ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/06/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 07/2020 ಕಲಂ 174 ಸಿಆರ್ಪಿಸಿ : ಮೃತನು ಈಗ ಸುಮಾರು 20 ವರ್ಷಗಳಿಂದ ಸೆರೆ ಸೇಂಧಿ ಕುಡಿಯುತ್ತಾ ಬಂದಿದ್ದು ಮತ್ತು ಇತ್ತಿತ್ತಲಾಗಿ ವಿಪರೀತ ಕುಡಿದು ಸುಮಾರು ಸಲ ಪ್ರಜ್ಞೇ ತಪ್ಪಿ ಬಿದ್ದಾಗ ಆತನಿಗೆ ದವಾಖಾನೆಗೆ ತೋರಿಸಿದಾಗ ಡಾಕ್ಟರು ಕುಡಿಯಬೇಡ ಅಂತಾ ಹೇಳಿದರೂ ಸಹ ಮೃತನು ಇದ್ಯಾವುದನ್ನು ಲೇಕ್ಕಿಸದೇ ಹಾಗೇ ಕುಡಿಯುತ್ತಾ ಬಂದಿದ್ದು ಇರುತ್ತದೆ. ಅದರಂತೆ ಇಂದು ದಿನಾಂಕ 18-06-2020 ರಂದು ಬೆಳಗ್ಗೆ ಮೃತನು ವಿಪರೀತ ಮಧ್ಯಸೇವನೇ ಮಾಡಿ ಪ್ರಜ್ಞೇ ತಪ್ಪಿ ಬಿದ್ದಾಗ ಆತನಿಗೆ ಉಪಚಾರಕ್ಕೆ ರಾಯಚೂರಿನ ರೀಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಮೃತನು ಅಲ್ಲಿ ಉಪಚಾರ ಹೊಂದುತ್ತಾ ಇಂದು ಮಧ್ಯಾಹ್ನ 1-30 ಪಿ.ಎಮ್ ಕ್ಕೆ ಮೃತಪಟ್ಟಿದ್ದು ಇರುತ್ತದೆ ಮೃತನ ಸಾವಿನಲ್ಲಿ ಯಾರ ಮೇಲೂ ಯಾವುದೇ ತರಹದ ಸಂಶಯವಿರುವುದಿಲ್ಲಾ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 07/2020 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 109/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ. : ನಿನ್ನೆ ದಿನಾಂಕ 17.06.2020 ರಂದು ಸಂಜೆ 6:15 ಗಂಟೆಗೆ ಫಿರ್ಯಾದಿಯು ತನ್ನ ತಂದೆಗೆ ಸೇರಿದ ಜಾಗದಲ್ಲಿ ಕಟ್ಟಿದ ಶಟರಗಳ ಕೀಲಿಯನ್ನು ತೆರೆಯಲು ಹೋಗಿದಾಗ ಆರೋಪಿ ಶರಣಗೌಡ ಇತನು ತನ್ನ ದೊಡ್ಡಮ್ಮಳಿಗೆ ಸೇರಿದ ಜಾಗದಲ್ಲಿ ಶಟರಗಳನ್ನು ಕಟ್ಟಿರಿ ಅಂತಾ ಹೇಳಿ ಫಿರ್ಯಾದಿಯೊಂದಿಗೆ ಜಗಳಕ್ಕೆ ಬಿದಿದ್ದು ಆಗ ಫಿರ್ಯಾದಿಯ ತಂದೆ ಮತ್ತು ಉಳಿದ ಕೆಲವರು ಬಿಡಿಸಲು ಬಂದಾಗ ಉಳಿದ ಆರೊಪಿತರು ಅಕ್ರಮ ಕೂಟ ರಚಿಸಿಕೊಂಡು ಬಂದು ಅವರೊಂದಿಗೆ ಜಗಳಕ್ಕೆ ಬಿದ್ದು ಕೈಯಿಂದ ಹೊಡೆ-ಬಡೆ ಮಾಡುತ್ತ ಕಾಲಿನಿಂದ ಒದಿಯುತ್ತಿದ್ದಾಗ ಆರೋಪಿ ಶರಣಗೌಡ ಈತನು ಅಲ್ಲಿದ್ದ ಕಟ್ಟಿಗೆಯಿಂದ ಫಿರ್ಯಾದಿಗೆ ಹೊಡೆ-ಬಡೆ ಮಾಡಿದ್ದು ಆತನ ಹೆಂಡತಿ ಆರೋಪಿ ಶಶೀಕಲಾಳು ಫಿರ್ಯಾದಿಗೆ ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಹೊಟ್ಟೆಗೆ, ಹೊಟ್ಟೆಯ ಕೆಳಭಾಗದಲ್ಲಿ ಒದ್ದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 109/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 84/2020, ಕಲಂ, 143,147,148, 323. 