ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/05/2020
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.10/2020 ಕಲಂ: 174 ಸಿ.ಆರ್.ಪಿ.ಸಿ :- ದಿನಾಂಕ 09.05.2020 ರಂದು ಬೆಳಿಗ್ಗೆ 08:00 ಗಂಟೆಯ ಸುಮಾರಿಗೆ ಮೃತನು ಸದ್ಯ ಶಾಲಾ ಕಾಲೇಜು ಇಲ್ಲದೇ ಇರುವುದರಿಂದ ಮನೆಯಲ್ಲಿ ತನ್ನ ಎಲ್ಲಾ ಮಕ್ಕಳೊಂದಿಗೆ ಕೂಡಿಕೊಂಡು ಹೊಲ ಮನೆಯಲ್ಲಿ ಕೆಲಸ ಮಾಡು ಬೇರೆಯವರ ಕಡೆಗೆ ಕೆಲಸ ಮಾಡಬೇಡ ಅಂತಾ ಹೇಳಿದಕ್ಕೆ ಮೃತನು ತನ್ನ ತಂದೆ ಹೇಳಿದ ಮಾತನ್ನು ಮನಸ್ಸಿಗೆ ಹಚ್ಚಿಕ್ಕೊಂಡು ಬೇಜಾರು ಮಾಡಿಕೊಂಡು ಮನೆಗೆಯಲ್ಲಿ ಫಿರ್ಯಾದಿ ಮತ್ತು ಆತನ ಮಕ್ಕಳೆಲ್ಲಾರು ಹೊಲಕ್ಕೆ ಹೋಗಿದ್ದನ್ನು ನೊಡಿ ಮೃತನು ತನ್ನ ಮನೆಯಲ್ಲಿ ಇಟ್ಟಿದ್ದ ಕ್ರಿಮಿನಾಶಕ ಔಷದಿಯನ್ನು ತೆಗೆದುಕೊಂಡು ಮನೆಯ ಮಾಳಿಗೆ ಮೇಲೆ ಹೋಗಿ ಸೇವನೆ ಮಾಡಿದ್ದು ಅದನ್ನು ನೋಡಿದ ಮೃತನ ಅತ್ತಿಗೆ ಸಿದ್ದಮ್ಮಳು ತನ್ನ ಗಂಡ ಮಲ್ಲಪ್ಪನಿಗೆ ಹಾಗೂ ಈತರರಿಗೆ ವಿಷಯ ತಿಳಿಸಿದ್ದರಿಂದ ಕೂಡಲೆ ಮೃತ ನಂದೇಶನಿಗೆ ಚಿಕಿತ್ಸೆ ಕುರಿತು ಸಮುದಾಯ ಆರೋಗ್ಯ ಕೇಂದ್ರ, ಗುರುಮಠಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ ನಂತರ ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ರೀಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 09.05.2020 ರಂದು ವಿಷ ಸೇವನೆ ಮಾಡಿದ್ದರಿಂದ ಇಂದು ದಿನಾಂಕ 14.05.2020 ರಂದು ಬೆಳಿಗ್ಗೆ 11:00 ಗಂಟೆಗೆ ಮೃತಪಟ್ಟಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 10/2020 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 82/2020 ಕಲಂ 279, 337, 338 ಐಪಿಸಿ:-ದಿನಾಂಕ 13.05.2020 ರಂದು ಪಿರ್ಯಾಧಿ ಮಾಮ ಗಾಯಾಳು ಸುಲೋಮನ ಈತನು ತನ್ನ ಕೆಲಸದ ಮೇಲೆ ಇನ್ನೊಬ್ಬ ಗಾಯಾಳು ನಿಂಗಪ್ಪ ಈತನಿಗೆ ಕರೆದುಕೊಂಡು ತನ್ನ ಟಿ.