ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/09/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 128/2020 ಕಲಂ 143, 147, 148, 323, 324, 341, 504, 506 ಸಂಗಡ 149 ಐಪಿಸಿ : ದಿನಾಂಕ 16-09-2020 ರಂದು 5-15 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಸೋನಿಬಾಯಿ ಗಂಡ ಗೋಬ್ರು ರಾಠೋಡ ವಯಾ:60 ಉ: ಹೋಲಮನೆಗೆಲಸ ಜಾ: ಲಂಬಾಣಿ ಸಾ:ಅಲ್ಲಿಪೂರ ವಾರಿ ತಾಂಡಾ ತಾ:ಜಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಾಂಡಾದಲ್ಲಿ ಈ ಮೊದಲು ಸರಕಾರದಿಂದ ಮೋರಿಯ ನೀರು ಹೋಗುವ ಸಲುವಾಗಿ ಚರಂಡಿ ಮಾಡಿದ್ದು, ಈ ಚರಂಡಿಯ ನೀರು ನಮ್ಮ ಮನೆಯ ಕಡೆಯಿಂದ ರಾಜು ತಂದೆ ಬಾಬು ಚವ್ಹಾಣ ಇವರ ಮನೆಯ ಕಡೆಗೆ ಹೋಗುತ್ತವೆ. ಚರಂಡಿಯಲ್ಲಿ ಮಣ್ಣು ಬಿದ್ದಿದ್ದರಿಂದ ಚರಂಡಿಯಿಂದ ನೀರು ಹೊರಬಂದು ರಾಜು ತಂದೆ ಬಾಬು ಚವ್ಹಾಣ ಇವರ ಮನೆಯ ಮುಂದುಗಡೆ ಬಂದಿದ್ದು ಇರುತ್ತದೆ. ಆಗ ರಾಜು ಮತ್ತು ಅವರ ಮನೆಯವರು ಚರಂಡಿಯಲ್ಲಿಯ ಮಣ್ಣು ತೆಗೆಯಿರಿ ಮೋರಿಯ ಹೊಲಸು ನೀರು ನಮ್ಮ ಮನೆಯ ಮುಂದುಗಡೆ ಬಂದು ರಸ್ತೆ ಹೋಲಸು ಆಗುತ್ತಿದೆ ಅಂತಾ ಹೇಳಿದಾಗ ನಾವು ಈ ಮಣ್ಣು ನಾವು ಹಾಕಿಲ್ಲಾ ಆದರೂ ತೆಗೆಯುತ್ತೆವೆ ಅಂತಾ ಅಂದರೂ ಕೂಡಾ ಅವರು ಈ ವಿಷಯದಲ್ಲಿ ನಮ್ಮ ಜೊತೆಯಲ್ಲಿ ತಕರಾರು ಮಾಡಿಕೊಂಡಿದ್ದರು. ಹೀಗಿದ್ದು ದಿನಾಂಕ 14-09-2020 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅದೇ ವಿಷಯದಲ್ಲಿ ತಮ್ಮ ಮನೆಯ ಮುಂದುಗಡೆ ಕುಳಿತು ಫಿರ್ಯಾಧಿಗೆ ಬೈಯ್ಯುತ್ತಿದ್ದಾಗ ಫಿರ್ಯಾಧಿಯು ಅದನ್ನು ಕೇಳಿದ್ದಕ್ಕೆ ಆರೋಪಿತರು ಫಿರ್ಯಾಧಿ ಮತ್ತು ಅವರ ಮಕ್ಕಳು ಸೊಸೆಗೆ ಬಡಿಗೆ ಮತ್ತು ಕೈಯಿಂದ ಹೊಡೆದು ಗುಪ್ತಗಾಯಗೊಳಿಸಿ ಜೀವದ ಭಯ ಹಾಕಿದ್ದ ಬಗ್ಗೆ ಫಿರ್ಯಾಧಿ ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 117/2020, ಕಲಂ, 323,354,504.506. ಸಂಗಡ 34 ಐ ಪಿ ಸಿ : ದಿನಾಂಕ: 16-09-2020 ಸಾಯಂಕಾಲ 04-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಪಿಯರ್ಾಧಿದಾರಳು