ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/08/2020

By blogger on ಶನಿವಾರ, ಆಗಸ್ಟ್ 8, 2020

 

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/08/2020                                                                                                                             

ವಡಗೇರಾ  ಪೊಲೀಸ ಠಾಣೆ ಗುನ್ನೆ ನಂ:- 143, 147, 504, 341, 323 ಸಂ 149 ಐಪಿಸಿ : ದಿನಾಂಕ: 08/08/2020 ರಂದು 12-30 ಪಿಎಮ್ ಕ್ಕೆ ಶ್ರೀಮತಿ ಭೀಮವ್ವ ಗಂಡ ದ್ಯಾವಪ್ಪ ಹಳೆ ಪೊಲೀಸ ಗೌಡ್ರು, ವ:50, ಜಾ:ಕಬ್ಬಲಿಗ, ಉ:ಪಾನಪಟ್ಟಿ ವ್ಯಾಪಾರ ಸಾ:ಹಂಚನಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಹಂಚನಾಳ ಗ್ರಾಮದಲ್ಲಿ ಸಣ್ಣ ಪಾನ ಡಬ್ಬಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ಹೀಗಿದ್ದು ದಿನಾಂಕ: 06/08/2020 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ನನ್ನ ಪಾನಡಬ್ಬಿ ಬಂದ ಮಾಡಿಕೊಂಡು ಮನೆಗೆ ಹೋಗುವ ಸಿದ್ದತೆ ನಡೆಸುತ್ತಿದ್ದಾಗ ನಮ್ಮೂರ ಹಣಮಗೌಡ ತಂದೆ ದೇವಿಂದ್ರಪ್ಪಗೌಡ ನೀಲನೋರ, ಜಾ:ಕಬ್ಬಲಿಗ ಈತನು ಬಂದು ನನಗೆ ಸೇದಲು ಒಂದು ಕಟ್ಟಾ ಬೀಡಿ ಕೊಡು ಎಂದು ಕೇಳಿದಾಗ ನಾನು ದುಡ್ಡು ಕೊಡು ಅಂದೆ, ಆಗ ಅವನು ದುಡ್ಡು ಇಲ್ಲ ನಾಳೆ ಕೊಡುತ್ತೇನೆ ಅಂತಾ ಹೇಳಿದನು. ಆಗ ನಾನು ಈಗ ಪಾನಡಬ್ಬಿ ಮುಚ್ಚುವ ಟೈಮ ಆಗ್ಯಾದ ಉದ್ರಿ ಕೊಡಲ್ಲ ಅಂತಾ ಅಂದಾಗ ಎಲೆ ಸೂಳೆ ನನಗೆ ಉದ್ರಿ ಕೊಡಲ್ಲ ಅಂತಿ ಅಂತಾ ಅವಾಚ್ಯ ಬೈಯುತ್ತಿದ್ದನು. ಆದರು ನಾನು ನನ್ನ ಪಾನ ಡಬ್ಬಿ ಮುಚ್ಚಿ ಮನೆ ಕಡೆ ಹೋಗುತ್ತಿದ್ದವಳಿಗೆ ಹಣಮಗೌಡನ ಮನೆ ಹತ್ತಿರ 1) ಹಣಮಗೌಡ ತಂದೆ ದೇವಿಂದ್ರಪ್ಪಗೌಡ ನೀಲನೋರ, 2) ದೇವಿಂದ್ರಮ್ಮ ಗಂಡ ಹಣಮಗೌಡ ನೀಲನೋರ, 3) ಶಂಕ್ರೆಪ್ಪ ತಂದೆ ದೇವಿಂದ್ರಪ್ಪ ನೀಲನೋರ, 4) ಮರಿಲಿಂಗಮ್ಮ ಗಂಡ ದೇವಿಂದ್ರಪ್ಪ ನೀಲನೋರ, 5) ರೆಡ್ಡಿ ತಂದೆ ಮಲ್ಲಪ್ಪ ನೀಲನೋರ, 6) ಬಸಮ್ಮ ಗಂಡ ಶಂಕ್ರೆಪ್ಪ ನೀಲನೋರ ಎಲ್ಲರೂ ಜಾ:ಕಬ್ಬಲಿಗ ಸಾ:ಹಂಚನಾಳ ಇವರೆಲ್ಲರೂ ಸೇರಿ ಅಕ್ರಮಕೂಟ ಕಟ್ಟಿಕೊಂಡು ಬಂದು ನನಗೆ ತಡೆದು ನಿಲ್ಲಿಸಿದರು. ದೇವಿಂದ್ರಮ್ಮ ಇವಳು ನನಗೆ ಎಲೆ ಬೊಸುಡಿ ನನ್ನ ಗಂಡನಿಗೆ ಬೀಡಿ ಉದ್ರಿ ಕೊಡು ಎಂದರೆ ಕೊಟ್ಟಿಲ್ಲ ಅಂತಾ ಸೂಳಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಬಸವಿ ಎಂದು ಅವಾಚ್ಯ ಬೈದು ಜಗಳ ತೆಗೆದು ನನ್ನ ತೆಲೆ ಮೇಲಿನ ಕೂದಲೂ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದು ನನಗೆ ಕೆಳಗೆ ಕೆಡವಿದಳು. ಮರಿಲಿಂಗಮ್ಮ ಮತ್ತು ಬಸಮ್ಮ ಇಬ್ಬರೂ ಬಂದು ನನಗೆ ಕಾಲಿನಿಂದ ಸೊಂಟಕ್ಕೆ, ಪಕ್ಕೆಗಳಿಗೆ ಒದ್ದರು. ಉಳಿದವರು ಈ ಸೂಳಿ ಪಾನ ಡಬ್ಬಿ ವ್ಯಾಪಾರ ಮಾಡಿ ಸೊಕ್ಕಿಗೆ ಬಂದಾಳ ಇವಳ ಸೊಕ್ಕು ಮುರಿಯಬೇಕು ಎಂದು ಬಾಯಿಗೆ ಬಂದಂಗೆ ಅವಾಚ್ಯ ಬೈದರು. ಆಗ ಜಗಳವನ್ನು ಅಲ್ಲಿಯೇ ಇದ್ದ ಹಣಮಂತ್ರಾಯ ತಂದೆ ಭೀಮರಾಯ ನೀಲಪ್ಪನೋರ ಮತ್ತು ಮಲ್ಲಮ್ಮ ಗಂಡ ನಿಂಗಪ್ಪ ನೀಲಪ್ಪನೋರ ಇವರುಗಳ ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಇಲ್ಲದಿದ್ದರೆ ನನಗೆ ಇನ್ನು ಹೊಡೆಯುತ್ತಿದ್ದರು. ಕಾರಣ ಬೀಡಿ ಉದ್ರಿ ಕೊಡಲ್ಲ ಎಂದು ಹೇಳಿದ್ದಕ್ಕೆ ಜಗಳ ತೆಗೆದು ನನಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು ಕೈಯಿಂದ ಹೊಡೆದು, ಕಾಲಿನಿಂದ ಒದ್ದಿರುವ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದಿದ್ದು, ಅಂತಹ ಪೆಟ್ಟುಗಳಾಗಿಲ್ಲದ ಕಾರಣ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಕೊಟ್ಟ ದೂರು ಅಜರ್ಿ ನಿಜವಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 91/2020 ಕಲಂ: 143, 147, 504, 341, 323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 93/2020 ಕಲಂ 279 ಐ.ಪಿ.ಸಿ : ದಿನಾಂಕ: 07/08/2020 ರಂದು 7.30 ಪಿ.ಎಮ್ ಸುಮಾರಿಗೆ ಸಾದ್ಯಾಪುರ ಕ್ರಾಸ್ ಹತ್ತಿರ ಫಿಯರ್ಾದಿಯು ತನ್ನ ಹೀರೋ ಪ್ಯಾಶನ್ ಪ್ರೋ ಮೋ.ಸೈಕಲ್ ನಂ:ಕೆಎ-33, ವೈ-7765 ನೇದ್ದನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ತನ್ನ ಮಾವನೊಂದಿ ಕ್ರಾಸ್ ಹತ್ತಿರ ಇರುವ ಚಹಾ ಹೊಟೆಲದಲ್ಲಿ ಕುಳಿತು ಮಾತನಾಡುತ್ತಿರುವಾಗ ಆರೋಪಿತನು ಕಲಬುರಗಿ ಕಡೆಯಿಂದ ತನ್ನ ಕ್ಯಾಂಟರ್ ನಂ:ಎಮ್.ಹೆಚ್-14, ಜಿಯು-7669 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಮೋ.ಸೈಕಲ್ ಜಖಂ ಗೊಳಿಸಿದ ಬಗ್ಗೆ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 94/2020 ಕಲಂ 87 ಕೆಪಿ ಯ್ಯಾಕ್ಟ: ಇಂದು ದಿನಾಂಕ 08/08/2020 ರಂದು 5.30 ಪಿ.ಎಮ್.ಕ್ಕೆ ಮದ್ರಕಿ ಸೀಮಾಂತರದಲ್ಲಿನ ಗೌಡಪ್ಪಗೌಡ ಮಕದಮ್ ಪಾಟಿಲ್ ಇವರ ಹೊಲದಲ್ಲಿನ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಮಾನ್ಯ ಎಸ್.ಪಿ. ಸಾಹೇಬರು ಯಾದಗಿರಿ, ಮಾನ್ಯ ಪಿ.ಐ, ಡಿಸಿಐಬಿ ಯಾದಗಿರಿ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 07.45 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 09 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 14,200/- ರೂ, 52 ಇಸ್ಪೇಟ ಎಲೆಗಳು, 8 ಮೋಟರ್ ಸೈಕಲಗಳು, 9 ಮೊಬೈಲಗಳನ್ನು 07.45 ಪಿ.ಎಮ್ ದಿಂದ 08.45 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 125/2020 ಕಲಂ 341,323,324,504,506 ಸಂಗಡ 34 ಐ.ಪಿ.ಸಿ : ನಿನ್ನೆ ದಿನಾಂಕ: 07/08/2020 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಸಿಂದಗಿ ಸರಕಾರಿ ಆಸ್ಪತ್ರೆಯಿಂದ ಎಮ್ಎಲ್ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಇಂದು ದಿನಾಂಕ .08/08/2020 ರಂದು ಸಿಂದಗಿ ಸರಕಾರಿ  ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀ ಪರಶುರಾಮ ತಂದೆ ಭೀಮರಾಯ ಜಾಲಹಳ್ಳಿ ವ|| 36 ಜಾ|| ಕುರುಬರ ಉ|| ಒಕ್ಕಲುತನ ಸಾ|| ನೀರಲಗಿ ತಾ|| ತಾಳಿಕೋಟಿ ಜಿಲ್ಲಾ: ವಿಜಯಪೂರ ಇವರು ಹೇಳಿಕೆ  ನೀಡಿದ ಸಾರಾಂಶವೆನೆಂ ದರೆ ನಮ್ಮೂರಲ್ಲಿ ರೆಡ್ಡಿ ಮತ್ತು ಪ.ಜಾತಿಯವರಿಗೆ 2-3 ದಿನಗಳ ಹಿಂದೆ ನಮ್ಮೂರಲ್ಲಿ ಜಗಳವಾಗಿ ರೆಡ್ಡಿ ಜನಾಂಗದವರ ಮೇಲೆ ಕೇಸ್ ದಾಖಲಾಗಿದ್ದು ಸದರಿ ಕೇಸಿನಲ್ಲಿ ನನಗೆ ಸಾಕ್ಷಿ ಹಾಕಿದ್ದರಿಂದ ರೆಡ್ಡಿ ಜನಾಂಗದವರು ನನ್ನ ಮೇಲೆ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ದಿನಾಂಕ 03/08/2020 ರಂದು ನಾನು ವಯಕ್ತಿಕ ಕೆಲಸ ನಿಮಿತ್ಯ ಕೆಂಭಾವಿಗೆ ಬಂದು ಆಲ್ದಾಳ ಸಿಮಾಂತರದಲ್ಲಿರುವ ನಮ್ಮ ಜಮೀನಕ್ಕೆ ಆಲ್ದಾಳ-ತಳ್ಳಳ್ಳಿ(ಬಿ) ಮದ್ಯದಲ್ಲಿ ಹೋಗುತ್ತಿರುವಾಗ ನಮ್ಮೂರ ರೆಡ್ಡಿ ಜನಾಂಗದವರಾದ 1) ಸಿದ್ದನಗೌಡ ತಂದೆ ಬಸನಗೌಡ 2) ರವಿ ತಂದೆ ಗುರಣ್ಣ ಯಾಳವಾರ 3) ರಾಜು @ ಹಣಮಂತ್ರಾಯ ತಂದೆ ನಿಂಗನಗೌಡ ಜಲಪೂರ ಮತ್ತು 4) ಬಸವಂತ್ರಾಯಗೌಡ ತಂದೆ ಮಲ್ಲನಗೌಡ ಹೊಸಮನಿ ಇವರೆಲ್ಲರೂ ಕೂಡಿ ಬಂದು ನನಗೆ ತಡೆದು ನಿಲ್ಲಿಸಿ ಏನಲೇ ಸೂಳೆ ಮಗನೆ ನೀನು ನಮ್ ವಿರುದ್ದ ಸಾಕ್ಷಿ ಹೇಳುತ್ತಿ ಅಂತಾ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆ-ಬಡೆ ಮಾಡಿದ್ದು, ಅಲ್ಲದೇ ಅಲ್ಲಿಯೇ ಇದ್ದ ಕಲ್ಲಿನಿಂದ ಪಿರ್ಯಾದಿ ಹಣೆಗೆ, ಹುಬ್ಬಿಗೆ, ಎಡಕಣ್ಣಿನ ಕೆಳಬಾಗ ಹೊಡೆದು ರಕ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಹೇಳಿಕೆ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 125/2020 ಕಲಂ 341.323.324.504.506 ಸಂಗಡ 34 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 188/2020 ಕಲಂ: 78 () ಕೆ.ಪಿ. ಕಾಯ್ದೆ  : ಇಂದು ದಿನಾಂಕ: 08/08/2020 ರಂದು 9:05 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ ಪಿಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:08/08/2020 ರಂದು 6:30 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪಟ್ಟಣದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮನೋಹರ್ ಹೆಚ್.ಸಿ-105 2) ನಿಂಗಪ್ಪ ಹೆಚ್.ಸಿ-118 3) ಮಂಜುನಾಥ ಸಿಪಿಸಿ-271 4) ದೇವಿಂದ್ರಪ್ಪ ಸಿಪಿಸಿ-184 ಇವರಿಗೆ ವಿಷಯ ತಿಳಿಸಿ, ನಿಂಗಪ್ಪ ಹೆಚ್ಸಿ- 118 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ನಿಂಗಪ್ಪ ಹೆಚ್.