ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/07/2020

By blogger on ಸೋಮವಾರ, ಜುಲೈ 6, 2020

                      


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/07/2020 
                                                                                                               
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 56/2020 ಕಲಂ.  380 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನಾನು ನಮ್ಮ ಅತ್ತೆ ಶ್ರೀಮತಿ ಮಂಜುಳಾ ಗಂಡ ಶಂಕರ ಗೂಳಿ ಇವರ ಬಸವ ಜುವೆಲರ್ಸ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ಅವರ ಮನೆಯು ಯಾದಗಿರಿ ನಗರದ ಬಾಲಾಜಿ ದೇವಸ್ಥಾನದ ಹಿಂದುಗಡೆ ಅಪಾರ್ಟಮೆಂಟ್ ಇದ್ದು ಅದರ 5 ನೇ ಮಹಡಿಯಲ್ಲಿ ನನ್ನ ಅತ್ತೆ ಮಂಜುಳಾ ಗೂಳಿ ಹಾಗೂ ಅವರ ಗಂಡನಾದ ಶಂಕರ ಗೂಳಿ ಮತ್ತು ಅವರ ಮಗಳಾ ಸುಮಾ ಇವರು ವಾಸವಾಗಿರುತ್ತಾರೆ. ಹಿಗೀದ್ದು ಬಾಬು ತಂದೆ ತಮಾಶಪ್ಪ ಹಾಗೂ ಆತನ ಹೆಂಡತಿ ಹಣಮಂತಿ ಗಂಡ ಬಾಬು ಇವರು ನಮ್ಮ ಅತ್ತೆ ಮನೆಗೆ ಬಂದು ನಾವು ಬಡವರಾಗಿದ್ದು ಕೆಲಸವಿಲ್ಲದ ಕಾರಣ ಸಂಸಾರ ನಿರ್ವಹಿಸುವುದು ಕಷ್ಟಕರವಾಗಿದ್ದು ನಮಗೆ ಕೆಲಸ ಕೊಡಿ ಅಂತಾ ವಿನಂತಿಸಿಕೊಂಡ ಮೇರೆಗೆ ನಮ್ಮ ಅತ್ತೆಯವರು ಮಾನವೀಯತೆ ದೃಷ್ಟಿಯಿಂದ ಅವರಿಗೆ ಕೆಲಸ ಕೊಟ್ಟು ಅವರ ಅಪಾರ್ಟಮೆಂಟ್ ಪಕ್ಕದಲ್ಲಿ ಒಂದು ಸಣ್ಣಮನೆ ನಿಮರ್ಿಸಿ ಅಲ್ಲೇ ಅವರಿಗೆ ವಸತಿಗೆ ವ್ಯವಸ್ಥೆ ಮಾಡಿದ್ದರು. ಹಿಗೇ ಸುಮಾರು  2 ವರ್ಷಗಳಿಂದ ನಮ್ಮ ಅತ್ತೆ ಮಂಜುಳಾರವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು ನಮ್ಮ ಅತ್ತೆಯವರ ವಿಶ್ವಾಸಗಳಿಸಿಕೊಂಡಿದ್ದು ಮನೆಯಲ್ಲಿ ಕೆಲಸ ಮಾಡಿಕೊಂಡು ಮನೆಯ ಎಲ್ಲಾಕಡೆ ಓಡಾಡಿಕೊಂಡು ಇದ್ದರು. ಆದರೆ ಇತ್ತಿಚೆಗೆ ಬಾಬು ಮತ್ತು ಆತನ ಹೆಂಡತಿ ಇಬ್ಬರು ಪರಸ್ಪರ ಜಗಳ ಮಾಡಿಕೊಳ್ಳುವುದು ಹಾಗೂ ಸಂಬಳ ನೀಡಿದರು ಕೂಡಾ ಪದೇ ಪದೇ ಹಣ ಕೇಳುವುದು ಮಾಡುತ್ತಿದ್ದರು. ಹಾಗೂ ರಾತ್ರಿ ಕುಡಿದು ಬಂದು ಗಲಾಟೆ ಮಾಡುವುದು ಮಾಡುತ್ತಿದ್ದರು. ಹೀಗಿದ್ದು ದಿನಾಂಕ 14/06/2020 ರಂದು ಬೆಳೆಗ್ಗೆ  10-00 ಗಂಟೆಗೆ ನಾನು ಎಂದಿನಂತೆ ನಮ್ಮ ಅತ್ತೆಯ ಮನೆಗೆ ನಮ್ಮ ಬಂಗಾರದ ಅಂಗಡಿ ತೆರೆಯುವ ಸಲುವಾಗಿ ಕೀಲಿ ತರಲು ಅವರ ಮನೆಗೆ ಹೋಗಿ  ಸ್ಟೋರ ರೂಮ್ ಒಳಗಡೆ ಹೋಗಿ ನೋಡಲಾಗಿ ನಮ್ಮ ಅತ್ತೆ ಮಂಜುಳಾ ಇವರ ಅಪಾರ್ಟಮೆಂಟ್ಗೆ ವೈರಿಂಗ್ ಮಾಡಲು ತಂದಿದ್ದ ಹೆವೆಲ್ಸ್ ಕಂಪನಿಯ 10 ಬಂಡಾಲ ವೈರಗಳು ಅ.ಕಿ.40,000/- ರೂ ನೇದ್ದವುಗಳು ಕಾಣಲಿಲ್ಲ. ನಂತರ ನಾನು ಈ ಬಗ್ಗೆ ನಮ್ಮ ಅತ್ತೆ ಮಂಜುಳಾ ಗೂಳಿ ಹಾಗೂ ಶಂಕರ  ಗೂಳಿರವರಿಗೆ ತಿಳಿಸಿದ್ದು ನಂತರ ಅವರು ಮನೆಯಲ್ಲಿ ಚೆಕ್ ಮಾಡಲಾಗಿ ಮನೆಯ ಕಿಚನದಲ್ಲಿ ಇಟ್ಟಿದ್ದ 3 ತೊಲೆಯ ಬಂಗಾರದ ತಾಳಿ ಚೈನ್ ಅ.