ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/05/2020

By blogger on ಬುಧವಾರ, ಮೇ 27, 2020







                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/05/2020 
                                                                                                               
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 47/2020 ಕಲಂ 32, 34 ಕೆ ಇ ಆಕ್ಟ:- ಇಂದು ದಿನಾಂಕ.27/05/2020 ರಂದು 7-15 ಪಿಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.27/05/2020 ರಂದು 5-00 ಪಿಎಂ ಸುಮಾರಿಗೆ ಠಾಣೆಯಲ್ಲಿರುವಾಗ ಭಾತ್ಮಿ ಬಂದಿದ್ದೆನೆಂದರೆ, ಯಾದಗಿರಿ ನಗರದ  ಗಾಂಧಿನಗರ ತಾಂಡಾದ ಮನೋಜ್ ರಾಠೋಡ ಈತನ ಮನೆಯ ಹತ್ತಿರ  ಯಾರೋ ಒಬ್ಬನು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯದವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದಿದ್ದು ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಕುರಿತು ಠಾಣೆಯಿಂದ 5-30 ಪಿಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋರಟು  5-45 ಪಿಎಂಕ್ಕೆ ಗಾಂಧಿನಗರ ತಾಂಡಾದ ಮೊಹರಂ ದೇವರು ಕೂಡಿಸುವ ಆಸರಖಾನದ ಹತ್ತಿರ ಜೀಪ ನಿಲ್ಲಿಸಿ ಎಲ್ಲರು ಇಳಿದು ಮುಂದೆ ನಡೆದುಕೊಂಡು ಹೊರಟು ಸೋಮನಾಥ ಚವ್ಹಾಣ ಇವರ ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಮನೋಜ್ ರಾಠೋಡ ಈತನ ಮನೆಯ ಮುಂದೆ ರೋಡಿನ ಮೇಲೆ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತಿದ್ದು ಅವನಿಂದ ಮಧ್ಯದ ಬಾಟಲಿಗಳನ್ನು ಖರೀಧಿಸಿಕೊಂಡು ಹೋಗುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು 6:00 ಪಿಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿಯಬೇಕೆನ್ನುವಷ್ಟರಲ್ಲಿ ಅವನು ನಮ್ಮನ್ನು ನೋಡಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಸದರಿಯವನ ಹೆಸರು ಗೋಪಾಲ ತಂದೆ ಉಮ್ಲಾ ರಾಠೋಡ ವ;55 ಜಾ; ಲಂಬಾಣಿ ಉ; ಕೂಲಿಕೆಲಸ ಸಾ; ಗಾಂದಿನಗರ ತಾಂಡಾ ಯಾದಗಿರಿ ಅಂತಾ ತಿಳಿದು ಬಂದಿದ್ದು ಇರುತ್ತದೆ. ಸ್ಥಳದಲ್ಲಿ ಕಾಟನ ಬಾಕ್ಸದಲ್ಲಿದ್ದ 1) 15 ಕಿಂಗ್ ಫಿಶರ ಸ್ಟ್ರಾಂಗ್ ಬಿಯರ್ 650 ಎಮ್.