ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/07/2020
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 161/2020 ಕಲಂ: 302, 109 ಸಂಗಡ 34 ಐ.ಪಿ.ಸಿ : ಇಂದು ದಿನಾಂಕಃ 01-07-2020 ರಂದು 3-00 ಎ.ಎಮ್ ಕ್ಕೆ ಶ್ರೀಮತಿ ಗೌರಮ್ಮ ಗಂಡ ಯಂಕಪ್ಪ ಕೊಡವಿಬೋವಿ ಸಾಃ ದೇವಿಕೇರಿ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನಮ್ಮೂರಲ್ಲಿ ನಮ್ಮ ಮನೆಯ ಸಮೀಪ ನಮ್ಮ ಜನಾಂಗದ ಶಿವಪ್ಪ ತಂದೆ ರಂಗಪ್ಪ ಕೊಡವಿಬೋವಿ ಇವರ ಮನೆ ಇದ್ದು, ನಾವು ನಮ್ಮ ಮನೆಗೆ ಹೋಗಬೇಕಾದರೆ ಶಿವಪ್ಪನ ಮನೆಯ ಮುಂದಿರುವ ದಾರಿಯಲ್ಲಿಂದ ಹೋಗುತ್ತೇವೆ. ಆದರೆ ಶಿವಪ್ಪ ತಂದೆ ರಂಗಪ್ಪ ಇತನು ಕಳೆದ 2 ತಿಂಗಳಿನಿಂದ ವಿನಾಕಾರಣ ನನ್ನ ಗಂಡನಿಗೆ ನಮ್ಮ ಮನೆಯ ಮುಂದಿರುವ ದಾರಿಯಿಂದ ತಿರುಗಾಡಬೇಡಾ, ಹಾಗು ಮನೆಯ ಸಮೀಪವಿರುವ ಚೌಡಯ್ಯನ ಕಟ್ಟೆ ಹತ್ತಿರ ಕುಡಬೇಡಾ ಅಂತ ಜಗಳ ತಗೆಯುತ್ತ ಬಂದಿರುತ್ತಾನೆ. ಅಲ್ಲದೇ ಕಳೆದ ಒಂದು ತಿಂಗಳ ಹಿಂದೆ ನನ್ನ ಗಂಡನು ಸುರಪೂರದಿಂದ ಮೋ.ಸೈಕಲ್ ಮೇಲೆ ಮನೆಗೆ ಬರುವಾಗ ಶಿವಪ್ಪನು ನನ್ನ ಗಂಡನಿಗೆ ತಡೆದು ಲೇ ಮಗನೇ ನಮ್ಮ ಮನೆಯ ಮುಂದಿನಿಂದ ತಿರುಗಾಡಬೇಡಾ ಅಂತ ಎಷ್ಟು ಸಲ ಹೇಳಬೇಕಲೇ, ಹೋಗುವಾಗ-ಬರುವಾಗ ನೀನು ನನ್ನ ಹೆಂಡತಿಗೆ ನೋಡಿಕೊಂಡು ಹೋಗುತ್ತೀ, ಇನ್ನೊಮ್ಮೆ ನನ್ನ ಹೆಂಡತಿಗೆ ನೋಡಿದ್ದಲ್ಲಿ ನಿನಗೆ ಇಲ್ಲೆ ಕೊಡಲಿಯಿಂದ ಕಡಿದು ಹಾಕುತ್ತೇನೆ ಮಗನೇ ಅಂತ ಜಗಳ ತಗೆಯುತ್ತಿದ್ದಾಗ ನಾನು ಮತ್ತು ನನ್ನ ಅತ್ತೆ ಯಂಕಮ್ಮ, ಮಾವ ಭೀಮಣ್ಣ ಎಲ್ಲರೂ ನೋಡಿ ಶಿವಪ್ಪನಿಗೆ ಮನೆಗೆ ಕಳುಹಿಸಿ ನನ್ನ ಗಂಡನಿಗೆ ಮನೆಗೆ ಕರೆದುಕೊಂಡು ಬಂದಿರುತ್ತೇವೆ. ಹಾಗು ದಿನಾಂಕಃ 26/06/2020 ರಂದು ರಾತ್ರಿ 7-30 ಗಂಟೆಯ ಸುಮಾರಿಗೆ ನನ್ನ ಗಂಡನು ಊರಲ್ಲಿ ಅಂಗಡಿಗೆ ಹೋಗಿ ಮರಳಿ ಮನೆಗೆ ಬರುವಾಗ ಶಿವಪ್ಪನು ವಿನಾಕಾರಣ ನನ್ನ ಗಂಡನಿಗೆ ಲೇ ಮಗನೇ ಯಂಕ್ಯಾ ನೀನು ನನ್ನ ಹೆಂಡತಿ ಮೇಲೆ ಕಣ್ಣು ಹಾಕಿದ್ದಿಯಲ್ಲಾ, ನಿನಗೆ ಖಲಾಸ ಮಾಡುವತನಕ ಬಿಡುವದಿಲ್ಲ ಅಂತ ಬೈದಿರುವ ವಿಷಯ ನನ್ನ ಗಂಡನು ಮನೆಗೆ ಬಂದು ಹೇಳಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕಃ 30/06/2020 ರಂದು ರಾತ್ರಿ ನಾವು ಮನೆಯಲ್ಲಿ ಊಟ ಮಾಡಿದ ಬಳಿಕ ನಾವು ಗಂಡ-ಹೆಂಡತಿ ನಮ್ಮ ಮೂರು ಜನ ಮಕ್ಕಳೊಂದಿಗೆ 9-30 ಗಂಟೆಯ ಸುಮಾರಿಗೆ ಮನೆಯ ಮಾಳಿಗೆ ಮೇಲೆ ಹೋಗಿ ಮಲಗಿರುತ್ತೇವೆ. ನಮ್ಮ ಸಮೀಪದಲ್ಲೆ ಮಾಳಿಗೆ ಮೇಲೆ ನನ್ನ ಅತ್ತೆ-ಮಾವ ಸಹ ಮಲಗಿದ್ದರು. ನಾವೆಲ್ಲರೂ ನಿದ್ರೆಯಲ್ಲಿದ್ದಾಗ ರಾತ್ರಿ 11-30 ಗಂಟೆಯ ಸುಮಾರಿಗೆ ಒಮ್ಮೆಲೆ ಧಪ್ ಅಂತ ಶಬ್ದವಾಗಿ, ನನ್ನ ಗಂಡನು ಎಪ್ಪಾ ಅಂತ ಕಿರಿಚಿದ್ದರಿಂದ ನಮಗೆಲ್ಲರಿಗೆ ಎಚ್ಚರವಾಗಿದ್ದು, ವಿದ್ಯೂತ್ ಲೈಟ ಬೆಳಕಿನಲ್ಲಿ ನೋಡಲಾಗಿ ನಮ್ಮೂರಿನ ಶಿವಪ್ಪ ತಂದೆ ರಂಗಪ್ಪ ಕೊಡವಿಬೋವಿ ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಗಂಡನ ಕುತ್ತಿಗೆ ಮೇಲೆ ಜೋರಾಗಿ ಹೊಡೆಯುತ್ತಿರುವದನ್ನು ನೋಡಿ ನಾನು ಒಮ್ಮೆಲೆ ಲೇ ಶಿವ್ಯಾ ನಿನ್ನ ಬಾಯಾಗ ನನ್ನ ಜಿಟ್ಟಿ, ನನ್ನ ಗಂಡನು ಏನ ತಪ್ಪು ಮಾಡ್ಯಾನೋ ಹಾಟ್ಯಾ ಅಂತ ಬೈಯ್ಯುತ್ತ ಎಳುವಷ್ಟರಲ್ಲಿ ಶಿವಪ್ಪನು ಮಾಳಿಗೆ ಮೇಲಿಂದ ಕೊಡಲಿ ಸಮೇತ ಓಡಿ ಹೊರಟಿದ್ದರಿಂದ ನಾನು ಮತ್ತು ನನ್ನ ಅತ್ತೆ-ಮಾವ ಎಲ್ಲರೂ ಮಾಳಿಗೆ ಮೇಲಿಂದ ಇಳಿದು ಆತನ ಹಿಂದೆ ಬೆನ್ನು ಹತ್ತಿದ್ದು, ನಮ್ಮ ಜೊತೆ ಸಮೀಪದ ಮನೆಯ ಬಸವರಾಜ ಬೇವಿನಗಿಡ ಹಾಗು ಭೀಮಣ್ಣ ಗುಡ್ಡಕಾಯಿ ಇವರು ಸಹ ಶಿವಪ್ಪನು ಓಡಿ ಹೊರಟಿದ್ದನ್ನು ನೋಡಿ ನಮ್ಮೊಂದಿಗೆ ಆತನಿಗೆ ಹಿಡಿಯಲು ಬೆನ್ನು ಹತ್ತಿ ಬಂದರೂ ಸಹ ಶಿವಪ್ಪನು ಕತ್ತಲಿನಲ್ಲಿ ರಂಗಂಪೇಟ ಕಡೆಗೆ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾನೆ. ನಂತರ ನಾವು ಮರಳಿ ನಮ್ಮ ಮಾಳಿಗೆ ಮೇಲೆ ಹೋಗಿ ನೋಡಲಾಗಿ ನನ್ನ ಗಂಡನ ಎಡಕಿವಿಯ ಕೆಳಗಡೆ ಕುತ್ತಿಗೆಯ ಮೇಲೆ ಮೂರು ಕಡೆ ಕೊಡಲಿಯಿಂದ ಹೊಡೆದಿರುವ ಭಾರಿ ರಕ್ತಗಾಯ ಹಾಗು ಬಲಗೈ ಹೆಬ್ಬರಳಿನ ಹತ್ತಿರ ಭಾರಿ ರಕ್ತಗಾಯವಾಗಿ ನನ್ನ ಗಂಡನು ಸ್ಥಳದಲ್ಲೆ ಮೃತಪಟ್ಟಿದ್ದನು. ನನ್ನ ಗಂಡನಿಗೆ ಕೊಲೆ ಮಾಡುವಂತೆ ಶಿವಪ್ಪನಿಗೆ ಆತನ ತಮ್ಮನಾದ ನಿಂಗಪ್ಪ ತಂದೆ ರಂಗಪ್ಪ ಕೊಡವಿಬೋವಿ ಹಾಗು ಆತನ ಚಿಕ್ಕಪ್ಪ ದೇವಿಂದ್ರಪ್ಪ ತಂದೆ ನಿಂಗಪ್ಪ ಕೊಡವಿಬೋವಿ ಇವರು ಕುಮ್ಮಕ್ಕು ನೀಡಿರುತ್ತಾರೆ. ಕಾರಣ ನನ್ನ ಗಂಡನಿಗೆ ಕೊಲೆ ಮಾಡಿರುವ ಶಿವಪ್ಪ ತಂದೆ ರಂಗಪ್ಪ ಕೊಡವಿಬೋವಿ ಹಾಗು ಕೊಲೆ ಮಾಡಲು ಕುಮ್ಮಕ್ಕು ನೀಡಿರುವ ನಿಂಗಪ್ಪ, ದೇವಿಂದ್ರಪ್ಪ ಮೂವರು ಸಾ: ದೇವಿಕೇರಿ ಇವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 161/2020 ಕಲಂ: 302, 109 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 54/2020 ಕಲಂ.323, 504, 506, ಸಂ. 34 ಐಪಿಸಿ, ಕಲಂ. 16 ಜೀತ ಪದ್ದತಿ ನಿಮರ್ೂಲನೆ ಕಾಯ್ದೆ-1976, ಮತ್ತು ಕಲಂ.3(1)ಡಿತಿ, 3(2)ತ-ಚಿ ಛಿ/ಣ ಕಂ ಂಛಿಣ-1989 : ಇಂದು ದಿನಾಂಕ.01/07/2020 ರಂದು 6-15 ಪಿಎಂಕ್ಕೆ ಶ್ರೀಮತಿ ಹಣಮಂತಿ ಗಂ. ಬಾಬು ವಯಾಃ30 ಜಾಃ ಮಾದಿಗ ಉಃ ಮನೆಕೆಲಸ ಸಾಃ ಭಿಮನಳ್ಳಿ ತಾಃ ಚಿತ್ತಾಪೂರ ಜಿಃಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಬಾಲಾಜಿ ಮಂದಿರದ ಹಿಂದುಗಡೆ ಅಪಾರ್ಟಮೆಂಟನಲ್ಲಿ ವಾಸಮಾಡುತ್ತಿರುವ ಶ್ರೀಮತಿ ಮಂಜುಳಾ ಗಂಡ ಶಂಕರ ಗೂಳಿ ಇವರ ಮನೆಯಲ್ಲಿ ಜೀತ ಪದ್ದತಿಯಂದತೆ ನಾನು ಮತ್ತು ನನ್ನ ಗಂಡನಾದ ಬಾಬು ತಂ. ತಮಾಶೆಪ್ಪ ವಯಸ್ಸು 38 ಜಾಃ ಮಾದಿಗ, ನನ್ನ ಮಕ್ಕಳು ಇರುತ್ತಿದ್ದು ನಾನು ನನ್ನ ಗಂಡ ಇಬ್ಬರೂ ಅವರ ಮನೆಯಲ್ಲಿ ದುಡಿಯುತ್ತಿದ್ದೇವೆ. ನಮ್ಮಿಬ್ಬರಿಗೆ ಪ್ರತಿ ತಿಂಗಳಿಗೆ ರೂ.9000/-ಗಳನ್ನು ಕೊಡುತ್ತಿದ್ದರು. ನನ್ನ ಗಂಡನು ಸುಮಾರು 15 ವರ್ಷಗಳಿಂದ ಅವರ ಮನೆಯಲ್ಲಿ ದುಡಿಯುತ್ತಾ ಬಂದಿದ್ದು ಮತ್ತು ನಾನು ನನ್ನ ಗಂಡನ ಜೊತೆಯಲ್ಲಿ ಮದುವೆಯಾದಾಗಿನಿಂದಲೂ 10 ವರ್ಷಗಳವರೆಗೆ ನಾನು ಕೂಡಾ ಅವರ ಮನೆಯಲ್ಲಿಯೇ ದುಡಿಯುತ್ತಿದ್ದೆವೆ. ಸದರಿ ದುಡಿದ ಹಣವನ್ನು ಕೇಳಲು ಹೋದರೆ ನೀನು ಮನೆಯನ್ನು ಕಟ್ಟುವಾಗ ಕೊಡುತ್ತೇವೆಂದು ಹೇಳುತ್ತಿದ್ದಳು ಆದರೆ ನಮಗೆ ಹಣ ಕೊಟ್ಟಿರುವುದಿಲ್ಲಾ ಪ್ರತಿ ದಿನಾಲೂ ನನ್ನ ಗಂಡನು ಊಟ ಮಾಡುವ ಸಮಯದಲ್ಲಿ ಬಂದು ಆತನಿಗೆ ಮಂಜುಳಾ ಈಕೆಯು ತನ್ನ ಬಲಗಾಲಿನಿಂದ ಹೊದಿಯುತ್ತಿದ್ದಳು ಅದನ್ನು ಸಹಿಸಿಕೊಂಡು ನಾವು ಸುಮ್ಮನಿದ್ದು ನಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೇವೆ.ದಿನಾಂಕ.29/06/2020 ರಂದು ಸಾಯಂಕಾಲ 4-00 ಗಂಟೆ ಸಮಯದಲ್ಲಿ ನೀವು ಕೊಟ್ಟ ಹಣ ನಮ್ಮ ಸಂಸಾರಕ್ಕೆ ಸಾಕಾಗುವುದಿಲ್ಲಾ ಮತ್ತು ನಾವು ಜೀತ ಮಾಡುವುದನ್ನು ಬಿಟ್ಟು ಹೋಗುತ್ತೇವೆಂದು ಹೇಳಿರುವುದಕ್ಕೆ ಲೇ ಮಾದಿಗ್ಯಾ ಸೂಳೆ ಮಕ್ಕಳೆ, ನಿಮ್ಮ ಸೊಕ್ಕು ಬಹಳವಾಗಿದೆ. ನಿಮ್ಮಂತಹ ಸಣ್ಣ ಜಾತಿಯನ್ನು ನಮ್ಮನ್ಯಾಗ ಸುಮ್ಮನೆ ಸೇರಿಸಿಕೊಂಡಿವು ನಿಮ್ಮನ್ನು ಇದೇ ಮನೆಯಲ್ಲಿ ಖಲಾಸ ಮಾಡಿ ಊತು ಹಾಕುತ್ತೇವೆ ನನಗೇನು ತಿಳಿದಿರಾ ಮಾದರ ಸೂಳೆ ಮಕ್ಕಳೆ, ನನಗ್ಯಾರು ಕೇಳುವುದಿಲ್ಲಾ ನಾನು ಮಾಡಿದೆ ಮಾರ್ಗ ನಾನು ಒಂದು ಪೋನ ಹೊಡೆದರೆ, ನಿಮ್ಮನ್ನು ಮಕ್ಕಳ ಸಮೇತ ಖಲಾಸ ಮಾಡಿ ಹೋಗೆಯುತ್ತೇವೆ. ಎಂದು ನಮಗೆ ದಿನಾಲು ಬೈಯುವುದು ಹೊಡೆಯುವುದು ಮಾಡುತ್ತಿದ್ದರುನಾವು ಊಟಕ್ಕೆ ಕುಂತರೆ, ನಮ್ಮ ಊಟದ ತಟ್ಟೆಯನ್ನು ಕೈಯಿಂದ ಕಸಿದುಕೊಂಡು ಮಂಜುಳಾ ಗೂಳಿ ಇವರು ಬಿಸಾಡಿ ನನಗೆ ನನ್ನ ಗಂಡನಿಗೆ ಮತ್ತು ನನ್ನ ಮಕ್ಕಳಿಗೆ ಜಾಡಿಸಿ ಬಲಗಾಲಿನಿಂದ ಹೊದ್ದು, ನನ್ನ ಮಕ್ಕಳಿಗೆ ನನ್ನ ಗಂಡನಿಗೆ ಹೊಡೆ ಬಡೆ ಮಾಡಿ ನಮ್ಮನ್ನು ರೂಮಿನಲ್ಲಿ ಕೂಡಿ ಹಾಕಿ ಮಂಜುಳಾ, ಶಂಕರ ಮತ್ತು ಅವರ ಮಕ್ಕಳು ಕೂಡಿಕೊಂಡು ಹೊಡೆಯುತ್ತಿದ್ದರು. ನಮಗೆ ಹೊಡೆಯುವುದನ್ನು ಮತ್ತು ನಮಗೆ ಮಾನಸಿಕ ಕಿರುಕುಳ ನೀಡುವುದರಿಂದ ನನ್ನ ಗಂಡನು ದಿನಾಂಕ.30/06/2020 ರಂದು ಬಾಚವಾರ ಗೇಟನಲ್ಲಿ ಸಮಯ 11-30 ಗಂಟೆಗೆ ವಿಷವನ್ನು ಸೇವಿಸಿರುತ್ತಾನೆ. ನನಗೆ ನನ್ನ ಗಂಡನಿಗೆ ಹಾಗೂ ನಮ್ಮ ಮಕ್ಕಳಿಗೆ ಹೊಡೆ ಬಡೆ ಮಾಡಿ, ಕಿರುಕುಳ ನೀಡಿ ಜಾತಿ ನಿಂದನೆ ಮಾಡಿ ಮಾನಸಿಕ ಹಿಂಸೆ ನೀಡಿ, ನನ್ನ ಗಂಡನಿಗೆ ಹಾಗೂ ನನಗೆ ಮತ್ತು ನನ್ನ ಮಕ್ಕಳಿಗೆ ಜೀವದ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.54/2020 ಕಲಂ.323,504,506, ಸಂ.34 ಐಪಿಸಿ ಮತ್ತು ಕಲಂ. 16 ಜೀತ ಪದ್ದತಿ ನಿಮರ್ೂಲನೆ ಕಾಯ್ದೆ-1976, ಕಲಂ.3(1)ಡಿತಿ, 3(2)ತ-ಚಿ, ಛಿ/ಣ ಕಂ ಂಛಿಣ-1989, ಅಡಿಯಲ್ಲಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 100/2020 ಕಲಂ: 279,338, 304(ಎ) ಐ.ಪಿ.ಸಿ ಸಂಗಡ 187 ಐಎಮ್ವಿ ಯಾಕ್ಟ: ಇಂದು ದಿನಾಂಕ: 30/06/2020 ರಂದು 7.30 ಎ.ಎಮ್ ಕ್ಕೆ ಸನರೈಸ್ ಆಸ್ಪತ್ರೆ ಕಲಬುರಗಿಯಿಂದ ಎಮ್ಎಲ್ಸಿ ಇದೆ ಅಂತಾ ಪೋನ ಮೂಲಕ ಮಾಹಿತಿ ಬಂದ ಮೇರೆಗೆ ಇಂದು 1.30 ಪಿ.ಎಮ್ ಕ್ಕೆ ಆಸ್ಪತ್ರೆಗೆ ಬೇಟಿ ನೀಡಿ ಪಿರ್ಯಾದಿ ಶ್ರೀ ನಿಂಗಬಸಪ್ಪ ತಂದೆ ನಿಂಗಪ್ಪ ಹೀರೆಮನಿ ಜಾತಿ: ಕುರುಬ ವಯಾ: 60 ವರ್ಷ ಉ: ನಿವೃತ್ತ ಸರಕಾರಿ ನೌಕರ ಸಾ: ವಸ್ತಾರಿ ತಾ: ಜೇವರಗಿ ಹಾ:ವ: ಭೀಮರಾಯಗುಡಿ ಕ್ಯಾಂಪ ಹೀಗಿದ್ದು ನಿನ್ನೆ ದಿನಾಂಕ: 29/06/2020 ರಂದು ಬೆಳಿಗ್ಗೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಮಂಜುನಾಥ ಇಬ್ಬರೂ ಕೂಡಿ ನಮ್ಮ ಹೊಂಡಾ ಯುನಿಕ್ರಾನ ಮೋಟಾರ ಸೈಕಲ್ ನಂ ಕೆಎ/05-ಹೆಚ್.ಎನ್-3154 ನೇದ್ದರ ಮೇಲೆ ನಮ್ಮ ಗ್ರಾಮವಾದ ಜೇವರಗಿ ತಾಲೂಕಿನ ವಸ್ತಾರಿ ಗ್ರಾಮಕ್ಕೆ ಹೋಗಿ ವಾಪಸ್ಸು ಬೀಮರಾಯನಗುಡಿಗೆ ಹೋಗುವ ಕುರಿತು ಅಂದಾಜು ಸಾಯಾಂಕಾಲ 6.00 ಗಂಟೆ ಸುಮಾರಿಗೆ ಮಲ್ಲಾ-ಏವೂರ ಮುಖ್ಯ ರಸ್ತೆಯ ಸಾಹೇಬಗೌಡ ಅಗತೀರ್ಥ ಇವರ ಹೊಲದ ಹತ್ತಿರ ಹೋಗುತ್ತಿರುವಾಗ, ಎದುರುಗಡೆಯಿಂದ ಯಾವುದೋ ಒಂದು ಮೋಟಾರ ಸೈಕಲ್ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ, ಮೊಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ. ನಾವಿಬ್ಬರೂ ರಸ್ತೆಯ ಮೇಲೆ ಗಾಡಿ ಸಮೇತ ಬಿದ್ದಾಗ ನನಗೆ ಯಾವುದೆ ಗಾಯ ವಗೈರೆ ಆಗಿರುವುದಿಲ್ಲ, ಮೊಟಾರ ಸೈಕಲ್ ನಡೆಸುತ್ತಿದ್ದ ನನ್ನ ಮಗ ಮಂಜುನಾಥನಿಗೆ ಎಡಕಿವಿಯಿಂದ, ಮೂಗಿನಿಂದ, ಬಾಯಿಂದ ರಕ್ತಸ್ರಾವ ಆಗುತ್ತಿದ್ದಾಗ ನಾನು ಮತ್ತು ಅಲ್ಲೇ ರಸ್ತೆಯ ಮೇಲೆ ಹೋಗುತ್ತಿದ್ದ ದೇವಿಂದ್ರಪ್ಪಗೌಡ ತಂದೆ ಭೀಮನಗೌಡ ಪೊಲೀಸ್ ಪಾಟೀಲ ಹಾಗೂ ಲಕ್ಕಪ್ಪ ತಂದೆ ಮಲ್ಲಪ್ಪ ಬಳಬಟ್ಟಿ ಇಬ್ಬರೂ ಸಾ: ಗುಂಡಾಪೂರ ತಾ: ಶಹಾಪೂರ ಎಲ್ಲರೂ ಕೂಡಿ ನನ್ನ ಮಗನಿಗೆ ತಲೆಗೆ ಬಾರೀ ರಕ್ತಗಾಯ ಆಗಿದ್ದರಿಂದ 1 ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸನರೈಜ್ ಖಾಸಗಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿರುತ್ತೇವೆ. ನಮಗೆ ಡಿಕ್ಕಿ ಪಡಿಸಿ ಓಡಿ ಹೋದ ಮೋಟಾರ ಸೈಕಲ್ ಮತ್ತು ಚಾಲಕನಿಗೆ ನೋಡಿದರೆ ಗುತರ್ಿಸುತ್ತೇನೆ. ಕಾರಣ ನಮ್ಮ ಮೋಟಾರ ಸೈಕಲ್ಗೆ ಯಾವುದೋ ಒಂದು ಮೋಟಾರ ಸೈಕಲ್ ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ನನ್ನ ಮಗನಿಗೆ ಭಾರೀ ಗಾಯಪೆಟ್ಟು ಮಾಡಿ ಮೋಟಾರ ಸೈಕಲ್ ಸಮೇತ ಓಡಿ ಹೋದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಇಂದು ದಿನಾಂಕ 30/06/2020 ರಂದು 5.00 ಪಿ.ಎಮ್ ಕ್ಕೆ ಪಿರ್ಯಾದಿ ಹೇಳಿಕೆ ನೀಡಿದ
ಹೀಗಿರುತ್ತಾ ಇಂದು ದಿನಾಂಕ 01/07/2020 ರಂದು 7.00 ಪಿ.ಎಮ್ ಕ್ಕೆ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀ ನಿಂಗಬಸಪ್ಪ ತಂದೆ ನಿಂಗಪ್ಪ ಹೀರೆಮನಿ ಜಾತಿ: ಕುರುಬ ವಯಾ: 60 ವರ್ಷ ಉ: ನಿವೃತ್ತ ಸರಕಾರಿ ನೌಕರ ಸಾ: ವಸ್ತಾರಿ ತಾ: ಜೇವರಗಿ ಹಾ:ವ: ಭೀಮರಾಯಗುಡಿ ಕ್ಯಾಂಪ ಇವರು ಠಾಣೆಗೆ ಹಾಜರಾಗಿ ಪ್ರಕರಣದಲ್ಲಿಯ ಗಾಯಾಳು ಮಂಜುನಾಥನು ಕಲಬುರಗಿ ಸನರೈಸ್ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿಗೆ ಹೋಗುವಾಗ ಶಹಾಪೂರ ಹತ್ತಿರ ಮಾರ್ಗ ಮದ್ಯ ಇಂದು ದಿನಾಂಕ 01/07/2020 ರಂದು ಸಾಯಾಂಕಾಲ 6.30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಪುರವಣೆ ಹೇಳಿಕೆ ನೀಡಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ 304[ಎ] ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಲು ಮಾನ್ಯರವರಲ್ಲಿ ವಿನಂತಿಸಿಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 102/2020 ಕಲಂ:143,147,323.324.326,504.506 ಸಂಗಡ 149 ಐ.ಪಿ.ಸಿ : ಇಂದು ದಿನಾಂಕ 01.07.2020 ರಂದು 9.ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಹಣಮಂತ್ರಾಯ ತಂದೆ ಸಹಾದೇವಪ್ಪ ಪೂಜಾರಿ ವ|| 60 ವರ್ಷ ಉ|| ಒಕ್ಕಲುತನ ಜಾ|| ಕಬ್ಬಲಿಗ ಸಾ|| ಹೆಗ್ಗಣದೊಡ್ಡಿ ತಾ|| ಸುರಪುರ ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಅಜರ್ಿ ಏನೆಂದರೆ, ನಮ್ಮ ಹೊಲ ಹಾಗು ನಮ್ಮ ಸಂಬಂದಿಯಾದ ಬಸಪ್ಪ ತಂದೆ ನಿಂಗಯ್ಯ ಪೂಜಾರಿ ಇವರ ಹೊಲ ಆಜುಬಾಜು ಇದ್ದು ಸದರಿಯವರು ನಮ್ಮ ಹೊಲದಲ್ಲಿ ಹಾದು ಹೋಗುತ್ತಿದ್ದು ಸದರ ಹೊಲದಲ್ಲಿನ ದಾರಿಯ ವಿಷಯದಲ್ಲಿ ಆಗಾಗ ನಮ್ಮೊಂದಿಗೆ ತಕರಾರು