ವಿ.ಎಸ್. ಎಕ್ಸಲ್ ಸುಪರ್ ಮೋಟರ ಸೈಕಲ ನಂ. ಕೆಎ-33-ಕ್ಯೂ-6936 ನೆದ್ದನ್ನು ತೆಗೆದುಕೊಂಡು ಗುರುಮಠಕಲಗೆ ಹೋಗಿ ಮರಳಿ ಯಾದಗಿರಿಗೆ ಬರುತ್ತಿದ್ದಾಗ ಸಮಯ ಸಂಜೆ 5.00 ಗಂಟೆ ಸುಮಾರಿಗೆ ಆರೋಪಿ ಸುಲೋಮನ ಈತನು ತನ್ನ ಮೋಟರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಯಾದಗಿರಿ-ಗುರುಮಠಕಲ ರೋಡಿಗೆ ಪಸಲಪೂಲ ಸೀಮಾಂತರ ವೇಬ್ರಿಡ್ಜ ಹತ್ತಿರ ಅಪಘಾತಪಡಿಸಿದ ರಕ್ತಗಾಯಪಡಿಸಿದ ಬಗ್ಗೆ ಅಪರಾಧ.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 63/2020 ಕಲಂ: 143,147,148,504,323,324,506 ಸಂ 149 ಐಪಿಸಿ:- ಇಂದು ದಿನಾಂಕ: 14/05/2020 ರಂದು 4-15 ಪಿಎಮ್ ಕ್ಕೆ ಶ್ರೀ ಮಲ್ಲಿಕಾಜರ್ುನ ತಂದೆ ನಿಂಗಣ್ಣಗೌಡ ಜಂಗರಡ್ಡಿ ವ.35 ಜಾ.ಲಿಂಗಾಯತ ಉ.ಗ್ರಾ.ಪಂ. ಸದಸ್ಯ ಸಾ:ಕುರಕುಂದಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ದಿನಾಂಕ:14/05/2020 ರಂದು ಮಧ್ಯಾಹ್ನ 2:00 ಗಂಟೆ ಸುಮಾರಿಗೆ ನಾನು ಕುರಕುಂದಾ ಗ್ರಾಮ ಪಂಚಾಯತನಲ್ಲಿ ಪಿಡಿಓ ರವರಿಗೆ 2019 ಮತ್ತು 2020 ನೇ ಸಾಲಿನ ಮುಟೇಶನ, ಕರವಸೂಲಿ ಮತ್ತು ನಳದ ಸಮಸ್ಯೆ ಬಗ್ಗೆ ಕೇಳಲು ಹೋಗಿದ್ದೇನು. ಆದರೆ ಪಿಡಿಓ ರವರು ಇರಲಿಲ್ಲ. ಆಗ ಅಲ್ಲಿದ್ದ ಬಿಲ್ ಕಲೇಕ್ಟರನಾದ ಮುನಿಯಪ್ಪ ಗೌಡ ತಂದೆ ಸಿದ್ದಲಿಂಗಪ್ಪ ಮಾಲಿಪಾಟೀಲ್ ಈತನಿಗೆ ಮುಟೇಶನ, ಕರವಸೂಲಿ ಮತ್ತು ನಳದ ಸಮಸ್ಯೆ ಬಗ್ಗೆ ಕೇಳಿದಾಗ ಅವನು ಏಕಾಏಕಿಯಾಗಿ ನನಗೆ ಎಲೇ ಬೋಸಡಿ ಮಗನೇ ನೀನು ಏನು ನನಗೆ ಕೇಳುತ್ತೀಯಾ ಎಂದವನೆ ನನ್ನ ಜೊತೆ ಬಾಯಿ ಮಾತಿನ ಜಗಳ ಮಾಡಿದನು. ಆಗ ಅಲ್ಲಿಯೇ ಇದ್ದ ಕೆಲವರು ನಮಗೆ ಇಬ್ಬರಿಗೂ ಸಮಧಾನ ಮಾಡಿ ಜಗಳ ಬಿಡಿಸಿದರು. ಆಗ ನನ್ನ ಪಾಡಿಗೆ ನಾನು ಮನೆಗೆ ಬಂದೆನು. ಅದಾದ ಒಂದು ತಾಸಿನ ನಂತರ 3 ಪಿಎಮ್ ಸುಮಾರಿಗೆ 1) ಮುನಿಯಪ್ಪ ಗೌಡ ತಂದೆ ಸಿದ್ದಲಿಂಗಪ್ಪ ಮಾಲಿ ಪಾಟೀಲ್, 2) ನಿಂಗಾರಡ್ಡಿ ತಂದೆ ಸಿದ್ದಲಿಂಗಪ್ಪ, 3) ಸಿದ್ದಲಿಂಗರಡ್ಡಿ ತಂದೆ ನಿಂಗಾರಡ್ಡಿ, 4) ಶರಣಪ್ಪಗೌಡ ತಂದೆ ಮುನಿಯಪ್ಪಗೌಡ, 5) ಮಲ್ಲಿಕಾಜರ್ುನ ತಂದೆ ಶರಣಪ್ಪಗೌಡ, 6) ಸಿದ್ರಾಮರಡ್ಡಿ ತಂದೆ ಶರಣಪ್ಪಗೌಡ, 7) ಸಂತೋಷ ತಂದೆ ಶರಣಪ್ಪಗೌಡ, 8) ಬಸವರಾಜ ತಂದೆ ಗುರುನಾಥರೆಡ್ಡಿ, 9) ಲಿಂಗನಗೌಡ ತಂದೆ ಗುರುನಾಥರೆಡ್ಡಿ 10) ಕುಬೇರಗೌಡ ತಂದೆ ಗುರುನಾಥರೆಡ್ಡಿ ಎಲ್ಲರೂ ಸಾ:ಕುರಕುಂದಾ ಇವರೆಲ್ಲರೂ ಅಕ್ರಮಕೂಟ ರಚನೆ ಮಾಡಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದವರೇ ಎಲ್ಲರೂ ಸೇರಿ ನೀನು ಮುನಿಯಪ್ಪಗೌಡನಿಗೆ ಗ್ರಾಮ ಪಂಚಾಯತನಲ್ಲಿ ಮುಟೇಶನ ಮತ್ತು ಕರವಸೂಲಿ ಲೆಕ್ಕಪತ್ರ ಕೇಳುರುವಿಂತೆ ಭೋಸುಡಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ಎಂದವರೇ ನನಗೆ ಮುನಿಯಪ್ಪಗೌಡ ಮತ್ತು ಸಿದ್ದಲಿಂಗರಡ್ಡಿ ಇಬ್ಬರು ಕೈಯಿಂದ ಗುದ್ದಿ ಕೆಳಕ್ಕೆ ಹಾಕಿ, ಕಾಲಿನಿಂದ ಒದ್ದು ಬೆನ್ನಿಗೆ ಹೊಟ್ಟೆಗೆ ಗುದ್ದಿ, ಒಳ ಪೆಟ್ಟುಮಾಡಿದರು. ನನಗೆ ಹೊಡೆಯುವುದು ನೋಡಿ ಬಿಡಿಸಲು ಬಂದ ನನ್ನ ತಂದೆ ನಿಂಗನಗೌಡ ಇತನಿಗೆ ಶರಣಪ್ಪಗೌಡನು ಕಟ್ಟಿಗೆಯಿಂದ ಬಲಗೈ ರಟ್ಟೆಗೆ ಒಳಪೆಟ್ಟಾಗುವಂತೆ ಹೊಡೆದನು. ನನ್ನ ತಮ್ಮ ಸಿದ್ರಾಮರೆಡ್ಡಿ ಇತನಿಗೆ ಶರಣಪ್ಪಗೌಡ ಹಿಡಿದುಕೊಂಡಾಗ ಮಲ್ಲಿಕಾಜರ್ುನ ಈತನು ಕಟ್ಟಿಗೆಯಿಂದ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ಬಿಡಿಸಲು ಬಂದ ನಮ್ಮ ತಾಯಿ ನೀಲಮ್ಮ ಇವಳಿಗೆ ಸಿದ್ರಾಮರೆಡ್ಡಿ ಈತನು ಬಂದು ಜಾಡಿಸಿ ನುಗ್ಗಿಸಿಕೊಟ್ಟನು. ನಮ್ಮ ತಾಯಿಗೆ ಕುಬೇರಗೌಡನು ಹಿಡಿಗಲ್ಲಿನಿಂದಿ ಬಿಸಿ ಹೊಡೆದಾಗ ಆ ಕಲ್ಲಿನ ಏಟು ಎಡಗಾಲ ತೊಡೆಗೆ ಬಡಿದು ಒಳಪೆಟ್ಟಾಗಿರುತ್ತದೆ. ಆಗ ಜಗಳವನ್ನು