡಿ ಮರಳಿ ಠಾಣೆಗೆ ತಡವಾಗಿ ಇಂದು ಬಂದು ದೂರು ಕೊಟ್ಟಿದ್ದು ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 135/2020 ಕಲಂ 317 ಐಪಿಸಿ : ದಿನಾಂಕ 24/09/2020 ರಂದು ರಾತ್ರಿ 9-15 ಗಂಟೆಗೆ ಯಾರೋ ಒಬ್ಬ ಅಪರಿಚಿತ ಮಹಿಳೆಯು ತನ್ನ ಗರ್ಭವನ್ನು ಮರೆಮಾಚುವ ಸಂಬಂಧ ಮುಂಡರಗಿ ಗ್ರಾಮದ ಸೀಮೆಯಲ್ಲಿ ಬಂದು ಒಂದು ಗಂಡು ಮಗುವಿಗೆ ಜನ್ಮ ಕೊಟ್ಟು ಆ ಮಗುವಿನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಒಂದು ಜಾಲಿ ಕಂಟೆಯಲ್ಲಿ ಬಿಸಾಕಿ ಹೋಗಿರುತ್ತಾಳೆ ಅಂತಾ  ಪ್ರಕರಣ ದಾಖಲು ಆಗಿರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 136/2020 ಕಲಂ 188, 269, 270 ಐಪಿಸಿ : :-ದಿನಾಂಕ 11/09/2020 ರಿಂದ 24/09/2020 ರ ಅವಧಿಯಲ್ಲಿ ಆರೋಪಿತರು ತಮಗೆ ಕೊವಿಡ್-19 ರೋಗ ಧನಾತ್ಮಕ ಇದ್ದಿದ್ದು, ಈ ರೋಗ ಸಾಂಕ್ರಾಮಿಕ ರೋಗವಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಅಂತಾ ಗೋತ್ತಿದ್ದರೂ ಕೂಡಾ ಅವರು ಕ್ವಾರಂಟೈನಲ್ಲಿ ಇರದೇ ಸಾರ್ವಜನಿಕ ಸ್ಥಳದಲ್ಲಿ ಹೊರಗೆ ಬಂದು ತಿರುಗಾಡುತ್ತಿದ್ದು, ಇವರು ಹೀಗೆ ಕ್ವಾರಂಟೈನ್ ಉಲ್ಲಂಘನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುವದರಿಂದ ಸಾರ್ವಜನಿಕ ಆರೋಗ್ಯಕ್ಕೆ ಹಾನಿವುಂಟು ಮಾಡುವ ಮತ್ತು ಕೋರಾನಾ ವೈರಸ್ ಸೊಂಕು ಹರಡುವ ಸಾಧ್ಯತೆ ಇರುತ್ತದೆ ಅಂತಾ  ಆರೋಪಿತರ ಮೇಲೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 137/2020 ಕಲಂ 188, 269, 270 ಐಪಿಸಿ : :-ದಿನಾಂಕ 14/09/2020 ರಿಂದ 27/09/2020 ರ ಅವಧಿಯಲ್ಲಿ ಆರೋಪಿತರು ತಮಗೆ ಕೊವಿಡ್-19 ರೋಗ ಧನಾತ್ಮಕ ಇದ್ದಿದ್ದು, ಈ ರೋಗ ಸಾಂಕ್ರಾಮಿಕ ರೋಗವಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಅಂತಾ ಗೋತ್ತಿದ್ದರೂ ಕೂಡಾ ಅವರು ಕ್ವಾರಂಟೈನಲ್ಲಿ ಇರದೇ ಸಾರ್ವಜನಿಕ ಸ್ಥಳದಲ್ಲಿ ಹೊರಗೆ ಬಂದು ತಿರುಗಾಡುತ್ತಿದ್ದು, ಇವರು ಹೀಗೆ ಕ್ವಾರಂಟೈನ್ ಉಲ್ಲಂಘನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುವದರಿಂದ ಸಾರ್ವಜನಿಕ ಆರೋಗ್ಯಕ್ಕೆ ಹಾನಿವುಂಟು ಮಾಡುವ ಮತ್ತು ಕೋರಾನಾ ವೈರಸ್ ಸೊಂಕು ಹರಡುವ ಸಾಧ್ಯತೆ ಇರುತ್ತದೆ ಅಂತಾ  ಆರೋಪಿತರ ಮೇಲೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 132/2020 ಕಲಂ 379 ಐಪಿಸಿ : ಇಂದು ದಿನಾಂಕ 25.09.2020 ರಂದು ಬೆಳಿಗ್ಗೆ 6:30 ಗಂಟೆಗೆ ಕಾಲಂ: 07 ರಲ್ಲಿಯ ಎ-1 ಮತ್ತು ಎ-2 ಆರೋಪಿತರು ರವರು ಎ-3 & ಎ-4 ಆರೋಪಿತರು ಹೇಳಿದಂತೆ ಎ-5 ಆರೋಪಿತನ ನೇದ್ದರ ಹೊಲಕ್ಕೆ ಹೋಗಿ ಎ-5 ಆರೋಪಿತನಿಗೆ ಭೇಟಿಯಾಗಿ ನೇದ್ದವನ ತನ್ನ ಹೊಲದಲ್ಲಿಯ ಮರಳನ್ನು ಕೊಟ್ಟಿದ್ದು ಅದನ್ನು ಕಳ್ಳತನದಿಂದ ತುಂಬಿಕೊಂಡು ಎ-1 & ಎ-2 ಆರೋಪಿತರು ಕಾಲಂ: 08 ರಲ್ಲಿಯ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಚಲಾಯಿಸಿಕೊಂಡು ಗುರುಮಠಕಲ್ ಪಟ್ಟಣದ ಕಡೆಗೆ ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿತಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಎ-1 ಆರೋಪಿತನು ಸಿಕ್ಕಿಬಿದ್ದಿದ್ದು ಎ-2 ಆರೋಪಿತನು ಓಡಿ ಹೋಗಿರುತ್ತಾನೆ. ನಂತರ ಪಿ.ಎಸ್.ಐ ರವರು ಮರಳು ತುಂಬಿದ ಕಾಲಂ: 08 ರಲ್ಲಿಯ ಟ್ರ್ಯಾಕ್ಟರಗಳನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 132/2020 ಕಲಂ: 379 ಐಪಿಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:-  133/2020  ಕಲಂ 379 ಐ.