ಮಾಡಿ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ನಿನ್ನೆ ದಿನಾಂಕ 30/06/2020 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲ ಸವರ್ೆ ನಂಬರ 68 ರ ಮನೆಯ ಮುಂದೆ ಇದ್ದಾಗ ನಮ್ಮ ಅಣ್ಣ ತಮ್ಮಕಿಯವರಾದ 1] ಬಸಪ್ಪ ತಂದೆ ನಿಂಗಯ್ಯ ಪೂಜಾರಿ 2] ರಾಮಣ್ಣ ತಂದೆ ಬಸಪ್ಪ ಪುಜಾರಿ 3] ಸಹಾದೇವಪ್ಪ ತಂದೆ ಬಸಪ್ಪ ಪೂಜಾರಿ 4] ಬಸಪ್ಪ ತಂದೆ ಶರಣಪ್ಪ ಮಾವಿನಮಟ್ಟಿ 5] ಶಿವಪ್ಪ ತಂದೆ ಶರಣಪ್ಪ ಮಾವಿನಮಟ್ಟಿ 6] ಮಲ್ಲಪ್ಪ ತಂದೆ ಬಸಪ್ಪ ಗೌಡರ 7] ಮಲ್ಲಣ್ಣ ತಂದೆ ದೇವಪ್ಪ ಗೌಡರ ಸಾ|| ಎಲ್ಲರೂ ಹೆಗ್ಗಣದೊಡ್ಡಿ ಈ ಎಲ್ಲಾ ಜನರು ಸೇರಿ ಏನಲೇ ಸೂಳೇ ಮಗನೆ ಹಣಮ್ಯಾ ನಮ್ಮ ಕುರಿಗಳು ನಿಮ್ಮ ಹೊಲದಲ್ಲಿ ಬಂದಿದ್ದಕ್ಕೆ ನಮಗೆ ಇಲ್ಲಸಲ್ಲದ ಯಾಕೇ ಮಾತನಾಡಿದ್ದೀ ಸೂಳೇ ಮಗನೆ ಅಂತ ಬೈಯುತ್ತಿದ್ದಾಗ ಏಕೆ ಬೈಯುತ್ತಿ ಅಂತ ನಾನು ಕೇಳಿದಾಗ ಎಲ್ಲರೂ ಸೂಳೇ ಮಗನ ನಿಮ್ಮ ಸೊಕ್ಕು ಬಹಾಳ ಆಗಿದೆ ಅಂತ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಾ ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ತುಳಿಯುತ್ತಿದ್ದಾಗ ಅಲ್ಲಿಯೇ ಹೊಲದಲ್ಲಿದ್ದ ನಮ್ಮ ಮಕ್ಕಳಾದ ಹೈಯಾಳಪ್ಪ ಪೂಜಾರಿ ಹಾಗು ಗೊಲ್ಲಾಳಪ್ಪ ಪೂಜಾರಿ ಈ ಎರಡು ಜನರು ಬಿಡಿಸಿಕೊಳ್ಳಲು ಬಂದಾಗ ಮಗ ಹೈಯಾಳಪ್ಪ ಈತನಿಗೆ ರಾಮಣ್ಣ ಪೂಜಾರಿ ಈತನು ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ತಲೆಗೆ ಹೊಡೆದು ಭಾರೀ ರಕ್ತಗಾಯ ಪಡಿಸಿದನು, ಉಳಿದವರು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಇನ್ನೊಬ್ಬ ಮಗ ಗೊಲ್ಲಾಳಪ್ಪ ಈತನಿಗೆ ಸಹಾದೇವಪ್ಪ ಈತನು ಅಲ್ಲಿಯೇ ಬಿದ್ದ ಬಡಿಗೆಯಿಂದ ತಲೆಗೆ ಹಾಗು ಮೂಗಿನ ಹತ್ತಿರ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ. ನಂತರ ನಾವೆಲ್ಲರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಬಸನಗೌಡ ಗೌಡರ ಹಾಗು ನಂದಪ್ಪ ಲಿಂಗದಳ್ಳಿ ಇವರು ಬಂದು ಸದರಿಯವರು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನಮಗೆ ಉದ್ದೇಶಿಸಿ ಮಕ್ಕಳೆ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯಹಾಕಿ ಹೋದರು. ಕಾರಣ ಮೇಲ್ಕಾಣಿಸಿದ ಏಳು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 102/2020 ಕಲಂ 143,147,447,323,324,326,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 103/2020 ಕಲಂ: 279 ಐಪಿಸಿ : ಇಂದು ದಿನಾಂಕ 01.07.2020 ರಂದು 4.30 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಚಂದ್ರಶೇಖರ ತಂದೆ ಸಂಗಣ್ಣ ಪಟ್ಟಣಶೆಟ್ಟಿ ವ|| 40 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ವಜ್ಜಲ ತಾ|| ಹುಣಸಗಿ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನಮ್ಮ ಅಣ್ಣನವರಾದ ಕೆ.