ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/06/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 73/2020 143, 147, 148, 341, 342, 323, 324, 354 302, 504, 506, 114 ಸಂ: 149 ಐಪಿಸಿ : ಇಂದು ದಿನಾಂಕ: 16/06/2020 ರಂದು ಸರಕಾರಿ ಆಸ್ಪತ್ರೆ ಶಹಾಪೂರ ದಿಂದ ಡೆತ್ ಎಂ.ಎಲ್.ಸಿ ಮತ್ತು ಹರ್ಟ ಎಂ.ಎಲ್.ಸಿ ಮಾಹಿತಿ ಮೇರೆಗೆ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳುಗಳ ಜೋತೆಯಲ್ಲಿ ಇದ್ದ, ಕು. ಜಗದೇವಿ ತಂದೆ ಶರಣಪ್ಪ ಹೂಗಾರ ವಯಾ:19 ವರ್ಷ ಉ: ವಿದ್ಯಾಥರ್ಿನಿ ಜಾ: ಹೂಗಾರ ಸಾ: ಕರಕಳ್ಳಿ ತಾ: ಶಹಾಪೂರ ಜಿ: ಯಾದಗಿರಿ. ಇವಳಿಗೆ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆಯ ಸಾರಂಶ ಏನಂದರೆ, ನಮ್ಮ ತಂದೆಯವರ ಅಣ್ಣತಮ್ಮಂದಿರ ಮಕ್ಕಳಾದ 1) ಹಣಮಂತ್ರಾಯ ತಂದೆ ಮಲ್ಲಣ್ಣ ಹೂಗಾರ ವ:22 ವರ್ಷ, 2) ದೇವಪ್ಪ ತಂದೆ ಭೀಮಣ್ಣ ಹೂಗಾರ ವ:32 ವರ್ಷ, 3) ಸಂತೋಷ ತಂದೆ ಮಲ್ಲಣ್ಣ ಹೂಗಾರ ವ:21 ವರ್ಷ, 4) ಭೀಮಬಾಯಿ ಗಂಡ ಈರಪ್ಪ ಹೂಗಾರ ವ:28 ವರ್ಷ, 5) ಲಕ್ಷ್ಮೀಬಾಯಿ ಗಂಡ ಮಲ್ಲಣ್ಣ ಹೂಗಾರ ವ: 52 ವರ್ಷ, 6) ಸಂಗಣ್ಣ ತಂದೆ ಚಂದಣ್ಣ ಹೂಗಾರ ವಯಾ:35 ವರ್ಷ, 7) ದೇವಮ್ಮ ಗಂಡ ಪ್ರಭು ಹೂಗಾರ ವ: 32 ವರ್ಷ, 8) ಈಶಮ್ಮ ಗಂಡ ಮಲ್ಲಪ್ಪ ಹೂಗಾರ ವ: 27 ವರ್ಷ,9) ಸೀತಮ್ಮ ಗಂಡ ಬಸವರಾಜ ಗೂಗಾರ ವಯಾ:34 ವರ್ಷ, 10) ಮಾಣಿಕಮ್ಮ ಗಂಡ ಮುದಕಪ್ಪ ಹೂಗಾರ ವ:35 ವರ್ಷ, 11) ವಿಜ್ಜಮ್ಮ @ ವಿಜಯಲಕ್ಷ್ಮೀ ಗಂಡ ಬಸವರಾಜ ಹೂಗಾರ ವ:42 ವರ್ಷ, 12) ನಾಗಮ್ಮ ತಂದೆ ಮಲ್ಲಣ್ಣ ಹೂಗಾರ 13) ಭೀಮಬಾಯಿ ಗಂಡ ಶೇಖಪ್ಪ ಹುಗಾರ ವ: 45 ವರ್ಷ, 14) ಸುದಾ ತಂದೆ ಈರಣ್ಣ ವಯಾ;18 ವರ್ಷ 15) 6) ಸಿದ್ದಮ್ಮ ಗಂಡ ಬಸವರಾಜ ಹೂಗಾರ ವ:30 ವರ್ಷ, 16) ಕಾಶಿಬಾಯಿ ಗಂಡ ಚಂದಣ್ಣ ಹೂಗಾರ ವ: 55 ವರ್ಷ, 17) ಶರಣಪ್ಪ ತಂದೆ ಬಸ್ಸಣ್ಣ ಹೂಗಾರ ಎಲ್ಲರೂ ಜಾ: ಹೂಗಾರ ಸಾ: ಕರಕಳ್ಳ ತಾ: ಶಹಾಪೂರ ಇದ್ದು, ಇವರೆಲ್ಲರೂ ನಮ್ಮ ತಂದೆಯವರ ಹೆಸರಿನಲ್ಲಿ ಇರುವ ಹೊಲ ಸರ್ವ ನಂ: 105, ನೇದ್ದರ 12 ಎಕರೆ ಜಮೀನು ಮತ್ತು ಕರಕಳ್ಳಿ ಸೀಮೆಯ ಸವರ್ೇ ನಂ: 06 ರಲ್ಲಿನ 04 ಎಕರೆ ಜಮೀನಿನ ಹಂಚಿಕೆಯ ವಿಷಯದಲ್ಲಿ ಜಗಳಾ ತಗೆದು, ತಮಗೆ ಆಸ್ತಿ ಕೊಟ್ಟಿಲ್ಲ ಅಂತಾ ಮಾನ್ಯ ಶಹಾಪೂರ ನ್ಯಾಯಾಲಯದಲ್ಲಿ ದಾವೆಗಳನ್ನು ಹಾಕಿದ್ದರು, ಮತ್ತು ನಮ್ಮ ಸಂಗಡ ಆಸ್ತಿಯ ವಿಷಯದಲ್ಲಿ ಜಗಳಾ ತಗೆಯುತ್ತಿದ್ದರು, ಸದರಿ ಆಸ್ತಿಯ ವಿಷಯದಲ್ಲಿ ಇವರೆಲ್ಲರು ನಮ್ಮೊಂದಿಗೆ ದ್ವೇಷ ಬೆಳೆಸಿಕೊಂಡು ಬಂದಿರುತ್ತಾರೆ.
