ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/06/2020

By blogger on ಶುಕ್ರವಾರ, ಜೂನ್ 5, 2020







                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/06/2020 
                                                                                                               
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 80/2020 ಕಲಂ 379, ಐಪಿಸಿ : ಇಂದು ದಿನಾಂಕ. 05.06.2020 ರಂದು ಮಧ್ಯಾಹ್ನ 12-30 ಗಂಟೆಗೆ ಅಜರ್ಿದಾರನು ಠಾಣೆಗೆ ಬಂದು ಗಣಕೀಕೃತ ಅಜರ್ಿ ನೀಡಿದ್ದು ಸಾರಾಂಶವೇನೆಂದರೆ, ನಾನು ದಿನಾಂಕ 13-05-2020 ರಂದು ನನ್ನ ಸ್ನೇಹಿತ ನಾದ ನರೇಶ ತಂದೆ ಈರಪ್ಪ ಪುಜಾರಿ ವ|| 25 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ; ಬಳಿಚಕ್ರ ಈತನೊಂದಿಗೆ ನಮ್ಮೂರಿನಿಂದ ನಮ್ಮ ಹೋಲಕ್ಕೆ ನಿಂಬೆ ಹಣ್ಣು ತರಲು ಹೋಗಿದ್ದು ಡಿ,ಪಿ,ಜೈನ ಕಂಪನಿ ಪಕ್ಕದ ಮುಲ್ಲಾನವರ ಹೊಲದಲ್ಲಿ ನನ್ನ ಈ ಮೋಟರ ಸೈಕಲ ನಿಲ್ಲಿಸಿ ಬೆಳಿಗ್ಗೆ 11-00 ಗಂಟೆಗೆ ಹೋಗಿದ್ದು ಇರುತ್ತದೆ. ನಮ್ಮ ಹೋಲದಿಂದ ನಿಂಬೆಹಣ್ಣು ತೆಗೆದುಕೊಂಡು ಮರಳಿ ಮದ್ಯಾಹ್ನ 03-30 ಗಂಟೆಗೆ ಬಂದು ನೋಡಿದಾಗ ನನ್ನ ಮೋಟರ ಸೈಕಲ ಸ್ಥಳದಲ್ಲಿ ಇರಲಿಲ್ಲಾ. ನಂತರ ನಾನು ಮತ್ತು ನನ್ನ ಸ್ನೇಹಿತ ಡಿ.ಪಿ ಜೈನ ಕಂಪನಿಯಲ್ಲಿ ಕೆಲಸ ಮಾಡುವ ಕಾಮರ್ಿಕರಿಗೆ ವಿಚಾರಿಸಿದಾಗ ಯಾರೋ ಅಪರೀಚಿತ ವ್ಯಕ್ತಿ ಪಲ್ಸರ ಮೋಟರ ಸೈಕಲ ತೆಗೆದುಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾರೆ. ಯಾರೋ ಅಪರಿಚಿತ ಕಳ್ಳರು ದಿನಾಂಕ 13-05-2020 ರಂದು ಬೆಳಿಗ್ಗೆ 11.00 ಗಂಟೆಯಿಂದ ಮದ್ಯಾಹ್ನ 3-30 ಗಂಟೆ ಅವಧಿಯಲ್ಲಿ  ನನ್ನ ಪಲ್ಸರ 150 ಸಿಸಿ ಕಂಪನಿಯ ಎಬೋನಿ ಬ್ಲಾಕ ರೇಡ ಕಲರದ ಮೋಟರ ಸೈಕಲ ನಂ ಕೆ,ಎ-2020 ಟಿ,ಆರ್-2166-ಸಿ ಅಚಿ ಟಿಠ.ಒಆ2ಂ11ಅಙ5ಏಅಎ73937.