ದಿನಾಂಕ: 15-09-2020 ರಂದು ಸಾಯಂಕಾಲ 06-00 ಗಂಟೆಗೆ ಚರ್ಚ ಹತ್ತಿರ ಹೋಗಿ ಆರೋಪಿತರಿಗೆ ನನ್ನ ಮಗನಿಗೆ ಆಗಾಗ ಯಾಕೆ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಕೂಡಿ ಲೆ ಸೂಳೆ ಅಂದು ಅವಾಚ್ಯವಾಗಿ ಬೈದು ಕೂದಲು ಹಿಡಿದು ಎಳದಾಡಿ ಕೈಯಿಂದ ಬೆನ್ನಿಗೆ ಹೊಡೆದು ಲೇ ಸೂಳೆ ಮಗಳೆ ನಿನ್ನ ಮಗ ಎನ ಚಾಜುವಂತ ಆನಾಲೆ ಅಂದು ಕೂದಲು ಹಿಡಿದು ನೆಲಕ್ಕೆ ಬಿಳಿಸಿ ಮನ ಬಂದಂತೆ ಹೊಡೆದು ನಿಮ್ಮದು ಊರಲ್ಲಿ ಬಹಳ ಸೊಕ್ಕು ಆಗಿದೆ ನಿಮಗೆ ಜೀವ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 118/2020 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 16-09-2020 ರಂದು ಸಾಯಂಕಾಲ 05-45 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಕೂಡ್ಲೂರ ಗ್ರಾಮದ ಆಂಜನೇಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 2500=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ ಒಂದು ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.117/2020 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 119/2020, ಕಲಂ, 323,324,354,504.506. ಸಂಗಡ 149 ಐ ಪಿ ಸಿ : ದಿನಾಂಕ: 16-09-2020 ಸಾಯಂಕಾಲ 06-30 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಪಿಯರ್ಾಧಿದಾರಳು ದಿನಾಂಕ: 15-09-2020 ರಂದು ಸಾಯಂಕಾಲ 06-00 ಗಂಟೆಗೆ ನಮ್ಮ ದೇವರಾಜ ಈತನು ಚರ್ಚ ಹತ್ತಿರ ಅಂಗಡಿಗೆ ಹೋಗುತ್ತಿರುವಾಗ ಆರೋಪಿತರು ಕೂಡಿಕೊಂಡು ಆತನಿಗೆ ಲೇ ಸೂಳೆ ಮಗನೆ ನಮ್ಮ ಮನೆ ಕಡೆ ಯಾಕೆ ಜಾಸ್ತಿ ಬರುತ್ತಲೆ ಸುಳೆ ಮಗನೆ ಅಂದು ಕೈಯಿಂದ ಮತ್ತು ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯಮಾಡಿದ್ದು ಆಗ ನಾನು ಮತ್ತು ನನ್ನ ಮಗ ಜಗಳದಲ್ಲಿ ಅಡ್ಡ ಹೊದಾಗ ನನಗೆ ಆರೋಪಿತರು ಕೈಯಿಂದ ಹೊಡೆ ಬಡೆ ಮಾಡಿ ಕೂದಲು ಹಿಡಿದು ಎಳದಾಡಿ ಸೀರೆಯ ಸೇರಗೂ ಹಿಡಿದು ಜಗ್ಗಿ ಅವಮಾನ ಮಾಡಿ ಲೇ ಸುಳೆ ಮಕ್ಕಳೆ ಇನ್ನೊಂದು ಸಲ ನಮ್ಮ ಮನೆಯ ಕಡೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 241/2020 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ 16/09/2020 ರಂದು ಸಾಯಂಕಾಲ 19-00 ಗಂಟೆಗೆ ಫಿರ್ಯಾದಿ ಶ್ರೀಮತಿ ಶಬಾನಾ ಬೇಗಂ ಗಂಡ ಮೊಹ್ಮದ ಆರೀಫ್ ಆಗ್ರಾ ವಯ 36 ವರ್ಷ ಜಾತಿ ಮುಸ್ಲಿಂ ಉಃ ಮನೆ ಕೆಲಸ ಸಾಃ ಜೈನಾ ಮಸೀದ ಹತ್ತಿರ ಆದಿಲಪೂರ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 13/09/2020 ರಂದು ಮುಂಜಾನೆ 09-45 ಗಂಟೆಯ ಸುಮಾರಿಗೆ ತನ್ನ ಗಂಡ ಮೊಹ್ಮದ ಆರೀಫ್ ಇವರು ದಿನನಿತ್ಯದಂತೆ ತಮ್ಮ ಗ್ಯಾರೇಜ್ ಕೆಲಸಕ್ಕೆ ಹೋದರು. ಸ್ವಲ್ಪ ಸಮಯದ ನಂತರ ಮುಂಜಾನೆ 10-10 ಗಂಟೆಯ ಸುಮಾರಿಗೆ ನಮಗೆ ಪರಿಚಯಸ್ಥನಾದ ಶಹಾಪೂರದ ಅಬ್ದುಲ್ ಇಫರ್ಾನ್ ತಂದೆ ಅಬ್ದುಲ್ ಕರಿಂ ಶೆರಖಾನ್ ಇವರು ಫೋನ್ ಮಾಡಿ ಹೇಳಿದ್ದೆನೆಂದರೆ, ನಾನು ಮತ್ತು ನನ್ನ ಗೆಳೆಯ ನಯಿಮ್ ಅಪ್ಘಾನ್ ತಂದೆ ಇನಾಯತ್ ರಹೆಮಾನ ಇಬ್ಬರೂ ಕೂಡಿ ನನ್ನ ಮೋಟರ ಸೈಕಲ್ ಮೇಲೆ ಚಾಂದ ಪೆಟ್ರೋಲ್ ಪಂಪಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋಗುತಿದ್ದಾಗ ಶಹಾಪೂರ-ಹತ್ತಿಗೂಡುರ ರೋಡಿನ ಮೇಲೆ ಶಹಾಪೂರ ನಗರದ ಇಂಡಸ್ಟ್ರೀಯಲ್ ಏರಿಯಾದ ಅಮಾನ್ ದಾಬಾದ ಹತ್ತಿರ ನಿಮ್ಮ ಗಂಡ ಮೊಹ್ಮದ ಆರೀಫ್ ಇವರು ರೋಡಿನ ಎಡ ಬದಿಗೆ ನಡೆದುಕೊಂಡು ಹೋಗುತಿದ್ದಾಗ ಮುಂಜಾನೆ 10-00 ಗಂಟೆಯ ಸುಮಾರಿಗೆ ಮೋಟರ ಸೈಕಲ್ ನಂ ಕೆಎ-33-ವಾಯ್-9935 ನೇದ್ದರ ಚಾಲಕ ಸೈಯದ ಮಹಿಬೂಬ ತಂದೆ ಸೈಯದ ಕುಂದಮೀರ ವಜೀರ್ ವಯ 36 ವರ್ಷ ಜಾತಿ ಮುಸ್ಲಿಂ ಮೋಟರ್ ಸೈಕಲ್ ನಂಬರ ಕೆಎ-33-ವಾಯ್-9935 ನೇದ್ದರ ಸವಾರ ಸಾಃ ಸಗರ(ಬಿ) ತಾಃ ಶಹಾಪೂರ ಈತನು ಹಿಂದಿನಿಂದ ಅಂದರೆ ಶಹಾಪೂರ ಕಡೆಯಿಂದ ತನ್ನ ಮೋಟರ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ಗಂಡನಿಗೆ ಡಿಕ್ಕಿ ಮಾಡಿದ್ದರಿಂದ ನಿಮ್ಮ ಗಂಡ ರೋಡಿನ ಮೇಲೆ ಬಿದ್ದಿದ್ದರಿಂದ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯವಾಗಿ ಎಡಕಿವಿಯಿಂದ ರಕ್ತ ಬಂದಿರುತ್ತದೆ. ಮತ್ತು ಎಡಭುಜಕ್ಕೆ ಗುಪ್ತಗಾಯವಾಗಿರುತ್ತದೆ. ನಾವು ಎಬ್ಬಿಸಿ ರೋಡಿನ ಬದಿಗೆ ಕೂಡಿಸಿದ್ದೇವೆ ನೀವು ಸ್ಥಳಕ್ಕೆ ಬನ್ನಿ ಅಂತ ತಿಳಿಸಿದ್ದರಿಂದ ಫಿಯರ್ಾದಿಯವರು ತನ್ನ ನಾದಿನಿಯ ಮಗ ವಸೀಂ ಇವರ ಜೊತೆಯಲ್ಲಿ ಅಪಘಾತವಾದ ಸ್ಥಳಕ್ಕೆ ಹೋಗಿ ತನ್ನ ಗಂಡನಿಗೆ ಆದ ಗಾಯಗಳನ್ನು ನೋಡಿ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಸದರಿ ಮೋಟರ ಸೈಕಲ್ ಸವಾರನವಿರುದ್ದ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 241/2020 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:-. 112/2020 ಕಲಂ 279 ಐ.ಪಿ.ಸಿ : ದಿನಾಂಕ: 15/09/2020 ರಂದು ರಾತ್ರಿ 11.30 ಗಂಟೆ ಸುಮಾರಿಗೆ ಮುಡಬೂಳ ಕೆಲಾನ ಬ್ರಿಜ್ ಮೇಲೆ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯಲ್ಲಿ ಲಾರಿ ನಂ ಕೆಎ:32, ಡಿ:1432 ನೇದ್ದರ ಚಾಲಕನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಕೆನಾಲ್ ಬ್ರಿಜ್ಜಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಲಾರಿಜಖಂಗೊಂಡಿರುತ್ತದೆ ಅಂತ ಅಜರ್ಿಯ ಸಾರಾಂಶವಿರುತ್ತದೆ.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ: 13/2020 ಕಲಂ : 174 ಸಿ.ಆರ್.ಪಿ.ಸಿ : ದಿನಾಂಕ:16.09.2020 ರಂದು 9:00 ಎ.ಎಮ್.ಕ್ಕೆ ಪಿಯರ್ಾದಿ ಜಟ್ಟೆಪ್ಪ ತಂದೆ ಹುಲಗಪ್ಪ ಹೊಸಮನಿ ಸಾ||ಏದಲಬಾವಿ ಇವರು ಠಾಣೆಯಲ್ಲಿ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೆನೇಂದರೆ ತಮ್ಮ ತಂದೆ-ತಾಯಿಗೆ ಮೂರು ಜನ ಗಂಡು ಮಕ್ಕಳಿದ್ದು ನಾವೆಲ್ಲರೂ ಬೇರೆ-ಬೇರೆಯಾಗಿದ್ದು ನನ್ನ ಪಾಲಿಗೆ ಬಂದ ಏದಬಾಯಿ ಸೀಮಾಂತರದ ಹೊಲದ ಸವರ್ೇ ನಂ.5 ರಲ್ಲಿಯ 2ಎಕರೆ 35ಗುಂಟೆ ಜಮೀನುದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಸಾಗಿಸುತ್ತಿದ್ದು ಇರುತ್ತದೆ. ನನಗೆ ಮಲ್ಲೇಶ ಹೊಸಮನಿ, ಸುರೇಶ ಹೊಸಮನಿ, ಹಣಮಂತ್ರಾಯ ಹೊಸಮನಿ ಅಂತಾ ಮೂರು ಜನ ಗಂಡುಮಕ್ಕಳಿದ್ದು ಅವರಲ್ಲಿಯ ಹಣಮಂತ್ರಾಯ ಹೊಸಮನಿ ವ|| 13ವರ್ಷ ಈತನು 7ನೇ ತರಗತಿಯನ್ನು ನಮ್ಮೂರ ಸಕರ್ಾರಿ ಶಾಲೆಯಲ್ಲಿ ವಿದ್ಯಾಭ್ಯಾಸ್ ಮಾಡುತ್ತಿದ್ದಾನೆ. ಹೀಗಿದ್ದು