ಹೀಗಿದ್ದು ಇಂದು ದಿನಾಂಕ: 16/06/2020 ರಂದು ನಮ್ಮ ತಂದೆಯವರು ಬೆಳಿಗ್ಗೆ 06.45 ಎಎಂ ಕ್ಕೆ ಪ್ರತಿ ದಿನದಂತೆ ಸ್ನಾನ ಮಾಡಿದ ನಂತರ ಹನುಮಾನ ದೇವರ ಗುಡಿಗೆ ಹೊಗಿ ಬರುತ್ತೇನೆ ಅಂತಾ ಹೋಗಿದ್ದನು. ಹಣಮಂತ್ರಾಯ ತಂದೆ ಮಲ್ಲಣ್ಣ ಹೂಗಾರ ಈತನು ನಮ್ಮ ತಂದೆಯವರು ಒಬ್ಬರೆ ದೇವರ ಗುಡಿಗೆ ಬಂದಿರುವದನ್ನು ನೋಡಿ, ನಮ್ಮ ತಂದೆಯಾದ ಶರಣಪ್ಪ ಈತನಿಗೆ ಕೊಲೆ ಮಾಡಿ ಮುಗಿಸಬೇಕೆಂದು ಮೇಲಿನವರೆಲ್ಲರಿಗೆ ಕರೆದುಕೊಂಡು ಅಂದಾಜು 07.00 ಎಎಂ ಸುಮಾರಿಗೆ ಗುಡಿಯ ಹತ್ತಿರ ಬಂದು, ನಮ್ಮ ತಂದೆಯಾದ ಶರಣಪ್ಪ ತಂದೆ ಹಣಮಂತ್ರಾಯ ಹೂಗಾರ ವಯಾ: 65 ವರ್ಷ ಇವರಿಗೆ ಎಲ್ಲರೂ ಕೂಡಿ ಕೊಲೆ ಮಾಡಬೇಕೆಂದು ಒಂದೆ ಉದ್ದೇಶದಿಂದ ನಮ್ಮ ತಂದೆಗೆ ತಡೆದು ಮುತ್ತಿಗೆ ಹಾಕಿದಾಗ ನಮ್ಮ ತಂದೆಯವರು ಜಗದೇವಿ ನನಗೆ ಕೊಲ್ಲುತಾರ ಪೋನ ತೆಗೆದುಕೊಂಡು ಬಾ ಅಂತಾ ಜೀರ ತೋಡಗಿದ, ನಮ್ಮ ತಂದೆ ಚಿರಾಡುವದನ್ನು ಕೇಳಿ ಏನಾಯಿತು ಅಂತಾ ನಾನು, ನಮ್ಮ ತಾಯಿ ಸೂಗಮ್ಮ ಗಂಡ ಶರಣಪ್ಪ, ನಮ್ಮ ತಮ್ಮನಾದ ಜಗದೀಶ, ನಮ್ಮ ಅಕ್ಕ ಪದ್ಮಾವತಿ ಗಂಡ ನಿಂಗಣ್ಣ ಎಲ್ಲರೂ ಕೂಡಿ ಓಡಿ ಹೊಗಿ ನೋಡುವಷ್ಟರಲ್ಲಿ, ಮೇಲಿನ ಎಲ್ಲರೂ ಕೂಡಿ ನಮ್ಮ ತಂದೆಯವರಿಗೆ ಹೊಡೆಯತೊಡಗಿದರು, ಹಣಮಂತ್ರಾಯ ತಂದೆ ಮಲ್ಲಣ್ಣ ಹೂಗಾರ ಈತನು ಒಂದು ಹಗ್ಗದಿಂದ ನಮ್ಮ ತಂದೆಯ ಬೆನ್ನಿಗೆ ಹೊಡೆಯುತ್ತಿದ್ದನು. ಆಗ ಸಂತೋಷ ತಂದೆ ಮಲ್ಲಣ್ಣ ಈತನು ಸೂಳೆ ಮಗನೆ ನಮಗೆ ಹೊಲ ಕೊಡುವದಿಲ್ಲಾ ಅಂತಾ ಅವಾಚ್ಯವಾಗಿ ಬೈಯುತ್ತಾ ಚಪ್ಪಲಿಯಿಂದ ನಮ್ಮ ತಂದೆ ಶರಣಪ್ಪನ ಕೈಗೆ ಮತ್ತು ಮುಖಕ್ಕೆ ಹೊಡೆಯುತ್ತಿದ್ದನು. ಆಗ ಸಂಗಪ್ಪ ತಂದೆ ಚಂದಪ್ಪ ಹೂಗಾರ ಮತ್ತು ಲಕ್ಷ್ಮೀಬಾಯಿ ಗಂಡ ಮಲ್ಲಣ್ಣ ಹೂಗಾರ ಇವರು ನಮ್ಮ ತಂದೆಗೆ ಎಲೆ ಶಾಣ್ಯಾ ಇವತ್ತು ನಿನಗೆ ಬಿಡಲ್ಲ ರಂಡಿ ಮಗನೆ ಅಂತಾ ಬೈಯುತ್ತಾ ಹೋಡಿರಿ ಖಲಾಸ್ ಮಾಡರ್ರಿ ಇವತ್ತ ಸಿಕ್ಕಂಗ ಇನ್ನೊಮ್ಮೆ ಸಿಗಲ್ಲ ಈ ಮಗ, ಇವತ್ತೆ ಮ್ಯಾಲ ಕಳಸರಿ ಅಂತಾ ಹೇಳುತ್ತಿದ್ದರು, ಆಗ ದೇವಪ್ಪ ತಂದೆ ಭೀಮಣ್ಣ ಹೂಗಾರ ಈತನು ಗುಡಿಯಲ್ಲಿನ ಒಂದು ಬಕೀಟ ತಗೆದುಕೊಂಡು ಬಂದು ನಮ್ಮ ತಂದೆಯವರಿಗೆ ಕೈಗಳಿಗೆ ಕಾಲಿಗೆ ಹೊಡೆದಿರುತ್ತಾನೆ. ಭೀಮಬಾಯಿ ಗಂಡ ಈರಪ್ಪ ಹೂಗಾರ, ಸೀತಮ್ಮ ಗಂಡ ಬಸವರಾಜ ಹೂಗಾರ ಮತ್ತು ಈಶಮ್ಮ ಗಂಡ ಮಲ್ಲಪ್ಪ ಹೂಗಾರ ಇವರುಗಳು ಚಪ್ಪಲಿಯಿಂದ ಮತ್ತು ಕೈಯಿಂದ ನಮ್ಮ ತಂದೆಗೆ ಹೊಡದಿರುತ್ತಾರೆ.
ಆಗ ನಮ್ಮ ತಾಯಿ ಸೂಗಮ್ಮ ಮತ್ತು ನಮ್ಮ ತಮ್ಮ ಜಗದೀಶ ಮತ್ತು ನಮ್ಮ ಅಕ್ಕ ಪದ್ಮಾವತಿ ಇವರುಗಳು ಬಿಡಿಸಿಕೊಳ್ಳಲು ಹೋದಾಗ, ಭೀಮಬಾಯಿ ಗಂಡ ಶೇಖಪ್ಪ, ಶರಣಪ್ಪ ತಂದೆ ಬಸ್ಸಣ್ಣ, ಇವರುಗಳು ನಮ್ಮ ತಾಯಿ ಸೂಗಮ್ಮ ಇವಳಿಗೆ ಚಪ್ಪಲಿಯಿಂದ ಎದಗೆ ಮತ್ತು ಬೆನ್ನಿಗೆ ಹೊಡೆದು ಗುಪ್ತ ಪೆಟ್ಟು ಮಾಡಿದರು, ವಿಜ್ಜಮ್ಮ ಗಂಡ ಬಸವರಾಜ ಹೂಗಾರ ಕಾಶಿಬಾಯಿ ಗಂಡ ಚಂದಣ್ಣ ಹೂಗಾರ ಮತ್ತು ಸುದಾ ತಂದೆ ಶೇಖಪ್ಪ ಇವರುಗಳು ನಮ್ಮ ತಮ್ಮ ಜಗದಿಶ ಈತನಿಗೆ ಕೈಯಿಂದ ಮತ್ತು ಚಪ್ಪಲಿಯಿಂದ ಬೆನ್ನಿಗೆ ಮುಖಕ್ಕೆ ಮತ್ತು ಕೈಗಳಿಗೆ ಹೊಡೆದಿದ್ದು, ದೇವಪ್ಪ ತಂದೆ ಭೀಮಣ್ಣ ಈತನು ನಮ್ಮ ತಮ್ಮನಿಗೆ ಕೆಳಗೆ ಕೆಡವಿ ಹೊಟ್ಟೆ ಮೇಲೆ ಎದೆ ಮೇಲೆ ತುಳಿದಿರುತ್ತಾನೆ. -ದೇವಮ್ಮ ಗಂಡ ಪ್ರಭು ಹೂಗಾರ ಇವಳು ನಮ್ಮ ಅಕ್ಕ ಪದ್ಮಾವತಿ ಇವಳಿಗೆ ಚಪ್ಪಲಿಯಿಂದ ಬೆನ್ನಿಗೆ ಕೈಗಳಿಗೆ ಮತ್ತು ಮುಖಕ್ಕೆ ಹೊಡೆದು ಮುಖಕ್ಕೆ ರಕ್ತಗಾಯ ಮಾಡಿರುತ್ತಾರೆ. -ಸೀತಮ್ಮ ಗಂಡ ಬಸವರಾಜ ಹೂಗಾರ ಮತ್ತು ವಿಜ್ಜಮ್ಮ ಗಂಡ ಬಸವರಾಜ ಇವರುಗಳು ನಮ್ಮ ಅಕ್ಕ ಪದ್ಮಾವತಿ ಇವಳಿಗೆ ಕೈಯಿಂದ ಹೊಡೆದು ಕಾಲಿನಿಂದ ಪದ್ಮಾವತಿ ಇವಳ ಕಾಲಿಗೆ ಒದ್ದಿರುತ್ತಾರೆ. ಆಗ ನಾನು ಬಿಡಿಸಿಕೊಳ್ಳುತ್ತಿದ್ದಾಗ ಭೀಮಬಾಯಿ ಗಂಡ ಶೇಖಪ್ಪ ಇವಳು ನನಗೆ ದೂರ ತಳ್ಳಿ ನಮ್ಮ ತಂದೆಗೆ ಒದ್ದಿರುತ್ತಾಳೆ, ಅಷ್ಟರಲ್ಲಿ ಮೇಲಿನವರೆಲ್ಲರೂ ಕೂಡಿ ನಮ್ಮ ತಂದೆಗೆ ಕೆಳಗೆ ಕೆಡವಿ ಎಲ್ಲರು ಮನಸ್ಸಿಗೆ ಬಂದಂತೆ ಖಲಾಸ ಮಾಡರ್ರಿ ಈ ಸೂಳೆ ಮಗನಿಗೆ ಅಂತಾ ಅನ್ನುತ್ತಾ ಇದ್ದರು. ಹಣಮಂತ್ರಾಯ ತಂದೆ ಮಲ್ಲಣ್ಣ ಈತನು ನಮ್ಮ ತಂದೆಯ ಬಲಗಾಲಿನ ಮೇಲೆ ಕಾಲು ಇಟ್ಟು ಕೈಯಿಂದ ಕಾಲು ತಿರುವಿ ಮುರಿದಿರುತ್ತಾನೆ. ಸಂತೋಷ ಈತನು ಒಂದು ದನಗಳಿಗೆ ಕಟ್ಟುವ ಗೂಟದಿಂದ ಬೆನ್ನಿಗೆ ಮತ್ತು ಎರಡು ಕಡೆ ಮೆಲಕಿಗೆ ಹೊಡೆದು ಭಾರಿ ಗುಪ್ತಪೆಟ್ಟು ಮಾಡಿರುತ್ತಾನೆ. ದೇವಪ್ಪ ತಂದೆ ಭೀಮಣ್ಣ ಹೂಗಾರ ಈತನು ನಮ್ಮ ತಂದೆಯ ಎಡಗಾಲನ್ನು ತಿರುವಿ ಮುರಿದು ಭಾರಿ ಗುಪ್ತಗಾಯ ಮಾಡಿರುತ್ತಾನೆ. ಆಗ ನಮ್ಮ ತಂದೆಯು ಜೀವ ಹೊಗುಂತೆ ಚೀರುವಾಗ ಶರಣಪ್ಪ ತಂದೆ ಬಸ್ಸಣ್ಣ ಹೂಗಾರ ಈತನು ನಮ್ಮ ತಂದೆಗೆ ಕುತ್ತಿಗೆ ಒತ್ತಿದನು,
ಸಂಗಣ್ಣ ತಂದೆ ಚಂದಣ್ಣ ಹೂಗಾರ ಈತನು ಬಿಡಬ್ಯಾಡರಿ ಖಲಾಸ್ ಮಾಡರಿ ಮುಂದೆ ಬಂದಿದ್ದು ನಾನು ನೋಡಿಕೊಳ್ಳುತ್ತೇನೆ ಅಂತಾ ಪ್ರಚೋದಿಸುತ್ತಿದ್ದನು. ಎಲ್ಲರೂ ನಮ್ಮ ತಂದೆಗೆ ಹೊಡೆದಿದ್ದರಿಂದ ನಮ್ಮ ತಂದೆ ಬೇಹೋಸ್ ಆಗಿ ಬಿದ್ದಾಗ, ಎಲ್ಲರೂ ನಮ್ಮ ತಂದೆ ಶರಣಪ್ಪ ಈತನಿಗೆೆ ಮತ್ತು ನಮ್ಮ ತಾಯಿ ಸೂಗಮ್ಮಳಿಗೆ ಹಾಗೂ ನಮ್ಮ ತಮ್ಮ ಜಗದೀಶ ಇವರಿಗೆ ಮೂರು ಜನರಿಗೆ ಹನುಮಾನ ದೇವರ ಗುಡಿಯ ಕಟ್ಟೆ ಮೇಲೆ ಹಾಕಿ ಹಗ್ಗದಿಂದ ಕಟ್ಟಿ ಹಾಕಿ ಒದೆಯ ತೊಡಗಿದರು, ಆಗ ನಾನು ನಮ್ಮ ತಂದೆ ಸತ್ತಿದ್ದಾನೆ ಅಂತಾ ಚೀರುತ್ತಾ ಇದ್ದಾಗ ನಮ್ಮ ತಂದೆ ಸತ್ತಿದ್ದಾನೆ ಅಂತಾ ತಿಳಿದು ಎಲ್ಲರು ಅಲ್ಲಿಂದ ಹೊಗಿರುತ್ತಾರೆ. ಹೋಗುವಾಗ ಮಕ್ಕಳೆ ನಮ್ಮ ಆಸ್ತಿ ನಮಗೆ ಬರಲಿಲ್ಲ ಅಂದರೆ, ನಿಮಗೆ ಒಬ್ಬೊಬ್ಬರಿಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ನಾನು ಅಂಬೂಲೆನ್ಸ್ಗೆ ಪೋನ ಮಾಡಿದ್ದು, ಆಂಬೂಲೆನ್ಸ ಬಂದ ನಂತರ ನಮ್ಮ ತಂದೆ ಶರಣಪ್ಪನಿಗೆ, ನಮ್ಮ ತಾಯಿ ಸೂಗಮ್ಮ ಮತ್ತು ನಮ್ಮ ತಮ್ಮ ಜಗದೀಶ ಮತ್ತು ನಮ್ಮ ಅಕ್ಕ ಪದ್ಮಾವತಿ ಇವರೆಲ್ಲರೀಗೂ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು, ಆಸ್ಪತ್ರೆಗೆ ಸೇರಿಕೆ ಮಾಡಿದ ಸ್ವಲ್ಪ ಸಮಯದಲ್ಲಿಯೇ 08.10 ಎಎಂ ಸುಮಾರಿಗೆ ತಂದೆಯಾದ ಶರಣಪ್ಪ ತಂದೆ ಹಣಮಂತ್ರಾಯ ಹೂಗಾರ ವ:65 ಈತನು ತನಗಾದ ಘಾಯ ಪೆಟ್ಟಿನಿಂದ ಮೃತಪಟ್ಟಿರುವದಾಗಿ ವೈದ್ಯಾಧಿಕಾರಿಗಳು ತಿಳಿಸಿದರು.