ಅಲ್ಲಿಯೇ ಇದ್ದ ಗಿರಿಮಲ್ಲಪ್ಪ ತಂದೆ ಹಣಮಂತ್ರಾಯ ಗೌಡ, ಭೀಮಪ್ಪ ತಂದೆ ಮೂಕಪ್ಪ ಟೊಣ್ಣೂರು, ಬಸನಗೌಡ ತಂದೆ ಗುರುನಾಥರೆಡ್ಡಿ ಮತ್ತು ಯಲ್ಲಪ್ಪ ತಂದೆ ಲಕ್ಷ್ಮಿಂಪೂರ ಇವರು ಬಂದು ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಮ್ಮೆ ಪಂಚಾಯತಿಗೆ ಲೆಕ್ಕಪತ್ರ ಅಂತಾ ಕೇಳಲು ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಭಯ ಹಾಕಿ ಹೋಗಿರುತ್ತಾರೆ. ಕಾರಣ ನಮಗೆ ಪಂಚಾಯತನಲ್ಲಿ ಮ್ಯೂಟೇಶನ ಮತ್ತು ಕರ ವಸೂಲಿ ಮಾಹಿತಿ ಕೇಳಲು ಹೋದರೆ ಅದೇ ಒಂದು ವೈಮನಸ್ಸಿನಿಂದ ಮನೆತನ ಬಂದು ಹೊಡೆಬಡೆ ಮಾಡಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 63/2020 ಕಲಂ: 143,147,148,504,323,324,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 64/2020 ಕಲಂ: 504,324,506 ಸಂ 34 ಐಪಿಸಿ:- ಇಂದು ದಿನಾಂಕ: 14/05/2020 ರಂದು 5-20 ಪಿಎಮ್ ಕ್ಕೆ ಶ್ರೀ ಮಲ್ಲಣ್ಣಗೌಡ ತಂದೆ ಪರ್ವತರೆಡ್ಡಿ ಶಿವಪ್ಪಗೌಡರ, ವ:32, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಕುರುಕುಂದಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಉಪ ಜೀವಿಸುತ್ತೇನೆ. ಹೀಗಿದ್ದು ಕುರುಕುಂದಾ ಗ್ರಾಮದಲ್ಲಿ ನಮ್ಮದೊಂದು ಖಾಲಿ ಪ್ಲಾಟ ಇರುತ್ತದೆ. ಸದರಿ ಪ್ಲಾಟನಲ್ಲಿ ನಮ್ಮೂರ ಮುನಿಯಪ್ಪಗೌಡ ಮತ್ತು ಅವನ ಅಣ್ಣತಮ್ಮಂದಿರು ಅಂದಾಜು 6 ಫೀಟಿನಷ್ಟು ಜಾಗವನ್ನು ನಮ್ಮ ಪ್ಲಾಟಿನ ಕಡೆಗೆ ಸರಿಸಿ ಮುಟೇಶನ ಮಾಡಿಕೊಂಡಿರುತ್ತಾರೆ. ಹೀಗಿದ್ದು ಈ ವಿಷಯವನ್ನು ಗ್ರಾಮ ಪಂಚಾಯತ ಕಾರ್ಯಲಯಕ್ಕೆ ಹೋಗಿ ಪಿಡಿಓ ರವರಿಗೆ ಕೇಳಿದರಾಯ್ತು ಎಂದು ಇಂದು ದಿನಾಂಕ: 14/05/2020 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ನಾನು ಗ್ರಾಮ ಪಂಚಾಯತ ಕಾರ್ಯಲಯಕ್ಕೆ ಹೋಗಿ ಪಿಡಿಓ ರವರಿಗೆ ಭೇಟಿಯಾಗಬೇಕೆಂದು ಹೋಗಿ ಕಾರ್ಯಲಯದ ಹೊರಗಡೆ ನಿಂತುಕೊಂಡಾಗ ನನ್ನಲ್ಲಿಗೆ 1) ನಿಂಗಾರೆಡ್ಡಿ ತಂದೆ ಸಿದ್ದಲಿಂಗಪ್ಪಗೌಡ, 2) ಮುನಿಯಪ್ಪಗೌಡ ತಂದೆ ಸಿದ್ದಲಿಂಗಪ್ಪಗೌಡ ಮತ್ತು 3) ನಿಂಗಣ್ಣಗೌಡ ತಂದೆ ಗುರುನಾಥರೆಡ್ಡಿ ಮಾ ಪಾ ಎಲ್ಲರು ಸಾ:ಕುರುಕುಂದಾ ಈ ಮೂರು ಜನ ಸೇರಿ ಬಂದವರೆ ನನಗೆ ಈ ಭೋಸುಡಿ ಮಗ ಪ್ಲಾಟಿನ ಸಲುವಾಗಿ ಬಹಳ ಪಂಚಾಯತಿಗೆ ಬರುತ್ತಿದ್ದಾನೆ ಹೊಡೆಯಿರಿ ಇವನಿಗೆ ಎಂದು ನನಗೆ ತಡೆದು ನಿಲ್ಲಿಸಿ, ಮುನಿಯಪ್ಪಗೌಡ ಮತ್ತು ನಿಂಗಣ್ಣಗೌಡ ಇಬ್ಬರೂ ಹಿಡಿದುಕೊಂಡಾಗ ನಿಂಗಾರೆಡ್ಡಿ ಈತನು ತನ್ನ ಕೈಯಲ್ಲಿದ್ದ ಕುಡಗೊಲಿನಿಂದ ನನ್ನ ಬಲ ಎಡಕಿಗೆ ಹೊಡೆದು ರಕ್ತಗಾಯ ಮಾಡಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ಶರಣಪ್ಪ ತಂದೆ ಸೀನಪ್ಪ ಮತ್ತು ಸಿದ್ದಣ್ಣಗೌಡ ತಂದೆ ಶಿವರೆಡ್ಡೆಪ್ಪ ಪೊಲೀಸ್ ಪಾಟಿಲ್ ಇಬ್ಬರು ಬಂದು ಜಗಳ ಬಿಡಿಸಿ ಕಳುಹಿಸಿದರು. ಆಗ ಹೊಡೆಯವುದು ಬಿಟ್ಟ ಅವರು ಇವತ್ತು ಉಳದಿ ಸೂಳೆ ಮಗನೆ ಇನ್ನೊಮ್ಮೆ ಸಿಕ್ಕಾಗ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೊದರು. ನಾನು ಗ್ರಾಮ ಪಂಚಾಯತಿಗೆ ಕೇಳಲು ಹೋದವನಿಗೆ ವಿನಾಕಾರಣ ಜಗಳ ತೆಗೆದು ಅವಾಚ್ಯ ಬೈದು, ಚಾಕುವಿನಿಂದ ನನ್ನ ಎಡಕಿಗೆ ಚುಚ್ಚಿ ರಕ್ತಗಾಯ ಮಾಡಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 64/2020 ಕಲಂ: 504,324,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 65/2020 ಕಲಂ:143,147,148,504,324,323,506 ಸಂ 149 ಐಪಿಸಿ:- ಇಂದು ದಿನಾಂಕ: 14/04/2020 ರಂದು 5-30 ಪಿಎಮ್ ಕ್ಕೆ ಜಿಜಿಹೆಚ್ ಯಾದಗಿರಿಯಿಂದ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಲಿಂಗಾರೆಡ್ಡಿ ತಂದೆ ಸಿದ್ದಲಿಂಗಪ್ಪಗೌಡ ಮಾಲಿಪಾಟಿಲ್, ವ:40, ಜಾ:ಲಿಂಗಾಯತರೆಡ್ಡಿ, ಉ:ಒಕ್ಕಲುತನ ಸಾ:ಕುರುಕುಂದಾ ತಾ:ವಡಗೇರಾ ಇವರು ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ನನ್ನ ತಮ್ಮನಾದ ಮುನಿಯಪ್ಪಗೌಡ ಈತನು ಕುರುಕುಂದಾ ಗ್ರಾಮ ಪಂಚಾಯತನಲ್ಲಿ ಬಿಲ್ ಕಲೇಕ್ಟರ ಎಂದು ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ನಮ್ಮೂರ ಮಲ್ಲಿಕಾಜರ್ುನ ತಂದೆ ನಿಂಗನಗೌಡ ಈತನು ಗ್ರಾಮ ಪಂಚಾಯತ ಸದಸ್ಯನಾಗಿದ್ದು, ವಿನಾಕಾರಣ ಗ್ರಾಮ ಪಂಚಾಯತಿಗೆ ಹೋಗಿ ನಮ್ಮ ತಮ್ಮ ಮುನಿಯಪ್ಪಗೌಡನಿಗೆ ಮುಟೇಶನ ಮತ್ತು ಕರವಸೂಲಿ ಬಗ್ಗೆ ಇಲ್ಲದ ಮಾಹಿತಿ ಕೇಳಿ ಅವನಿಗೆ ಬಾಯಿಗೆ ಬಂದಂಗೆ ಅವಾಚ್ಯ ಬೈಯುವುದು ಮಾಡುತ್ತಿದ್ದನು. ಹೀಗಿದ್ದು ಇಂದು ದಿನಾಂಕ: 14/05/2020 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಮ್ಮ ತಮ್ಮನು ಗ್ರಾಮ ಪಂಚಾಯತನಲ್ಲಿ ಕೆಲಸದ ಮೇಲೆ ಇದ್ದಾಗ ಅವನಿಗೆ ಮಲ್ಲಿಕಾಜರ್ುನನು ಅಲ್ಲಿಗೆ ಹೋಗಿ ಮುಟೇಶನ ಮತ್ತು ಕರವಸೂಲಿ ಸಂಬಂಧ ತಕರಾರು ಮಾಡಿ ಬಾಯಿ ಮಾತಿನ ಜಗಳ ಮಾಡಿದಾಗ ಅಲ್ಲಿದ್ದವರು ಬಿಡಿಸಿ, ಇಬ್ಬರಿಗೆ ಸಮಾಧಾನ ಮಾಡಿ ಮನೆಗೆ ಕಳುಹಿಸಿದ್ದು, ನನ್ನ ತಮ್ಮನು ಮನೆಗೆ ಬಂದು ನಡೆದ ಸಂಗತಿಯನ್ನು ನಮ್ಮ ಮುಂದೆ ಹೇಳಿದನು. ಅದಾದ ಕೆಲ ಹೊತ್ತಿನ ನಂತರ ಅಂದರೆ 3-15 ಪಿಎಮ್ ಸುಮಾರಿಗೆ ನಾವು ನಮ್ಮ ಮನೆ ಮುಂದೆ ಇದ್ದಾಗ 1) ಮಲ್ಲಿಕಾಜರ್ುನ ತಂದೆ ನಿಂಗನಗೌಡ ಜಂಗರೆಡ್ಡಿ, 2) ಸಿದ್ದಲಿಂಗರೆಡ್ಡಿ ತಂದೆ ನಿಂಗನಗೌಡ ಜಂಗರೆಡ್ಡಿ, 3) ನಿಂಗನಗೌಡ ತಂದೆ ಶಿವಶರಣಪ್ಪಗೌಡ ಜಂಗರೆಡ್ಡಿ, 4) ಶಿವಶರಣಪ್ಪ ತಂದೆ ಸಿದ್ರಾಮಪ್ಪ ಜಂಗರೆಡ್ಡಿ, 5) ಅಂಬ್ರೇಶ ತಂದೆ ನಿಂಗನಗೌಡ ಜಂಗರೆಡ್ಡಿ ಎಲ್ಲರೂ ಸಾ:ಕುರುಕುಂದಾ ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಬಂದವರೆ ನಮ್ಮ ತಮ್ಮ ಮುನಿಯಪ್ಪಗೌಡನಿಗೆ ಏಲೆ ಮಗನೆ ಮುನಿಯಾ ನಿನ್ನ ಸೊಕ್ಕು ಜಾಸ್ತಿಯಾಗಿದೆ ಮಗನೆ ನಮ್ಮ ಪ್ಲಾಟ ಮುಟೇಶನ ಮಾಡಿಕೊಡು ಅಂದರೆ ಮಾಡುತ್ತಿಲ್ಲ. ಕರ ವಸೂಲಿ ಮಾಡಿದ್ದು, ಲೆಕ್ಕಪತ್ರ ಸರಿಯಾಗಿ ತೊರಿಸುತ್ತಿಲ್ಲ ಬೊಸುಡಿ ಮಗನೆ ನಿನಗೆ ಇವತ್ತು ಬಿಡುವುದಿಲ್ಲ ಎಂದು ಜಗಳ ತೆಗೆದವರೆ ನನ್ನ ತಮ್ಮ ಮುನಿಯಪ್ಪಗೌಡನಿಗೆ ಸಿದ್ದಲಿಂಗರೆಡ್ಡಿ ಈತನು ಹಿಡಿದುಕೊಂಡಾಗ ಮಲ್ಲಿಕಾಜರ್ುನನು ತನ್ನ ಕೈಯಲ್ಲಿದ್ದ ಕುಡಗೋಲಿನಿಂದ ಬಲ ಎಡಕಿಗೆ ಹೊಡೆದು ರಕ್ತಗಾಯ ಮಾಡಿದನು. ಅದೇ ಕುಡಗೊಲಿನಿಂದ ಬಲಗೈಗೆ ಹೊಡೆದು ರಕ್ತಗಾಯ ಮಾಡಿದನು. ಬಿಡಿಸಲು ಹೋದ ನನಗೆ ಶಿವಶರಣಪ್ಪನು ಕಟ್ಟಿಗೆಯಿಂದ ನನ್ನ ಎಡಗೈ ರಟ್ಟೆಗೆ ಹೊಡೆದು ರಕ್ತಗಾಯ ಮಾಡಿದನು. ಬಿಡಿಸಲು ಬಂದ ಅಣ್ಣತಮ್ಮಕೀಯ ನಿಂಗಣ್ಣಗೌಡ ತಂದೆ ಗುರುನಾಥರೆಡ್ಡಿ ಈತನಿಗೆ ನಿಂಗನಗೌಡ ಈತನು ಕಲ್ಲಿನಿಂದ ಬಲಕೈ ಮೊಳಕೈ ಮೇಲೆ ಮತ್ತು ಬಲ ಮೊಳಕಾಲ ಕೆಳಗಡೆ ಹೊಡೆದು ರಕ್ತಗಾಯ ಮಾಡಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಿಂಗಣ್ಣಗೌಡ ತಂದೆ ಹಂಪಣ್ಣಗೌಡ ಮರೆಡ್ಡಿ ಮತ್ತು ಭೀಮಪ್ಪ ತಂದೆ ಸಾಬಣ್ಣ ಗೋಸಿ ಇವರು ಬಂದು ಜಗಳವನ್ನು ಬಿಡಿಸಿದರು. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಮ್ಮೆ ಬಂದು ಒಬ್ಬೊಬ್ಬರಿಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು. ಕಾರಣ ಮುಟೇಶನ ಮತ್ತು ಕರ ವಸೂಲಿ ವಿಷಯದಲ್ಲಿ ವಿನಾಕಾರಣ ಜಗಳ ತೆಗೆದು ಅಕ್ರಮಕೂಟ ಕಟ್ಟಿಕೊಂಡು ಬಂದು ನಮಗೆ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಹೇಳಿಕೆಯನ್ನು 6-30 ಪಿಎಮ್ ದಿಂದ 7-30 ಪಿಎಮ್ ದ ವರೆಗೆ ಪಡೆದುಕೊಂಡು 8-15 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 65/2020 ಕಲಂ:143,147,148,504,324,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using