ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/05/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 60/2020 ಕಲಂ. 87 ಕೆ.ಪಿ ಎಕ್ಟ್ 1963:- ಇಂದು ದಿನಾಂಕ; 13/05/2020 ರಂದು 3-30 ಪಿಎಮ್ ಕ್ಕೆ ಶ್ರೀ ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ಯಾದಗಿರಿ ಗ್ರಾಮೀಣ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ ನಾನು ಇಂದು ದಿನಾಂಕ. 13/05/2020 ರಂದು 3-00 ಪಿಎಮ್ ಕ್ಕೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇರುವಾಗ ಮಾನ್ಯ ಸದಾಶೀವ ಸೋನಾವಣೆ ಪಿ.ಐ. ಸಾಹೇಬರು ಡಿ.ಸಿ.ಐ.ಬಿ. ಘಟಕ ಯಾದಗಿರಿ ರವರು ಪೋನ ಮೂಲಕ ಮಾಹಿತಿ ನೀಡಿದ್ದೆನೆಂದರೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಿಂಗೇರಿ ಗ್ರಾಮದ ಸೀಮಾಂತರದಲ್ಲಿ ಹೊಳೆದಂಡೆಯ ಹತ್ತಿರ ಸಿದ್ದಾರೂಡ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ತಿಳಿಸಿದ್ದು, ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 60/2020 ಕಲಂ. 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 11/2020 ಕಲಂ 107 ಸಿಆರ್ ಪಿಸಿ:-ನಾನು ಸುವರ್ಣ ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು ದಿನಾಂಕ: 13-05-2020 ರಂದು ಬೆಳಿಗ್ಗೆ 10-00 ಗಂಟೆಗೆ ಹಳ್ಳಿ ಭೇಟಿ ಕುರಿತು ಬಳಿಚಕ, ಕಾಳಬೆಳಗುಂದಿ ಗ್ರಾಮಕ್ಕೆ ಬೇಟಿ ನೀಡಿ ನಂತರ ಮದ್ಯಾಹ್ನ 12-30 ಗಂಟೆಗೆ ತೋಟ್ಲೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಪೊಲೀಸ ಬಾತ್ಮಿದಾರರ ಮುಖಾಂತರ ಮಾಹಿತಿಯನ್ನು ಸಂಗ್ರಹಿಸಲಾಗಿ ಮಾಹಿತಿ ತಿಳಿದುಬಂದಿದ್ದೆನೆಂದರೆ ಈಗ 4-5 ದಿನಗಳಿಂದೆ ಚರ್ಚ ಹತ್ತಿರ ಇರುವ ಲೈಟಿನ ಕಂಬ ಮುರಿದು ಬಿದ್ದಿದ್ದು ಅದಕ್ಕೆ ಇಂದು ಕೆಇಬಿಯವರು ಬಂದು ಲೈಟಿನ ಕಂಬವನ್ನು ಹಾಕುತ್ತಿರುವಾಗ ಊರಿನ ಇತರೆ ಜನಾಂಗದವರಾದ 1) ಯಲ್ಲಪ್ಪ ತಂದೆ ರಂಗಪ್ಪ ವಡ್ಡರ ವ|| 62 ವರ್ಷ 2) ಬಸವರಾಜ ತಂದೆ ಗುಂಜಲಪ್ಪ ನಿಜಾಮ ಜಾ|| ಕಬ್ಬಲಿಗ ವ|| 55 ವರ್ಷ 3) ಬಾಲರಾಜ ತಂದೆ ಕೀಷ್ಠಪ್ಪ ಗುಳ್ಳ ಜಾ|| ಕಬ್ಬಲಿಗ 4) ನರಸಪ್ಪ ತಂದೆ ಮಾರೆಪ್ಪ ವಡ್ಡರ ವ|| 32 ವರ್ಷ 5) ನರಸಪ್ಪ ತಂದೆ ಲಕ್ಷ್ಮಣ ಕಂಬಾರ ವ|| 30 ವರ್ಷ 6) ಮೋಗಲಪ್ಪ ತಂದೆ ಸಿದ್ದಪ್ಪ ವ|| 28 ವರ್ಷ ಜಾ|| ಕಬ್ಬಲಿಗ 7) ಮಹಾದೇವಪ್ಪ ತಂದೆ ಅಕ್ಕಪ್ಪ ಶೇಖಸಿಂಧಿ ವ|| 45 ವರ್ಷ 8) ಸಾಬಣ್ಣ ತಂದೆ ಹಣಮಂತ ಶೇಖಸಿಂಧಿ ವ|| 45 ವರ್ಷ ಜಾ|| ಕಬ್ಬಲಿಗ 9) ಭೀಮಪ್ಪ ತಂದೆ ತಾಯಪ್ಪ ಶೇಖಸಿಂಧಿ ವ|| 48 ವರ್ಷ ಜಾ|| ಕಬ್ಬಲಿಗ, 10) ರಮೇಶ ತಂದೆ ಭೀಮಶಪ್ಪ ಶೇಖಸಿಂಧಿ ವ|| 32 ವರ್ಷ ಜಾ|| ಕಬ್ಬಲಿಗ, 11) ಮೋನಪ್ಪ ತಂದೆ ಚಂದ್ರಪ್ಪ ವ|| 50 ವರ್ಷ ಜಾ|| ಕಬ್ಬಲಿಗ, 12) ತಿಪ್ಪಣ್ಣ ತಂದೆ ತಾಯಪ್ಪ ವ|| 45 ವರ್ಷ ಜಾ|| ಕಬ್ಬಲಿಗ, 13) ಶೇಖರ ತಂದೆ ಹಣಮಂತ ಶೇಖಸಿಂಧಿ ವ|| 28 ವರ್ಷ ಜಾ|| ಕಬ್ಬಲಿಗ 14) ತಾಯಪ್ಪ ತಂದೆ ಹಣಮಂತ ಶೇಖಸಿಂಧಿ ವ|| 52 ವರ್ಷ ಜಾ|| ಕಬ್ಬಲಿಗ, 15) ರೆಡ್ಡಿ ತಂದೆ ನರಸಪ್ಪ ಬಲರಾಮ ವ|| 26 ವರ್ಷ ಜಾ|| ಕಬ್ಬಲಿಗ ಎಲ್ಲರೂ ಸಾ|| ತೋಟ್ಲೂರ ಇವರ ಮದ್ಯೆ ಮತ್ತು ಕ್ರೀಶ್ಚನ್ ಜನಾಂಗದವರ ಮದ್ಯೆ ಒಬ್ಬರಿಗೊಬ್ಬರು ತಿವ್ರ ವೈಮನಸ್ಸು ಬೆಳಿಸಿಕೊಂಡಿದ್ದು ಇವರು ಚರ್ಚ ಹತ್ತಿರ ಕಂಬ ಹಾಕುವ ಸಂಬಂಧ ಊರಲ್ಲಿ ಯಾವ ವೇಳೆಯಲ್ಲಿ ಜಗಳ ಮಾಡಿಕೊಂಡು ಜೀವ ಮತ್ತು ಆಸ್ತಿ ಪಾಸ್ತಿಗೆ ಧಕ್ಕೆ ಉಂಟುಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದು ಸದ್ಯ ಇವರು ಊರಲ್ಲಿ ಶಾಂತಿ ಸುವ್ಯವಸ್ಥಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವದು ಕಂಡು ಬಂದಿದ್ದರಿಂದ ಮರಳಿ 03-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಊರಿನ ಇತರೆ 1) ಯಲ್ಲಪ್ಪ ತಂದೆ ರಂಗಂಪ್ಪ ವಡ್ಡರ ವ|| 62 ವರ್ಷ 2) ಬಸವರಾಜ ತಂದೆ ಗುಂಜಲಪ್ಪ ವ|| 55 ವರ್ಷ 3) ಬಾಲರಾಜ ತಂದೆ ಕೀಷ್ಠಪ್ಪ ಗುಳ್ಳಿ 4) ನರಸಪ್ಪ ತಂದೆ ಮಾರೆಪ್ಪ ವಡ್ಡರ ವ|| 32 ವರ್ಷ 5) ನರಸಪ್ಪ ತಂದೆ ಲಕ್ಷ್ಮಣ ಕಂಬಾರ ವ|| 30 ವರ್ಷ 6) ಮೋಗಲಪ್ಪ ತಂದೆ ಸಿದ್ದಪ್ಪ ವ|| 28 ವರ್ಷ 7) ಮಹಾದೇವಪ್ಪ ತಂದೆ ಅಕ್ಕಪ್ಪ ಶೇಖಸಿಂಧಿ 8) ಸಾಬಣ್ಣ ತಂದೆ ಹಣಮಂತ ಶೇಖಸಿಂಧಿ 9) ಭೀಮಪ್ಪ ತಂದೆ ತಾಯಪ್ಪ ಶೇಖಸಿಂಧಿ ವ|| 48 ವರ್ಷ, 10) ರಮೇಶ ತಂದೆ ಭೀಮಶಪ್ಪ ಶೇಖಸಿಂಧಿ ವ|| 32 ವರ್ಷ, 11) ಮೋನಪ್ಪ ತಂದೆ ಚಂದ್ರಪ್ಪ ವ|| 50 ವರ್ಷ, 12) ತಿಪ್ಪಣ್ಣ ತಂದೆ ತಾಯಪ್ಪ ವ|| 45 ವರ್ಷ 13) ಶೇಖರ ತಂದೆ ಹಣಮಂತ ಶೇಖಸಿಂಧಿ 14) ತಾಯಪ್ಪ ತಂದೆ ಹಣಮಂತ ಶೇಖಸಿಂಧಿ ವ|| 52 ವರ್ಷ, 15) ರೆಡ್ಡಿ ತಂದೆ ನರಸಪ್ಪ ಬಲರಾಮ ವ|| 26 ವರ್ಷ ಎಲ್ಲರೂ ಸಾ|| ತೋಟ್ಲೂರ ತಾ|| ಗುರಮಿಠಕಲ್ ಜಿ|| ಯಾದಗಿರಿ ಇವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪಿಎಆರ್ ನಂ.11/2020 ಕಲಂ. 107 ಸಿಆರ್.ಪಿಸಿ ನೆದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಬರ ಮಾಡಿಕೊಂಡು ಕಲಂ.116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಬರೆಯಿಸಿಕೊಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 12/2020 ಕಲಂ 107 ಸಿಆರ್ ಪಿಸಿ:-ನಾನು ಸುವರ್ಣ ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು ದಿನಾಂಕ: 13-05-2020 