324, 354.504.506. ಸಂಗಡ 149 ಐ ಪಿ ಸಿ : ಇಂದು ದಿನಾಂಕ: 18-06-2020 ರಂದು ರಾತ್ರಿ 09-00 ಗಂಟೆಗೆ ಪಿಯರ್ಾಧಿದಾರನಾದ ಮಲ್ಲಯ್ಯ ತಂದೆ ಹಣಮಂತ ಕಾಕೇರ ವ|| 55 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಬಳಿಚಕ್ರ ತಾ|| ಜಿ|| ಯಾದಗಿರಿ ಈತನು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ ಪಿಯರ್ಾಧಿ ಸಾರಂಶವೆನೆಂದರೆ ದಿನಾಂಕ: 18-06-2020 ರಂದು ಸಾಯಂಕಾಲ 05-00 ಗಂಟೆಗೆ ನಾವು ಮನೆಗೆ ಬರುವಾಗ ನಮ್ಮ ನಾವು ತೆಗೆದುಕೊಂಡ ಹೊಲದಲ್ಲಿ ಬಂದು ಆರೋಪಿತರು ಹೊಲ ಗಳೆ ಹೊಡೆಯುತ್ತಿರುವಾಗ ಅದಕ್ಕೆ ಯಾಕೆ ನಮ್ಮ ಹೊಲ ಗಳೆ ಹೊಡೆಯುತ್ತಿರಿ ಅಂತಾ ಕೇಳಿದ್ದಕ್ಕೆ ಆರೋಪಿತರು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಗುಪ್ತ ಪೆಟ್ಟು ಮಾಡಿ ನನ್ನ ಹೆಂಡತಿಗೆ ಸೀರೆ ಮತ್ತು ಕುಪ್ಪಸ ಹಿಡಿದು ಎಳೆದಾಡಿ ಅವಮಾನ ಮಾಡಿ ಎಳದಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿ ಜೀವ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 71/2020 ಕಲಂ: 498(ಎ), 504, 323, 506 ಸಂ 34 ಐಪಿಸಿ : ಇಂದು ದಿನಾಂಕ: 18/06/2020 ರಂದು 5 ಪಿಎಮಕ್ಕೆ ಶ್ರೀಮತಿ ಸುಲೋಚನಾ ಗಂಡ ಮೋಹನಕುಮಾರ ಚಿಕ್ಕಮೇಟಿ, ವ:27, ಜಾ:ಮಾದಿಗ (ಎಸ್.ಸಿ), ಉ:ಮನೆಕೆಲಸ ಸಾ:ಗುರುಸಣಗಿ ತಾ:ವಡಗೇರಾ ಹಾ:ವ:ತಾರಫೈಲ ಏರಿಯಾ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ತವರು ಮನೆಯು ಗಡ್ಡೆಸೂಗುರು ಗ್ರಾಮ ಇರುತ್ತದೆ. ನನಗೆ ಸುಮಾರು 2 ವರ್ಷಗಳ ಹಿಂದೆ ದಿನಾಂಕ: 08/05/2019 ರಂದು ನನ್ನ ತಂದೆ-ತಾಯಿ ಮತ್ತು ಗುರು ಹಿರಿಯರು ಕೂಡಿ ಮೂಲತಃ ಗುರುಸಣಗಿ ನಿವಾಸಿಯಾಗಿದ್ದು, ಈಗ ಸದ್ಯ ಕಲಬರುಗಿ ತಾರಫೈಲ್ ಏರಿಯಾದಲ್ಲಿ ವಾಸಿಸುತ್ತಿರುವ ಮೋಹನಕುಮಾರ ತಂದೆ ಸಾಯಬಣ್ಣ ಚಿಕ್ಕಮೇಟಿ ಈತನೊಂದಿಗೆ ನಮ್ಮ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತಾರೆ. ನಮಗೆ ಇನ್ನು ಮಕ್ಕಳಾಗಿರುವುದಿಲ್ಲ. ಮನೆಯಲ್ಲಿ ನಾವು ಗಂಡ-ಹೆಂಡತಿ ಮತ್ತು ನನ್ನ ಅತ್ತೆ ಪಾರ್ವತಿ ಗಂಡ ಸಾಯಬಣ್ಣ ಚಿಕ್ಕಮೇಟಿ ಹಾಗೂ ನಾದಿನಿಯಾದ ದೀಪಾ ತಂದೆ ಸಾಯಬಣ್ಣ ಚಿಕ್ಕಮೇಟಿ ನಾಲ್ಕು ಜನ ವಾಸವಾಗಿರುತ್ತೇವೆ. ನನ್ನ ಗಂಡನ ತಂದೆಯಾದ ಸಾಯಬಣ್ಣ ಇವರು ತೀರಿಕೊಂಡಿರುತ್ತಾರೆ. ಕೆಲ ದಿನಗಳು ಸರಿಯಾಗಿದ್ದ ನನ್ನ ಗಂಡ, ಅತ್ತೆ ಮತ್ತು ನಾದಿನಿ ಮೂರು ಜನ ನನಗೆ ವಿನಾಕಾರಣ ನಿನಗೆ ಕೆಲಸ ಮಾಡಲು ಬರಲ್ಲ, ಅಡಿಗೆ ಮಾಡಲು ಬರಲ್ಲ, ನೀನು ಹಳ್ಳಿಯಿಂದ ಬಂದಿದಿ ಸಿಟಿ ಜೀವನ ನಿನಗೇನು ಗೊತ್ತು ಎಂದು ನನಗೆ ಹೊಡೆಬಡೆ ಮಾಡುವುದು ಮಾಡಿ ಕಿರುಕುಳ ಕೊಡಲಾರಂಭಿಸಿದ್ದರು. ಆಗ ನಾನು ನನ್ನ ತಂದೆ-ತಾಯಿಗೆ ನನಗೆ ಕಿರುಕುಳ ಕೊಡುತ್ತಿರುವ ವಿಷಯ ಹೇಳಿದಾಗ ನನ್ನ ತಂದೆ ಶಾಂತಪ್ಪ ಮತ್ತು ತಾಯಿ ಅನ್ನಪೂರ್ಣ ಇವರು ನಮ್ಮ ಹಿರಿಯರಾದ 1) ಪ್ರಧಾನಪ್ಪ ತಂದೆ ಲಚಮಣ್ಣ ದೊಡ್ಡಮನಿ ಮತ್ತು 2) ನಾಗಪ್ಪ ತಂದೆ ಮಲ್ಲಪ್ಪ ಅಚಗೇರಿ ಇವರುಗಳಿಗೆ ಕರೆದುಕೊಂಡು ಬಂದು ನನ್ನ ಗಂಡ, ಅತ್ತೆ ಮತ್ತು ನಾದಿನಿಗೆ ಕೂಡಿಸಿಕೊಂಡು ಬುದ್ದಿ ಮಾತು ಹೇಳಿದರು. ಆಗ ಅವರು ನಾವು ಸುಲೋಚನಾಳಿಗೆ ಕಿರುಕುಳ ಕೊಟ್ಟಿದ್ದು ತಪ್ಪಾಗಿರುತ್ತದೆ. ಇನ್ನು ಮುಂದೆ ಅವಳಿಗೆ ಸರಿಯಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳಿ ಆಶ್ವಾಸನೆ ಕೊಟ್ಟು ಕಳುಹಿಸಿದರು. ಅಲ್ಲಿಂದ ಕೆಲವು ದಿನಗಳು ಸರಿಯಾಗಿ ನೋಡಿಕೊಂಡು ನನ್ನ ಗಂಡ, ಅತ್ತೆ ಮತ್ತು ನಾದಿನಿ ನನಗೆ ಪುನ: ಕಿರುಕುಳ ಕೊಟ್ಟು ಹೊಡೆಬಡೆ ಮಾಡುವುದು ಮಾಡಲಾರಂಭಿಸಿ, ಈಗ ಸುಮಾರು 2-3 ತಿಂಗಳ ಹಿಂದೆ ನೀನು ನಮ್ಮ ಮನೆಯಲ್ಲಿ ಇರುವುದು ಬೇಡ ನಿನ್ನ ತವರು ಮನೆಗೆ ಹೋಗು ಭೊಸುಡಿ ರಂಡಿ ಎಂದು ನನಗೆ ಅವಾಚ್ಯ ಬೈದು ಮನೆಯಿಂದ ಹೊರಗಡೆ ಹಾಕಿದಾಗ ನಾನು ಅನಿವಾರ್ಯವಾಗಿ ನನ್ನ ತವರು ಮನೆ ಗಡ್ಡೆಸೂಗೂರು ಗ್ರಾಮಕ್ಕೆ ಬಂದು ನನ್ನ ತಂದೆ-ತಾಯಿ ಮತ್ತು ಹಿರಿಯರಿಗೆ ಹೇಳಿ ಇಲ್ಲಿಯೇ ಇದ್ದೆನು. ದಿನಾಂಕ: 14/06/2020 ರಂದು 12-30 ಪಿಎಮ್ ಸುಮಾರಿಗೆ ನಾನು ಗಡ್ಡೆಸೂಗುರುದ ನನ್ನ ತವರು ಮನೆಯಲ್ಲಿದ್ದಾಗ ನನ್ನ ಗಂಡನಾದ ಮೋಹನಕುಮಾರ ತಂದೆ ಸಾಯಬಣ್ಣ ಚಿಕ್ಕಮೇಟಿ, ಅತ್ತೆಯಾದ ಪಾರ್ವತಿ ಗಂಡ ಸಾಯಬಣ್ಣ ಚಿಕ್ಕಮೇಟಿ ಮತ್ತು ದೀಪಾ ತಂದೆ ಸಾಯಬಣ್ಣ ಚಿಕ್ಕಮೇಟಿ ಈ ಮೂರು ಜನ ಸೇರಿ ನಮ್ಮ ಮನೆಗೆ ಬಂದು ನನಗೆ ಏ ಭೊಸುಡಿ ನೀನು ಇಲ್ಲಿ ಬಂದು ಕುಂತರೆ ನಮಗೆ ಅಡಿಗೆ ಯಾರು ಮಾಡಿ ಹಾಕುತ್ತಾರೆ ರಂಡಿ ಅಂತಾ ಬಾಯಿಗೆ ಬಂದಂಗೆ ಅವಾಚ್ಯ ಬೈಯುತ್ತಿದ್ದಾಗ ನಾನು ಮನೆಯಿಂದ ಹೊರಗಡೆ ಬಂದಾಗ ನನ್ನ ಗಂಡನು ಬಂದು ನನ್ನ ತೆಲೆ ಮೇಲಿನ ಕೂದಲು ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು. ನನ್ನ ಅತ್ತೆ ಮತ್ತು ನಾದಿನಿ ಇಬ್ಬರೂ ಹೊಡೆ ಈ ಸೂಳೆಗೆ ಇವತ್ತು ಖಲಾಸ ಮಾಡೆ ಬಿಡೊಣ ಎಂದು ಅವರು ಕೂಡಾ ಕೈಯಿಂದ ಮೈಕೈಗೆ ಹೊಡೆದು ಜೀವ ಭಯ ಹಾಕಿದರು. ಆಗ ಅಲ್ಲಿಯೇ ಇದ್ದ ಬಾಜು ಮನೆಯ ಗಂಗಮ್ಮ ಗಂಡ ಪ್ರಧಾನಪ್ಪ ದೊಡ್ಡಮನಿ ಮತ್ತು ನನ್ನ ತಂದೆ-ತಾಯಿ ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ನನ್ನ ಗಂಡ, ಅತ್ತೆ ಮತ್ತು ನಾದಿನಿ ಇಂದಲ್ಲ ನಾಳೆ ಸರಿ ಹೋಗಿ ನನಗೆ ಕರೆದುಕೊಂಡು ಹೋಗಬಹುದು ಎಂದು ಕಾಯುತ್ತಾ ಕುಳಿತ್ತಿದ್ದರಿಂದ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನಗೆ ವಿನಾಕಾರಣ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ, ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ನನ್ನ ಗಂಡ ಅತ್ತೆ ಮತ್ತು ನಾದಿನಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 71/2020 ಕಲಂ: 498(ಎ), 504, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 72/2020 ಕಲಂ: 279,304(ಎ) ಐಪಿಸಿ : ಇಂದು ದಿನಾಂಕ: 18/06/2020 ರಂದು ಸಂಜೆ 6-15 ಪಿಎಮ್ ಸುಮಾರಿಗೆ ಮೃತ ಅಬ್ದುಲ್ ಸತ್ತಾರ ತಂದೆ ದಾವಲಸಾಬ ಈತನು ತನ್ನ ಮೋಟರ್ ಸೈಕಲ್ ನಂ. ಕೆಎ 28 ಇಡಬ್ಲ್ಯೂ 5625 ನೇದ್ದರ ಮೇಲೆ ತಮ್ಮೂರಿಂದ ವಡಗೇರಾಕ್ಕೆ ಹೊರಟಿದ್ದು, ಗುಂಡಳ್ಳಿ ಸೀಮೇ ಮಾರೆಮ್ಮ ದೇವಸ್ಥಾನದ ಹತ್ತಿರ ತನ್ನ ಹಿಂದೆ ಯಾರೋ ಅಪರಿಚಿತ ಮುದುಕನಿಗೆ ಕೂಡಿಸಿಕೊಂಡು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಮೋಟರ್ ಸೈಕಲ್ ಚಲಾಯಿಸಿಕೊಂಡು ಬಂದು ಯಾದಗಿರಿ-ಶಹಾಪೂರ ಮೇನ ರೋಡ ಚಟ್ನಳ್ಳಿ ಕ್ರಾಸ ಕೆರೆ ದಂಡೆ ಮೇಲೆ ರಸ್ತೆ ಬದಿಗೆ ಹಾಕಿದ ಕಬ್ಬಿಣದ ಪಟ್ಟಿಗೆ ಮೋಟರ್ ಸೈಕಲನ್ನು ಬಲವಾಗಿ ಡಿಕ್ಕಿಪಡಿಸಿದ ಅಬ್ದುಲ ಸತ್ತಾರನು ಅಲ್ಲಿಂದ ಸಿಡಿದು ಪಕ್ಕದ ಮುಳ್ಳು ಕಂಠಿಯಲ್ಲಿ ಬಿದ್ದು, ಬಲಗಡೆ ತೆಲೆ ಮತ್ತು ಎಡ ಭುಜಕ್ಕೆ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮೋಟರ್ ಸೈಕಲ್ ಹಿಂದೆ ಕುಳಿತ ಅಪರಿಚಿತ ಮುದುಕನಿಗೆ ಅಪಘಾತದಲ್ಲಿ ಬಲ ಭುಜದಿಂದ ಎದೆ ವರೆಗೆ ಭಾರಿ ಹರಿದ ರಕ್ತಗಾಯ ಮತ್ತು ಬಲ ತೋಳಿನ ಎಲುಬು ಮುರಿದು ಭಾರಿ ಗಾಯಗಳಾಗಿ ಜಿಜಿಹೆಚ್ ಯಾದಗಿರಿಯಲ್ಲಿ ಉಪಚಾರ ಪಡೆಯುತ್ತಾ 8-40 ಪಿಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ಸದರಿ ಮೋಟರ್ ಸೈಕಲ್ ಸವಾರ ಮೃತ ಅಬ್ದುಲ್ ಸತ್ತಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 72/2020 ಕಲಂ: 279,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 95/2020 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 18.06.2020 ರಂದು 2.30 ಪಿ.ಎಮ್ ಕ್ಕೆ ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೆನೆಂದರೆ ಇಂದು ದಿನಾಂಕ: 18.06.2020 ರಂದು 12.30 ಗಂಟೆಗೆ ಸುಮಾರಿಗೆ ಠಾಣೆಯಲ್ಲಿದ್ದಾಗ ಕಿರದಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ 1) ಶಿವಲಿಂಗಪ್ಪ ಹೆಚ್ಸಿ 185 2) ಬೀರಪ್ಪ ಪಿಸಿ-195 ರವರನ್ನು ಕರೆದು ಸದರಿ ವಿಷಯ ತಿಳಿಸಿ ಭೀರಪ್ಪ ಪಿಸಿ-195 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 36 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 46 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಸಹ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 12.45 ಗಂಟೆಗೆ ಹೊರಟು 1 ಗಂಟೆಗೆ ಕಿರದಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 1.10 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ರಮೇಶ ತಂದೆ ಗಂಗಾಧರ ವಿಶ್ವಕರ್ಮ ವ|| 48 ಜಾ|| ವಿಶ್ವಕರ್ಮ ಉ|| ಕುಳಿ ಸಾ|| ಕಿರದಳ್ಳಿ ತಾ|| ಸುರಪೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1140/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 1.10 ಗಂಟೆಯಿಂದ 2.10 ಗಂಟೆಯವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 2.30 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು ಸದರ ವರಧಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 4 ಪಿ ಎಮ್ ಕ್ಕೆೆ ಠಾಣೆ ಗುನ್ನೆ ನಂ 95/2020 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 96/2020 ಕಲಂ:143.147.148.323.324.326.504.506 ಸಂಗಡ 149 ಐ.ಪಿ.ಸಿ : ಇಂದು ದಿನಾಂಕ 18.06.2020 ರಂದು 5.30 ಪಿಎಮ್ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮೈಲಾರಿ ತಂದೆ ಹುಲಿಗೆಪ್ಪ ಮಾದರ ವ|| 26 ವರ್ಷ ಉ|| ಕೂಲಿ ಜಾ|| ಮಾದರ ಸಾ|| ಕಾಚಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾಧಿ ಅರ್ಜಿ ಸಾರಾಂಶವೇನೆಂದರೆ, ಇಂದು ದಿನಾಂಕ: 18/06/2020 ರಂದು ಬೆಳಿಗ್ಗೆ ನಮ್ಮ ಹುಡುಗರು ಹಾಗೂ ಹೊಲೆಯ ಜನಾಂಗದ ಹುಡುಗರು ವಿನಾಕಾರಣವಾಗಿ ತಕರಾರು ಮಾಡಿಕೊಂಡಿದ್ದು, ಸದರಿ ಹುಡುಗರಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 18/06/2020 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ನಾನು ನನ್ನ ತಾಯಿ ರೇಣುಕಮ್ಮ ಗಂಡ ಹುಲಿಗೆಪ್ಪ ಮಾದರ ಸಂಬಂದಿ ಪರಶುರಾಮ ತಂದೆ ಬಸಪ್ಪ ಮಾದರ ಎಲ್ಲರು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಮಾತಾಡುತ್ತಾ ಕುಳಿತಾಗ ಏಕಾಏಕಿ ಹೊಲೆಯ ಜನಾಂಗದವರಾದ 1) ಕಾಶಪ್ಪ ತಂದೆ ಸೂಗಪ್ಪ ಬಡಿಗೇರ ಹಾಗೂ ಸಂಗಡ ಇನ್ನೂ 15 ಜನರು ಸಾ|| ಎಲ್ಲರೂ ಕಾಚಾಪೂರ ಈ ಎಲ್ಲಾ ಜನರು ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದವರೇ ಏನಲೆ ಮಾದಿಗ ಸೂಳೆ ಮಕ್ಕಳೆ ನಮ್ಮ ಏರಿಯಾದಲ್ಲಿ ಬರಲು ನಿಮ್ಮದು ಎಷ್ಟು ಸೊಕ್ಕು ಸೂಳೆ ಮಕ್ಕಳೆ ಅಂತ ಬೈಯುತ್ತಿದ್ದಾಗ ನಮ್ಮ ತಾಯಿ ರೇಣುಕಮ್ಮ ಹಾಗೂ ಸಂಬಂದಿ ಪರಶುರಾಮ ಇವರು ವಿನಾಕಾರಣ ಏಕೆ ಬೈಯುತ್ತೀರಿ ಅಂತ ಅಂದಾಗ ಎಲ್ಲಾ ಜನರು ಬಿಡಬ್ಯಾಡರಿ ಈ ಸೂಳೆ ಮಕ್ಕಳಿಗೆ ಅಂತ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಕಾಶಪ್ಪ ಬಡಿಗೇರ ಈತನು ತನ್ನ ಕೈಯಲ್ಲಿದ್ದ ಒಡಗಟ್ಟಿಗೆ ತೆಗೆದುಕೊಂಡು ನನ್ನ ತಾಯಿ ರೇಣುಕಮ್ಮ ಇವಳ ಬಲಗೈ ಮಣಿಕಟ್ಟಿನ ಹತ್ತಿರ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಕಾರಣ ನನ್ನ ತಾಯಿಗೆ ಬಲಗೈ ಮಣಿಕಟ್ಟಿನ ಹತ್ತಿರ ಕೈ ಮುರಿದಂತಾಗಿರುತ್ತದೆ ಅಲ್ಲದೆ ಪರಶುರಾಮ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ತಾಯಿಯ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ಸಂಬಂದಿ ಪರಶುರಾಮ ತಂದೆ ಬಸಪ್ಪ ಮಾದರ ಈತನಿಗೆ ಗುತ್ತಪ್ಪ ಬಡಿಗೇರ ಈತನು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಹಾಗೂ ಬೆನ್ನಿಗೆ ಹೊಡೆದು ಗುಪ್ತಗಾಯಪಡಿಸಿದನು ಅಲ್ಲದೆ ಅದೇ ಬಡಿಗೆಯಿಂದ ನನಗೂ ಸಹ ಬಲಗೈ ಹಸ್ತಕ್ಕೆ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದನು. ನಂತರ ಎಲ್ಲಾ ಜನರು ನನ್ನ ತಾಯಿ ರೇಣುಕಮ್ಮ ಇವಳಿಗೆ ಈ ಸೂಳೆಯದು ಬಾಳ ಆಗಿದೆ ಅಂತ ನೆಲಕ್ಕೆ ಕೆಡವಿ ಕೂದಲು ಹಾಗೂ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ಅಲ್ಲಿಯೇ ಇದ್ದ ಸೋಮಪ್ಪ ತಂದೆ ನಂದಪ್ಪ ಹಾಗೂ ಸಿದ್ದಪ್ಪ ತಂದೆ ಬಸಪ್ಪ ಮಾದರ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರು ಹೊಡೆಯುವದನ್ನು ಬಿಟ್ಟು ಮಾದಿಗ ಸೂಳೆ ಮಕ್ಕಳೆ ಇನ್ನು ಮುಂದೆ ನಮ್ಮ ಕೇರಿಯಲ್ಲಿ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 96/2020 ಕಲಂ 143,147,148,323,324,326,354, 504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 167/2020. ಕಲಂ. 279.429. ಐ.ಪಿ.ಸಿ. & 187 ಐಎಂವಿ ಯಾಕ್ಟ : ಇಂದು ದಿನಾಂಕ: 18/06/2020 ರಂದು ಬೆಳಿಗ್ಗೆ 10-00 ಗಂಟೆಗೆ ಪಿಯರ್ಾದಿ ಶ್ರೀ ನಿಂಗಪ್ಪ ತಂದೆ ಈಶ್ವರಪ್ಪ ಕರಾಟೆ ವ|| 50 ಜಾ|| ಹೊಲೇಯ ಉ|| ಒಕ್ಕಲುತನ ಸಾ|| ಹತ್ತಿಗುಡೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶ ಸಾರಾಂಶವೆನೆಂದರೆ, ದಿನಾಂಕ 16/06/2020 ರಂದು ಬೆಳಿಗ್ಗೆ ಸುಮಾರಿಗೆ ನಮ್ಮ ಎಮ್ಮೆ ಮೇಯಿದು ಬರಲು ನಾನು ಖುಲ್ಲಾ ಹೋಡೆದಿರುತ್ತೆನೆ. ನಂತರ ನನ್ನ ಎಮ್ಮೆಯು ಸಾಯಂಕಾಲ ಸುಮಾರಿಗೆ ಮನೆಗೆ ಬಂದಿರುವದಿಲ್ಲಾ ನಾನು ಎಮ್ಮೆ ಮನೆಗೆ ಬರದೆ ಇದ್ದುದ್ದನ್ನು ನೋಡಿ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಬೋಮ್ಮನಳ್ಳಿ ರಸ್ತೆಯಕಡೆಗೆ ಹೈಯಾಳ ರಸ್ತೆಯ ಕಡೆಗೆ ನೋಡಿ ಸಿಗದೆ ಇದ್ದುದ್ದರಿಂದ ಮನೆಗೆ ಬಂದೆನು. ಬೆಳಿಗ್ಗೆಯಾದರು ನನ್ನ ಎಮ್ಮಿ ಮನೆಗೆ ಬರದೆ ಇದ್ದುದ್ದರಿಂದ ಮತ್ತೆ ಬೋಮ್ಮನಳ್ಳಿ ರಸ್ತೆಯ ಕಡೆಗೆ ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ಚನ್ನಬಸವ ತಂದೆ ನಿಂಗಪ್ಪ ಕರಾಟೆ ಇಬ್ಬರು ಹುಡುಕುತ್ತ ಹೋದಾಗ ಸುರಪೂರ-ಯಾದಗಿರಿ ಮುಖ್ಯ ರಸ್ತೆ ಮೇಲೆ ಕಂಚಗಾರ ಹಳ್ಳದ ಬ್ರೀಜ್ ಇನ್ನು ಅಂದಾಜು 150 ಮೀಟರ್ ಮುಂದೆ ಬೋಮ್ಮನಳ್ಳಿ ಕಡೆಗೆ ಇರುವಾಗ ಹತ್ತಿಗುಡೂರ ಸಿಮಾಂತರದ ಗೋವಿಂದಪ್ಪ ತಂದೆ ತಿರುಪತಿ ಇವರ ಹೊಲದ ರಸ್ತೆಯ ಮೇಲೆ ಪಕ್ಕದಲ್ಲಿ ಎಮ್ಮೆ ಬಿದ್ದಿದ್ದನ್ನು ನೋಡಲಾಗಿ ಸದರಿ ಎಮ್ಮೆಯು ನಮ್ಮದೆ ಇದ್ದು ನಮ್ಮ ಎಮ್ಮೆಗೆ ನೋಡಲಾಗಿ ನನ್ನ ಎಮ್ಮೆಯ ಕುಂಡಿಗೆ, ಬಾಲದ ಹತ್ತಿರ, ಡುಬ್ಬಕ್ಕೆ, ಚೆಪ್ಪಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮೃತಪಟ್ಟಿದ್ದು ಇರುತ್ತದೆ. ನನ್ನ ಎಮ್ಮಿಗೆ ದಿನಾಂಕ 16/06/2020 ರಂದು ಸಾಯಂಕಾಲ 6-00 ಗಂಟೆಗೆಯಿಂದ ದಿನಾಂಕ 17/06/2020 ರಂದು ಬೆಳಿಗ್ಗೆ 6-00 ಗಂಟೆಯ ಅವದಿಯಲ್ಲಿ ಯಾವದೊ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಎಮ್ಮೆಗೆ ಅಪಘಾತ ಮಾಡಿ ವಾಹನ ನಿಲ್ಲಿಸದೆ ಹೋಗಿದ್ದು ಇರುತ್ತದೆ. ಸದರಿ ನನ್ನ ಎಮ್ಮೆಗೆ ಅಪಘಾತ ಮಾಡಿದ ವಾಹನ ಚಾಲಕನ ಹೇಸರು ಮತ್ತು ವಾಹನ ನಂಬರ ಗೊತ್ತಾಗಿರುವದಿಲ್ಲಾ. ಸದರಿ ನನ್ನ ಎಮ್ಮಿಯು ಸುಮಾರು 6 ವರ್ಷಗಳು ಇದ್ದು ಅಂದಾಜು ಕಿಮ್ಮತ್ತು 60000=00 ರೂಪಾಯಿಗಳು ಇರುತ್ತದೆ. ನಾನು ನಮ್ಮ ಹಿರಿಯರೊಂದಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರುಸಲ್ಲಿಸಿದ್ದು ಇರುತ್ತದೆ. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 167/2020 ಕಲಂ: 279,429, ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 80/2020 ಕಲಂ 279, 338 ಐ.ಪಿ.ಸಿ : ದಿನಾಂಕ: 17/06/2020 ರಂದು 9 ಎಎಮ್ ಸುಮಾರಿಗೆ ಗಾಯಾಳು ಅನುಸುಬಾಯಿ ಇವರು ಆರೋಪಿತನಾದ ಮಲಕಪ್ಪ ಈತನ ಮೋಟರ್ ಸೈಕಲ್ ನಂ: ಕೆಎ: 33, ಯು:4055 ನೇದ್ದರ ಮೇಲೆ ಹಿಂದೆ ಕುಳಿತು ನೆಲೋಗಿಯಿಂದ ಭೀ.ಗುಡಿ ಕಡೆಗೆ ಬರುತ್ತಿದ್ದಾಗ ಸಾದ್ಯಾಪೂರ ಸೀಮಾಂತರ ಕರ್ವ ಹತ್ತಿರ ಆರೋಪಿತನು ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ಒಮ್ಮೆಲೆ ಸ್ಕಿಡ್ ಮಾಡಿ ಅಪಘಾತಪಡಿಸಿದ್ದು ಆಗ ಹಿಂದೆ ಇದ್ದ ಫಿಯರ್ಾದಿ ಹಾಗು ಆತನ ಅಣ್ಣ ಶ್ರೀಶೈಲ ಇಬ್ಬರು ಕೂಡಿ ಎಬ್ಬಿಸಿ ನೋಡಲಾಗಿ ಫಿಯರ್ಾದಿಯ ತಾಯಿ ಅನುಸುಬಾಯಿ ಇವಳಿಗೆ ಕೈಗೆ ತರಚಿದ ಗಾಯ ಹಾಗು ತಲೆಗೆ ಭಾರಿ ಒಳಪೆಟ್ಟು ಆದ ಬಗ್ಗೆ
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 153/2020 ಕಲಂ 417, 419, ಐ.ಪಿ.ಸಿ ಮತ್ತು 6 ಸಂಗಡ 19 ಕೆ.ಪಿ.ಎಮ್.ಇ ಕಾಯ್ದೆ : ಇಂದು ದಿನಾಂಕ:18/06/2020 ರಂದು 5:30 ಪಿ.ಎಂ. ಕ್ಕೆ ಡಾ|| ರಾಜಾ ವೆಂಕಪ್ಪನಾಯಕ ತಾಲೂಕಾ ಆರೋಗ್ಯ ಅಧಿಕಾರಿಗಳು ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿಯ ಸಾರಾಂಶವೆನೆಂದರೆ ಇಂದು ದಿನಾಂಕಃ 18/06/2020 ರಂದು 5-30 ಪಿ.ಎಮ್ ಕ್ಕೆ ಡಾ|| ರಾಜಾ ವೆಂಕಪ್ಪನಾಯಕ ತಾಲೂಕಾ ಆರೋಗ್ಯ ಅಧಿಕಾರಿಗಳು ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನಾನು ನಮ್ಮ ಕಾಯರ್ಾಲಯದಲ್ಲಿದ್ದಾಗ ಕನ್ನಳ್ಳಿ ಗ್ರಾಮದಲ್ಲಿ ಕೆ.ಪಿ.ಎಂ.ಇ ನೊಂದಾವಣೆ ಇಲ್ಲದೆ ನಕಲಿ ವೈದ್ಯರು ಆಸ್ಪತ್ರೆ ತಗೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ನಮ್ಮ ಕಾಯರ್ಾಲಯದ ಸಿಬ್ಬಂದಿಯವರಾದ 1) ಶ್ರೀ ವಿಶ್ವನಾಥ ನಾಯಕ ಬಿ.ಪಿ.ಎಮ್, 2) ಶ್ರೀ ವಿಕಾಸ್ ಡಾಟಾ ಆಪರೇಟರ 3) ಶ್ರೀ ಮಡಿವಾಳಪ್ಪ ಗ್ರೂಪ್ ಡಿ ಸಿಬ್ಬಂದಿ, ಹಾಗು ನಮ್ಮ ಜೀಪ ಚಾಲಕನಾದ 4) ಶ್ರೀ ಶರಣು ಮತ್ತು ಕನ್ನಳ್ಳಿ ಗ್ರಾಮದ ಬೀಟ್ ಪೊಲೀಸರಾದ 5) ಶ್ರೀ ದಯಾನಂದ ಪಿ.