ಕಿ 1,05,000/- ರೂ ನೇದ್ದು ಕಾಣಲಿಲ್ಲ  ಹಿಗೇ ಒಟ್ಟು 1,45,000/- ರೂ ಕಿಮ್ಮತ್ತಿನ ಹೆವೆಲ್ಸ್ ಕಂಪನಿಯ ವೈರ ಮತ್ತು ಬಂಗಾರದ ತಾಳಿಚೈನ್ ಕಾಣಲಿಲ್ಲ. ಆಗ ಬಾಬು ಮತ್ತು ಆತನ ಹೆಂಡತಿ ಹಣಮಂತಿಗೆ ಕೇಳಿದರಾಯಿತು ಅಂತಾ ಕೆಳಗಡೆ ಬಂದು ವಿಚಾರಿಸಲು ಬಾಬು ಈತನು ವೈರನ್ನು ನಾನು ಬೇರೆ ಕಡೆ ಇಟ್ಟಿದ್ದು ತಂದು ಕೊಡುತ್ತೇನೆ ಆದರೆ ಬಂಗಾರದ ತಾಳಿಚೈನ್ ಬಗ್ಗೆ ನನಗೆ ಗೊತ್ತಿಲ್ಲ ಅಂತಾ ಹೇಳಿದನು ಆಗ ನಾನು ನಮ್ಮ ಅತ್ತೆ ಮಂಜುಳಾ ಇವರು ಅವರಿಗೆ ನಿವೇ ಬಂಗಾರ ತೆಗೆದುಕೊಂಡಿದ್ದೀರಿ ಎಲ್ಲಿದೆ ಬಂಗಾರ ಕೊಡಿ ಅಂತಾ ಕೇಳಲು ಅವರು ಸುಮ್ಮನಾದರು. ನಂತರ ದಿನಾಂಕ; 14/06/2020 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಬಾಬು ಈತನ ಮನೆಗೆ ಹೋಗಿ ನೋಡಲು ಬಾಬು ಮತ್ತು ಆತನ ಹೆಂಡತಿ ಹಣಮಂತಿ ಇಬ್ಬರೂ ಮನೆಯನ್ನು ಬಿಟ್ಟು ಹೋಗಿದ್ದರು. ಕಾರಣ ದಿನಾಂಕ. 09/06/2020 ರ 1-00 ಪಿಎಮ್ ದಿಂದ ದಿನಾಂಕ. 14/06/2020 ರ ಬೆಳೆಗ್ಗೆ 10-000 ಗಂಟೆಯ ಅವಧಿಯಲ್ಲಿ ಬಾಬು ಮತ್ತು ಆತನ ಹೆಂಡತಿ ಹಣಮಂತಿ ಇವರು ನಮ್ಮ ಅತ್ತೆಯ ಅಪಾರ್ಟಮೆಂಟದಲ್ಲಿದ್ದ ಹೆವೆಲ್ಸ್ ಕಂಪನಿಯ ವೈರ ಹಾಗೂ ಬಂಗಾರದ ತಾಳಿಚೈನ್ ಕಳ್ಳತನ ಮಾಡಿದ್ದು, ಸದರಿಯವರು ತಂದು ವೈರ ಹಾಗೂ ಬಂಗಾರದ ತಾಳಿಚೈನ್ ತಂದು ಕೊಡುಬಹುದು ಅಂತಾ ಇಲ್ಲಿಯವರೆಗೆ ನಾವು ದಾರಿ ಕಾಯ್ದಿದ್ದು ಆದರೆ ಸದರಿಯವರು ಇಲ್ಲಿಯವರೆಗೆ ವೈರ ಹಾಗೂ ಬಂಗಾರದ ತಾಳಿಚೈನ್ ತಂದು ಕೊಡದ ಕಾರಣ ನಮ್ಮ ಅತ್ತೆ ಮಂಜುಳಾ ಗೂಳಿ ಹಾಗೂ ಅವರ ಗಂಡ ಶಂಕರ ಗೂಳಿರವರು ಬೆಂಗಳೂರಿನಲ್ಲಿರುವ ಅವರ ಮಗ ನಿಖಿಲ ಈತನ ಬಳಿಗೆ ಹೋಗಿದ್ದು ನನಗೆ ಫೋನ ಮಾಡಿ ಬಾಬು ಮತ್ತು ಆತನ ಹೆಂಡತಿ ಹಣಮಂತಿ ಇವರ ಮೇಲೆ ಪ್ರಕರಣ ದಾಖಲು ಮಾಡಲು ತಿಳಿಸಿದ ಮೇರೆಗೆ ನಾನು ಇಂದು ದಿನಾಂಕ; 04/07/2020 ರಂದು   6-30 ಪಿಎಮ್ ಕ್ಕೆ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಕಾರಣ ನಮ್ಮ ಅತ್ತೆ ಮಂಜುಳಾ ಗೂಳಿ ಇವರ ಮನೆಯಲ್ಲಿ ಈ ಮೇಲಿನ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ ಬಾಬು ಹಾಗೂ ಆತನ ಹೆಂಡತಿ ಹಣಮಂತಿ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 56/2020 ಕಲಂ. 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 89/2020 ಕಲಂ 380 ಐಪಿಸಿ : ಇಂದು ದಿನಾಂಕ 04/07/2020 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾಧಿದಾರಾದ ರಮೇಶ ತಂದೆ ನಾಗಶೇಟ್ಟಿ ಪಾಟೀಲ ವಯಾಃ 51 ವರ್ಷ ವಿಭಾಗೀಯ ಸಂಚಾರ ಅಧಿಕಾರಿಗಳು ಯಾದಗಿರಿ ವಿಭಾಗ ಇವರು ಠಾಣೆಗೆ ಬಂದು ಒಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರಪಡಿಸಿದ್ದೆನೆಂದರೆ ಈ.ಕ.ರ.ಸಾ. ಸಂಸ್ಥೆ ವಿಭಾಗೀಯ ಕಛೇರಿ ಮುಂಡರಗಿ ರೋಡ ಯಾದಗಿರಿ ಕಛೇರಿಯಲ್ಲಿನ ಸಂಚಾರಿ ಶಾಖೆಯ ಅಪಘಾತ ಸಂಕಲನದ ಗಣಕಯಂತ್ರದಲ್ಲಿ 1)ಶ್ರೀ ಸಾಗರಸಿಂಗ ತಂದೆ ಬಿರಬಬಲ್ ಸಿಂಗ ಠಾಕೂರ 2)ಮಹಾಲಕ್ಷ್ಮಿ  ತಂದೆ ನಂದಪ್ಪ 3)ಶಿವಶಂಕರ ತಂದೆ ಗುತ್ತಪ್ಪ 4)ಸಿದ್ದು ತಂದೆ ದತ್ತು ಮೋರೆ ಇವರೆಲ್ಲರೂ ಕರ್ತವ್ಯ ನಿರ್ವಹಿಸುತ್ತಾರೆ, ಪ್ರತಿಯೊಬ್ಬರ ಟೇಬಲಕ್ಕೆ ಒಂದೊಂದು ಕಂಪ್ಯೂಟರನ್ನು ಅಳವಡಿಸಿದ್ದು ಇರುತ್ತದೆ, ಅವರು ಪ್ರತಿದಿನ ಬೆಳಿಗ್ಗೆ 10-00 ಗಂಟೆಗೆ ಬಂದು ಸಾಯಂಕಾಲ 5-30 ಗಂಟೆವರೆಗೆ ಕರ್ತವ್ಯ ನಿರ್ವಹಿಸುತ್ತಾರೆ, ದಿನಾಂಕ 20/06/2020 ರಂದು ಶನಿವಾರ ಇದ್ದ ಪ್ರಯುಕ್ತ ನಮ್ಮ ಸಿಬ್ಬಂಧಿಯವರೆಲ್ಲರೂ ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 1-30 ಗಂಟೆಯವರೆಗೆ ಕರ್ತವ್ಯ ಮಾಡಿ ತಮ್ಮ ಮನೆಗೆ ಹೋಗಿದ್ದರು, ದಿನಾಂಕ 22/06/2020 ರಂದು ಸೋಮವಾರ ದಿವಸ ಪ್ರತಿತ್ಯದಂತೆ ಬೆಳಿಗ್ಗೆ 10-00 ಗಂಟೆಗೆ ನಮ್ಮ ಈ ಮೇಲ್ಕಂಡ ಸಿಬ್ಬಂಧಿಯವರು ತಮ್ಮ ತಮ್ಮ ಕರ್ತವ್ಯಕ್ಕೆ ಹಾಜರಾದಾಗ 1)ಶ್ರೀ ಸಾಗರಸಿಂಗ ತಂದೆ ಬಿರಬಬಲ್ ಸಿಂಗ ಠಾಕೂರ ಇವರ ಟೇಬಲ್ ಮೇಲಿನ ಸಿಪಿಯು ಕಂಡಿರುವದಿಲ್ಲ, ಅವರೂ ಎಲ್ಲಾ ಕಡೆಗೆ ಹುಡುಕಾಡಿದರೂ ಕೂಡಾ ಸಿಗದ ಕಾರಣ ಅವರು ನನ್ನ ಗಮನಕ್ಕೆ ತಂದಿರುತ್ತಾರೆ, ನಂತರ ನಾನು ಮತ್ತು ನಮ್ಮ ಸಿಬ್ಬಂಧಿಯವರು ಎಲ್ಲಾ ಕಡೆಗೆ ಹುಡುಕಾಡಿದರೂ ಕೂಡಾ ಸಿ.