ಎಲ್ ಒಂದಕ್ಕೆ 145/-ರೂ. ದಂತೆ ಒಟ್ಟು 2175=00 ರೂ. ಕಿಮತ್ತಿನವುಗಳಿದ್ದು ಸದರಿಯವನು ಓಡಿ ಹೋಗಿದ್ದರಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತದೆ. ನಂತರ ಮೇಲ್ಕಂಡ ಮಧ್ಯದ ಬಾಟಲಿಗಳಲ್ಲಿ ಒಂದನ್ನು ಶ್ಯಾಂಪಲ್ಗಾಗಿ ಎಫ್.ಎಸ್.ಎಲ್. ಪರೀಕ್ಷೆ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಉಳಿದ ಎಲ್ಲಾ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಚೀಲದಲ್ಲಿ ಹಾಕಿ ತಾಬೆಗೆ ತೆಗೆದುಕೊಂಡು ಜಪ್ತಿ ಪಂಚನಾಮೆಯನ್ನು 6-00 ಪಿಎಂ ದಿಂದ 7-00 ಪಿಎಂ ದವರೆಗೆ ಮುಗಿಸಿ ಮುಂದಿನ ಕ್ರಮಕ್ಕಾಗಿ ಮುದ್ದೆ ಮಾಲಿನೊಂದಿಗೆ ಠಾಣೆಗೆ 7-15 ಪಿಎಂಕ್ಕೆ  ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.47/2020 ಕಲಂ. 32, 34, ಕೆ.ಇ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 
  
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 92/2020 ಕಲಂ 143, 147, 148 323, 324, 504, 506 ಸಂಗಡ  149 ಐಪಿಸಿ:-ದಿನಾಂಕ 24.05.2020 ರಂದು ಸಂಜೆ 05:00 ಗಂಟೆಗೆ ಫಿರ್ಯಾದಿಯ ಮಗನಾದ ಗಾಯಾಳು ಕಾಂತಪ್ಪನು ಆರೋಪಿ ಲಕ್ಷ್ಮಿ ಈಕೆಯ ಮಗನಾದ ಬಸಪ್ಪನೊಂದಿಗೆ ಗೋಲಿ ಆಟವಾಡುತ್ತಿದ್ದಾಗ ಇಬ್ಬರು ಹುಡುಗರು ಬಾಯಿ ಮಾಡಿಕೊಂಡಿದ್ದು ಅದನ್ನು ನೋಡಿದ ಫಿರ್ಯಾದಿಯು ಬಿಡಿಸಿದ್ದು ಆಗ ಆರೋಪಿ ಲಕ್ಷ್ಮಿ ಈಕೆ ಫಿರ್ಯಾದಿಯೊಂದಿಗೆ ಜಗಳಕ್ಕೆ ಬಿದ್ದಾಗ ಉಳಿದ ಆರೋಪಿತರೆಲ್ಲಾರು ಕೂಡಿ ಅಕ್ರಮ ಕೂಡ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ ಬಡಿಗೆ ಹಿಡಿದುಕೊಂಡು ಬಂದಿದ್ದು ಅದೇ ಕಾಲಕ್ಕೆ ಉಳಿದ ಗಾಯಾಳುದಾರರು ಕೂಡ ಅಲ್ಲಿಗೆ ಬಂದಾಗ ಆರೋಪಿ ಜಗನ್ನಾಥ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಸಣ್ಣರಂಗಪ್ಪನ ಮೈಗೆ ಹೊಡೆ-ಬಡೆ ಮಾಡಿದಾಗ ಫಿರ್ಯಾದಿಯು ನಡುವೆ ಹೋಗಿ ಬಿಡಿಸಲು ಹೋದಾಗ ಆರೋಪಿ ರಾಜೇಶ್ವರಿಯು ಆಕೆಯ ಕೈ ಹಿಡಿದು ಎಳೆದು ಹೊಡೆ-ಬಡೆ ಮಾಡಿದ್ದು ಉಳಿದ ಆರೋಪಿತರು ಉಳಿದವರಿಗೆ ಸುತ್ತುವರೆದು ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 92/2020 ಕಲಂ 143, 147, 148 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 93/2020 ಕಲಂ 