ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/06/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 51/2020 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಕಪ್ಪು ಬಣ್ಣದ ಹಿರೋ ಸ್ಪ್ಲೆಂಡರ್ ಮೋಟರ್ ಸೈಕಲ್ ನಂ ಏಂ 33, ಐ 8301 ಅಂತಾ ಇದ್ದು, ಅದರ ಇಟಿರಟಿಜ ಓಠ-ಒಃಐಊಂ10ಂಐಅಊಐ19870, ಅಚಿ ಓಠ-ಊಂ10ಇಎಅಊಐ76549, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 20,000/ ರೂಪಾಯಿಗಳು. ಈ ಮೋಟರ್ ಸೈಕಲ್ ನಾನೇ ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು, ದಿನಾಂಕ 01/06/2020 ರಂದು 12-35 ಎ.ಎಂ ಸುಮಾರಿಗೆ ನಾನು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಯಾದಗಿರಿಯಿಂದ ಕೋವಿಡ್-19, ಕಂಟ್ರೋಲ್ ರೂಮ್ ಕರ್ತವ್ಯ ಮುಗಿಸಿಕೊಂಡು ನನ್ನ ಮನೆಗೆ ಬಂದು, ನನ್ನ ವಾಹನವನ್ನು ಮನೆ ಮುಂದೆ ಲಾಕ್ ಹಾಕಿ ನಿಲ್ಲಿಸಿ, ನಾನು ಮನೆಯಲ್ಲಿ ಉಳಿದುಕೊಂಡೆನು. ನಂತರ ದಿನಾಂಕ 01/06/2020 ರ ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ಮನೆಯ ಅಕ್ಕ ಪಕ್ಕದಲ್ಲಿ ನೋಡಿದರೂ ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ನಂತರ ನಾನು ನನ್ನ ಮನೆಯ ಪಕ್ಕದಲ್ಲಿ ವಾಸವಿರುವ ನಾಮದೇವ ತಂದೆ ನೀಲಕಂಠ ರಾಠೋಡ ಸಾ|| ಪಿ.ಡ.ಬ್ಲ್ಯೂ.ಡಿ ಕ್ವಾಟರ್ಸ್ ಯಾದಗಿರಿ ಹಾಗೂ ಹುಸೇನಪ್ಪ ತಂದೆ ಹಣಮಂತ ಮಾಳಗಿ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಅಲ್ಲಲ್ಲಿ ಹುಡುಕಾಡಿದರೂ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 51/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 76/2020 ಕಲಂ 498(ಎ), 323, 324, 504, 506 ಐಪಿಸಿ : ಸುಮಾರು 11 ವರ್ಷಗಳ ಹಿಂದೆ ಫಿರ್ಯಾಧಿಗೆ ಆರೋಪಿತನಾದ ಸಾಬಣ್ಣ ತಂದೆ ದಂಡಪ್ಪ ಲೋಕನಳ್ಳಿ ಸಾಃ ಪಗಲಾಪೂರ ಇವನ ಜೋತೆಗೆ ಮದುವೆಯಾಗಿದ್ದು, ಸುಮಾರು 2 ವರ್ಷಗಳಿಂದ ಆರೋಪಿತನು ಫಿರ್ಯಾಧಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೂಳ ಕೊಡುತ್ತಾ ಬಂದಿದ್ದು, ನಿನ್ನೆ ದಿನಾಂಕ 14-06-2020 ರಂದು ಸಾಯಂಕಾಲ 7-30 ಗಂಟೆಗೆ ಫಿರ್ಯಾದಿದಾರಳು ತನ್ನ ಮನೆಯಲ್ಲಿ ಇರುವಾಗ ಆರೋಪಿತನು ಫಿರ್ಯಾಧಿ ಜೋತೆಗೆ ಜಗಳ ತೆಗೆದು ಸರಾಯಿ ಕುಡಿಯುವದಕ್ಕೆ ಹಣ ಕೊಡು ಅಂತಾ ಅವಾಚ್ಯವಾಗಿ ಬೈದು, ಕೈಯಿಂದ, ಬಡಿಗೆಯಿಂದ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿ ಜೀವದ ಭಯ ಹಾಕಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೂಳ ಕೊಟ್ಟ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 102/2020 ಕಲಂ 143,147, 447, 504 ಸಂಗಡ 149 ಐಪಿಸಿ : ದಿನಾಂಕ 12.06.2020 ರಂದು ಸಾಯಂಕಾಲ 7.00 ಗಂಟೆ ಸುಮಾರಿಗೆ ಆರೋಪಿತರು ಅಕ್ರಮವಾಗಿ ಪಿರ್ಯಾಧಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 103/2020 ಕಲಂ: 143, 147, 448, 504 ಸಂಗಡ 149 ಐಪಿಸಿ : ದಿನಾಂಕ 07.06.2020 ಸಂಜೆ 6:30 ಗಂಟೆಗೆ ಈ ಮೆಲ್ಕಂಡ ಎಲ್ಲಾ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು, ಏಕೊದ್ದೇಶದಿಂದ ಎಲ್ಲಾರು ಕೂಡಿಕೊಂಡು ಫಿರ್ಯಾಧಿಗೆ ಹಾಗೂ ಆತನ ಅಣ್ಣನಿಗೆ ಸೇರಿದ ಶೇಟರಗಳಿಗೆ ಹಾಗೂ ಜಾಗಕ್ಕೆ ಹೋಗಿ ಶೆಟರಗಳಲ್ಲಿ ಬಾಡಿಗೆ ಇದ್ದ ಬಾಡಿಗೆ ದಾರರಿಗೆ ಅವಾಚ್ಯವಾಗಿ ಬೈದು ಅತಿಕ್ರಮಣ ಪ್ರವೇಶ ಮಾಡಿ ಆ ಶೆಟರಗಳನ್ನು ಬೀಗ ಹಾಕಿದ್ದು ಆ ವಿಷಯವನ್ನು ಬಾಡಿಗೆದಾರರು ಫಿರ್ಯಾದಿಗೆ ಮತ್ತು ಆಕೆಯ ಅಣ್ಣನಿಗೆ ತಿಳಿಸಿದ ನಂತರ ಫಿರ್ಯಾದಿ ಮತ್ತು ಆಕೆಯ ಅಣ್ಣ ಇಬ್ಬರು ಕೂಡಿಕೊಂಡು ಆರೋಪಿತರಲ್ಲಿಗೆ ಹೋಗಿ ವಿಚಾರಿಸಿದಾಗ ಇವರಿಗೆ ಕೂಡ ಅವಾಚ್ಯವಾಗಿ ಬೈದು ಕಳುಹಿಸಿದ್ದು ಆ ಬಗ್ಗೆ ಫಿರ್ಯಾದಿದಾರಳು ಮನೆಯಲ್ಲಿ ವಿಚಾರಿ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ದೂರು ಅಜರ್ಿಯನ್ನು ಸಲ್ಲಿಸಿದ್ದು ಸದರಿ ದೂರಿನಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 103/2020 ಕಲಂ: 143, 147, 448, 504 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 150/2020 ಕಲಂ 379 ಐಪಿಸಿ : ಇಂದು ದಿನಾಂಕ:15/06/2020 ರಂದು 6 ಪಿ.ಎಂ. ಕ್ಕೆ ಫಿಯರ್ಾದಿ ಶ್ರೀ ಹುಸನಪ್ಪ ತಂದೆ ಶಾಂತಪ್ಪ ಬಡಿಗೇರ ವ|| 31 ವರ್ಷ ಜಾ|| ಪರಿಶಿಷ್ಟ ಜಾತಿ ಉ|| ಅಂಬುಲೇನ್ಸ ಚಾಲಕ (ಸರಕಾರಿ ಆಸ್ಪತ್ರೆ ಸುರಪುರ) ಸಾ|| ಬೆನಕನಹಳ್ಳಿ ಇವರು ಠಾಣೆಗೆ ಬಂದು ಒಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನನ್ನ ಕಪ್ಪು ಬಣ್ಣದ ಪಲ್ಸರ 150 ಸಿಸಿ ಮೋಟರ ಸೈಕಲ್ ನಂಬರ ಏಂ-33-ಘಿ-0428ನೇದ್ದರ ಚೆಸ್ಸಿ ನಂಬರಃ- ಒಆ2ಂ11ಅಙ8ಎಅಇ38464ಇಂಜಿನ್ ನಂಬರ ಆಊಙಅಎಇ42055ನೇದ್ದು ಇರುತ್ತದೆ. ಸದರಿ ಮೋಟರ ಸೈಕಲ್ ನನ್ನ ಕೆಲಸಕ್ಕೆ ಉಪಯೋಗ ಮಾಡಿಕೊಂಡಿರುತ್ತೆನೆ. ಹಿಗಿದ್ದು ದಿನಾಂಕ 02/06/2020 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನಾನು ಎಂದಿನಂತೆ ಕರ್ತವ್ಯ ಮುಗಿಸಿಕೊಂಡು ವೆಂಕಟಪ್ಪ ನಾಯಕ್ ಸರ್ಕಲ್ ಹತ್ತಿರ ಇರುವ ಕಡೆಚೂರ ಲಾಡ್ಜ ಮುಂದೆ ನಿಲ್ಲಿಸಿ, ರೂಮ್ ನಂ.206 ರಲ್ಲಿ ಹೋಗಿ ಅಲ್ಲೆ ಇದ್ದೇನು. ನಂತರ ದಿನಾಂಕ:03/06/2020 ರಂದು ಮುಂಜಾನೆ 6:30 ಗಂಟೆಗೆ ನನ್ನ ಕರ್ತವ್ಯಕ್ಕೆ ಹೋಗುವ ಸಲುವಾಗಿ ನಾನು ಮೋಟರ್ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ್ ಇದ್ದಿರುವದಿಲ್ಲ. ಗಾಬರಿಯಾಗಿ ನನ್ನ ಗೆಳೆಯರಾದ ಮರೆಪ್ಪ ತಂದೆ ಯಂಕಪ್ಪ ಬೈರಿನಾಯಕ್ ಸಾ|| ಬಿಚಕತಕೇರಿ ಸುರಪುರ ಮತ್ತು ಹಣಮಂತ ತಂದೆ ಮಲ್ಲಪ್ಪ ಅನ್ವರ ಸಾ|| ದೋರನಹಳ್ಳಿ ಇಬ್ಬರನ್ನು ಕರೆಸಿದ್ದು ಅವರು ಬಂದು ನೋಡಿದಾಗ ಮೋಟರ್ ಸೈಕಲ್ ಇದ್ದಿರುವದಿಲ್ಲ. ನಂತರ ನಾನು ಮತ್ತು ನನ್ನ ಗೆಳೆಯರು ಎಲ್ಲರು ಕೂಡಿ ಸುರಪುರ ನಗರದಲ್ಲಿ, ಸತ್ಯಂಪೇಟ್, ವೆಂಕಟಪ್ಪ ನಾಯಕ ಸರ್ಕಲ್ ಹತ್ತಿರ, ದಿವಳಗುಡ್ಡ, ರಂಗಪೇಟ್, ಕುಂಬಾರಪೇಟ್, ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟರ್ ಸೈಕಲ್ ಸಿಕ್ಕಿರುವದಿಲ್ಲ. ಇಂದು ತಡವಾಗಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೆನೆ. ಕಾರಣ ದಿನಾಂಕ 02/06/2020 ರಂದು ರಾತ್ರಿ 10:30 ಪಿ.ಎಂ ದಿಂದ ದಿನಾಂಕ:03/06/2020 ರಂದು 6:30 ಎ.ಎಂ ದ ಅವಧಿಯಲ್ಲಿ ಕಡೆಚೂರ ಲಾಡ್ಜ ಮುಂದೆ ನಿಲ್ಲಿಸಿದ ಮೋಟರ ಸೈಕಲ್ ನಂಬರ ಏಂ-33-ಘಿ-0428ಅಂ.ಕಿ 45,000=00 ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 150/2020 ಕಲಂ: 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 07/2020 ಕಲಂ: 174 ಸಿ.ಆರ್.ಪಿ.ಸಿ : ಇಂದು ದಿನಾಂಕ:15.06.2020 ಸಾಯಂಕಾಲ 5:15 ಪಿಎಮ್ ಕ್ಕೆ ಗಂಟೆಯ ಪಿರ್ಯಾಧಿ ದೇವಪ್ಪ ತಂದೆ ಸಾಯಬಣ್ಣ ಯರಕಿಹಾಳ ವ:60 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ:ಹಣಮಸಾಗರ ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಪಿರ್ಯಾಧಿ ಅಜರ್ಿಯನ್ನು ಸಲ್ಲಿಸಿದ್ದು ಸದರ ಅಜರ್ಿಯ ಸಾರಾಂಶವೆನೆಂದರೆ ನನಗೆ ದ್ಯಾಮವ್ವ, ಪರಸಪ್ಪ, ಶಂಕರೆಪ್ಪ, ಕುಶಪ್ಪ @ ಕುಶ, ವಿಜಯಲಕ್ಷ್ಮಿ, ಭಾಗರಾಜ ಅಂತ 6 ಜನ ಮಕ್ಕಳಿದ್ದು. ಮಗಳಾದ ದ್ಯಾಮವ್ವಳಿಗೆ ನಮ್ಮೂರಿನಲ್ಲಿಯೇ ಹುಲಗಪ್ಪ ಹಿರೇಗೌಡರ ಎಂಬುವರೊಂದಿಗೆ ಮದುವೆ ಮಾಡಿ ಕೊಟ್ಟಿದ್ದು. ನನ್ನ ಮಗನಾದ ಕುಶ @ ಕುಶಪ್ಪ ಇತನು ನಮ್ಮ ಕುರಿಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದು. ನನ್ನವು 30 ಕುರಿಗಳು ಇರುತ್ತವೆ ದಿನಾಲು ನನ್ನ ಮಗನು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಕುರಿಗಳನ್ನು ಮೇಯಿಸಲು ಮನೆಯಿಂದ ಹೊಡೆದುಕೊಂಡು ಹೋಗಿ ಸಾಯಂಕಾಲ 6:00 