ಪಿ.ಯು ಸಿಕ್ಕಿರುವದಿಲ್ಲ, ಆ ಸಿ.ಪಿಯು ಹೆಚ್.ಪಿ. ಕಂಪನಿಯದು ಆಗಿರುತ್ತದೆ, ಅದರ ಅಂದಾಜ ಕಿಮ್ಮತ್ತು 24,000/ರೂ ಇದ್ದಿರುತ್ತದೆ, ನಮ್ಮ ಸಂಚಾರಿ ಶಾಖೆಯ ಅಪಘಾತ ಸಂಕಲನದ ಕೋಣೆಯ ಬಾಗಿಲು ತೆರೆದಿದ್ದು ಇರುತ್ತದೆ, ದಿನಾಂಕ 20/06/2020 ರಂದು ಮಧ್ಯಾಹ್ನ 2-00 ಗಂಟೆಯ ಅವಧಿಯಿಂದ ದಿನಾಂಕ 22/06/2020 ರಂದು ಬೆಳಿಗ್ಗೆ 10-00 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತರು ಕೋಣೆಯಲ್ಲಿ ಬಂದು ಸಿ.ಪಿಯು ಕ್ರಮ ಸಂ ಓಂ814ಘಿಆ3ಊ ಹೆಚ್.ಪಿ. ಕಂಪನಿಯದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ನಮ್ಮ ಸಿಪಿಯು ಅನ್ನು ಹುಡುಕಾಡಿ ಕೊಟ್ಟು ಅಪರಿಚಿತ ಕಳ್ಳರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 89/2020 ಕಲಂ 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 183/2020 ಕಲಂ 143,147,148,323,324,504,506 ಸಂ 149 ಐಪಿಸಿ : ಇಂದು ದಿನಾಂಕ: 04/07/2020 ರಂದು 4.00 ಪಿಎಂ ಕ್ಕೆ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರ ಕಾಯರ್ಾಲಯದಿಂದ ವಸೂಲಾಗಿದ್ದ ಮೇಲಾಧಿಕಾರಿಗಳ ಅಜರ್ಿ ಸಂ 345/ಅಜರ್ಿ/ನೇ/ಯಾಜಿ/2020/665 ದಿನಾಂಕ 10/06/2020 ನೇದ್ದನ್ನು ಸ್ವೀಕರಿಸಿಕೊಂಡಿದ್ದು ಅಜರ್ಿದಾರರಾದ ಶ್ರೀ ಸಂತೋಷ ತಂದೆ ಸಿದ್ದಲಿಂಗಪ್ಪ ಚಲವಾದಿ ಸಾ|| ಪರಸಾಪೂರ ತಾ|| ಶಹಾಪೂರ ಇವರು ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರ ಕಾಯರ್ಾಲಯಕ್ಕೆ ಸಲ್ಲಿಸಿದ ಅಜರ್ಿಯ ಸಾರಾಂಶವೆನೆಂದರೆ, ದಿನಾಂಕ 01/06/2020 ರಂದು ಬೆಳಿಗ್ಗೆ 6.30 ಗಂಟೆಗೆ ಪರಸಾಪೂರ ಗ್ರಾಮದ ಹರಿಜನವಾಡಾದ ತಿಮ್ಮಪ್ಪ ತಂದೆ ದ್ಯಾವಪ್ಪ ಚಲವಾದಿಯವರ ಖುಲ್ಲಾ ಜಾಗದಲ್ಲಿನ ತಿಪ್ಪೆಗುಂಡಿಗೆ ಹೋಗುವ ದಾರಿಯ ಮೇಲೆ ಫಿಯರ್ಾದಿದಾರನು ಇದ್ದಾಗ ಅದೇ ಗ್ರಾಮದ ಆರೋಪಿತರಾದ 1) ಸುರೇಶ ತಂದೆ ಹಯ್ಯಾಳಪ್ಪ ಗೌಡೂರ, 2)ರವಿಶಾಸ್ತ್ರಿ 3) ಮೌನೇಶ ತಂದೆ ತಿಮ್ಮಪ್ಪ  4) ದೇವಪ್ಪ ತಂದೆ ಹಯ್ಯಾಳಪ್ಪ ಗೌಡೂರ 5) ಪರಶುರಾಮ ತಂದೆ ಹಯ್ಯಾಳಪ್ಪ ಗೌಡೂರ 6) ದೇವಪ್ಪ ತಂದೆ ದೊಡ್ಡಸಾಬಪ್ಪ ಗೌಡೂರ 7) ಸೋಮಪ್ಪ ತಂದೆ ಬಸಪ್ಪ ಗೌಡೂರ 8) ದೇವಿಂದ್ರಪ್ಪ ತಂದೆ ಹಣಮಂತ ಗೌಡೂರ 9) ತಿಮ್ಮಪ್ಪ ತಂದೆ ಹಣಮಂತ ಗೌಡೂರ 10) ರವಿ ತಂದೆ ನಾಗಪ್ಪ ಗೌಡೂರ ಸಾ|| ಎಲ್ಲರೂ ಪರಸಾಪೂರ ತಾ|| ಶಹಾಪೂರ ಇವರೆಲ್ಲರೂ ಕೂಡಿ ವಿನಾಕಾರಣ ಕ್ಷುಲ್ಲಕ ನೆಪಮಾಡಿ ಓಡೋಡಿ ಬಂದು ಜಗಳ ತೆಗೆದು ಎಳೆದಾಡಿ ಮೈತುಂಬ ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಹೊಡೆಯುತ್ತಿದ್ದಾಗ ಸಾಕ್ಷಿದಾರರಾದ ಶರಣಪ್ಪ ತಂದೆ ಬಸಪ್ಪ ಮದ್ದಲಿ ಸಾ|| ನಾಯ್ಕಲ್ ಮತ್ತು ಎನ್.ಐ ಮಹಿಬೂಬಸಾಬ ತಂದೆ ಎನ್.ಡಿ. ಇಸ್ಮಾಯಿಲಸಾಬ ದಾವಣಗೇರಿ ಸಾ|| ಪರಸಾಪೂರ ಇವರು ಬಂದು ಜಗಳ ಬಿಡಿಸಿರುತ್ತಾರೆ ಅಂತಾ ಇತ್ಯಾದಿ ಇದ್ದ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 183/2020 ಕಲಂ: 143, 147, 148, 323, 324, 504, 506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 164/2020 ಕಲಂ 379 ಐ.