ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/08/2020

By blogger on ಸೋಮವಾರ, ಆಗಸ್ಟ್ 17, 2020



                     ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/08/2020                                                                                                                            

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 124/2020 ಕಲಂ 279, 337, ಐಪಿಸಿ : ಇಂದು ದಿನಾಂಕ 14.08.2020 ರಂದು ಬೆಳಿಗ್ಗೆ 6:00 ಗಂಟೆಗೆ ಫಿರ್ಯಾದಿ ಮತ್ತು ಆರೋಪಿತ ಹಾಗೂ ಗಾಯಾಳುದಾರರು ಹಾಗೂ ಇತರರು ಕೂಡಿಕೊಂಡು ತಮ್ಮ ಇನೋವಾ ಕಾರ್ ನಂಬರ ಟಿ.ಎಸ್.-05-ಇ.ಎಮ್-0369 ನೇದ್ದರಲ್ಲಿ ಧಾರವಾಡದಿಂದ ಹೈದ್ರಾಬಾದ ಯಾದಗಿರಿ ಮಾರ್ಗವಾಗಿ ಹೋಗುತ್ತಿದ್ದಾಗ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಖ್ಯೆ 16 ರ ಮೇಲೆ ಗಣಪೂರ ಗೇಟ್ ಹತ್ತಿರ ಕಾರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಎಡಕ್ಕೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಇಬ್ಬರಿಗೆ ಸಾಧಾ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 124/2020 ಕಲಂ: 279, 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ 13/2020  ಕಲಂ 174(ಸಿ) ಸಿಆರ್ಪಿಸಿ : ಇಂದು ದಿನಾಂಕ; 14/08/2020 ರಂದು 11.15 ಎ.ಎಮ್ ಕ್ಕೆ ಪಿರ್ಯಾದಿ ಶ್ರೀ ಸಣ್ಣಕೆಪ್ಪ ತಂದೆ ನಿಂಗಪ್ಪ ಪೂಜಾರಿ @ ಬೈಚಬಾಳ  ವಯಾ|| 35  ಜಾ|| ಕುರುಬರ  ಉ|| ಒಕ್ಕಲುತನ  ಸಾ|| ಮುದನೂರ [ಕೆ]  ತಾ|| ಹುಣಸಗಿ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ ಅಜರ್ಿ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಗೆ ನಾವು ಒಟ್ಟು ಮೂರು ಜನ ಮಕ್ಕಳಿದ್ದು ನನ್ನ ತಂದೆಯ  ಹೆಸರಿನಲ್ಲಿ  ಮುದನೂರ ಸೀಮಾಂತರದಲ್ಲಿ ಹೊಲ ಸವರ್ೆ ನಂಬರ 174 ರಲ್ಲಿ 2 ಎಕರೆ 35 ಗುಂಟೆ ಹೊಲವಿದ್ದು ಸದರಿ ಹೊಲದ ಕೃಷಿ ಚಟುವಟಿಕೆಯ ಸಲುವಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ ಮುದನೂರದಲ್ಲಿ 50,000/- ರೂ ಹಾಗು ಕೈಗಡವಾಗಿ 4 ಲಕ್ಷ ಸಾಲ ಮಾಡಿಕೊಂಡಿದ್ದು ಸದರಿ ಸಾಲ ಹಾಗೆಯೇ ಉಳಿದು ಸದರಿ ಸಾಲ ಹೇಗೆ ತಿರಿಸುವದು ಅಂತ ಚಿಂತೆ ಮಾಡುತ್ತಾ ಕುಳಿತುಕೊಳ್ಳುತ್ತಿದ್ದನು. ಹೀಗಿದ್ದು  ದಿನಾಂಕ: 08/08/2020 ರಂದು 9.00 ಎಎಮ್ ಕ್ಕೆ ನನ್ನ ತಂದೆಯವರು ಹೊರಗೆ ಹೋಗಿದ್ದು ನಂತರ 09.30 ಎಎಮ್ ಕ್ಕೆ ಯಾರೋ ನಮ್ಮ ಮನೆಗೆ ಫೊನ ಮಾಡಿ ನಮ್ಮ ತಂದೆ ಮುದನೂರ [ಕೆ] ಗ್ರಾಮದ ಹತ್ತಿರ ಬಸಪ್ಪ ಮಾದರ ಇವರ ಹೊಲದಲ್ಲಿನ ಗುಡಿಯ ಹತ್ತಿರ ಕ್ರೀಮಿನಾಶಕ ಔಷಧ ಸೇವಿಸಿದ್ದಾನೆ ಅಂತ ತಿಳಿಸಿದಾಗ ನಾನು ಗಾಬರಿಯಾಗಿ ಸದರಿ ಸ್ಥಳಕ್ಕೆ ಹೋಗಿ ನೋಡಲು ನಮ್ಮ ತಂದೆ ಸುಸ್ತಾಗಿ ಮಲಗಿಕೊಂಡಿದ್ದು ಕೂಡಲೇ ನಮ್ಮ ತಂದೆಗೆ ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಬಿ ಎಲ್ ಡಿ ಈ ಆಸ್ಪತ್ರೆ ವಿಜಯಪೂರಕ್ಕೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಸದರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ನಮ್ಮ ತಂದೆ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ 14.08.2020 ರಮದು ಬೆಳಿಗ್ಗೆ 09.02 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ನನ್ನ ತಂದೆಯು ಕೃಷಿ ಚಟುವಟಿಕೆ ಸಲುವಾಗಿ ಹಾಗೂ ಸಂಸಾರದ ಅಡಚಣೆಗಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ ಮುದನೂರದಲ್ಲಿ 50,000/- ರೂ ಸಾಲ ಹಾಗು ಊರಲ್ಲಿ ಕೈಗಡವಾಗಿ 4 ಲಕ್ಷ ಸಾಲ ಮಾಡಿಕೊಂಡು ಸದರ ಸಾಲ ಹೇಗೆ ತೀರಿಸುವದು ಅಂತ ಮಾನಸಿಕವಾಗಿ ನೊಂದು ಕ್ರೀಮಿನಾಶಕ ಔಷಧ ಸೇವಿಸಿ ಮೃತಪಟ್ಟಿದ್ದು  ತಾವು ಬಂದು ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ 13/2020 ಕಲಂ 174 ಸಿಆರ್ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 220/2020 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 14/08/2020  ರಂದು ರಾತ್ರಿ 20-30 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಹಿರೇಮಠ್  ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ  ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 14/08/2020  ರಂದು ಸಾಯಂಕಾಲ 17-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರನಗರದ ಗಂಗಾ ನಗರ ಏರಿಯಾದಲ್ಲಿರುವ ಬಲಭೀಮೇಶ್ವರ  ಕಟ್ಟೆಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 60/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿಮಾಡಿಕೊಂಡು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಸಾಯಂಕಾಲ 17-50 ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಸಾಯಂಕಾಲ 18-35 ಗಂಟೆಗೆ ದಾಳಿ ಮಾಡಿ  ಆರೋಪಿ ಹುಸನಯ್ಯ ತಂದೆ ನಿಂಗಯ್ಯ ಕಲಾಲ್ ವಯ 30 ವರ್ಷ ಜಾತಿ ಈಡಿಗ ಉಃ ಮಟಕಾ ಅಂಕಿ ಬರೆದುಕೊಳ್ಳುವದು ಸಾಃ ಇಬ್ರಾಹಿಂಪೂರ ತಾಃ ಶಹಾಪೂರ ಜಿಃ ಯಾದಗಿರಿ ಈತನಿಂದ ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು 18-40 ಗಂಟೆಯಿಂದ 19-40 ಗಂಟೆಯ ಅವಧಿಯಲ್ಲ್ಲಿ ಬಿದಿಯ ಮತ್ತು ಜೀಪಿನ ಲೈಟಿನ  ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿರುತ್ತದೆ. ಸದರಿ  ಆರೋಪಿತನ ವಿರುದ್ದ  ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 220/2020 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 29/2020 ಕಲಂ: 107 ಸಿ.ಆರ್.ಪಿ.ಸಿ : ಮಾನ್ಯರವರವರಲ್ಲಿ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಸಾಹೆಬಗೌಡ ಎಂ. ಪಾಟೀಲ್ ಪಿ.ಐ.  ಸುರಪುರ ಪೊಲೀಸ್ ಠಾಣೆ ಇಂದು ದಿನಾಂಕ:14-08-2020 ರಂದು ಬೆಳಿಗ್ಗೆ 9 ಗಂಟೆಗೆ ನಾನು ಮತ್ತು ಠಾಣೆಯ ಸಿಬ್ಬಂದಿ ಶ್ರೀ ಬಸವರಾಜ ಹೆಚ್ಸಿ-09 ಇವರನ್ನು ಸಂಗಡ ಕರೆದುಕೊಂಡು 10 ಎ.ಎಂ. ಸುಮಾರಿಗೆ ಹಳ್ಳಿಭೇಟಿ ಕುರಿತು ಹಂದ್ರಾಳ ಗ್ರಾಮಕ್ಕೆ ಬೇಟಿ ನೀಡಿದ ಸಮಯದಲ್ಲಿ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿ ಏನೆಂದರೆ ಹಂದ್ರಾಳ ಸೀಮಾಂತರದ ಹೊಲ ಸವರ್ೆ ನಂ. 5 ಮತ್ತು 7 ನೇದ್ದರ ಹೋಲದಲ್ಲಿ ದಾರಿ (ಮಾರ್ಗ)ಯ ವಿಷಯದಲ್ಲಿ ಒಂದನೆ ಪಾಟರ್ಿ ಹಾಗೂ ಎರಡನೆ ಪಾಟರ್ಿಯ ಜನರು ಗ್ರಾಮದಲ್ಲಿ ಗುಂಪುಕಟ್ಟಿಕೊಂಡು ತಮ್ಮ ತಮ್ಮಲ್ಲಿ ವೈಷ್ಯಮ್ಯ ಮಾಡಿಕೊಂಡು ತಿರುಗಾಡುತ್ತಿದ್ದು, ಸದರಿಯವರಿಗೆ ಹೀಗೆ ಬಿಟ್ಟರೆ ಇಂದಿಲ್ಲಾ ನಾಳೆ ಒಬ್ಬರಿಗೋಬ್ಬರು ಹೊಡೆದಾಟ ಬಡೆದಾಟ ಮಾಡಿಕೊಂಡು ಆಸ್ತಿ ಪಾಸ್ತಿ ಹಾನಿ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡುವ ಸಂಬವ ಹೆಚ್ಚಾಗಿರುತ್ತದೆ  ಅಂತಾ ತಿಳಿದು ಬಂದ ಮಾಹಿತಿ ಮೇರೆಗೆ  ಸಾರ್ವಜನಿಕ ಶಾಂತತಾ ಕಾಪಾಡುವ ದೃಷ್ಟಿಯಿಂದ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 29/2020 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕಾರಣ ಮಾನ್ಯರವರು ಸದರಿ ಎದುರುದಾರರನ್ನು ಕರೆಯಿಸಿ ಅವರಿಂದ ಕಲಂ: 116 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಇಂಟೇರಿಯಮ್ ಬಾಂಡ ಬರೆಯಿಸಿಕೊಳ್ಳಲು ವಿನಂತಿ 

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!