ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/05/2020

By blogger on ಶುಕ್ರವಾರ, ಮೇ 1, 2020








                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/05/2020 
                                                                                                               
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 65/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ:- ಇಂದು ದಿನಾಂಕ: 01-05-2020 ರಂದು 03-10 ಪಿ.ಎಮ್ ಕ್ಕೆ ಸುವರ್ಣ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಸೈದಾಪೂರದಲ್ಲಿ ಕಳ್ಳಬಟ್ಟಿಸರಾಯಿ ದಾಳಿ ಮಾಡಿಕೊಂಡು ಬಂದು ಜ್ಞಾಪನ ಪತ್ರದೊಂದಿಗೆ ಕಳ್ಳಬಟ್ಟಿ ಸರಾಯಿ ಜಪ್ತಿಪಂಚನಾಮೆ ಕಳ್ಳಬಟ್ಟಿ ಸರಾಯಿ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 65/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 66/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ:- ಇಂದು ದಿನಾಂಕ: 01.05.2020 ರಂದು 05.10 ಪಿ.ಎಮ್.ಕ್ಕೆ ಸ. ತಫರ್ೇ ಶ್ರೀಮತಿ ಸುವರ್ಣ ಮ.ಪಿ.ಎಸ್.ಐ ರವರು ಅಕ್ರಮ ಸೇಂದಿ ಜಪ್ತಿಪಂಚನಾಮೆ ಮತ್ತು ಮುದ್ದೇಮಾಲು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಜ್ಞಾಪನ ನೀಡಿದ್ದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 66/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 117/2020 ಕಲಂ: 279,337,338 ಐ.ಪಿಸಿ:- ಇಂದು ದಿನಾಂಕಃ 01/05/2020 ರಂದು 1-45 ಪಿ.ಎಮ್ ಕ್ಕೆ ಶ್ರೀ ದಾವಲಸಾಬ @ ದಾವುದ್ ತಂದೆ ಕರೀಮಸಾಬ ಶಿತಲದಾರ ಸಾ: ಬೆನ್ಸನ್ ಟೌನ ಬೆಂಗಳೂರು ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾಧಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಮತ್ತು ನನ್ನ ಸ್ನೇಹಿತನಾದ ಮೋಹಿನ ತಂದೆ ಪತ್ತೆಸಾಬ ಅರಕೇರಿ ಸಾ: ವಾಗಣಗೇರಾ ಇಬ್ಬರೂ ಕೂಡಿಕೊಂಡು ದಿನಾಂಕಃ 24/03/2020 ರಂದು ಬೆಂಗಳೂರಿನಿಂದ ವಾಗಣಗೇರಾ ಗ್ರಾಮದಲ್ಲಿರುವ ಮೊಹಿನ್ ಇವರ ಮನೆಗೆ ಬಂದಿರುತ್ತೇವೆ. ದಿನಾಂಕಃ 25/04/2020 ರಂದು ಮುಂಜಾನೆ ನಾನು ಮತ್ತು ನನ್ನ ಸ್ನೇಹಿತ ಮೋಹಿನ ಇಬ್ಬರೂ ಅವರ ಮನೆಯಿಂದ ಪ್ಯಾಶನ್ ಪ್ರೋ ಮೋ.ಸೈಕಲ್ ನಂಬರ ಕೆ.ಎ 33 ವೈ 2231 ನೇದ್ದರ ಮೇಲೆ ಸುರಪೂರಕ್ಕೆ ಬಂದು, ಕಿರಾಣಿ ಸಂತೆ ಮರಳಿ ವಾಗಣಗೇರಾ ಹೋಗುವಾಗ ನಾನು ಮೋ.ಸೈಕಲ್ ನಡೆಸುತ್ತಿದ್ದು, ಮೋಹಿನ್ ಇತನು ನನ್ನ ಹಿಂದುಗಡೆ ಕುಳಿತಿದ್ದನು. ನಾನು ಸುರಪೂರದಿಂದ ಕುಂಬಾರಪೇಟ ಮಾರ್ಗವಾಗಿ ವಾಗಣಗೇರಾ ಕಡೆಗೆ ಮೋ.ಸೈಕಲ್ ನಿಧಾನವಾಗಿ ನಡೆಸಿಕೊಂಡು ಹೊರಟಿದ್ದಾಗ ಮುಂಜಾನೆ 9-00 ಗಂಟೆಯ ಸುಮಾರಿಗೆ ತಳವಾರಗೇರಾ ಸಿಮಾಂತರದಲ್ಲಿ ಬರುವ ಇಟ್ಟಂಗಿ ಭಟ್ಟಿ ಹತ್ತಿರ ಎದುರಿನಿಂದ ಹೊಂಡಾಶೈನ್ ಮೋಟಾರ ಸೈಕಲ್ ನಂಬರ ಕೆ.ಎ 33 ಎಕ್ಸ್ 9845 ನೇದ್ದರ ಸವಾರನು ತನ್ನ ಮೋ.ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನಮ್ಮ ಮೋಟರ ಸೈಕಲಿಗೆ ಜೋರಾಗಿ ಡಿಕ್ಕಿಹೊಡೆದಿದ್ದರಿಂದ ನಾವಿಬ್ಬರೂ ಮೋಟರ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದೇವು. ಸದರಿ ಅಪಘಾತದಲ್ಲಿ ನನ್ನ ಬಲಗಾಲಿನ ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ. ಹಾಗು ಬಲಗೈ ಹಸ್ತ, ಮದ್ಯದ ಬೆರಳಿಗೆ, ಮೊಣಕೈ ಹತ್ತಿರ ಹಾಗು ಎಡಮೊಣಕೈ ತರಚಿದ ರಕ್ತಗಾಯಗಳಾಗಿರುತ್ತದೆ. ಮತ್ತು ಎಡಪಕ್ಕಡಿಗೆ, ಎದೆಯಲ್ಲಿ ಒಳಪೆಟ್ಟಾಗಿರುತ್ತದೆ. ಮೊಹೀನ್ ಇತನ ಬಲಗಾಲಿನ ತೊಡೆಯಲ್ಲಿ ಭಾರಿಗುಪ್ತಗಾಯ ಎಲಬು ಮುರಿದಿದ್ದು, ಎಡಗೈ ಹಸ್ತ, ಬೆರಳುಗಳಿಗೆ ಹಾಗು ಮೊಣಕೈ ಹತ್ತಿರ ಹಾಗು ಎಡಪಕ್ಕಡಿಗೆ ತರಚಿದ ರಕ್ತಗಾಯಗಳಾಗಿ ಒಳಪೆಟ್ಟುಗಳಾಗಿರುವ ಬಗ್ಗೆ ತಿಳಿಸಿರುತ್ತಾನೆ. ನಮಗೆ ಅಪಘಾತ ಪಡಿಸಿದ ಮೋ.ಸೈಕಲ್ ಸವಾರ ಹಾಗು ಆತನ ಹಿಂಬದಿ ಸವಾರ ಇಬ್ಬರೂ ಸಹ ತಮ್ಮ ಮೋ.ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿರುವದರಿಂದ ಅವರಿಗೂ ಸಹ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರ ಹೆಸರು ವಿಳಾಸ ವಿಚಾರಿಸಲಾಗಿ ಮೋ.ಸೈಕಲ್ ನಡೆಸುತ್ತಿದ್ದವನ ಹೆಸರು ಬೈಲಪ್ಪ ತಂದೆ ಭೀಮಣ್ಣ ಯಾದವ ಹಾಗು ಆತನ ಹಿಂಬದಿ ಸವಾರನ ಹೆಸರು ಸಾಬಣ್ಣ ತಂದೆ ನಾಗಪ್ಪ, ಇಬ್ಬರೂ ಸಾ: ಚಿಕ್ಕನಹಳ್ಳಿ ತಾ: ಸುರಪೂರ ಅಂತ ಗೊತ್ತಾಗಿರುತ್ತದೆ. 
                                             **2**
   ಬಳಿಕ ರಸ್ತೆಯಲ್ಲಿ ಹೊರಟಿದ್ದ ಬೇರೆ ವಾಹನದವರು ಬಂದು  ಮೋಹಿನ್ ಇತನ ತಮ್ಮನಾದ ರಫೀಕ ಇವರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಸ್ವಲ್ಪ ಹೊತ್ತಿನಲ್ಲಿ ರಫೀಕ್ ಹಾಗು ಆತನ ತಾಯಿಯಾದ ಸಾಬಿರಾಬೇಗಂ ಇಬ್ಬರೂ ಸ್ಥಳಕ್ಕೆ ಬಂದು ನಮಗೆ ಭಾರಿಗಾಯಗಳಾಗಿರುವದನ್ನು ನೋಡಿ ನಮಗೆ 4 ಜನರಿಗೆ ಒಂದು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು. ಸುರಪೂರ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ನಮಗೆ ಪ್ರಥಮೋಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ರಫೀಕ್ ಹಾಗು ಸಾಬಿರಾಬೇಗಂ ಇಬ್ಬರೂ ಅಂದೇ ನಮ್ಮಿಬ್ಬರಿಗೆ ಲಿಂಗಸುಗೂರ ಕರೆದುಕೊಂಡು ಹೋಗಿ ಪಾಟೀಲ್ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ. ನಾನು ದಿನಾಂಕ: 28/04/2020 ರಂದು ಪಾಟೀಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದು, ಮೊಹೀನ್ ಇನ್ನು ಆಸ್ಪತ್ರೆಯಲ್ಲಿಯೇ ಉಪಚಾರ ಪಡೆಯುತ್ತಿದ್ದಾನೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಮೋಟರ ಸೈಕಲ್ ನಡೆಸಿಕೊಂಡು ಬಂದು ನಮ್ಮ ಮೊಟರ ಸೈಕಲಿಗೆ ಡಿಕ್ಕಿ ಪಡಿಸಿ ನಮ್ಮಿಬ್ಬರಿಗೆ ಭಾರಿ ರಕ್ತಗಾಯ, ಗುಪ್ತಗಾಯ ಪಡಿಸಿರುವದಲ್ಲದೇ ತಾನು ಸಹ ಗಾಯ ಹೊಂದಿರುವ ಮೋ.ಸೈಕಲ್ ಸವಾರನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 117/2020 ಕಲಂ. 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.



ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 32/2020 ಕಲಂ: 32, 34 ಕೆ.ಇ ಆಕ್ಟ್ ಮತ್ತು 273, 284 ಐಪಿಸಿ:- ಇಂದು ದಿನಾಂಕ 01/05/2020 ರಂದು 6:30 ಪಿ.ಎಂ ಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜಪ್ತಿ ಪಂಚನಾಮೆ ಹಾಗೂ ಜ್ಞಾಫನ ಪತ್ರದ ಸಾರಾಂಶವೆನೆಂದರೆ ದಿನಾಂಕ: 01/05/2020 ರಂದು 3:50 ಪಿ.ಎಂ ಕ್ಕೆ ಠಾಣೆಯಲ್ಲಿ ಇದ್ದಾಗ ನಾರಾಯಣಪೂರ ಗ್ರಾಮದ ಮೌನೇಶ್ವರ ಕ್ಯಾಂಪದಲ್ಲಿ ಇರುವ ಕಸ್ತೂರಿಬಾಯಿ ಗಂಡ ಮುದಕಪ್ಪ ಪಾಳೆದಾರ ಇವರ ಮನೆಯ ಮುಂದಿನ ಖುಲ್ಲಾ ಜಾಗೆಯಲ್ಲಿ ಒಬ್ಬ ಹೆಣ್ಣುಮಗಳು ಕಳ್ಳ ಭಟ್ಟಿ ಸರಾಯಿ ಮಾರಾಟ ಮಾಢುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ 5:10 ಪಿ.ಎಂಕ್ಕೆ ಹೋಗಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವವಳ ಮೇಲೆ ದಾಳಿಮಾಡಲು ಹೋದಾಗ ಸಮವಸ್ತ್ರದಲ್ಲಿ ಇದ್ದ ಪಿ.ಎಸ್.ಐ ಸಾಹೇಬರಿಗೆ ನೋಡಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುವವಳು ಹೋಗಿದ್ದು ಪೊಲೀಸ್ ಬಾತ್ಮಿದಾರರಿಗೆ ಓಡಿಹೋದವಳ ಹೆಸರು ವಿಚಾರಿಸಲಾಗಿ ಅವರು ಅವಳ ಹೆಸರು ಕಸ್ತೂರಿಬಾಯಿ ಗಂಡ ಮುದಕಪ್ಪ ಪಾಳೆದಾರ ವ:38 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಬೇಡರ ಸಾ:ರಾಯನಪಾಳ ಹಾ:ವ: ನಾರಾಯಣಪೂರ ಅಂತಾ ತಿಳಿಸಿದ್ದು ಆರೋಪಿತಳು ತಮ್ಮ ಮನೆಯ ಮುಂದಿನ ಖುಲ್ಲಾಜಾಗದಲ್ಲಿ ಕುಳಿತು ಕಳ್ಳಬಟ್ಟಿ ಸಾರಾಯಿ ಮಾರಟಮಾಡುತ್ತಿದ್ದಳು ಅಂತಾ ತಿಳಿಸಿದ್ದು ಇರುತ್ತದೆ. ನಂತರ ಸ್ಥಳ ಪರೀಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ ಅಂದಾಜು 05 ಲೀಟರ್ ಅಳತೆಯ ಒಂದು ಪ್ಲಾಸ್ಟಿಕ್ ಕ್ಯಾನ್ ಇದ್ದು, ಅದರಲ್ಲಿ ಅಂದಾಜು 4 ಲೀಟರ್ ದಷ್ಟು ಕಳ್ಳ ಭಟ್ಟಿ ಸಾರಾಯಿ ಇದ್ದು, ಅದರ ಅಂದಾಜು 400/- ರೂ  ಆಗುತ್ತಿದ್ದು ಹಾಗೂ ಕ್ಯಾನಿನ ಪಕ್ಕದಲ್ಲಿ ಒಂದು ಸ್ಟಿಲನ ಗ್ಲಾಸ ಇದ್ದು  ಸದರಿಯವುಗಳನ್ನು ವಶಕ್ಕೆ ಪಡೆದುಕೊಂಡು 5:10 ಪಿ.ಎಂ ದಿಂದ 6:10 ಪಿ.ಎಂ ದ ವರೆಗೆ ಜಪ್ತಿ ಪಂಚನಾಮೆಯನ್ನು ಪೂರೈಸಿ ಕ್ರಮ ಜರುಗಿಸಿದ್ದು ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 59/2020 ಕಲಂ, 87 ಕೆ.ಪಿ ಆ್ಯಕ್ಟ್:- ಇಂದು ದಿನಾಂಕ 01/05/2020 ರಂದು 11.20 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಬಂದು ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ  ಕಾಡಂಗೇರಾ-ಚಾಮನಾಳ ರೋಡಿನ ಕಾಡಂಗೇರಾ ಮಡ್ಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 06 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 10280=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 09.30 ಪಿಎಮ್ ದಿಂದ 10.30 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 11.20 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 59/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ:-  137/2020.