ಪಿ.ಸಿ : ಇಂದು ದಿನಾಂಕ: 25.09.2020 ರಂದು ಮದ್ಯಾಹ್ನ 12-15 ಗಂಟೆಗೆ ಸ.ತಫರ್ೇ ಶ್ರೀ ಹಣಮಂತ.ಬಿ. ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಜೊತೆಗೆ ಜಪ್ತಿ ಮಾಡಿದ ಎರಡೂ ಟ್ಯಾಕ್ಟರಗಳು ಮತ್ತು ಇಬ್ಬರು ಆರೋಪಿತರೊಂದಿಗೆ ಬಂದು ವರದಿ ಹಾಜರಪಡಿಸಿದ್ದು ಸಾರಂಶವೇನೆಂದರೆ. ಇಂದು ದಿನಾಂಕ 25.09.2020 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಪಿರ್ಯಾಧಿ ಮತ್ತು ಸಿಬ್ಬಂದಿಯವರು ಠಾಣೆಯಲ್ಲಿದ್ದಾಗ ಹತ್ತಿಕುಣಿ ಕಡೆಯಿಂದ ಗುರುಮಠಕಲ ಕಡೆಗೆ ಎರಡೂ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ ಬಗ್ಗೆ  ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರನ್ನು ಠಾಣೆಗೆ ಬರಮಾಡಿಕೊಂಡು ದಾಳಿಯ ಬಗ್ಗೆ ವಿವರಸಿ ಸಮಯ ಬೆಳಿಗ್ಗೆ 10.00 ಗಂಟೆಗೆ ಮೊರಾಜರ್ಿ ವಸತಿ ಶಾಲೆ ಮೋಟ್ನಳ್ಳಿ ಹತ್ತಿರ ನಿಂತು ನೋಡಲಾಗಿ ಹತ್ತಿಕುಣಿ ಕಡೆಯಿಂದ ಗುರುಮಠಕಲ ಕಡೆಗೆ ಎರಡು ಟ್ರ್ಯಾಕ್ಟರ ಬರುತ್ತಿರುವದನ್ನು ಕಂಡು ಜೀಪಿನಿಂದ ಕೆಳಗೆ ಇಳಿದು ನೋಡಿ  ಸದರಿ ಎರಡೂ ಟ್ರ್ಯಾಕ್ಟರ ಚಾಲಕರಿಗೆ ಪಂಚರ ಸಮಕ್ಷಮ ವಿಚಾರಣೆ ಮಾಡಿ ಎರಡೂ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ ಅದರಲ್ಲಿ 1) ಒಂದು ಸೋನಾಲಿಕಾ ಕಂಪನಿಯ ನೀಲಿ ಬಣ್ಣದ ಟ್ಯಾಕ್ಟರಯಿದ್ದು, ಅದರ ಇಂಜಿನ. ನಂ. ಕೆ.ಎ-33, ಟಿ.ಎ-9253 ಮತ್ತು ಟ್ರಾಲಿ ನಂ. ಕೆ.ಎ-33, ಟಿ.ಬಿ- 1840 ಇದ್ದು ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಸಿದ್ದಪ್ಪ ತಂದೆ ತಿಮ್ಮಯ್ಯ ಯಾದಗಿರದೋರವಯ|| 25 ವರ್ಷ, ಜಾ|| ಬೇಡರ, ಉ|| ಟ್ಯಾಕ್ಟರ ಚಾಲಕ ಸಾ|| ಹತ್ತಿಕುಣಿ ತಾ||ಜಿ|| ಯಾದಗಿರಿ ಅಂತ ತಿಳಿಸಿದ್ದು, ಸದರಿ ಟ್ಯಾಕ್ಟರ ಅ.ಕಿ.2,00,000/- ರೂ. ಇದ್ದು ಅದರಲ್ಲಿನ ಮರಳು ಮುದ್ದೆಮಾಲು ಅ.ಕಿ.2,000/- ರೂ. ಇದ್ದು, ಸದರಿ ಟ್ಯಾಕ್ಟರ ಮಾಲಿಕನ ಹೆಸರು ಮಲ್ಲಣ್ಣ ತಂದೆ ಸಿದ್ರಾಮ ಬೋಳೇರ ಜಾ|| ಕುರಬರ ಸಾ|| ಹತ್ತಿಕುಣಿ ಇರುತ್ತದೆ ಅಂತ ತಿಳಿಸಿದನು. ಮತ್ತು 2) ಒಂದು ಮಹೇಂದ್ರಾ ಭೂಮಿಪುತ್ರ ರೆಡ ಕಲರ ಟ್ಯಾಕ್ಟರ ಅದರ ಇಂಜಿನ ನಂ. ಕೆಎ-33, ಟಿಎ-6386 ಇದ್ದು, ಅದರ ಟ್ರಾಲಿ ನಂಬರ ಇರುವದಿಲ್ಲ. ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಿದ್ದು, ಸದರಿಯವನು ತನ್ನ ಹೆಸರು ಮಲ್ಲಿಕಾಜರ್ುನ ತಂದೆ ರಾಜು ಸಣ್ಣಚಂದಪ್ಪನವರ ವಯ|| 21 ವರ್ಷ, ಜಾ|| ಮಾದಿಗ ಉ|| ಟ್ಯಾಕ್ಟರ ಚಾಲಕ ಸಾ|| ಹತ್ತಿಕುಣಿ ಗ್ರಾಮ ತಾ||ಜಿ|| ಯಾದಗಿರಿ ಅಂತ ತಿಳಿಸಿದ್ದು ಸದರಿ ಟ್ಯಾಕ್ಟರ ಅ.ಕಿ.2,00,000/- ರೂ. ಇದ್ದು ಅದರಲ್ಲಿನ ಮರಳು ಮುದ್ದೆಮಾಲು ಅ.ಕಿ.2,000/- ರೂ. ಇದ್ದು, ಸದರಿ ಟ್ಯಾಕ್ಟರ ಮಾಲಿಕನ ಹೆಸರು ನರಸಪ್ಪ ತಂದೆ ಶರಣಪ್ಪ ಭೀಮನಳ್ಳಿ ಜಾ|| ಕಬ್ಬಲಿಗ ಸಾ|| ಹತ್ತಿಕುಣಿ ತಾ||ಜಿ|| ಯಾದಗಿರಿ ಅಂತ ತಿಳಿಸಿದನು. ಸದರಿ ಚಾಲಕರು ತಮ್ಮ ಮಾಲಿಕರು ಹೇಳಿದಂತೆ ಸಂಬಂಧಪಟ್ಟ ಇಲಾಖೆಯಿಂದ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸಕರ್ಾರಕ್ಕೆ ಯಾವುದೇ ರಾಜಧನ ತುಂಬದೆ ಮತ್ತು ರಾಯಲಿಟಿ ಪಡೆದುಕೊಳ್ಳದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತನ್ನ ಸ್ವಂತ ಲಾಭಗೋಸ್ಕರ ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ಅಪರಾಧ.


ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:-  134/2020 ಕಲಂ: 78() ಕೆ.ಪಿ. ಆಕ್ಟ್: ಇಂದು ದಿನಾಂಕ 25.09.2020 ರಂದು ಸಂಜೆ 5:00 ಗಂಟೆಗೆ ಹಿಮಾಲಪೂರ ಗ್ರಾಮದ ಅಂಬೆಡ್ಕರ ಚೌಕ್ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 15/2020 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ.  ನಂತರ ಪಿಸಿ-148 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ಸಂಜೆ 7:00 ಗಂಟೆಗೆ ತಂದು ಪಿ.ಎಸ್.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ಸಂಜೆ 7:35 ಗಂಟೆಗೆ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಸಮಯ ರಾತ್ರಿ 9:00 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಹೆಚ್.ಸಿ-84 ಗುರುಮಠಕಲ್ ಠಾಣೆ ಗುನ್ನೆ ನಂಬರ 134/2020 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 206/2020 ಕಲಂ 143, 147, 148, 323, 324, 341, 354, 504, 506 ಸಂ. 149 ಐಪಿಸಿ : ಇಂದು ದಿನಾಂಕ:25/09/2020 ರಂದು 3 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಫಿಯರ್ಾದಿ ಶ್ರೀಮತಿ ಮಲ್ಲಮ್ಮಗಂಡ ಸಾಹೇಬಗೌಡ ಸತ್ಯಪನವರ ವ|| 48 ವರ್ಷಜಾ|| ಲಿಂಗಾಯತರೆಡ್ಡಿ ಉ|| ಹೊಲಮನೆಗೆಲಸ ಸಾ|| ಹಂದ್ರಾಳ ಎಸ್.ಡಿತಾ|| ಸುರಪುರಸುರಪುರಇವರುಠಾಣೆಗೆ ಬಂದುಒಂದುಅಜರ್ಿ ನಿಡಿದ್ದು ಸಾರಾಂಶವೆನೆಂದರೆ, ಹಂದ್ರಾಳ ಗ್ರಾಮದಲ್ಲಿ ನಮ್ಮದು ಹೊಲ ಸವರ್ೆ ನಂ.07/1 ನೇದ್ದುಇದ್ದು, ನಮ್ಮ ಹೊಲಕ್ಕೆ ಹೊಗುವ ದಾರಿಸಲುವಾಗಿ ನಮ್ಮೂರದೇವಕೆಮ್ಮಗಂಡ ಪರಮಣ್ಣ ಬಂಕಲದೊಡ್ಡಿಇವರ ಹೊಲ ಸವರ್ೇ ನಂ.3/ಆ ನೇದ್ದನ್ನುಖರಿದಿ ಮಾಡಿದ್ದುಇರುತ್ತದೆ. ದಾರಿ ವಿಷಯವಾಗಿ ನಮಗೂ ಮತ್ತು ಮಲ್ಲಣ್ಣ ಬಂಕಲದೊಡ್ಡಿಇವರ ನಡುವೆ ವéೈಶ್ಯಮ್ಮೆಇರುತ್ತದೆ. ಹಿಗಿದ್ದು ದಿನಾಂಕ:24/09/2020 ರಂದು ಮುಂಜಾನೆ 8:30 ಗಂಟೆಗೆ ನಾನು ಮತ್ತು ನನ್ನಗಂಡ ಹಾಗೂ ಮೈದುನಾ ಮಲ್ಲಿಕಾಜರ್ುನಎಲ್ಲರುಕೂಡಿ ಹೊಲಕ್ಕೆ ಹೊಗುತಿರುವಾಗ ನಮ್ಮೂರ ಸರಕಾರಿಕಿರಿಯ ಪ್ರಾಥಮೀಕ ಶಾಲೆ ಹತ್ತಿರ ಹೊಗುತ್ತಿರುವಾಗ ನಮ್ಮೂರ ಲಿಂಗಾಯತಜನಾಂಗದವರಾದ 1) ಚನ್ನಪ್ಪತಂದೆ ಮಲ್ಲಣ್ಣ ಬುಂಕಲದೊಡ್ಡಿ, 2) ಗಂಗಣ್ಣತಂದೆ ಮಲ್ಲಣ್ಣ ಬುಂಕಲದೊಡ್ಡಿ, 3) ಶರಣುತಂದೆ ಮಲ್ಲಣ್ಣ ಬುಂಕಲದೊಡ್ಡಿ, 4) ಮಲ್ಲಣ್ಣತಂದೆಚನ್ನಪ್ಪ ಬುಂಕಲದೊಡ್ಡಿ, 5) ಮಾನಮ್ಮಗಂಡ ಮಲ್ಲಣ್ಣ ಬುಂಕಲದೊಡ್ಡಿ, 6) ಸುನೀಲ್ತಂದೆ ನಾಗಣ್ಣ ಬುಂಕಲದೊಡ್ಡಿಎಲ್ಲರೂಕೂಡಿ ಗುಂಪು ಕಟ್ಟಿಕೊಂಡು ಬಂದು ನಮ್ಮನ್ನುಅಡ್ಡಗಟ್ಟಿತಡೆದು ನಿಲ್ಲಿಸಿ, ನೀವು ನಮಗೆ ಕರೆಂಟ್ ಮೋಟರಚಲುಮಾಡಲುದಾರಿಕೋಡುವದಿಲ ಅಂತಿರಿ ಸುಳೆಮಕ್ಕಳೆ ಅಂತಾಅಂದವರೇ, ಅವರಲ್ಲಿಯಚನ್ನಪ್ಪಇತನು ನನ್ನ ಸೀರೆ ಸೇರಗ ಹಿಡಿದುಜೊಗ್ಗಾಗಿಅವಮಾನ ಗೊಳಿಸಿ ಅಲ್ಲೆ ಬಿದ್ದಒಂದು ಬಡಿಗೆಯಿಂದ ನನ್ನಎಡಗೈ ಮುಂಗೈ ಕೆಳಗೆ ಹೊಡೆದುರಕ್ತಗಾಯ ಮಾಡಿದನು ಮತ್ತು ಮಾನಮ್ಮಇಕೆಯುಅಲ್ಲೆ ಬಿದ್ದಒಂದುಕಲ್ಲಿನಿಂದ ನನ್ನ ಮೊಳಕಾಲಿಗೆ ಹೊಡೆದುಗುಪ್ತಗಾಯ ಮಾಡಿರುತ್ತಾಳೆ. ನನ್ನಗಂಡ ಸಾಹೇಬಗೌಡಇತನಿಗೆಗಂಗಣ್ಣಇತನುಕೈಯಿಂದ ಹೊಡೆದು ನೇಲಕ್ಕೆ ಕೇಡವಿದಾಗ, ಶರಣುಇತನುಅಲ್ಲೆ ಬಿದ್ದಕಲ್ಲಿನಿಂದ ಮೈಕೈಗೆ ಹೊಡೆದುಗುಪ್ತಗಾಯ ಮಾಡಿದನು. ನನ್ನ ಮೈದುನ ಮಲ್ಲಿಕಾಜರ್ುನಇತನಿಗೆ ಮಲ್ಲಣ್ಣ ಮತ್ತು ಸುನೀಲ್ಇಬ್ಬರು ನೆಲಕ್ಕೆ ಕೆಡವಿ ಮೈಕೈಗೆ ಕಾಲಿನಿಂದಒದ್ದು, ಕೈಯಿಂದ ಹೊಡೆಯುತ್ತಿರುವಾಗಅಲ್ಲೆ ಹೊರಟಿದ್ದ ಸಂಗಣ್ಣತಂದೆ ಭೀಮನಗೌಡ ಸಜರ್ಾಪುರ, ಪರಮಣ್ಣತಾಯಿ ಸಾಬವ್ವದೊಡ್ಡಮನಿ ಮತ್ತುಚಂದ್ರಶೇಖರತಂದೆ ಬಸಣ್ಣ ಮಾಲಿಪಾಟೀಲ್ ಮೂವರುಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡರು, ಇವರು ಬಂದು ಬಿಡಿಸಿದಾರೆ ಅಂತಾ ಉಳಿದಿರಿ ಮಕ್ಕಳೆ ಇಲ್ಲಅಂದರೆಇವತ್ತ ನಿಮ್ಮಜೀವ ಸಹಿತ ಬಿಡುತ್ತಿರಲಿಲ್ಲ ಅಂತಾಅವಾಚ್ಯವಾಗಿ ಬೈದು, ಇನ್ನೊಮ್ಮೆ ನಮ್ಮಕರೆಂಟ ಮೊಟರತಂಟೆಗೆ ಬಂದರೆ ನಿಮ್ಮಜೀವ ಹೊಡೆಯದೆ ಬಿಡುವದಿಲ್ಲ ಜೀವದ ಬೇದರಿಕೆ ಹಾಕಿ ಹೊದರು. ನಂತರ ನಾವು ಒಂದು ಖಾಸಗಿ ವಾಹದನಲ್ಲಿ ಸರಕಾರಿಆಸ್ಪತ್ರೆ ಸುರಪುರಕ್ಕೆ ಬಂದುಉಪಚಾರ ಮಾಡಿಸಿಕೊಂಡು ನಮ್ಮ ಮನೆಯವರಜೋತೆ ವಿಚಾರ ಮಾಡಿಇಂದುತಡವಾಗಿಠಾಣೆಗೆ ಬಂದಿರುತ್ತೇನೆ.ಕಾರಣ ನನಗೆ ಬಿಡಗೆಯಿಂದ ಹೊಡೆದು ಸೀರೆ ಸೇರಗ ಹಿಡಿದುಜೊಗ್ಗಾಡಿಅವಮಾನ ಮಾಡಿ ಮತ್ತು ನನ್ನಗಂಡನಿಗೆಕಲ್ಲಿನಿಂದ ಹೊಡೆದುಗುಪ್ತಗಾಯ ಮಾಡಿ ಹಾಗೂ ನನ್ನ ಮೈದುನನಿಗೆ ಮಲ್ಲಿಕಾಜರ್ುನನಿಗೆ ನೆಲಕ್ಕೆ ಕೆಡವಿ ಮೈಕೈಗೆ ಕಾಲಿನಿಂದಒದ್ದು, ಕೈಯಿಂದ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಕ್ರಮಜರುಗಿಸಬೇಕುಅಂತಾ ಮಾನ್ಯರವರಲ್ಲಿ ವಿನಂತಿಅಂತಾಕೊಟ್ಟಅಜರ್ಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 206/2020 ಕಲಂ: 143, 147, 148, 323, 324, 341, 354, 504, 506 ಸಂ. 149 ಐಪಿಸಿನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.

