ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/05/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 69/2020 ಕಲಂ 279, 338, 304(ಎ) ಐಪಿಸಿ: ಇಂದು ದಿನಾಂಕ 28/05/2020 ರಂದು 8-40 ಎ.ಎಂ. ಕ್ಕೆ ಜಿಜಿಎಚ್ ಯಾದಗಿರಿಯಿಂದ ಗಾಯಾಳು ಎಮ್.ಎಲ್.ಸಿ. ಪೋನ ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಸದರಿ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪ ಜೀವನ ಮಾಡುತ್ತೆನೆ, ನನ್ನ ಹಿರಿಯ ಮಗನಾದ ಬಸಪ್ಪ ಇತನ ಮಗಳಾದ ಭವಾನಿ ವಯಾಃ 9 ವರ್ಷ ಇವಳಿಗೆ ಕಾಮಣಿ ಆಗಿದ್ದು ಇರುತ್ತದೆ,
ಹೀಗಿರುವಾಗ ಇಂದು ದಿನಾಂಕ 28/05/2020 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ನನ್ನ ಗಂಡನಾದ ಸಾಬಣ್ಣ ತಂದೆ ಬಾಲಪ್ಪ ಗೌಡರ ಇತನು ನನ್ನ ಮೊಮಗಳಾದ ಭವಾನಿ ಇವಳಿಗೆ ಹಳಗೇರಾ ಗ್ರಾಮಕ್ಕೆ ಕರೆದುಕೊಂಡು ಹೋಗಿ ಕಾಮಣಿ ಔಷಧಿ ಹಾಕಿಸಿಕೊಂಡು ಬರುವ ಸಲುವಾಗಿ ನಮ್ಮ ಟಿ.ವಿ.ಎಸ್ ಎಕ್ಷ್.ಎಲ್. ಮೋಟಾರ ಸೈಕಲ್ ನಂ ಟಿ.ಎಸ್.-06-ಇಟಿ-5690 ನೆದ್ದರ ಮೇಲೆ ಹಿಂದುಗಡೆ ಭವಾನಿ ಇವಳನ್ನು ಕೂಡಿಸಿಕೊಂಡು ಹಳಗೇರಾ ಗ್ರಾಮಕ್ಕೆ ಹೋದರು, ಬೆಳಿಗ್ಗೆ 7-15 ಗಂಟೆಯ ಸುಮಾರಿಗೆ ಆರ್.ಹೊಸಳ್ಳಿ ಗ್ರಾಮದಿಂದ ಯಾರೋ ನಮಗೆ ಪೋನ ಮಾಡಿ ನನ್ನ ಗಂಡನ ಟಿ.ವಿ.ಎಸ್ ಎಕ್ಷ್.ಎಲ್. ಮೋಟಾರ ಸೈಕಲ್ಕ್ಕೆ ಆರ್.ಹೊಸಳ್ಳಿ ಗೇಟಿನ ಹತ್ತಿರ ಒಂದು ಲಾರಿ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ನನ್ನ ಗಂಡನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ಮೊಮ್ಮಗಳಾದ ಭವಾನಿ ಇವಳಿಗೂ ಕೂಡಾ ಭಾರಿ ಗಾಯವಾಗಿರುತ್ತವೆ ಅಂತಾ ತಿಳಿಸಿದ ಮೇರೆಗೆ ಕೂಡಲೇ ನಾನು ಮತ್ತು ನನ್ನ ಮಕ್ಕಳು, ನಮ್ಮ ಗ್ರಾಮದ ನಾರಾಯಣರೆಡ್ಡಿ ತಂದೆ ಅನಂತರೆಡ್ಡಿ ಚಿಂತಾಕರ, ಹಣಮಂತ ತಂದೆ ತಿಪ್ಪಣ್ಣ ಪೂಜಾರಿ ಎಲ್ಲರೂ ಕೂಡಿಕೊಂಡು ನಮ್ಮೂರಿನಿಂದ ಆರ್.ಹೊಸಳ್ಳಿ ಗೇಟ ಹತ್ತಿರ ಬಂದು ನೋಡಲಾಗಿ ನನ್ನ ಗಂಡನ ತಲೆಗೆ ಭಾರಿ ರಕ್ತಗಾಯಗಾವಾಗಿ ತಲೆ ನುಜ್ಜುಗುಜ್ಜಾಗಿ ಮೆದಳು ಹೊರಗಡೆ ಬಂದಿತ್ತು, ಹಾಗೂ ಎರಡು ಕೈಗಳಿಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಸತ್ತಿದ್ದನು, ನನ್ನ ಮೊಮ್ಮಗಳಾದ ಭವಾನಿ ಇವಳಿಗೆ ಉಪಚಾರಕ್ಕೆ ಯಾದಗಿರಿ ಸರಕಾರಿ ಅಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ ಅಂತಾ ಗೋತ್ತಾಯಿತು, ನನ್ನ ಗಂಡನು ಬೆಳಿಗ್ಗೆ ಸುಮಾರು 7-00 ಗಂಟೆಗೆ ಆರ್.ಹೊಸಳ್ಳಿ ಗ್ರಾಮದಿಂದ ಆರ್.ಹೊಸಳ್ಳಿ ಗೇಟಿಗೆ ಬಂದು ಮೇನ ರೋಡ ದಾಟಿ ಆಚೆಗೆ ಹೋಗುವಾಗ ಅದೇ ವೇಳೆಗೆ ಮೈಲಾಪೂರ ಕಡೆಯಿಂದ ಒಂದು ಲಾರಿ ನಂ ಕೆ.ಎಲ್-45-ಎಸ್-7700 ನೆದ್ದರ ಚಾಲಕನು ತನ್ನ ಲಾರಿನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ನನ್ನ ಗಂಡ ಓಡಿಸಿಕೊಂಡು ಹೋಗುತ್ತಿದ್ದ ಟಿ.