ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/09/2020
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 104/2020 ಕಲಂ: 279,338 ಐಪಿಸಿ ಸಂ 187 ಐಎಮ್ವಿ ಎಕ್ಟ್ : ಇಂದು ದಿನಾಂಕ: 06/09/2020 ರಂದು 5-30 ಪಿಎಮ್ ಕ್ಕೆ ಶ್ರೀ ಬಲರಾಮ ತಂದೆ ಸುಬ್ಬಣ್ಣ ರಾಠೋಡ, ವ:46, ಜಾ:ಲಮ್ಮಾಣಿ, ಉ:ಒಕ್ಕಲುತನ ಸಾ:ಗುಂಡಳ್ಳಿ ತಾಂಡಾ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಸಲ್ಲಿಸಿದ್ದೆನಂದರೆ ನನ್ನ ಸಣ್ಣಮ್ಮನ ಮಗನಾದ ತಿಪ್ಪಣ್ಣ ತಂದೆ ಧನುಜ್ಯಾ ರಾಠೋಡ, ವ:43 ಸಾ:ಗುಂಡಳ್ಳಿ ಈತನು ನಿನ್ನೆ ದಿನಾಂಕ: 05/09/2020 ರಂದು ಬೆಳಗ್ಗೆ 11-45 ಗಂಟೆ ಸುಮಾರಿಗೆ ತನ್ನ ಹತ್ತಿ ಹೊಲಕ್ಕೆ ಕ್ರಿಮಿನಾಶಕ ಎಣ್ಣೆ ಸಿಂಪರಣೆ ಮಾಡಲು ಕ್ರಿಮಿನಾಶಕ ಎಣ್ಣೆ ತರುವ ನಿಮಿತ್ಯ ಖಾನಾಪೂರಕ್ಕೆ ಹೋಗಿ ಬರುತ್ತೇನೆ ಎಂದು ಮೋಟರ್ ಸೈಕಲ್ ನಂ. ಎಮ್.ಹೆಚ್ 46 ಎಸ್ 6514 ನೇದ್ದನ್ನು ತಾನೇ ಚಲಾಯಿಸಿಕೊಂಡು ಹೋದನು. ನಮ್ಮ ತಮ್ಮ ತಿಪ್ಪಣ್ಣ ಈತನು ಖಾನಾಪೂರ ಕಡೆ ಹೋದ ಕೆಲ ಹೊತ್ತಿನ ನಂತರ ಮದ್ಯಾಹ್ನ 12 ಗಂಟೆ ಸುಮಾರಿಗೆ ನಮ್ಮ ತಾಂಡಾದ ಬನ್ನಪ್ಪ ತಂದೆ ಧರ್ಮಣ್ಣ ಚಿನ್ನ ರಾಠೋಡ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಖಾನಾಪೂರದಿಂದ ಗುಂಡಳ್ಳಿ ತಾಂಡಾಕ್ಕೆ ಬರುತ್ತಿದ್ದಾಗ ಇದಿಗ 12 ಪಿಎಮ್ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಗುಂಡಳ್ಳಿ ಕೆರೆ ಒಡ್ಡಿನ ಮೇಲೆ ನಿಮ್ಮ ತಮ್ಮನಾದ ತಿಪ್ಪಣ್ಣ ಈತನು ಮೋಟರ್ ಸೈಕಲ್ ಮೇಲೆ ಖಾನಾಪೂರ ಕಡೆ ಬರುತ್ತಿದ್ದಾಗ ಎದುರುಗಡೆಯಿಂದ ಒಂದು ಇಂಡೊಫಾರಂ ಕಂಪನಿಯ ಟ್ರ್ಯಾಕ್ಟರ ನಂ. -ಇಲ್ಲ- ಇಂಜನ್ ನಂ. ಅ3286ಂ0110ಓಙ ಚೆಸ್ಸಿ ನಂ. ಏಓಙ3040000309ಅಒ ನೇದ್ದನ್ನು ಅದರ ಚಾಲಕ ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ಎಡಕ್ಕೆ ಕಟ್ ಹೊಡೆದು ತಿಪ್ಪಣ್ಣನಿಗೆ ಡಿಕ್ಕಿಪಡಿಸಿ, ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ. ನೀವು ಬೇಗನೆ ಬರ್ರಿ ಎಂದು ಹೇಳಿದಾಗ ನಾನು ಮತ್ತು ಇತರರು ಅಲ್ಲಿಂದ ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಮ್ಮ ತಿಪ್ಪಣ್ಣನಿಗೆ ಅಪಘಾತದಲ್ಲಿ ಎಡಗೈ ರಟ್ಟೆಗೆ ಭಾರಿ ಒಳಪೆಟ್ಟಾಗಿ ಎಲುಬು ಮುರಿದಿತ್ತು, ಎಡಗೈ ಹೆಬ್ಬೆರಳಿಗೆ ಭಾರಿಗಾಯವಾಗಿತ್ತು ಮತ್ತು ಕುತ್ತಿಗೆಗೆ ಭಾರಿ ಒಳಪೆಟ್ಟಾಗಿತ್ತು. ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ಬನ್ನಪ್ಪ ಈತನಿಗೆ ವಿಚಾರಿಸಿದಾಗ ಅವರು ಹೇಳಿದ್ದೇನಂದರೆ ನಾನು ಖಾನಾಪೂರದಿಂದ ಗುಂಡಳ್ಳಿ ತಾಂಡಾಕ್ಕೆ ಬರುತ್ತಿದ್ದಾಗ ಗುಂಡಳ್ಳಿ ಕರೆ ಒಡ್ಡಿನ ಮೇಲೆ 12 ಪಿಎಮ್ ಸುಮಾರಿಗೆ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ಎಡಕ್ಕೆ ಕಟ್ ಹೊಡೆದು ತಿಪ್ಪಣ್ಣನಿಗೆ ಡಿಕ್ಕಿಪಡಿಸಿ, ಟ್ರ್ಯಾಕ್ಟರನ್ನು ಅಲ್ಲಿಯೇ ಸೈಡಿಗೆ ನಿಲ್ಲಿಸಿ, ಓಡಿ ಹೋದನು. ಟ್ರ್ಯಾಕ್ಟರ ಕೇವಲ ಇಂಜನ ಇದ್ದು, ಅದಕ್ಕೆ ಟ್ರ್ಯಾಲಿ ಇರುವುದಿಲ್ಲ. ಸದರಿ ಟ್ರ್ಯಾಕ್ಟರ ಚಾಲಕನಿಗೆ ನಾನು ನೋಡಿದಲ್ಲಿ ಗುರುತಿಸುತ್ತೇನೆ ಎಂದು ಹೇಳಿದನು. ತಿಪ್ಪಣ್ಣನಿಗೆ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ವೈದ್ಯಾಧಿಕಾರಿಗಳು ಪ್ರಥಮ ಉಪಚಾರ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೇರೆ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಶಿಫಾರಸ್ಸು ಮಾಡಿರುತ್ತಾರೆ. ಸದರಿ ಯಾದಗಿರಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ಸದರಿ ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕರೆದುಕೊಂಡು ಹೋಗಿ ತೋರಿಸುವವರು ಯಾರು ಇಲ್ಲದ್ದರಿಂದ ಮತ್ತು ನಮ್ಮ ಹಿರಿಯರಿಗೆ ವಿಚಾರ ಮಾಡಬೇಕಾಗಿರುವುದರಿಂದ ನಾವು ನಂತರ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ಗಾಯಾಳು ತಿಪ್ಪಣ್ಣನಿಗೆ ಉಪಚಾರ ಕುರಿತು ರಾಯಚೂರು ರೀಮ್ಸ್ ಆಸ್ಪತೆಗೆ ಸೇರಿಕೆ ಮಾಡಿ, ನಮ್ಮ ಹಿರಿಯರಿಗೆ ವಿಚಾರ ಮಾಡಿ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇವೆ. ಕಾರಣ ಟ್ರ್ಯಾಕ್ಟರ ನಂ. -ಇಲ್ಲ- ಇಂಜನ್ ನಂ. ಅ3286ಂ0110ಓಙ ಚೆಸ್ಸಿ ನಂ. ಏಓಙ3040000309ಅಒ ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 104/2020 ಕಲಂ: 279,338 ಐಪಿಸಿ ಸಂ 187 ಐಎಮ್ವಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 20/2020 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ 06/09/2020 ರಂದು 16-00 ಗಂಟೆಗೆ ಪಿಯರ್ಾದಿ ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 29 ಜಾ|| ಲಿಂಗಾಯತ ಉ|| ಕೂಲಿ ಸಾ|| ಹಳಿಸಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ, ಶರಣು ತಂದೆ ಶಿವಪ್ಪ ಅಂಗಡಿ ವ|| 29 ಜಾ|| ಲಿಂಗಾಯತ ಉ|| ಕೂಲಿ ಸಾ|| ಹಳಿಸಗರ ಶಹಾಪೂರ ಇದು ತಮ್ಮಲ್ಲಿ ದೂರುನಿಡುವದೆನೆಂದರೆ ಇಂದು ದಿನಾಂಕ 06/09/2020 ರಂದು ಬೆಳಿಗ್ಗೆ 8-00 ಗಂಟೆಗೆ ಶಹಾಪೂರದ ಹಿರೇಮಠ ಪೆಟ್ರೊಲ ಬಂಕ ಹತ್ತಿರ ಕೆಲವುಜನರು ಗುಂಪಾಗಿ ನಿಂತ್ತಿದ್ದನ್ನು ನೋಡಿ ನಾನು ಹೋಗಿ ನೋಡಲಾಗಿ ಒಂದು ಗಂಡು ಶವವಿದ್ದು ಹತ್ತಿರ ಹೋಗಿ ನೋಡಲಾಗಿ ಅಂದಾಜು ವಯಸ್ಸು 60 ರಿಂದ 65 ವರ್ಷದ ವಯಸ್ಸಿನ ಗಂಡು ಶವವಿದ್ದು ಸದರಿಯವನು ಕೆಲವು ದಿನಗಳಿಂದ ಇಲ್ಲಿ ಬಿಕ್ಷೆ ಬಿಕ್ಷೆಬೆಡುತ್ತ ತಿರುಗಾಡುತಿದ್ದ, ಈತನು ನಿಶಕ್ತಿಯಿಂದ ವಯ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದು ಇತನ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲಾ, ಸದರಿ ವ್ಯಕ್ತಿಯು ಅಂದಾಜು ದಿನಾಂಕ 05/09/2020 ರಿಂದ 06/09/2020 ರ 08:00 ಎ.ಎಂ ದ ಒಳಗೆ ಮೃತಪಟ್ಟಿದ್ದು, ಸದರಿ ಗಂಡು ಶವದ ವೈಯಸ್ಸು ಅಂದಾಜು 60 ರಿಂದ 65 ವರ್ಷಗಳು ಇರುತ್ತದೆ. ವ್ಯಕ್ತಿಯು ನಿಶಕ್ತಿಯಿಂದ ವಯ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದು. ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಕಾರಣ ಮುಂದಿನ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ದೂರಿನ ಸಾರಾಂಶದ ಮೇಲಿಂದ ಠಾಣೆಯ ಯುಡಿಆರ್ ನಂ 20/2020 ಕಲಂ 174 ಸಿ,ಆರ್,ಪಿ,ಸಿ, ನೇದ್ದರಲ್ಲಿ ಯು.ಡಿ.ಆರ್. ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 07/2020 ಕಲಂ 174 ಸಿ.ಆರ್.ಪಿಸಿ : ಮೃತ ಲೋಕೇಶ ಈತನು ತನ್ನ ತಾಯಿಯ ಹೆಸರಿನಲ್ಲಿರುವ ಹೊಲ ಸವರ್ೆ ನಂ:90 ನೇದ್ದರಲ್ಲಿನ 3 ಎಕರೆ ಹೊಲವನ್ನು ಸಾಗುವಳಿ ಮಾಡಿದ್ದು ಹತ್ತಿ ಬೆಳೆ ಮಾಡಿರುತ್ತಾನೆ. ಹೊಲಕ್ಕೆ ಮತ್ತು ಸಂಸಾರಕ್ಕಾಗಿ ಖಾಸಗಿಯಾಗಿ ಸಾಲ ಮಾಡಿಕೊಂಡಿರುತ್ತಾನೆ. ಈ ಸಲ ಮಳೆ ಹೆಚ್ಚಾಗಿ ಬೆಳೆ ಹಾಳಾಗಿದ್ದರಿಂದ ಖಾಸಗಿಯಾಗಿ ಮಾಡಿಕೊಂಡ ಸಾಲದ ಬಾದೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನಿನ್ನೆ ದಿನಾಂಕ 05/09/2020 ರಂದು 2 ಪಿ.