ಪಿ.ಸಿ. ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957 : ಇಂದು ದಿನಾಂಕ:04/07/2020 ರಂದು 18:00 ಗಂಟೆಗೆ ಠಾಣೆಯಲ್ಲಿದ್ದಾಗ ಶ್ರೀ ಲಿಂಗರಾಜ ತಂದೆ ಕುಪ್ಪೆರಾಯ ವಯಾ:29 ವರ್ಷ ಜಾ|| ವಡ್ಡರ ಉ: ಭೂವಿಜ್ಷಾನಿ ಗಣಿ ಮತ್ತು ಭೂವಿಜ್ಷಾನ ಇಲಾಖೆ ಯಾದಗಿರಿ ಜಿಲ್ಲೆ ರವರು ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿದ್ದು ಒಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆಸುರಪುರ ಉಪ ವಿಭಾಗದ ಮಾನ್ಯ ಉಪ ಅದೀಕ್ಷಕರು ಇವರು ನನಗೆ ದೂರವಾಣಿ ಮೂಲಕ ಕರೆಮಾಡಿ ತಿಳಿಸಿದ್ದೇನೆಂದರೆ, ಸುರಪೂರ ತಾಲ್ಲೂಕಿನ ಹೇಮನೂರ ಗ್ರಾಮದ ಸೀಮಾಂತರದಲ್ಲಿ ಯಾರೋ ಕೃಷ್ಣಾ ನದಿಯಿಂದ ಕಳ್ಳತನದಿಂದ ನೈಸಗರ್ಿಕ ಮರಳನ್ನು ತುಂಬಿಕೊಂಡು ಜಮಿನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುತ್ತಾರೆ ಅಂತಾ ಮಾಹಿತಿ ತಿಳಿಸಿದ ಮೇರೆಗೆ, ಸುರಪುರ ಪೊಲೀಸ್ ಠಾಣೆಗೆ ಹಾಜರಾಗಲು ಸೂಚಿಸಿದ ಮೇರೆಗೆ ಇಂದು ದಿನಾಂಕ: 04/07/2020 ರಂದು ನಾನು ಮತ್ತು ಶ್ರೀ ಕಿರಣ ಡಿ.ಆರ್ ಭೂವಿಜ್ಞಾನಿ, ಹಾಗೂ ನಮ್ಮ ಜೀಪ್ ನಂ. ಕೆಎ-04 ಜಿ-1490 ನೇದ್ದರ ಚಾಲಕನಾದ ಶ್ರೀ ಜಂಬಣ್ಣ ಇವರೊಂದಿಗೆ ಯಾದಗಿರಿಯಿಂದ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಹೊರಟು ಸುರಪೂರ ಪೊಲೀಸ್ ಠಾಣೆಗೆ ಮದ್ಯಾಹ್ನ 12:30 ಗಂಟೆ ಸುಮಾರಿಗೆ ಬಂದು ತಲುಪಿದೇವು, ಸುರಪುರ ಪೊಲೀಸ್ ಠಾಣೆಯಲ್ಲಿ ಕಂದಾಯ ಇಲಾಖೆಯ ಸುರಪುರ ವಲಯದ ಕಂದಾಯ ನಿರೀಕ್ಷಕರಾದ ಶ್ರೀ ಗುರುಬಸಪ್ಪ ಪಾಟೀಲ್, ಶ್ರೀ ಶಿವಕುಮಾರ ಗ್ರಾಮ ಲೇಖಪಾಲಕರು ಹೇಮನೂರ ಗ್ರಾಮ, ಶ್ರೀ ಯಂಕಪ್ಪ ತಂದೆ ದ್ಯಾವಪ್ಪ ಗ್ರಾಮದ ಸಹಾಯಕರು ಚೌಡೇಶ್ವರಹಾಳ ಮತ್ತು ಸುರಪೂರ ಲೋಕೋಪಯೊಗಿ ಇಲಾಖೆಯ ಶ್ರೀ ತಿಪ್ಪಣ್ಣ ಡಿ ಗ್ರುಪ್, ಶ್ರೀ ಖುಷರ್ಿದ ಪಾಶಾ ಇವರುಗಳು ಎಲ್ಲರು ಠಾಣೆಯಲ್ಲಿ ಹಾಜರಿದ್ದು ಮದ್ಯಾಹ್ನ 1 ಗಂಟೆ ಸುಮಾರಿಗೆ ಶ್ರೀ ವೆಂಕಟೇಶ ಡಿ.ಎಸ್.ಪಿ ಸುರಪುರ ಉಪ ವಿಭಾಗ ಹಾಗೂ ಶ್ರೀ ಎಸ್.ಎಮ್ ಪಾಟೀಲ್ ಆರಕ್ಷಕ ನಿರೀಕ್ಷಕರು, ಶ್ರೀ ಬಸವರಾಜ ಸಿಪಿಸಿ-180 ಸುರಪುರ ಪೊಲೀಸ್ ಠಾಣೆ ಇವರು ಮಾನ್ಯ ಡಿ.ಎಸ್.ಪಿ ರವರ ಕಛೇರಿಯಲ್ಲಿ ನಮ್ಮನ್ನು ಕರೆಯಿಸಿಕೊಂಡು ತಿಳಿಸಿದ್ದೇನೆಂದರೆ, ಸುರಪೂರ ತಾಲ್ಲೂಕಿನ ಹೇಮನೂರ ಗ್ರಾಮದ ಸೀಮಾಂತರದಲ್ಲಿ ಯಾರೋ ಕೃಷ್ಣಾ ನದಿಯಿಂದ ಕಳ್ಳತನದಿಂದ ನೈಸಗರ್ಿಕ ಮರಳನ್ನು ತುಂಬಿಕೊಂಡು ಜಮಿನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುತ್ತಾರೆ ಅಂತಾ ಮಾಹಿತಿ ಇದ್ದ ಮೇರೆಗೆ ನಾವೇಲ್ಲರು ದಾಳಿ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಗಳ್ಳಬೆಕಾಗಿದ್ದು ಕಾರಣ ದಾಳಿಯ ಕಾಲಕ್ಕೆ ಪಂಚರಾಗಲು 1) ಶ್ರೀ ಖುಷರ್ಿದ ಪಾಶಾ ತಂದೆ ಅಬ್ದುಲ್ ಹಮ್ಮಿದ ವ|| 55 ವರ್ಷ ಜಾ|| ಮುಸ್ಲಿಂ ಉ|| ಕೆಲಸ ನಿರೀಕ್ಷಕರು ಲೋಕೊಪಯೊಗಿ ಇಲಾಖೆ ಸುರಪೂರ 2) ಯಂಕಪ್ಪ ತಂದೆ ದ್ಯಾವಪ್ಪ ಕಬ್ಬೇರ ವ|| 50 ವರ್ಷ ಜಾ|| ಕಬ್ಬಲಿಗ ಉ|| ಗ್ರಾಮದ ಸಹಾಯಕ ಚೌಡೇಶ್ವರಹಾಳ ಸಾ|| ಚೌಡೇಶ್ವರಹಾಳ ಕೇಳಿಕೊಂಡ ಮೇರೆಗೆ ಇವರಿಬ್ಬರು ಪಂಚರಾಗಲು ಒಪ್ಪಿಕೊಂಡರು, ನಂತರ ನಾವು ಎಲ್ಲರು ಕೂಡಿ ತಮ್ಮ ತಮ್ಮ ಇಲಾಖೆಯ ವಾಹನಗಳಲ್ಲಿ ಕುಳಿತುಕೊಂಡು ಸುರಪುರ ಪೊಲೀಸ್ ಠಾಣೆಯಿಂದ ಮದ್ಯಾಹ್ನ 1-30 ಪಿ.ಎಂ.ಕ್ಕೆ ಹೊರಟು ಹೆಮನುರ ಗ್ರಾಮಕ್ಕೆ ಮದ್ಯಹ್ನ 2-00 ಪಿ.ಎಂ ಗೆ ತಲುಪಿದೆವು. ಅಲ್ಲಿಂದ ಹೆಮನೂರ ಗ್ರಮಾದ ಕೃಷ್ಣಾನದಿ ಮಾರ್ಗದಲಿ ಹೊರಟಿರುವಾಗ ಈ ಕೇಳಕಂಡ ಜಮೀನುಗಳಲ್ಲಿ ಅಕ್ರಮಾಗಿ ಮರಳು ಸಂಗ್ರಹಿಸಿದ್ದು ಈ ಕೇಳಗಿನಂತೆ ಇರುತ್ತದೆ. ಹೆಮನೂರ ಗ್ರಾಮದ ಸವರ್ೇ ನಂಬರ 162/*/2  ರಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ 2:15 ಪಿ.ಎಂ.ಕ್ಕೆ ಸ್ಥಳಕ್ಕೆ ಬೇಟಿ ನೀಡಿದೇವು ಸದರಿ ಜಮೀನು ಸಂಜೀವಪ್ಪ ತಂದೆ ಹಣಮಪ್ಪ ಮೇದಾರಗೋಳ ಸಾ|| ಕನರ್ಾಳ ಇವರದಿದ್ದು, ಸದರಿ ಜಮೀನುನಲ್ಲಿ 1546 ಘನ ಮೀಟರ ಮರಳು ಅದರ ಅ.ಕಿ 20,87,100/- ರೂ ಬೆಲೆ ಬಾಳುವ ಮರಳನ್ನು ಪಂಚರ ಸಮಕ್ಷಮ 2:15 ಪಿ.ಎಂ ದಿಂದ 3:00 ಪಿ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು. ನಂತರ ಅಲ್ಲಿಂದ ಹೆಮನೂರ ಗ್ರಾಮದ ಸವರ್ೇ ನಂಬರ 141/*/3 ನೇದ್ದರಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಕಂದಾಯ ದಾಖಲೆಗಳ ಪ್ರಕಾರ ಸದರಿ ಜಮೀನು ಕರೆಪ್ಪ ತಂದೆ ಹಣಮಯ್ಯ ಸೇತುಸಿಂದು ಸಾ|| ಹೆಮನುರ ಇವರ ಹೆಸರಿನಿಂದ ಇದ್ದು ಸದರಿ ಜಮೀನಿನಲ್ಲಿ 52 ಘನ ಮೀಟರ ಮರಳು ಅ.ಕಿ 70,200/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 3:20 ಪಿ.ಎಂ ದಿಂದ 4:00 ಪಿ.ಎಂ ದವರೆಗೆ ಜಪ್ತಿ ಮಾಡಿಕೊಂಡೆನು. ಸದರಿ ಹೊಲದ ಸವರ್ೆ ನಂ.ಗಳು ಹಾಗೂ ಹೊಲದ ಚೆಕ್ ಬಂದಿಗಳನ್ನು ಹಾಗೂ ಪಟ್ಟೆದಾರರ ವಿವರಗಳನ್ನು ಕಂದಾಯ ಇಲಾಖೆಯವರು ದೃಢಪಡಿಸಿರುತ್ತಾರೆ. ಸದರಿ ಮೇಲೆ ನಮೂಧಿಸಿದ ಆಪಾಧಿತರು ಸರಕಾರಕ್ಕೆ ಯಾವುದೆ ರಾಜಧನ ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಒಟ್ಟು 1598 ಘನ ಮೀಟರ ಮರಳು ಅ.ಕಿ 21,57,300/- ರೂಗಳ ಬೆಲೆ ಬಾಳುವ ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಕೃಷ್ಣಾ ನಧಿಯ ತೀರದಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ತಮ್ಮ ಹೊಲಗಳಲ್ಲಿ ಸಂಗ್ರಹಣೆ ಮಾಡಿದ ಈ ಮೇಲೆ ಹೇಳಿದ ಜಮೀನಿನ ಪಟ್ಟಾದಾರರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 58/2020 ಕಲಂ: 143, 147, 148, 323, 324, 504, 506, ಸಂಗಡ 149 ಐಪಿಸಿ : ಇಂದು ದಿನಾಂಕ:04.07.2020 ರಂದು ಮಧ್ಯಾಹ್ನ 2:00  ಗಂಟೆಗೆ  ಪಿರ್ಯಾಧಿ ಶ್ರೀ. ಭೀಮನಗೌಡ ತಂದೆ ದೇವೀಂದ್ರಪ್ಪಗೌಡ ಹಳ್ಳಿ ವ:42 ವರ್ಷ ಉ: ವ್ಯಾಪಾರ ಜಾ:ಹಿಂದೂ ಬೇಡರ ರ ಸಾ: ಕಕ್ಕೇರಾ ತಾ: ಸುರಪುರ  ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ, ನಮ್ಮ ಮನೆಯು ಕಕ್ಕೇರಾ ಪಟ್ಟಣದಲ್ಲಿ ಸೋಮನಾಥ ದೇವರ ಗುಡಿಯ ಹತ್ತಿರ ಇದ್ದು. ನಮ್ಮ ಮನೆಯ ಹತ್ತಿರ ಸಣ್ಣ ಸೋಮಣ್ಣ ತಂದೆ ಪರಮಣ್ಣ ದೋಳ್ಳಿನ್ ರವರ ಮನೆ ಇರುತ್ತದೆ. ನಿನ್ನೆಯ ದಿನ ಸಾಯಂಕಾಲ ನನ್ನ ಹೆಂಡತಿ ಜಯಶ್ರೀಯು ನಮ್ಮ ಮನೆಯಲ್ಲಿದ್ದಾಗ ಸೋಮಣ್ಣನ ತಾಯಿ ಯಲ್ಲಮ್ಮ ಹಾಗೂ ಸೋಮಣ್ಣನ ಅಣ್ಣ ಬಸವರಾಜನ ಹೆಂಡತಿ ಹಣಮವ್ವ ರವರು ನಮ್ಮ ಮನೆಯ ಮುಂದೆ ಬಂದು ನನ್ನ ಹೆಂಡತಿಗೆ ನಮ್ಮ ಹುಂಜ ನಿಮ್ಮ ಮನೆಯಲ್ಲಿ ಬಂದಿದೆ ಅಂತ ಅಂದಿದ್ದು. ನನ್ನ ಹಂಡತಿಯು ನಿಮ್ಮ ಹುಂಜ ನಮ್ಮ ಮನೆಯಲ್ಲಿ ಬಂದಿರುವದಿಲ್ಲಾ ಬೇಕಾದರೆ ನಮ್ಮ ಮನೆಯೊಳಗೆ ಬಂದು ನೋಡಿಕೊಳ್ಳೀರಿ ಅಂತ ಅಂದಿದ್ದು. ಅದಕ್ಕೆ ಯಲ್ಲಮ್ಮ ಮತ್ತು ಹಣಮವ್ವ ರವರು ನನ್ನ ಹೆಂಡತಿಗೆ ಬೈದು ಬಾಯಿ ಮಾತಿನ ತಕರಾರು ಮಾಡಿಕೊಂಡು ಹೋದ ಬಗ್ಗೆ ನನ್ನ ಹೆಂಡತಿಯು ನಾನು ನಿನ್ನೆಯ ದಿನ ಸಾಯಂಕಾಲ ಮನೆಗ ಹೋದಾಗ ತಿಳಿಸಿದ್ದು ಇರುತ್ತದೆ.