ವಿ.ಎಸ್ ಎಕ್ಷ್.ಎಲ್. ಮೋಟಾರ ಸೈಕಲ್ಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತವಾಗಿದ್ದರಿಂದ ನನ್ನ ಗಂಡನು ಕೆಳಗಡೆ ಬಿದ್ದಾಗ ನನ್ನ ಗಂಡನ ತಲೆ ಮೇಲೆ ಲಾರಿಯ ಟಾಯರ ಹೋಗಿ ತಲೆ ನಜ್ಜುಗುಜ್ಜು ಆಗಿ ಭಾರಿ ರಕ್ತಗಾಯವಾಗಿ ಮೆದಳು ಹೊರಗಡೆ ಬಂದಿರುತ್ತದೆ, ಎರಡು ಕೈಗಳಿಗೆ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಲಾರಿ ಚಾಲಕನ ಹೆಸರು ಅಖೀಲರಾಜ ತಂದೆ ರಾಜನ್ ಅಂತಾ ಗೋತ್ತಾಗಿರುತ್ತದೆ, ನಂತರ ನಾವೆಲ್ಲರೂ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮೊಮ್ಮಗಳಾದ ಭವಾನಿ ಇವಳ ಹೊಟ್ಟೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿ ಕರಳುಗಳು ಹೊರ ಬಂದಿದ್ದು ಮತ್ತು ಬಲಗಾಲಿಗೆ ಭಾರಿ ರಕ್ತಗಾಯವಾಗಿ ಉಪಚಾರ ಪಡೆಯುತ್ತಿದ್ದಳು, ಅವಳಿಗೆ ಘಟನೆ ಬಗ್ಗೆ ವಿಚಾರಿಸಲಾಗಿ ಮೇಲಿನಂತೆ ಹೇಳಿದಳು, ಈ ಘಟನೆಯು ಲಾರಿ ಚಾಲಕನ ಅಲಕ್ಷತನದಿಂದ ನಡೆದಿದ್ದು ಅವನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 66/2020 ಕಲಂ 279, 338, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 68/2020 ಕಲಂ 279, 337 ಐಪಿಸಿ:ದಿನಾಂಕ 28/05/2020 ರಂದು ರಾತ್ರಿ 1-20 ಗಂಟೆಗೆ ಆರೋಪಿತನು ಅಂಬುಲೆನ್ಸ ವಾಹನ ನಂ ಕೆ.ಎ.-33-ಬಿ-0891 ನೆದ್ದರಲ್ಲಿ ಒಬ್ಬರೋಗಿಯನ್ನು ಕೂಡಿಸಿಕೊಂಡು ಯಾದಗಿರಿಯಿಂದ ರಾಯಚೂರಿಗೆ ಒಯ್ದು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ನಂತರ ಮರಳಿ ರಾಯಚೂರದಿಂದ ಯಾದಗಿರಿಗೆ ಬರುವಾಗ ಮಾರ್ಗಮಧ್ಯ ಮೈಲಾಪೂರ-ರಾಮಸಮುದ್ರ ರೋಡಿನ ಮೇಲೆ ಅಂಬುಲೆನ್ಸ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬರುವಾಗ ಎದುರುಗಡೆ ಕಾಡ ಹಂದಿ ಬಂದಿದ್ದರಿಂದ ಚಾಲಕನು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಅಂಬುಲೆನ್ಸ ಪಲ್ಟಿಯಾಗಿ ಅಪಘಾತವಾಗಿದ್ದು ಚಾಲಕನಿಗೆ ಸಾದಾ ರಕ್ತಗಾಯವಾಗಿರುತ್ತದೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 67/2020 ಕಲಂ 279, 337, 338 ಐಪಿಸಿ:ದಿನಾಂಕ 27/05/2020 ರಂದು ಮಧ್ಯಾಹ್ನ 2-30 ಗಂಟೆಗೆ ವಿರಾಥು ವೆಂಕಟ ಶೇಷéಬಾಬು ತಂದೆ ವಿ ಸತ್ಯ ಹರಿಪ್ರಸಾದ ಮತ್ತು 2)ವಿರಾಥು ಸಾಯಿ ಹರಿಶಿತ ತಂದೆ ವಿರಾಥು ವೆಂಕಟ ಶೇಷéಬಾಬು ಇವರಿಬ್ಬರೂ ಕೂಡಿಕೊಂಡು ರಸ್ತೆ ಕಾಮಗಾರಿ ನೋಡಿಕೊಂಡು ಹೋಗುವ ಕುರಿತು ತಮ್ಮ ವಾಹನ ನಂ ಟಿ.ಎಸ್-13-ಇಎಫ್-2277 ನೆದ್ದರಲ್ಲಿ ಬಳಿಚಕ್ರ ಕ್ಯಾಂಪ ಹತ್ತಿರ ಬಂದು ರಸ್ತೆ ಕಾಮಗಾರಿಯನ್ನು ನೋಡಿಕೊಂಡು ಮರಳಿ ಹೈದ್ರಾಬಾದಕ್ಕೆ ಹೋಗುವಾಗ ಮಾರ್ಗಮಧ್ಯ ಮೈಲಾಪೂರ-ರಾಮಸಮುದ್ರ ರೋಡಿನ ಮೇಲೆ ಎದುರುಗಡೆ ಒಂದು ಕಾರ ನಂ ಕೆ.