ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/07/2020
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.11/2020 ಕಲಂ 174 ಸಿ.ಆರ್.ಪಿ.ಸಿ : ಪಿರ್ಯಾಧಿ ತಂಗಿ ಆನಂದಮ್ಮ ಇವಳಿಗೆ ಸುಮಾರು 2-3 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥಳಾಗಿದ್ದು, ದಿನಾಂಕ. 06-07-2020 ರಂದು ಬೆಳಿಗ್ಗೆ 9-00 ಗಂಟೆಗೆ ಮಾನಸಿಕ ಅಸ್ವಸ್ಥತೆಯಲ್ಲಿ ಮನೆಯಲ್ಲಿ ಇಟ್ಟಿದ್ದ ಕ್ರಿಮಿನಾಶಕ ಔಷಧ ಸೇವನೆ ಮಾಡಿದ್ದು, ಚಿಕಿತ್ಸೆ ಕುರಿತು ನಾರಾಯಣಪೇಠ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಮಹಬೂಬ ನಗರ ಸರಕಾರಿ ಆಸ್ಪತ್ರೆಗೆ ಹೋಗಿದ್ದು ಉಪಚಾರ ಪಡೆಯುತ್ತಾ ನಿನ್ನೆ ದಿನಾಂಕ. 06-07-2020 ರಂದು ಸಾಯಂಕಾಲ 5-23 ಪಿಎಮ್ಗೆೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾಳೆ. ಸದರಿಯವಳ ಸಾವಿನಲ್ಲಿ ಯಾರ ಮೇಲೂ ಯಾವುದೇ ದೂರು, ಸಂಶಯ ಇರುವದಿಲ್ಲ ಮುಂದಿನ ಕ್ರಮ ಜರುಗಿಸಬೇಕು ಅಂತಾ ಪಿರ್ಯಾದಿ
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 91/2020 ಕಲಂ 379 ಐಪಿಸಿ : ದಿನಾಂಕ: 07.07.2020 ರಂದು 08-00 ಎ.ಎಮ್ ಕ್ಕೆ ಪಿ.ಎಸ್.ಐ ಸಾಹೇಬರು ಕರೆಯಿಸಿದ ಮೇರೆಗೆ ನಾವು ಠಾಣೆಗೆ ಬಂದು ಹಾಜರಾದೆವು ಅಲ್ಲಿ ಹಾಜರಿದ್ದ ಶ್ರೀಮತಿ ಸುವಣರ್ಾ ಪಿ.ಎಸ್.ಐ ಸಾಹೇಬರು ಮತ್ತು ಅವರ ಸಿಬ್ಬಂದಿ ಜನರಾದ ಅಮೀರಲಿ ಪಿಸಿ-275, ಗುರುಸ್ವಾಮಿ ಪಿಸಿ-199, ಎಲ್ಲರಿಗೂ ತಿಳಿಸಿದ್ದೆನೆಂದರೆ, ಚೆಲ್ಲೇರಿ ಹಳ್ಳದಿಂದ ಟ್ರ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಸಾಗಿಸುತಿದ್ದಾರೆ ಅಂತಾ ಬಾತ್ಮಿ ಬಂದಿದ್ದೆ ನಮ್ಮ ಸಂಗಡ ಬಂದು ನಾವು ದಾಳಿ ಮಾಡಿದಾಗ ಪಂಚನಾಮೆ ಕಾಲಕ್ಕೆ ಹಾಜರಿದ್ದು, ಪಂಚನಾಮೆ ಬರೆಯಲು ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ನಾವು ಪಂಚರು ಅದಕ್ಕೆ ಒಪ್ಪಿಕೊಂಡು 08-30 ಎ.ಎಮ್ ಕ್ಕೆ ಪಿ.ಎಸ್.ಐ ಸಾಹೇಬರು ತಮ್ಮ ಸರಕಾರಿ ಜೀಪನಲ್ಲಿ ನಮ್ಮನ್ನು ಹಾಗೂ ಸಿಬ್ಬಂದಿಯವರನ್ನು ಕೂಡಿಸಿಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಹೋಗುತ್ತಿರುವಾಗ ಚೆಲ್ಲೇರಿ ಕ್ರಾಸ ಹತ್ತಿರ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಜೀಪನ್ನು ಮರೆಯಾಗಿ ನಿಲ್ಲಿಸಿ ಮರಳು ತುಂಬಿಕೊಂಡು ಬರುತ್ತಿರುವ ಟ್ರ್ಯಾಕ್ಟರನ್ನು ಬೆಳಿಗ್ಗೆ 09-30 ಗಂಟೆಗೆ ದಾಳಿ ಮಾಡುವ ಕಾಲಕ್ಕೆ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋದನು. ಓಡಿ ಹೊದವನ ಚಾಲಕನ ಹೆಸರು ವಿಳಾಸ ರಾಜು ತಂದೆ ಕ್ರೀಷ್ಟಯ್ಯ ಪೆದ್ದಬೋಯಿ ವ|| 23 ವರ್ಷ ಜಾ|| ಬೇಡರು ಉ|| ಚಾಲಕ ಸಾ|| ಪೆದ್ದಪೋರ್ಲ ಮಂಡಲ|| ಉಟ್ಕೂರ ತಾ|| ಮಕ್ತಲ ಜಿ|| ನಾರಾಯಣಪೇಟ ಮತ್ತು ಟ್ರ್ಯಾಕ್ಟರ ಮಾಲಿಕನ ಹೆಸರು ಶ್ರೀನಿವಾಸಲು ತಂದೆ ತಿಪ್ಪಣ್ಣ ವ|| 33 ವರ್ಷ ಜಾ|| ಬೇಡರು ಉ|| ಟ್ರ್ಯಾಕ್ಟರ ಚಾಲಕ ಸಾ|| ಪೆದ್ದಪೋರ್ಲ ಮಂಡಲ|| ಉಟ್ಕೂರ ತಾ|| ಮಕ್ತಲ ಜಿ|| ನಾರಾಯಣಪೇಟ ಅಂತಾ ತಿಳಿಯಿತು. ನಂತರ ಟ್ರ್ಯಾಕ್ಟರ ಪರಿಶೀಲಿಸಲಾಗಿ ಏಗಃಔಖಿಂ ಕಂಪನಿಯ ಕೆಂಪು ಬಣ್ಣದ ಟ್ರ್ಯಾಕ್ಟರ ಇದ್ದು ಅದರ ನೊಂದಣಿ ಸಂಖ್ಯೆ ಇರುವದಿಲ್ಲ, ಅದರ ಇಂಜಿನ ನಂ. ಃಐಂ1869, ಚೆಸ್ಸಿ ನಂ. ಏಃಖಿಒ30ಖಓಗಿಓಖಿಂ16772 ಇರುತ್ತದೆ. ಅದಕ್ಕೆ ಬೂದಿ ಬಣ್ಣದ ಟ್ರ್ಯಾಲಿ ಇದ್ದು ಅದಕ್ಕೆ ಟ್ರ್ಯಾಲಿ ನಂಬರ ಒಗ4501 ಇರುತ್ತದೆ. ಟ್ರ್ಯಾಕ್ಟರ ಇಂಜನ ಮತ್ತು ಟ್ರ್ಯಾಲಿ ಒಟ್ಟು ಅ|| ಕಿ|| 2,50,000/- ರೂಪಾಯಿಗಳು ಮತ್ತು ಮರಳಿನ ಅ||.