ರಂದು ಬೆಳಿಗ್ಗೆ 10-00 ಗಂಟೆಗೆ ಹಳ್ಳಿ ಭೇಟಿ ಕುರಿತು ಬಳಿಚಕ್ರ, ಕಾಳಬೆಳಗುಂದಿ ಗ್ರಾಮಕ್ಕೆ ಬೇಟಿ ನೀಡಿ ನಂತರ ಮದ್ಯಾಹ್ನ 12-30 ಗಂಟೆಗೆ ತೋಟ್ಲೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಪೊಲೀಸ ಬಾತ್ಮಿದಾರರ ಮುಖಾಂತರ ಮಾಹಿತಿಯನ್ನು ಸಂಗ್ರಹಿಸಲಾಗಿ ಮಾಹಿತಿ ತಿಳಿದುಬಂದಿದ್ದೆನೆಂದರೆ ಈಗ 4-5 ದಿನಗಳಿಂದೆ ಚರ್ಚ ಹತ್ತಿರ ಇರುವ ಲೈಟಿನ ಕಂಬ ಗಾಳಿ ಮಳೆಗೆ ಮುರಿದು ಬಿದ್ದಿದ್ದು ಅದಕ್ಕೆ ಇಂದು ಕೆಇಬಿಯವರು ಬಂದು ಲೈಟಿನ ಕಂಬವನ್ನು ಹಾಕುವ ಸಮಯದಲ್ಲಿ ಕ್ರಿಶ್ಚನ್ ಜನಾಂಗದವರಾದ 1) ಲಾಜರ್ @ ಲಚಮಪ್ಪ ತಂದೆ ರಾಮಪ್ಪ ವ|| 38 ವರ್ಷ 2) ಸೈಮನ್ ತಂದೆ ಸಾಮವೇಲ್ ವ|| 22 ವರ್ಷ, 3) ದೇವದಾಸ್ ತಂದೆ ಮೋಶಪ್ಪ ವ|| 30 ವರ್ಷ, 4) ರವಿ ತಂದೆ ಹಣಮಂತ ಕೊಟಗೇರಿ ವ|| 46 ವರ್ಷ ಕೊಟಗೇರಿ 5) ರಾಜು ತಂದೆ ಹಣಮಂತ ಉಜ್ಜಲಿ ವ|| 30 ವರ್ಷ 6) ಅನಿಲ್ ತಂದೆ ಜೈರಾಮ ಯಲೇರಿ ವ|| 26 ವರ್ಷ, 7) ವಿಜಯಕುಮಾರ ತಂದೆ ಹಣಮಂತ ಕೊಟಗೇರಿ ವ|| 56 ವರ್ಷ, 8) ತಮ್ಮಪ್ಪ ತಂದೆ ಚಿನ್ನಣ್ಣ ಕೊಟಗೇರಿ ವ|| 42 ವರ್ಷ 9) ಸಾಮವೇಲ್ ತಂದೆ ಚಿನ್ನಣ್ಣ ಕೋಲ್ಲೂರ ವ|| 56 ವರ್ಷ 10) ನಿಂಗಪ್ಪ ತಂದೆ ಮೋಹನ ಲಿಂಗೇರಿ ವ|| 28 ವರ್ಷ, 11) ಬಾಸ್ಕರ ತಂದೆ ಪರಪ್ಪ ಪರಪ್ಪನೋರ ವ|| 20 ವರ್ಷ, 12) ನಿಜಗುಣ ತಂದೆ ಹಣಮಂತ ನಂದೆಪಲ್ಲಿ ವ|| 28 ವರ್ಷ, 13) ವಿನೋದ ತಂದೆ ಹಣಮಂತ ನಂದೆಪಲ್ಲಿ ವ|| 26 ವರ್ಷ, 14) ತಾಯಪ್ಪ ತಂದೆ ಭೀಮಣ್ಣ ಕೊಟಗೇರಿ ವ|| 33 ವರ್ಷ ಎಲ್ಲರೂ ಸಾ|| ತೋಟ್ಲೂರ ಇವರ ಮದ್ಯೆ ಮತ್ತು ಊರಿನ ಇತರನಾಂಗದವರ ಮದ್ಯೆ ಚರ್ಚ ಹತ್ತಿರ ಕಂಬ ಹಾಕುವ ಸಂಬಂಧ ಒಬ್ಬರಿಗೊಬ್ಬರು ತಿವ್ರ ವೈಮನಸ್ಸು ಬೆಳಿಸಿಕೊಂಡಿದ್ದು ಇವರು ಊರಲ್ಲಿ ಯಾವ ವೇಳೆಯಲ್ಲಿ ಜಗಳ ಮಾಡಿಕೊಂಡು ಜೀವ ಮತ್ತು ಆಸ್ತಿ ಪಾಸ್ತಿಗೆ ಧಕ್ಕೆ ಉಂಟುಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದು ಸದ್ಯ ಇವರು ಊರಲ್ಲಿ ಶಾಂತಿ ಸುವ್ಯವಸ್ಥಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವದು ಕಂಡು ಬಂದಿದ್ದರಿಂದ ಮರಳಿ 03-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಊರಿನ ಕ್ರೀಶ್ಚನ್ ಜನಾಂಗದವರಾದ 1) ಲಾಜರ್ @ ಲಚಮಪ್ಪ ತಂದೆ ರಾಮಪ್ಪ ವ|| 38 ವರ್ಷ 2) ಸೈಮನ್ ತಂದೆ ಸಾಮವೇಲ್ ವ|| 22 ವರ್ಷ, 3) ದೇವದಾಸ್ ತಂದೆ ಮೋಶಪ್ಪ ವ|| 30 ವರ್ಷ, 4) ರವಿ ತಂದೆ ಹಣಮಂತ ಕೊಟಗೇರಿ ವ|| ಕೊಟಗೇರಿ 5) ರಾಜು ತಂದೆ ಹಣಮಂತ ಉಜ್ಜಲಿ ವ|| 30 ವರ್ಷ 6) ಅನಿಲ್ ತಂದೆ ಜೂರಾಮ ಯಲೇರಿ ವ|| 26 ವರ್ಷ, 7) ವಿಜಯಕುಮಾರ ತಂದೆ ಹಣಮಂತ ಕೊಟಗೇರಿ 8) ತಮ್ಮಪ್ಪ ತಂದೆ ಚಿನ್ನಣ್ಣ ಕೊಟಗೇರಿ ವ|| 42 ವರ್ಷ 9) ಸಾಮವೇಲ್ ತಂದೆ ಚಿನ್ನಣ್ಣ ಕೋಲ್ಲೂರ ವ|| 56 ವರ್ಷ 10) ನಿಂಗಪ್ಪ ತಂದೆ ಮೋಹನ ಲಿಂಗೇರಿ ವ|| 28 ವರ್ಷ, 11) ಬಾಸ್ಕರ ತಂದೆ ಪರಪ್ಪ ಪರಪ್ಪನೋರ ವ|| 20 ವರ್ಷ, 12) ನಿಜಗುಣ ತಂದೆ ಹಣಮಂತ ನಂದೆಪಲ್ಲಿ ವ|| 28 ವರ್ಷ, 13) ವಿನೋದ ತಂದೆ ಹಣಮಂತ ನಂದೆಪಲ್ಲಿ ವ|| 26 ವರ್ಷ, 14) ತಾಯಪ್ಪ ತಂದೆ ಭೀಮಣ್ಣ ಕೊಟಗೇರಿ ವ|| 33 ವರ್ಷ ಎಲ್ಲರೂ ಸಾ|| ತೋಟ್ಲೂರ ತಾ|| ಗುರಮಿಠಕಲ್ ಜಿ|| ಯಾದಗಿರಿ ಇವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪಿಎಆರ್ ನಂ.12/2020 ಕಲಂ. 107 ಸಿಆರ್.ಪಿಸಿ ನೆದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಬರ ಮಾಡಿಕೊಂಡು ಕಲಂ.116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಬರೆಯಿಸಿಕೊಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:-75/2020, ಕಲಂ, 341, 323,324, 355, 504, 506 ಸಂಗಡ 34 ಐ ಪಿಸಿ:- ಇಂದು ದಿನಾಂಕ 13.05.2020 ರಂದು 6.00 ಪಿ.ಎಮ.ಕ್ಕೆ ಅಜರ್ಿದಾರ ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿ ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ. 13.05.2020 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ 1) ಚಂದಪ್ಪ ತಂದೆ ಧರ್ಮರಾಯ ಯಾದವ ವಯ|| 28 ವರ್ಷ, ಉ|| ಎಲೆಕ್ಟ್ರೀಕಲ್ ಕೆಲಸ 2) ಹಣಮಂತ್ರಾಯ ತಂದೆ ಧರ್ಮರಾಯ ಯಾದವ ವಯ|| 25 ವರ್ಷ, ಒಕ್ಕಲುತನ ಜಾ|| ಯಾದವ ಇಬ್ಬರೂ ಅಣ್ಣ-ತಮ್ಮಂದಿರು ಕೂಡಿ ಮೊದಲಿನ ಜಗಳದ ವಿಷಯವನ್ನು ಕೆದಕಿ ನನ್ನ ಮನೆ ಮುಂದೆ ಇರುವ ಮಸೀದಿ ಹತ್ತಿರ ನನಗೆ ತಡೆದು ನಿಲ್ಲಿಸಿ ನನ್ನೊಂದಿಗೆ ಜಗಳ ತೆಗೆದು, ರಂಡೀ ಮಗನೇ ಸೂಳೇ ಮಗನೇ, ನಮಗೆ ಅಂಜಿ ಊರು ಬಿಟ್ಟು ಹೋದ ಹಿಜಡಾ ಸೂಳೇ ಮಗನೇ ಅಂತ ಅವಾಚ್ಯವಾಗಿ ಬೈದು, ನನಗೆ ಅಲ್ಲಿ ಬಿದ್ದಿದ್ದ ಮುರಿದ ಬಾಗಿಲಿನ ಚೌಕಟ್ಟು ತೆಗೆದುಕೊಂಡು ಚಂದಪ್ಪ ಈತನು ನನಗೆ ಎಡಗೈ ಮುಂಭಾಗ ಹಾಗೂ ಟೊಂಕದ ಮೇಲೆ ಮನಸ್ಸಿಗೆ ಬಂದಂತೆ ಹೊಡೆದು ರಕ್ತಗಾಯ ಮಾಡಿದನು ಮತ್ತು ಹಣಮಂತ್ರಾಯ ಈತನು ನನಗೆ ಕೆಳಗೆ ಹಾಕಿ ಚಪ್ಪಲಿಯಿಂದ ತಲೆಗೆ ಹೊಡೆದು ಕಾಲಿನಿಂದ ಒದ್ದಿರುತ್ತಾನೆ . ಜೀವ ಸಹಿತ ಉಳಿಸುವದಿಲ್ಲ ಅಂತ ಜೀವಬೆದರಿಕೆ ಹಾಕಿ ಹೋದರು ಅಂತಾ ಸಾರಾಂಶ ಇರುತ್ತದೆ.