ಎ-28-ಎನ್-1581 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ತನ್ನ ಸೈಡನ್ನು ಬಿಟ್ಟು ಬಂದು ಡಸ್ಟರ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ವಿರಾಥು ವೆಂಕಟ ಶೇಷéಬಾಬು ತಂದೆ ವಿ ಸತ್ಯ ಹರಿಪ್ರಸಾದ 2)ವಿರಾಥು ಸಾಯಿ ಹರಿಶಿತ ತಂದೆ ವಿರಾಥು ವೆಂಕಟ ಶೇಷéಬಾಬು ಇವರಿಗೆ ಭಾರಿ ರಕ್ತಗಾಯ, ಸಾದಾ ಗಾಯಗಳು ಆಗಿರುತ್ತವೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 94/2020 ಕಲಂ: 304(ಎ) ಐಪಿಸಿ ಮತ್ತು ಕಲಂ: 25, 30 ಆಮ್ಸರ್್ ಆಕ್ಟ್: ಾನು ಶಶೀಕಲಾ ಗಂಡ ವಿಶ್ವನಾಥರೆಡ್ಡಿ ನಾಯ್ಕೋಡಿ ವಯ: 48 ವರ್ಷ ಜಾತಿ: ರೆಡ್ಡಿ ಉದ್ಯೋಗ: ಹೊಲ-ಮನೆ ಕೆಲಸ ಮುಕ್ಕಾಂ: ಮೊಟ್ನಳ್ಳಿ ಗ್ರಾಮ ತಾಲೂಕ :ಜಿಲ್ಲಾ : ಯಾದಗಿರಿ ಕೋರುವುದೆನೇಂದರೆ, ದಿನಾಂಕ 02.04.2020 ರಂದು ನನ್ನ ಗಂಡ ವಿಶ್ವನಾಥರಡ್ಡಿ ನಮ್ಮೂರಿನ ಬೂದೂರೋರ ಹಳ್ಳದ ಕತವಾಕ್ಕೆ ಮೀನು ಹಿಡಿಯಲು ಹೋದಾಗ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ. ಆ ಬಗ್ಗೆ ನಾನು ದಿನಾಂಕ 03.04.2020 ರಂದು ಗುರುಮಠಕಲ್ ಠಾಣೆಯಲ್ಲಿ ದೂರು ಸಲ್ಲಿಸಿದೆ. ಕಳೆದ ಸುಮಾರು ದಿನಗಳಿಂದ ನಮ್ಮೂರಿನ ಜನ ನಾನು ಹೊಲದ ಕಡೆಗೆ ಹೋಗಿ-ಬರುವ ಕಾಲಕ್ಕೆ ನಮ್ಮ ಗ್ರಾಮದ ಕಬ್ಬಲಿಗ ಸಮಾಜದ ತಳವಾರ ಯಂಕಪ್ಪನ ಮಗ ಶಿವಪ್ಪ ಮತ್ತು ಮಲ್ಲೆದೋರ ಚನ್ನಪ್ಪನ ಮಗ ಈರಪ್ಪ ಇಬ್ಬರು ಕೂಡಿ ಕಂಬಾರ ಮೋನಮ್ಮಳ ಹೊಲದಲ್ಲಿದ್ದ ಮಾವಿನ ಗಿಡಗಳನ್ನು ಕಾಯಲಿಕ್ಕೆ ಹೋಗುವ ಕಾಲಕ್ಕೆ ಸಾಯಂಕಾಲ ಕತವಾದ ಹತ್ತಿರ ಚಡ್ಡಿ ಮ್ಯಾಲಿದ್ದ ನನ್ನ ಗಂಡನಿಗೆ ಕೋತಿ ಅಂತಾ ತಿಳಿದು ತುಪಾಕಿ ಹಾರಿಸಿದ್ದಾರೆ ಅಂತಾ ಅಂದಾಡುವುದು ನನ್ನ ಕಿವಿಗೆ ಬಿದ್ದಿತ್ತು. ಇಂದಿಲ್ಲ ನಾಳೆ ಸತ್ಯ ಹೊರ ಬರುತ್ತದೆ ಅಂತಾ ನಾನು ಸುಮ್ಮನಿದ್ದೆ.
ಹೀಗಿದ್ದು ನಿನ್ನೆ ದಿನಾಂಕ 27.05.2020 ರಂದು ಸಾಯಂಕಾಲ ರಾಮಣ್ಣ ತಂದೆ ನರಸಪ್ಪ ಗಾಡಿ ಎಂಬಾತ ನಾನು ಹೊಲದಿಂದ ಮನೆಗೆ ಬರುವಾಗ ನಿಲ್ಲು ಗೌಡ್ತಿ ಅಂದ. ಏನಪ್ಪ ಅಂತಾ ನಾನು ಕೇಳಿದಾಗ ಏನಿಲ್ಲ ಗೌಡ್ತಿ ಮೊನ್ನೆ ತಳವಾರ ಯಂಕಪ್ಪನ ದೊಡ್ಡ ಮಗ ಶಿವಪ್ಪ ನನಗೆ ಊರ ಮುಂದೆ ಸಿಕ್ಕಾಗ ತಾನು ಮತ್ತು ಈರಪ್ಪ ಮಲ್ಲೇದೋರ ಇಬ್ಬರು ಕೂಡಿ ಕಂಬಾರೋರ ಹೊಲದ ಮಾವಿನ ಗಿಡಗಳ ಹತ್ತಿರ ಹೋಗುವ ಕಾಲಕ್ಕೆ ದಿನಾಂಕ 02.04.2020 ರಂದು ಸಾಯಂಕಾಲಕ್ಕೆ 7:15 ಗಂಟೆಯ ಸುಮಾರಿಗೆ ಹಳ್ಳದ ಹತ್ತಿರ ಮಂಗ್ಯಾ ಕುಂತಾದಲೇ ಅದಕ್ಕೆ ಹೊಡಿತಿನಿ ತಾ ಅಂತಾ ಶಿವಪ್ಪನ ಕೈಯಲ್ಲಿದ್ದ ಬಂದೂಕನ್ನು ಈರಪ್ಪ ತೆಗೆದುಕೊಂಡು ಪೈಯರ್ ಮಾಡ್ಯಾನಂತ. ಅವರಿಬ್ಬರು ಕೂಡಿ ಸಮೀಪ ಹೋಗಿ ನೋಡಿದಾಗ ನಾಯ್ಕೋಡಿ ವಿಶ್ವನಾಥರಡ್ಡಿ ಗೌಡ ಇದ್ದ. ಅಂಜಿಕೊಂಡು ಗಿಡಗಳ ಹತ್ತಿರ ಹೋದೆವು ಮುತ್ಯಾ ಯಾರ ಮುಂದೆ ಹೇಳಬ್ಯಾಡ ಅಂತಾ ಶಿವಪ್ಪ ನನಗೆಳಿದ್ದಾನೆ ಅಂತಾ ರಾಮಣ್ಣ ಗಾಡಿ ತಿಳಿಸಿದನು. ಈ ವಿಷಯ ನಾನು ಮನೆಗೆ ಬಂದ ನಂತರ ನನ್ನ ಮಕ್ಕಳಿಗೆ ಮತ್ತು ಮೈದುನನಿಗೆ ತಿಳಿಸಿದೆ. ನನ್ನ ಗಂಡ ವಿಶ್ವನಾಥರಡ್ಡಿಯ ಸಾವಿಗೆ ಕಾರಣರಾದ 1] ಈರಪ್ಪ ತಂದೆ ಚನ್ನಪ್ಪ ಮಲ್ಲೇದೋರ, ಹಾಗೂ 2]ಶಿವಪ್ಪ ತಂದೆ ಯಂಕಪ್ಪ ತಳವಾರ ಇವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ ಅಂತಾ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿದ್ದು ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 09/2020 ಕಲಂ. 174 ಸಿಆರ್ಪಿಸಿ:- ಇಂದು ದಿನಾಂಕ: 28-05-2020 ಸಾಯಂಕಾಲ 06-00 ಗಂಟೆಗೆ ಪಿಯರ್ಾದಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ನಾನು ಈ ಮೇಲಿನ ಹೆಸರು ವಿಳಾಸದ ನೀವಾಸಿಯಾಗಿದ್ದು ನಮ್ಮ ಕುಲಕಸಬಾದ ಬುಟ್ಟಿ ನೆಯುವ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪ ಜೀವನ ಮಾಡಿಕೊಂಡು ಇರುತ್ತೆನೆ. ನನಗೆ 1) ನರಸಮ್ಮ 2) ನಿವಿತಾ@ಹಣಮಂತಿ 3) ಹಣಮಂತ 4) ಸುರೇಶ 5) ನಾಗೇಶ 6) ಬನ್ನಮ್ಮ ಅಂತಾ ಮಕ್ಕಳಿರುತ್ತಾರೆ, ನನ್ನ ದೊಡ್ಡ ಮಗಳಾದ ನರಸಮ್ಮ ಈಕೆಗೆ ಮಾದ್ವಾರ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿರುತ್ತೆವೆ ಇನ್ನೊಬ್ಬ ಮಗಳಾದ ನವಿತಾ@ಹಣಮಂತಿ ಈಕೆಗೆ ಈಡ್ಲೂರ ಗ್ರಾಮದ ಶಂಕ್ರಪ್ಪ ತಂದೆ ಭೀಮರಾಯ ಈತನಿಗೆ ಈಗ್ಗೆ ಸುಮಾರು 3 ವರ್ಷಗಳಿಂದೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಈಗ ನನ್ನ ಮಗಳು ನವಿತಾ@ಹಣಮಂತಿ ಈಕೆಯು ಗಭರ್ೀಣಿಯಾಗಿ ಹೆರಿಗೆಗೆ ಸಮಿಪ ಬಂದಿದ್ದರಿಂದ ಹೆರಿಗೆಗೆ ಅಂತಾ ಆಕೆಯ ಗಂಡನ ಊರಾದ ಈಡ್ಲೂರ ಗ್ರಾಮದಿಂದ ಈಗ 15 ದಿನಗಳಿಂದೆ ಬಳಿಚಕ್ರಕ್ಕೆ ಕರೆದುಕೊಂಡು ಬಂದಿದ್ದೆವು. ದಿನಾಂಕ : 28-05-2020 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ನಾನು ನನ್ನ ಮಗಳು ನವಿತಾ@ ಹಣಮಂತಿ ಇಬ್ಬರು ಮನೆಯಲ್ಲಿ ಇರುವಾಗ ಮನೆಯಲ್ಲಿ ಕುದಿ ಇರುವದರಿಂದ ನನ್ನ ಮಗಳು ಎದ್ದು ಹೋಗಿ ಮನೆಯಲ್ಲಿ ಪ್ಯಾನಿನ ಸ್ವಿಚ್ ವೈರ ಹಾಕಲು ಹೋದಾಗ ಆಕಸ್ಮಿಕವಾಗಿ ಆಕೆಯ ಎರಡು ಕೈಗಳಿಗೆ ಕರೆಂಟ್ ಶಾಕ್ ಹತ್ತಿದ್ದರಿಂದ ನೆಲಕ್ಕೆ ಕುಸಿದು ಬಿದ್ದಳು ಆಗ ನಾನು ಮತ್ತು ನನ್ನ ಮಗ ಹಣಮಂತ ನನ್ನ ಮೈದುನ ರೆಡ್ಡಿ ತಂದೆ ಹಣಮಂತ ಎಲ್ಲರೂ ಕೂಡಿ ಆಕೆಯನ್ನು ವೈದ್ಯಕೀಯ ಉಪಚಾರ ಕುರಿತು ಸೈದಾಪೂರ ಸರಕಾರಿ ಆಸ್ಪತ್ರೆಗೆ ತರುವಾಗ ದಾರಿ ಮದ್ಯದಲ್ಲಿ ನನ್ನ ಮಗಳು ನವಿತಾ@ಹಣಮಂತಿ ಗಂಡ ಶಂಕ್ರಪ್ಪ ವ|| 25 ವರ್ಷ ಉ|| ಮನೆಕೆಲಸ ಸಾ|| ಈಡ್ಲೂರ ಈಕೆಯು ಸಾಯಂಕಾಲ 04-30 ಗಂಟೆಗೆ ಮೃತಪಟ್ಟಿರುತ್ತಾಳೆ ನನ್ನ ಮಗಳ ಮರಣದಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 15/2020 ಕಲಂ 107 ಸಿಆರ್ ಪಿಸಿ:-ನಾನು ಸುವರ್ಣ ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು ದಿನಾಂಕ: 28-05-2020 ರಂದು ಬೆಳಿಗ್ಗೆ 10-00 ಗಂಟೆಗೆ ಹಳ್ಳಿ ಭೇಟಿ ಕುರಿತು ಕೂಡ್ಲೂರ, ಗೌಡಗೇರಾ ಗ್ರಾಮಕ್ಕೆ ಬೇಟಿ ನೀಡಿ ನಂತರ ಮದ್ಯಾಹ್ನ 12-15 ಗಂಟೆಗೆ ಕಿಲ್ಲನಕೇರಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಪೊಲೀಸ ಬಾತ್ಮಿದಾರರ ಮುಖಾಂತರ ಮಾಹಿತಿಯನ್ನು ಸಂಗ್ರಹಿಸಲಾಗಿ ಮಾಹಿತಿ ತಿಳಿದುಬಂದಿದ್ದೆನೆಂದರೆ ಕಬ್ಬಲಿಗಜನಾಂಗದವರು ಮತ್ತು ವಡ್ಡರ ಜನಾಂಗದವರಾದ 1) ಹಳ್ಳೆಪ್ಪ ತಂದೆ ಹಣಮಂತ ದೊತ್ರೆ ವ|| 46 ವರ್ಷ, 2) ಶ್ರೀನಾಥ ತಂದೆ ಭೀಮರಾಯ ದೋತ್ರೆ ವ|| 25 ವರ್ಷ 3) ನಾಗೇಶ ತಂದೆ ತಿರುಪತಿ ದೋತ್ರೆ ವ|| 30 ವರ್ಷ 4) ಭೀಮರಾಯ ತಂದೆ ಯಂಕಯ್ಯ ದೋತ್ರೆ ವ|| 40 ವರ್ಷ, 5) ದೇವಪ್ಪ ತಂದೆ ಹಣಮಂತ ದೋತ್ರೆ ವ|| 20 ವರ್ಷ, 6) ಹಣಮಂತ ತಂದೆ ಹಣಮಂತ ದೋತ್ರೆ ವ|| 44 ವರ್ಷ, 7) ಲೋಕೇಶ ತಂದೆ ಹಣಮಂತ ದೊತ್ರೆ ವ|| 24 ವರ್ಷ 8) ಶರಣಪ್ಪ ತಂದೆ ಭೀಮರಾಯ ವ|| 31 ಎಲ್ಲರೂ ಸಾ|| ಕಿಲ್ಲನಕೇರಾ ಇವರು ವಯಕ್ತಿಕ ವಿಷಯದಲ್ಲಿ ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು ಎರಡು ಜನಾಂಗದವರು ಊರಲ್ಲಿ ಒಬ್ಬರಿಗೊಬ್ಬರು ತಿವ್ರ ವೈಮನಸ್ಸು ಬೆಳಿಸಿಕೊಂಡಿದ್ದು ಇವರು ಊರಲ್ಲಿ ಯಾವ ವೇಳೆಯಲ್ಲಿ ಜಗಳ ಮಾಡಿಕೊಂಡು ಜೀವ ಮತ್ತು ಆಸ್ತಿ ಪಾಸ್ತಿಗೆ ಧಕ್ಕೆ ಉಂಟುಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದು ಸದ್ಯ ಇವರು ಊರಲ್ಲಿ ಶಾಂತಿ ಸುವ್ಯವಸ್ಥಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವದು ಕಂಡು ಬಂದಿದ್ದರಿಂದ ಮರಳಿ 04-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಕಿಲ್ಲನಕೇರಾ ಗ್ರಾಮದ ವಡ್ಡರ ಜನಾಂಗದವರಾದ 1) ಹಳ್ಳೆಪ್ಪ ತಂದೆ ಹಣಮಂತ ದೊತ್ರೆ ವ|| 46 ವರ್ಷ, 2) ಶ್ರೀನಾಥ ತಂದೆ ಭೀಮರಾಯ ದೋತ್ರೆ ವ|| 25 ವರ್ಷ 3) ನಾಗೇಶ ತಂದೆ ತಿರುಪತಿ ದೋತ್ರೆ ವ|| 30 ವರ್ಷ 4) ಭೀಮರಾಯ ತಂದೆ ಯಂಕಯ್ಯ ದೋತ್ರೆ ವ|| 40 ವರ್ಷ, 5) ದೇವಪ್ಪ ತಂದೆ ಹಣಮಂತ ದೋತ್ರೆ ವ|| 20 ವರ್ಷ, 6) ಹಣಮಂತ ತಂದೆ ಹಣಮಂತ ದೋತ್ರೆ ವ|| 44 ವರ್ಷ, 7) ಲೋಕೇಶ ತಂದೆ ಹಣಮಂತ ದೊತ್ರೆ ವ|| 24 ವರ್ಷ 8) ಶರಣಪ್ಪ ತಂದೆ ಭೀಮರಾಯ ವ|| 31 ಎಲ್ಲರೂ ಸಾ|| ಕಿಲ್ಲನಕೇರಾ ತಾ|| ಜಿ|| ಯಾದಗಿರಿ ಇವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪಿಎಆರ್ ನಂ.15/2020 ಕಲಂ. 107 ಸಿಆರ್.