ಕಿ|| 1500/-ರೂಪಾಯಿಗಳು ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕನು ಮತ್ತು ಅದರ ಮಾಲಿಕನು ಸರಕಾರದಿಂದ ಮರಳನ್ನು ಮಾರಾಟ ಮಾಡಲು ಯಾವುದೆ ಅನುಮತಿ ಮತ್ತು ರಾಜ ಧನ ಸಂದಾಯ ಮಾಡದೆ ಸರಕಾರದ ನೈಸಗರ್ಿಕ ಸಂಪತ್ತಾದ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತೆಗೆದುಕೊಂಡು ಹೋಗುವದು ಗೊತ್ತಾಗಿದ್ದು ಇರುತ್ತದೆ, ಸದರಿ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 91/2020 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 184/2020. ಕಲಂ 143, 147 498, ?,323,504,506 ಸಂಗಡ 149 ಐ.ಪಿ.ಸಿ : ಫಿಯರ್ಾದಿದಾರರಿಗೆ ಆಕೆಯ ಗಂಡ ಮತ್ತು ಕುಟುಂಬದವರು ಕೂಡಿ ಮದುವೆಯಾದ ಕೆಲವು ದಿನಗಳಿಂದ ಕೌಟುಂಬಿಕ ಕಿರುಕುಳ ನೀಡಿ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಗೆ ಹಾಕಿದ್ದು ಅಲ್ಲದೇ ದಿನಾಂಕ: 17-09-2019 ರಮದು 2:00 ಗಂಟೆಗೆ ಫಿಯರ್ಾದಿಯ ತವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಹೊಡೆಬಡೆ ಮಾಡಿದ್ದು ಇಲ್ಲಿಯ ವರೆಗೂ ಮನೆಗೆ ಕರೆದುಕೊಂಡು ಹೋಗಿರುವುದಿಲ್ಲ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 184/2020 ಕಲಂ 143, 147, 498, ?,323,504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 185/2020 ಕಲಂ 323,324,504,506 ಸಂ 34 ಐಪಿಸಿ : ಇಂದು ದಿನಾಂಕ: 07/07/2020 ರಂದು 2.00 ಪಿಎಂ ಕ್ಕೆ ಅಜರ್ಿದಾರರಾದ ಶ್ರೀ ತಿಮ್ಮಪ್ಪ ತಂದೆ ಹನುಮಪ್ಪ ಗೌಡೂರ ಸಾ|| ಪರಸಾಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಅಜರ್ಿಯ ಸಾರಾಂಶವೆನೆಂದರೆ, ದಿನಾಂಕ 01/06/2020 ರಂದು ಬೆಳಿಗ್ಗೆ 6.00 ಗಂಟೆಗೆ ಪರಸಾಪೂರ ಗ್ರಾಮದ ಹರಿಜನವಾಡಾದ ನಮ್ಮ ಮನೆಯ ಮುಂದೆ ಕಸ ಹೊಡೆಯುತ್ತಿರುವಾಗ ನಮ್ಮ ಮನೆಯ ಪಕ್ಕದ 1) ಸಂತೋಷ ತಂದೆ ಸಿದ್ದಲಿಂಗಪ್ಪ ಚಲವಾದಿ ಯವರ ಮನೆಯ ಕರೆಂಟ ವೈರ ಹರಿದು ನಮ್ಮ ಮನೆಯ ಮುಂದಿನ ಜಾಗದಲ್ಲಿ ಬಿದ್ದಿದ್ದು ಅದು ನಮಗೆ ತಗಲುತ್ತದೆ ಅನ್ನುವ ಕಾರಣದಿಂದ ಕರೆಂಟ ವೈರ ತೆಗದು ಹಾಕು ಅಂತಾ ಸಂತೋಷನಿಗೆ ಹೇಳಿದಾಗ ಸಂತೋಷನು ನನ್ನೊಂದಿಗೆ ಜಗಳ ತೆಗೆದು ಬಡಿಗೆಯಿಂದ ಹೊಡೆಯುತ್ತಿದ್ದಾಗ ಸಂತೋಷನ ಜೊತೆಗೂಡಿ 2)ತಿಮ್ಮಪ್ಪ ತಂದೆ ದ್ಯಾವಪ್ಪ ಚಲವಾದಿ, 3)ಶರಣು ತಂದೆ ತಿಮ್ಮಪ್ಪ ಚಲವಾದಿ ಹಾಗೂ 4)ಸಿದ್ದಲಿಂಗಪ್ಪ ತಂದೆ ದ್ಯಾವಪ್ಪ ಚಲವಾದಿ ಸಾ|| ಎಲ್ಲರೂ ಪರಸಾಪೂರ ತಾ|| ಶಹಾಪೂರ ಇವರೆಲ್ಲರೂ ಕೂಡಿ ವಿನಾಕಾರಣ ಜಗಳ ತೆಗೆದು ಎಳೆದಾಡಿ ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಹೊಡೆಯುತ್ತಿದ್ದಾಗ ಸಾಕ್ಷಿದಾರರಾದ ಜಂಗಮಯ್ಯ ತಂದೆ ನಿಂಗಯ್ಯ ಕವಲಿ ಮತ್ತು ನರಸಪ್ಪ ತಂದೆ ಸಂಜೀವಪ್ಪ ಚಲವಾದಿ ಸಾ|| ಪರಸಾಪೂರ ಇವರು ಬಂದು ಜಗಳ ಬಿಡಿಸಿರುತ್ತಾರೆ ಅಂತಾ ಇತ್ಯಾದಿ ಇದ್ದ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 185/2020 ಕಲಂ: 323, 324, 504, 506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 186/2020 ಕಲಂ 188 ಐ.