ವ್ಹಿ ಸತೀಶ ತಂದೆ ಸಾಂಬವಮೂತರ್ಿ ನಂ 1854 17 ನೇ ಮೇನ್ 30[ಬಿ] ಕ್ರಾಸ 5 ನೇ ಹಂತ ಹೆಚ್ ಬಿ ಆರ್ ಲೇವಟ್ ಬೆಂಗಳೂರು-43 ಇವರ ಹೆಸರಿನಲ್ಲಿ ಒಂದು ಯುನೊವಾ ಕೃಷ್ಟಾ ಕಾರ ನಂಬರ ಕೆಎ-02 ಎಮ್ಎನ್-4884 ನೇದ್ದು ಇದ್ದು ಸದರಿ ಕಾರಿಗೆ ಪಿಲ್ಲಪ್ಪ ತಂದೆ ಪರಮಪ್ಪ ಸಾ|| ಶಖಾಪೂರ ಈತನು ಚಾಲಕ ಅಂತ ಇರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ 30.06.2020 ರಂದು 10.30 ಗಂಟೆಗೆ ನಮ್ಮ ಕಾರ ಚಾಲಕನಾದ ಪಿಲ್ಲಪ್ಪ ಈತನು ತನ್ನ ಸಂಬಂದಿಕರ ಊರಾದ ಯಕ್ತಾಪೂರ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದನು. ನಂತರ ರಾತ್ರಿ 11.30 ಗಂಟೆಯ ಸುಮಾರಿಗೆ ನಮ್ಮ ಯುನೊವಾ ಕೃಷ್ಟಾ ಕಾರ ನಂಬರ ಕೆಎ-02 ಎಮ್ಎನ್-4884 ನೇದ್ದನ್ನು ತೆಗೆದುಕೊಂಡು ಹೋದ ನಮ್ಮ ಕಾರ ಚಾಲಕ ನನಗೆ ಪೋನ ಮಾಡಿ ತಾನು ತಾಳಿಕೋಟಿ- ಕೆಂಭಾವಿ ರಸ್ತೆಯ ಮುಖಾಂತರ ಯಕ್ತಾಪೂರಕ್ಕೆ ಹೋಗುವ ಕುರಿತು ಐನಾಪೂರ ಕ್ರಾಸ ಹತ್ತಿರ ಹೋಗುತ್ತಿದ್ದಾಗ ತಿರುವಿನಲ್ಲಿ ತಾನು ನಡೆಸುವ ಕಾರನ್ನು ವೇಗವಾಗಿ ನಡೆಸಿಕೊಂಡು ಹೋಗುತ್ತಿದ್ದಾಗ ಒಮ್ಮಲೇ ಒಂದು ನರಿ ರೋಡಿಗೆ ಅಡ್ಡ ಬಂದಿದ್ದರಿಂದ ಸದರ ನರಿಗೆ ತಪ್ಪಿಸಲು ಹೋದಾಗ ತನ್ನ ನಿಯಂತ್ರಣ ತಪ್ಪಿ ಕಾರ ರೋಡಿನ ಕೆಳಗೆ ಹೋಗಿ ಪಲ್ಟಿಯಾಗಿ ಬಿದ್ದಿದ್ದು ಸದರ ಅಪಘಾತದಲ್ಲಿ ತನಗೆ ಸಣ್ಣಪುಟ್ಟ ಗುಪ್ತಗಾಯಗಳಾಗಿದ್ದು ಅಂತ ತಿಳಿಸಿದಾಗ ನಾನು ಕೂಡಲೆ ಸದರಿ ಸ್ಥಳಕ್ಕೆ ಬಂದು ನೋಡಲು ಕಾರ ರೋಡಿನ ತಗ್ಗಿನಲ್ಲಿ ಬಿದ್ದು ಪೂತರ್ಿಯಾಗಿ ಜಖಂಗೊಂಡಿದ್ದು ಸದರ ಅಪಘಾತಕ್ಕೆ ಕಾರ ಚಾಲಕ ಪಿಲ್ಲಪ್ಪ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೇಯೇ ಕಾರಣವಿದ್ದು ಕಾರಣ ತಾವು ಸ್ಥಳಕ್ಕೆ ಬಂದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 103/2020 ಕಲಂ 279 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 180/2020. ಕಲಂ 498, ?,323,504,ಸಂಗಡ 34 ಐ.ಪಿ.ಸಿ. : ಫಿಯರ್ಾದಿದಾರರಿಗೆ ಆಕೆಯ ಗಂಡ ಮತ್ತು ಚಂದ್ರಶೇಕರ ಮತ್ತು ಆತನ ಅಣ್ಣ ಸೋಪಣ್ಣ ಇಬ್ಬರೂ ಕೂಡಿ ಈಗ ಒಂದು ವರ್ಷದಿಂದ ಕೌಟುಂಬಿಕ ಕಿರುಕುಳ ನೀಡಿ ಹೊಡೆ ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು ಅಲ್ಲದೇ ದಿನಾಂಕ: 24-05-2020 ರಂದು 3:00 ಗಂಟೆಗೆ ಗಂಡನ ಮನೆಗೆ ಹೋದಾದ ಹೊಡೆಬಡೆ ಮಾಡಿ ನಾನು ಇನೊಂದು ಮದುವೆ ಮಾಡಿಕೊಳ್ಳುತ್ತೇನೆ ಹೊಗು ನೀನು ನನಗೆ ಬೇಡಾ ಎಂದು ಹೊಡೆದು ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಗೆ ಹಾಕಿದ್ದು ಇದೆ ಅಂತಾ ಇತ್ಯಾದಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 180/2020 ಕಲಂ 498, ?,323,504,ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 25/2020 ಕಲಂ 279, 338 ಐಪಿಸಿ : ಇಂದು ದಿನಾಂಕ 01/07/2020 ರಂದು 01-30 ಪಿ.ಎಂ.ಕ್ಕೆ ಶ್ರೀ ಸಾಬಣ್ಣ ತಂದೆ ರಾಮಯ್ಯ ಕುಂಬಾರ ವಯ;62 ವರ್ಷ, ಜಾ;ಕುಂಬಾರ, ಉ;ಕುಂಬಾರಿಕೆ, ಸಾ;ಎಂ.ಹೊಸಳ್ಳಿ ತಾ;ಜಿ;ಯಾದಗಿರಿ ಇವರು ಠಾಣೆಗೆ ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿಯನ್ನು ಸಲ್ಲಿಸಿದ ಸಾರಾಂಶವೇನೆಂದರೆ ನನ್ನ ಮಗನಾದ ವಿಶ್ವರಾಧ್ಯ @ ವಿಶ್ವನಾಥ ವಯ;26 ವರ್ಷ ಈತನು ದಿನಾಂಕ 29/06/2020 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಮಗಳಾದ ಶಾಂತಮ್ಮ ಈಕೆಗೆ ತನ್ನ ಸಂಗಡ ಕರೆದುಕೊಂಡು ನನ್ನ ಹಿರಿಮಗಳಾದ ಲಕ್ಷ್ಮೀ ಈಕೆಗೆ ಮಾತನಾಡಿಸಿಕೊಂಡು ಬರುತ್ತೇವೆಂದು ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ವಾಯ್-5433 ನೇದ್ದರ ಮೇಲೆ ನಮ್ಮೂರಿನಿಂದ ಮುದ್ನಾಳ ಗ್ರಾಮಕ್ಕೆ ಹೋಗಿದ್ದು ಇರುತ್ತದೆ. ಹೀಗಿದ್ದು ನಂತರ ರಾತ್ರಿ 10-30 ಪಿ.