ಸಿ. ರವರು ಇಬ್ಬರು ಪಂಚರಾದ 1) ಶ್ರೀ ರಾಜು ತಂದೆ ಮರೆಪ್ಪ ಕಟ್ಟಿಮನಿ ವ|| 27 ವರ್ಷ ಜಾ|| ಹೊಲೆಯ ಉ|| ಸಮಾಜಸೇವೆ ಸಾ|| ಝಂಡದಕೇರಿ ಸುರಪುರ 2) ಶ್ರೀ ಶರಣಬಸಪ್ಪ ತಂದೆ ಹಯ್ಯಾಳಪ್ಪ ಕಟ್ಟಮನಿ ವ|| 43 ವರ್ಷ ಜಾ|| ಹೊಲೆಯ ಉ|| ಡ್ರೈವರ್ ಸಾ|| ಝಂಡದಕೇರಿ ಸುರಪುರ ಇವರನ್ನು 7 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 7:15 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 7:30 ಪಿ.ಎಮ್ ಕ್ಕೆ ಸುರಪುರ ಬಸ್ ನಿಲ್ದಾಣ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ಲೈಟಿನ ಕಂಬದ ಬೆಳಕಿನಲ್ಲಿ ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 7:35 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಾಘವೇಂದ್ರ ತಂದೆ ಹಣಮಂತ್ರಾಯ ಸುರಪುರಕರ್ ವ|| 24 ವರ್ಷ ಜಾ|| ಹೊಲೆಯ ಉ|| ಕೂಲಿ ಕೆಲಸ ಸಾ|| ಝಂಡದಕೇರಿ ಸುರಪುರ ಅಂತಾ ತಿಳಿಸಿದ್ದು, ಸದರಿಯವನಿಗೆ ವಿಚಾರಿಸಲಾಗಿ ನನಗೆ ಮಟಕಾ ನಂಬರ್ ಬರೆಯಲು ಶ್ರೀಧರ @ ಶಿರೆಪ್ಪ ತಂದೆ ಚನ್ನಪ್ಪ ಕಕ್ಕಸಗೇರಾ ವ|| 38 ವರ್ಷ ಜಾ|| ಬೇಡರ ಉ|| ದಾಬಾ ಮಾಲಿಕ ಸಾ|| ದೇವರಗೋನಾಳ ಹಾ.ವ. ನಿಷ್ಠಿ ಕಾಲೇಜು ಎದುರುಗಡೆ ಸುರಪುರ ಈತನು ಬರೆಯಲು ಹೇಳಿದ್ದು, ಆತನು ಹೇಳಿದ ಪ್ರಕಾರ ನಾನು ಮಟಕಾ ನಂಬರಗಳನ್ನು ಬರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ದಿನಾಲೂ ಶ್ರೀಧರ ಈತನಿಗೆ ಕೊಡುತ್ತೇನೆ ಅಂತಾ  ತಿಳಿಸಿರುತ್ತಾನೆ. ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 4800=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 7:35 ಪಿ.ಎಮ್ ದಿಂದ 8:35 ಪಿ.ಎಮ್ದ ವರೆಗೆ ಲೈಟಿನ ಕಂಬದ ಬೆಳಕಿನಲ್ಲಿ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 14/2020 174 ಸಿ.ಆರ್.ಪಿ.