ಪಿ.ಸಿ : ಇಂದು ದಿನಾಂಕ 07/07/2020 ರಂದು ಮದ್ಯಾಹ್ನ 15-15 ಗಂಟೆಗೆ ಫಿರ್ಯಾಧಿ ಶ್ರೀ ರಾವುತಪ್ಪ ತಂದೆ ಭೀಮರಾಯ ಹವ್ಹಾಲ್ದಾರ ವ|| 35 ಜಾ|| ಬೇಡರ ಉ|| ಸಮಾಜ ಕಲ್ಯಾಣ ಅಧಿಕಾರಿಗಳು ಶಹಾಪೂರ ಸಾ|| ಮುಡೂಬೂಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತಾಲೂಕ ಮಟ್ಟದ ಕ್ಷಿಪ್ರ ಸಂಚಾರಿದಳ ಸಂಖ್ಯೆ-3 ಸದಸ್ಯರುಗಳಾದ 1] ರಾವುತಪ್ಪ ತಂದೆ ಭೀಮರಾಯ ಹವ್ಹಾಲ್ದಾರ ಸಮಾಜ ಕಲ್ಯಾಣ ಅಧಿಕಾರಿಗಳು ಶಹಾಪೂರ 2] ಸದ್ದಾಂಹುಸೇನ ತಂದೆ ಸೈಯದ ಇಮಾಮ ಸಾಬ ಇನಾಮದಾರ ದ್ವಿತಿಯ ದಜರ್ೇಯ ಸಹಾಯಕರು ತಹಸಿಲ್ದಾರ ಕಛೇರಿ ಶಹಾಪುರ 3] ಮಲ್ಲಣ್ಣ ದೇಸಾಯಿ. ಹೆಚ್.ಸಿ.,79 ಶಹಾಪುರ ಪೊಲೀಸ್ ಠಾಣೆ. ಇವರಿಗೆ ನೇಮಿಸಿದ್ದು ನಾವುಗಳು ಇಬ್ರಾಹಿಂಪೂರ ಗ್ರಾಮದ ಅಬ್ದುಲ್ ಬಾಷಾ (ಕೆರಿಯಲ್ಲಿ ) ದಗರ್ಾದಲ್ಲಿ ದಿನಾಂಕ 06/07/2020 ರಂದು 2-00 ಪಿ.ಎಂ.ಕ್ಕೆ ಬೇಟಿನಿಡಿದಾಗ ಅಲ್ಲಿ 1] ವಲಿಬಾಬು ತಂದೆ ಮೈಹಿಬೂಬಸಾಬ ಮುಜಾವರ 2] ರಹೀಮಾನ ಸಾಬ ತಂದೆ ಖಾಸಿಂಸಾಬ ಮುಜಾವರ 3] ಇಸ್ಮಾಹಿಲ್ ತಂದೆ ಖಾಸಿಂಸಾಬ ಮುಜಾವರ 4] ರಫೀಕ್ಸಾಬ ತಂದೆ ಶಮರ್ುದ್ದಿನ್ ಮುಜಾವರ 5] ಸೂಫೀಸಾಬ ತಂದೆ ಅಬ್ದುಲ್ ವಹಾಬ ಮುಜಾವರ 6] ಬಾಷಾ ತಂದೆ ಅಬ್ದುಲ್ಸಾಬ ಮುಜಾವರ 7] ಅಬ್ದುಲ್ಲಾ ತಂದೆ ಇಬ್ರಾಹಿಂಶಾ ಮುಜಾವರ 8] ಅಬ್ದುಲ್ಲಾ ತಂದೆ ನಬಿಸಾಬ ಮುಜಾವರ 9] ಮೈಬೂಬಸಾಬ ತಂದೆ ಇಮಾಮಸಾಬ ಮುಜಾವರ 10] ಗುಲಾಮಸಾಬ ತಂದೆ ಸೂಫೀಸಾಬ ಮುಜಾವರ 11] ಮೈನೂದ್ದಿನ್ಸಾಬ ತಂದೆ ಸೂಫೀಸಾಬ ಮುಜಾವರ 12] ಸೂಫೀಲಾಲ್ ತಂದೆ ಅಬ್ದೂಲ್ ನಬಿ ಮುಜಾವರ 13] ಮೈಬೂಬಸಾಬ ತಂದೆ ಸೂಫೀಸಾಬ ಮುಜಾವರ 14] ಶಬ್ಬೀರಸಾಬ ತಂದೆ ಅಬ್ದುಲ್ ರಸೂಲ್ ಮುಜಾವರ 15] ಅಬ್ದುಲ್ ರಹಿಂ ತಂದೆ ಉಸ್ಮಾನಸಾಬ ಮುಜಾವರ 16] ಅಬ್ದುಲ್ ಮಜಿದ್ ತಂದೆ ಇಮಾಮಸಾಬ ಮುಜಾವರ 17] ಶಖಿಲ್ ಸಾಬ ತಂದೆ ಮೈಬೂಬಸಾಬ ಮುಜಾವರ 18] ದರೇಶ ತಂದೆ ಅಬ್ದುಲ್ ಅಜೀಜ ಮುಜಾವರ ಸಾ|| ಎಲ್ಲರು ಇಬ್ರಾಹಿಂಪೂರ ಇವರು ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ದಾಮರ್ಿಕ ಕಾರ್ಯಕ್ರಮಗಳು ಆಚರಣೆ ಮಾಡಿದ್ದು ಇರುತ್ತದೆ ಸದರಿಯವರು ಕೋವಿಡ್-19 ಗೆ ಸಂಬಂದಿಸಿದ ನಿಯಮಕ್ಕೆ ನಿಯಮಗಳನ್ನು ಉಲ್ಲಂಗಿಸಿರುತ್ತಾರೆ. ನಾನು ನಮ್ಮ ಮೇಲಾಧಿಕಾರಿಗಳೊಂದಿಗೆ ತಿಳಿಸಿ ಇಂದು ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ. ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 186/2020 ಕಲಂ 188 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 187/2020 ಕಲಂ 420,34 ಐ.ಪಿ.ಸಿ : ಇಂದು ದಿನಾಂಕ 07/07/2020 ರಂದು 5.00 ಪಿಎಂ ಕ್ಕೆ ಅಜರ್ಿದಾರರಾದ ಮಲ್ಲಿಕಾಜರ್ುನ ತಂದೆ ಮಾರ್ತಂಡಪ್ಪ ಮಾಲಿ ಪಾಟೀಲ್ ವ|| 26ವರ್ಷ ಜಾ|| ಕುರುಬರ ಉ|| ಕಿರಾಣಿ ವ್ಯಾಪಾರ ಸಾ|| ಶಖಾಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಾನು ಕಿರಾಣಿ ವ್ಯಾಪಾರ ಮಾಡಿಕೊಂಡು ತಂದೆ ತಾಯಿ ತಮ್ಮನೊಂದಿಗೆ ಇದ್ದು ಉಪಜೀವನ ಸಾಗಿಸುತ್ತಿದ್ದೇನೆ. ಹೀಗಿದ್ದು ನನ್ನ ಹತ್ತಿರ ನಮಗೆ ಪರಿಚಯ ಇರುವ ಶಹಾಪೂರ ನಗರದ ಗಂಗಾನಗರ ಕಾಲೋನಿಯ ರಾಂಘವೇಂದ್ರ ತಂದೆ ಹಣಮಂತ್ರಾಯ ಬಜಾರಮನಿ ಇವರು ತಮ್ಮ ಸಂಬಂಧಿಕರಾದ ಯಮನಪ್ಪ ಬಿಜಾಪೂರ ಇವರೊಂದಿಗೆ ಕೂಡಿ ಶಹಾಪೂರ ನಗರದಲ್ಲಿ ಶ್ರೀ ಭಾಗ್ಯವಂತಿ ಬಿಗ್ ಮಾಕರ್ೆಟಿಂಗ್ ಎಂಬ ಹೆಸರಿನ ಲಕ್ಕಿ ಡ್ರಾ ಸ್ಕೀಮನ್ನು ಮಾಡಿ ಸ್ಕೀಮಿನಲ್ಲಿ 536 ಕಾಡರ್ುಗಳಿವೆ ಒಟ್ಟು 12 ತಿಂಗಳು ಒಂದು ಕಾಡರ್ಿಗೆ ತಿಂಗಳಿಗೆ 2500/- ರೂಪಾಯಿಯಂತೆ ಒಟ್ಟು 30000/- ರೂಪಾಯಿ ತುಂಬಬೇಕು ಮೊದಲ 10 ಡ್ರಾಗಳಲ್ಲಿ 2 ಜನರಂತೆ ಒಟ್ಟು 20 ಜನರನ್ನು ಆಯ್ಕೆ ಮಾಡಲಾಗುವುದು, ನಂತರ 11 ಡ್ರಾದಲ್ಲಿ 4 ಜನರಿಗೆ, 12ನೇ ಡ್ರಾದಲ್ಲಿ 8 ಜನರಿಗೆ ನಂತರ 13ನೇ ಡ್ರಾದಿಂದ 84 ನೇ ಡ್ರಾದವರೆಗೆ 7 ಜನರಂತೆ ಆಯ್ಕೆ ಮಾಡಲಾಗುವುದು ಲಕ್ಕಿ ಡ್ರಾ ಸ್ಕೀಮಿನಲ್ಲಿ ಕಾರ್ಡ ಸದಸ್ಯರಾದ ಪ್ರತಿಯೊಬ್ಬರಿಗೂ ಮೋಟಾರ ಸೈಕಲ್ ಸಿಗುತ್ತದೆ. ಲಕ್ಕಿ ಡ್ರಾದ ಮೂಲಕ ಯಾರಿಗೆ ಮೊದಲು ಯಾರಿಗೆ ನಂತರ ಎಂಬುದು ಡ್ರಾನಲ್ಲಿ ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಿ ಸೈಕಲ್ ಮೋಟಾರ ನೀಡಲಾಗುವುದು ಇದೊಂದು ನಿಮಗೆ ಒಳ್ಳೆಯ ಸುವಣರ್ಾವಕಾಶ ಕೇವಲ 30000/- ರೂಪಾಯಿಯಲ್ಲಿ 85000/- ರೂಪಾಯಿಯ ಪ್ಯಾಷನ್ ಪ್ರೋ ಮೋಟಾರ ಸೈಕಲ್ ಸಿಗುತ್ತದೆ ಮತ್ತು 10 ಕಾರ್ಡ ತೆಗೆದುಕೊಂಡವರಿಗೆ ಒಂದು ಕಾರ್ಡ ಉಚಿತ 9 ಕಾಡರ್ಿನ ಹಣ ಮಾತ್ರ ತುಂಬಬೇಕು ಅಂತಾ ನಮ್ಮ ಹತ್ತಿರ ಬಂದು ನಮಗೆ ಮನವೊಲಿಸಿದ್ದರಿಂದ ನಾನು ನಂಬಿ ರಾಘವೇಂದ್ರ ರವರ ಹತ್ತಿರ ಒಟ್ಟು 40 ಲಕ್ಕಿ ಡ್ರಾ ಸ್ಕೀಮಿನ ಕಾರ್ಡಗಳು ತೆಗೆದುಕೊಂಡಿದ್ದು 4 ಕಾಡರ್ುಗಳು ಉಚಿತವಾಗಿದ್ದು ಮತ್ತು 36 ಕಾಡರ್ಿನ ಹಣ ಒಟ್ಟು 1080000/- ರೂಪಾಯಿಯನ್ನು 12 ತಿಂಗಳಲ್ಲಿ ತುಂಬಿದ್ದು ಹಣ ತುಂಬಿದ ಬಗ್ಗೆ ಪ್ರತಿ ತಿಂಗಳಿನಂತೆ ಕಾಡರ್ಿನಲ್ಲಿ ರಾಘವೇಂದ್ರನ ಸಹಿ ಪಡೆದಿದ್ದು ಸಹಿ ಪಡೆದ ಕಾರ್ಡಗಳು ನಮ್ಮ ಹತ್ತಿರ ಇದ್ದು ಲಕ್ಕಿ ಡ್ರಾ ಸ್ಕೀಮ ಪ್ರಾರಂಭವಾಗಿ 4ವರ್ಷ 4 ತಿಂಗಳು ಅಂದರೆ 52 ಕಂತುಗಳು ಮುಗಿದಿದ್ದು ಇಲ್ಲಿಯವರೆಗೂ ನಮಗೆ ಯಾವುದೇ ಡ್ರಾ ಆಯ್ಕೆಯಾಗದೇ ಇದ್ದು ಈಗ್ಗೆ 5 ತಿಂಗಳ ಹಿಂದೆ ಸ್ಕೀಮನ್ನು ಸ್ಥಗಿತಗೊಳಿಸಿದ್ದು ನಮ್ಮ ಹಣ ನಮಗೆ ವಾಪಸ್ ಕೊಡಿ ಅಂತಾ ಕೇಳಲು ಹೋದರೆ ಸ್ಕೀಮ ಮುಗಿದು ಹೋಯಿತು ನಿಮ್ಮ ಹಣ ವಾಪಸ್ ಬರಲ್ಲ ಲಕ್ಕಿ ಡ್ರಾ ಅಂದ ಮೇಲೆ ಡ್ರಾನಲ್ಲಿ ಆಯ್ಕೆಯಾದವರು ಲಕ್ಕಿಗಳು ಆಯ್ಕೆಯಾಗದೇ ಇದ್ದವರು ದುದರ್ೈವಿಗಳು ಹೀಗಾಗಿ ನಿಮಗೆ ಡ್ರಾ ಹತ್ತಿಲ್ಲ ನೀವು ದುದರ್ೈವಿಗಳು ನಾವೇನು ಮಾಡಲು ಆಗಲ್ಲ. ನಿಮ್ಮ ಹಣ ಖಚರ್ು ಆಗಿವೆ ಅವು ವಾಪಸ್ ಕೊಡಲು ಸಾಧ್ಯವಿಲ್ಲ ಅಂತಾ ತಿಳಿಸಿದ್ದು ನಮಗೆ ಲಕ್ಕಿ ಡ್ರಾ ಸ್ಕೀಮ ಚನ್ನಾಗಿದೆ ಅಂತಾ ನಂಬಿಸಿ ಹಣ ಪಡೆದು ಈಗ ನಮಗೆ ಸೈಕಲ್ ಮೋಟಾರ ನೀಡದೇ ಹಣ ವಾಪಸ್ ಕೊಡದೇ ಮೋಸ ಮಾಡಿದ್ದು ಇರುತ್ತದೆ. ಮತ್ತು ನನ್ನಂತೆಯೇ ರಂಜಿತ್ ತಂದೆ ಮಲ್ಲೇಶಪ್ಪ ರೆಡ್ಡಿ ಸಾ|| ಶಹಾಪೂರ ಇವರಿಗೆ 1 ಕಾಡರ್ು ನೀಡಿ 12 ತಿಂಗಳಿಗೆ ಒಟ್ಟು 30000/- ರೂಪಾಯಿ ತೆಗೆದುಕೊಂಡು ಅವರಿಗೂ ಸೈಕಲ್ ಮೋಟಾರ ನೀಡದೇ ಹಣ ವಾಪಸ್ ಕೊಡದೇ ಮೋಸ ಮಾಡಿದ್ದು, ಅದರಂತೆ ಅಮಾಸಿ ತಂದೆ ಚಿನ್ನಸ್ವಾಮಿ, ಶಶಿಧರ ತಂದೆ ಹಣಮಂತ ವರ್ಚನಳ್ಳಿ, ಗುಡುಸಾಬ ತಂದೆ ಬಾಬುಮಿಯಾ ಅತ್ತಾರ ಸಾ|| ಟಿ.ವಡಗೇರಾ, ಶಿವು ತಂದೆ ಮುರುಗೇಶ ಹಾಗೂ ಇತರರಿಗೂ ಕಾಡರ್ುಗಳನ್ನು ನೀಡಿ ಹಣ ಪಡೆದು ಡ್ರಾನಲ್ಲಿ ಮೋಟಾರ ಸೈಕಲ್ ಕೊಡದೇ ಮರಳಿ ಹಣವೂ ಕೊಡದೇ ಲಕ್ಕಿ ಡ್ರಾ ಸ್ಕೀಮನ್ನು ಬಂದ್ ಮಾಡಿದ್ದು ಕೇಳಲು ಹೋದರೆ ಅದರ ಮಾಲೀಕ ಯಮನಪ್ಪ ಬಿಜಾಪೂರ ಇವರು ಇದ್ದಾರೆ ಅವರಿಗೆ ಕೇಳ್ರಿ ನಾನು ನಿಮ್ಮಿಂದ ಹಣ ಪಡೆದಿದ್ದು ನಿಜ ಆದರೆ ಸ್ಕೀಮಿನ ಮಾಲೀಕರೇ ಹೊಣೆಗಾರರು ಅಂತಾ ಹಾರಿಕೆ ಉತ್ತರ ಕೊಡುತ್ತಾ ನಮ್ಮಿಂದ ನೇರವಾಗಿ ಹಣ ಪಡೆದು ನಮ್ಮ ಹಣ ದುರ್ಬಳಕೆ ಮಾಡಿಕೊಂಡು ನಮಗೆ ಮೋಸ ಮಾಡಿದ ರಾಘವೇಂದ್ರ ತಂದೆ ಹಣಮಂತ್ರಾಯ ಬಜಾರಮನಿ ಹಾಗೂ ಸ್ಕೀಮಿನ ಮಾಲೀಕರಾದ ಯಮನಪ್ಪ ಬಿಜಾಪೂರ ಇವರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 187/2020 ಕಲಂ 420 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 110/2020 ಕಲಂ: 323.498[ಎ],504.506 ಸಂಗಡ 34 ಐಪಿಸಿ : ಇಂದು ದಿನಾಂಕ 07.07.2020 ರಂದು 6 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ರೇಣುಕಾ ಗಂಡ ಹುಲಗಪ್ಪ ಹಳ್ಳೇರ ವಯಾ|| 30 ಜಾ|| ಬೇಡರ ಉ|| ಕೂಲಿಕೆಲಸ ಸಾ|| ನಗನೂರ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ, ನನ್ನ ತವರು ಮನೆ ನಗನೂರ ಗ್ರಾಮವಿದ್ದು ಸುಮಾರು 10 ವರ್ಷಗಳ ಹಿಂದೆ ನನಗೆ ಸುರಪೂರ ತಾಲೂಕಿನ ಕಕ್ಕೇರಾ ಗ್ರಾಮದ ಹುಲಗಪ್ಪ ತಂದೆ ಹಣಮಂತ್ರಾಯ ಹಳ್ಳೇರ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದಾಗಿನಿಂದ ನಾನು ಹಾಗು ನನ್ನ ಗಂಡ ಹುಲಗಪ್ಪ ನಾವಿಬ್ಬರೂ ಅನೂನ್ಯವಾಗಿದ್ದೆವು. ಸದ್ಯ ನನಗೆ ಮೂರು ಜನ ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡು ಮಗನಿರುತ್ತಾನೆ. ನನ್ನ ಗಂಡನು ಸುಮಾರು 2 ವರ್ಷದಿಂದ ನಮ್ಮ ಅತ್ತಿಯಾದ ಹಳ್ಳೆಮ್ಮ ಇವಳ ಮಾತು ಕೇಳಿ ನನಗೆ ತಿರಸ್ಕಾರದ ಭಾವನೆಯಿಂದ ನೋಡುವದು ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲ ಹಾಗು ನೀನು ಕಪ್ಪಾಗಿದಿ ಅಂತ ಮಾನಸಿಕವಾಗಿ ಹಿಂಸೆ ಕೊಡಲು ಪ್ರಾರಂಭಿಸಿದನು. ಮಕ್ಕಳ ಮುಖ ನೋಡಿ ಸದರಿಯವನ ಕಿರುಕುಳ ತಾಳಿ ಸುಮ್ಮನಿದ್ದೆನು. ಸದರ ನನ್ನ ಗಂಡ ಹಾಗು ಅತ್ತೆ ಇಬ್ಬರೂ ಕೂಡಿ ದಿನಾಲು ನನಗೆ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡಲಿಕ್ಕೆ ಹತ್ತಿದ್ದರಿಂದ ನಾನು ಸದರ ವಿಷಯ ನನ್ನ ಅಣ್ಣನಾದ ಹುಲಗಪ್ಪ ಹವಲ್ದಾರ ತಂದೆಯಾದ ಮಲ್ಲಿಕಾಜರ್ುನ ತಂದೆ ದೊಡ್ಡಪ್ಪ ಹವಲ್ದಾರ ಹಾಗು ತಾಯಿಯಾದ ಮಲಕಮ್ಮ ಹವಲ್ದಾರ ಇವರೆಲ್ಲರಿಗೂ ತಿಳಿಸಿ ಸದರಿಯವರ ಕಿರುಕುಳ ತಾಳಲಾರದೇ ನಾನು ಸುಮಾರು ಒಂದು ವರ್ಷದ ಹಿಂದೆ ನನ್ನ ತವರು ಮನೆಯಾದ ನಗನೂರ ಗ್ರಾಮಕ್ಕೆ ಬಂದು ನಮ್ಮ ತಂದೆ ತಾಯಿಯವರಲ್ಲಿ ವಾಸವಾಗಿರುತ್ತೇನೆ.
ಹೀಗಿದ್ದು ದಿನಾಂಕ 13.06.2020 ರಂದು 12.30 ಪಿ ಎಮ್ ಸುಮಾರಿಗೆ ನಾನು ಹಾಗು ನಮ್ಮ ತಾಯಿ ಇಬ್ಬರು ಮನೆಯಲ್ಲಿದ್ದಾಗ ನನ್ನ ಗಂಡನಾದ 1] ಹುಲಗಪ್ಪ ತಂದೆ ಹಣಮಂತ್ರಾಯ ಹಳ್ಳೇರ ಅತ್ತೆಯಾದ 2] ಹಳ್ಳೆಮ್ಮ ಗಂಡ ಭೀಮಣ್ಣ ಹಳ್ಳೇರ ಹಾಗು ಮಾವನಾದ 3] ಹಣಮಂತ್ರಾಯ ತಂದೆ ಸಣ್ಣೆಪ್ಪ ಹಳ್ಳೇರ ಸಾ|| ಎಲ್ಲರೂ ಕಕ್ಕೇರಾ ಇವರೆಲ್ಲರೂ ಕೂಡಿ ನಮ್ಮ ಮನೆಗೆ ಬಂದು ಅವರಲ್ಲಿ ನನ್ನ ಗಂಡನು ಏನಲೇ ರೇಣಿ ನಾನು ಹಳ್ಳೆಮ್ಮಳ ಜೊತೆ ಬೇಕಾದದ್ದನ್ನು ಮಾಡುತ್ತೇನೆ ಅದನ್ನು ಕೇಳುವವಳು ನೀನು ಯಾರು ಸೂಳೀ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಏಕೇ ಬೈಯುತ್ತೀ ಅಂತ ಅಂದಾಗ ಎಲ್ಲರೂ ಹೊಡೆಯಿರಿ ಈ ಸೂಳಿಯದು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಾ ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನನ್ನ ತಾಯಿ ಮಲಕಮ್ಮ ಹಾಗು ಪಕ್ಕದ ಮನೆಯ ದೇವಪ್ಪ ತಂದೆ ಚಂದಪ್ಪ ನಾಗರಾಳ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳಿ ಇನ್ನು ಮುಂದೆ ಹಳ್ಳೆಮ್ಮ ಇವಳ ಬಗ್ಗೆ ಮಾತನಾಡಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಈ ವಿಷಯವಾಗಿ ಊರಿಗೆ ಹೋದ ನಮ್ಮ ಅಣ್ಣ ಬಂದ ನಂತರ ಅವರ ಜೊತೆ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಎಲ್ಲಾ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 110/2020 ಕಲಂ 498[ಎ], 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 07/2020 174 ಸಿ.ಆರ್.ಪಿ.ಸಿ : ಮೃತನು ತಮ್ಮ ಹೊಲದಲ್ಲಿ ಭತ್ತದ ಸಸಿ ಹಚ್ಚುವ ಕುರಿತು ಜುಮ್ಮಣ್ಣ ಮೇಟಿ ಸಾ:ಮಂಜಲಾಪೂರ ಹಳ್ಳಿ ಇವರ ಹೊಲದಲ್ಲಿ ಭಾವಿ ಇದ್ದುದರಿಂದ ಸಸಿ ಹಾಕಿದ್ದು, ಸಸಿಗೆ ನೀರು ಬಿಡಲು ಇಂದು ದಿನಾಂಕ:07/07/2020 ರಂದು ಬೆಳಿಗ್ಗೆ 07.00 ಗಂಟೆಯ ಸುಮಾರಿಗೆ ಮೃತನು ಜುಮ್ಮಣ್ಣ ಮೇಟಿ ಇವರ ಹೊಲಕ್ಕೆ ಹೋಗಿದ್ದು, ಸಸಿಗೆ ಕರೆಂಟ್ ಮೋಟರ ಚಾಲು ಮಾಡಿ ನಿರು ಬಿಟ್ಟು ಭಾವಿಯ ದಡದ ಮೇಲಿಂದ ಬರುವಾಗ ಭಾವಿಗೆ ಕಲ್ಲಿನ ಗೋಡೆ ಇರದೆ ಮಣ್ಣು ಇದ್ದುದರಿಂದ ಸದರಿ ಮಣ್ಣು ಕುಸಿದು ಮೃತನು ಭಾವಿಯಲ್ಲಿ ಬಿದ್ದಿದ್ದು, ಮೃತನಿಗೆ ಈಜು ಬರದ್ದರಿಂದ & ಭಾವಿಯಲ್ಲಿ ಆಳವಾದ ನೀರು ಇದ್ದುದರಿಂದ ಹೊರಗಡೆ ಬರಲಾಗದೆ ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟ ಬಗ್ಗೆ ಅಪರಾಧ
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 111/2020 ಕಲಂ 143.147.447,341.323,504,506 ಸಂಗಡ 149 ಐ.ಪಿ.ಸಿ : ಇಂದು ದಿನಾಂಕ 07/07/2020 ರಂದು 8.15 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಲಕ್ಷ್ಮಣ ತಂದೆ ಗೇಮು ಜಾದವ ವ|| 50 ಜಾ|| ಲಂಬಾಣಿ ಉ|| ಹೊಲಮನೆಗೆಲಸ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಅಜರ್ಿ ಸಾರಾಂಶವೆನೆಂದರೆ ಏವೂರ ಸೀಮಾಂತರದ ನನ್ನ ಹೆಂಡತಿಯ ಹೆಸರಿನಲ್ಲಿರುವ ಹೊಲ ಸವರ್ೆ ನಂಬರ 60 ರಲ್ಲಿ 4 ಎಕರೆ ಹೊಲವಿದ್ದು ಸದರಿ ಜಮೀನು ಸುಮಾರು ವರ್ಷಗಳಿಂದ ಸದರಿ ಹೊಲ ನಮ್ಮ ಕಬ್ಜಾದಲ್ಲಿದ್ದು, ಸದರಿ ಜಮೀನಿನಲ್ಲಿ ಏನೂ ಬೆಳೆ ಬೆಳೆಯದ ಕಾರಣ ನಾನು ಮತ್ತು ಹೆಂಡತಿ ಮಕ್ಕಳೊಂದಿಗೆ ಮಾಹಾರಾಷ್ಟ್ರ ರಾಜ್ಯಕ್ಕೆ ದುಡಿಯಲು ಹೋಗಿ ಸುಮಾರು 7-8 ವರ್ಷಗಳಿದ್ದು ವಾಪಸ್ಸು ನಮ್ಮ ಊರಿಗೆ ಬಂದಿರುತ್ತೇವೆ. ನಮ್ಮ ಜಮೀನಿಲ್ಲಿ ಸಾಗುವಳಿ ಮಾಡಲು ಹೋದಾಗ ಈ ಜಮೀನಿನಲ್ಲಿ ನಮಗೆ ಪಾಲು ಬರುತ್ತದೆ ಅಂತ ಏವೂರ ಗ್ರಾಮದ ಎಸ್.