 


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 208/2020 ಕಲಂ 143, 147, 148, 323, 324, 354, 448, 504, 506 ಸಂ. 149 ಐಪಿಸಿ : ಇಂದು ದಿನಾಂಕ: 25/09/2020 ರಂದು 8:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರಳಾದ ಶ್ರೀಮತಿ ಮಾನಮ್ಮಗಂಡ ಮಲ್ಲಣ್ಣ ಬುಂಕಲದೊಡ್ಡಿ ವ|| 48 ವರ್ಷಜಾ|| ಲಿಂಗಾಯತ ಉ|| ಹೊಲಮನೆಗೆಲಸ ಸಾ||ಹಂದ್ರಾಳ ಎಸ್.ಡಿಇವರುಠಾಣೆಗೆ ಬಂದುಒಂದು ಗಣಕಿಕರಿಸಿದ ಅಜರ್ಿತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಹಂದ್ರಾಳ ಗ್ರಾಮದಲ್ಲಿ ನಮ್ಮ ಹೊಲ ಸವರ್ೆ ನಂ.11 ನೇದ್ದುಇದ್ದು, ನಮ್ಮ ಹೊಲಕ್ಕೆ ನೀರು ತಗೆದುಕೊಳ್ಳುವ ಸಲುವಾಗಿ ಬಸನಗೌಡತಂದೆ ಬಸಣ್ಣ ಮಾಲಿಪಾಟಿಲ್ಇವರ ಹೊಲದಲ್ಲಿಕರೆಂಟ ಮೋಟರ್ ಕೂಡಿಸಿದ್ದು, ಕರೆಂಟ ಮೊಟರ್ ಚಾಲು ಮಾಡಲು ಹೊಗುವಾಗ ಸಾಹೇಬಗೌಡ ಸತ್ಯಪನವರಇತನು ಚಾಲು ಮಾಡಲು ಬಿಡುತ್ತಿರಲಿಲ್ಲ ಅದೇ ವಿಷಯವಾಗಿ ನಮಗೂ ಮತ್ತುಅವರಿಗೂ ವೈಶ್ಯಮ್ಮೆಇರುತ್ತದೆ. ಹಿಗಿದ್ದು ದಿನಾಂಕ:24/09/2020 ರಂದು ಮುಂಜಾನೆ 8:30 ಗಂಟೆಗೆ ನಾನು ಮತ್ತು ನನ್ನಗಂಡ ಮಲ್ಲಣ್ಣ ಹಾಗೂ ನನ್ನ ಮಗ ಗಂಗಾಧರ ಮೂವರುಕೂಡಿ ನಮ್ಮೂರ ಸರಕಾರಿ ಪ್ರಾಥಮಿಕ ಶಾಲೆಯ ಮುಂದೆಇದ್ದ ನಮ್ಮ ಹೊಲ ಸವರ್ೇ ನಂ.11 ನೇದ್ದರಲ್ಲಿ ದನಗಳಿಗೆ ಮೇವು ಕೋಯಿತ್ತಿರುವಾಗ ನಮ್ಮೂರರೆಡ್ಡಿಜನಾಂಗದವರಾದ 1) ಸಾಹೇಬಗೌಡತಂದೆ ಬಸಲಿಂಗಪ್ಪ ಸತ್ಯಪನವರ, 2) ಬಸಲಿಂಗಪ್ಪತಂದೆ ಸಾಹೇಬಗೌಡ ಸತ್ಯಪನವರ, 3) ಮಲ್ಲಿಕಾಜರ್ುನತಂದೆ ಬಸಲಿಂಗಪ್ಪ ಸತ್ಯಪನವರ, 4) ದೇವಿಂದ್ರಪ್ಪತಂದೆ ಭೀಮರಾಯಕೊಲ್ಲೂರ, 5) ಮಲ್ಲಮ್ಮಗಂಡ ಸಾಹೇಬಗೌಡ ಸತ್ಯಪನವರ, 6) ನೀಲಗಂಗಮ್ಮತಂದೆ ಮಲ್ಲಿಕಾಜರ್ುನ ಸತ್ಯಪನವರ, 7) ಮಲ್ಲಮ್ಮಗಂಡ ಭೀಮರಾಯಕೊಲ್ಲುರಎಲ್ಲರುಕೂಡಿಕೈಯಲ್ಲಿ ಬಡಿಗೆ, ಕಲ್ಲು, ರಾಡ ಹಿಡದುಕೊಂಡು ನಮ್ಮ ಹೊಲದಲ್ಲಿಅಕ್ರಮವಾಗಿ ಪ್ರವೇಶ ಮಾಡಿ ನಮ್ಮ ಹತ್ತಿರ ಬಂದವರೆ ನಮ್ಮ ಹೊಲದಲ್ಲಿಕರೆಂಟ ಮೋಟರ ಚಾಲು ಮಾಡಲು ಹೊಗ ಬೇಡ್ರಿಅಂದರೂ ನೀವು ನಮ್ಮ ಹೊಲದಲ್ಲಿ ಹಾದು ಹೊತ್ತಿರಿ ಸುಳೇ ಮಕ್ಕಳೆ ಅಂತಾಅವಾಚ್ಯವಾಗಿ ಬೈತ್ತಿರುವಾಗ, ನನ್ನ ಮಗನು ನಾವು ಏಲ್ಲಿ ನಿಮ್ಮ ಹೊಲದಲ್ಲಿ ಹೊಗಿವಿ ಅಂತಾಅಂದಿದಕ್ಕೆ ಸಾಹೇಬಗೌಡಇತನು ನನ್ನ ಮಗ ಗಂಗಾಧರಇತನಿಗೆತನ್ನಕೈಯಲ್ಲಿದ್ದರಾಡಿನಿಂದ ಹೆಡಕಿಗೆ ಹೊಡೆದುರಕ್ತಗಾಯ ಮಾಡಿದನು, ಬಸಲಿಂಗಪ್ಪಇತನುತನ್ನಕೈಯಲ್ಲಿದ್ದ ಬಡಿಗೆಯಿಂದ ನನ್ನ ಮಗನ ಎಡಗೈಗೆ ಹೊಡೆದುರಕ್ತಗಾಯ ಮಾಡಿದನು. ನನಗೆ ಮಲ್ಲಿಕಾಜರ್ುನಇತನು ನನ್ನೆ ಸೀರೆ ಹಿಡಿದುಜೊಗ್ಗಾಡಿಅವಮಾನ ಗೊಳಿಸಿ, ಕೈಯಿಂದ ಬೆನ್ನಿಗೆ ಹೊಡೆದುಗುಪ್ತಗಾಯ ಮಾಡಿದನು, ಮತ್ತು ಮಲ್ಲಮ್ಮ ಇವಳು ತನ್ನಕೈಯಲ್ಲಿದ್ದ ಬಡಿಗೆಯಿಂದ ನನ್ನಎರಡು ಮೊಳಕೈ ಕೆಳಗೆ ಹೊಡೆದುತರಚಿದಗಾಯ ಮಾಡಿದಳು. ನನ್ನಗಂಡನಿಗೆದೇವಿಂದ್ರಪ್ಪಇತನುತನ್ನಕೈಯಲ್ಲಿದ್ದಕಲ್ಲಿನಿಂದಎದೆಗೆ ಹೊಡೆದುಗುಪ್ತಗಾಯ ಮಾಡಿ ನೆಲಕ್ಕೆ ಕೆಡವಿದಾಗ, ನೀಲಗಂಗಮ್ಮ ಮತ್ತು ಮಲ್ಲಮ್ಮಗಂಡ ಭೀಮರಾಯಇಬ್ಬರುಕೈಯಿಂದ ಬೆನ್ನಿಗೆ ಹೊಡೆದು, ಕಾಲಿನಿಂದಒದ್ದುಗುಪ್ತಗಾಯ ಮಾಡಿದರು. ಶಾಲೆಯ ಮುಂದೆ ಹೊರಟಿದ್ದ ನಮ್ಮಅಣ್ಣತಮ್ಮಕಿಯವರಾದ ನಾಗಣ್ಣತಂದೆ ಲಿಂಗಣ್ಣ ಬುಂಕಲದೊಡ್ಡಿ, ಸುನೀಲ್ತಂದೆ ನಾಗಣ್ಣ ಬುಂಕಲದೊಡ್ಡಿ ಮತ್ತು ನನ್ನ ಮಗ ಚನ್ನಪ್ಪತಂದೆ ಮಲ್ಲಣ್ಣ ಬುಂಕಲದೊಡ್ಡಿಇವರು ಬಂದು ಜಗಳವನ್ನು ನೋಡಿ ಬಿಡಿಸಿಕೊಂಡರು ಇವರು ಬಂದು ಬಿಡಿಸಿದಾರೆ ಅಂತಾ ಉಳಿದಿರಿ ಮಕ್ಕಳೆ ಇಲ್ಲಅಂದರೆಇವತ್ತ ನಿಮ್ಮಜೀವ ಸಹಿತ ಬಿಡುತ್ತಿರಲಿಲ್ಲ ಅಂತಾಅವಾಚ್ಯವಾಗಿ ಬೈದು, ಇನ್ನೊಮ್ಮೆ ನಮ್ಮ ಹೊಲದ ಬದುವಿನ ಮೇಲೆ ಹಾದು ಹೊದರೆ ನಿಮ್ಮಜೀವ ಹೊಡೆಯದೆ ಬಿಡುವದಿಲ್ಲ ಅಂತಾಜೀವದ ಬೇದರಿಕೆ ಹಾಕಿ ಹೊದರು. ನಂತರ ನಾವು ಒಂದು ಖಾಸಗಿ ವಾಹನದನಲ್ಲಿ ಸರಕಾರಿಆಸ್ಪತ್ರೆ ಸುರಪುರಕ್ಕೆ ಬಂದುಉಪಚಾರ ಮಾಡಿಸಿಕೊಂಡು ನನ್ನಗಂಡನಿಗೆ ಸಣ್ಣಪುಟ್ಟಗಾಯವಾಗಿದ್ದರಿಂದಆಸ್ಪತ್ರೆಗೆ ತೊರಿಸಿರುವದಿಲ್ಲ. ನಂತರ ನಾನು ನಮ್ಮ ಮನೆಯವರಜೊತೆ ವಿಚಾರ ಮಾಡಿಇಂದುತಡವಾಗಿಠಾಣೆಗೆ ಬಂದಿರುತ್ತೇನೆ.ಕಾರಣ ನನಗೆ ಬಡಗೆಯಿಂದ ಹೊಡೆದು ಸೀರೆ ಹಿಡಿದುಜೊಗ್ಗಾಡಿಅವಮಾನ ಮಾಡಿ ಮತ್ತು ನನ್ನಗಂಡನಿಗೆಕಲ್ಲಿನಿಂದ ಹೊಡೆದುಗುಪ್ತಗಾಯ ಮಾಡಿ ಹಾಗೂ ನನ್ನ ಮಗನಿಗೆ ರಾಡಿನಿಂದ ಹೊಡೆದುರಕ್ತಗಾಯ ಮಾಡಿದವರ ಮೇಲೆ ಕಾನೂನು ಕ್ರಮಜರುಗಿಸಬೇಕುಅಂತಾ ಮಾನ್ಯರವರಲ್ಲಿ ವಿನಂತಿ. ಅಂತಾಕೊಟ್ಟಅಜರ್ಿಯ ಸರಾಂಶದ ಮೇಲಿಂದಠಾಣೆಗುನ್ನೆ ನಂ.208/2020 ಕಲಂ: 143,147,148,323,324,354,448,504,506 ಸಂ. 149 ಐಪಿಸಿದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 65/2020 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 25/09/2020 ರಂದು 6:30 ಪಿ. ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 12:30 ಪಿ.ಎಂ ಕ್ಕೆ ಮಾರನಾಳ ಗ್ರಾಮದ ಕನರ್ಾಟಕ ರಕ್ಷಣಾ ವೇದಿಕೆ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 65/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.  ನಂತರ ಮಾನ್ಯ ಪಿಎಸ್ಐ ಸಾಹೇಬರು 08:10 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ  ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 3040/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. ದೇವಪ್ಪ ತಂದೆ ಶಂಕ್ರಪ್ಪ ರಾಠೋಡ ವ:36 ವರ್ಷ ಉ:ವ್ಯಾಪಾರ ಜಾ:ಲಮಾಣಿ ಸಾ:ಮಾರನಾಳ ತಾಂಡಾ ತಾ:ಹುಣಸಗಿ 

      

