ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/05/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 59/2020 ಕಲಂ 498(ಎ), 323, 324, 504, 506 ಸಂ 34 ಐಪಿಸಿ:-ಸುಮಾರು 6 ವರ್ಷಗಳ ಹಿಂದೆ ಫಿರ್ಯಾಧಿಗೆ ಆರೋಪಿತನಾದ ಶಿವಪ್ಪ ತಂದೆ ಮರಗಪ್ಪ ಕುಂಟನೊರ ಸಾಃ ಹಳಗೇರಾ ಇವನ ಜೋತೆಗೆ ಮದುವೆಯಾಗಿದ್ದು, ಸುಮಾರು 5 ವರ್ಷ 6 ತಿಂಗಳುಗಳಿಂದ ಆರೋಪಿತನು ಫಿರ್ಯಾಧಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೂಳ ಕೊಡುತ್ತಾ ಬಂದಿದ್ದು, ದಿನಾಂಕ 09-05-2020 ರಂದು ಬೆಳಿಗ್ಗೆ 9-00 ಗಂಟೆಗೆ ಫಿರ್ಯಾದಿದಾರಳು ತನ್ನ ಮನೆಯಲ್ಲಿ ಇರುವಾಗ ಆರೋಪಿತನು ಫಿರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ, ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿ ಜೀವದ ಭಯ ಹಾಕಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೂಳ ಕೊಟ್ಟ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 50/2020 279 337 338 ಐಪಿಸಿ:-ದಿನಾಂಕ:12/05/2020 ರಂದುಹುಣಸಗಿ ಸರಕಾರಿ ದವಾಖಾನೆಯಿಂದಾ 10.00 ಗಂಟೆಗೆ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರಗೆ ಬೇಟಿ ಕೊಟ್ಟು ಗಾಯಳುದಾರರಾದ ಶೈಲಾ ಗಂಡ ಸಂಗಪ್ಪ ಡಿಗ್ಗಿ ಸಾ:ಹಟ್ಟಿ ಇವರಿಗೆೆ ವಿಚಾರಿಸಲು, ತಾನು & ತನ್ನ ಗಂಡ ಸಂಗಪ್ಪ ಹಾಗೂ ಮಾವ ಭೀಮಪ್ಪ ರವರು ಕೂಡಿಕೊಂಡು ನಮ್ಮ ಕಾರ್ ನಂ:ಕೆಎ-36 ಪಿ-0648 ನೇದ್ದರಲ್ಲಿ ಹಟ್ಟಿಯಿಂದ ಹೊರಟು ಹಿರೂರ ಗ್ರಾಮಕ್ಕೆ ಹೋಗಿ ನಮ್ಮ ಮಾವನ ಪೆನಶೆನ್ ಹಣ ಪಡೆದುಕೊಂಡು ಬರಲು ಹೊರಟಾಗ ಹುಣಸಗಿ-ಕಕ್ಕೇರಾ ರೋಡಿನ ಮೇಲೆ ಕನಗಂಡನಹಳ್ಳಿ ಗ್ರಾಮದ ಬೋರವೆಲ್ ಹತ್ತಿರ ಹೊರಟಾಗ ಕಾರ್ನ್ನು ನನ್ನ ಗಂಡನಾದ ಸಂಗಪ್ಪನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೆಲೆ ಬಲಗಡೆ ಕಟ್ ಮಾಡಿದ್ದರಿಂದ ಕಾರ್ ಪಲ್ಟಿಯಾಗಿದ್ದು ಕೆಳಗೆ ಬಿದ್ದು ಅಪಘಾತವಾಗಿದ್ದು,ಅಪಘಾತದಲ್ಲಿ ನನಗೆ ಮತ್ತು ನನ್ನ ಗಂಡನಿಗೆ ಹಾಗೂ ನಮ್ಮ ಮಾವ ಭೀಮಪ್ಪ ರವರಿಗೆ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿರುತ್ತವೆ ಅಂತಾ ಇತ್ಯಾದಿ ಹೇಳಿಕೆ ದೂರು ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ
Hello There!If you like this article Share with your friend using