ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/07/2020
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 198/2020 /2020 ಕಲಂ 87 ಕೆ.ಪಿ ಆಕ್ಟ : ಇಂದು ದಿನಾಂಕ 20/07/2020 ರಂದು ರಾತ್ರಿ 21-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, 10 ಜನ ಆಪಾಧಿತರು ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಫಿರ್ಯಾದಿಯವರು ಇಂದು ದಿನಾಂಕ 20/07/2020 ರಂದು ಸಾಯಂಕಾಲ 17-45 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಹಳಿಸಗರ ಏರಿಯಾದ ಕನ್ಯಾಕೊಳ್ಳುರ ರೋಡಿಗೆ ಇರುವ ಬಾಲಕರ ವಸತಿ ನಿಲಯದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ, ಠಾಣೆಯ ಎನ್.ಸಿ ನಂ 53/2020 ನೇದ್ದನ್ನು ನೋಂದಣಿಮಾಡಿಕೊಂಡು, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು, ಮೇಲಾಧಿಕಾರಿ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ಸಾಯಂಕಾಲ 19-00 ಗಂಟೆಗೆ ದಾಳಿ ಮಾಡಿ 10 ಜನ ಜೂಜಾಟ ಆಡುತಿದ್ದವರನ್ನು ಹಿಡಿದು ಅವರಿಂದ ನಗದು ಹಣ 43,290=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 19-15 ಗಂಟೆಯಿಂದ 20-15 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 198/2020 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:-199/2020 ಕಲಂ 15(ಎ), 32(3) ಕನರ್ಾಟಕ ಅಬಕಾರಿ ಕಾಯ್ದೆ : ಇಂದು ದಿನಾಂಕ 20/07/2020 ರಂದು 9.30 ಪಿ,ಎಂ ಕ್ಕೆ ಠಾಣೆಗೆ ಸ||ತ|| ಶ್ರೀ ಸಿದ್ದೇಶ್ವರ ಪಿ.ಎಸ್.ಐ(ಕಾ.ಸು.2) ರವರು ಠಾಣೆಗೆ ಬಂದು ಇಬ್ಬರು ಆರೋಪಿತರು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 20/07/2020 ರಂದು 7.00 ಪಿ.ಎಂ ಸುಮಾರಿಗೆ ಬಾತ್ಮೀ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಹಳಿಸಗರ ಏರಿಯಾದಲ್ಲಿನ ಸಿಬಾರ ಕಟ್ಟೆಯ ಹತ್ತಿರ ಇರುವ ಆರೋಪಿತರ ಹೊಟೇಲಗಳ ಮುಂದೆ ಆರೋಪಿತರು ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದು ಕಂಡು ಬಂದಿದ್ದು ಆರೋಪಿತರ ಮೇಲೆ ದಾಳಿ ಮಾಡಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನು ಮಾಡಿಕೊಡುವುದಕ್ಕೆ ಪರವಾನಿಗೆ ಕೇಳಿದರೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಅವಕಾಶ ನೀಡಿರುವುದಾಗಿ ತಿಳಿಸಿದ್ದರಿಂದ ಸದರಿ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರ ಹತ್ತಿರ ಸಿಕ್ಕ ಮುದ್ದೆಮಾಲನ್ನು ಜಪ್ತಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಆರೋಪಿತರ ವಿರುದ್ಧ ವರದಿಯನ್ನು ತಯಾರಿಸಿ ಇಬ್ಬರು ಆರೋಪಿತರು ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 9.30 ಪಿಎಂ ಕ್ಕೆೆ ಮುಂದಿನ ಕ್ರಮ ಕೈಕೊಳ್ಳಲು ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 199/2020 ಕಲಂ 15(ಎ), 32(3) ಕೆಇ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 200/2020 ಕಲಂ 279, 304(ಎ) ಐ.ಪಿ.ಸಿ : ಇಂದು ದಿನಾಂಕ 20/07/2020 ರಂದು ರಾತ್ರಿ 21-45 ಗಂಟೆಗೆ ಫಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಭೀಮಣ್ಣ ಹಳಿಮನಿ ವಯ 35 ವರ್ಷ ಜಾತಿ ಪ.ಜಾತಿ (ಮಾದಿಗ) ಉಃ ಕೂಲಿ ಕೆಲಸ ಸಾಃ ಗಂಗನಾಳ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ತಮ್ಮನಾದ ದುರ್ಗಪ್ಪ ತಂದೆ ಭೀವ್ಮಣ್ಣ ಹಳಿಮನಿ ವಯ 22 ವರ್ಷ ಉಃ ಜೆ.ಸಿ.ಬಿ ಆಪರೇಟರ್ ಇವನು ಸುಮಾರು 2 ತಿಂಗಳಿನಿಂದ ಮಂಡಗಳ್ಳಿಯಲ್ಲಿ ಜೆ.ಸಿ.ಬಿ ಆಪರೇಟರಾಗಿ ಕೆಲಸ ಮಾಡಿಕೊಂಡಿದ್ದನು. ಹೀಗಿರುವಾಗ ಇಂದು ದಿನಾಂಕ 20/07/2020 ರಂದು ಸಾಯಂಕಾಲ 6-30 ಗಂಟೆಗೆ ಗಂಗನಾಳದಿಂದ ದುರ್ಗಪ್ಪನು ಮೋಟರ ಸೈಕಲ್ ನಂ ಕೆಎ-33-ಆರ್-9075 ನೇದ್ದರ ಮೇಲೆ ಜೆ.ಸಿ.ಬಿ ಆಪರೇಟರ ಕೆಲಸದ ಸಂಬಂಧ ಮಂಡಗಳ್ಳಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿದ್ದು, ಸಾಯಂಕಾಲ 7-40 ಗಂಟೆಯ ಸುಮಾರಿಗೆ ಶಹಾಪೂರದಲ್ಲಿರುವ ಸಂಬಂಧಿಕರಾದ ರುದ್ರಪ್ಪ ಹುಲಿಮನಿ ಇವರು ಫೋನ್ ಮಾಡಿ ನನ್ನ ಕೆಲಸದ ನಿಮಿತ್ಯ ಸುರಪೂರಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ಮರಳಿ ಶಹಾಪೂರಕ್ಕೆ ಮೋಟರ ಸೈಕಲ್ ಮೆಲೆ ಸಾಯಂಕಾಲ 7-30 ಗಂಟೆಯ ಸುಮಾರಿಗೆ ಹತ್ತಿಗೂಡುರ ಸೀಮಾಂತರದ ಗೌರಮ್ಮ ಶಾಂತಿಧಾಮದ ಹತ್ತಿರ ಬರುತಿದ್ದಾಗ ಎದರುಗಡೆಯಿಂದ ಅಂದರೆ ಶಹಾಪೂರ ಕಡೆಯಿಂದ ಒಬ್ಬ ಮೋಟರ ಸೈಕಲ್ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಸ್ಪೀಡ್ ಕಂಟ್ರೋಲ್ ಮಾಡುವ ಸಂಬಂಧ ರೋಡಿನ ಮೇಲೆ ನಿಲ್ಲಿಸಿದ ಮರಳು ತುಂಬಿದ ಬ್ಯಾರಲ್ಗೆ ಡಿಕ್ಕಿ ಪಡಿಸಿ ಮೋಟರ ಸೈಕಲ್ ಸಮೇತ ಕೆಳಗಡೆ ಬಿದ್ದಾಗ ನಾನು ಹೋಗಿ ನೋಡಲಾಗಿ ಸದರಿ ವ್ಯಕ್ತಿಗೆ ತಲೆ, ಮೂಗು, ಕವಿ, ಕಣ್ಣುಗಳಿಂದ ಭಾರಿ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟು ಬಿದ್ದಿದ್ದನು. ಮೃತ ವ್ಯಕ್ತಿಯು ನಿಮ್ಮ ತಮ್ಮ ದುರ್ಗಪ್ಪ ಇರುತ್ತಾನೆ ಅಂತ ತಿಳಿಸಿದ ಮೇರೆಗೆ ಊರಿನಿಂದ ಒಂದು ಆಟೊ ಮಾಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮ ದುರ್ಗಪ್ಪನಿದ್ದು ತಲೆ, ಮೂಗು, ಕವಿ, ಕಣ್ಣುಗಳಿಂದ ಭಾರಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟು ಬಿದ್ದಿದ್ದನು. ಮೋಟರ ಸೈಕಲ್ ನಂ ಕೆಎ-33-ಆರ್-9075 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಸ್ಪೀಡ್ ಕಂಟ್ರೋಲ್ ಮಾಡುವ ಸಂಬಂಧ ರೋಡಿನ ಮೇಲೆ ನಿಲ್ಲಿಸಿದ ಮರಳು ತುಂಬಿದ ಬ್ಯಾರಲ್ಗೆ ಡಿಕ್ಕಿ ಪಡಿಸಿದರಿಂದ ಮೃತ ಪಟ್ಟಿರುತ್ತಾನೆ. ತನ್ನ ಸಾವಿಗೆ ತಾನೆ ಕಾರಣಿಭೂತನಾಗಿದ್ದು, ತನ್ನ ತಮ್ಮ ದುರ್ಗಪ್ಪ ತಂದೆ ಭೀಮಣ್ಣ ಹಳಿಮನಿ ಸಾಃ ಗಂಗನಾಳ ಈತನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ. ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 200/2020 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತದೆ.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 97/2020 ಕಲಂ 505 (2) ಐಪಿಸಿ : ಇಂದು ದಿನಾಂಕ 20-07-2020 ರಂದು 11 ಎ.ಎಮ್ ಕ್ಕೆ ಶ್ರೀ ಬಾಬುರಾವ ಎ.ಎಸ್.ಐ ಯಾದಗಿರಿ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ತಮ್ಮ ವರದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 20-07-2020 ರಂದು ಬೆಳಗ್ಗೆ 9 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ನನ್ನ ಮೊಬೈಲ ನಂ: 9611049177 ನೇದ್ದಕ್ಕೆ ಸಾಮಾಜಿಕ ಜಾಲತಾಣವಾದ ವ್ಯಾಟ್ಸಾಪ್ ಮುಖಾಂತರ ಒಂದು ವಿಡಿಯೋ ಬಂದಿದ್ದು