ಪಿಸಿ ನೆದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಬರ ಮಾಡಿಕೊಂಡು ಕಲಂ.116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಬರೆಯಿಸಿಕೊಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 16/2020 ಕಲಂ 107 ಸಿಆರ್ ಪಿಸಿ: ನಾನು ಸುವರ್ಣ ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು ದಿನಾಂಕ: 28-05-2020 ರಂದು ಬೆಳಿಗ್ಗೆ 10-00 ಗಂಟೆಗೆ ಹಳ್ಳಿ ಭೇಟಿ ಕುರಿತು ಕೂಡ್ಲೂರ, ಗೌಡಗೇರಾ ಗ್ರಾಮಕ್ಕೆ ಬೇಟಿ ನೀಡಿ ನಂತರ ಮದ್ಯಾಹ್ನ 12-15 ಗಂಟೆಗೆ ಕಿಲ್ಲನಕೇರಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಪೊಲೀಸ ಬಾತ್ಮಿದಾರರ ಮುಖಾಂತರ ಮಾಹಿತಿಯನ್ನು ಸಂಗ್ರಹಿಸಲಾಗಿ ಮಾಹಿತಿ ತಿಳಿದುಬಂದಿದ್ದೆನೆಂದರೆ ವಡ್ಡರಜನಾಂಗದವರು ಮತ್ತು ಕಬ್ಬಲಿಗ ಜನಾಂಗದವರಾದ 1) ರಮೇಶ ತಂದೆ ಸಾಬಣ್ಣ ಬಾವೂರ ವ|| 20 ವರ್ಷ, 2) ದೇವು ತಂದೆ ಲಕ್ಷ್ಮಣ ಅನಪಲ್ಲಿ ವ|| 28 ವರ್ಷ 3) ಹಣಮಂತ ತಂದೆ ಬಸವರಾಜ ವ|| 26 ವರ್ಷ 4) ಪಿಲಿಂಗಪ್ಪ ತಂದೆ ರಾಚಪ್ಪ ಬಾವೂರ ವ|| 22 ವರ್ಷ, 5) ಹಣಮಂತ ತಂದೆ ಬನ್ನಪ್ಪ ವ|| 30 ವರ್ಷ, 6) ಭೀಮರಾಯ ತಂದೆ ಲಕ್ಷ್ಮಣ ವ|| 18 ವರ್ಷ, 7) ರಾಚಪ್ಪ ತಂದೆ ಬನ್ನಪ್ಪ ವ|| 62 ಎಲ್ಲರೂ ಸಾ|| ಕಿಲ್ಲನಕೇರಾ ಇವರು ವಯಕ್ತಿಕ ವಿಷಯದಲ್ಲಿ ವಡ್ಡರ ಜನಾಂಗದವರ ಜೋತೆ ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು ಎರಡು ಜನಾಂಗದವರು ಊರಲ್ಲಿ ಒಬ್ಬರಿಗೊಬ್ಬರು ತಿವ್ರ ವೈಮನಸ್ಸು ಬೆಳಿಸಿಕೊಂಡಿದ್ದು ಇವರು ಊರಲ್ಲಿ ಯಾವ ವೇಳೆಯಲ್ಲಿ ಜಗಳ ಮಾಡಿಕೊಂಡು ಜೀವ ಮತ್ತು ಆಸ್ತಿ ಪಾಸ್ತಿಗೆ ಧಕ್ಕೆ ಉಂಟುಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದು ಸದ್ಯ ಇವರು ಊರಲ್ಲಿ ಶಾಂತಿ ಸುವ್ಯವಸ್ಥಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವದು ಕಂಡು ಬಂದಿದ್ದರಿಂದ ಮರಳಿ 04-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಕಿಲ್ಲನಕೇರಾ ಗ್ರಾಮದ ಕಬ್ಬಲಿಗ ಜನಾಂಗದವರಾದ 1) ರಮೇಶ ತಂದೆ ಸಾಬಣ್ಣ ಬಾವೂರ ವ|| 20 ವರ್ಷ, 2) ದೇವು ತಂದೆ ಲಕ್ಷ್ಮಣ ಅನಪಲ್ಲಿ ವ|| 28 ವರ್ಷ 3) ಹಣಮಂತ ತಂದೆ ಬಸವರಾಜ ವ|| 26 ವರ್ಷ 4) ಪಿಲಿಂಗಪ್ಪ ತಂದೆ ರಾಚಪ್ಪ ಬಾವೂರ ವ|| 22 ವರ್ಷ, 5) ಹಣಮಂತ ತಂದೆ ಬನ್ನಪ್ಪ ವ|| 30 ವರ್ಷ, 6) ಭೀಮರಾಯ ತಂದೆ ಲಕ್ಷ್ಮಣ ವ|| 18 ವರ್ಷ, 7) ರಾಚಪ್ಪ ತಂದೆ ಬನ್ನಪ್ಪ ವ|| 62 ವರ್ಷ 8) ಭೀರಲಿಂಗ ತಂದೆ ನರಸಪ್ಪ ಕುರಬರ ವ|| 24 ವರ್ಷ ಎಲ್ಲರೂ ಸಾ|| ಕಿಲ್ಲನಕೇರಾ ತಾ|| ಜಿ|| ಯಾದಗಿರಿ ಇವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪಿಎಆರ್ ನಂ.16/2020 ಕಲಂ. 107 ಸಿಆರ್.