ದಿನಾಂಕ:15/09/2020 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನಾನು, ನನ್ನ ಹೆಂಡತಿ ಶಿವಮ್ಮ ನಮ್ಮೂರ ಸೀಮಾಂತರದಲ್ಲಿರುವ ನಮ್ಮ ಹೊಲದ ಸವರ್ೇ ನಂ.5ರಲ್ಲಿ ಕವಳಿ ಹೊಲದಲ್ಲಿ ಕೆಲಸ ಮಾಡಲು ಹೋಲಕ್ಕೆ ಹೋಗಿದ್ದು ನಂತರ ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನನ್ನ ಮಗನಾದ ಹಣಮಂತ್ರಾಯ ಹೊಸಮನಿ ವ|| 13ವರ್ಷ ಈತನು ನಾವು ಕೆಲಸ ಮಾಡುತ್ತಿದ್ದ ಕವಳಿ ಹೊಲಕ್ಕೆ ಬಂದು ಹೊಲದಲ್ಲಿ ನಮ್ಮ ಜೊತೆ ಕೆಲಸ ಮಾಡುತ್ತಿದ್ದನು. ನಂತರ ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನಾವೆಲ್ಲರೂ ಊಟ ಮಾಡಿ ಮದ್ಯಾಹ್ನ ಸುಮಾರು 3:00 ಗಂಟೆಯಿಂದ ಮತ್ತೆ ಕವಳಿ ಹೊಲದಲ್ಲಿ ಕೆಲಸ ಮಾಡಿದ್ದು ಇರುತ್ತದೆ. ನಮ್ಮ ಕವಳಿ ಹೊಲದಲ್ಲಿನ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಅಂದಾಜು 7:30 ಪಿಎಮ್ ಸುಮಾರಿಗೆ ಮನೆಗೆ ಬಂದೆವು. ಮನೆಗೆ ಬಂದ ನಂತರ ನನ್ನ ಹೆಂಡತಿ ಅಡುಗೆ ಮಾಡಿದ್ದು ನಾವು ರಾತ್ರಿ 8:30ರ ಸುಮಾರಿಗೆ ಊಟ ಮಾಡಿದ್ದು ಊಟ ಮಾಡುವ ಸಮಯಕ್ಕೆ ನನ್ನ ಮಗನು ಹಣಮಂತ್ರಾಯನು ಇರಲಿಲ್ಲ ಹೊರಗಡೆ ಬೇರೆಯವರ ಮನೆಗೆ ಹೋಗಿರಬಹುದು ಅಂತಾ ಭಾವಿಸಿ ನಾವು ಊಟ ಮಾಡಿದೆವು ನಂತರ ಸುಮಾರು ಸ್ವಲ್ಪ ಸಮಯ ಕಾಯ್ದಿರು ನಮ್ಮ ಮಗ ಹಣಮಂತ್ರಾಯನು ಬರಲಿಲ್ಲ ನಾವು ಹೊರಗಡೆ ಹೋಗಿ ಹುಡುಕಾಡಿ ಬಂದರು ಕಾಣಲಿಲ್ಲ ಮರಳಿ ಮನೆಗೆ ರಾತ್ರಿ 9:30 ಗಂಟೆಗೆ ಬಂದು ನನ್ನ ಮಗನು ದಿನಾಲು ಮಲಗುವ ಜಾಗದಲ್ಲಿ ನೋಡಲಾಗಿ ಅಲ್ಲಿಯೇ ಮಲಗಿದ್ದನು ನೋಡಲಾಗಿ ವಾಂತಿಮಾಡಿಕೊಂಡಿದ್ದು ಮಾತನಾಡಿಸಿದರೆ ಮಾತನಾಡಲಿಲ್ಲ ನೋಡಲಾಗಿ ನನ್ನ ಮಗನ ಬಲಗಾಲಿಗೆ ಹಾವಿನ ಹಲ್ಲು ಕಚ್ಚಿದ ಗಾಯದ ಗುರುತು ಕಂಡು ಬಂದಿದ್ದು ಇರುತ್ತದೆ. ನಂತರ ನನ್ನ ಮಗನಿಗೆ ನಾನು ಮತ್ತು ನಮ್ಮ ಸಂಬಂದಿಕರು ಕೂಡಿಕೊಂಡು ಮನೆಯಲ್ಲಿಯೇ ಸ್ವಲ್ಪ ಉಪಚಾರ ಮಾಡಿ ನಂತರ ನನ್ನ ಮಗನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ವೈದ್ಯಕೀಯ ಉಪಚಾರ ಕುರಿತು ರಾಜನಕೋಳುರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿದ್ದಾಗ ಮಾರ್ಗಮದ್ಯದಲ್ಲಿ ರಾತ್ರಿ 11:00 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಮೃತ ಪಟ್ಟ ನನ್ನ ಮಗನ ಶವವನ್ನು ಮರಳಿ ಮನೆಗೆ ತೆಗೆದುಕೊಂಡು ಬಂದು ಮನೆಯಲ್ಲಿಯೇ ಹಾಕಿದ್ದು ಇರುತ್ತದೆ. ನನ್ನ ಮಗನು ದಿನಾಂಕ:15/09/2020 ರಂದು ಮದ್ಯಾಹ್ನ 1:00 ಗಂಟೆಯಿಂದ 7:30 ಸಾಯಂಕಾಲ ಅವಧಿಯಲ್ಲಿ ನಮ್ಮ ಸಂಗಡ ನಮ್ಮೂರ ಸೀಮಾಂತರದಲ್ಲಿರುವ ಹೊಲದ ಸವರ್ೇ ನಂ.5ರಲ್ಲಿಯ ಕವಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದ್ದು ಈ ಬಗ್ಗೆ ನಮ್ಮ ಮಗನು ನಮಗೆ ವಿಷಯ ತಿಳಿಸಿಲ್ಲ ನಂತರ ನನ್ನ ಮಗನು ರಾತ್ರಿ ಮನೆಯಲ್ಲಿ ಅಸ್ವಸ್ಥಗೊಂಡು ವಾಂತಿಮಾಡಿಕೊಂಡಿದ್ದರಿಂದ ನಮಗೆ ವಿಷಯ ಗೊತ್ತಾಗಿದ್ದು ಉಪಚಾರಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗಮದ್ಯದಲ್ಲಿ ಮೃತಪಟ್ಟಿದ್ದು ನನ್ನ ಮಗನು ಹಾವು ಕಚ್ಚಿದ್ದರಿಂದ ಮರಣಹೊಂದಿದ್ದು ಈ ಬಗ್ಗೆ ಯಾರ ಮೇಲು ಸಂಶಯಾಸ್ಪದ ದೂರು ಇರುವುದಿಲ್ಲ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂ.13/2020 ಕಲಂ: 174 ಸಿಆರ್ಪಿಸಿ ಅಡಿಯಲ್ಲಿ ಯುಡಿಆರ್ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 200/2019 ಕಲಂ 20(ಎ)(ಬಿ) ಎನ್ಡಿಪಿಎಸ್ ಎಕ್ಟ್ 1985 : ಆರೋಪಿತನು ಶಖಾಪೂರ ಸಿಮಾಂತರದ ಸವರ್ೆ ನಂ: 29/01/1 ರಲ್ಲಿರುವ ತನ್ನ ಹೊಲದಲ್ಲಿನ ಹತ್ತಿ ಬೆಳೆಯಲ್ಲಿ ಅನಧಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದರಿಂದ ಫಿಯರ್ಾದಿದಾರರು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಇಂದು ದಿನಾಂಕ: 16/09/2020 ರಂದು 5-00 ಪಿಎಮ್ಕ್ಕೆ ದಾಳಿ ಮಾಡಿ ಅಂದಾಜು 850 ಗ್ರಾಂ ತೂಕದ ಒಟ್ಟು 2 ಹಸಿ ಗಾಂಜಾ ಗಿಡಗಳನ್ನು ವಶಪಿಡಿಸಿಕೊಂಡಿದ್ದು, ಸದರಿ ಹಸಿಗಾಂಜಾ ಒಟ್ಟು ಅಂದಾಜು ಕಿಮ್ಮತ್ತು 2550=00 ರೂ.ಗಳು ಇರುತ್ತದೆ. ಗಾಂಜಾಗಿಡಗಳನ್ನು ವಶಕ್ಕೆ ತೆಗೆದುಕೊಂಡು ಇದರ ಬಗ್ಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಓಡಿ ಹೋದ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.