ಅದರಲ್ಲಿ ಒಬ್ಬ ಸುಮಾರು 20 ವರ್ಷ ವಯಸ್ಸಿನ ಹುಡುಗನು ಅಶ್ಲೀಲವಾಗಿ ಮಾತನಾಡಿದ್ದು ಎನೆಂದರೆ ಮೊಳಕಾಲು ಕೆತ್ತಿ ನಿಮ್ಮನ್ನು ಹುಟ್ಟಿಸಿದವರು ಈ ಬ್ಯಾಡರು, ಯಾರಿಗಿ ಹುಟ್ಟಿರಂತ ಕೇಳಿದರ ಹೇಳತಿರಿ ನೀವು ಕುರುಬರ, ನಿಮ್ಮವ್ವನ ತುಲ್ಲಾ ಕುರುಬರ ತಂಗಿಯರಿಗೆ ಹಟ್ಟ ಹೋಗೈತಲೇ ನನ್ನ ರಕ್ತ ಸುಟ್ಟ, ನಿಮ್ಮವನ ತುಲ್ಲಾ ಅಂತಾ ಕುರುಬರ ಸಮಾಜಕ್ಕೆ ಅವಹೇಳನಕಾರಿಯಾಗಿ ನಿಂದನೆ ಮಾಡಿ ವಿಡೀಯೊ ಮಾಡಿ ಬಿಟ್ಟಿದ್ದು ಅದನ್ನು ನೋಡಿ ಈ ಬಗ್ಗೆ ನಮಗೆ ಸಂಶಯ ಬಂದ ಎಲ್ಲಾ ಕಡೆಗೆ ಪೋನ ಮಾಡಿ ಪರಿಶೀಲಿಸಿದಾಗ ಈ ತರಹ ಕುರುಬ ಸಮಾಜಕ್ಕೆ ನಿಂದನೆ ಮಾಡಿದವನು ಹಳಗೇರಾ ಗ್ರಾಮದವನು ಅಂತಾ ಗೊತ್ತಾಗಿ ಕೂಡಲೇ ನಾನು ಹಾಗೂ ಜೊತೆಗೆ ನಮ್ಮ ಠಾಣಾ ಸಿಬ್ಬಂದಿಯವರಾದ ಶ್ರಿ ಪ್ರಭುಗೌಡ ಪಿಸಿ-361 ಮತ್ತು ಶ್ರೀ ಮೋನಪ್ಪಾ ಪಿಸಿ-263 ಇವರನ್ನು ಕರೆದುಕೊಂಡು ಹಳಗೇರಾ ಗ್ರಾಮಕ್ಕೆ ಹೋಗಿ ವಿಡಿಯೋ ಮಾಡಿ ಬಿಟ್ಟವನ ಬಗ್ಗೆ ಗ್ರಾಮಸ್ತರಿಗೆ ವಿಡಿಯೋ ತೋರಿಸಿ ವಿಚಾರಿಸಲು ಅವನ ಹೆಸರು ತ್ರೀಶೂಲ ತಂದೆ ರಮೇಶ ಮುಂಡ್ರಗಿ ವಯಾ:19 ವರ್ಷ ಜಾ: ಬೇಡರ ಉ:ಒಕ್ಕಲುತನ ಸಾ:ಹಳಗೇರಾ ಅಂತಾ ಗೊತ್ತಾಯಿತು. ಕೂಡಲೇ ಸದರಿಯವನ ಮನೆಗೆ ಹೋಗಿ ಅವನ ತಂದೆಯಾದ ರಮೇಶ ಇತನಿಗೆ ವಿಡಿಯೋ ತೋರಿಸಿ ವಿಚಾರಿಸಲಾಗಿ ವಿಡಿಯೊದಲ್ಲಿರುವವನು ನನ್ನ ಮಗನಾದ ತ್ರಿಶೂಲ ಇದ್ದು ಇತನು ನಿನ್ನೆ ರಾತ್ರಿ ಮನೆಯಿಂದ ಹೋದವನು ಇನ್ನೂ ಮನೆಗೆ ಬಂದಿಲ್ಲಾ ಅವನು ಎಲ್ಲಿಗೆ ಹೋಗಿದ್ದಾನೆ ಮತ್ತು ಎಲ್ಲಿ ಇದ್ದಾನೆ ಎಂಬುದರ ಬಗ್ಗೆ ಗೊತ್ತಿಲ್ಲಾ ಅವನನ್ನು ಪತ್ತೆ ಮಾಡಿ ಠಾಣೆಗೆ ಕರೆದುಕೊಂಡು ಬರುವುದಾಗಿ ತಿಳಿಸಿದನು. ನಂತರ ಅಲ್ಲಿಯ ಪೋಲಿಸ್ ಭಾತ್ಮೀದಾರರಿಗೆ ಬೇಟಿಯಾಗಿ ಅವರಿಗೂ ಈ ಸವಿಸ್ತಾರವಾದ ಮಾಹಿತಿ ತಿಳಿಸಿ ವಿಚಾರಿಸಿ ಅವನ ಸುಳಿವು ಸಿಕ್ಕಲ್ಲಿ ನಮಗೆ ಮಾಹಿತಿ ತಿಳಿಸುವಂತೆ ಅವರಲ್ಲಿ ವಿನಂತಿಸಿಕೊಂಡು ಅಲ್ಲಿಂದ ವರ್ಕನಳ್ಳಿ ಗ್ರಾಮಕ್ಕೆ ಬಂದು ಅಲ್ಲಿಯೂ ಕೂಡಾ ಆತನ ಬಗ್ಗೆ ವಿಚಾರಿಸಲಾಗಿ ಆತನ ಸುಳಿವು ಸಿಗಲಿಲ್ಲಾ. ಆದ್ದರಿಂದ ಕುರುಬ ಸಮಾಜಕ್ಕೆ ಅವಹೇಳನಕಾರಿಯಾಗಿ ಬೈಯ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ತ್ರೀಶೂಲ ತಂದೆ ರಮೇಶ ಮುಂಡ್ರಗಿ ವಯಾ:19 ವರ್ಷ ಜಾ: ಬೇಡರ ಉ:ಒಕ್ಕಲುತನ ಸಾ:ಹಳಗೇರಾ ಇವನ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಅಂತಾ ಸಲ್ಲಿಸಿದ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 97/2020 ಕಲಂ 505 (2) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 21/2020 ಕಲಂ: 174 ಸಿ.ಆರ್.ಪಿ.ಸಿ : ಇಂದು ದಿನಾಂಕ 20.07.2020 ರಂದು ಬೆಳಿಗ್ಗೆ 9:30 ಗಂಟೆಗೆ ಮೃತಳಾದ ಶ್ರೀಮತಿ ಸಾವಿತ್ರಮ್ಮಳು ತನ್ನ ಮನೆಯ ಮುಂದಿನ ರಸ್ತೆಯ ಮೇಲೆ ಸ್ರಾವಣ ಮಾಸದ ಮಿನಿತ್ಯ ಮನೆಯಲ್ಲಿಯ ಬಟ್ಟೆ-ಬರಿಗಳನ್ನು ತೊಳೆಯುತ್ತಿದ್ದಾಗ ಮೃತಳ ಮನೆಯ ಮುಂದಿನ ರಸ್ತೆಗೆ ಹೊಂದಿಕೊಂಡಿರುವ ಶೇಖಮ್ಮ ಅವಂಟಿ ಇವರ ಸುಮಾರು 10-15 ವರ್ಷಗಳಿಂದ ಯಾರು ಕೂಡ ವಾಸವಾಗಿರದೇ ಇರುವ ಹಳೆ ಮನೆಯು ಈ ಮೊದಲು ಬಿದ್ದ ಮಳೆ ಗಾಳಿಗೆ ತನ್ನ ಅಸ್ವಿತ್ವವನ್ನು ಕಳೆದುಕೊಂಡು ಉಬ್ಬಿದ್ದರಿಂದ ಆಕಸ್ಮಿಕವಾಗಿ ಬಿದ್ದಿದ್ದರಿಂದ ಮನೆಯ ಕಲ್ಲು ಮತ್ತು ಮಣ್ಣಿನ ಪೆಟ್ಟಿನಿಂದ ಮೃತ ಸಾವಿತ್ರಮ್ಮಳಿಗೆ ತಲೆಗೆ, ಕೈ, ಕಾಲುಗಳಿಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಆ ಬಗ್ಗೆ ಡೆತ್ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 21/2020 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 171/2019 ಕಲಂ 32 34 ಕನರ್ಾಟಕ ಅಭಕಾರಿ ಕಾಯ್ದೆ 1965 : ಇಂದು ದಿನಾಂಕ: 20/07/2020 ರಂದು 8:30 ಪಿ.ಎಂ.ಕ್ಕೆ ಠಾಣೆಯಲ್ಲಿದಾಗ ಶ್ರೀ ಚಂದ್ರಶೇಖರ ಪಿಎಸ್ಐ (ಕಾಸು-2) ರವರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲನ್ನು ಠಾಣೆಗೆ ಬಂದು ಹಾಜರ ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:20/07/2020 ರಂದು 5 ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ದೇವಿಕೇರಾ ಗ್ರಾಮದ ಬೀಟ್ ಪೊಲೀಸ್ ಶ್ರೀ ಬಸವರಾಜ ಸಿಪಿಸಿ-180 ದೇವಿಕೇರಾ ಗ್ರಾಮದಲ್ಲಿ ಒಬ್ಬ ವ್ಯಕ್ತಿ ತಮ್ಮ ಮನೆಯ ಮುಂದೆ ಕುಳಿತುಕೊಂಡು ಅಕ್ರಮವಾಗಿ ಮಧ್ಯದವನ್ನು ಸಂಗ್ರಹಿಸಿ ಹೊಗಿ ಬರುವ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಬಸವರಾಜ ಸಿಪಿಸಿ-180 3) ಶ್ರೀ ಹುಸೇನಬಾಷಾ ಸಿಪಿಸಿ-27 ಇವರನ್ನು ಕರೆದು ಅವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗೊಣ ಅಂತಾ ಹೇಳಿ ಮಂಜುನಾಥ ಹೆಚ್ಸಿ-176 ಇವರ ಸಹಾಯದಿಂದ ಇಬ್ಬರು ಪಂಚರಾದ 1) ಶ್ರೀ ನಬಿಲಾಲ ತಂದೆ ಹುಸೇನಸಾಬ ಗಿರಣಿ ವ|| 50 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ದೇವಿಕೇರಾ 2) ಶ್ರೀ ಬಸವರಾಜ ತಂದೆ ಮಾನಪ್ಪ ಸಿದ್ದಾಪುರ ವ|| 30 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ದೇವಿಕೇರಾ ಇವರನ್ನು 5:30 ಪಿ.ಎಂ ಸುಮಾರಿಗೆ ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಸದರಿ ಜಪ್ತಿ ಪಂಚನಾಮೆ ಕಾಲಕ್ಕೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿದ್ದು ಸದರಿ ಪಂಚರು ಸಿಬ್ಬಂಧಿಯರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ. ಕೆಎ-33 ಜಿ-0094 ನೇದ್ದರಲ್ಲಿ 5:45 ಪಿ.ಎಂ ಕ್ಕೆ ಠಾಣೆಯಿಂದ ಹೊರಟು 6:15 ಪಿಎಂ ಕ್ಕೆ ದೇವಿಕೇರಾ ಗ್ರಾಮದ ಬಸ್ ನಿಲ್ದಾಣ ಹತ್ತಿರ ಹೊಗಿ ಸ್ವಲ್ಪ ದೂರ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಒಬ್ಬ ಮನೆಯಲ್ಲಿ ಮದ್ಯವನ್ನು ಸಂಗ್ರಹಿಸಿ ಹೊಗಿ ಬರುವ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 6:20 ಪಿಎಂ ಕ್ಕೆ ದಾಳಿ ಮಾಡಲು ಹೊದಾಗ ನಮ್ಮನ್ನು ನೋಡಿ ಸಾರ್ವಜನಿಕರು ಮತ್ತು ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿ ಓಡಿ ಹೊಗಿದ್ದು, ಅಲ್ಲೆ ಇದ್ದ ಇಮಾಮಸಾಬ ತಂದೆ ದವಲಸಾಬ ದೊಡ್ಡಮನಿ ಇವರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಹೆಸರು ವಿಳಾಸ ವಿಚಾರಿಸಲು ಬಾಬು ತಂದೆ ಪೀರ ಅಹ್ಮದ ಬಾಗವಾನ ವ|| 53 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ದೇವಿಕೇರಾ ಅಂತಾ ತಿಳಿಸಿದರು, ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಒಂದು ಪ್ಲಾಸ್ಟೀಕ ಚೀಲದಲ್ಲಿ ಒಛಿಜಠತಿಜಟಟ' ಓಠ.1 ಖಜಜಡಿತಜ ಘಞಥಿ 180 ಟಟ ನ 11 ಬಾಟಲಿಗಳು ಪ್ರತಿಯೊಂದ ಬೆಲೆ 198.23/- ರೂ. 2) ಒಂದು ಪ್ಲಾಸ್ಟೀಕ ಚೀಲದಲ್ಲಿ ಔಡಿರಟಿಚಿಟ ಛಿಠಛಿಜ ಜಜಟಣಥಜ ತಿಞಥಿ 90 ಟಟ ನ 75 ಪೌಚಗಳು ಪ್ರತಿಯೊಂದ ಬೆಲೆ 35.13/- ರೂ. 