ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/05/2020

By blogger on ಬುಧವಾರ, ಮೇ 20, 2020







                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/05/2020 
                                                                                                              
ಕೊಡೆಕಲ್  ಪೊಲೀಸ ಠಾಣೆ ಗುನ್ನೆ ನಂ:- 41/2020 ಕಲಂ: 188, 270, 504, 323, 332, 353, ಸಂಗಡ 34 ಐಪಿಸಿ:- ಇಂದು ದಿನಾಂಕ:19.05.2020 ರಂದು 8:15 ಪಿಎಮ್ ಕ್ಕೆ  ಪಿರ್ಯಾಧಿ  ಶ್ರೀ.ಭೀಮಾಶಂಕರ ಎಎಸ್ಐ ಕೊಡೇಕಲ್ಲ ಪೊಲೀಸ್ ಠಾಣೆ  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ  ಗಣಕೀಕರಿಸಿಕೊಂಡು ತಂದ ಪಿರ್ಯಾಧಿ  ಅಜರ್ಿಯನ್ನು ಹಾಜರ ಪಡಿಸಿದ್ದು. ಸದರ ಪಿರ್ಯಾಧಿಯ ಅಜರ್ಿಯ ಸಾರಾಂಶವೆನೆಂದರೆ, ನಾನು ಪಿಎಸ್ಐ ಸಾಹೇಬರ ಆದೇಶದ ಮೇರೆಗೆ ಸಮವಸ್ತ್ರದಲ್ಲಿ ಇಂದು ದಿನಾಂಕ:19.05.2020 ರಂದು ಬೆಳಿಗ್ಗೆ 8:30 ಗಂಟೆಗೆ ಹಳ್ಳಿಬೇಟಿ ಮತ್ತು ಠಾಣಾ ವ್ಯಾಪ್ತಿಯ ಕೊರೋನಾ ಕ್ವಾರೆಂಟೈನ್ ಕೇಂದ್ರಗಳ ಬೇಟಿ ಕುರಿತು ಸಿಬ್ಬಂಧಿಯವರಾದ ಹೆಚ್ಸಿ-124 ಅಯ್ಯನಗೌಡ ರವರಿಗೆ ಕರೆದುಕೊಂಡು ಠಾಣೆಯಿಂದ ಹೊರಟು ಬೂದಿಹಾಳ, ಬರದೇವನಾಳ, ಕೊಡೇಕಲ್ಲ, ತೀರ್ಥ, ರಾಜನಕೊಳೂರು ಗ್ರಾಮಗಳಿಗೆ ಬೇಟಿ ನೀಡಿ  4:00 ಪಿಎಮ್ ಕ್ಕೆ ರಾಜನಕೊಳೂರು ಪರತು ನಾಯಕ ತಾಂಡಾದ ಕೊರೋನಾ ಕ್ವಾರೆಂಟೈನ್ ಕೇಂದ್ರ ಇರುವ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿ ನೀಡಿದಾಗ ಕ್ವಾರೆಂಟೈನ್ ಕೇಂದ್ರದ ಉಸ್ತುವಾರಿಯವರಾದ ಪರತುನಾಯಕ ತಾಂಡಾದ ಅಂಗನವಾಡಿ ಕಾರ್ಯಕತರ್ೆಯವರಾದ ರೇಣುಕಾ ಗಂಡ ವಿಠಲ್ ಚವ್ಹಾಣ ರವರು ತಿಳಿಸಿದ್ದೆನೆಂದರೆ ದಿನಾಂಕ:18.05.2020 ರಿಂದ ಕ್ವಾರೆಂಟೈನ್ ಕೇಂದ್ರದಲ್ಲಿರುವ ನಮ್ಮ ತಾಂಡಾದ ವೆಂಕಟೇಶ ತಂದೆ ರಾಮಜೀ ಚವ್ಹಾಣ ಹಾಗೂ ಅವನ ಹೆಂಡತಿ ಅನಸುಬಾಯಿ ಗಂಡ ವೆಂಕಟೇಶ ಚವ್ಹಾಣ ಇವರಿಬ್ಬರೂ ಸಕರ್ಾರದ ಆದೇಶಗಳನ್ನು ಪಾಲಿಸದೇ  ನಮ್ಮ ನ್ಯಾಯಯುತ ಮಾತನ್ನು ಕೇಳದೇ ಕಾರೆಂಟೈನ್ ಕೇಂದ್ರ ಬಿಟ್ಟು ತಮ್ಮಲ್ಲಿರುವ ಕೊರೋನಾ ಸಾಂಕ್ರಾಮಿಕ ರೋಗವನ್ನು ಬೇರೆಯವರಿಗೆ ಹರಡಿಸುವ ದುರುದ್ದೇಶದಿಂದ ಕೇಂದ್ರ ಬಿಟ್ಟು ಹೊರಗಡೇ ಹೋಗಲು ನಿಷೇಧ ಇದ್ದರು ಹೊರಗಡೆ ಹೋಗುವದು ಬರುವದು ಮಾಡುತ್ತಿರುವದಾಗಿ ತಿಳಿಸಿದ್ದು.  ಇದೆ ವಿಷಯಕ್ಕೆ ಸಂಬಂಧಿಸಿದಂತೆ ಪರತು ನಾಯಕ ತಾಂಡಾದ ಸುನೀಲ್ ಕುಮಾರ ತಂದೆ ಲಕ್ಷ್ಮಣ್ ರಾಠೋಡ ರವರು ವೆಂಕಟೇಶನಿಗೆ ನೀನು ಮಹಾರಾಷ್ಟ್ರದಿಂದ ಬಂದಿರುತ್ತಿಯಾ 14 ದಿನ ಕ್ವಾರೆಂಟೈನ್ ನಲ್ಲಿ ಇಟ್ಟಿದ್ದು ತಾಂಡಾದ ಒಳಗಡೆ ತಿರುಗಾಡ ಬೇಡ ಅಂದಿದ್ದಕ್ಕೆ ವೆಂಕಟೇಶ ಅನುಸುಬಾಯಿ, ಜಗದೀಶ ಮತ್ತು ಇವರ ತಾಯಿಯಾದ ಲಕ್ಷ್ಮೀಬಾಯಿ ಇವರೆಲ್ಲರೂ ಅದೇ ತಾಂಡಾದ ಸುನೀಲ್ಕುಮಾರ ತಂದೆ ಲಕ್ಷ್ಮಣ್ ರಾಠೋಡ  ಇತನೊಂದಿಗೆ ಜಗಳ ಮಾಡಿಕೊಂಡಿದ್ದು ಇರುತ್ತದೆ. ಸದರಿ ಕ್ವಾರೆಂಟೈನ್ ಕೇಂದ್ರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ವೆಂಕಟೇಶ ಮತ್ತು ಅವನ ಹೆಂಡತಿ ಅನುಸುಬಾಯಿ ರವರು ಕ್ವಾರೆಂಟೈನ್ ಕೇಂದ್ರದ ಮುಂದಿನ ಅಂಗಳದಲ್ಲಿ ನಿಂತಿದ್ದು. ನಾನು ಅವರ ಹತ್ತಿರ ಹೋಗಿ ನೀವು  14 ದಿನ ಕ್ವಾರೆಂಟೈನ್ ಕೇಂದ್ರದಲ್ಲಿ ಇರುವಂತೆ ಆದೇಶ ಇದ್ದರೂ ಸಹ  ತಾಂಡಾದ ಒಳಗಡೆ ಯಾಕೆ ತಿರುಗಾಡುತ್ತಿರಿ ಅಂತ ಕೇಳಿದ್ದಕ್ಕೆ ವೆಂಕಟೇಶ ಇತನು ನೀನ್ಯಾರು ಕೇಳುವದಕ್ಕೆ ನಾನು ಹೊರಗಡೆ ತಿರುಗಾಡುತ್ತಿನಿ ಅಂದವನೇ ನನ್ನ ಜೋತೆ ಮಾತಿನ ಚಕಮುಕಿಗೆ ಇಳಿದು ನನ್ನನ್ನು ಹೊಡೆಯಲು ಬಂದನು ನಾನು ಅವನನ್ನು ಬಿಗಿಯಾಗಿ ಹಿಡಿದು ಕ್ವಾರೆಂಟೈನ್ ಕೇಂದ್ರಕ್ಕೆ ತರುತ್ತಿರುವಾಗ ನನಗೆ ವೆಂಕಟೇಶನು ಬಲಗೈ ಮೊಳಕೈ ಕೆಳಗೆ ಕಚ್ಚಿ  ರಕ್ತಗಾಯ ಪಡಿಸಿದ್ದು. ಅಲ್ಲಿಯೇ ಇದ್ದ ವೆಂಕಟೇಶನ ತಮ್ಮನಾದ ಜಗದೀಶ ತಂದೆ ರಾಮಜೀ ಚವ್ಹಾಣ ಹಾಗೂ ವೆಂಕಟೇಶನ ತಾಯಿ ಲಕ್ಷ್ಮೀಬಾಯಿ ಗಂಡ ರಾಮಜೀ ಚವ್ಹಾಣ ಮತ್ತು ವೆಂಕಟೇಶನ ಹೆಂಡತಿಯಾದ ಅನುಸುಬಾಯಿ ಇವರು ಅವರ ಜೋತೆಗೆ ಸೇರಿಕೊಂಡು ಅವರಲ್ಲಿಯ ಜಗದೀಶ ಇತನು ತನ್ನ ಅಣ್ಣ ವೆಂಕಟೇಶನ ಪರವಾಗಿ ನನಗೆ ಸೂಳೇ ಮಗನ್ಯಾ ನನ್ನ ಅಣ್ಣ ವೆಂಕಟೇಶ ಮತ್ತು ಅವನ ಹೆಂಡತಿ ಅನುಸುಬಾಯಿ ರವರಿಗೆ ಅಲ್ಲಿ ಇರು ಇಲ್ಲಿ ಇರು ಅಂತ ಹೇಳಲಿಕ್ಕೆ ನೀನ್ಯಾರು  ಅಂತ ಅಂದವನೇ ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಎಡಗಣ್ಣಿನ ಕೆಳಭಾಗದಲ್ಲಿ ಹೊಡೆದಿದ್ದು ಇದರಿಂದ ನನ್ನ ಎಡಗಣ್ಣಿನ ಕೆಳಬಾಗದಲ್ಲಿ ತೆರೆಚಿದ ಗಾಯವಾಗಿ ಬಾವು ಬಂದಿದ್ದು. ವೆಂಕಟೇಶನ ಹೆಂಡತಿಯಾದ ಅನುಸುಬಾಯಿ ಗಂಡ ವೆಂಕಟೇಶ ಚವ್ಹಾಣ ಮತ್ತು ಲಕ್ಷ್ಮೀಬಾಯಿ ಗಂಡ ರಾಮಜೀ ಚವ್ಹಾಣ ಇವರಿಬ್ಬರೂ ನನ್ನ ಮೈಮೇಲಿನ ಸಮವಸ್ತ್ರದ ಶರ್ಟನ್ನು ಹಿಡಿದು ಎಳೆದಾಡುತ್ತಿರುವಾಗ ನನ್ನಜೊತೆ ಇದ್ದ ಸಿಬ್ಬಂಧಿ ಅಯ್ಯನಗೌಡ ಸಿಹೆಚ್ಸಿ-124 ರವರು ಬಿಡಿಸಲು ಬಂದಾಗ ಆತನಿಗೂ ಕೂಡಾ ವೆಂಕಟೇಶನ ಹೆಂಡತಿಯಾದ ಅನುಸುಬಾಯಿ ಗಂಡ ವೆಂಕಟೇಶ ಚವ್ಹಾಣ ಮತ್ತು ಲಕ್ಷ್ಮೀಬಾಯಿ ಗಂಡ ರಾಮಜೀ ಚವ್ಹಾಣ ಇವರಿಬ್ಬರೂ ಸಮವಸ್ತ್ರ ಹಿಡಿದು ಎಳೆದಾಡುತ್ತಿರುವಾಗ ಕ್ವಾರೆಂಟೈನ್ ಕೇಂದ್ರದ ಸಿಬ್ಬಂಧಿಯವರಾದ ಗುರುಬಾಯಿ ಗಂಡ ಮೋಹನ ರಾಠೋಡ (ಆಶಾ ಕಾರ್ಯಕತರ್ೆ) ಹಾಗೂ ನಾಗಪ್ಪ ತಂದೆ ಮಲ್ಲಪ್ಪ ಸುರಪೂರ (ಕ್ವಾರೆಂಟೈನ್ ಕೇಂದ್ರದ ಸಿಬ್ಬಂಧಿ) ರವರು  ಹಾಗೂ ಅಲ್ಲಿಯೇ ಇದ್ದ ಪರತುನಾಯಕ ತಾಂಡಾದ ಜೀತಾಲಾಲ ತಂದೆ ಕಸ್ತೂರೆಪ್ಪ ರಾಠೋಡ, ಗೋಪಿಲಾಲ ತಂದೆ ಯಮನಪ್ಪ ಚವ್ಹಾಣ, ಗುರುನಾಥ ತಂದೆ ಚಂದಪ್ಪ ಚವ್ಹಾಣ, ತುಕರಾಮ ತಂದೆ ವಾಲಪ್ಪ ಚವ್ಹಾಣ, ತಿರುಪತಿ ಧರ್ಮಣ್ಣ ಚವ್ಹಾಣ ರವರು ನೋಡಿ ಬಿಡಿಸಿದ್ದು ಇರುತ್ತದೆ. ನಂತರ ನನಗೆ ಹೆಚ್ಸಿ-124 ರವರು ರಾಜನಕೊಳೂರು ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು. ನಾನು  ಉಪಚಾರ ಹೊಂದಿ ಈಗ ಬಂದು ದೂರು ಕೊಡುತ್ತಿದ್ದು. ಮೇಲೆ ನಮೂದಿಸಿದ ನಾಲ್ಕು ಜನ ಆರೋಪಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಅಂತ  ಪಿರ್ಯಾಧಿಯ ಅಜರ್ಿಯ  ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:41/2020 ಕಲಂ: 188 270 504 323 332 353 ಖ/ತಿ 34   ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.



ಕೊಡೆಕಲ್  ಪೊಲೀಸ ಠಾಣೆ ಗುನ್ನೆ ನಂ:- 42/2020 ಕಲಂ: 269, 270 ಸಂಗಡ 34 ಐಪಿಸಿ:- ಇಂದು ದಿನಾಂಕ:20.05.2020 ರಂದು 10:00 ಎಎಮ್ ಕ್ಕೆ  ಪಿರ್ಯಾಧಿ  ಶ್ರೀ. ನಾಗಪ್ಪ ತಂದೆ ಮಲ್ಲಪ್ಪ ಸುರಪೂರ ವ:35 ವರ್ಷ ಜಾ: ಕುರುಬರ ಉ: ಬಿಲ್ ಕಲೆಕ್ಟರ್ ಗ್ರಾಮ ಪಂಚಾಯತಿ ರಾಜನಕೊಳುರು ತಾ:ಹುಣಸಗಿ  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ  ಗಣಕೀಕರಿಸಿಕೊಂಡು ತಂದ ಪಿರ್ಯಾಧಿ  ಅಜರ್ಿಯನ್ನು ಹಾಜರ ಪಡಿಸಿದ್ದು. ಸದರ ಪಿರ್ಯಾಧಿಯ ಅಜರ್ಿಯ ಸಾರಾಂಶವೆನೆಂದರೆ, ನಾನು ರಾಜನಕೊಳೂರು ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಅಂತಾ ಕೆಲಸ ಮಾಡುತ್ತಿದ್ದು. ನಮ್ಮ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು ಬಾಲಕೃಷ್ಣ  ಶೆಳ್ಳಗಿ ರವರು ಇದ್ದು ಇವರು ಸಕರ್ಾರದ ಆದೇಶದಂತೆ ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದ ಕೂಲಿ ಕಾಮರ್ಿಕರು ಮರಳಿ ತಮ್ಮ-ತಮ್ಮ ಊರುಗಳಿಗೆ ಬರುತ್ತಿರುವದಿಂದ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರು ಹೆಚ್ಚಿರು ಇರುವ ಕಾರಣ ಈ ವಲಸೆ ಕಾಮರ್ಿಕರಿಂದ ಕೊರೋನಾ ರೋಗವು ಬೇರೆ ಜನರಿಗೆ ಹರಡಬಾರದು ಅಂತ ಉದ್ದೇಶದಂತೆ ಕ್ವಾರೆಂಟೈನ್ಗಳನ್ನು ಮಾಡಿದ್ದು ಅದರಂತೆ ದಿನಾಂಕ:17.05.2020 ರಂದು ರಾಜನಕೊಳೂರು ಪರತು ನಾಯಕ ತಾಂಡಾದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ವಾರೆಂಟೈನ್ ಮಾಡಿದ್ದು ದಿನಾಂಕ:18.05.2020 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಪರತು ನಾಯಕ ತಾಂಡಾದ ವೆಂಕಟೇಶ ತಂದೆ ರಾಮಜೀ ಚವ್ಹಾಣ ಇತನು ತನ್ನ ಹೆಂಡತಿ ಅನುಸುಬಾಯಿ ಹಾಗೂ ಇಬ್ಬರೂ ಮಕ್ಕಳೊಂದಿಗೆ ಪರತು ನಾಯಕ ತಾಂಡಕ್ಕೆ ಬಂದಿದ್ದು. ಇವರನ್ನು ದಿನಾಂಕ:18.05.2020 ರಂದು ಕ್ವಾರೆಂಟೈನ್ ಮಾಡಿದ್ದು ಇರುತ್ತದೆ.
  ನಾನು ನಮ್ಮ ಪಂಚಾಯತಿಯ ಪಿಡಿಓ ರವರ ಆದೇಶದಂತೆ ಪರತುನಾಯಕ ತಾಂಡಾದಲ್ಲಿ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿದ ಕ್ವಾರೆಂಟೈನ್ ಕೇಂದ್ರದ ಕರ್ತವ್ಯದಲ್ಲಿದ್ದು ನನ್ನಂತೆ ಈ ಕೇಂದ್ರದಲ್ಲಿ ರೇಣುಕಾ ಗಂಡ ವಿಠಲ್ ಚವ್ಹಾಣ, (ಅಂಗನವಾಡಿ ಕಾರ್ಯಕತರ್ೆ) ಹಾಗೂ ಗುರುಬಾಯಿ ಗಂಡ ಮೋಹನ್ ರಾಠೋಡ  (ಆಶಾ ಕಾರ್ಯಕತರ್ೆ) ರವರು ಈ ಕ್ವಾರೆಂಟೈನ್ ಕೇಂದ್ರದಲ್ಲಿ ಕರ್ತವ್ಯದ ಮೇಲಿದ್ದು.  ಹೀಗಿದ್ದು ದಿನಾಂಕ:18.05.2020 ರಿಂದ ರಾಜನಕೊಳುರು ಪರತುನಾಯಕ ತಾಂಡಾದ ಕ್ವಾರೆಂಟೈನ್ ಕೇಂದ್ರದಲ್ಲಿ ಇರುವ ಪರತು ನಾಯಕ ತಾಂಡಾದ  ವೆಂಕಟೇಶ ತಂದೆ ರಾಮಜೀ ಚವ್ಹಾಣ ಹಾಗೂ ಆತನ ಹೆಂಡತಿ ಅನುಸುಬಾಯಿ ಗಂಡ ವೆಂಕಟೇಶ ರವರು ಸಕರ್ಾರದ ಆದೇಶಗಳನ್ನು ಪಾಲಿಸದೇ  ನಮ್ಮ ನ್ಯಾಯಯುತ ಮಾತನ್ನು ಕೇಳದೇ ಕಾರೆಂಟೈನ್ ಕೇಂದ್ರ ಬಿಟ್ಟು ತಮ್ಮಲ್ಲಿರುವ ಕೊರೋನಾ ಸಾಂಕ್ರಾಮಿಕ ರೋಗವನ್ನು ಬೇರೆಯವರಿಗೆ ಹರಡಿಸುವ ದುರುದ್ದೇಶದಿಂದ ಕೇಂದ್ರ ಬಿಟ್ಟು ಹೊರಗಡೇ ಹೋಗಲು ನಿಷೇಧ ಇದ್ದರು ಹೊರಗಡೆ ಹೋಗುವದು ಬರುವದು ಮಾಡುತ್ತಿದ್ದು ನಾವು ಅವರಿಗೆ ಈಗೆಲ್ಲಾ ಮಾಡುವದು ಸರಿಯಲ ನೀವು ಮಹಾರಾಷ್ಟ್ರದಿಂದ ಬಂದಿರುತ್ತೀರಿ 14 ದಿನ ಕ್ವಾರೆಂಟೈನ್ ನಲ್ಲಿ ಇಟ್ಟಿದ್ದು ತಾಂಡಾದ ಒಳಗಡೆ ತಿರುಗಾಡ ಬಾರದು ಅಂತ ಹೇಳಿದ್ದು ಅದರೂ ಕೂಡಾ ನಿನ್ನೆ ದಿನಾಂಕ:19.05.2020 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ವೆಂಕಟೇಶ ತಂದೆ ರಾಮಜೀ ಚವ್ಹಾಣ ಹಾಗೂ ಆತನ ಹೆಂಡತಿ ಅನುಸುಬಾಯಿ ಗಂಡ ವೆಂಕಟೇಶ ರವರು ಸಕರ್ಾರದ ಆದೇಶಗಳನ್ನು ಪಾಲಿಸದೇ  ನಮ್ಮ ನ್ಯಾಯಯುತ ಮಾತನ್ನು ಕೇಳದೇ ಕಾರೆಂಟೈನ್ ಕೇಂದ್ರ ಬಿಟ್ಟು ತಮ್ಮಲ್ಲಿರುವ ಕೊರೋನಾ ಸಾಂಕ್ರಾಮಿಕ ರೋಗವನ್ನು ಬೇರೆಯವರಿಗೆ ಹರಡಿಸುವ ದುರುದ್ದೇಶದಿಂದ ಕೇಂದ್ರ ಬಿಟ್ಟು ಹೊರಗಡೇ ಹೋಗಲು ನಿಷೇಧ ಇದ್ದರು ಕ್ವಾರೆಂಟೈನ್ ಕೇಂದ್ರದ ಕಂಪೌಂಡ ಗೋಡೆಯನ್ನು ಹಾರಿ ಹೋಗುತ್ತಿರುವಾಗ ನಾನು ಮತ್ತು ರೇಣುಕಾ ಗಂಡ ವಿಠಲ್ ಚವ್ಹಾಣ (ಅಂಗನವಾಡಿ ಕಾರ್ಯಕತರ್ೆ) ಮತ್ತು ಗುರುಬಾಯಿ ಗಂಡ ಮೋಹನ್ ರಾಠೋಡ ಆಶಾ ಕಾರ್ಯಕತರ್ೆ ರವರು ಅವರಿಗೆ  ಹಿಡಿದು ತಂದು ಪುನಃ  ಕ್ವಾರೆಂಟೈನ್ ಕೇಂದ್ರದಲ್ಲಿ ಇಟ್ಟಿದ್ದು ಕಾರಣ ಸದರಿ ಇಬ್ಬರೂ ಸಕರ್ಾರದ ಆದೇಶವನ್ನು ಪಾಲಿಸದೇ  ನಮ್ಮ ನ್ಯಾಯಯುತ ಮಾತನ್ನು ಕೇಳದೇ ಕಾರೆಂಟೈನ್ ಕೇಂದ್ರ ಬಿಟ್ಟು ತಮ್ಮಲ್ಲಿರುವ ಕೊರೋನಾ ಸಾಂಕ್ರಾಮಿಕ ರೋಗವನ್ನು ಬೇರೆಯವರಿಗೆ ಹರಡಿಸುವ ದುರುದ್ದೇಶದಿಂದ ಕೇಂದ್ರ ಬಿಟ್ಟು ಹೊರಗಡೇ ಹೋಗಲು ನಿಷೇಧ ಇದ್ದರು ಹೊರಗಡೆ ಹೋಗಿದ್ದು ಕಾರಣ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ  ಪಿರ್ಯಾಧಿಯ ಅಜರ್ಿಯ  ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:42/2020 ಕಲಂ: 269, 270 ಖ/ತಿ 34   ಕಅ  ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.



ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 45/2020 ಕಲಂ 457, 380 ಐಪಿಸಿ:-ಫಿಯರ್ಾದಿ ಸಾರಾಂಶವೇನೆಂದರೆ, ಯಾದಗಿರಿ ನಗರದ ಭವಾನಿ ನಗರದಲ್ಲಿ ಅಂದರೆ, ಲಕ್ಕಿ ನಗರದ ಎದುರುಗಡೆ ಇರುವ ಏರಿಯಾದಲ್ಲಿ ನಮ್ಮ ಸಮಾಜದ ವತಿಯಿಂದ ಶ್ರೀ ತುಳಜಾ ಭವಾನಿ ದೇವಸ್ಥಾನ ನಿಮರ್ಿಸಿದ್ದು ಇರುತ್ತದೆ. ಈ ದೇವಸ್ಥಾನಕ್ಕೆ ಜಯತೀರ್ಥ ತಂದೆ ರಾಮಚಾರ್ಯ ಜೋಶಿ ಅಲ್ಲೂರ (ಬಿ) & ಮಹೇಶ ಆಚಾರ್ಯ ಇವರಿಬ್ಬರು ಪೂಜಾರಿಗಳು ಇರುತ್ತಾರೆ. ದಿನಾಲು ಬೆಳಿಗ್ಗೆ ಹಾಗೂ ಸಾಯಂಕಾಲ ದೇವಿಯ ಪೂಜೆ ಮಾಡಿ ಇವರುಗಳೇ ದೇವಸ್ಥಾನಕ್ಕೆ ಕೀಲಿ ಹಾಕಿಕೊಂಡು ಬರುತ್ತಿದ್ದರು. ಹೀಗಿದ್ದು ಇಂದು ದಿನಾಂಕ 20/05/2020 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ಗುಡಿಯ ಪೂಜಾರಿ ಜಯತೀರ್ಥ ಇವರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಎಂದಿನಂತೆ ನಾನು, ನಿನ್ನೆ ದಿನಾಂಕ 19/05/2020 ರಂದು ಸಾಯಂಕಾಲ 07-00 ಗಂಟೆ ಸುಮಾರಿಗೆ ಗುಡಿಯಲ್ಲಿ ದೇವಿಯ ಪೂಜೆ ಮಾಡಿ ಗುಡಿಯ ಬಾಗಿಲ ಕೀಲಿ ಹಾಕಿಕೊಂಡು ಮನೆಗೆ ಬಂದೆನು. ನಂತರ ಇಂದು ದಿನಾಂಕ 20/05/2020 ರಂದು ಬೆಳಿಗ್ಗೆ 07-00 ಗಂಟೆಗೆ ಪ್ರತಿನಿತ್ಯದಂತೆ ನಾನು ಪೂಜೆ ಮಾಡಲು ಗುಡಿಗೆ ಹೋದಾಗ, ಗುಡಿಯ ಬಾಗಿಲಿಗೆ ಹಾಕಿದ ಎರಡು ಕೀಲಿಗಳು ಮುರಿದು ಬಾಗಿಲು ತೆಗೆದಿದ್ದು ಕಂಡು ಬಂತು. ನಂತರ ಒಳಗೆ ಹೋಗಿ ನೋಡಿದಾಗ ಗರ್ಭ ಗುಡಿಯ ಮುಂದೆ ಇದ್ದ ಗಲ್ಲೆ (ಹುಂಡಿ) ಕಾಣಲಿಲ್ಲ. ಗುಡಿ ಕಳ್ಳತನವಾದಂತೆ ಕಂಡು ಬಂದಿರುತ್ತದೆ ಅಂತಾ ತಿಳಿಸಿದನು. ಕೂಡಲೆ ನಾನು ಹಾಗೂ ನಮ್ಮ ಸಮಾಜದ ಮುಖಂಡರು  ಗುಡಿಗೆ ಬಂದು ನೋಡಿದಾಗ  ಗುಡಿಯ ಬಾಗಿಲ ಕೀಲಿ ಮುರಿದು, ಗರ್ಭ ಗುಡಿಯ ಮುಂದೆ ಇದ್ದ ಗಲ್ಲೆ ಕಳ್ಳತನವಾಗಿದ್ದು ಕಂಡು ಬಂತು. ಎಲ್ಲರು ಕೂಡಿ ಗುಡಿಯ ಅಕ್ಕ ಪಕ್ಕದಲ್ಲಿ ನೋಡಲಾಗಿ, ಗುಡಿಯ ಹಿಂದೆ ಗಲ್ಲೆ ಕಲ್ಲು ಎತ್ತಿಹಾಕಿ ಮುರಿದು ಅದರಲ್ಲಿ ಇದ್ದ ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಗಲ್ಲೆಯ ಹಣ ಸುಮಾರು 24000/ ರೂಪಾಯಿಗಳು ಇದ್ದಿರಬಹುದು. ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/2020 ಕಲಂ 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 150/2020 ಕಲಂ 87  ಕೆ.ಪಿ ಆಕ್ಟ:- ಃ  ಇಂದು ದಿನಾಂಕ 20/05/2020   ರಂದು ಸಾಯಂಕಾಲ 19-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ.ಐ ಶಹಾಪುರ ಪೊಲೀಸ್ ಠಾಣೆ ರವರು 6 ಜನ ಆಪಾದಿತರು ಹಾಗೂ ಮುದ್ದೆಮಾಲು ಮತ್ತು ಮೂಲ ಜಪ್ತಿ ಪಂಚನಾಮೆ ಹಾಜರ ಪಡಿಸಿ ಮುಂದಿನ  ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ 20/05/2020 ರಂದು ಮದ್ಯಾಹ್ನ 15-15 ಗಂಟೆಗೆ ಠಾಣೆಯಲ್ಲಿದ್ದಾಗ  ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ನಂದಿಹಳ್ಳಿ ಗ್ರಾಮದ ಹಳ್ಳದ ಹತ್ತಿರ ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 43/2020 ನೇದ್ದರಲ್ಲಿ ನೋಂದಣಿಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಪರವಾನಿಗೆ ಪಡೆದುಕೊಂಡು, ಫಿಯರ್ಾದಿಯವರು ಠಾಣೆಯ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ನಂದಿಹಳ್ಳಿ ಗ್ರಾಮಕ್ಕೆ ಹೋಗಿ ಸಾಯಂಕಾಲ 16-45 ಗಂಟೆಗೆ ಪಂಚರ  ಸಮಕ್ಷಮದಲ್ಲಿ ದಾಳಿ ಮಾಡಿ 6 ಜನ ಆರೋಪಿತರುನ್ನು ಹಿಡಿದು ಅವರಿಂದ ನಗದು ಹಣ 10200=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು  ಸಾಯಂಕಾಲ 16-50 ಗಂಟೆಯಿಂದ  17-50 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡಿರುತ್ತಾರೆ. ಸದರಿ ಆರೋಪಿತರ ವಿರುದ್ದ ಕ್ರಮ ಕೈಕೊಳ್ಳಬೇಕು  ಅಂತ ಇತ್ಯಾದಿ ಫಿಯರ್ಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 150/2020 ಕಲಂ 87 ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 77/2020 ಕಲಂ. 188. 269, 270 ಐಪಿಸಿದಿನಾಂಕ: 20-05-2020 ರಂದು ರಾತ್ರಿ 07-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಈ ಮೂಲಕ ತಮಗೆ ತಿಳಿಯ ಪಡಿಸುವದೆನೆಂದರೆ ನಾನು ಸುವರ್ಣ ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು ದಿನಾಂಕ: 20-05-2020 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಸಂಗಡ ರುಕ್ಮಣ್ಣ ಹೆಚ್.ಸಿ-35 ರವರನ್ನು ಕರೆದುಕೊಂಡು ಕ್ವಾರಂಟೈನ್ಗಳ ಪೆಟ್ರೊಲಿಂಗ್ ಕರ್ತವ್ಯ ಕುರಿತು ಹೋರಟು  ಸೈದಾಪೂರ, ಮಾದ್ವಾರ, ಕಾಳಬೆಳಗುಂದಿ, ಬಳಿಚಕ್ರ ಗ್ರಾಮಗಳಿಗೆ ಭೇಟಿ ನೀಡಿ ನಂತರ ಬಳಿಚಕ್ರ ತಾಂಡಕ್ಕೆ ಮದ್ಯಾಹ್ನ 03-00 ಗಂಟೆಗೆ ಭೇಟಿ ನೀಡಿ ನಾವು ಮತ್ತು ಬಳಿಚಕ್ರ ಪಿ.ಡಿ.ಓ. & ಕಾರ್ಯದಶರ್ೀ, ಅಂಗನವಾಡಿ ಟೀಚರ್ ಹಾಗೂ ಆಶಾಕಾರ್ಯಕತರ್ೆ ಎಲ್ಲರೂ ಬಳಿಚಕ್ರ ತಾಂಡಕ್ಕೆ ಮಹಾರಾಷ್ಟ್ರದಿಂದ ಇಬ್ಬರೂ ಮಹಿಳೆಯರಾದ ಅನಿತಾ ಗಂಡ ಅಂಜಪ್ಪ ಚವ್ಹಾಣ ವ|| 20 ವರ್ಷ ಜಾ|| ಲಮಾಣಿ ಸಾ|| ಬಳಿಚಕ್ರ ತಾಂಡ, ಮತ್ತು ಶಾಂತಬಾಯಿ ಗಂಡ ದೇವಪ್ಪ ಚವ್ಹಾಣ ವ|| 22 ವರ್ಷ ಜಾ|| ಲಮಾಣಿ ಸಾ|| ಬಳಿಚಕ್ರ ತಾಂಡ ಇವರು ಬಂದು ಕ್ವಾರಂಟೈನ್ ನಲ್ಲಿ ಇರದೆ ತಾಂಡದಲ್ಲಿ ತಿರುಗಾಡುತ್ತ ಹೊಲಗಳಿಗೆ ಹೋಗುವದು ತಾಣಡಕ್ಕೆ ಬಂದು ತಿರುಗಾಡುವದು ಮಾಡುತಿದ್ದು ಇವರು ಮಾಹಾರಾಷ್ಟ್ರದಿಂದ ಬಂದಿದ್ದು ಸದ್ಯ ಕರೋನಾ ರೋಗ ಹರಡುವದು ಗೊತ್ತಿದ್ದರು ಅದನ್ನು ನಿರ್ಲಕ್ಷ ವಹಿಸಿ ಊರಲ್ಲಿ ತಿರುಗಾಡುವದು ಹೊಲಕ್ಕೆ ಹೋಗಿ ಬರುವದು ಮಾಡುತಿದ್ದು ಇವರಿಗೆ ಬಳಿಚಕ್ರ ತಾಂಡದವರಾದ ಭೀಮಾ ತಂದೆ ಬೀಕ್ಯಾ ಚವ್ಹಾಣ ವ|| 25 ವರ್ಷ, ಚಂದಮ್ಮ ಗಂಡ ಬೀಕ್ಯಾ ಚವ್ಹಾಣ ವ|| 65 ವರ್ಷ, ಸೋಮ್ಲಾ ತಂದೆ ಬೀಕ್ಯಾ ಚವ್ಹಾಣ ವ|| 45 ವರ್ಷ, ದೇವ್ಯಾ ತಂದೆ ಬೀಕ್ಯಾ ಚವ್ಹಾಣ ವ|| 40 ವರ್ಷ, ಚಂದಮ್ಮ ಗಂಡ ಸೋಮ್ಲಾ ಚವ್ಹಾಣ ವ|| 35 ವರ್ಷ, ಲಕ್ಷ್ಮೀ@ ಲಚ್ಚಮ್ಮ ಗಂಡ ದೇವ್ಯಾ ಚವ್ಹಾಣ ವ|| 32 ವರ್ಷ ಇವರು ಮಾಹರಾಷ್ಟ್ರದಿಂದ ಬಂದವರಿಗೆ ಮನೆಯಲ್ಲಿ ಇಟ್ಟುಕೊಂಡಿದ್ದು ಇವರಿಗೆ 4-5 ಸಲ ಮಾಹಾರಾಷ್ಟ್ರದಿಂದ ಯಾರೂ ಬಂದಿದ್ದಾರೆ ಅಂತಾ ಕೇಳಿದರೂ ಯಾರೂ ಬಂದಿಲ್ಲ ಅಂತಾ ಹೇಳುತಿದ್ದು ಇಬ್ಬರೂ ಬಂದಿದ್ದರೂ ಬಂದಿಲ್ಲ ಅಂತಾ ಹೇಳುತಿದ್ದು ಈಗ ಸದ್ಯ ಕರೋನಾ ವೈರಸ್ ಕೋವಿಡ್-19  ರೋಗ ಹರಡುವ ಸಂಭವ ಇದ್ದರು ಇವರು ಅದನ್ನು ನಿರ್ಲಕ್ಷವಹಿಸಿ, ಪ್ರಾಣಕ್ಕೆ ಅಪಾಯಕಾರಿ ರೋಗದ ಸೊಂಕನ್ನು ಹರಡುವ ಸಂಭವ ಇದೆ ಅಂತಾ ಗೋತ್ತಿದ್ದರೂ ತಾಂಡದಲ್ಲಿ ತಿರುಗಾಡುತಿದ್ದು ಇವರು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂಖ್ಯೆ: ಸಂ/ಕಂ/ದಂಡ/53/2019-2020 ದಿನಾಂಕ:14/04/2020 ರೀತ್ಯಾ ಕಲಂ 144(3) ಸಿಆರ್.