ಸಿ :           ಇಂದು ದಿನಾಂಕ: 08/08/2020 ರಂದು 01.15 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀ. ದೇಸಾಯಿ ತಂದೆ ಕಮಲು ರಾಠೋಡ ವಯಾ: 45 ಉ: ಒಕ್ಕಲುತನ ಜಾ: ಲಂಬಾಣಿ ಸಾ: ಗೋಗಿ ಗಂಗೂನಾಯ್ಕ ತಾಂಡಾ ತಾ: ಶಹಾಪೂರ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ದಿನಾಂಕ: 07/08/2020 ರಂದು ತಾನು ಮತ್ತು ತನ್ನ ಮಗನಾದ ಅಂಬ್ರೇಶ ಮತ್ತು ತನ್ನ ತಮ್ಮನಾದ ಹಾನೂ ಮೂರು ಜನರು ತಮ್ಮ ಹೊಲದಲ್ಲಿಯ ಹತ್ತಿ ಮತ್ತು ತೋಗರಿ ಬೇಳೆಗೆ ಕ್ರೀಮಿನಾಶ ಎಣ್ಣೀ ಹೊಡೆಯಲು ಹೋಗಿದ್ದು, ತನ್ನ ಮಗನಾದ ತಮ್ಮನಾದ ಮೃತ ಅಂಬ್ರೀಶ ತಂದೆ ದೇಸಾಯಿ ರಾಠೋಡ ವಯಾ:19 ವರ್ಷ ಉ: ವಿದ್ಯಾಥರ್ಿ ಜಾ: ಲಂಬಾಣಿ ಸಾ: ಗಂಗೂನಾಯಕ ತಾಂಡಾ. ತಾ: ಶಹಾಪೂರ. ಈತನಿಗೆ ಗಾಳಿಗೆ ಕ್ರಿನಾಶಕ ಹತ್ತಿ ನಿನ್ನೆ ದಿನಾಂಕ: 07/08/2020 ರಂದು 03 ಪಿಎಂ ಸುಮಾರಿಗೆ ಚೆಕ್ರ ಬಂದು ಕೆಳಗೆ ಕುಳಿತನು ಆಗ ನಾವು ಗಾಬರಿಯಾಗಿ ಮನೆಗೆ ಕರೆದುಕೋಡಮು ಬಂದು ಶಹಾಪೂರ ಸ್ಪಂದನ ಆಸ್ಪತ್ರೆಗೆ 04.35 ಪಿಎಂ ಕ್ಕೆ ತಂದು ಸೇರಿಕೆ ಮಾಡಿದ್ದೆವು ರಾತ್ರಿ ಸ್ವಲ್ಪ ಆರಾಮ ಆದಂತೆ ಅನ್ನಿಸಿತು ಮತ್ತು ಇಂದು ದಿ:08/08/2020 ರಂದು ಬೆಳಿಗ್ಗೆ ಹೆಚ್ಚಿಗೆ ತ್ರಾಸ್ ಆಗುತ್ತಿದ್ದರಿಂದ ಬೆಳಿಗ್ಗೆ ವೈದ್ಯರು ಹೆಚ್ಚಿನ ಉಪಚಾರಕ್ಕೆ ಕಲಬುರಗಿಗೆ ಕರೆದುಕೊಂಡು ಹೋಗಲು ಹೇಳಿದ್ದು, ಅದರಂತೆ ಇಂದು ದಿನಾಂಕ: 08/08/2020 ರಂದು 10.20 ಎಎಂ ಸುಮಾರಿಗೆ ಕಲಬುರಗಿಯ ಚಿರಾಯು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಿರಾಯು ಆಸ್ಪತ್ರೆಯ ಮುಂದೆ ವೈದ್ಯರು ನೋಡಿ ಮೃತಪಟ್ಟಿದ್ದಾಗಿ ತಿಳಿಸಿರುತ್ತಾರೆ, ನನ್ನ ಮಗನ ಶವವನ್ನು ಮರಳಿ ಶಹಾಪುರ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ನನ್ನ ಮಗನಿಗೆ ಆಕಸ್ಮಿಕವಾಗಿ ಕ್ರಿಮಿನಾಶಕ ಹೊಟ್ಟೆಯಲ್ಲಿ ಹೊಗಿದ್ದರಿಂದ ಉಪಚಾರಕ್ಕೆ ಕರೆದುಕೊಂಡು ಹೋದಾಗ ಗುಣಮುಖನಾಗದೆ ಮೃತಪಟ್ಟಿದ್ದು ಯಾರ ಮೇಲೆಯೂ ಯಾವುದೆ ರೀತಿಯ ಸಂಶಯ ಇತ್ಯಾದಿ ಇರುವದಿಲ್ಲ ತಾವು ಮುಂದಿನ ಕ್ರಮ ಕೈಕೊಳ್ಳಬೇಕು ಅಜರ್ಿ ನೀಡಿದ್ದು, ಅಜರ್ಿ ಸಾರಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 14/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!