ನಮ್ಮ ತಂದೆಯವರಿಗೆ ಕೊಲೆ ಮಾಡುವ ಉದ್ದೇಶದಿಂದ ಗುಂಪುಕಟ್ಟಿಕೊಂಡು ಬಂದು ನಮ್ಮ ತಂದೆಯವರಿಗೆ ತಡೆದು ಮುತ್ತಿಗೆ ಹಾಕಿ ಕೈಯಿಂದ, ಚಪ್ಪಲಿಯಿಂದ ಬಕೀಟದಿಂದ ಮತ್ತು ಹಗ್ಗದಿಂದ ಹೊಡೆದು ಕಾಲಿನಿಂದ ಒದ್ದು ತುಳಿದು ಹೊಡೆದು ಕೊಲೆ ಮಾಡಿರುತ್ತಾರೆ, ಬಿಡಿಸಿಕೊಳ್ಳಲು ಹೋದ ನಮ್ಮ ತಾಯಿ ಸೂಗಮ್ಮ, ನಮ್ಮ ತಮ್ಮ ಜಗದೀಶ ಮತ್ತು ಅಕ್ಕ ಪದ್ಮಾವತಿ ಇವರಿಗೆ ಹೊಡೆದು ಭಾರಿ ಗುಪ್ತಗಾಯಗಳನ್ನು ಮತ್ತು ರಕ್ತ ಗಾಯಗಳನ್ನು ಮಾಡಿದ ಮೇಲಿನ ಎಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ 10.45 ಎಎಂ ಕ್ಕೆ ಮರಳಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂ: 73/2020 ಕಲಂ: 143, 147, 148, 341, 342, 323, 324, 354, 302, 504, 506, 114 ಸಂ: 149 ಐಪಿಸಿ
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 77/2020 ಕಲಂ 279, 304(ಎ) ಐಪಿಸಿ : ಇಂದು ದಿನಾಂಕ 16/06/2020 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ಯಲ್ಲಮ್ಮ ಗಂಡ ಚನ್ನಪ್ಪ ವಡ್ಡರ ಸಾಃ ಕ್ಯಾಸಪ್ಪನಳ್ಳಿ ಇವರು ಠಾಣೆಗೆ ಬಂದು ತಮ್ಮ ಹೇಳಿಕೆ ಕೊಟ್ಟಿದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನಗೆ ಸುಮಾರು 8 ವರ್ಷಗಳ ಹಿಂದೆ ಕ್ಯಾಸಪ್ಪನಳ್ಳಿ ಗ್ರಾಮದ ಚನ್ನಪ್ಪ ಎಂಬುವವನ ಜೋತೆಗೆ ಮದುವೆಯಾಗಿರುತ್ತದೆ, ನಮಗೆ ಮೂರು ಜನ ಗಂಡು ಮಕ್ಕಳು ಇದ್ದಿರುತ್ತಾರೆ, ನಾನು ಈಗ 15 ದಿವಸಗಳ ಹಿಂದೆ ನನ್ನ ತವರು ಮನೆಯಾದ ಅರಿಕೇರಾ(ಕೆ) ಗ್ರಾಮಕ್ಕೆ ಹೋಗಿದ್ದೆನು, ನಿನ್ನೆ ದಿನಾಂಕ 15/06/2020 ರಂದು ನನ್ನ ಗಂಡನಾದ ಚನ್ನಪ್ಪ ಇತನು ಕ್ಯಾಸಪ್ಪನಳ್ಳಿ ಗ್ರಾಮದಿಂದ ಅರಿಕೇರಾ(ಕೆ) ಗ್ರಾಮಕ್ಕೆ ಬಂದಿದ್ದನು,
ಹೀಗಿರುವಾಗ ಇಂದು ದಿನಾಂಕ 16/06/2020 ರಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅಕ್ಕಳಾದ ಈರಮ್ಮ ಇಬ್ಬರೂ ಮನೆಯಲ್ಲಿರುವಾಗ ನನ್ನ ಗಂಡನಾದ ಚನ್ನಪ್ಪ ಇತನು ತನ್ನ ಮೋಟಾರ ಸೈಕಲ್ ಚೆಸ್ಸಿ ನಂ ಒಇ4ಎಅ657ಊಊಖಿ006578 ನೆದ್ದರ ಮೇಲೆ ಕುಳಿತುಕೊಂಡು ಅರಿಕೇರಾ (ಕೆ) ಗೇಟ ಹತ್ತಿರ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದನು, ನನ್ನ ಗಂಡ ಎಷ್ಟು ಹೋತ್ತಾದರು ಬರಲಿಲ್ಲ ಅಂತಾ ಸಾಯಂಕಾಲ 6 ಗಂಟೆಯ ಸುಮಾರಿಗೆ ನಾನು ನನ್ನ ಗಂಡನ ಮೊಬೈಲಕ್ಕೆ ಪೋನ ಮಾಡಿದಾಗ ಯಾರೋ ನನ್ನ ಗಂಡನ ಪೋನ ಎತ್ತಿ ಈ ಮೋಬೈಲದ ಮಾಲೀಕರು ರಾಮಸಮುದ್ರ ಗ್ರಾಮದಲ್ಲಿ ಸಿಸಿ ರೋಡ ಮೇಲೆ ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ಬಂಗಾರೆಪ್ಪ ತಂದೆ ಮಲ್ಲಯ್ಯ ಗುಂಜಲಪ್ಪನೊರ ಇವನ ಮನೆಯ ಹತ್ತಿರ ಮೋಟಾರ ಸೈಕಲ್ ಸ್ಕಿಡ್ ಆಗಿ ಅವನು ಕೆಳಗಡೆ ಬಿದ್ದುದ್ದರಿಂದ ಅವನ ತಲೆಗೆ, ಎದೆಗೆ, ಹೊಟ್ಟೆಗೆ ಮತ್ತು ಬೆನ್ನಿಗೆ ಒಳಪೆಟ್ಟುಗಳಾಗಿ ಸ್ಥಳದಲ್ಲಿಯೇ ಸತ್ತಿರುತ್ತಾನೆ, ನೀವು ಬೇಗನೇ ಸ್ಥಳಕ್ಕೆ ಬಾ ಅಂತಾ ಹೇಳಿದ್ದರಿಂದ ಆಗ ನಾನು, ನನ್ನ ಮಾವ ನರಸಿಂಹ ತಂದೆ ಮಾರೆಪ್ಪ ವಡ್ಡರ ಮತ್ತು ನನ್ನ ಅಕ್ಕಳಾದ ಈರಮ್ಮ ಗಂಡ ಭೀಮಪ್ಪ ವಡ್ಡರ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಈ ಮೇಲಿನಂತೆ ಘಟನೆ ನಡೆದು, ನನ್ನ ಗಂಡನಿಗೆ ಈ ಮೇಲಿನಂತೆ ರಸ್ತೆ ಅಪಘಾತದಲ್ಲಿ ಗಾಯಗಳು ಆಗಿ ಸ್ಥಳದಲ್ಲಿಯೇ ಸತ್ತಿದ್ದನು, ಈ ಅಪಘಾತವು ನನ್ನ ಗಂಡ ಚನ್ನಪ್ಪ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ಮೋಟಾರ ಸೈಕಲ್ ಸ್ಕಿಡ್ ಆಗಿ ಅಪಘಾತವಾಗಿರುತ್ತದೆ, ಅವನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 77/2020 ಕಲಂ 279, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 166/2020 ಕಲಂ 279 338 ಐ.ಪಿ.ಸಿ : ಇಂದು ದಿನಾಂಕ 16/06/2020 ರಂದು ಸಾಯಂಕಾಲ 17-00 ಗಂಟೆಗೆ ಫಿರ್ಯಾಧಿ ಶ್ರೀಮತಿ ಈರಮ್ಮ ಗಂಡ ತಿಮ್ಮಯ್ಯ ತಿರುಲಯ್ಯನೋರ ವಯ 55 ವರ್ಷ ಜಾತಿ ಯಾದವಗೊಲ್ಲ ಉಃ ಹೊಲ ಮನೆ ಕೆಲಸ ಸಾಃ ತಿಮ್ಮಾಪೂರದೊಡ್ಡಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 12/06/2020 (ಶುಕ್ರವಾರ) ದಂದು ಮುಂಜಾನೆ 05-00 ಗಂಟೆಯ ಸುಮಾರಿಗೆ ನನ್ನ ಗಂಡ ತಿಮ್ಮಯ್ಯ ಮತ್ತು ನಮ್ಮೂರ ಯಲ್ಲಪ್ಪ ತಂದೆ ಲಚಮಣ್ಣ ಸೇಡಂ ಇಬ್ಬರೂ ಕೂಡಿ ಕುರಿಗಳನ್ನು ಖರೀದಿ ಮಾಡಿಕೊಂಡು ಬರಲು ಶಹಾಪೂರಕ್ಕೆ ಹೋಗಿ ಬರುತ್ತೇವೆ ಅಂತ ನಮ್ಮೂರ ನಿಂಗಪ್ಪ ತಂದೆ ಲಚಮಣ್ಣ ಈತನು ಚಲಾಯಿಸುತಿದ್ದ ಆಟೋ ನಂ ಕೆಎ-33-ಎ-5382 ನೇದ್ದರಲ್ಲಿ ಕುಳಿತುಕೊಂಡು ಹೋದರು. ಸ್ವಲ್ಪ ಸಮಯದ ನಂತರ ಯಲ್ಲಪ್ಪ್ಪನು ಪೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ನಿಮ್ಮ ಗಂಡ ತಿಮ್ಮಯ್ಯ ಇಬ್ಬರೂ ಕೂಡಿ ಆಟೋದಲ್ಲಿ ಶಹಾಪೂರಕ್ಕೆ ಬರುತಿದ್ದಾಗ ರಸ್ತಾಪೂರ ಗ್ರಾಮ ದಾಟಿದ ನಂತರ ರಸ್ತಾಪೂರ ಕಮಾನ ಇನ್ನೂ 200 ಮೀಟರ ಅಂತರದಲ್ಲಿರುವಾಗ ಬೆಳಗಿನ ಜಾವ 05-15 