3) ಒಂದು ಪ್ಲಾಸ್ಟೀಕ ಚೀಲದಲ್ಲಿ ಃಚಿರಠಿಠಿಜಡಿ ಆಜಟಣಥಜ ಘಞಥಿ 180 ಟಟ ನ 44 ಪೌಚಗಳು ಪ್ರತಿಯೊಂದ ಬೆಲೆ 106.23/- ರೂ. ಹೀಗೆ ಒಟ್ಟು 9489.4/- ರೂಗಳ ಕಿಮ್ಮತ್ತಿನ ಒಟ್ಟು 16,650 ಎಮ್ಎಲ್ನ ಮಧ್ಯವಿದ್ದು ಅವರ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ 450/- ರೂಗಳು ದೋರೆತಿದ್ದು, ಸದರಿ ಮದ್ಯದ 1) ಒಛಿಜಠತಿಜಟಟ' ಓಠ.1 ಖಜಜಡಿತಜ ಘಞಥಿ 180 ಟಟ ಒಂದು ಬಾಟಲಿ, 2) ಔಡಿರಟಿಚಿಟ ಛಿಠಛಿಜ ಜಜಟಣಥಜ ತಿಞಥಿ 90 ಟಟ ನ ಒಂದು ಪೌಚ್, 3) ಃಚಿರಠಿಠಿಜಡಿ ಆಜಟಣಥಜ ಘಞಥಿ 180 ಟಟ ನ ಒಂದು ಪೌಚ್, ಸದರಿಯವುಗಳಲ್ಲಿ ಒಂದೊಂದು ರಾಸಾಯನಿಕ ತಜ್ಞರ ಪರೀಕ್ಷೆಗಾಗಿ ಪಂಚರ ಸಮಕ್ಷಮ ಪ್ರತ್ಯೇಕವಾಗಿ ತಗೆದುಕೊಂಡು ಅದನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಬಾಯಿ ಹೊಲೆದು ಅದರ ಮೇಲೆ ಕೆ.ಎಲ್.ಆರ್ ಎಂಬ ಇಂಗ್ಲೀಷ ಅಕ್ಷರವುಳ್ಳ ಮುದ್ರೆಯನ್ನು ಅರಗಿನಲ್ಲಿ ಶಿಲ್ ಮಾಡಿ, ಪಂಚರು ಹಾಗು ನಾನು ಸಹಿ ಮಾಡಿ ಚೀಟಿ ಅಂಟಿಸಿದ್ದು, ಉಳಿದ ಮದ್ಯದ ಬಾಟಲಿ ಮತ್ತು ಪೌಚ್ಗಳನ್ನು ಜಪ್ತಿಪಡಿಸಿಕೊಂಡು ಪ್ಲಾಸ್ಟೀಕ ಚೀಲಗಳಲ್ಲಿ ಹಾಕಿ ಪಂಚರು ಹಾಗು ನಾನು ಸಹಿ ಮಾಡಿ ಚೀಟಿ ಅಂಟಿಸಿದ್ದು ಇರುತ್ತದೆ. ಸದರಿ ಆರೋಪಿತರು ಮಧ್ಯ ಮಾರಾಟದ ಬಗ್ಗೆ ಯಾವುದೆ ಪರವಾನಿಗೆ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದು ಇರುತ್ತದೆ. ಸದರಿ ಜಪ್ತಿ ಪಡಿಸಿದ ಸ್ಥಳದ ಚೆಕ್ ಬಂದಿ ಪೂರ್ವಕ್ಕೆ: ಬಾಬು ಬಾಗವಾನ ಇವರ ಮನೆಯ ಬಾಗಿಲು ಇರುತ್ತದೆ. ಪಶ್ಚಿಮಕ್ಕೆ: ಈರಣ್ಣ ಪಿಂಜರ ರವರ ಖುಲ್ಲಾ ಜಾಗ ಇರುತ್ತದೆ. ಉತ್ತರಕ್ಕೆ: ಮೈದುನಸಾಬ ರವರ ಪ್ಲಾಟ್ ಇರುತ್ತದೆ. ದಕ್ಷಿಣಕ್ಕೆ: ನಿಂಗಪ್ಪ ಆಡಿನವರ ರವರ ಮನೆ ಇರುತ್ತದೆ. ಸದರಿ ಪಂಚನಾಮೆಯನ್ನು 6:30 ಪಿ.ಎಮ್ ದಿಂದ 7:30 ಪಿ.ಎಮ್ ವರೆಗೆ ಜೀಪ್ನ ಲೈಟಿನ ಬೆಳಕಿನಲ್ಲಿ ಸ್ಥಳದಲ್ಲಿಯೆ ಪಂಚನಾಮೆ ಮಾಡಿಕೊಂಡು, ನಂತರ ಮುದ್ದೆಮಾಲಿನೊಂದಿಗೆ ಠಾಣೆಗೆ 8:30 ಪಿ.ಎಮ್ ಕ್ಕೆ ಬಂದಿದ್ದು ಸದರಿ ಆರೋಪಿತನಾದ ಬಾಬು ಬಾಗವಾನ ಈತನ ವಿರುದ್ದ ಕಲಂ. 32, 34 ಕನರ್ಾಟಕ ಅಬಕಾರಿ ಕಾಯ್ದೆ 1965 ರಿತ್ಯ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಇರುತ್ತದೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.171/2020 ಕಲಂ: 32 34 ಕೆ.ಇ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using