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ 17/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ 25.09.2020 ರಂದು 9.00 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ರಂಗಮ್ಮ ಗಂಡ ಭಿಮರಾಯ ಮೇಲಮನಿ ವಯಾ|| 45 ಜಾ|| ಹಿಂದೂ ಬೇಡರ ಉ|| ಹೊಲಮನೆಗೆಲಸ ಸಾ|| ಚಿಗರಿಹಾಳ ತಾ|| ಸುರಪುರ ಇದ್ದು ತಮ್ಮಲ್ಲಿ ಬರೆದುಕೊಡುವ ಪಿರ್ಯಾದಿ ಅಜರ್ಿ ಏನೆಂದರೆ, ನನಗೆ ಒಟ್ಟು 5 ಜನ ಮಕ್ಕಳಿದ್ದು 3 ಜನ ಹೆಣ್ಣುಮಕ್ಕಳು 2 ಜನ ಗಂಡು ಮಕ್ಕಳು ಇರುತ್ತಾರೆ. ನನ್ನ ಗಂಡ ಭಿಮರಾಯ ತಂದೆ ಅಡಿವೆಪ್ಪ ಮೇಲಮನಿ ವಯಾ|| 50 ಈತನಿಗೆ ಸುಮಾರು 5-6 ತಿಂಗಳಿಂದ ತಲೆ ಸರಿಯಾಗಿಲ್ಲದೆ ಏನೆನೋ ಮಾತನಾಡುವದು ಹಾಗೂ ಹೇಳದೆ ಕೇಳದೆ ಎಲ್ಲಿಗಾದರು ಮಾಡುತ್ತಿದ್ದನು. ಎಲ್ಲಿಯಾದರು ದವಾಖಾನೆಗೆ ತೋರಿಸಿದರಾಯಿತು ಅಂತ ಸುಮ್ಮನಿದ್ದೆವು. ಹೀಗಿರುತ್ತಾ ದಿನಾಂಕ: 22/09/2020 ರಂದು ನಾನು ಬೇರೆ ಕಡೆ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ನನ್ನ ಗಂಡ ಮಕ್ಕಳು ಇದ್ದರು. ನಂತರ ಮದ್ಯಾಹ್ನ 1.30 ಗಂಟೆ ಸುಮಾರಿಗೆ ನನಗೆ ನನ್ನ ದೊಡ್ಡ ಮಗಳಾದ ಅಂಜಳಮ್ಮ ಇವಳು ನನಗೆ ಫೊನ್ ಮಾಡಿ ತಿಳಿಸಿದ್ದೇನೆಂದರೆ, ನಮ್ಮ ಅಪ್ಪ ಭಿಮರಾಯ ಈತನು ಹೊಲದಲ್ಲಿರುವ ನಮ್ಮ ಮನೆಯ ಹಿಂದಿನ ಬೇವಿನ ಗಿಡಕ್ಕೆ ಉರುಲು ಹಾಕಿಕೊಂಡಿದ್ದಾಗ ನಾನು ಚೀರಾಡಿ ಬಿಡಿಸಿಕೊಂಡಿದ್ದು ನೀನು ಬಾ ಅಂತ ತಿಳಿಸಿದಾಗ ಕೂಡಲೆ ನಾನು ಮನೆಗೆ ಬಂದು ನೋಡಲು ನನ್ನ ಗಂಡನು ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದರಿಂದ ಕುತ್ತಿಗೆ ಕೆಳಭಾಗಕ್ಕೆ ಹಾಗೂ ಎರಡು ಮಗ್ಗಲಿಗೆ ನೇಣು ಹಾಕಿಕೊಂಡ ಹಗ್ಗದ ಗುರುತು ಕಂಡಿದ್ದು ನನ್ನ ಗಂಡನು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲದೆ ಇರುವದರಿಂದ ಕೂಡಲೆ ಸದರಿಯವನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಸದರ ಆಸ್ಪತ್ರೆ ವೈದ್ಯರು ಬೇರೆ ಕಡೆ ಹೋಗುವಂತೆ ತಿಳಿಸಿದ ಪ್ರಕಾರ ನನ್ನ ಗಂಡನಿಗೆ ಹೆಚ್ಚಿನ ಉಪಚಾರ ಕುರಿತು ಬೇರೆಡೆ ಕರೆದುಕೊಂಡು ಹೋಗುವ ಕುರಿತು ಶಹಾಪುರ ಹತ್ತಿರ ಬರುತ್ತಿರುವಾಗ ನನ್ನ ಗಂಡನು ಬಹಳ ಸುಸ್ತಾಗಿದ್ದರಿಂದ ಕೂಡಲೆ ಶಹಾಪುರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ನನ್ನ ಗಂಡ ಭಿಮರಾಯ ಈತನು ಉಪಚಾರ ಫಲಿಸದೇ ಇಂದು ದಿನಾಂಕ: 25/09/2020 ರಂದು ಬೆಳಿಗ್ಗೆ 7.20 ಗಂಟೆಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು ಸದರಿ ನನ್ನ ಗಂಡನ ಸಾವಿನ ವಿಷಯದಲ್ಲಿ ನನ್ನದು ಯಾರ ಮೇಲೂ ಯಾವುದೇ ರೀತಿಯ ಸಂಶಯ ವಗೈರೆ ಇರುವದಿಲ್ಲ ನನ್ನ ಗಂಡನು ಸುಮಾರು 6 ತಿಂಗಳಿನಿಂದ ಮಾನಸಿಕವಾಗಿ ಬಳಲುತ್ತಿದ್ದವನು ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಬೇಜಾರುಮಾಡಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಕಾರಣ ತಾವು ಬಂದು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ 17/2020 ಕಲಂ 174 ಸಿಆರ್ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:-. 