ಪಿಸಿ ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರೋನಾ ವೈರಸ್(ಕೋವಿಡ್-19) ಸ್ಪೋಟ ಮತ್ತು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಓಡಾಡುವುದನ್ನು ಹಾಗೂ ಜನರು ಯಾವುದೆ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸಿ, ನಿಷೇದಾಜ್ಞೆಯನ್ನು ವಿಧಿಸಿದ್ದು, ಸದರಿಯವರು ಈ ಆದೇಶವನ್ನು ಉಲ್ಲಂಘನೆ ಮಾಡುವುದು ಕಂಡುಬಂದಿರುತ್ತದೆ ಕಾರಣ ಕರೋನಾ ವೈರಸ್ ಕೋವಿಡ್-19  ರೋಗ ಹರಡುವ ಸಂಭವ ಇದ್ದರು ಇವರು ಅದನ್ನು ನಿರ್ಲಕ್ಷವಹಿಸಿ, ಪ್ರಾಣಕ್ಕೆ ಅಪಾಯಕಾರಿ ರೋಗದ ಸೊಂಕನ್ನು ಹರಡುವ ಸಂಭವ ಇದ್ದರು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಉಲ್ಲಂಘನೆ ಮಾಡಿದವರಾದ 1) ಅನಿತಾ ಗಂಡ ಅಂಜಪ್ಪ ಚವ್ಹಾಣ ವ|| 20 ವರ್ಷ ಜಾ|| ಲಮಾಣಿ ಸಾ|| ಬಳಿಚಕ್ರ ತಾಂಡ, 2) ಶಾಂತಬಾಯಿ ಗಂಡ ದೇವಪ್ಪ ಚವ್ಹಾಣ ವ|| 22 ವರ್ಷ ಜಾ|| ಲಮಾಣಿ ಸಾ|| ಬಳಿಚಕ್ರ ತಾಂಡ, 3) ಭೀಮಾ ತಂದೆ ಬೀಕ್ಯಾ ಚವ್ಹಾಣ ವ|| 25 ವರ್ಷ, 4) ಚಂದಮ್ಮ ಗಂಡ ಬೀಕ್ಯಾ ಚವ್ಹಾಣ ವ|| 65 ವರ್ಷ, 5) ಸೋಮ್ಲಾ ತಂದೆ ಬೀಕ್ಯಾ ಚವ್ಹಾಣ ವ|| 45 ವರ್ಷ, 6) ದೇವ್ಯಾ ತಂದೆ ಬೀಕ್ಯಾ ಚವ್ಹಾಣ ವ|| 40 ವರ್ಷ, 7) ಚಂದಮ್ಮ ಗಂಡ ಸೋಮ್ಲಾ ಚವ್ಹಾಣ ವ|| 35 ವರ್ಷ, 8) ಲಕ್ಷ್ಮೀ@ ಲಚ್ಚಮ್ಮ ಗಂಡ ದೇವ್ಯಾ ಚವ್ಹಾಣ ವ|| 32 ವರ್ಷ ಎಲ್ಲರೂ ಸಾ|| ಬಳಿಚಕ್ರ ತಾಂಡ ಇವರ  ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಪಾಲಿಸದೆ ಕೊವೀಡ್-19 ಉಲ್ಲಂಘನೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ ಇರುತ್ತದೆ:-



ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 71/2020 ಕಲಂ 32, 34 ಕೆ.ಇ ಎಕ್ಟ್:- ಇಂದು ದಿನಾಂಕ: 20/05/2020 ರಂದು 12.40 ಪಿ.ಎಮ್.ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ದಿಗ್ಗಿ ಗ್ರಾಮದ ಹಣಮಂತ ದೇವರ ಗುಡಿ ಹತ್ತಿರ ತನ್ನ ಪಾನ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12.50 ಪಿಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಂದ 1)90 ಎಮ್.ಎಲ್.ನ 65 ಓರಿಜಿನಲ್ ಚಾಯ್ಸ್ ವಿಸ್ಕಿ ಪೌಚಗಳು ಅ.ಕಿ. 1970.80 ರೂ, 2)90 ಎಮ್.ಎಲ್.ನ 40 ಓಲ್ಡ್ ಟವರ್ನ ವಿಸ್ಕಿ ಪೌಚಗಳು ಅ.ಕಿ. 1804 ರೂ, ಒಟ್ಟು 3774.80 ರೂ ಮೌಲ್ಯದ ಮದ್ಯವನ್ನು ಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!