    ಹೀಗಿರುವಾಗ ಇಂದು ದಿನಾಂಕ:04.07.2020 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದ ಸಣ್ಣ ಸೋಮಣ್ಣ ತಂದೆ ಪರಮಣ್ಣ ದೋಳ್ಳಿನ್ ಇತನು ನಮ್ಮ ಮನೆಯ ಮುಂದಿನಿಂದ ಹೋಗುವಾಗ ಅವನಿಗೆ ಕರೆದು. ನಿನ್ನೆಯ ದಿನ ನಿನ್ನ ಹೆಂಡತಿ ಮತ್ತು ನಿನ್ನ ಸೊಸೆ ಇಬ್ಬರೂ ನಿಮ್ಮ ಹುಂಜ ನಮ್ಮ ಮನೆಯಲ್ಲಿ ಬಂದಿದೆ ಅಂತ ನನ್ನ ಹೆಂಡತಿಗೆ ಬೈದು ಅವಳೊಂದಿಗೆ ತಕರಾರು ಮಾಡಿ ಹೋಗಿದ್ದು. ಇದೆಲ್ಲಾ ಸರಿಯಲ್ಲ ನಾವು ಅಕ್ಕ-ಪಕ್ಕದ ಮನೆಯವರಾಗಿದ್ದು. ಒಳ್ಳೆಯ ರೀತಿಯಿಂದ ಇರಬೇಕು. ಅವರಿಗೆ ಬುದ್ದಿ ಮಾತು ಹೇಳು ಅಂತ ಅಂದಿದ್ದಕ್ಕೆ ಅವನು ಸುಮ್ಮನೆಯಾಗಿ ತಮ್ಮ ಮನೆಯ ಕಡೆಗೆ ಹೋಗಿದ್ದು. ನಂತರ ಈ ದಿವಸ ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಜಯಶ್ರೀ  ಇಬ್ಬರೂ ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಗೇಟಿನ ಹತ್ತಿರ ನಿಂತಿದ್ದಾಗ  ನಮ್ಮ ಮನೆಯ ಪಕ್ಕದ ಮನೆಯವರಾದ ಸಣ್ಣ ಸೋಮಣ್ಣ ತಂದೆ ಪರಮಣ್ಣ ದೋಳ್ಳಿನ್ ಹಾಗೂ ಆತನ ಮಕ್ಕಳಾದ ಬಸವರಾಜ ತಂದೆ ಸೋಮಣ್ಣ ದೊಳ್ಳಿನ್, ಸೋಮಣ್ಣ ತಂದೆ ಸೋಮಣ್ಣ ದೋಳ್ಳಿನ್,  ಹಾಗೂ ಆತನ ಹೆಂಡತಿ ಯಲ್ಲಮ್ಮ ಗಂಡ ಸಣ್ಣ ಸೋಮಣ್ಣ ದೋಳ್ಳಿನ್,  ಸೊಸೆ ಹಣಮವ್ವ ಗಂಡ ಬಸವರಾಜ ದೋಳ್ಳಿನ್ ಇವರೆಲ್ಲರೂ ಗುಂಪಾಗಿ ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು  ನಮ್ಮ ಹತ್ತಿರ ಬಂದವರೇ ನನಗೆ ಮತ್ತು ನನ್ನ ಹೆಂಡತಿ ಜಯಶ್ರೀ ರವರಿಗೆ ಸೂಳೆ ಮಕ್ಕಳೆ ಓಣಿಯಲ್ಲಿ  ನಿಮ್ಮದು ಬಹಳ ಆಗಿದೆ. ನೀವು ಹೇಳಿದ ಆಗೆ ನಮಗೆ ಕೇಳಬೇಕು ಅಂತ ಅನ್ನುತ್ತಿರಿ. ನಾವು ಯಾಕೆ ನೀವು ಹೇಳಿದ ಆಗೆ ಕೇಳಬೇಕು ಸೂಳೆ ಮಕ್ಕಳೆ ಇವತ್ತು ನಿಮಗೆ ಬಿಡುವದಿಲ್ಲಾ. ಒಂದು  ಗತಿ ಕಾಣಿಸುತ್ತೇವೆ. ಅಂತ ಬೈದವರೇ, ಅವರಲ್ಲಿಯ ಸೋಮಣ್ಣ ತಂದೆ ಸೋಮಣ್ಣ ದೋಳ್ಳಿನ್ ಇತನು ತನ್ನ ಕೈಯಲ್ಲಿಯ  ಕಲ್ಲಿನಿಂದ ಜೋರಾಗಿ ನನ್ನ ತೆಲೆಯ ಮೇಲೆ ಹೊಡೆದಿದ್ದು. ಇದರಿಂದ ನನ್ನ ತೆಲೆಯ ಮೇಲೆ ರಕ್ತಗಾಯವಾಗಿದ್ದು. ಸಣ್ಣ ಸೋಮಣ್ಣ ತಂದೆ ಪರಮಣ್ಣ ಇತನು ತನ್ನ ಕೈಯಲ್ಲಿಯ ಕಲ್ಲಿನಿಂದ ನನ್ನ ಹಣೆಯ ಮೇಲೆ ಎಡಬಾಜುವಿಗೆ ಹೊಡೆದು ರಕ್ತಗಾಯ ಪಡಿಸಿದ್ದು. ಬಸವರಾಜ ತಂದೆ ಸೋಮಣ್ಣ ದೋಳ್ಳಿನ್ ಇತನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಸೊಂಟದ ಬಲಬಾಜುವಿಗೆ ಹೊಡೆದು ಒಳಪೆಟ್ಟು ಮಾಡಿದ್ದು ಆಗ ಬಿಡಿಸಲು ಬಂದ ನನ್ನ ಹೆಂಡತಿ ಜಯಶ್ರೀಗೆ ಯಲ್ಲಮ್ಮ ಗಂಡ ಸಣ್ಣ ಸೋಮಣ್ಣ ದೋಳ್ಳಿನ್ ಇವಳು ಬಲಗೈ ಮುಂಗೈ ಮೇಲೆ ಕಲ್ಲಿನಿಂದ ಹೊಡೆದು ಒಳ ಪೆಟ್ಟು ಮಾಡಿದ್ದು. ಹಣಮವ್ವ ಗಂಡ ಬಸವರಾಜ ದೊಳ್ಳಿನ್ ಇವಳು  ನನ್ನ ಹೆಂಡತಿಯ ಬಲಗೈಯ ಕಿರುಬೆರಳಿನ ಪಕ್ಕದ ಎರಡು ಬೆರಳುಗಳಿಗೆ ಬಾಯಿಯಿಂದ ಕಚ್ಚಿ ಗಾಯ ಪಡಿಸಿದ್ದು. ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ನಮಗೆ ಉಳಿಸರಪ್ಪೋ ಅಂತ ಚಿರಾಡಲು ಅಲ್ಲಿಂದಲೇ. ಹೋಗುತ್ತಿದ್ದ ನಮ್ಮೂರ ಮಂಜುನಾಥ ತಂದೆ ಕನಕಪ್ಪ ರೋಟ್ಲರ್, ಮಡ್ಡೆಪ್ಪ ತಂದೆ ನಂದಪ್ಪ ಹಳ್ಳಿ, ಹೇಮಣ್ಣ ತಂದೆ ಸೋಮಣ್ಣ ರೋಟ್ಲರ್, ಮತ್ತು ಬುಗಲಗಟ್ಟಿಯ ಹಣಮಂತ್ರಾಯ ತಂದೆ ದುರಗಪ್ಪ ಹುಡೇದ್  ಹಾಗೂ  ಸೀಳಗಣ್ಣರ್ ದೊಡ್ಡಿಯ ಮೌನೇಶ ತಂದೆ ಅಂಬ್ರಪ್ಪ ಸಿಳಗಣ್ಣರ್ ಇವರೆಲ್ಲರೂ ಬಂದು ನೋಡಿ ನಮಗೆ ಹೊಡೆಯುವದನ್ನು ಬಿಡಿಸಿದ್ದು. ಹೋಗುವಾಗ ಮೇಲೆ ನಮೂದಿಸಿದ 5 ಜನರು ನಮಗೆ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿರಿ ಇನ್ನೊಂದು ಸಲ ಸಿಕ್ಕಾಗ ನಿಮಗೆ ಜೀವಂತ ಬಿಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು. ಕಾರಣ ವಿನಾಃ ಕಾರಣ ನಮಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 5  ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಮೇಲಿಂದ ಠಾಣೆಯ ಗುನ್ನೆ ನಂ:58/2020 ಕಲಂ: 143 147 148  323,  324,  504, 506,  ಖ/ತಿ 149 ಕಅ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.      


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 59/2020 ಕಲಂ: 323,  324, 504, 506, ಸಂಗಡ 34 ಐಪಿಸಿ : ಇಂದು ದಿನಾಂಕ:04.07.2020 ರಂದು ಮಧ್ಯಾಹ್ನ 3:30  ಗಂಟೆಗೆ  ಪಿರ್ಯಾಧಿ ಶ್ರೀ.. ಸೋಮನಾಥ @ ಸೋಮಣ್ಣ  ತಂದೆ ಸಣ್ಣ ಸೋಮಣ್ಣ ದೊಳ್ಳಿನ್ ವ:35 ವರ್ಷ ಉ: ಒಕ್ಕಲುತನ ಜಾ:ಹಿಂದೂ ಬೇಡರ ಸಾ: ಕಕ್ಕೇರಾ ತಾ: ಸುರಪುರ  ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ, ನಮ್ಮ ಮನೆಯು ಕಕ್ಕೇರಾ ಪಟ್ಟಣದಲ್ಲಿ ಸೋಮನಾಥ ದೇವರ ಗುಡಿಯ ಸಮೀಪದಲ್ಲಿ ನಮ್ಮ ಮನೆಯ ಹತ್ತಿರ ಭೀಮನಗೌಡ ತಂದೆ ದೇವೀಂದ್ರಪ್ಪಗೌಡ ಹಳ್ಳಿ ರವರ ಮನೆ ಇರುತ್ತದೆ. ನಿನ್ನೆಯ ದಿನ ಸಾಯಂಕಾಲ  ಭೀಮನಗೌಡ ತಂದೆ ದೇವೀಂದ್ರಪ್ಪಗೌಡ ಹಳ್ಳಿ ರವರ ಮನೆಯ ಕಡೆ ನಮ್ಮ ಹುಂಜವು ಹೋಗಿದ್ದು. ನಮ್ಮ ಹುಂಜವನ್ನು ಹುಡುಕುತ್ತ. ನನ್ನ ತಾಯಿ ಯಲ್ಲಮ್ಮ ಹಾಗೂ ಅಣ್ಣ ಬಸವರಾಜನ ಹೆಂಡತಿ ಹಣಮವ್ವ ರವರು ಭೀಮನಗೌಡನ ಮನೆಯ ಕಡೆ ಹೋಗಿ ಕೇಳಿದ್ದು. ಜಯಶ್ರೀಯು ತಮ್ಮ ಮನೆಯಲ್ಲಿ ನಮ್ಮ ಹುಂಜ ಬಂದಿರುವದಿಲ್ಲಾ ಅಂತ ತಿಳಿಸಿದ್ದು. ಅಲ್ಲದೇ ನಿಮ್ಮ ಮನೆಯ ಹುಂಜ ನಮ್ಮ ಮನೆಯ ಕಡೆಗೆ ಏಕೆ ಬರುತ್ತದೆ. ಅಂತ ಬೈದು ತಕರಾರು ಮಾಡಿದ್ದು. ಇದ್ದು ಈ ವಿಷಯವನ್ನು ನನ್ನ ತಾಯಿ ಯಲ್ಲಮ್ಮ ಹಾಗೂ ನನ್ನ ಅಣ್ಣನ ಹೆಂಡತಿ. ಹಣಮವ್ವ ರವರು ಮನೆಗೆ ಬಂದು ನಮಗೆ ತಿಳಿಸಿದ್ದು ನಾವು ಆದರೂ ಕೂಡಾ ಅವರು ಪಕ್ಕದ ಮನೆಯವರು ಇದ್ದು. ಅವರೊಂದಿಗೆ ಯಾಕೆ ತಕರಾರು ಮಾಡುವದು ಅಂತ ಸುಮ್ಮನಾಗಿದ್ದೇವು.