279, 337, 338 ಐಪಿಸಿ:- ಇಂದು ದಿನಾಂಕ 27.05.2020 ರಂದು ಬೆಳಿಗ್ಗೆ 9.45 ಗಂಟೆ ಸುಮಾರಿಗೆ ಪಿರ್ಯಾಧಿ ಚಿಂತನಳ್ಳಿ-ಕಂದಕೂರ ರೋಡಿನ ಮೇಲೆ ನಿಂತಾಗ ಮಲ್ಲಿಕಾಜರ್ುನ ಈತನು ತನ್ನ ಮೋಟರ ಸೈಕಲ ನಂ. ಕೆಎ-33-ಎಕ್-6921 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿ ಡಿಕ್ಕಿಕೊಟ್ಟು ಮೋಟರ ಸೈಕಲ ಮೇಲಿಂದ ಬಿದ್ದಿದ್ದರಿಂದ ಪಿರ್ಯಾಧಿಗೆ ಮತ್ತು ಆರೋಪಿಗೆ ಹಾಗೂ ಮೋಟರ ಸೈಕಲ ಹಿಂದೆ ಕುಳಿತ ಗಿರಿಮಲ್ಲಪ್ಪನಿಗೆ ಸಾಧಾ ಮತ್ತು ಗಂಭೀರ ಸ್ವರೂಪದ ರಕ್ತಗಾಯಗಳು ಆದ ಬಗ್ಗೆ ಅಪರಾಧ.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 79/2020 ಕಲಂ. 279,337,338 ಐಪಿಸಿ:-ದಿನಾಂಕ.26.05.2020 ರಂದು ಸಾಯಂಕಾಲ 5-30 ಗಂಟೆಗೆ ರಾಯಚೂರ ಬಾಲಂಕು ಆಸ್ಪತ್ರೆಯಿಂದ ಪೊನ್ ಮೂಲಕ ಎಮ್.ಎಲ್.ಸಿ ಮಾಹಿತಿ ಬಂದಿದ್ದು ಸದರಿ ಆಸ್ಪತ್ರೆಗೆ ಭೆಟಿ ನೀಡಿ ಗಾಯಾಳು ಸಾಬಣ್ಣ ತಂದೆ ಬೀರಪ್ಪ ಬಡಕಪ್ಪನೋರ ಸಾ: ಶೆಟ್ಟಹಳ್ಳಿ ತಾ: ಜಿ: ಯಾದಗಿರಿ ಈತನ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿನಾಂಕ: 26.05.2020 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನಮ್ಮೂರಿನ ಶಿವರಾಜಕುಮಾರ ತಂದೆ ಚಂದ್ರಯ್ಯ ಉಪ್ಪಾರ ಇವರ ಟಮ್. ಟಮ್. ಆಟೋ ನಂ ಕೆ,ಎ- 33.ಎ.-4814 ನೇದ್ದರಲ್ಲಿ ಸೈದಾಪುರಕ್ಕೆ ಸಂತೆ ಮಾಡಲು ಹೋಗುವಾಗ ರಾಚನಳ್ಳಿ ಕ್ರಾಸ ಹತ್ತಿರ ಬುಲೆರೋ ಪಿಕಾಪ್ ಜೀಪ್ ನಂ. ನೋಡಲಾಗಿ ಕೆ.ಎ-33 ಬಿ-0806 ರಾಯಚೂರ ಕಡೆಯಿಂದ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವು ಕುಳಿತುಕೊಂಡಿದ್ದ ಆಟೋಕ್ಕೆ ಡಿಕ್ಕಿಪಡಿಸಿ ಅಪಘಾತಪಡಿಸಿ  ನನ್ನ ಎಡಗಾಲಿನ ಮೋಣಕಾಲಿಗೆ ಭಾರಿ ರಕ್ತಗಾಯವಾಗಿ ಮುರಿದಂತೆ ಕಂಡುಬಂದಿದ್ದು ಮತ್ತು ಮೈಕೈಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಬುಲೆರೋ ಚಾಲಕನ ಹೆಸರು ಶಿವು ತಂದೆ ನವಿರಪ್ಪ ಮೇತ್ರೆ ಸಾ|| ನೀಲಹಳ್ಳಿ ಅಂತಾ ಗೊತ್ತಾಗಿರುತ್ತದೆ. ಮರಳಿ ಠಾಣೆಗೆ ದಿನಾಂಕ. 27.05.2020 ರಂದು ಬೆಳಿಗ್ಗೆ 11-30 ಗಂಟೆಗೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶದ ಮೆಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 79/2020 ಕಲಂ. 279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!