ಸಿ 337 ಎಲ್ಲರಿಗೆ ನಮ್ಮ ಕಾಯರ್ಾಲಯದಲ್ಲಿ ವಿಷಯ ತಿಳಿಸಿ ಇವರ ಜೊತೆಗೆ 2-45 ಪಿ.ಎಮ್ ಕ್ಕೆ ಸುರಪೂರದಿಂದ ನಮ್ಮ ಕಾಯರ್ಾಲಯದ ಜೀಪಿನಲ್ಲಿ ಹೊರಟು 3-30 ಪಿ.ಎಮ್ ಕ್ಕೆ ಕನ್ನಳ್ಳಿ ಗ್ರಾಮಕ್ಕೆ ತಲುಪಿ ನಕಲಿ ವೈದ್ಯರಾದ ಮಹಾರಾಯ ತಂದೆ ಗುರಪ್ಪ ಹಿರೆಕುರುಬರ ಸಾ: ಕನ್ನಳ್ಳಿ ಇವರು ತಮ್ಮ ಕ್ಲಿನಿಕ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವದನ್ನು ಗಮನಿಸಿ ಸದರಿ ಮಹಾರಾಯ ಇವರಿಗೆ ಕೆ.ಪಿ.ಎಂ.ಇ ಅಡಿಯಲ್ಲಿ ಕ್ಲಿನಿಕ್ ನಡೆಸಲು ನೊಂದಣಿ ಮಾಡಿಸಿರುವ ಬಗ್ಗೆ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದಾಗ ಅವರು ತಮ್ಮ ಹತ್ತಿರ ಯಾವುದೇ ದಾಖಲೆಗಳು ಇರುವದಿಲ್ಲ. ನಕಲಿಯಾಗಿ ವೈದ್ಯ ವೃತ್ತಿ ಮಾಡುತ್ತಿರುವ ಬಗ್ಗೆ ತಿಳಿಸಿದನು. ಆದ್ದರಿಂದ ಸದರಿಯವರ ಕ್ಲಿನಿಕ್ ಶಿಲ್ ಬಂದ್ ಮಾಡಲಾಯಿತು. ನಂತರ 4-10 ಗಂಟೆಯ ಸುಮಾರಿಗೆ ಇನ್ನೊಬ್ಬ ನಕಲಿ ವೈದ್ಯರಾದ ದೇವಿಂದ್ರಕುಮಾರ ತಂದೆ ಮಾನಪ್ಪ ಗೋಗಿ ಸಾ: ಪೇಠ ಅಮ್ಮಾಪೂರ ಇವರು ಕನ್ನಳ್ಳಿ ಗ್ರಾಮದಲ್ಲಿ ನಾಗಣ್ಣ ಸಾಹುಕಾರ ಮನೆಯ ಹತ್ತಿರ ನಡೆಸುತ್ತಿರುವ ಕ್ಲಿನೀಕ್ ಹತ್ತಿರ ಹೋದಾಗ ಅವರು ಸಹ ತಮ್ಮ ಕ್ಲಿನಿಕ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವದು ಕಂಡು ಬಂದಿತು. ಆಗ ಸದರಿಯವರಿಗೆ ಖಾಸಗಿ ಕ್ಲಿನಿಕ್ ನಡೆಸಲು ಕೆ.ಪಿ.ಎಂ.ಇ ನೊಂದಣಿ ಮಾಡಿಸಿರುವ ಬಗ್ಗೆ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದಾಗ ಅವರು ಸಹ ತಮ್ಮ ಹತ್ತಿರ ಯಾವುದೇ ದಾಖಲೆಗಳು ಇರುವದಿಲ್ಲ. ನಕಲಿಯಾಗಿ ವೈದ್ಯ ವೃತ್ತಿ ಮಾಡುತ್ತಿರುವ ಬಗ್ಗೆ ತಿಳಿಸಿರುತ್ತಾರೆ. ಆದ್ದರಿಂದ ದೇವಿಂದ್ರಕುಮಾರ ಇವರ ಕ್ಲಿನಿಕ್ ಸಹ ಶಿಲ್ ಬಂದ್ ಮಾಡಲಾಯಿತು. ನಂತರ ಗ್ರಾಮದಲ್ಲಿ ವಾಸುದೇವ ಎಂಬುವವರು ಸಹ ಕೆ.ಪಿ.ಎಂ.ಇ ನೊಂದಣಿ ಇಲ್ಲದೇ ನಕಲಿ ವೈದ್ಯರಾಗಿ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಅವರ ಕ್ಲಿನಿಕಗೆ ಹೋದಾಗ ಸದರಿಯವರು ಇರಲಿಲ್ಲ. ಕಾರಣ ಆತನ ಕ್ಲಿನಿಕ್ ಶಿಲ್ ಬಂದ ಮಾಡಲಾಯಿತು. ಆದ್ದರಿಂದ ಸದರಿಯವರು ವೈದ್ಯಕೀಯ ಪದವಿಯನ್ನು ಪಡೆಯದೇ ಜನರಿಗೆ ವೈದ್ಯರೆಂದು ಹೇಳಿ ವಂಚಿಸಿ ನಕಲಿ ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವದರಿಂದ ಮಹಾರಾಯ ಹಾಗು ದೇವಿಂದ್ರಕುಮಾರ ಇವರನ್ನು ಕರೆದುಕೊಂಡು 5-30 ಪಿ.ಎಮ್ ಕ್ಕೆ ಠಾಣೆಗೆ ಬಂದು ಒಪ್ಪಿಸಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 153/2020 ಕಲಂ. 417, 419 ಐಪಿಸಿ ಮತ್ತು ಕಲಂ. 6 ಸಂಗಡ 19 ಕೆ.ಪಿ.ಎಮ್.ಇ ಆಕ್ಟ್ 2007 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
Hello There!If you like this article Share with your friend using