ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/06/2020
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 57/2020 279 304(ಎ) ಐಪಿಸಿ & 187 ಐಎಂವಿ ಕಾಯ್ದೆ : ದಿನಾಂಕ:06/06/2020ರಂದು 10.30 ಎ.ಎಮ್ ಗಂಟೆಗೆ ಠಾಣೆಯ ಲಿಂಗನಗೌಡ ಪಿಸಿ-87 ರವರು ಮಾನ್ಯ ಸಿಪಿಐ ಹುಣಸಗಿ ರವರ ಕಾಯರ್ಾಲದಿಂದಾ ಒಂದು ಜ್ಞಾಪನ ಪತ್ರದೊಂದಿ ಮಾನ್ಯ ಜೆ.ಎಂ.ಎಫ್.ಸಿ ಕೋರ್ಟ ಶೋರಾಪುರ ರವರ ಖಾಸಗಿ ದೂರು ನಂ.05/2019 ದಿನಾಂಕ:20/03/2020 ನೇದ್ದನ್ನು ಠಾಣೆಗೆ ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ ಪಿಯರ್ಾದಿ ಗಂಡನಾದ ಮೃತ ರಮೇಶನು ದಿನಾಂಕ:18/11/2017 ರಂದು ಮೋಟಾರ್ ಸೈಕಲ್ ನಂ. ಕೆಎ-33 ಹೆಚ್-8400 ನೇದ್ದರ ಮೇಲೆ ತನ್ನ ಮನೆಯ ಓಪನಿಂಗ್ ಕಾರ್ಡಗಳನ್ನು ಕೊಡಲು ಹೊರಟಾಗ ಹುಣಸಗಿ ಸಮೀಪ್ ಒಂದು ಕೀಮಿ ದೂರು ಇದ್ದಾಗ ರಾತ್ರಿ 9.00 ಗಂಟೆಯ ಸುಮಾರಿಗೆ ಒಂದು ಮೋಟಾರ್ ಸೈಕಲ್ದವನು ಬಂದು ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಮೃತ ರಮೇಶನು ರೋಡಿನ ಮೇಲೆ ಬಿದ್ದಾಗ ತೆಲೆಗೆ ರಕ್ತಗಾಯ, ಬಲಗಾಲ ಮೋಳಕಾಲಿಗೆ, ಎಡಗಾಲಿಗೆ ಗಾಯವಾಗಿದ್ದು, ಗಾಯಾಳುವಿಗೆ ಅಂಬುಲೇನಸ್ ದಲ್ಲಿ ಹುಣಸಗಿ ಸರಕಾರಿ ದವಾಖಾನೆಗೆ ಬಂದು ಉಪಚಾರ ಮಾಡಿಸಿಕೊಂಡು ಹೆಚ್ಚನ ಉಪಚಾರಕ್ಕೆ ಸುರಪುರ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡಿದ್ದು, ನಂತರ ದಿನಾಂಕ:03/12/2017 ರಂದು ಸೋಲಾಪುರ ಮಾರ್ಕಂಡಯ್ಯ ಆಸ್ಪತ್ರೆಯಲ್ಲಿ ಉಪಚಾರಕ್ಕೆಂದು ಸೇರಿಕೆಯಾಗಿ ಉಪಚಾರ ಪಡೆಯುತ್ತಾ ದಿ:11/12/2017 ರಂದು 15.30 ಗಂಟೆಗೆ ದವಾಖಾನೆಯಲ್ಲಿ ರಮೇಶನು ಮೃತಪಟ್ಟಿದ್ದು ಇರುತ್ತದೆ. ಈ ಬಗ್ಗೆ ಮಹಾರಾಷ್ಟ್ರ ಪೊಲೀಸರು ಕೇಸು ಮಾಡಿದ್ದು ಇರುತ್ತದೆ. ನಂತರ ನನ್ನ ಗಂಡ ಸತ್ತ ಚಿಂತೆಯಲ್ಲಿ ನಾನು ಕೂಡಾ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ. ನಂತರ ನಾನು ಈ ಬಗ್ಗೆ ಕೇಸು ಮಾಡಲು ಹುಣಸಗಿ ಪೊಲೀಸ ಠಾಣೆಗೆ ಕೇಸು ಕೊಡಲು ಹೋದಾಗ ನನ್ನ ಕೇಸು ಪಡೆದುಕೊಳ್ಳದೆ ನೀರಾಕರಿಸಿರುತ್ತಾರೆ ಅಂತಾ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು ಇರುತ್ತದೆ
ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 145/2020 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ: 06/06/2020 ರಂದು 1-30 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1) ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 07 ಜನ ಆರೋಪಿತರೊಂದಿಗೆ ಠಾಣೆಗೆ ಬಂದು, ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ಸಾರಾಂಶವೆನಂದರೆ ಇಂದು ದಿನಾಂಕ:06/06/2020 ರಂದು 10 ಎ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ರಂಗಂಪೇಠದ ಬಡೆಮಸೀದಿ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೊಹರ ಹೆಚ್ಸಿ-105 3) ಶ್ರೀ ನಿಂಗಪ್ಪ ಹೆಚ್ಸಿ-118 4) ಮಂಜುನಾಥ ಸಿಪಿಸಿ-271 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಮಹ್ಮದ್ ಗೌಸ್ ತಂದೆ ಮಹ್ಮದ್ ಅಲಿ ದೇವದುರ್ಗ ವ|| 32 ವರ್ಷ ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ರಂಗಂಪೇಠ ಸುರಪುರ 2) ಮೈನೋದ್ದಿನ್ ತಂದೆ ರಾಜ್ ಮಹ್ಮದ್ ಖುರೇಷಿ ವ|| 40 ವರ್ಷ ಜಾ|| ಮುಸ್ಲಿಂ ಉ|| ಚಿಕನ್ ವ್ಯಾಪಾರ ಸಾ|| ತಿಮ್ಮಾಪೂರ ಸುರಪುರ 11 ಎ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 11-15 ಎ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿ ಠಾಣೆಯಿಂದ ಹೊರಟು 11-30 ಎ.ಎಂ ಕ್ಕೆ ರಂಗಂಪೇಠದ ಬಡೆಮಸೀದಿ ಹತ್ತಿರ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಡೆಮಸೀದಿ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 11:45 ಎ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 07 ಜನರು ಸಿಕ್ಕಿದ್ದು ಅವರ ಅವರ ಹೆಸರು, ವಿಳಾಸ ವಿಚಾರಿಸಿದ್ದು 1) ಅಬ್ದುಲ್ ಹಸನ್ ತಂದೆ ಮುನವ ರಹಿಮಾನ ಕೆಮ್ಮನಗಡ್ಡಿ ವ|| 36 ವರ್ಷ ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ತಿಮ್ಮಾಪೂರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 650/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಹಾರುನ್ ತಂದೆ ಮೈಜುದ್ದಿನ್ ಯಲಗರ್ ವ|| 26 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ್ ಸಾ|| ತಿಮ್ಮಾಪೂರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಉಸ್ಮಾನ್ ತಂದೆ ಜಮಸೀರ್ ಮಾಡಗಿಸಾಬ್ ವ|| 27 ವರ್ಷ ಜಾ|| ಮುಸ್ಲಿಂ ಉ|| ಮೆಕ್ಯಾನಿಕ್ ಸಾ|| ತಿಮ್ಮಾಪೂರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 630/- ರೂಗಳು ವಶಪಡಿಸಿಕೊಳ್ಳಲಾಯಿತು. 