ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/06/2020
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ. 13/2020 ಕಲಂ 174 ಸಿ.ಆರ್.ಪಿ.ಸಿ : ದಿನಾಂಕ 05.06.2020 ರಂದು ಫಿರ್ಯಾದಿಯ ಮಗಳಾದ ಶ್ರೀಮತಿ ಲಕ್ಷ್ಮಿ @ ಕವಿತಾ ಇವಳು ತನ್ನ ತವರು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆಕೆ ತೊಟ್ಟ ಬಟ್ಟೆಗೆ ಬೆಂಕಿ ತಾಗಿ ಮೈಯೇಲ್ಲಾ ಸುಟ್ಟು ಉಪಚಾರ ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ಸೇರ್ಪಡೆಯಾಗಿ ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ಸುಟ್ಟ ಗಾಯಗಳಿಂದ ಇಂದು ದಿನಾಂಕ 12.06.2020 ರಂದು ಬೆಳಗಿನ ಜಾವ 1:35 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಆ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ದೂರು ಇರುವುದಿಲ್ಲ ಅಂತಾ ಮೃತಳ ತಂದೆ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಇರುತ್ತದೆ
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ 160/2020. ಕಲಂ 323 324 504 506 ಸಂಗಡ 34 ಐಪಿಸಿ : ಇಂದು ದಿನಾಂಕ: 12/06/2020 ರಂದು 8.00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಅಬ್ದುಲ್ ರಹೀಮ್ ತಂದೆ ಮಹ್ಮದ ತಾಜೋದ್ದಿನ್ ಸಾಃ ಸಗರ(ಬಿ) ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶ ಏನೆಂದರೆ, ದಿನಾಂಕ:08/06/2020 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ನಮ್ಮೂರ ಸೋಪಿಸಾಬ ಸರ್ಮಸ್ತ ದಗರ್ಾದಲ್ಲಿ ನಾನು ಮತ್ತು ನನ್ನ ತಂದೆ ತಾಜೋದ್ದಿನ್ ಇಬ್ಬರು ಇದ್ದಾಗ ಈ ಹಿಂದೆ ನಮ್ಮ ಜೊತೆಯಲಿ ತಕಾರು ಮಾಡಿಕೊಂಡು ಬಂದಿದ್ದ ಸೈಪವುಲ್ಲಾ ಖಾದ್ರಿ ತಂದೆ ಸಮಿವುಲ್ಲಾ ಖಾದ್ರಿ ಮತ್ತು ಅವನ ತಾಯಿ ಶಾಜೀಯಾ ಬೇಗಂ ಗಂಡ ಸಮಿವುಲ್ಲಾ ಖಾದ್ರಿ ಇಬ್ಬರೂ ದಗರ್ಾದಲ್ಲಿ ಬಂದು ಸೈಪವುಲ್ಲಾ ಈತನು ಎಷ್ಟು ವರ್ಷಗಳಿಂದ ನಿವೇ ಮುಜಾವರಾಗಿ ಕೆಲಸ ಮಾಡಿಕೊಂಡು ಬಂದಿದ್ದಿರಿ ಇನ್ನೂ ಮುಂದೆ ನಾಳೆಯಿಂದ ನಾವು ನಿಮಗೆ ದಗರ್ಾದ ಮುಜಾವರಾಗಿ ಕೆಲಸ ಮಾಡಲು ಬಿಡುವುದಿಲ್ಲ ಮುಜಾವರ ಕೆಲಸ ನೀವೆ ಮಾಡಬೇಕು ಅಂತ ಏನಾದರು ಬರೆದುಕೊಟ್ಟಿದ್ದಾರೇನು ಅಂತ ನಮ್ಮ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಗರ್ಾದಿಂದ ಹೊರಗಡೆ ಕಳುಹಿಸುತಿದ್ದಾಗ ನಮ್ಮ ತಂದೆ ಈ ಬಗ್ಗೆ ಊರಲ್ಲಿ ನ್ಯಾಯ ಪಂಚಾಯತಿ ಮಾಡಿದ್ದು, ನಾನು ದಗರ್ಾ ಬಿಟ್ಟು ಹೋಗುವುದಿಲ್ಲ ಅಂತ ಅಂದಿದ್ದಕ್ಕೆ ನಮ್ಮ ತಂದೆಗೆ ಸೈಪವುಲ್ಲಾ ಈತನು ಅಲ್ಲೆ ಬಿದ್ದ ಒಂದು ಹಿಡಿಗಾತ್ರದ ಕಲ್ಲಿನ್ನು ತೆಗೆದುಕೊಂಡು ಹೋಗುವುದಿಲ್ಲಾ ಅಂತಿಯಾ ಮಗನೇ ಅಂತ ಕಲ್ಲಿನಿಂದ ಬೆನ್ನಿಗೆ, ಸೊಂಟಕ್ಕೆ, ಹೊಡೆಯುತಿದ್ದಾಗ ಅವನ ತಾಯಿ ಶಾಜೀಯಾ ಬೇಗಂ ಇವಳು ನಮ್ಮ ತಂದೆಗೆ ಕೈಯಿಂದ ತಲೆಗೆ ಮತ್ತು ಎರಡು ಕಪಾಳಿಗೆ ಹೊಡೆಯುತಿದ್ದಾಗ ನಾನು ಚಿರಾಡುವ ಶಬ್ದ ಕೇಳಿ ದಗರ್ಾದ ಮುಂದೆ ಹೋಗುತಿದ್ದ ನಮ್ಮೂರ ಸೈಯದ ಹಬಿಬುದ್ದಿನ್ ಸರ್ಮಸ್ತ ತಂದೆ ಸೈಯದ ನಜಮುಲ್ಲುದಾ ಸರ್ಮಸ್ತ ಮತ್ತು ಮಹ್ಮದ ವಾಜೀದ ತಂದೆ ಮಹ್ಮದಸಾಬ ಪಾನವಾಲೆ ಇಬ್ಬರೂ ಬಂದು ಜಗಳ ಬಿಡಿಸಿಕೊಂಡರು. ನಂತರ ನಮ್ಮ ತಂದೆಗೆ ನಾಳೆಯಿಂದ ಏನಾದರು ದಗರ್ಾದಲ್ಲಿ ಕಾಲಿಟ್ಟರೆ ನೋಡು ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ಹೋದರು. ಹೋಗುವಾಗ ನಮ್ಮ ತಂದೆಗೆ ಹೊಡೆದ ಕಲ್ಲು ದಗರ್ಾದ ಗೋಡೆಯ ಹತ್ತಿರವೇ ಬಿಸಾಡಿ ಹೋಗಿರುತ್ತಾನೆ. ನಂತರ ಸದರಿ ಜಗಳದ ಸುದ್ದಿ ತಿಳಿದು ನನ್ನ ತಾಯಿ ರಜೀಯಾಬೇಗಂ ಇವರು ಸ್ಥಳಕ್ಕೆ ಬಂದ ನಂತರ ನಾನು ಮತ್ತು ನನ್ನ ತಾಯಿ ಇಬ್ಬರೂ ಕೂಡಿ ನಮ್ಮ ತಂದೆಯನ್ನು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದೇವು. ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ವೈದ್ಯರ ಸಲಹೇ ಮೆರೆಗೆ ಹೆಚ್ಚಿನ ಉಪಚಾರ ಕುರಿತು ಅದೇ ದಿನ ಖಾಸಗಿ ವಾಹನ ಮಾಡಿಕೊಂಡು ಕಲಬುರಗಿಗೆ ಹೋಗಿ ಬಹಮನಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ನಮ್ಮ ತಂದೆಯವರ ಯೋಗಕ್ಷೇಮ ನೋಡಿಕೊಳ್ಳಲು ನಾನು ಮತ್ತು ನಮ್ಮ ತಾಯಿಯವರಿಬ್ಬರೂ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದೆವು. ಸದ್ಯ ನಮ್ಮ ತಂದೆಯವರು ಸ್ವಲ್ಪ ಗುಣಮುಖರಾಗಿದ್ದರಿಂದ ಈ ಬಗ್ಗೆ ನನ್ನ ತಂದೆ ತಾಯಿಯವರ ಜೊತೆ ವಿಚಾರಣೆ ಮಾಡಿ ತಡವಾಗಿ ಇಂದು ಠಾಣೆಗೆ ಹಾಜರಾಗಿ ದೂರು ಸಲ್ಲಿಸುತ್ತಿದ್ದೆನೆ. ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.160/2020 ಕಲಂ 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
Hello There!If you like this article Share with your friend using