ಗಂಟೆಯ ಸುಮಾರಿಗೆ ಕುರಿಗಳೊಂದಿಗೆ ಮರಳಿ ಬರುತ್ತಾನೆ. ಹೀಗಿರುವಾಗ ದಿನಾಂಕ:15.06.2020 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ನನ್ನ ಮಗನು ದಿನ ನಿತ್ಯದಂತೆ ನಮ್ಮ ಕುರಿಗಳನ್ನು ಹೊಡೆದುಕೊಂಡು ಮೇಯಿಸಲು ಹೋಗಿದ್ದು. ನಾನು ಮತ್ತು ನನ್ನ ಹೆಂಡತಿ ಹಣಮವ್ವ ಹಾಗೂ ಮಗಳಾದ ದ್ಯಾಮವ್ವ ರವರು ನಮ್ಮ ಮನೆಯಲ್ಲಿ ಮದ್ಯಾಹ್ನ 1:30 ಸುಮಾರಿಗೆ ಇದ್ದಾಗ ನಮ್ಮೂರ ಮುತ್ತಪ್ಪ ತಂದೆ ಹಲವಪ್ಪ ಹಿರೇಗೌಡರ ಈತನು ಓಡುತ್ತಾ ಬಂದು ತಿಳಿಸಿದ್ದೆನೆಂದರೆ ನಿಮ್ಮ ಮಗ ಕುಶಪ್ಪನು ನಮ್ಮೂರಿನಿಂದ -ಅಮ್ಮಾಪೂರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿಯ ಯಮನಪ್ಪ ತಂದೆ ಬಸಪ್ಪ ಹಿರೇಗೌಡರ ಇವರ ಹೊಲದ ದಂಡೆಯ ಮೇಲಿನ ಸುಬಾಭಲ ಗಿಡವನ್ನು ಹತ್ತಿ ಕುರಿಗಳಿಗೆ ತಪ್ಪಲು ಕಡಿದು ಹಾಕುವಾಗ ಟೊಂಗೆಗಳು ಗಿಡದ ಪಕ್ಕದಲ್ಲಿಯೇ ಹಾದು ಹೋದ ಕರೆಂಟ್ ವಾಯರ್ ಮೇಲೆ ಬಿದ್ದಿದ್ದು. ಕಡೆದ ಟೊಂಗೆಗಳು ಗಾಳಿಯ ರಭಸಕ್ಕೆ ಆಕಶ್ಮಿಕವಾಗಿ ಕುಶ @ ಕುಶಪ್ಪನಿಗೆ ತಾಗಿದ್ದು ಟೊಂಗೆಗಳ ಮೂಲಕ ಕರೆಂಟ್ ಪಾಸಾಗಿ ಶಾಕ್ ಹೊಡೆದು ಗಿಡದಿಂದ ಕೆಳಗೆ ಬಿದ್ದಿದ್ದು. ನಾನು ಮನೆಯಲ್ಲಿದಾಗ ಸ್ವಲ್ಪ ಹೊತ್ತಿನ ಹಿಂದೆ ಕರೆಂಟ್ ಸಪ್ಪಳ ಕೇಳಿ ಹೋಗಿ ನೋಡಿದ್ದಾಗಿ ತಿಳಿಸಿದ್ದು ಕೂಡಲೇ ನಾನು ಮತ್ತು ನನ್ನ ಹೆಂಡತಿ ಹಣಮವ್ವ ಮಗಳಾದ ದ್ಯಾಮವ್ವ ಹಾಗೂ ನಮ್ಮ ಅಣ್ಣತಮ್ಮಕೀಯ ಶೇಖಪ್ಪ ತಂದೆ ಬಸಪ್ಪ ಹುದ್ದಾರ, ಪ್ರಭು ತಂದೆ ಯಮನಪ್ಪ ಹಿರೇಗೌಡರ, ಬಸಪ್ಪ ತಂದೆ ಭೀಮಣ್ಣ ಹಿರೇಗೌಡ ಹಾಗೂ ನಮ್ಮೂರ ಇತರರು ಕೂಡಿ ಯಮನಪ್ಪ ತಂದೆ ಬಸಪ್ಪ ಹಿರೇಗೌಡರ ರವರ ಹೊಲಕ್ಕೆ ಹೋಗಿ ನೋಡಲಾಗಿ ಇವರ ಹೊಲದಲ್ಲಿಯ ಗಿಡದ ಕೇಳಗೆ ನನ್ನ ಮಗ ಕುಶ @ ಕುಶಪ್ಪ ಬಿದ್ದಿದ್ದು ನೋಡಲಾಗಿ ನನ್ನ ಮಗನು ಪ್ರಜ್ಞಹೀನಾ ಸ್ಥಿತಿಯಲ್ಲಿದ್ದು ನನ್ನ ಮಗನ ಹಣೆಯ ಮೇಲ್ಬಾಗದಲ್ಲಿ ಭಾರಿ ರಕ್ತಗಾಯವಾಗಿದ್ದು, ಬಲಗಣ್ಣಿನ ಹುಬ್ಬಿನ ಮೇಲೆ ಕಂದುಗಟ್ಟಿದ ಗಾಯವಾಗಿದ್ದು. ಮೂಗಿನಲ್ಲಿ, ಕಿವಿಯಲ್ಲಿ ರಕ್ತಸ್ರಾವವಾಗಿದ್ದು. ಬಲಗೈ ಕಿರುಬೆರಳಿನ ಮೇಲೆ ಕರೆಂಟಿನ ಶಾಖ ಹೊಡೆದ ಸುಟ್ಟ ಗಾಯ ಮತ್ತು ಎಡಗಾಲ ಪಾದದ ಮಧ್ಯದ ಎರಡು ಬೆರಳುಗಳಿಗೆ ಕರೆಂಟ್ ಶಾಖದಿಂದ ಸುಟ್ಟ ಗಾಯಗಾಳಾಗಿದ್ದು. ಎಡಗಾಲ ಮೊಳಕಾಲ ಚಿಪ್ಪಿನ ಮೇಲೆ ತೆರೆಚಿದ ಗಾಯಗಾಳಗಿದ್ದು. ಕೂಡಲೇ ನಾನು ಮತ್ತು ಜೋತೆಗಿದ್ದ ಎಲ್ಲರೂ ಕೂಡಿ ನನ್ನ ಮಗನಿಗೆ ಒಂದು ಆಟೋದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ರಾಜನಕೊಳೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಾರಕ್ಕಾಗಿ ಸೇರಿಕೆ ಮಾಡಿದ್ದು ರಾಜನಕೊಳೂರ ವೈದ್ಯರು ನನ್ನ ಮಗನಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಬಿಜಾಪೂರಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾವು ನನ್ನ ಮಗನಿಗೆ ಹೆಚ್ಚಿನ ಉಪಚಾರಕ್ಕಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯ ತಾಳೀಕೋಟಿ ಹತ್ತಿರ 04: ಪಿಎಮ್ ಕ್ಕೆ ನನ್ನ ಮಗ ಸತ್ತಿದ್ದು ನಂತರ ನನ್ನ ಮಗನ ಶವವನ್ನು ಕೊಡೆಕಲ್ ಸರಕಾರಿ ಆಸ್ಪತ್ರೆಗೆ ತಂದು ಹಾಕಿದ್ದು ನನ್ನ ಮಗ ಕುಶ @ ಕುಶಪ್ಪ ವ-20 ವರ್ಷ ಇತನು ಇಂದು ಮಧ್ಯಾಹ್ನ 01:30 ಗಂಟೆ ಸುಮಾರಿಗೆ ನಮ್ಮೂರ ಯಮನಪ್ಪ ತಂದೆ ಬಸಪ್ಪ ಹಿರೇಗೌಡರ ಇವರ ಹೊಲದ ದಂಡೆಯ ಮೇಲಿನ ಸುಬಾಭಲ ಗಿಡವನ್ನು ಹತ್ತಿ ಕುರಿಗಳಿಗೆ ತಪ್ಪಲು ಕಡಿದು ಹಾಕುವಾಗ ಟೊಂಗೆಗಳು ಗಿಡದ ಪಕ್ಕದಲ್ಲಿಯೇ ಹಾದು ಹೋದ ಕರೆಂಟ್ ವಾಯರ್ ಮೇಲೆ ಬಿದ್ದಿದ್ದು. ಕಡೆದ ಟೊಂಗೆಗಳು ಗಾಳಿಯ ರಭಸಕ್ಕೆ ಆಕಶ್ಮಿಕವಾಗಿ ಕುಶ @ ಕುಶಪ್ಪನಿಗೆ ತಾಗಿದ್ದು ಟೊಂಗೆಗಳ ಮೂಲಕ ಕರೆಂಟ್ ಪಾಸಾಗಿ ಶಾಕ್ ಹೊಡೆದು ಗಿಡದಿಂದ ಕೆಳಗೆ ಬಿದ್ದಿದ್ದು. ಇದರಿಂದ ನನ್ನ ಮಗನಿಗೆ ಹಣೆಯ ಮೇಲೆ ಬಾರಿ ರಕ್ತ ಗಾಯವಾಗಿ ಮತ್ತು ಇತರ ಕಡೆ ಗಾಯಗಳಾಗಿ ಹಾಗೂ ವಿದ್ಯುತ್ ಶಾಕ್ ಹೊಡೆದು ನನ್ನ ಮಗ ಸತ್ತಿದ್ದು ನನ್ನ ಮಗನ ಮರಣದಲ್ಲಿ ಯಾರ ಮೇಲೂ ಯಾವುದೇ ಸಂಶಯ ಇರುವದಿಲ್ಲ. ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತ ವಗೈರೆ ಪಿರ್ಯಾಧಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:07/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 78/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ : ಫಿಯರ್ಾದಿಯ ಮನೆಯ ಹಿಂದಿನ ಸಿಸಿ ರೋಡಿನ ಮೇಲೆ ಆರೋಪಿತರು ಮಣ್ಣನ್ನು ತಂದು ಹಾಕಿದ್ದು, ಇಂದು ದಿನಾಂಕ 15/06/2020 ರಂದು ಬೆಳಿಗ್ಗೆ 6-15 ಎಎಮ್ ಕ್ಕೆ ಫಿಯರ್ಾದಿದಾರನು ಮಣ್ಣು ಹಾಕುವದರಿಂದ ಸಿಸಿ ರೋಡ ಹಾಳಾಗುತ್ತದೆ ಅಂತ ಅಂದಿದ್ದಕ್ಕೆ ಆರೋಪಿತರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದು ಎಲೇ ಶಾಂತ್ಯಾ ಸಿಸಿ ರೋಡ ನಿಮ್ಮ ಅಪ್ಪನದು ಏನು ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಕಲ್ಲು ಹಾಗು ಬಡಿಗೆಯಿಂದ ಹೊಡೆ ಬಡೆ ಮಾಡಿದ್ದು ಬಿಡಿಸಲು ಬಂದ ಶಿವಲಿಂಗಪ್ಪನಿಗೆ ಕಲ್ಲಿನಿಂದ ತಲೆಗೆ ಹಾಗು ಮಲ್ಲಿಕಾಜರ್ುನ ಈತನಿಗೆ ಬೆನ್ನಿಗೆ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 79/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ : ಫಿಯರ್ಾದಿದಾರರು ತಮ್ಮ ಮನೆಯ ಮುಂದೆ ತಗ್ಗುಗಳು ಬಿದ್ದಿದ್ದರಿಂದ ಅವುಗಳನ್ನು ತುಂಬಲು ಮಣ್ಣನ್ನು ತಂದು ತಮ್ಮ ಮನೆಯ ಮುಂದಿನ ಸಿಸಿ ರೋಡಿನ ಹತ್ತಿರ ಹಾಕಿದ್ದು, ಅದಕ್ಕೆ ಇಂದು ದಿನಾಂಕ 15/06/2020 ರಂದು ಬೆಳಿಗ್ಗೆ 6.30 ಎಎಮ್ ಕ್ಕೆ ಆರೋಪಿ ಶಾಂತವೀರ ಈತನು ಬಂದು ಸಿಸಿ ರೋಡ ನಿಮ್ಮಪ್ಪನದು ಏನು ರೋಡಿನ ಮೇಲೆ ಮಣ್ಣು ಹಾಕಿದ್ದೀರಿ ಸೂಳೆ ಮಕ್ಕಳ್ಯಾ ಅಂತ ಬೈದಾಗ ಫಿಯರ್ಾದಿಯು ಯಾಕೆ ಬೈಯ್ಯುತ್ತಿ ಅಂತ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದು ಫಿಯರ್ಾದಿಗೆ ಹಾಗು ಆತನ ತಮ್ಮ ಸಂಗಪ್ಪ ಈತನಿಗೆ ಕಲ್ಲು ಹಾಗು ಬಡಿಗೆಯಿಂದ ಹೊಡೆ ಬಡೆ ಮಾಡಿ ರಕ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 164/2020.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 15/06/2020 ರಂದು 23-00 ಗಂಟೆಗೆ ಸ|| ತ|| ಪಿಯರ್ಾದಿ ಚಂದ್ರಕಾಂತ ಪಿ.ಎಸ್.ಐ.(ಕಾ.ಸೂ) ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ 15/06/2020 ರಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಹಳಿಸಗರದ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ 20-45 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ನಾರಾಯಣ ಹೆಚ್.ಸಿ.164. ಶರಣಪ್ಪ ಹೆಚ್.ಸಿ.164. ಗೋಕುಲ್ ಹುಸೇನ್ ಪಿ.ಸಿ. 172. ಬಾಗಣ್ಣ ಪಿ.ಸಿ.194. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಗೋಕುಲ್ ಹುಸೇನ್ ಪಿ.ಸಿ 172. ರವರಿಗೆ 20-50 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 20-55 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.
ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ. ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಒಂದು ಖಾಸಗಿ ಜೀಪನಲ್ಲಿ ಕುಳಿತುಕೊಂಡು ದಾಳಿ ಕುರಿತು ಠಾಣೆಯಿಂದ 21-00 ಗಂಟೆಗೆ ಹೊರಟೇವು. ನೇರವಾಗಿ ಹನುಮಾನ ಗುಡಿಯ ಹತ್ತಿರ ಸ್ಪಲ್ಪ ದೂರದಲ್ಲಿ 21-10 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪಿನಿಂದ ನಾವು ಎಲ್ಲರು ಇಳಿದು ಅಲ್ಲಿಂದ ಹನುಮಾನ ಗುಡಿಯ ಹತ್ತಿರ ನಡೆದುಕೊಂಡು ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 21-15 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ಮಲ್ಲು ತಂದೆ ಹಣಮಂತ ಚಂಡು ವ|| 30 ಜಾ|| ಕಬ್ಬಲಿಗ ಉ|| ಮಟಕಾ ಬರೆಡುಕೊಳ್ಳುವದು ಸಾ|| ಹಳಿಸಗರ ಶಹಾಪೂರ ಅಂತ ಹೇಳಿದನು. ಈತನ ಹತ್ತಿರ ನಗದು ಹಣ 410-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಮತ್ತು 2 ಮಟಕಾ ಚೀಟಿಗಳು, ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 410-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 21-30 ಗಂಟೆಯಿಂದ 22-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 22-40 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ ದಿನಾಂಕ 15/06/2020 ರಂದು 23-00 ಗಂಟೆಗೆ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 164/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 151/2020 ಕಲಂ: 498(ಎ), 323, 504, 506 ಸಂಗಡ 34 ಐ.ಪಿ.ಸಿ ಮತ್ತು ಕಲಂ. 3, 4 ಡಿ.ಪಿ ಆಕ್ಟ್ 1961 : ಇಂದು ದಿನಾಂಕಃ 15/06/2020 ರಂದು 7-30 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ 2015 ನೇ ಸಾಲಿನ ಎಪ್ರೀಲ್ ತಿಂಗಳಲ್ಲಿ ನಮ್ಮೂರಿನ ಪ್ರಭು ತಂದೆ ಸಿದ್ದಪ್ಪ ದಿವಾನ ಇವನಿಗೆ ಕೊಟ್ಟು ಮದುವೆ ಮಾಡಬೇಕೆಂದು ಮದುವೆ ನಿಶ್ಚಯ ಮಾಡಿದ್ದು, ಮದುವೆ ನಿಶ್ಚಯ ಕಾಲಕ್ಕೆ ವರನಿಗೆ 15 ಗ್ರಾಂ ಬಂಗಾರ, 50,000/- ರೂ.ಗಳು ಹಾಗೂ ಗೃಹ ಉಪಯೋಗಿ ವಸ್ತುಗಳನ್ನು ಕೊಡಿಸುವಂತೆ ವರನ ಕಡೆಯವರು ಇಟ್ಟ ಬೇಡಿಕೆಯಂತೆ ವರದಕ್ಷಿಣೆ ಕೊಡಲು ಒಪ್ಪಿಕೊಂಡು ದಿಃ 08/05/2015 ರಂದು ನನ್ನ ಗಂಡನ ಮನೆಯ ಮುಂದೆ ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ಬಳಿಕ ನನಗೆ ಗಂಡನ ಮನೆಯಲ್ಲಿ 1 ವರ್ಷ ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದು ನಂತರ ನನಗೆ ನನ್ನ ಗಂಡನಾದ 1) ಪ್ರಭು ತಂದೆ ಸಿದ್ದಪ್ಪ ದಿವಾನ, ಮಾವನಾದ 2) ಸಿದ್ದಪ್ಪ ತಂದೆ ಬಸಪ್ಪ ದಿವಾನ, ಅತ್ತೆಯಾದ 3) ಶರಣಮ್ಮ ಗಂಡ ಸಿದ್ದಪ್ಪ ದಿವಾನ ಹಾಗು ಮೈದುನ 4) ಬಸವರಾಜ ತಂದೆ ಸಿದ್ದಪ್ಪ ದಿವಾನ ಇವರೆಲ್ಲರೂ ನನಗೆ ನೀನು ನಮ್ಮ ಮನೆತನಕ್ಕೆ ಒಪ್ಪುವ ಹಾಗೆ ಹಣ, ಬಂಗಾರ ಕೊಟ್ಟಿಲ್ಲಾ, ಇನ್ನೂ 1 ಲಕ್ಷ ರೂಪಾಯಿ ವರದಕ್ಷಿಣೆ ಹಾಗು 5 ತೊಲೆ ಬಂಗಾರ ತರುವಂತೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತ ಬಂದಿರುತ್ತಾರೆ. ಈ ಬಗ್ಗೆ ಕಳೆದ 6 ತಿಂಗಳ ಹಿಂದೆ ನನ್ನ ತಾಯಿ ಹಾಗು ಇಬ್ಬರೂ ಅಣ್ಣಂದಿರಿಗೆ ವಿಷಯ ತಿಳಿಸಿದಾಗ ಅವರು ನನಗೆ ಸಮಾಧಾನ ಮಾಡಿ ಗಂಡನ ಮನೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗು, ನಾವು ಅವರ ಮನೆಗೆ ಬಂದು ಹೇಳುತ್ತೇವೆ ಅಂತ ಬುದ್ಧಿ ಹೇಳಿ ಕಳಿಸಿದರು. ತದನಂತರ 