    ಹೀಗಿರುವಾಗ ಇಂದು ದಿನಾಂಕ:04.07.2020 ರಂದು ಬೆಳಿಗ್ಗೆ 10:30  ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂದೆ ಸಣ್ಣ ಸೋಮಣ್ಣ ತಂದೆ ಪರಮಣ್ಣ ದೋಳ್ಳಿನ್, ತಾಯಿ ಯಲ್ಲಮ್ಮ ಗಂಡ ಸೋಮಣ್ಣ ದೋಳ್ಳಿನ್ ಹಾಗೂ ನನ್ನ ಅಣ್ಣನ ಹೆಂಡತಿ ಹಣಮವ್ವ ಗಂಡ ಬಸವರಾಜ ದೋಳ್ಳಿನ್, ನಾಲ್ಕು ಜನರು ನಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ ನಮ್ಮ ಮನೆಯ ಪಕ್ಕದ 1) ಭೀಮನಗೌಡ ತಂದೆ ದೇವಿಂದ್ರಪ್ಪ ಹಳ್ಳಿ, 2) ಮಂಜುನಾಥ ತಂದೆ ಕನಕಪ್ಪ ರೋಟ್ಲರ್ 3) ನಾಗರಾಜ ತಂದೆ ಬಸವರಾಜ ರೋಟ್ಲರ್ ಹಾಗೂ 4) ಜಯಶ್ರೀ ಗಂಡ ಭೀಮನಗೌಡ ಹಳ್ಳಿ ಇವರೆಲ್ಲರೂ ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಬಂದವರೇ  ಅವರಲ್ಲಿಯ ಭೀಮನಗೌಡನು ನಮಗೆ ಸೂಳೆ ಮಕ್ಕಳೆ ಸುಳ್ಳ-ಸುಳ್ಳೆ ನಿಮ್ಮ ಹುಂಜ ನಮ್ಮ ಮನೆಯಲ್ಲಿ ಬಂದಿದೆ ಅಂತ ನಿನ್ನೆಯ ದಿನ ನಮ್ಮ ಮನೆಗೆ ಬಂದು ನನ್ನ ಹೆಂಡತಿ ಜಯಶ್ರೀಯೊಂದಿಗೆ ತಕರಾರು ಮಾಡಿದ್ದೀರಿ ಸೂಳೆ ಮಕ್ಕಳೆ ನಿಮಗೆ ಇವತ್ತು ಬಿಡುವದಿಲ್ಲಾ ಅಂತ ಬೈಯ ಹತ್ತಿದ್ದು ಅಲ್ಲದೇ ಅವನ ಜೋತೆಗೆ ಇದ್ದ ಮೂರು ಜನರು ಕೂಡಾ ನಮಗೆ ಈ ಸೂಳೆ ಮಕ್ಕಳದು ಸೊಕ್ಕು ಬಹಳ ಆಗಿದೆ. ಇವತ್ತು ಇವರಿಗೆ ಬಿಡುವದು ಬ್ಯಾಡ ಅಂತ ಬೈದವರೇ ಅವರಲ್ಲಿಯ ಭೀಮನಗೌಡನು  ನನಗೆ ಅಲ್ಲಿಯೇ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ತೆಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು. ಮತ್ತು ನೆಲಕ್ಕೆ ಕೆಡವಿ  ಅದೇ ಬಡಿಗೆಯಿಂದ ಎಡ ಭುಜಕ್ಕೆ ಮತ್ತು ಎಡಗೈ ಮುಂಗೈ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು.  ನನ್ನ ತಂದೆ ಸಣ್ಣ ಸೋಮಣ್ಣ ತಂದೆ ಪರಮಣ್ಣ ಇವರಿಗೆ ಮಂಜುನಾಥ ತಂದೆ ಕನಕಪ್ಪ ರೋಟ್ಲರ್ ಇತನು ಬಡಿಗೆಯಿಂದ ತೆಲೆಯ ಮೇಲೆ ಹೊಡೆದು ಕಂದುಗಟ್ಟಿದ ಗಾಯ ಪಡಿಸಿದ್ದು. ನಾಗರಾಜ ತಂದೆ ಬಸವರಾಜ ರೋಟ್ಲರ್ ಇತನು ನನ್ನ ತಂದೆ ಸೋಮಣ್ಣನಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಎದೆಯ ಮೇಲೆ  ಹೊಟ್ಟೆಯ ಮೇಲೆ ಒದ್ದು ಒಳಪೆಟ್ಟು ಮಾಡಿದ್ದು. ಬಿಡಿಸಲು ಬಂದ ನನ್ನ ತಾಯಿ ಯಲ್ಲಮ್ಮಳಿಗೆ ಜಯಶ್ರೀ ಗಂಡ ಭೀಮನಗೌಡ ಹಳ್ಳಿ ಇವಳು ಬಡಿಗೆಯಿಂದ ತೆಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು. ಮತ್ತು ನನ್ನ ಅಣ್ಣನ ಹೆಂಡತಿ ಹಣಮವ್ವಳಿಗೆ ಜಯಶ್ರೀಯು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ತೆಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು. ಆಗ ನಾವೆಲ್ಲರೂ ನಮಗೆ ಉಳಿಸಿರಪ್ಪೋ ಅಂತ ಚಿರಾಡಲು ಅಲ್ಲಿಂದಲೇ. ಹೋಗುತ್ತಿದ್ದ ನಮ್ಮೂರ ಸೋಮಣ್ಣ ತಂದೆ ಪರಮಣ್ಣ ಗುಡೇರ್, ಶಿವಪುತ್ರ ತಂದೆ ಹಣಮಂತ ತೇರಿನ್ ಇವರುಗಳು ಬಂದು ನೋಡಿ ನಮಗೆ ಹೊಡೆಯುವದನ್ನು ಬಿಡಿಸಿದ್ದು. ಹೋಗುವಾಗ ಮೇಲೆ ನಮೂದಿಸಿದ 4 ಜನರು ನಮಗೆ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿರಿ ಇನ್ನೊಂದು ಸಲ ಸಿಕ್ಕಾಗ ನಿಮಗೆ ಜೀವಂತ ಬಿಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು. ನಂತರ ನಮಗೆ 4 ಜನರಿಗೆ ಮೌನೇಶ ತಂದೆ ನಂದಣ್ಣಪ್ಪ ಪುಜಾರಿ ಇವರು ಉಪಚಾರಕ್ಕಾಗಿ ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು. ನನ್ನ ತಂದೆ-ತಾಯಿ ಹಾಗೂ ಅಣ್ಣನ ಹೆಂಡತಿ ಹಣಮವ್ವ ಇವರುಗಳು ಇನ್ನೂ ಕಕ್ಕೆರಾ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ನಾನು ಉಪಚಾರ ಹೊಂದಿ ಬಂದಿದ್ದು. ಕಾರಣ ವಿನಾಃ ಕಾರಣ ನಮಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 4 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:59/2020 ಕಲಂ:, 323,  324, 504, 506, ಖ/ಘ 34  ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.  




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!