& ಇಟಿರಟಿಜ ಟಿಠ- ಆಊಙಅಏಊ14745 ಅ||ಕಿ|| 45000/-ರೂ ಕಿಮ್ಮತ್ತಿನ ಸೈಕಲ್ ಮೋಟರ್ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಅಜರ್ಿ ಸಾರಾಂಶ ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 93/2020 ಕಲಂ: 143.147.323.341,504.506 ಸಂಗಡ 149  ಐಪಿಸಿ : ಇಂದು ದಿನಾಂಕ 05/06/2020 ರಂದು ರಾತ್ರಿ 08.30 ಗಂಟೆಗೆ ಪಿರ್ಯಾದಿ ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಚಾಂದಕವಟೆ ವಯಾ|| 55 ಜಾ|| ಗಾಣಿಗ ಉ|| ಒಕ್ಕಲುತನ ಸಾ|| ಕೆಂಭಾವಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ, ನನಗೆ ನಂದಮ್ಮ ಹಾಗು ಶಾಂತಮ್ಮ ಎಂಬ ಎರಡು ಜನ ತಂಗಿಯರಿದ್ದು ಎಲ್ಲರಿಗೂ ಮದುವೆ ಮಾಡಿಕೊಟ್ಟಿದ್ದು ಅಲ್ಲದೇ ನನಗೆ ಯಾವದೇ ಮಕ್ಕಳು ಇಲ್ಲದ ಕಾರಣ ನನ್ನ ಆಸ್ತಿಯಲ್ಲಿ ಇಬ್ಬರು ತಂಗಿಯರಿಗೆ ಸ್ವಲ್ಪ ಆಸ್ತಿ ಕೊಟ್ಟಿದ್ದು ಇರುತ್ತದೆ. ಆದರೆ ನಾನು ನಮ್ಮ ತಂಗಿಯರಿಗೆ ಕೊಟ್ಟ ಆಸ್ತಿಯನ್ನು ನಾನು ಜೀವಂತವಾಗಿ ಇರುವವರೆಗೆ ಯಾರಿಗೂ ಮಾರಾಟ ಮಾಡಕೂಡದು ಅಂತ ವ್ಹೀಲ್ ಬರೆಯಿಸಿಕೊಂಡಿದ್ದು ಇರುತ್ತದೆ. ಆದರೆ ನನ್ನ ತಂಗಿಯಾದ ಶಾಂತಮ್ಮ ಗಂಡ ಚಂದ್ರಶೇಖರ ಮದಗುಣಕಿ ಸಾ|| ಕಕ್ಕಳಮೇಲಿ ಇವಳು ನಾನು ಕೊಟ್ಟ ಆಸ್ತಿಯಲ್ಲಿ ನನಗೆ ಹೇಳದೇ ಕೇಳದೇ ತನ್ನ ಮಕ್ಕಳ ಹೆಸರಿನಲ್ಲಿ ಮಾಡಿ ಬೇರೆಯವರಿಗೆ ಮಾರಾಟ ಮಾಡಲು ಹೊಂಚು ಹಾಕಿದ್ದು  ಅದಕ್ಕೆ ನಾನು ಕೇಳಿದ್ದಕ್ಕೆ ನನ್ನ ಮೇಲೆ ಹಗೆತನ ಸಾದಿಸುತ್ತಿದ್ದಳು. ಹೀಗಿದ್ದು ದಿನಾಂಕ:- 19/05/2020 ರಂದು 11.30 ಎಎಮ್ ಸುಮಾರಿಗೆ ನಾನು ಕೆಂಭಾವಿ ಪಟ್ಟಣದ ಮಾಶಾಬಿ ದಗರ್ಾದ ಹತ್ತಿರ ಹಾದು ಹೋಗುತ್ತಿದ್ದಾಗ ಅದೆ ಸಮಯಕ್ಕೆ  ನಮ್ಮ ತಂಗಿಯಾದ 1] ಶಾಂತಮ್ಮ ಗಂಡ ಚಂದ್ರಶೇಖರ ಮದಗುಣಕಿ ಹಾಗು ಅವರ ಮಗಳಾದ 2]ನಿರ್ಮಲಾ ಗಂಡ ಹಣಮಂತ್ರಾಯ ಮತ್ತು ಮಕ್ಕಳಾದ 3] ಶರಣಪ್ಪ ತಂದೆ ಚಂದ್ರಶೇಖರ ಮದಗುಣಕಿ 4] ಸಿದ್ರಾಮ ತಂದೆ ಚಂದ್ರಶೇಖರ ಮದಗುಣಕಿ 5] ಕವಿತಾ ತಂದೆ ಚಂದ್ರಶೇಖರ ಮದಗುಣಕಿ 6] ಬಾಗಮ್ಮ ತಂದೆ ಚಂದ್ರಶೇಖರ ಮದಗುಣಕಿ ಸಾ|| ಎಲ್ಲರೂ ಕಕ್ಕಳಮೇಲಿ ತಾ|| ಸಿಂದಗಿ ಈ ಎಲ್ಲಾ ಜನರು ಸೇರಿ ನನ್ನ ಹತ್ತಿರ ಬಂದವರೇ ನನ್ನನ್ನು ತಡೆದು ನಿಲ್ಲಿಸಿ ಏನಲೇ ಸೂಳೇ ಮಗನೇ ಮಲ್ಯಾ ನಮ್ಮ ಆಸ್ತಿ ನಾನು ಯಾರಿಗೆ ಬೇಕಾದರೂ ಮಾರುತ್ತೇನೆ ಹಾಗು ಯಾರ ಹೆಸರಿನಲ್ಲಿಯಾದರೂ ಮಾಡುತ್ತೇನೆ ಅದನ್ನು ಕೇಳುವವ ನೀನು ಯಾರು ಅಂತ ಅಂದಾಗ ನಾನು ಜೀವಂತ ಇರುವವರೆಗೂ ನಾನು ಕೊಟ್ಟ ಆಸ್ತಿ ಯಾರಿಗೂ ಮಾರಾಟ ಮಾಡಕೂಡದು