ಎಂ.ದ ಗಂಟೆ ಸುಮಾರಿಗೆ ನನ್ನ ಮೊಮ್ಮಗನಾದ ರಾಜು ತಂದೆ ಸಾಬಣ್ಣ ಸಾ;ಮುದ್ನಾಳ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಮಾವನಾದ ವಿಶ್ವಾರಾಧ್ಯ @ ವಿಶ್ವನಾಥ ಇವರು ಇಂದು ಸಾಯಂಕಾಲ ನಮ್ಮ ಮನೆಗೆ ಬಂದು ಅಮ್ಮನಿಗೆ ಮಾತನಾಡಿಸಿ ಊಟ ಮಾಡಿದ ನಂತರ ಚಿಕ್ಕಮ್ಮ ಶಾಂತಮ್ಮಳಿಗೆ ಇಲ್ಲಿಯೇ ಬಿಟ್ಟು ನಾನು ಎಂ.ಹೊಸಳ್ಳಿ ಊರಿಗೆ ಹೋಗಿ ನಾಳೆ ಬೆಳಿಗ್ಗೆ ಬರುತ್ತೇನೆಂದು ತನ್ನ ಮೋಟಾರು ಸೈಕಲ್ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಹೋದ ಸ್ವಲ್ಪ ಸಮಯದಲ್ಲೇ ನನ್ನ ಸ್ನೇಹಿತರೊಬ್ಬರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಿನ್ನ ಮಾಮನವರು ಮುದ್ನಾಳ ಕಡೆಯಿಂದ ಯಾದಗಿರಿಗೆ ಬರುವಾಗ ಡಾನ್ ಬೋಸ್ಕೋ ಶಾಲೆಯ ಮುಂದಿನ ರಸ್ತೆ ಮೇಲೆ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುವಾಗ ಚಾಲನೆ ಮೇಲಿನ ನಿಯಂತ್ರಣ ತಪ್ಪಿ ಸ್ಕಿಡ್ ಮಾಡಿಕೊಂಡು ಅಪಘಾತ ಮಾಡಿಕೊಂಡಿದ್ದು ಅವರಿಗೆ ಸದರಿ ಅಪಘಾತದಲ್ಲಿ ತಲೆಗೆ ಭಾರೀ ಒಳಪೆಟ್ಟಾಗಿದ್ದು ಬಲಕಿವಿಯಿಂದ ರಕ್ತ ಹೊರ ಬಂದಿರುತ್ತದೆ. ಆತನ ಮೋಟಾರು ಸೈಕಲ್ ಸ್ಥಳದಲ್ಲಿ ಬಿದ್ದಿದ್ದು ಅದರ ನಂಬರ ಕೆಎ-33, ವಾಯ್-5433 ಇದ್ದು ಈ ಅಪಘಾತವು ಈಗಷ್ಟೆ ಅಂದಾಜು 10 ಪಿ.ಎಂ.ಕ್ಕೆ ಜರುಗಿದ್ದು ಇರುತ್ತದೆ. ನೀವು ಕೂಡಲೇ ಘಟನಾ ಸ್ಥಳಕ್ಕೆ ಬರಬೇಕು ಅಂದಾಗ ನನಗೆ ಗಾಬರಿಯಾಗಿ ಕೂಡಲೇ ಘಟನಾ ಸ್ಥಳಕ್ಕೆ ನನ್ನ ತಾಯಿಯನ್ನು ಸಂಗಡ ಕರೆದುಕೊಂಡು ಬಂದು ನೋಡಲು ನನಗೆ ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜವಿದ್ದು ಒಂದು ಖಾಸಗಿ ಆಟೋದಲ್ಲಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ನೀವು ಆಸ್ಪತ್ರೆಗೆ ಬರಬೇಕು ಅಂದಾಗ ನಾನು ಈ ವಿಷಯವನ್ನು ನನ್ನ ಅಣ್ಣನ ಮಗನಾದ ಸಾಬಣ್ಣ ತಂದೆ ಮಲ್ಲಯ್ಯ ಇವರಿಗೆ ತಿಳಿಸಿ ನನ್ನ ಸಂಗಡ ಕರೆದುಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಮಗ ವಿಶ್ವಾರಾಧ್ಯ @ ವಿಶ್ವಾನಾಥ ಈತನು ಚಿಕಿತ್ಸೆ ಪಡೆಯುತ್ತಿದ್ದು ಮೂಚರ್ೆ ಹೋಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇದ್ದಿರುವುದಿಲ್ಲ, ನಂತರ ಘಟನೆ ಬಗ್ಗೆ ರಾಜು ಈತನಿಂದ ಮತ್ತೆ ತಿಳಿದುಕೊಂಡಿದ್ದು ನನಗೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಪೋಲೀಸರು ವಿಚಾರಣೆಗೆ ಬಂದಾಗ ಈ ಘಟನೆಯಲ್ಲಿ ಗಾಯಗೊಂಡ ಬಗ್ಗೆ ಮೊದಲು ಚಿಕಿತ್ಸೆ ಕೊಡಿಸುತ್ತೇವೆ ಹಾಗು ಮನೆಯಲ್ಲಿ ಹಿರಿಯರಿಗೆ ಕೇಳಿ ಕೇಸು ಕೊಡುತ್ತೆಂದು ಹೇಳಿರುತ್ತೇವೆ ನಂತರ ನನ್ನ ಮಗನಿಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬರುಗಿಗೆ ರೆಫರ್ಡ ಮಾಡಿದಾಗ ನಾವು ನನ್ನ ಮಗ ವಿಶ್ವಾರಾಧ್ಯ @ ವಿಶ್ವಾನಾಥ ಈತನಿಗೆ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆ ಮಾಡಿರುತ್ತೇವೆ. ಸದ್ಯ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಘಟನೆ ಬಗ್ಗೆ ನಮಗೆ ಹಿರಿಯರು ಕೇಸು ಕೊಡಲು ತಿಳಿಸಿದ ಮೇರೆಗೆ ಇಂದು ದಿನಾಂಕ 01/07/2020 ರಂದು ನಿಮ್ಮ ಠಾಣೆಗೆ ಖುದ್ದಾಗಿ ಹಾಜರಾಗಿ ತಡವಾಗಿ ದೂರು ನೀಡುತ್ತಿದ್ದು ದಿನಾಂಕ 29/06/2020 ರಂದು ರಾತ್ರಿ 10 ಗಂಟೆ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಡಾನ್ ಬೋಸ್ಕೋ ಶಾಲೆಯ ಮುಂದಿನ ಮುಖ್ಯ ರಸ್ತೆ ಮೇಲೆ ಮೋಟಾರು ಸೈಕಲ ನಂ.