ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 31/08/2020

By blogger on ಸೋಮವಾರ, ಆಗಸ್ಟ್ 31, 2020

 




                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 31/08/2020                                                                                                                          

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 109/2020 ಕಲಂ 87 ಕೆ.ಪಿ ಎಕ್ಟ : ಇಂದು ದಿನಾಂಕ 31-08-2020 ರಂದು 5-35 ಪಿಎಮ್ ಕ್ಕೆ ಶ್ರೀ ವೆಂಕಟೇಶ ಡಿ.ವೈ.ಎಸ್.ಪಿ  ಶೋರಾಪೂರ ಉಪವಿಭಾಗ ಪ್ರಭಾರೆ ಯಾದಗಿರಿ ಉಪವಿಭಾಗ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪತ್ರದೊಂದಿಗೆ ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ ಇಂದು ದಿನಾಂಕ. 31-08-2020 ರಂದು 5-20 ಪಿಎಮ್ ಕ್ಕೆ ಯಾದಗಿರಿ ನಗರದಲ್ಲಿರುವಾಗ ತಮಗೆ ಮಾಹಿತಿ ಬಂದಿದ್ದೆನೆಂದರೆ  ಯಾದಗಿರಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯ ಯರಗೋಳ ಗ್ರಾಮದ ಸೀಮಾಂತರದ ಚಿಲಕಲ ಗುಡ್ಡದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಜೂಜುಕೋರರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸು ಕೊಳ್ಳುವಂತೆ ಜ್ಞಾಪನ ಪತ್ರದ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 109/2020 ಕಲಂ 87 ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. 

1) 24 ಜನ ಆರೋಪಿತರು

2) ನಗದು ಹಣ-3,80,430-00 ರೂ

3) 34 ಮೋಟಾರ ಸೈಕಲುಗಳು

4) 2 ಕಾರಗಳು

5) ಒಂದು ಅಟೋ

6) ಮೋಬೈಲುಗಳು-24



ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 73/2020 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:31/08/2020 ರಂದು 2:35 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ ದಿನಾಂಕ:31/08/2020 ರಂದು 2:35 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ದಿನಾಂಕ:31.08.2020 ರಂದು 11:30 ಎ.ಎಮ್.ಕ್ಕೆ ತಾವು ಠಾಣೆಯಲ್ಲಿದ್ದಾಗ ಕೊಡೇಕಲ್ಲದಲ್ಲಿನ ಗ್ರಾಮ ಪಂಚಾಯತ ಕಾಯರ್ಾಲಯದ ಮುಂದುಗಡೆ ಇರುವ ನಾರಾಯಣಪೂರ-ಹುಣಸಗಿ ಮುಖ್ಯ ರಸ್ತೆಯ ಪಕ್ಕದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1ರೂಪಾಯಿಗೆ 80ರೂಪಾಯಿ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿರುವುದಾಗಿ ಪೊಲೀಸ್ ಭಾತ್ಮಿದಾರರ ಮೂಲಕ ತಿಳಿದುಬಂದಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:73/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 5:20 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 1210/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 1) ಅಂಬ್ರೇಶ ತಂದೆ ನಿಜಲಿಂಗಪ್ಪ ಪಡಶೆಟ್ಟಿ ವ||38ವರ್ಷ ಜಾ||ಹಿಂದೂ ಲಿಂಗಾಯತ ಉ||ಒಕ್ಕಲುತನ ಸಾ|| ಕೊಡೇಕಲ್ಲ ತಾ|| ಹುಣಸಗಿ


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 72/2020 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:31/08/2020 ರಂದು 11:30 ಎ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ದಿನಾಂಕ:31.08.2020 ರಂದು ಮುಂಜಾನೆ 9:00 ಗಂಟೆಗೆ ತಾವು ಠಾಣೆಯಲ್ಲಿದ್ದಾಗ ಕೊಡೇಕಲ್ಲ ಗ್ರಾಮದಲ್ಲಿನ ಶ್ರೀ ಬಸವೇಶ್ವರ ವೃತ್ತದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1ರೂಪಾಯಿಗೆ 80ರೂಪಾಯಿ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿರುವುದಾಗಿ ಪೊಲೀಸ್ ಭಾತ್ಮಿದಾರರ ಮೂಲಕ ತಿಳಿದುಬಂದಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:72/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 2:30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 1700/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 1) ಸಂಗಣ್ಣ ತಂದೆ ಬಸಪ್ಪ ಪಡಶೆಟ್ಟಿ ವ||47ವರ್ಷ ಜಾ||ಹಿಂದೂ ಲಿಂಗಾಯತ ಉ||ಒಕ್ಕಲುತನ ಸಾ||ಕೊಡೇಕಲ್ಲ ತಾ|| ಹುಣಸಗಿ


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 94/2020  323, 324, 504, 506 ಸಂ: 149 ಐಪಿಸಿ : ಇಂದು ದಿನಾಂಕ: 31/08/2020 ರಂದು 12.30 ಪಿಎಂ ಕ್ಕೆ ಅಜರ್ಿದಾರ ಶ್ರೀ. ಮೈಹಿಬೂಬ ಗೌಸ್ ತಂದೆ ಮೋದಿನಸಾಬ ಕಬಡಿ ವ:28 ಉ: ವಕೀಲ ಜಾ: ಮುಸ್ಲಿಂ ಸಾ: ಗೋಗಿ ಕೆ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ನೀಡಿದ್ದು, ಅದರ ಸಾರಂಶ ಏನಂದರೆ, ನಮ್ಮ ಗ್ರಾಮದಲ್ಲಿ ನಮ್ಮ ಓಣಿಯ ಹುಡುಗರು ನಿನ್ನೆ ದಿನಾಂಕ:30/08/2020 ರಂದು ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದರಿಂದ ರಾತ್ರಿ ಅಂದಾಜು 10.30 ಪಿಎಂ ದಿಂದ 11.00 ಪಿಎಂ ಅವದಿಯಲ್ಲಿ ನಮ್ಮ ಗೋಗಿ ಕೆ ಗ್ರಾಮದ ಆಶ್ರಫ್ ಸಜ್ಜಾದೆ ರವರ ಮನೆಯ ಮುಂದೆ ಸೇರಿದ್ದೇವು, ಆ ಸಂದರ್ಭದಲ್ಲಿ ಮಾತಾಡುವಾಗ ಮಾತಿನ ಚಕಮಕಿ ಆಗಿದ್ದು, 1) ಫೈಯುಮ್ ಪಾಷಾ ತಂದೆ ಸೈಯದ್ ಮಹ್ಮದ ವಯಾ:30 ಜಾ: ಮುಸ್ಲಿಂ ಸಾ:ಗೋಗಿ ಕೆ 2) ಖಲಿಂ ತಂದೆ ಜಲಾಲಸಾಬ ವಯಾ: 20 ಉ: ವಿದ್ಯಾಥರ್ಿ ಜಾ: ಮುಸ್ಲಿಂ ಸಾ: ಗೋಗಿ ಕೆ 3) ಮೈಬೂಬ ತಂದೆ ಶಮರ್ೋದ್ದೀನ್ ಸಗರಿ ವ:25 ಉ: ಕಾರ ಡ್ರೈವರ ಜಾ: ಮುಸ್ಲಿಂ ಸಾ: ಗೋಗಿ ಕೆ, 4) ಶಫೀಕ ತಂದೆ ಅನಿಫ ಸಾಬ ವಯಾ:21 ಉ: ಗೌಂಡಿ ಜಾ: ಮುಸ್ಲಿಂ ಸಾ: ಗೋಗಿ ಕೆ, 5) ಖುಷರ್ಿದ್ ತಂದೆ ಬಾಬು ವಯಾ:24 ಉ: ಜೆಸಿಬಿ ಆಪರೇಟರ ಜಾ: ಮುಸ್ಲಿಂ ಸಾ: ಗೋಗಿ ಕೆ, 6) ಚಾಂದಪಾಷಾ ತಂದೆ ಖಾಜಾಸಾಬ ವಯಾ:23 ಉ: ಕೂಲಿ ಜಾ: ಮುಸ್ಲಿಂ ಸಾ: ಗೋಗಿ ಕೆ, 7) ಐಮದ್ ತಂದೆ ಚಂದಾಸಾಬ ವಯಾ:22 ಉ: ವ್ಯಾಪಾರ ಜಾ: ಮುಸ್ಲಿಂ ಸಾ: ಗೋಗಿ ಕೆ ಮತ್ತು ಇತರರು ಕೂಡಿ ಈ ನ್ಯಾಯ ಪಂಚಾಯತಿಯಲ್ಲಿ ನೀನು ಯಾಕೆ ಬಂದಿದ್ದಿ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈಯಿದು ಫೈಯುಮ್ ಪಾಷಾ ತಂದೆ ಸೈಯದ್ ಮಹ್ಮದ ಈತನು ಒಮ್ಮೆಲೆ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು, ಖಲಿಂ ತಂದೆ ಜಲಾಲಸಾಬ ಈವನು ನನ್ನ ಕಾಲಿಗೆ ಒದ್ದಿರುತ್ತಾನೆ.  ಆಗ ಉಳಿದವರೆಲ್ಲರೂ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದರು. ಅಷ್ಟರಲ್ಲಿ ಅಲ್ಲಿಯೇ ಇದ್ದ ಲಾಲಸಾಬ ತಂದೆ ಮೋದಿನಸಾಬ ಸಾ: ಗೋಗಿ ಕೆ, ಮೋದೀನ್ ತಂದೆ ಅಮೀನಸಾಬ ಸಾ: ಗೋಗಿ ಕೆ ಇವರುಗಳು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು, ಆಗ ಎಲ್ಲರೂ ಸೂಳೆ ಮಗನೆ ಇನ್ನೊಮ್ಮೆ ಈ ಕಡೆ ಬಂದರೆ ನಿನಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ನಾನು ರಾತ್ರಿ ಶಹಾಪುರ ಸರಕಾರಿ ಆಸ್ಪತ್ರೆಗೆ ಉಪಚಾರ ಮಾಡಿಕೊಂಡು ವಿಚಾರ ಮಾಡಿ ನಂತರ ಇಂದು ದಿನಾಂಕ:31/08/2020 ರಂದು 12.30 ಪಿಎಂ ಕ್ಕೆ ಠಾಣೆಗೆ ಬಂದು ಈ ದೂರು ನೀಡಿರುತ್ತೇನೆ.     ಕಾರಣ ನನಗೆ ಅವಾಚ್ಯವಾಗಿ ಬೈಯ್ದು ಬಡಿಗೆಯಿಂದ ಮತ್ತು ಕೈಯಿಂದ ಹೊಡೆದು ಕಾಲಿನಿಂದ ಒದ್ದು, ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ ಮೇಲಿನ 7 ಜನರು ಮತ್ತು ಇನ್ನು ಇತರರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 94/2020 ಕಲಂ, 323, 324, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 109/2020, ಕಲಂ, 143,147,148,323.324,354,504.506. ಸಂಗಡ 149 ಐ ಪಿ ಸಿ:  ದಿನಾಂಕ: 31-08-2020 ರಾತ್ರಿ 07-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ಪಿಯರ್ಾಧಿ ಮತ್ತು ಗಾಯಾಳುಗಳು  ತಮ್ಮ ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಮೋಹರಂ ಹಬ್ಬದ ಧಪನ್ ಇರುವ ಕಾರಣ ಕೈಯಲ್ಲಿ ಕಟ್ಟಿಗೆಯ ಬಡಿಗೆಗಳನ್ನು ಹಿಡಿದುಕೊಂಡು ಅಲೈ ಆಡುತ್ತ ಮನೆಯ ಹತ್ತಿರ ಬಂದು ಲೇ ಸೂಳೆ ಮಕ್ಕಳೆ ಮೊಹರಂ ಹಬ್ಬವನ್ನು ಈ ವರ್ಷ ಪೊಲಿಸರಿಗೆ ಹೇಳಿ ನೀವು ಬಂದ ಮಾಡಿಸಿರಲೇ ನಿಮಗೆ ಎಷ್ಟು ಸೋಕ್ಕು ಆದ ಮಕ್ಕಳೆ ಅಂತಾ ಬೈದು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿ ಕೈಯಿಂದ ಮನ ಬಂದಂತೆ ಮೈಗೆ ಗುದ್ದಿ ಗುಪ್ತ ಪೆಟ್ಟು ಮಾಡಿ ಹೆಣ್ಣುಮಗಳಿಗೆ ಕೂದಲು ಹಿಡಿದು ಎಳದಾಡಿ ಅವಮಾನ ಮಾಡಿ ಊರಲ್ಲಿ ಎನಾದರೂ ದಿಮಾಕು ಮಾಡಿದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆ ಮಕ್ಕಳೆ ಅಂತಾ  ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 133/2020 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 31/08/2020 ರಂದು 16.45 ಪಿ.ಎಮ್ ಕ್ಕೆ  ಹಣಮಂತಪ್ಪ ಪಿಎಸ್ಐ ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೆನೆಂದರೆ, ದಿನಾಂಕ: 31/08/2020 ರಂದು 02.30 ಗಂಟೆಗೆ ಸುಮಾರಿಗೆ ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರಿಗೆ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 02.45 ಪಿ.ಎಮ್ ಕ್ಕೆ ಹೊರಟು 3.00 ಪಿ.ಎಮ್ ಕ್ಕೆ ಕೆಂಭಾವಿ ಪಟ್ಟಣದ ಹನುಮಾನ ದೇವರ ಗುಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 3.05 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಶಂಕ್ರೆಪ್ಪ ತಂದೆ ಭೀಮಪ್ಪ ದೊಡಮನಿ ವ|| 28 ಜಾ|| ಮಾದರ ಉ|| ಕೂಲಿ ಸಾ|| ಕೆಂಭಾವಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1450/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 3.05 ಪಿ.