ಗಂಟೆಯ ಸುಮಾರಿಗೆ ಆಟೋ ಚಾಲಕ ನಿಂಗಪ್ಪನು ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಣ ತಪ್ಪಿ ರೋಡಿನ ಮೇಲೆ ಪಲ್ಟಿಮಾಡಿರುತ್ತಾನೆ. ಆಟೋದಲ್ಲಿ ಕುಳಿತ ನನಗೆ ಮತ್ತು ನಿಂಗಪ್ಪನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ನಿಮ್ಮ ಗಂಡ ತಿಮ್ಮಯ್ಯ ಇವರಿಗೆ ತಲೆಯಹಿಂದುಗಡೆ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ಒಳಪೆಟ್ಟಾಗಿರುತ್ತವೆ ನೀವು ಸ್ಥಳಕ್ಕೆ ಬನ್ನಿ ಅಂತ ತಿಳಿಸಿದ ಮೆರೆಗೆ ನಾನು ಮತ್ತು ನಮ್ಮ ಸಂಬಂಧಿಕ ಬಲವಂತ ತಂದೆ ಬೈಲಪ್ಪ ಕಾಗಿ ಈತನಿಗೆ ವಿಷಯ ತಿಳಿಸಿ ಅವನ ಮೋಟರ ಸೈಕಲ್ ಮೇಲೆ ಸ್ಥಳಕ್ಕೆ ಬಂದು ನೋಡಲಾಗಿ ಅಪಘಾತ ಸ್ಥಳದಿಂದ ರಸ್ತಾಪೂರ ಕಮಾನ ಇನ್ನೂ 200 ಮೀಟರ ಅಂತರದಲ್ಲಿ ಆಟೋ ಪಲ್ಟಿಯಾಗಿ ರೋಡಿನ ಮೆಲೆ ಬಿದ್ದಿತ್ತು. ನನ್ನ ಗಂಡನಿಗೆ ನೋಡಲಾಗಿ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ರಕ್ತ ಬರುತಿತ್ತು. ಮಾತನಾಡಿಸಿದರು ಮಾತನಾಡಿರುವುದಿಲ್ಲ. ಯಲ್ಲಪ್ಪ ಮತ್ತು ಆಟೋ ಚಾಲಕ ನಿಂಗಪ್ಪ ಇವರಿಗೆ ಸಣ್ಣ-ಪುಟ್ಟಗಾಯಗಳಾಗಿದ್ದವು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 165/2020. ಕಲಂ 78(3) ಕೆ.ಪಿ.ಆಕ್ಟ : ದಿನಾಂಕ:16-06-2020 ರಂದು ಆರೋಪಿತು ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ದಾಳಿಗಾಗಿ ಹೋದಾಗ ಆರೋಪಿತನು 12:30 ಪಿ.ಎಮ್.ಕ್ಕೆ ಆರೋಪಿತನು ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿಯವರು ಸಿಬ್ಬಂದಿಯವರೊಂದಿಗೆ ಹೋಗಿ ಪಂಚರ ಸಮಕ್ಷಮ ದಾಳಿಮಾಡಿ ಹಿಡಿದು ಆತನಿಂದ 1) ನಗದು ಹಣ 1010/- ರೂ.,2) ಒಂದು ಬಾಲ್ ಪೆನ್ 3) ಒಂದು ಮಟಕಾ ನಂಬರ ಬರೆದ ಚೀಟಿ ಅ.ಕಿ.00=00 ನೇದ್ದವುಗಳನ್ನು ವಶ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 165/2020 ಕಲಂ.78(3) ಕೆ.ಪಿ.ಆಕ್ಟ . ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 08/2020 ಕಲಂ: 107 ಸಿಆರ್ಪಿಸಿ: ಮಾನ್ಯರವರಲ್ಲಿ ನಾನು ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ ಠಾಣೆ ಇದ್ದು ತಮ್ಮಲ್ಲಿ ವರದಿಯನ್ನು ಸಲ್ಲಿಸುವುದೆನೆಂದರೆ ಇಂದು ದಿನಾಂಕ 16.06.2020 ರಂದು 1 ಪಿ.ಎಮ್ಕ್ಕೆ ಹಳ್ಳಿಬೇಟಿ ಕುರಿತು ಸದಬ ಗ್ರಾಮಕ್ಕೆ ಬೇಟಿ ನೀಡಿದಾಗ ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನಂದರೆ ಸದರ ಗ್ರಾಮದ ರೌಡಿ ಶೀಟರಗಳಾದ 1] ಶಿವಪ್ಪ ತಂದೆ ಬಸಪ್ಪ ಹಳಿಮನಿ ವ|| 60 ಜಾ|| ಮಾದರ ಉ|| ಒಕ್ಕಲುತನ ಹಾಗು 2] ಮಹಾದೇವಪ್ಪ ತಂದೆ ಬಸಪ್ಪ ಹೊಸಮನಿ ವ|| 60 ಜಾ|| ಹೊಲೆಯ ಉ|| ಒಕ್ಕಲುತನ ಸಾ|| ಇಬ್ಬರೂ ಸದಬ ಇವರು ಗ್ರಾಮದಲ್ಲಿನ ಒಂದು ಸಣ್ಣ ವಿಷಯವನ್ನು ದೊಡ್ಡ ವಿಷಯವನ್ನಾಗಿ ಮಾಡಿ ಗ್ರಾಮದಲ್ಲಿ ಅಶಾಂತತೆ ಉಂಟು ಮಾಡುವವರಿದ್ದು ಅಲ್ಲದೇ ಈ ಎರಡು ಜನರ ಮದ್ಯ ಈ ಹಿಂದೆ ವರಧಿಯಾದ ಗುನ್ನೆ ನಂಬರ 60/2017 ಹಾಗು 61/2017 ಗುನ್ನೆ ಪ್ರತಿಗುನ್ನೆಗಳು ವರಧಿಯಾದಾಗಿನಿಂದ ಒಬ್ಬರಿಗೊಬ್ಬರು ಭಾರೀ ವೈಮನಸ್ಸು ಬೆಳೆಸಿಕೊಂಡು ಸದರ ಗ್ರಾಮದಲ್ಲಿ ಎರಡು ಗುಂಪು ಕಟ್ಟಿಕೊಂಡಿದ್ದು ಅಲ್ಲದೇ ಸದರಿ ಗ್ರಾಮದಲ್ಲಿ ಜಟ್ಟೆಪ್ಪ ಈತನು ಸಾರ್ವಜನಿಕ ಸ್ಥಳದಲ್ಲಿ ಪಾನ ಶಾಪ ಡಬ್ಬಾ ಇಟ್ಟ ವಿಷಯದಲ್ಲಿ ಗಲಾಟೆಯಾಗುವ ಸಂಬವವಿರುತ್ತದೆ ಅಂತ ತಿಳಿಸಿದ್ದು ಕಾರಣ ಎರಡು ಗುಂಪಿನ ಜನರಾದ ಅಂದರೆ ಒಂದನೇಯ ಪಾಟರ್ಿ 1] ಶಿವಪ್ಪ ತಂದೆ ಬಸಪ್ಪ ಹಳಿಮನಿ ವ|| 60 ಜಾ|| ಮಾದರ ಉ|| ಒಕ್ಕಲುತನ 2] ಜಟ್ಟೆಪ್ಪ ತಂದೆ ಸಂಗಪ್ಪ ಹಳಿಮನಿ ವ|| 45 ಜಾ|| ಮಾದರ ಉ|| ಕೂಲಿಕೆಲಸ ಸಾ|| ಇಬ್ಬರೂ ಸದಬ ಹಾಗು ಎರಡನೇಯ ಪಾಟರ್ಿಯ 1] ಮಹಾದೇವಪ್ಪ ತಂದೆ ಬಸಪ್ಪ ಹೊಸಮನಿ ವ|| 60 ಜಾ|| ಹೊಲೆಯ ಉ|| ಒಕ್ಕಲುತನ 2] ಮಲ್ಲಣಗೌಡ ತಂದೆ ಮಾಳಪ್ಪಗೌಡ ಹೊಸಗೌಡರ ವ|| 48 ಜಾ|| ಕುರಬರ ಉ|| ಒಕ್ಕಲುತನ ಸಾ|| ಇಬ್ಬರೂ ಸದಬ ಈ ಎರಡು ಪಾಟರ್ಿ ಜನರಲ್ಲಿ, ಗ್ರಾಮದ ಸಾರ್ವಜನಿಕ ಸ್ಥಳದಲ್ಲಿಟ್ಟ ಪಾನಶಾಪ ಡಬ್ಬಾದ ವಿಷಯದಲ್ಲಿ ಭಾರೀ ವೈಮನಸ್ಸು ಬೆಳೆದಿದ್ದು ಗ್ರಾಮದಲ್ಲಿ ಸಾರ್ವಜನಿಕ ಅಶಾಂತತೆ ಉಂಟಾಗಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗುವದಲ್ಲದೇ ಜೀವಹಾನಿಯಾಗುವ ಸಂಭವ ಕಂಡುಬಂದಿದ್ದರಿಂದ ಮರಳಿ ಠಾಣೆಗೆ 4 ಪಿ ಎಮ್ ಕ್ಕೆ ಬಂದು ಸದರ ಎರಡು ಪಾಟರ್ಿ ಜನರ ವಿರುದ್ದ ಮುಂಜಾಗ್ರಾತ ಕ್ರಮವಾಗಿ ಠಾಣಾ ಪಿಎಆರ್ ನಂಬರ 08/2020 ಕಲಂ 107 ಸಿಆರ್ಪಿಸಿ ನೇದ್ದರಲ್ಲಿ ಕ್ರಮ ಜರಗಿಸಿದ್ದು ಕಾರಣ ಸದರ ಎರಡು ಪಾಟರ್ಿ ಜನರನ್ನು ಕರೆಯಿಸಿ ಗ್ರಾಮದಲ್ಲಿ ಒಳ್ಳೆಯ ನಡತೆಯಿಂದ ಇರುವಂತೆ ಕಲಂ 111 ಸಿಆರ್ಪಿಸಿ ಅಡಿಯಲ್ಲಿ ಇಂಟೇರಿಯಂ ಬಾಂಡ ಬರೆಯಿಸಿಕೊಳ್ಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ
Hello There!If you like this article Share with your friend using