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 81/2020 ಕಲಂ: 498(ಎ), 323, 504, 506 ಸಂಗಡ 34 ಐಪಿಸಿ:- ುಮಾರು 06 ವರ್ಷಗಳ ಹಿಂದೆ ಫಿರ್ಯಾದಿದಾರಳಿಗೆ ಆರೋಪಿ ಚಂದ್ರಾಮರಡ್ಡಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ 1 ವರ್ಷಗಳ ವರೆಗೆ ಗಂಡ , ಅತ್ತೆ, ಮಾವ ಇವರೆಲ್ಲಾರು ಫಿರ್ಯಾದಿದಾರಳೊಂದಿಗೆ ಚನ್ನಾಗಿದ್ದು ಇದ್ದು ನಂತರ ಗಂಡನು ಫೀರ್ಯಾದಿದಾರಳಿಗೆ ನೀನು ಚನ್ನಾಗಿಲ್ಲ ರಂಡಿ, ಬೋಸಡಿ, ಚಿನಾಲಿ ನೀನು ಬಂಜೆ ಇದ್ದಿ ಅಂತಾ ಅವಾಚ್ಯವಾಗಿ ಬೈಯುತ್ತ, ಹೊಡೆ-ಬಡೆ ಮಾಡುತ್ತ ಮಾನಸೀಕ ಮತ್ತು ದೈಹಿಕ ಹಿಂಸೆ ನೀಡತೊಡಗಿದ. ಆಗ ಫೀರ್ಯಾದಿದಾರಳು ಈ ವಿಷಯವನ್ನು ತನ್ನ ಅತ್ತೆ,ಮಾವ ಇವರಿಗೆ ತಿಳಿಸಿದಾಗ ಅವರು ಕೂಡ ನೀನು ಬಂಜೆ ಇದ್ದಿ ನಿನಗೆ ಮಕ್ಕಳಾಗುವುದಿಲ್ಲ ಅಂತಾ ಮಾನಸೀಕವಾಗಿ ಹಿಂಸಿಸತೊಡಗಿದರು. ನಂತರ ಕಳೆದ 8 ತಿಂಗಳ ಹಿಂದೆ ಫಿರಾದಿಯ ಅಕ್ಕ ನವಗ್ರಹ ಪೂಜೆಗೆ ಕರೆದಿದ್ದರಿಂದ ಫಿರ್ಯಾದಿದಾರಳು ಅಲ್ಲಿಗೆ ಹೋಗಿ ನಂತರ ತವರು ಮನೆಗೆ ಹೋಗಿದ್ದು ಆ ಮೇಲೆ ಗಂಡ ಕರೆಯಲು ಬರುತ್ತಾನೆಂದು ನೋಡತ್ತ ಇದ್ದರು ಬಾರೆದೇ ಇರುವುದರಿಂದ ದಿನಾಂಕ 11.05.2020 ರಂದು ಫಿರ್ಯಾದಿದಾರಳು ಒಬ್ಬಳೆ ತನ್ನ ಗಂಡನಿಗೆ ಫೋನ್ ಮಾಡಿ ಗಂಡನ ಮನೆಗೆ ಹೋದಾಗ ಗಂಡ,ಅತ್ತೆ, ಮಾವ ಸೇರಿಕೊಂಡು ಅವಾಚ್ಯವಾಗಿ ಬೈದು, ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ತನ್ನ ತವರು ಮನೆಗೆ ಹೋಗಿ ವಿಚಾರ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 81/2020 ಕಲಂ: 498(ಎ), 323, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಅದೆ.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 62/2020 ಕಲಂ: 279,,338 ಐಪಿಸಿ:- ಇಂದು ದಿನಾಂಕ: 13/05/2020 ರಂದು 6-30 ಪಿಎಮ್ ಕ್ಕೆ ಶ್ರೀಮತಿ ಚಂದ್ರಕಲಾ ಗಂಡ ಶಂಕರ ಮಾಸನ, ವ:45, ಜಾ:ಎಸ್.ಸಿ, ಉ:ಸರಕಾರಿ ಶಾಲಾ ಶಿಕ್ಷಕಿ ಸಾ:ಅಂಬೇಡ್ಕರ ನಗರ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ಗಂಡ ಶಂಕರ ತಂದೆ ಶಿವಪ್ಪ ಮಾಸನ, ವ:61 ಶಿಕ್ಷಕ ವೃತ್ತಿಯಿಂದ ನಿವೃತ್ತನಾಗಿರುತ್ತಾನೆ. ಹೀಗಿದ್ದು ದಿನಾಂಕ: 10/05/2020 ರಂದು ಬೆಳಗ್ಗೆ ನನ್ನ ಗಂಡ ಶಂಕರ ಈತನು ಕೆಲಸದ ಪ್ರಯುಕ್ತ ಮನಗನಾಳ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಮೋಟರ್ ಸೈಕಲ್ ನಂ. ಎಪಿ 22 ಎಡಿ 0305 ನೇದ್ದನ್ನು ತಾನೇ ಚಲಾಯಿಸಿಕೊಂಡು ಹೋದನು. ನಾನು ಮನೆಯಲ್ಲಿದ್ದೇನು. ಬೆಳಗ್ಗೆ 10-30 ಗಂಟೆ ಸುಮಾರಿಗೆ ನನ್ನ ಖಾಸ ತಮ್ಮನಾದ ಮಹೇಶ ತಂದೆ ಹಳ್ಳೆಪ್ಪ ಮುದ್ನಾಳ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಿನ್ನ ಗಂಡನು ಗುರುಸಣಗಿ ಹತ್ತಿರ ಮೋಟರ್ ಸೈಕಲ್ ಸ್ಕಿಡ್ಡ ಮಾಡಿಕೊಂಡು ಬಿದ್ದು ಭಾರಿ ಗಾಯ ಹೊಂದಿರುತ್ತಾನೆ. ಆತನಿಗೆ 108 ಅಂಬ್ಯುಲೇನ್ಸದಲ್ಲಿ ಉಪಚಾರಕ್ಕಾಗಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದೇವೆ. ನೀವು ಬೇಗನೆ ಆಸ್ಪತ್ರೆಗೆ ಬನ್ನಿ ಎಂದು ಹೇಳಿದನು. ಆಗ ಗಾಬರಿಯಾದ ನಾನು ಮತ್ತು ನಮ್ಮ ಸಂಬಂಧಿಕರು ಕೂಡಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡನಿಗೆ ನೋಡಲಾಗಿ ಅಪಘಾತದಲ್ಲಿ ನನ್ನ ಗಂಡನಿಗೆ ಬಲಗಣ್ಣಿನ ಹುಬ್ಬಿನ ಹತ್ತಿರ ಭಾರಿ ರಕ್ತಗಾಯ, ಕಣ್ಣಿನ ಕೆಳಗಡೆ ತರಚಿದ ಗಾಯ ಮತ್ತು ಕೈ ಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. ನನ್ನ ಗಂಡನು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ಅಲ್ಲಿಯೇ ಇದ್ದ ನನ್ನ ತಮ್ಮನಾದ ಮಹೇಶ ಮುದ್ನಾಳ ಈತನಿಗೆ ಅಪಘಾತದ ಬಗ್ಗೆ ಕೇಳಲಾಗಿ ಬೆಳಗ್ಗೆ 10-30 ಗಂಟೆ ಸುಮಾರಿಗೆ ನಾನು ಕೆಲಸದ ಪ್ರಯುಕ್ತ ಗುರುಸಣಗಿ ಗ್ರಾಮಕ್ಕೆ ಹೋಗಿ ಮರಳಿ ಯಾದಗಿರಿಗೆ ಬರುತ್ತಿದ್ದೇನು. ನಿನ್ನ ಗಂಡನು ನಾಯ್ಕಲ್ ಕಡೆಯಿಂದ ಯಾದಗಿರಿಗೆ ಮೋಟರ್ ಸೈಕಲ್ ನಂ. ಎಪಿ 22 ಎಡಿ 0305 ನೇದ್ದರ ಮೇಲೆ ಒಬ್ಬನೆ ಬರುತ್ತಿದ್ದನು. ಯಾದಗಿರಿ-ವಡಗೇರಾ ಮೇನ ರೋಡ ಗುರುಸಣಗಿ ಕ್ರಾಸ ಹತ್ತಿರ ಶಂಕರ ಮಾಮನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಯಾವುದೋ ಒಂದು ನಾಯಿ ರಸ್ತೆ ಮೇಲೆ ಬಂದಿದ್ದರಿಂದ ಶಂಕರ ಮಾಮನು ಮೋಟರ್ ಸೈಕಲ್ ಅದಕ್ಕೆ ಗುದ್ದುವುದನ್ನು ತಪ್ಪಿಸಲು ಹೋಗಿ ತಾನೆ ಸ್ಕಿಡ್ಡಾಗಿ ಮೋಟರ್ ಸೈಕಲ್ ಸಮೇತ ಬಿದ್ದುಬಿಟ್ಟನು. ನಾನು ಹೋಗಿ ನೋಡಲಾಗಿ ನಿನ್ನ ಗಂಡನಿಗೆ ಬಲಗಣ್ಣಿನ ಹುಬ್ಬಿನ ಹತ್ತಿರ ಭಾರಿ ರಕ್ತಗಾಯ, ಕಣ್ಣಿನ ಕೆಳಗಡೆ ತರಚಿದ ಗಾಯ ಮತ್ತು ಕೈ ಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು ಎಂದು ಹೇಳಿದನು. ಯಾದಗಿರಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆಯ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ಸದ್ಯ ಗಂಡನಿಗೆ ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ಕರೆದುಕೊಂಡು ಹೋಗಿ ತೋರಿಸುವವರು ಯಾರು ಇಲ್ಲದ್ದರಿಂದ ದೂರು ಕೊಡುವುದಿದ್ದರೆ ನಂತರ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿದಾಗ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು ಅಂತಾ ನನಗೆ ಹೇಳಿದ್ದರಿಂದ ಈ ದಿವಸ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಮೋಟರ್ ಸೈಕಲ್ ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ, ನಾಯಿ ಅಡ್ಡ ಬಂದಾಗ ಅದಕ್ಕೆ ಗುದ್ದುವುದು ತಪ್ಪಿಸಲು ಹೋಗಿ ಮೋಟರ್ ಸೈಕಲ್ ಸ್ಕಿಡ್ಡ ಮಾಡಿಕೊಂಡು ಬಿದ್ದು ಭಾರಿ ಗಾಯಗೊಂಡ ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 62/2020 ಕಲಂ: 279,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 67/2020 ಕಲಂ 96 ಕೆ.