ಸಿ ಜನಾಂಗದವರಾದ ವಿಜಪ್ಪ ತಂದೆ ಗೊಲ್ಲಾಳಪ್ಪ ಗುಡಿಮನಿ ಇವರು ನಮ್ಮ ಜೊತೆಯಲ್ಲಿ ತಕರಾರು ಮಾಡುತ್ತಾ ಬಂದಿರುತ್ತಾರೆ. ಸದರಿಯವರ ಹೆಸರಿನಲ್ಲಿ ಯಾವದೇ ದಾಖಲಾತಿಗಳು ಇಲ್ಲದಿದ್ದರು ವಿನಾಕಾರಣ ನಮಗೆ ತೊಂದರೆ ಕೊಡುತ್ತಾ ಬಿತ್ತುವ ಸಮಯದಲ್ಲಿ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ನಮ್ಮ ಜಮೀನು ಮೊನ್ನೆ ದಿನಾಂಕ 05/07/2020 ರಂದು ನಮ್ಮ ಹೊಲದಲ್ಲಿ ತೋಗರಿ ಬಿತ್ತಿದ್ದು, ನಿನ್ನೆ ದಿನಾಂಕ 06/07/2020 ರಂದು 1.00 ಎಮ್ ಸುಮಾರಿಗೆ ನಾನು ನನ್ನ ಹೆಂಡತಿಯಾದ ತಾರಿಬಾಯಿ, ಸಂಬಂದಿಕರಾದ ಗಮಲಿಬಾಯಿ ಗಂಡ ಜಾದವ ಮತ್ತು ಶಾಂತಿಬಾಯಿ ಗಂಡ ನಂದು ಜಾದವ ಎಲ್ಲರೂ ಕೂಡಿ ಹೊಲದಲ್ಲಿ ಕಸ ಆರಿಸುತ್ತಿದ್ದಾಗ ಏವೂರ ಗ್ರಾಮದ ಎಸ್.ಸಿ ಸಮುದಾಯವರಾದ 1] ವಿಜಪ್ಪ ತಂದೆ ಗೊಲ್ಲಾಳಪ್ಪ ಗುಡಿಮನಿ 2] ದುರ್ಗಪ್ಪ ತಂದೆ ಗೊಲ್ಲಾಳಪ್ಪ ಗುಡಿಮನಿ 3] ಮುದಕಪ್ಪ ತಂದೆ ಗೊಲ್ಲಾಳಪ್ಪ ಗುಡಿಮನಿ 4] ಶ್ರೀಶೈಲ್ ತಂದೆ ತಂದೆ ಗೊಲ್ಲಾಳಪ್ಪ ಗುಡಿಮನಿ 5) ಪುತ್ರಪ್ಪ ತಂದೆ ಗೊಲ್ಲಾಳಪ್ಪ ಗುಡಿಮನಿ 6) ಸಿದ್ದು ತಂದೆ ಶಾಂತಪ್ಪ ಗುಡಿಮನಿ 7) ದೇವಪ್ಪ ತಂದೆ ಶಾಂತಪ್ಪ ಗುಡಿಮನಿ 8) ಶರಣಪ್ಪ ತಂದೆ ಪಿಲ್ಲಪ್ಪ ಗುಡಿಮನಿ 9) ರಾಜು ತಂದೆ ಪಿಲ್ಲಪ್ಪ ಗುಡಿಮನಿ 10) ಗೊಲ್ಲಾಳಪ್ಪ ತಂದೆ ಮುದಕಪ್ಪ ಗುಡಿಮನಿ 11) ಶರಣಪ್ಪ ತಂದೆ ಪಿಲ್ಲಪ್ಪ ಗುಡಿಮನಿ 12) ಭೀಮವ್ವ ಗಂಡ ಪಿಲ್ಲಪ್ಪ ಗುಡಿಮನಿ ಎಲ್ಲರು ಸಾ|| ಏವೂರ ಇವರೆಲ್ಲರೂ ಗುಂಪು ಕಟ್ಟಿಕೊಂಡು ಅಕ್ರಮವಾಗಿ ನಮ್ಮ ಹೊಲದಲ್ಲಿ ಪ್ರವೇಶ ಮಾಡಿ ಎಲ್ಲರೂ ನನಗೆ ಎಲೇ ಸೂಳೆ ಮಗನೇ ಈ ಜಮೀನಿನಲ್ಲಿ ನಮ್ಮದು ಪಾಲು ಬರುತ್ತದೆ, ಇಲ್ಲಿ ಯಾರಾದರೂ ಇದ್ದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದಾಡುತ್ತಿರುವಾಗ ನಾನು ಅವರಿಗೆ ಅಂಜಿ ಹೊಲದ ಹೊರಗೆ ಹೋಗುತ್ತಿದ್ದಾಗ ವಿಜಪ್ಪ ತಂದೆ ಗೊಲ್ಲಾಳಪ್ಪ ಗುಡಮನಿ ಈತನು ನನಗೆ ತಡೆದು ನಿಲ್ಲಿಸಿ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ನಮ್ಮ ಹೆಂಡತಿ ತಾರಿಬಾಯಿ ಮತ್ತು ಸಂಬದಿಕರಾದ ಗಮಲಿಬಾಯಿ ಗಂಡ ಜೈರಾಮ ಜಾದವ ಹಾಗೂ ಶಾಂತಿಬಾಯಿ ಗಂಡ ನಂದು ಜಾದವ ಇವರೆಲ್ಲರು ಬಂದು ನನಗೆ ಹೊಡೆಯುವುದನ್ನು ಬಿಡಿಸಲು ಬಂದಾಗ ಅವರಿಗೂ ಸಹ ಸದರಿಯವರೆಲ್ಲರು ಈ ಜಮೀನನಲ್ಲಿ ಯಾರಾದರೆ ಇದ್ದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ ಕೂಡಲೇ ನಾವೆಲ್ಲರು ಅವರಿಗೆ ಅಂಜಿ ತಾಂಡಾಕ್ಕೆ ಬಂದಿರುತ್ತೇವೆ. ಈ ವಿಷಯದ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 12 ಜನರು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಯಾವದೇ ಹೊಲದ ಕಾಗದ ಪತ್ರಗಳು ಇಲ್ಲದೆಯೇ ನಮ್ಮ ಹೊಲದಲ್ಲಿ ತಮಗೆ ಪಾಲು ಬರುತ್ತದೆ ಅಂತಾ ತಡೆದು ನಿಲ್ಲಿಸಿ ಕೈಯಿಂದ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಅಜರ್ಿ ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 111/2020 ಕಲಂ 143, 147, 447, 341, 323, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 17/2020 ಕಲಂ: 107 ಸಿ.