207/2020 ಕಲಂ 379 ಐಪಿಸಿ: ಇಂದು ದಿನಾಂಕ:25/09/2020 ರಂದು 4 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಫಿಯರ್ಾದಿ ಶ್ರೀ ಗಿರೀಶ್ ತಂದೆ ರಾಮರಾವ್ ಕುಲಕಣರ್ಿ ವ|| 48 ವರ್ಷ ಜಾ|| ಬ್ರಾಹ್ಮಣ ಉ|| ಒಕ್ಕಲುತನ ಸಾ|| ರಾಘವೇಂದ್ರ ಗುಡಿ ಹತ್ತಿರ ಮುಜಂದಾರ ಗಲ್ಲಿ ಸುರಪುರ ಇವರು ಠಾಣೆಗೆ ಬಂದು ಒಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ, ನನ್ನ ಕಪ್ಪು ಮಿಶ್ರಿತ ಗ್ರೇ ಬಣ್ಣದ ಹಿರೋ ಪ್ಯಾಶನ್  ಪ್ರೋ ಮೋಟರ ಸೈಕಲ್ ನಂಬರ ಏಂ-33-ಙ-5348ನೇದ್ದರ ಚೆಸ್ಸಿ ನಂಬರ. ಒಃಐಊಂಘ018ಏಊಉ02440, ಇಂಜಿನ್ ನಂಬರ ಊಂ10ಂಅಏಊಉ20887  ನೇದ್ದು ಇರುತ್ತದೆ. ಸದರಿ ಮೋಟರ ಸೈಕಲ್ ನನ್ನ ಕೆಲಸಕ್ಕೆ ಉಪಯೋಗ ಮಾಡಿಕೊಂಡಿರುತ್ತೆನೆ. ಹೀಗಿದ್ದು ದಿನಾಂಕ 10/08/2020 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನನ್ನ ಮೋಟರ್ ಸೈಕಲ್ ತೆಗೆದುಕೊಂಡು ನಾನು ಎಂದಿನಂತೆ ವಾಯು ವಿಹಾರಕ್ಕೆಂದು  ಟೇಲರ್ ಮಂಜಿಲ್ ಕಡೆಗೆ ಹೋಗಿ ಮರಳಿ ರಾತ್ರಿ 8 ಗಂಟೆ ಸುಮಾರಿಗೆ ನನ್ನ ಮೋಟರ್ ಸೈಕಲನ್ನು ಸುರಪುರ ಪಟ್ಟಣದ ರಾಘವೇಂದ್ರ ಗುಡಿ ಹತ್ತಿರ ಮುಜಂದಾರ ಗಲ್ಲಿಯಲ್ಲಿರುವ ನನ್ನ ಮನೆಯ ಹಿಂದುಗಡೆ ಖುಲ್ಲಾ ಜಾಗದಲ್ಲಿ ನಿಲ್ಲಿಸಿ, ಹ್ಯಾಂಡ್ ಲಾಕ್ ಮಾಡಿ ಮನೆಗೆ ಹೋಗಿರುತ್ತೇನೆ. ದಿನಾಂಕ: 11/08/2020 ರಂದು ಬೆಳಿಗ್ಗೆ 6 ಗಂಟೆಗೆ ಸುಮಾರಿಗೆ ಎಂದಿನಂತೆ ನಾನು ವಾಯುವಿಹಾರಕ್ಕೆ ಬೈಕ್ ತೆಗೆದುಕೊಂಡು ಹೋಗಬೇಕು ಅಂತಾ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನಿಲ್ಲಿಸಿದ್ದ ನನ್ನ ಬೈಕ್ ಇರಲಿಲ್ಲ. ಗಾಬರಿಯಾಗಿ ನಾನು ಮತ್ತು ನನ್ನ ಸಂಬಂಧಿಕನಾದ ಚಂದ್ರಕಾಂತ ತಂದೆ ಲಕ್ಷ್ಮೀಕಾಂತ ನಾಡಗೌಡ ಸಾ|| ರಾಘವೇಂದ್ರ ಗುಡಿ ಹತ್ತಿರ ಮುಜಂದಾರ ಗಲ್ಲಿ ಸುರಪುರ ಇಬ್ಬರು ಕೂಡಿ ಸುರಪುರ ನಗರದಲ್ಲಿ, ಸತ್ಯಂಪೇಟ್, ಗಾಂಧಿಚೌಕ್ ಹತ್ತಿರ, ಡೊಣ್ಣಿಗೇರಿ, ಕಬಡಾಗೇರಿ  ಮೇದಾರಗಲ್ಲಿ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟರ್ ಸೈಕಲ್ ಸಿಕ್ಕಿರುವದಿಲ್ಲ. ಇಂದು ತಡವಾಗಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೆನೆ.ಕಾರಣ ದಿನಾಂಕ 10/08/2020 ರಂದು ರಾತ್ರಿ 8 ಗಂಟೆಯಿಂದ ದಿನಾಂಕ: 11/08/2020 ರಂದು 6 ಎ.ಎಂ ದ ಮದ್ಯದ ಅವಧಿಯಲ್ಲಿ ನನ್ನ ಮನೆಯ ಹಿಂದುಗಡೆ ನಿಲ್ಲಿಸಿದ ನನ್ನ ಮೋಟರ ಸೈಕಲ್ ನಂಬರ ಏಂ-33-ಙ-5348 ಅಂ.ಕಿ 35,000=00 ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡುಹೋಗಿರುತ್ತಾರೆ. ಕಾರಣ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 207/2020 ಕಲಂ: 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!