ಎಮ್. ಸುಮಾರಿಗೆ ತಮ್ಮ ಹೊಲದಲ್ಲಿ ವಿಷ ಸೇವನೆ ಮಾಡಿದ್ದರಿಂದ ವೈದ್ಯಕೀಯ ಉಪಚಾರ ಕುರಿತು ಜಿಜಿಹೆಚ ಶಹಾಪುರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಜಿಜಿಹೆಚ ಕಲಬುರಗಿಗೆ ತೆಗೆದುಕೊಂಡು ಹೊಗಿ ಸೇರಿಕೆ ಮಾಡಿದ್ದು ವೈದ್ಯಕೀಯ ಉಪಚಾರ ಫಲಕಾರಿಯಾಗದೇ ನಿನ್ನೆ ದಿನಾಂಕ:05/09/2020 ರಂದು ರಾತ್ರಿ 11.30 ಪಿ.ಎಮ್. ಸುಮಾರಿಗೆ ಮೃತಪಟ್ಟಿದ್ದು ಸದರಿಯವನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ವಗೈರೆ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:07/2020 ಕಲಂ 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 15/2020 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 06/09/2020 ರಂದು 04.20 ಪಿಎಮ್ ಕ್ಕೆ ಅಜರ್ಿದಾರರಾದ ಶ್ರೀ. ಮರೆಮ್ಮ ಗಂಡ ಹಣಮಂತ ಕಾಸಿರಾಜ ವಯಾ:34 ಉ: ಕೂಲಿ ಜಾ: ಬೇಡರ ಸಾ: ವನದುಗರ್ಾ ತಾ: ಶಹಾಪೂರ ಜಿ: ಯಾದಗಿರಿ. ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನಾನು ಮರೆಮ್ಮ ಗಂಡ ಹಣಮಂತ ಕಾಶಿರಾಜ ವಯಾ:40 ಉ: ಕೂಲಿ ಜಾ: ಬೇಡರ ಸಾ: ವನದುಗರ್ಾ ತಾ: ಶಹಾಪೂರ ಜಿ: ಯಾದಗಿರಿ. ಇದ್ದು ಈ ಮೂಲಕ ಅಜರ್ಿ ನೀಡುವದೇನಂದರೆ, ನನಗೆ ಸುಮಾರು 20 ವರ್ಷ ಗಳ ಹಿಂದೆ ಹಣಮಂತ ತಂದೆ ಸಂಜೀವಪ್ಪ ಕಾಶಿರಾಜ ಇವರೊಂದಿಗೆ ಮದುವೆ ಆಗಿದ್ದು, ನಮಗೆ 3 ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಗಂಡ ಮತ್ತು ನಾನು ಕೂಲಿ ಕೆಲಸ ಮಾಡಿಕೊಮಡು ಉಪಜೀವಿಸುತ್ತೇವೆ, ನನ್ನ ಗಂಡನು ಕೂಲಿ ಕೆಲಸ ಮಾಡಿಕೊಂಡು ಬಂದು ಪ್ರತಿ ದಿನ ಸರಾಯಿ ಕುಡಿದ ಒದಾರಾಡುವದು ಬೈಯುವದು ಮಾಡುತ್ತಿದ್ದ, ಬೆರೆಯವರೊಂದಿಗೆ ಯಾರಿಗೂ ಮಾತಾಡುತ್ತಿರಲಿಲ್ಲ, ಇತ್ತಿಚಿಗೆ 5-6 ವರ್ಷಗಳಿಂದ ಕುಡಿಯುವದು ಹೆಚ್ಚಿಗೆ ಮಾಡಿ ಸರಾಯಿ ಕುಡಿದು ಅಲ್ಲಿ ಇಲ್ಲಿ ಮಲಗುವದು ಮಾಡುತ್ತಿದ್ದ, ನಾವು ಹುಡುಕಾಡಿ ಸಿಕ್ಕರೆ ಮನೆಗೆ ಕರೆದುಕೊಂಡು ಬರುತ್ತಿದ್ದೇವು, ಸಿಗದಿದ್ದರೆ, 2-3 ದಿನ ಬಿಟ್ಟು ತಾನೆ ಬರುತ್ತಿದ್ದ, ನಮಗೂ ರೂಡಿಯಾಗಿತ್ತು, ಸರಾಯಿ ಕುಡಿದಾಗ ಆಗಾಗ ನಾನು ಸಾಯಿತಿನಿ ಅಂತಾ ಊರುಲು ಹಾಕಿಕೊಳ್ಳಲು ಹೋಗುತ್ತಿದ್ದ, ನಾವು 3-4 ಸಲ ಬಿಡಿಸಿಕೊಂಡಿದ್ದೇವು, ಒಂದು ಸಲ ಕೆನಾಲ ನೀರಲ್ಲಿ ಬಿದ್ದಿದ್ದ ದನ ಕುರಿ ಕಾಯುವವರು ಮೇಲೆ ಎತ್ತಿದ್ದರು, ಹೀಗಿದ್ದು, ಮೊನ್ನೆ ದಿನಾಂಕ: 04/09/2020 ರಂದು ಕೂಡ ಸಂಜೆಯ 05.00 ಪಿಎಂ ಸುಮಾರಿಗೆ ತುಂಬಾ ಸರಾಯಿ ಕುಡಿದು ಮನೆ ಕಡೆಗೆ ಬಂದಿದ್ದ ನಾವು ಮನೆಯಲ್ಲಿ ಕೂಡು ಅಂದರೂ ಕೇಳದೆ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದನು, ದಿನಾಂಕ: 04/09/2020 ರ ರಾತ್ರಿ ನನ್ನ ಗಂಡ ಹಣಮಂತ ಈತನು ಮನೆಗೆ ಬರಲಿಲ್ಲ ಆಗ ನಾವು ಊರಲ್ಲಿ ಅಲ್ಲಿ ಇಲ್ಲಿ ನೋಡಿದೆವು ಸಿಗಲಿಲ್ಲ, ಎಲ್ಲಿಯಾದರೂ ಮಲಗಿರಬಹುದು, ಬೆಳಿಗ್ಗೆ ಬರುತ್ತಾನೆ ಅಂತಾ ತಿಳಿದು ಸುಮ್ಮನಾದೆವು, ನಿನ್ನೆ ಕೂಡ ಮನೆಗೆ ಬರಲಿಲ್ಲ, ಹೀಗಾಗಿ ಇಂದು ದಿನಾಂಕ: 6/09/2020 ರಂದು ಬೆಳಿಗ್ಗೆಯಿಂದ ನಾನು ನನ್ನ ಮಗನಾದ ಭೀಮರಾಯ ತಂದೆ ಹಣಮಂತ್ ಕಾಶಿರಾಜ ಮತ್ತು ನಮ್ಮ ಭಾವನ ಮಗನಾದ ವೆಂಕಟೇಶ ತಂದೆ ಭೀಮಣ್ಣ ಕಾಶಿರಾಜ ಕೂಡಿಕೊಂಡು ನನ್ನ ಗಂಡನನ್ನು ಹುಡುಕುತ್ತಾ ಇದ್ದಾಗ ಎಸ್.ಬಿ.ಸಿ ಕೆನಾಲ ಬೋರುಕಾ ನಂ:01 ರ ಗೇಟಗೆ ಒಂದು ಗಂಡಸಿನ ಶವ ಬಂದಿರುತ್ತದೆ ಅಂತಾ ಸುದ್ದಿ ಗೋತ್ತಾಗಿ ನಾವು ಹೋಗಿ ನೋಡಲಾಗಿ ನನ್ನ ಗಂಡನ ಶವ ಇರುವದನ್ನು ನೋಡಿ ಗುರುತಿಸಿದೆವು, ನನ್ನ ಗಂಡನು ಅತೀಯಾಗಿ ಸರಾಯಿ ಕುಡಿದು ನಶೆಯಲ್ಲಿ ನೀರು ಕುಡಿಯಲು ಹೋಗಿ ಕೆನಾಲ ನೀರಲ್ಲಿ ಬಿದ್ದು ಮೃತಪಟ್ಟಿರುತ್ತಾನೆ, ನನ್ನ ಗಂಡನ ಸಾವಿನ ವಿಷಯದಲ್ಲಿ ಯಾರ ಮೇಲು ಯಾವುದೇರೀತಿಯ ಸಂಶಯ ಇರುವದಿಲ್ಲ. ದಿನಾಂಕ: 04/09/2020 ರಂದು 05.00 ಪಿಎಂ ಕ್ಕೆ ಮನೆಯಿಂದ ಹೋಗಿ ಇಂದು ದಿನಾಂಕ: 06/09/2020 ರಂದು 03.00 ಪಿಎಂ ಕ್ಕೆ ಶವವಾಗಿ ದೋರೆತಿದ್ದು ಈ ಮಧ್ಯದ ಅವಧಿಯಲ್ಲಿ ನನ್ನ ಗಂಡನು ಆಕಸ್ಮಿಕವಾಗಿ ಕೆನಾಲ ನೀರಲ್ಲಿ ಬಿದ್ದು ಮೃತಪಟ್ಟಿರುತ್ತಾನೆ. ಕಾರಣ ಮಾನ್ಯರವರು ನನ್ನ ಗಂಡನ ಸಾವಿನ ಬಗ್ಗೆ ಮುಮದಿನ ಕ್ರಮ ಜರುಗಿಸಲು ವಿನಂತಿ. ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 15/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 196/2020 ಕಲಂ: 279,338 ಐ.