ಪಿ. ಎಕ್ಟ್:- ಫಿಯರ್ಾದಿದಾರರು ಸಿಬ್ಬಂದಿಯವರೊಂದಿಗೆ ದಿನಾಂಕ:13/05/2020 ರಂದು 7 ಪಿ.ಎಮ್. ಸುಮಾರಿಗೆ ಭೀ.ಗುಡಿಯ ಪೋಸ್ಟ್ ಆಫೀಸ್ ಹತ್ತಿರ ಹಗಲು ಗಸ್ತು ಮಾಡುತ್ತಾ ಹೋದಾಗ ಒಬ್ಬ ವ್ಯಕ್ತಿ ಅವರನ್ನು ನೋಡಿ ಮರೆಮಾಚುತ್ತಾ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಬೆನ್ನಟ್ಟಿ ಹಿಡಿದು ವಿಚಾರಿಸಲಾಗಿ ವಿಧವಿಧವಾಗಿ ಅಸಮರ್ಪಕ ಉತ್ತರ ಕೊಡುತ್ತಿದ್ದು ಪರಿಶೀಲಿಸಿ ನೋಡಲಾಗಿ ಅವನ ಬಳಿ ಒಂದು ಕಬ್ಬಿಣದ ರಾಡು ಸಿಕ್ಕಿದ್ದು ಸದರಿಯವನ ಮೇಲೆ ಬಲವಾದ ಸಂಶಯ ಬಂದಿದ್ದರಿಂದ ಮತ್ತು ಸದರಿಯವನಿಗೆ ಕೂಲಂಕುಷವಾಗಿ ವಿಚಾರಣೆಗೊಳಪಡಿಸುವ ಉದ್ದೇಶದಿಂದ ಅವನಿಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಬಂದು ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 50/2020 279 337 338 ಐಪಿಸಿ:-ದಿನಾಂಕ:12/05/2020 ರಂದುಹುಣಸಗಿ ಸರಕಾರಿ ದವಾಖಾನೆಯಿಂದಾ 10.00 ಗಂಟೆಗೆ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರಗೆ ಬೇಟಿ ಕೊಟ್ಟು ಗಾಯಳುದಾರರಾದ ಶೈಲಾ ಗಂಡ ಸಂಗಪ್ಪ ಡಿಗ್ಗಿ ಸಾ:ಹಟ್ಟಿ ಇವರಿಗೆೆ ವಿಚಾರಿಸಲು, ತಾನು & ತನ್ನ ಗಂಡ ಸಂಗಪ್ಪ ಹಾಗೂ ಮಾವ ಭೀಮಪ್ಪ ರವರು ಕೂಡಿಕೊಂಡು ನಮ್ಮ ಕಾರ್ ನಂ:ಕೆಎ-36 ಪಿ-0648 ನೇದ್ದರಲ್ಲಿ ಹಟ್ಟಿಯಿಂದ ಹೊರಟು ಹಿರೂರ ಗ್ರಾಮಕ್ಕೆ ಹೋಗಿ ನಮ್ಮ ಮಾವನ ಪೆನಶೆನ್ ಹಣ ಪಡೆದುಕೊಂಡು ಬರಲು ಹೊರಟಾಗ ಹುಣಸಗಿ-ಕಕ್ಕೇರಾ ರೋಡಿನ ಮೇಲೆ ಕನಗಂಡನಹಳ್ಳಿ ಗ್ರಾಮದ ಬೋರವೆಲ್ ಹತ್ತಿರ ಹೊರಟಾಗ ಕಾರ್ನ್ನು ನನ್ನ ಗಂಡನಾದ ಸಂಗಪ್ಪನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೆಲೆ ಬಲಗಡೆ ಕಟ್ ಮಾಡಿದ್ದರಿಂದ ಕಾರ್ ಪಲ್ಟಿಯಾಗಿದ್ದು ಕೆಳಗೆ ಬಿದ್ದು ಅಪಘಾತವಾಗಿದ್ದು,ಅಪಘಾತದಲ್ಲಿ ನನಗೆ ಮತ್ತು ನನ್ನ ಗಂಡನಿಗೆ ಹಾಗೂ ನಮ್ಮ ಮಾವ ಭೀಮಪ್ಪ ರವರಿಗೆ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿರುತ್ತವೆ ಅಂತಾ ಇತ್ಯಾದಿ ಹೇಳಿಕೆ ದೂರು ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 44/2020 ಕಲಂ: 32, 34 ಕೆಇ ಆಕ್ಟ:- ಇಂದು ದಿನಾಂಕ.13/0/2020 ರಂದು ರಾತ್ರಿ 10-30 ಪಿಎಂಕ್ಕೆ ಶ್ರೀ ಶರಣಗೌಡ ನ್ಯಾಮಣ್ಣವರ ಸಿ.ಪಿ.ಐ ಯಾದಗಿರಿ ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆ ಮತ್ತು ವರದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:13/05/2020 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ನಾನು ಕಚೇರಿಯಲ್ಲಿದ್ದಾಗ ಲಾಡೆಜಗಲ್ಲಿಯಲ್ಲಿ ಪಾರ್ವತಿ ಪೂಜಾರಿ ಅನ್ನುವವರ ಅಂಗಡಿ ಹತ್ತಿರ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಕ್ವಾಟರ ಪೌಚುಗಳು ಮತ್ತು ಬಿಯರಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ನಾನು ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಸೈದಪ್ಪ ಸಿ.