ಕೆಎ-33, ವಾಯ್-5433 ನೆದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುವಾಗ ಚಾಲನೆ ಮೇಲಿನ ನಿಯಂತ್ರಣ ತಪ್ಪಿ ಸ್ಕಿಡ್ ಮಾಡಿಕೊಂಡು ಅಪಘಾತ ಮಾಡಿಕೊಂಡಿದ್ದು ಸದರಿ ಅಪಗಾತದಲ್ಲಿ ಆತನಿಗೆ ತಲೆಗೆ ಭಾರೀ ಗುಪ್ತಗಾಯವಾಗಿದ್ದು ಈ ಬಗ್ಗೆ ಆತನ ಮೇಲೆ ಕಾನೂನಿನ ಮುಂದಿನ ಕ್ರಮ ಜರುಗಿಸಿರಿ ಅಂತಾ ದೂರು ಅಜರ್ಿ ಇರುತ್ತದೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 25/2020 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 78/2020 ಕಲಂ, 87 ಕೆ.ಪಿ ಆ್ಯಕ್ಟ್ : ಇಂದು ದಿನಾಂಕ 01/07/2020 ರಂದು 07.30 ಪಿಎಂಕ್ಕೆ ಶ್ರೀ. ವೆಂಕಟೇಶ ಡಿ.ವೈ.ಎಸ್.ಪಿ ಸುರಪೂರ ಉಪ ವಿಭಾಗ ರವರು ಠಾಣೆಗೆ ಹಾಜಾರಗಿ ಜ್ಞಾಪನ ನೀಡಿದ್ದೇನಂದರೆ, ಇಂದು ದಿನಾಂಕ:01/07/2020 ರಂದು 04.30 ಪಿಎಂ ಸುಮಾರಿಗೆ ಶಹಾಪೂರ ಪೊಲೀಸ್ ಠಾಣೆಗೆ ಬೇಟಿ ಮಾಡಿದಾಗ ಭಾತ್ಮಿದಾರರಿಂದ ತಿಳಿದುಬಂದಿದ್ದೇನಂದರೆ, ಗೋಗಿ ಪೆಠ ಗ್ರಾಮದಿಂದ ಗೋಗಿ ರೇವುನಾಯ್ಕ ತಾಂಡಾಕ್ಕೆ ಹೋಗುವ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ಸದರಿ ವಿಷಯವನ್ನು ಖಚಿತ ಪಡಿಸಿಕೊಂಡು ನಂತರ ಗೋಗಿ ಪೋಲೀಸ್ ಠಾಣೆಗೆ ಬಂದು ಮಾನ್ಯ ಹೆಚ್ಚುವರಿ ಜೆ.ಎಮ.ಎಫ್.ಸಿ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿಲಾಗಿದೆ, ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಲಗತ್ತಿಸಿ ಜ್ಞಾಪನ ನೀಡಿದ ಪ್ರಕಾರ ಠಾಣೆ ಗುನ್ನೆ ನಂ:78/2020 ಕಲಂ: 87 ಕೆಪಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಲ್ಳಲಾಗಿದೆ. ನಂತರ ದಾಲಿ ಮಾಡಿ ಒಟ್ಟು 10 ಜನ ಆರೋಪಿತರನ್ನು, ದಸ್ತಗಿರಿ ಮಾಡಿಕೊಂಡು 40,720/- ರೂ ನಗದು ಹಾಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಕ್ರಮ ಜರುಗಿಸಿದ್ದು, ಇರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 85/2020 ಕಲಂ 341, 323, 504, 506 ಐಪಿಸಿ : ನಿನ್ನೆ ದಿನಾಂಕ:30/03/2020 ರಂದು ಮುಂಜಾನೆ ಫಿಯರ್ಾದಿಯ ಅಣ್ಣತಮ್ಮಕಿಯಾದ ಸುಂದರ ಮತ್ತು ಆರೋಪಿತನ ನಡುವೆ ತಕರಾರು ಆಗಿದ್ದರಿಂದ ಇಂದು ದಿನಾಂಕ:01/07/2020 ರಂದು 7 ಪಿ.ಎಮ್. ಸುಮಾರಿಗೆ ಸುಂದರ ಈತನು ಸದರಿ ಪರಮೇಶ ಈತನ ಮೇಲೆ ಅಜರ್ಿ ಕೊಡಲು ಫಿಯರ್ಾದಿ ಸಂಗಡ ಠಾಣೆಗೆ ಬರುತ್ತಿರುವಾಗ ಆರೋಪಿತನು ಫಿಯರ್ಾದಿಗೆ ತಡೆದು ನಿಲ್ಲಿಸಿ ಎಲೇ ಭೋಸಡಿ ಮಗನೆ ನಮ್ಮ ನಮ್ಮ ಜಗಳದಲ್ಲಿ ನೀನ್ಯಾಕೆ ಅಡ್ಡ ಬರುತ್ತಿ, ಇದರಲ್ಲಿ ನಿಂದೇನು ತಿಂಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಫಿಯರ್ಾದಿ ಅಜರ್ಿ ಇರುತ್ತದೆ.
Hello There!If you like this article Share with your friend using