ಪಿಸಿ : ಇಂದು ದಿನಾಂಕಃ 06/09/2020 ರಂದು ಪಾಟೀಲ್ ಆಸ್ಪತ್ರೆ ಲಿಂಗಸುಗೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ಗಾಯಾಳು ಶ್ರೀ ಇಕ್ಬಾಲ್ ಅಹ್ಮದ ತಂದೆ ಹುಸೇನಸಾಬ ಸಾ: ಜಾಲಹಳ್ಳಿ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 05/09/2020 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ತಿಂಥಣಿ ಗ್ರಾಮದಲ್ಲಿರುವ ನನ್ನ ಮಾವನ ಮನೆಗೆ ಹೋಗಬೆಕೆಂದು ತಯಾರಾಗಿ ಜಾಲಹಳ್ಳಿಯಿಂದ ನನ್ನ ಮೋ.ಸೈಕಲ್ ನಂಬರ ಕೆ.ಎ 36 ಇ.ಪಿ 1764 ನೇದ್ದರ ಮೇಲೆ ತಿಂಥಣಿಬ್ರಿಜ್ಗೆ ಬಂದು ಅಲ್ಲಿ ನನಗೆ ಪರಿಚಯದ ತಿಂಥಣಿ ಗ್ರಾಮದ ಸಲೀಮಸಾಬ ಕಂಬಾರ ಹಾಗು ಭೀಮಣ್ಣ ಗಿರಣಿ ಇವರು ಭೇಟಿಯಾಗಿದ್ದರಿಂದ ನಾವು ಮೂವರು ಚಹಾ ಕುಡಿದೇವು. ನಂತರ ನಾನು ತಿಂಥಣಿ ಬ್ರಿಜ್ ದಿಂದ ನನ್ನ ಮೋ.ಸೈಕಲ್ ಮೇಲೆ ತಿಂಥಣಿ ಗ್ರಾಮದ ಕಡೆಗೆ ಲಿಂಗಸುಗೂರ-ಸುರಪೂರ ಮುಖ್ಯರಸ್ತೆಯ ಮೇಲೆ ಬಂಡೋಳ್ಳಿ ಕ್ರಾಸ್ ಸಮೀಪದ ಕೃಷ್ಣಾ ನದಿ ಸೇತುವೆ ಮೇಲೆ ಹೊರಟಿದ್ದಾಗ ಸುರಪೂರ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ 9-00 ಪಿ.ಎಮ್ ಸುಮಾರಿಗೆ ನನ್ನ ಮೋ.ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ನಾನು ಮೋ.ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಬಲಗಾಲು ಮೊಣಕಾಲು ಕೆಳಗಡೆ ಹಾಗು ಬಲಗೈ ಮೊಣಕೈ ಹತ್ತಿರ ಮುರಿದು ಭಾರಿ ಗಾಯಗಳಾಗಿರುತ್ತದೆ. ನನಗೆ ಅಪಘಾತಪಡಿಸಿದ ಕಾರ ಸ್ಥಳದಲ್ಲೆ ನಿಂತಾಗ ಅದರವ ನಂಬರ ನೋಡಿದ್ದು ಕೆ.ಎ 52 ಎಮ್ 0530 ಇರುತ್ತದೆ. ಕಾರ ಚಾಲಕನ ಹೆಸರು ವಿಚಾರಿಸಿದಾಗ ಮಹ್ಮದ ಉವೈಸ್ ಖಾನ್ ತಂದೆ ಸಮೀವುಲ್ಲಾ ಖಾನ್ ಸಾ: ಚಾಮರಾಜನಗರ ಅಂತ ತಿಳಿಸಿರುತ್ತಾನೆ. ಬಳಿಕ ನನ್ನ ಅಣ್ಣ ಜಿಲಾನಿ ಹಾಗು ಗಫೂರಸಾಬ ಇಬ್ಬರೂ ನನಗೆ 108 ಅಂಬ್ಯೂಲೇನ್ಸ್ ನಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಲಿಂಗಸುಗೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಪ್ರಥಮೋಪಚಾರ ಮಾಡಿಸಿಕೊಂಡು ಅಲ್ಲಿಂದ ಪಾಟೀಲ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತ ವಗೈರೆ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 196/2020 ಕಲಂ. 279, 338 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.