ಹೆಚ್.ಸಿ-34, ವಿಷ್ಣುವರ್ಧನ್ ಸಿ.ಪಿ.ಸಿ-128 ಇವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ-161 ನೇದ್ದರಲ್ಲಿ 7-15 ಪಿ.ಎಮ್ ಕ್ಕೆ ಕಚೇರಿಯಿಂದ ಹೊರಟು ಲಾಡೆಜಗಲ್ಲಿಯಲ್ಲಿ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ಪಾರ್ವತಿ ಪೂಜಾರಿ ಅನ್ನುವವರ ಅಂಗಡಿಯ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಅಂಗಡಿಯ ಮುಂದೆ ಸ್ಟ್ರೀಟ್ ಲೈಟ್ನ ಬೆಳಕಿನಲ್ಲಿ ಒಬ್ಬನು ನಿಂತುಕೊಂಡು ಕಾಟನ್ ಬಾಕ್ಸ್ಗಳಲ್ಲಿಂದ ಕ್ವಾರ್ಟರ್ ಪೌಚುಗಳನ್ನು ಮತ್ತು ಬಿಯರಗಳನ್ನು ತೆಗೆದು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಅವನಿಂದ ಖರೀಧಿಸಿಕೊಂಡು ಹೋಗುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು 7:45 ಪಿಎಮ್ ಕ್ಕೆ ದಾಳಿ ಕೈಗೊಂಡಿದ್ದು, ಅಕ್ರಮವಾಗಿ ಮಧ್ಯಪಾನ ಮಾರಾಟ ಮಾಡುತ್ತಿದ್ದವನು ಓಡಿಹೋಗಿದ್ದು, ಆತನ ಹೆಸರು ರೆಡ್ಡಿ ತಂದೆ ಸಿದ್ದಲಿಂಗಪ್ಪ ಪೂಜಾರಿ, ವಯ:35 ವರ್ಷ, ಜಾತಿ:ಕುರುಬ, ಉ||ಆಟೋಡ್ರೈವರ್, ಸಾ||ಲಾಡೆಜಗಲ್ಲಿ, ಯಾದಗಿರಿ ಎಂದು ತಿಳಿದುಬಂದಿರುತ್ತದೆ. ಸದರಿ ವ್ಯಕ್ತಿ ಮಧ್ಯಪಾನ ಮಾರಾಟ ಮಾಡುತ್ತಿದ್ದ ಸ್ಥಳದಿಂದ ಈ ಕೆಳಕಂಡ ಮಧ್ಯಪಾನವನ್ನು ಜಪ್ತಮಾಡಿಕೊಂಡು 8:45 ಪಿ.ಎಮ್. ವರೆಗೆ ಪಂಚನಾಮೆ ಕೈಗೊಂಡಿದ್ದು ಇರುತ್ತದೆ. ಕಾರಣ ಅಕ್ರಮ ಮಧ್ಯಪಾನ ಮಾರಾಟ ಮಾಡಿ ಓಡಿಹೋದ ರೆಡ್ಡಿ ತಂದೆ ಸಿದ್ದಲಿಂಗಪ್ಪ ಪೂಜಾರಿ, ವಯ:35 ವರ್ಷ, ಜಾತಿ:ಕುರುಬ, ಉ||ಆಟೋಡ್ರೈವರ್, ಸಾ||ಲಾಡೆಜಗಲ್ಲಿ, ಯಾದಗಿರಿ ಈತನ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಈ ಕೂಡ ಜಪ್ತಿಪಂಚನಾಮೆಯನ್ನು ಮತ್ತು ಈ ಕೆಳಕಂಡ ಮುದ್ದೇಮಾಲನ್ನು ಸಲ್ಲಿಸಲಾಗಿದೆ. 1)ಓರಿಜಿನಲ್ ಡಿಲಕ್ಸ್ ವ್ಹಿಸಿ 90 ಎಮ್.ಎಲ್.ನ ಒಟ್ಟು 50 ಪೌಚುಗಳು ಒಟ್ಟು 4.5 ಲೀಟರ್ ಇದ್ದು ಅದರ ಬೆಲೆ ರೂ.1500/-, 2)ಯು.ಎಸ್. ವಿಸ್ಕಿಯ 90 ಎಮ್.ಎಲ್.ನ ಒಟ್ಟು 40 ಪೌಚುಗಳು ಒಟ್ಟು 3.6 ಲೀಟರ್ ಇದ್ದು ಅದರ ಬೆಲೆ ರೂ.1200/-, 3)ಕಿಂಗ್ಫಿಶರ್ ಬಿಯರ್ 650 ಎಮ್.ಎಲ್.ನ 10 ಬಾಟಲಿಗಳು ಒಟ್ಟು 6.5 ಲೀಟರ್ ಬೆಲೆ ರೂ.1450/- ಅಂತ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.44/2020 ಕಲಂ.32, 34 ಕೆಇ ಆಕ್ಟ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using