ಹಾಗು ಯಾರ ಹೆಸರಿನಲ್ಲಿಯೂ ಮಾಡುವಂತಿಲ್ಲ ಈ ಬಗ್ಗೆ ವ್ಹೀಲ್ ಸಹ ಬರೆದುಕೊಟ್ಟಿದ್ದೀರಿ ಅಂತ ಅಂದಾಗ ಎಲ್ಲರೂ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯ್ದು ಎಲ್ಲರೂ ನನಗೆ ಕೈಯಿಂದ ಹೊಡೆಬಡೆ ಮಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ಶರಣಪ್ಪ ತಂದೆ ಮಹಾಂತಪ್ಪ ಅಂಗಡಿ ಹಾಗು ಮಹಾದೇವಪ್ಪ ಟೇಲರ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ಮಗನೇ ಸದ್ಯಕ್ಕೆ ಇಷ್ಟಕ್ಕೆ ಬಿಟ್ಟಿದ್ದೇವೆ ಮುಂದೆ ನಮ್ಮ ಹೊಲದ ವಿಷಯಕ್ಕೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದ ಮೇಲ್ಕಾಣಿಸಿದ 06 ಜನರ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 93/2020 ಕಲಂ 143.147.323.341.504.506 ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 39/2020 ಕಲಂ: 78 (3) ಕೆ.ಪಿ ಯಾಕ್ಟ್ : ಇಂದು ದಿನಾಂಕ: 05/06/2020 ರಂದು 5:00 ಪಿ.ಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಇಂದು ದಿನಾಂಕ 05/06/2020 ರಂದು 1:30 ಪಿ.ಎಂ ಕ್ಕೆ ನಾರಾಯಣಪೂರ ಗ್ರಾಮದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿ ಇದ್ದಾಗ ನಾರಾಯಣಪೂರ ಗ್ರಾಮದ ಮೌನೇಶ್ವರ ಕ್ಯಾಂಪ ಹತ್ತಿರ ಇರುವ ಕನಕದಾಸ ವೃತ್ತದ ಹತ್ತಿರ  ನಾರಾಯಣಪೂರ ಹುಣಸಗಿ ಮುಖ್ಯ ರಸ್ತೆಯ ಮೆಲೆ ಒಬ್ಬ ವೆಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 39/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. 
      ನಂತರ ಮಾನ್ಯ ಪಿಎಸ್ಐ ಸಾಹೇಬರು 7:30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಆರೋಪಿ ಹಾಗೂ ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 2610/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. 

ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ದೇವರಾಜ ತಂದೆ ಅಮರಪ್ಪ ಹಾದಿಮನಿ ವ:29 ವರ್ಷ ಉ:ಕೂಲಿ ಕೆಲಸ ಜಾ:ಎಸ್.ಸಿ ಸಾ:ನಾರಾಯಣಪೂರ




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!