ಎಮ್ ದಿಂದ 4.05 ಪಿ.ಎಮ್ ದವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ಹಾಗು ಸದರಿ ಹಣವನ್ನು ಕುಮಾರ ತಂದೆ ಜಟ್ಟೆಪ್ಪ ಬಸರಿಗಿಡ ಸಾ|| ಕೆಂಭಾವಿ ಈತನಿಗೆ ಕೊಡುತ್ತೇನೆ ಅಂತ ತಿಳಿಸಿದ್ದು  ನಂತರ ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 4.45 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು ಇರುತ್ತದೆ. ಸದರ ವರಧಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 19.00 ಪಿಎಮ್ ಕ್ಕೆೆ ಠಾಣೆ ಗುನ್ನೆ ನಂ 133/2020 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 132/2020 ಕಲಂ: 78(3) ಕೆಪಿ ಯಾಕ್ಟ : ಪಿರ್ಯಾದಿದಾರರಾದ ಶ್ರೀ ಸುದರ್ಶನರಡ್ಡಿ ಪಿಎಸ್ಐ(ಕಾಸು) ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದೆನೆಂದರೆ ಇಂದು ದಿನಾಂಕ: 31/08/2020 ರಂದು 12.30 ಗಂಟೆಗೆ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಲಗತ್ತಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿ ಹಾಗೂ ಪಂಚರನ್ನು ಕರೆಯಿಸಿ ಅವರಿಗೂ ಸಹ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 12.45 ಪಿ.ಎಮ್ ಕ್ಕೆ ಹೊರಟು 1.00 ಪಿ.ಎಮ್ ಕ್ಕೆ ಮಾಲಗತ್ತಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 1.05 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ವಿರೇಶ ತಂದೆ ಭೀಮಣ್ಣ ನಾಯ್ಕೋಡಿ ವ|| 25 ಜಾ|| ಕಬ್ಬಲಿಗ ಉ|| ಕೂಲಿ ಸಾ|| ಮಾಲಗತ್ತಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1950/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 1.05 ಪಿ.ಎಮ್ ದಿಂದ 2.05 ಪಿ.ಎಮ್ ದವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ವರದಿ ನೀಡಿದ್ದು, ಸದರ ವರಧಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 17.30 ಪಿಎಮ್ ಕ್ಕೆೆ ಠಾಣೆ ಗುನ್ನೆ ನಂ 132/2020 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿದ್ದು ಇರುತ್ತದೆ.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!