ಆರ್.ಪಿ.ಸಿ : ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ಇಂದು ದಿನಾಂಕಃ 07/07/2020 ರಂದು 10-30 ಎ.ಎಮ್ ಕ್ಕೆ ಶ್ರೀ ಶರಣಪ್ಪ ಸಿ.ಪಿ.ಸಿ 224 ಸುರಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕಃ 07/7/2020 ರಂದು 8 ಎ.ಎಮ್ ಕ್ಕೆ ಮಾನ್ಯರವರ ಆದೇಶದಂತೆ ಹಳ್ಳಿ ಬೇಟಿ ಕುರಿತು ಬೈರಿಮಡ್ಡಿ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಗಸ್ತು ಮಾಡಿ ಪ್ರಮುಖ ನಾಗರೀಕ ಸಮೀತಿ ಸದಸ್ಯರಿಗೆ ಹಾಗೂ ಪೊಲೀಸ್ ಬಾತ್ಮಿದಾರರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೆನೆಂದರೆ, ದಿನಾಂಕಃ25/06/2020 ರಂದು ಬೈರಿಮಡ್ಡಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಮತ್ತು ಕುರುಬ ಜನಾಂಗದವರ ಮದ್ಯೆ ಊರಲ್ಲಿ ಖುಲ್ಲಾ ಜಾಗದ ವಿಷಯಕ್ಕೆ ಜಗಳವಾಗಿದ್ದು. ದಿನಾಂಕ:26/06/2020 ರಂದು ಠಾಣಾ ಗುನ್ನೆ ನಂ. 155/2020 ಮತ್ತು 156/2020 ನೇದ್ದು ಗುನ್ನೆ ಪ್ರತಿಗುನ್ನೆಗಳು ದಾಖಲಾಗಿದ್ದು ಅಂದಿನಿಂದ ಇಲ್ಲಿಯವರೆಗೆ ಎರಡು ಪಾಟರ್ಿಯವರು ಪರಸ್ಪರ ವೈಷಮ್ಯ ಬೆಳೆಸಿಕೊಂಡಿರುತ್ತಾರೆ. ಗ್ರಾಮದಲ್ಲಿ ಎರಡು ಪಾಟರ್ಿಗಳಾಗಿದ್ದು, ಎರಡು ಪಾಟರ್ಿಯ ಜನರ ಮದ್ಯೆ ವಿಪರೀತ ದ್ವೇಷ ಬೆಳೆದು ಗ್ರಾಮದಲ್ಲಿ ನಾವು ಮೇಲು, ತಾವು ಮೇಲು ಅನ್ನುತ್ತ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು, ಯಾವುದೇ ಸಮಯದಲ್ಲಿ ಈ ಹಿಂದೆ ಕುರುಬ ಜನಾಂಗದವರು ತಮ್ಮ ಮೇಲೆ ಕೇಸ್ ಮಾಡಿರುವ ವೈಷಮ್ಯದಿಂದ ಹಾಗು ಗ್ರಾಮದಲ್ಲಿ ಖುಲ್ಲಾ ಜಾಗದ ವಿಷಯವಾಗಿ ಆಗಿರುವ ಮನಸ್ಥಾಪದಿಂದ 1) ಮಾನಶಪ್ಪ ತಂದೆ ಭೀಮಪ್ಪ ತಳವಾರ ವ:55 ಜಾ:ಬೇಡರ ಉ:ಒಕ್ಕಲುತನ 2) ಶಿವಪ್ಪ ತಂದೆ ಭೀಮಪ್ಪ ತಳವಾರ ವ:66 ಜಾ:ಬೇಡರ ಉ:ಒಕ್ಕಲುತ 3) ಮಾನಪ್ಪ ತಂದೆ ಶಿವಪ್ಪ ತಳವಾರ ವ:25 ಜಾ:ಬೇಡರ ಉ:ಒಕ್ಕಲುತನ 4) ಹಣಮಂತ ತಂದೆ ಶಿವಪ್ಪ ತಳವಾರ ವ:18 ಜಾ:ಬೇಡರ ಉ:ಕೂಲಿ 5) ಮರೆಪ್ಪ ತಂದೆ ಮಾನಶಪ್ಪ ತಳವಾರ ವ:20 ಜಾ:ಬೇಡರ 6) ದುರ್ಗಪ್ಪ ತಂದೆ ಮಾನಶಪ್ಪ ತಳವಾರ ವ:18 ಜಾ:ಬೇಡರ 7) ಸಕ್ರಪ್ಪ ತಂದೆ ಹಣಮಂತ ತಳವಾರ ವ:25 ಜಾ:ಬೇಡರ ಎಲ್ಲರೂ ಸಾ: ಬೈರಿಮಡ್ಡಿ ತಾಃ ಸುರಪೂರ ಜಿಃ ಯಾದಗಿರಿ ಮತ್ತು 8) ಬಲಭೀಮ ತಂದೆ ಬಸಣ್ಣ ಬೊಮ್ಮನಳ್ಳಿ ವ:32 ಜಾ:ಕುರುಬರ ಇವರೆಲ್ಲರೂ ಹೊಡೆಬಡೆ ಮಾಡಿ ಗ್ರಾಮದಲ್ಲಿ ಕಾನೂನು ಸೂವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಹಾಗು ಗ್ರಾಮದಲ್ಲಿ ಜೀವಹಾನಿ, ಆಸ್ತಿಪಾಸ್ತಿ ಹಾನಿಯಾಗುವ ಸಾದ್ಯತೆ ಕಂಡು ಬಂದಿರುವದರಿಂದ 10:30 ಎ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ 08 ಜನರ ವಿರುದ್ದ ಕಲಂ 107 ಸಿಆರ್ಪಿಸಿ ಅಡಿಯಲ್ಲಿ ಮುಂಜಾಗೃತಾ ಕ್ರಮ ಕೈಕೊಳ್ಳಬೇಕು ಅಂತ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂಬರ 17/2020 ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು..
Hello There!If you like this article Share with your friend using