ಪಿಸಿ ನೆದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಬರ ಮಾಡಿಕೊಂಡು ಕಲಂ.116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಬರೆಯಿಸಿಕೊಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ.01/2020 ಕಲಂ 174 ಸಿಆರ್ಪಿಸಿ: ಇಂದು ದಿನಾಂಕ 28/05/2020 ರಂದು 12:00 ಗಂಟೆಗೆ ಪಿಯರ್ಾದಿ ಹಣಮಂತ ತಂದೆ ಗದ್ದೆಪ್ಪ ಡೊಳ್ಳಿ ವ:65 ವರ್ಷ ಉ:ಒಕ್ಕಲುತನ ಜಾ:ಹಿಂದು ಕುರಬರ ಸಾ: ದೇವರಗಡ್ಡಿ ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ. ನನಗೆ ಸಿದ್ದಪ್ಪ ಮತ್ತು ಗದ್ದೆಪ್ಪ ಅಂತಾ ಇಬ್ಬರು ಗಂಡು ಮಕ್ಕಳಿದ್ದು ಸಿದ್ದಪ್ಪನಿಗೆ ನಮ್ಮೂರ ಯಮ್ಮನಮ್ಮಳೊಂದಿಗೆ ಹಾಗೂ ಇನ್ನೊಬ್ಬ ಮಗ ಗದ್ದೆಪ್ಪನಿಗೆ ರೋಡಲಬಂಡಾದ ಶಾಂತಮ್ಮಳೊಂದಿಗೆ ಮದುವೆ ಮಾಡಿದ್ದು ನಾವು ಎಲ್ಲರೂ ಕೂಡಿಯೇ ಇರುತ್ತೇವೆ ನಮ್ಮದು ದೇವರಗಡ್ಡಿ ಸೀಮಾಂತರದ ಸವರ್ೆ ನಂ 61 ರಲ್ಲಿ 5 ಎಕರೆ ಜಮೀನು ಇದ್ದು ಈ ಜಮೀನು ಕೃಷ್ಣಾ ನದಿಯ ಪಕ್ಕದಲ್ಲಿ ಇರುತ್ತದೆ. ನಾವು ಕಳೆದ ವರ್ಷ ನಮ್ಮ ಜಮೀನಿಗೆ ಕೃಷ್ಣಾನದಿಯಿಂದ ನೀರಾವರಿ ಮಾಡುವ ಸಲುವಾಗಿ ನಮ್ಮ ಸಂಬಂದಿಕರಲ್ಲಿ ಸುಮಾರು 5 ಲಕ್ಷ ರೂ ಸಾಲಮಾಡಿಕೊಂಡು ನಮ್ಮ ಜಮೀನಿಗೆ ಕಳೆದ ವರ್ಷ ಕೃಷ್ಣಾನದಿಯಿಂದ ಪೈಪಲೈನ ಮಾಡಿಕೊಂಡಿದ್ದು ಇರುತ್ತದೆ. ನಾನು ನಮ್ಮ ಹೊಲದಲ್ಲಿ ಬಿತ್ತನೆ ಮಾಡುವ ಸಲುವಾಗಿ ವ್ಯವಸಾಯ ಸೇವಾ ಸಹಕಾರ ಸಂಘ ನಾರಾಯಣಪೂರದಲ್ಲಿ 20000/- ರೂ ಬೆಳೆ ಸಾಲ ಪಡೆದುಕೊಂಡು ನಮ್ಮ ಹೊಲಗಳಿಗೆ ತೋಗರಿ ಮತ್ತು ಸೂರ್ಯಕಾಂತಿ ಬೆಳೆಯನ್ನು ಬಿತ್ತಿದ್ದು ಇರುತ್ತದೆ. ಕಳೆದ ವರ್ಷ ಬಂದ ಬಾರಿಮಳೆಗೆ ಕೃಷ್ಣಾ ನದಿಯಿಂದ ಪ್ರವಾಹ ಬಂದು ನಮ್ಮ ಹೊಲದಲ್ಲಿ ಸಂಪೂರ್ಣ ನೀರು ನಿಂತು ಹೊಲದಲ್ಲಿ ಬಿತ್ತಿದ ಬೆಳೆ ಸಂಪೂರ್ಣ ನಾಶವಾಗಿ ಹೋಗಿದ್ದು ಅಲ್ಲದೆ ನಾವು ಕೃಷ್ಣಾ ನದಿಯಿಂದ ಮಾಡಿದ ಪೈಪಲೈನ ಕೃಷ್ಣಾ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ನಮಗೆ ಒಕ್ಕಲುತನದಲ್ಲಿ ಸಂಪೂರ್ಣ ಲುಕ್ಸಾನ ಆಗಿರುತ್ತದೆ. ಇದರಿಂದ ನನ್ನ ಹಿರಿಯ ಮಗ ಸಿದ್ದಪ್ಪನು ನಮ್ಮ ಮನೆಯಲ್ಲಿ ನಮ್ಮ ಮನೆಯವರ ಹತ್ತಿರ ನಾವು ಮಾಡಿದ ಪೈಪಲೈನು ಕೊಚ್ಚಿಕೊಂಡು ಹೋತು ಹಾಗೂ ಬೇಳೆದ ಬೇಳೆ ಪ್ರವಾಹಕ್ಕೆ ಸಂಪೂರ್ಣ ಹಾಳಯಿತು ಹಿಗಾದರೆ ನಾವು ಮಾಡಿದ ಸಾಲ ತಿರಿಸುವದಾದರು ಹೇಗೆ ನಮ್ಮ ಸಂಸಾರ ಯಾಕೆ ಹಿಗಾಯಿತು ಅಂತಾ ಚಿಂತೆ ಮಾಡುತ್ತಾ ಹೇಳುತ್ತಿದ್ದನು ಆಗ ನಮ್ಮ ಮನೆಯವರೆಲ್ಲರೂ ನನ್ನ ಮಗ ಸಿದ್ದಪ್ಪನಿಗೆ ಯಾಕೆ ಚಿಂತೆ ಮಾಡುತ್ತಿಯಾ ನಮಗೆ ಜಮೀನು ಇದೆ ದೇವರು ಅನಕೂಲ ಮಾಡಿದರೆ ನಮ್ಮ ಹೊಲಬೆಳೆದರೆ ಇವತ್ತಲ್ಲ ನಾಳೆ ಸಾಲ ತೀರುತ್ತದೆ ನೀನು ಚಿಂತೆ ಮಾಡಬೇಡ ಅಂತಾ ಹೇಳಿದ್ದೇವು ಆದರೂ ನನ್ನ ಮಗ ಸಿದ್ದಪ್ಪನು ಯಾವಾಗಲು ಸಾಲ ಹೇಗೆ ತಿರಿಸುವದು ಅಂತಾ ಚಿಂತೆ ಮಾಡುತ್ತಾ ಇರುತ್ತದನು.