4) ವಾಸೀಮ್ ತಂದೆ ಮಹ್ಮದ್ ಮುನೀರ್ ಪಾಷಾ ಖಾಜಿ ವ|| 30 ವರ್ಷ ಜಾ|| ಮುಸ್ಲಿಂ ಉ|| ಮೆಕ್ಯಾನಿಕ್ ಸಾ|| ತಿಮ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 700/-ರೂಗಳು ವಶಪಡಿಸಿಕೊಳ್ಳಲಾಯಿತು. 5) ಅಬಿಬ್ ರಹಿಮಾನ್ ತಂದೆ ಅತಾವುರ್ ರಹಿಮಾನ ವಲಿಬು ವ|| 28 ವರ್ಷ ಜಾ|| ಮುಸ್ಲಿಂ ಉ|| ಎಲೆಕ್ಟ್ರೀಶಿಯನ್ ಕೆಲಸ ಸಾ|| ತಿಮ್ಮಾಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 750 ರೂಗಳು ವಶಪಡಿಸಿಕೊಳ್ಳಲಾಯಿತು. 6) ಖಾಜಾ ತಂದೆ ಖಾಜಾಮೈನೋದ್ದಿನ್ ಸೈಯದ್ ವ|| 32 ವರ್ಷ ಜಾ|| ಮುಸ್ಲಿಂ ಉ|| ಟೇಲರ್ ಸಾ|| ತಿಮ್ಮಪೂರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 730/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಫಯಾಜ್ ತಂದೆ ಮಹ್ಮದ್ಸಾಬ್ ಖುರೇಷಿ ವ|| 30 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಕಲೆಸ ಸಾ|| ತಿಮ್ಮಾಪೂರ ಎಂದು ಹೇಳಿದ್ದು, ಇತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಹಣ ಇದಲ್ಲದೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 3000/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 7560/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 11:45 ಎ.ಎಮ್ ದಿಂದ 12:45 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 07 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ 1 ಪಿ.ಎಂ. ಕ್ಕೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲುಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 146/2020 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 06/06/2020 ರಂದು 8:30 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚೇತನ್ ಪಿಎಸ್ಐ(ಕಾ&ಸು-1) ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:06/06/2020 ರಂದು 6 ಪಿ.ಎಮ್. ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ರಂಗಮಪೇಠ್ ಅಂಬೇಡ್ಕರ ಚೌಕ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ನಿಂಗಪ್ಪ ಹೆಚ್.ಸಿ-118 3) ಮನೊಹರ ಹೆಚ್ಸಿ-105 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು 6:15 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 6:30 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0094 ನೇದ್ದರಲ್ಲಿ ಹೊರಟು 6:45 ಪಿ.