3-4 ದಿನಗಳ ಬಳಿಕ ನನ್ನ ತಾಯಿ ಮತ್ತು ಇಬ್ಬರೂ ಅಣ್ಣಂದಿರು ನಮ್ಮ ಮನೆಗೆ ಬಂದು ನನ್ನ ಗಂಡ, ಮಾವ-ಅತ್ತೆ ಹಾಗು ಮೈದುನ ಇವರಿಗೆ ನಮ್ಮ ಮಗಳಿಗೆ ಸರಿಯಾಗಿ ನೋಡಿಕೊಳ್ಳಿ, ನೀವು ಕೇಳಿದ 1 ಲಕ್ಷ ರೂಪಾಯಿ ಹಾಗು 5 ತೊಲೆ ಬಂಗಾರ ನಮಗೆ ಕೊಡಲು ಆಗುವದಿಲ್ಲ, ಮದುವೆ ಕಾಲಕ್ಕೆ ನೀವು ಕೇಳಿದ ಹಣ, ಬಂಗಾರ ಕೊಟ್ಟಿರುತ್ತೇವೆ ಅಂತಾ ಹೇಳಿದಾಗ, ಅವರು ಹಾಗೋ, ಕೊಡಲಾಗದಿದ್ದರೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿರಿ ಅಂತಾ ಹೆದರಿಸಿರುವದಲ್ಲದೇ ಇಂದು ದಿಃ 15/06/2020 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನು ಅಡಿಗೆ ಮಾಡುತ್ತಿದ್ದಾಗ ಪುನ: ನನ್ನ ಗಂಡ, ಮಾವ-ಅತ್ತೆ ಹಾಗು ಮೈದುನ 4 ಜನರು ಕೂಡಿ ಸೂಳೆ ನೀನು ತವರು ಮನೆಗೆ ಹೋಗಿ ಇನ್ನು 1 ಲಕ್ಷ ರೂಪಾಯಿ ವರದಕ್ಷಿಣೆ ಹಾಗು 5 ತೊಲೆ ಬಂಗಾರ ತರುವಂತೆ ಹೇಳಿದರೂ ತರುತ್ತೀಲ್ಲಾ, ಮನೆ ಬಿಟ್ಟು ಹೋಗು ಅಂತ ಹೇಳಿ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 151/2020 ಕಲಂ. 498(ಎ), 323, 504, 506 ಸಂಗಡ 34 ಐ.ಪಿ.ಸಿ ಮತ್ತು 3, 4 ಡಿ.ಪಿ ಆಕ್ಟ್ 1961 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 104/2020 ಕಲಂ: 279, 337, 338 304(ಎ) ಐಪಿಸಿ : ದಿನಾಂಕ 15.06.2020 ರಂದು ಸಾಯಂಕಾಲ 7.00 ಗಂಟೆ ಸುಮಾರಿಗೆ ಪಿರ್ಯಾಧಿ ಹಾಗೂ ತನ್ನ ಊರಿನ 20-22 ಜನರು ಕೂಡಿ ಬೇಟೆ ಆಡಲು ಬುಲೇರೋ ಜೀಪ ನಂ. ಎಪಿ-22-ವಾಯ್-8798 ನೆದ್ದರಲ್ಲಿ ತೆಲಂಗಾಣಕ್ಕೆ ಹೋಗುತ್ತಿದ್ದಾಗ ರಾತ್ರಿ 11.30 ಗಂಟೆ ಸುಮಾರಿಗೆ ಗುರುಮಠಕಲ ದಾಟಿ ಇಟಕಲ್ ಕ್ರಾಸ ಹತ್ತಿರ ಎದರುಗಡೆ ಬರುತ್ತಿದ್ದ ಒಂದು ಲಾರಿಯನ್ನು ನೋಡಿ ಬುಲೇರೋ ಜೀಪ ಚಾಲಕ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜೀಪ ಹಿಂದಿನಿಂದ ಬಂದ ಲಾರಿ ನಂ. ಎಪಿ-13-ಎಕ್ಸ್-3542 ನೆದ್ದರ ಚಾಲಕ ತನ್ನ ಲಾರಿ ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಇನ್ನೊಂದು ಲಾರಿ ನಂ. ಕೆಎ-35-ಸಿ-3065 ನೆದ್ದಕ್ಕೆ ಡಿಕ್ಕಿಕೊಟ್ಟು ಮತ್ತು ಜೀಪಿಗೆ ಡಿಕ್ಕಿಕೊಟ್ಟಿದ್ದರ ಜೀಪದಲ್ಲಿದ್ದ ಗಾಯಾಳುದಾರರು ರೋಡಿನ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಅಪಘಾತದಲ್ಲಿ ಭಾರಿ ರಕ್ತಗಾಯಗೊಂಡ ಭಿಮಶಪ್ಪ ತಂದೆ ಮಲ್ಲಯ್ಯ ಹಾಗೂ ಡಿಕ್ಕಿಪಡಿಸಿದ ಲಾರಿ ಚಾಲಕ ಇಬ್ಬರೂ ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಪಿರ್ಯಾಧಿ.
Hello There!If you like this article Share with your friend using