ನಮ್ಮ ಗ್ರಾಮದಲ್ಲಿ ಮಳೆಯಾಗಿದ್ದು ನಿನ್ನೆ ದಿನ ರಾತ್ರಿ ನಮ್ಮ ಮನೆಯವರೆಲ್ಲರು ಸೇರಿ ಹೊಲವನ್ನು ಬಿತ್ತುವ ವಿಷಯವನ್ನು ಮಾತನಾಡುತ್ತಾ ಇದ್ದಾಗ ನನ್ನ ಹಿರಿಯ ಮಗ ಸಿದ್ದಪ್ಪನು ಮತ್ತೆ ಕಳೆದ ಬಾರಿ ಸಾಲಮಾಡಿ ತಂದು ಹಾಕಿದ ಬಿಜಗೊಬ್ಬರದ ರೊಕ್ಕನೆ ಇನ್ನು ಕೊಟ್ಟಿರುವದಿಲ್ಲ ಈಗ ಮತ್ತೆ ಸಾಲಕೆಳಿದರೆ ಯಾರು ಕೊಡುತ್ತಾರೆ ಅಂತಾ ಚಿಂತೆಮಾಡುತ್ತಾ ಹೇಳಿದ್ದನು ಅವನಿಗೆ ಸಮಾಧಾನ ಮಾಡಿ ರಾತ್ರಿ ಎಲ್ಲರೂ ಕೂಡಿಕೊಂಡು ಊಟಮಾಡಿ ಮಲಗಿಕೊಂಡಿದ್ದೇವು.
ಹೀಗಿದ್ದು ಎಂದಿನಂತೆ ಇಂದು ಮುಂಜಾನೆ 6:00 ಗಂಟೆಯ ಸುಮಾರಿಗೆ ನಮ್ಮ ಮನೆಯವರೆಲ್ಲರೂ ಎದ್ದು ನಮ್ಮ ಗುಡಿಸಲ ಹತ್ತಿರ ಎಲ್ಲರೂ ತಮ್ಮ ತಮ್ಮ ಕೆಲಸ ಮಾಡುತ್ತಿದ್ದಾಗ ನನ್ನ ಹಿರಿಯ ಮಗ ಸಿದ್ದಪ್ಪನು ನಮ್ಮ ಹೊಲದಲ್ಲಿಯೆ ಮೇಲಿನ ಬದುವಿನ ಕಡೆಗೆ ಹೊದನು ನಮ್ಮ ಮನೆಯವರೆಲ್ಲರೂ ಏನಾದರು ಹೊಲದಲ್ಲಿ ಕೆಲಸ ಮಾಡಲು ಹೋಗಿರಬಹುದು ಅಂತಾ ತಿಳಿದು ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಾ ಇದ್ದೇವು ಸುಮಾರು ಹೊತ್ತು ಆದರು ನನ್ನ ಹಿರಿಯ ಮಗ ಸಿದ್ದಪ್ಪನು ಬರಲಿಲ್ಲ ಆಗ ನಾನು ಮತ್ತು ನನ್ನ ಮಗ ಸಿದ್ದಪ್ಪ ಹೆಂಡತಿ ಯಮನಮ್ಮ ಹಾಗೂ ನನ್ನ ಕಿರಿಯ ಮಗ ಗದ್ದೆಪ್ಪ ರವರು ನಮ್ಮ ಹೊಲದ ಮೇಲಿನ ಬದುವಿನ ಕಡೆಗೆ ಹೊದಾಗ ನಮ್ಮ ಹೊಲದಲ್ಲಿಯ ಟೆಂಗಿನ ಗಿಡದ ಕೆಳಗೆ ನನ್ನ ಹಿರಿಯ ಮಗ ಸಿದ್ದಪ್ಪನು ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ಔಷದ ಸೇವನೆ ಮಾಡಿ ಕ್ರಿಮಿನಾಶಕ ಔಷದದ ಡಬ್ಬಿಯನ್ನು ಪಕ್ಕದಲ್ಲಿ ಕೆಡುವಿ ಒದ್ದಾಡುತ್ತಿದ್ದನು ಆಗ ನನ್ನ ಸೊಸೆ ಯಮನಮ್ಮಳು ಚಿರಾಡು ಹತ್ತಿದಾಗ ಗುಡಿಸಲಲ್ಲಿ ಇದ್ದ ನನ್ನ ಹೆಂಡತಿ ಶಾಂತಮ್ಮ ಓಡಿಬಂದಿದ್ದು ನಂತರ ನಾವೇಲ್ಲರೂ ಕೂಡಿ ನನ್ನ ಮಗ ಸಿದ್ದಪ್ಪನನ್ನು ದವಾಖಾನೆಗೆ ಕರೆದುಕೊಂಡು ಹೊಗಬೇಕು ಅಂತಾ ಹೊತ್ತುಕೊಂಡು ನಮ್ಮ ಗುಡಿಸಲ ಹತ್ತಿರ ಬಂದಾಗ ನನ್ನ ಮಗ ಸಿದ್ದಪ್ಪನು ಬಹಳ ತ್ರಾಸಮಾಡಿಕೊಂಡು 8:30 ಗಂಟೆಯ ಸುಮಾರಿಗೆ ಜೀವ ಬಿಟ್ಟನು. ನನ್ನ ಮಗ ಸಿದ್ದಪ್ಪನು ಅಂದಾಜು 7:30 ಗಂಟೆಯ ಸುಮಾರಿಗೆ ಹೊಲದಲ್ಲಿ ಕ್ರಿಮಿನಾಶಕ ಔಷದ ಕುಡಿದರಬಹುದು. ನನ್ನ ಸೊಸೆ ಯಮನಮ್ಮಳು ಈ ವಿಷಯವನ್ನು ಅವರ ಅಣ್ಣನಾದ ಲಕ್ಕಪ್ಪನಿಗೆ ಹೇಳಿದಾಗ ಅವನು ಅಲ್ಲಿಗೆ ಬಂದು ನೋಡಿ ನಂತರ ನನ್ನನ್ನು ಕರೆದುಕೊಂಡು ಇಲ್ಲಿಗೆ ಬಂದಿದ್ದು ಇರುತ್ತದೆ ನನ್ನ ಮಗನ ಮರಣದಲ್ಲಿ ಯಾರಮೇಲೆ ಯಾವುದೆ ಸಂಶಯ ಇರುವದಿಲ್ಲ ನನ್ನ ಮಗನು ನಾವು ಮಾಡಿದ ಸಾಲವನ್ನು ಹೇಗೆ ತಿರಿಸುವದು ಅಂತಾ ಚಿಂತೆ ಮಾಡುತ್ತಾ ಅದೆ ಚಿಂತೆಯಲ್ಲಿ ಹೊಲದಲ್ಲಿ ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ಔಷದವನ್ನು ಸೇವನೆ ಮಾಡಿ ಇಂದು ಮುಂಜಾನೆ 8:30 ಗಂಟೆಗೆ ಮೃತಪಟ್ಟಿದ್ದು ನನ್ನ ಮಗ ಸಿದ್ದಪ್ಪನ ವ: 35 ವರ್ಷ ಈತನ ಶವ ನಮ್ಮ ಹೊಲದಲ್ಲಿಯ ಗುಡಿಸಲ ಹತ್ತಿರ ಇದ್ದು ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್. ನಂ 01/2020 ಕಲಂ 174 ಸಿ ಆರ್ ಪಿ ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using