ಎಮ್ ಕ್ಕೆ ರಂಗಮಪೇಠ್ ಅಂಬೇಡ್ಕರ ಚೌಕ್ ಹತ್ತಿರ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಅಂಬೇಡ್ಕರ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6:50 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಾಸೀಮ್ ತಂದೆ ಮಹ್ಮದ್ ಮುನೀರ್ ಪಾಷಾ ಖಾಜಿ ವ|| 30 ವರ್ಷ ಜಾ|| ಮುಸ್ಲಿಂ ಉ|| ಮೆಕ್ಯಾನಿಕ್ ಸಾ|| ತಿಮ್ಮಾಪುರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 930=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 6:50 ಪಿ.ಎಮ್ ದಿಂದ 7:50 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 70/2020 143, 147, 148, 323, 324, 354, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ: 06/06/2020 ರಂದು 12-30 ಪಿಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಸೌಭಾಗ್ಯಮ್ಮ ಗಂ: ಭೀಮರಾಯ ಹೊಸಮನಿ ಸಾ: ದರ್ಶನಾಪೂರ ಇವಳು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ: 03/06/2020 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡ ಮಾತನಾಡುತ್ತಾ ಕುಳಿತಿದ್ದೇವು. ಆಗ ಹುಡುಗರು ಬವಣೆಯಿಂದ ಕಿಟಕಿಗೆ ಹೊಡೆದಿದ್ದು, ಕಲ್ಲು ಮನೆಯೊಳಗೆ ಬಂದಿದ್ದು, ಆಗ ನಾನು ಮತ್ತು ನನ್ನ ಗಂಡ ಹೊರಗೆ ಬಂದು ಹುಡುಗರಿಗೆ ಯಾಕೆ ಕಲ್ಲು ಹೊಡೆಯುತ್ತೀರಿ ಅಂತಾ ಕೇಳಿದಾಗ ಒಮ್ಮಿಂದೊಮ್ಮಲೇ ಆ ಹುಡುಗರ ಅಣ್ಣಂದಿರರಾದ 1) ವಿಶ್ವ ತಂದೆ ಅಂಬ್ರೇಶ 2) ಸಂಜು ತಂದೆ ಶರಣಪ್ಪ 3) ಬಸವರಾಜ ತಂದೆ ಶರಣಪ್ಪ 4) ಶರಣಪ್ಪ ತಂದೆ ಭೀಮರಾಯ 5) ಮಾನಮ್ಮ ಗಂಡ ಶರಣಪ್ಪ ಇವರೆಲ್ಲರೂ ಕೂಡಿ ಬಂದವರೇ ವಿನಾಕಾರಣ ನಮ್ಮೊಂದಿಗೆ ಜಗಳ ತೆಗೆದು ಅವರಲ್ಲಿ ವಿಶ್ವ ತಂದೆ ಅಂಬ್ರೇಶ ಈತನು ಕೈಯಿಂದ ನನ್ನ ಗಂಡ ಭೀಮರಾಯನಿಗೆ ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದು ಏ ಸೂಳೇ ಮಕ್ಕಳೇ ಏನ್ ಸೆಂಟಾ ಕಿತ್ತುಕೊತರಿ ಎಂದು ಬೈದಿದ್ದು, ಸಂಜು ತಂದೆ ಶರಣಪ್ಪ ಈತನು ಏ ಸುಳೇ ಮಕ್ಕಳೇ ನಿಮ್ಮ ಸೊಕ್ಕು ಬಹಳ ಆಗಿದೆ ಎಂದು ಬೈದು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ಕೈ ಹಿಡಿದು ಜಗ್ಗಾಡಿ ಕಾಲಿನಿಂದ ಮೈಗೆ ಒದ್ದನು. ಬಸವರಾಜು ತಂದೆ ಶರಣಪ್ಪ ಈತನು ಕೂಡಾ ಸೀರೆ ಸೆರಗು ಹಿಡಿದು ಜಗ್ಗಾಡಿ ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿರುತ್ತಾನೆ. ಶರಣಪ್ಪ ತಂದೆ ಭೀಮರಾಯ ಇತನು ಈ ಸೋಳೆ ಮಗಕ್ಕಳದು ಜಾಸ್ತಿಯಾಗಿದೆ ಎಂದು ಅಲ್ಲೇ ಬಿದ್ದಿದ್ದ ಒಂದು ಬಡಿಗೆಯಿಂದ ನನ್ನ ಕಪಾಳಕ್ಕೆ ಎಡಭಾಗಕ್ಕೆ, ಬೆನ್ನಿಗೆ, ಮತ್ತು ಟೊಂಕಕ್ಕೆ ಹೊಡೆದಿದ್ದು, ಆಗ ಮಾನಮ್ಮ ಗಂಡ ಶರಣಪ್ಪ ಇವಳು ನಿನ್ನಿಂದಲೇ ನನ್ನ ಸಂಸಾರ ಕೆಟ್ಟಿದೆ ಎಂದು ಬೈಯುತ್ತಿದ್ದಳು. ತನ್ನ ಮಗಳು ಬೇರೆಯವರೊಂದಿಗೆ ಜೊತೆಗೆ ಓಡಿಹೋಗಿದ್ದು ಇದೇ ವಿಷಯದಿಂದ ವೈಮನಸ್ಸು ಮಾಡಿಕೊಂಡು ನಮಗೆ ದಿನಾಲೂ ಬೈಯುತ್ತಿದ್ದಳು. ಲಕ್ಷ್ಮೀ ಗಂಡ ಅಂಬ್ರೇಶ ಇವಳು ಈ ಚಿಲ್ಯಾ ಸೂಳೆ ಮಗನಿಗೆ ಬಿಡಬ್ಯಾಡರೀ ಜೀವ ಹೊಡೆಯರಿ ಅಂತಾ ಅನ್ನುತ್ತಿದ್ದಾಗ ಆಗ ನಮ್ಮ ಆಜು ಬಾಜು ಮನೆಯವರಾದ ಭೀಮರಾಯ ತಂದೆ ಮರೆಪ್ಪ, ಮರೆಪ್ಪ ತಂದೆ ಜಟ್ಟೆಪ್ಪ ಮತು ಗುಂಡಾಪೂರ ಗ್ರಾಮದ ರಾಜು ತಂದೆ ಬಸವರಾಜು ಇವರು ಜಗಳ ನೋಡಿ ಬಿಡಿಸಿಕೊಂಡರು. ನಂತರ ನಾನು ಮತ್ತು ನನ್ನ ಗಂಡ ಶಹಾಪೂರ ಸರಕಾರಿ ಆಸ್ಪತ್ರೆಗೆ ತೋರಿಸಿಕೊಂಡಿದ್ದು, ನಾನು ಮತ್ತು ನನ್ನ ಗಂಡ ವಿಚಾರ ಮಾಡಿ ಇಂದು ಠಾಣೆಗೆ ಬಂದು ಅಜರ್ಿ ನೀಡುತ್ತಿದ್ದೇನೆ. ಅಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 70/2020 ಕಲಂ, 143, 147, 148, 323, 324, 354, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 71/2020 143, 147, 323, 354, 504, 506, 109, 308 ಸಂಗಡ 149 ಐಪಿಸಿ : ಇಂದು ದಿನಾಂಕ: 06/06/2020 ರಂದು 7-00 ಪಿಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಲಕ್ಷ್ಮೀ ಗಂ: ದಿ:ಅಂಬ್ರೇಶ ಹೊಸಮನಿ ಸಾ: ದರ್ಶನಾಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ: 03/06/2020 ರಂದು ರಾತ್ರಿ 7-30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಇಬ್ಬರು ಹುಡುಗರು (ಮಕ್ಕಳು) ಆಟವಾಡಿ ನಮ್ಮ ಮನೆಯ ಪಕ್ಕದಲ್ಲಿಯೇ ಇರುವ ಪತ್ರಾಸ್ ಹಾಕಿರುವ ಜಾಗದಿಂದ ಹಾದು ಹಿಂದುಗಡೆ ಹೋಗಿರುತ್ತಾರೆ. ಆಗ ನಾನು ಅವರಿಗೆ ಏ ಹುಡುಗರೇ ನೆಲಕ್ಕೆ ಬಿದ್ದೀರಾ ಜೋಕೆ ಎಂದು ಹುಡುಗರಿಗೆ ಹೇಳಿ ಯಥಾಪ್ರಕಾರವಾಗಿ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೇನು. ಅದೇ ಸಮಯಕ್ಕೆ ಭೀಮಪ್ಪ ತಂದೆ ಜಟ್ಟೆಪ್ಪ, ಸೌಭಾಗ್ಯಮ್ಮ ಗಂಡ ಭೀಮಪ್ಪ ಇವರೂ ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ವಿನಾಕಾರಣ ' ಲೇ ಬೊಸುಡಿ ಲಕ್ಷ್ಮೀ ಮನೆಯಲ್ಲಿಯೇ ಬೇರೆ ಮಕ್ಕಳನಿಟ್ಟುಕೊಂಡು ಕುಂತಿದೆಯಾ ಹೊರಗೆ ಬಾ ಎಂದು ಇಬ್ಬರೂ ಬೈಯುತ್ತಿರುವಾಗ ನಾನು ಮನೆಯ ಮುಂದೆ ಹೊರಗಡೆ ಬಂದು ಯಾಕೆ ನೀವು ಯಾರಿಗೆ ಬೈಯುತ್ತಿದ್ದೀರಿ, ಎಂದು ಕೇಳಿದಾಗ ' ಲೇ ರಂಡಿ ನಿನಗೇಲೆ ಆ ಮಕ್ಕಳು ನಿಮ್ಮ ಮನೆಯಲ್ಲಿ ಯಾಕೆ ಇಟ್ಟುಕೊಂಡಿದ್ದೀಯಾ ಹೊರಗಡೆ ಕಳುಹಿಸು ಸೂಳೇ ವಿನಾಕಾರಣ ನನ್ನೊಂದಿಗೆ ಜಗಳ ತೆಗೆದು ಇಬ್ಬರೂ ನನ್ನ ಸೀರೆ ಮತ್ತು ಕೂದಲು ಹಿಡಿದು ಎಳೆದಾಡಿ ಹೊಡೆದಿದ್ದಾರೆ. ಹಾಗೇ ಕೂದಲು ಮತ್ತು ಸೀರೆ ಸೆರಗನ್ನು ಹಿಡಿದು ಎಳೆದಾಡುತ್ತಿರುವಾಗ ಅದೇ ಸಮಯಕ್ಕೆ ಭೀಮಪ್ಪನ ತಮ್ಮನಾದ ಮರೆಪ್ಪ ತಂದೆ ಜೆಟ್ಟೆಪ್ಪಾ, ಮತ್ತು ಅವರ ತಮ್ಮನ ಮಗನಾದ ಬಸವರಾಜ ತಂದೆ ಮರೆಪ್ಪ ಮತ್ತು ತಮ್ಮನ ಹೆಂಡತಿಯಾದ ಶ್ರೀಮತಿ ಶಾಂತಮ್ಮ ಗಂಡ ಮರೆಪ್ಪ ಇವರೆಲ್ಲರೂ ಕೂಡಿಕೊಂಡು ಬಂದು ಕೈಯಿಂದ ಹೊಡೆ ಬಡೆ ಮಾಡಿದ್ದು, ಇವರಲ್ಲಿ ಬಸವರಾಜನು ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ. ಮರೆಪ್ಪ ಮತ್ತು ಶಾಂತಮ್ಮ ಇವರೂ ಕೂಡಾ ನನಗೆ ಸೀರೆ ಸೆರಗು ಮತ್ತು ತಲೆ ಕೂದಲನ್ನು ಹಿಡಿದು ಎಳೆದಾಡಿ ಹೊಡೆಯುತ್ತಿರುವಾಗ ನನ್ನ ಮಗನಾದ ವಿಶ್ವನಾಥ ಈತನು ನೋಡಿ ಬಿಡಿಸಲು ಬಂದಾಗ ಭೀಮಪ್ಪನ ಅಣ್ಣನ ಮಗನಾದ ನಿಂಗಪ್ಪ ತಂದೆ ಬಸಪ್ಪ ಈತನು ನನ್ನ ಮಗನಿಗೆ ಬಿಗಿಯಾಗಿ ಹಿಡಿದುಕೊಂಡಿದ್ದು, ರಾಜೇಂದ್ರ ತಂದೆ ಹಣಮಂತ ಈತನು ಗುಪ್ತಾಂಗಕ್ಕೆ ಜೋರಾಗಿ ಒದ್ದಿದ್ದು, ಆಗ ನನ್ನ ಗಂಡನ ಅಣ್ಣನ ಮಕ್ಕಳಾದ ಬಸವರಾಜ ತಂದೆ ಶರಣಪ್ಪ, ಸಂಜೀವಪ್ಪ ತಂದೆ ಶರಣಪ್ಪ, ಸುರೇಶ ತಂದೆ ಶರಣಪ್ಪ ಮತ್ತು ನಾಗಪ್ಪ ತಂದೆ ಮರೆಪ್ಪ ಇವರು ಜಗಳ ಬಿಡಿಸಿಕೊಂಡರು. ಆಗ ರಾಜೇಂದ್ರ ತಂದೆ ಹಣಮಂತ ಮತ್ತು ಬಸವರಾಜ ತಂದೆ ಮರೆಪ್ಪ ಇವರಿಬ್ಬರೂ ನನ್ನ ಮಗನಿಗೆ ಎಲೇ ಈಶ್ಯಾ ನಿನಗೆ ತಂದೆ ಇಲ್ಲಾ ನಿನ್ನ ತಾಯಿ ಮತ್ತು ನಿನ್ನನ್ನು ಜೀವ ತೆಗೆಯುತ್ತೇವೆ ಮಗನೇ ನಾನು ಕೋಟರ್ಿನಲ್ಲಿ ಕೇಲಸ ಮಾಡುತ್ತೇನೆ ನಾನು ಯಾರಿಗೂ ಅಂಜುವುದಿಲ್ಲಾ ಬೋಸಡಿ ಮಗನೇ ನಾನೇನಾದರೂ ಮನಸ್ಸು ಮಾಡಿದರೆ, ನೀನು ದರ್ಶನಾಪೂರ ಗ್ರಾಮದಲ್ಲಿ ಕಾಲ (ಸಂಸಾರ) ಮಾಡಕ್ಕಾಗುವುದಿಲ್ಲಾ. ಏಕಂದರೆ, ನಮ್ಮ ಕಾಕಾ ದೇವಿಂಧ್ರಪ್ಪ ತಂದೆ ಜಟ್ಟೆಪ್ಪಾ ಎಲ್.ಐ.ಸಿ ಯಲ್ಲಿ ಸಾಕಷ್ಟು ಹಣ ಗಳಿಸಿದ್ದಾನೆ ನಮಗೆ ಬೆಂಬಲವಾಗಿ ಇದ್ದಾನೆ ನೀವೇನೂ ಮಾಡೋಕ್ಕಾಗಲ್ಲ ನಮಗೆ ಕಾಕ ಬೆಂಬಲದಿಂದ ನಿಮ್ಮನ್ನು ಏನಾದರೂ ಮಾಡಲಿಕ್ಕೆ ಹೆಸುವುದಿಲ್ಲಾ. ಏನೂ ಮಾಡಿದರೂ ನಮ್ಮ ದೇವಿಂದ್ರಪ್ಪ ಕಾಕಾ ನಮ್ಮನ್ನು ಕಾಪಾಡುತ್ತಾನೆ. ನಮ್ಮ ಕಾಕಾ ನೀವು ಏನೂ ಮಾಡಿದರೂ ಕೂಡಾ ನಾನು ದಕ್ಕಿಸಿಕೊಳ್ಳುತ್ತೇನೆ ಎಂದು ನಮಗೆ ಹೇಳಿದ್ದಾನೆ. ಅದಕ್ಕಾಗಿ ಮಕ್ಕಳೇ ನಿಮಗೆ ಜೀವದಿಂದ ಹೊಡೆಯುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಜಗಳದಲ್ಲಿ ನನಗೆ ಮತ್ತು ನನ್ನ ಮಗನಿಗೆ ಮೈಗೆ ಒಳಪೆಟ್ಟಾಗಿದ್ದರಿಂದ ನಾವು ಏನೂ ಮಾಡಬೇಕೆಂದು ಗೊತ್ತಾಗದೇ ದವಾಖಾನೆಗೆ ತೋರಿಸಿರುವುದಿಲ್ಲಾ. ಮನೆಯಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ಠಾಣೆಗೆ ಬಂದು ಅಜರ್ಿ ನೀಡುತ್ತಿದ್ದೇನೆ ಅಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 71/2020 ಕಲಂ, 143, 147, 323, 354, 504, 506, 308, 109 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ:110 (ಇ ಮತ್ತು ಜಿ) ಸಿಆರ್ಪಿಸಿ : ದಿನಾಂಕ: 06/06/2020 ರಂದು 8-15 ಎಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಮಹಲರೋಜಾ ಗ್ರಾಮದ ಯಮನೂರಪ್ಪನ ಮುತ್ಯಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಹೊಗಿ ಬರುವ ಜನರೊಂದಿಗೆ ಅಸಬ್ಯ ರೀತಿಯಿಂದ ವರ್ತನೆ ಮಾಡುತ್ತಾ, ಹೆಣ್ಣು ಮಕ್ಕಳಿಗೆ ಬೈಯುತ್ತಾ, ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಹೋಗಿ ಬರುವ ಜನರಿಗೆ ಹೇದರಿಸುವದು ಬೇದರಿಸುವದು ಮಾಡುತ್ತಿರುವುದಾಗಿ ಭಾತ್ಮೀ ಬಂದಿದ್ದು, ನಾನು ಹಾಗೂ ಸಿಬ್ಬಂದಿಯವರಾದ ಪ್ರೇಮಸಿಂಗ್ ಪಿಸಿ-318, ಹಣಮಂತ್ರಾಯ ಪಿಸಿ-331 ರವರೊಂದಿಗೆ ಮಹಲರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಗುಡಿಯ ಹತ್ತಿರ 9-00 ಎಎಮ್ ಕ್ಕೆ ಹೋಗಿ ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಹೋಗಿ ಬರುವ ಜನರೊಂದಿಗೆ ಅಸಭ್ಯ ರೀತಿಯಿಂದ ವರ್ತನೆ ಮಾಡುತ್ತಾ, ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಹೋಗಿ ಬರುವ ಜನರಿಗೆ ಹೆದರಿಸುತ್ತಿರುವುದನ್ನು ಕಂಡು ಸದರಿ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ತಂದೆ ಅಯ್ಯಪ್ಪ ಕೊಂಡಾಪೂರ ಸಾ: ಮಹಲರೋಜಾ ಅಂತಾ ತಿಳಿಸಿದ್ದು, ಸದರಿಯವನನ್ನು ಹೀಗೆ ಬಿಟ್ಟರೆ ಸಾರ್ವಜನಿಕರೊಂದಿಗೆ ತಕರಾರು ಮಾಡಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡುವ ಸಂಬವ ಹೆಚ್ಚಾಗಿ ಕಂಡು ಬಂದಿದ್ದರಿಂದ ಸದರಿಯವನನ್ನು 9-30 ಎ.ಎಂಕ್ಕೆ ದಸ್ತಗಿರಿ ಮಾಡಿಕೊಂಡು ಠಾಣೆಗೆ 10-15 ಎಎಂ.ಕ್ಕೆ ಠಾಣೆಗೆ ಬಂದು ಸದರಿಯವನ ವಿರುದ್ದ ಮುಂಜಾಗೃತ ಕ್ರಮವಾಗಿ ಆರೋಪಿತನ ವಿರುದ್ದ ಠಾಣೆಯ ಪಿ.ಎ.ಆರ್ ನಂ: 04/2020 ಕಲಂ, 110 (ಇ),(ಜಿ) ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using