ಕಲಂ 87 ಆ್ಯಕ್ಟ:- ಇಂದು ದಿನಾಂಕ: 01/05/2020 ರಂದು 18-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಸಿದ್ದೇಶ್ವರ ಪಿ.ಎಸ್.ಐ.(ಕಾ.ಸೂ)  ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ 7 ಜನ ಆರೋಪಿತರು ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ದಿನಾಂಕ 01/05/2020 ರಂದು ಠಾಣೆಯಲ್ಲಿದ್ದಾಗ ಸಗರ (ಬಿ) ಗ್ರಾಮದ ಈಶ್ವರ  ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಏಲೆಗಳ ಸಹಾಯದಿಂದ ಅಂದರ ಬಾಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಸಗರ (ಬಿ) ಗ್ರಾಮಕ್ಕೆ ಹೋಗಿ ದಾಳಿ ಮಾಡಿದ್ದು 7 ಜನ ಆರೋಪಿತರು ಸಿಕ್ಕಿದ್ದು ಅವರ ಹತ್ತಿರ ಮತ್ತು ಕಣದಲ್ಲಿ ಹಿಗೆ ಒಟ್ಟು 6210/- ರೂ ಹಾಗೂ 52 ಇಸ್ಪೇಟ ಏಲೆಗಳು ಸಿಕ್ಕಿದ್ದು ಮುದ್ದೆಮಾಲಗಳನ್ನು ದಿನಾಂಕ 01/05/2020 ರಂದು 16-30 ಗಂಟೆಯಿಂದ 17-30 ಗಂಟೆಯವರೆಗೆ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ ಆರೋಪಿತರ ವಿರುದ್ದ ಠಾಣೆ ಗುನ್ನೆ ನಂ  137/2020 ಕಲಂ 87 ಕೆ.ಪಿ.,ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 



ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 138/2020. ಕಲಂ 273, 328 ಐಪಿ.ಸಿ.ಮತ್ತು 32, 34 ಕೆ.ಇ. ಆಕ್ಟ;- ಆರೋಪಿತರು ದಿನಾಂಕ: 01-05-2020 ರಂದು 6:20 ಪಿ.ಎಮ್.ಕ್ಕೆ  ಆರೋಪತನು ಜಾಂಪಾ ನಾಯ್ಕ ತಾಂಡಾದ ಕ್ರಾಸ ಹತ್ತಿರ ಕಳ್ಳಬಟ್ಟಿ ಸಾರಾಯಿ ಕುಡಿದರೆ ಮಾನವನ ಜೀವಕ್ಕೆ ಅಪಾಯವೆಂದು ಗೊತ್ತಿದ್ದರೂ ಸಹಿತ ಕಳ್ಳಬಟ್ಟಿ ಸಾರಾಯಿಯನ್ನು ಮಾರಾಟದಲ್ಲಿ ತೊಡಗಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮದಲ್ಲಿ ಹೊಗಿ ದಾಳಿಮಾಡಿ ಆರೋಪಿತರಿಂದ 2 1/2 ಲೀಟರ ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡು  ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಅದರ ಆಧಾರದ ಮೇಲಿಂದ ಠಾಣೆ ಗುನ್ನೆ ನಂ. 138/2020 ಕಲಂ. 273, 328 ಐ.ಪಿ.ಸಿ. ಮತ್ತು 32, 34 ಕೆ.ಇ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 44/2020  143 147 148 324 323 307 504 506 354 109 188 270 ಸಂಗಡ 149 ಐಪಿಸಿ:-ದಿನಾಂಕ:01/05/2020 ರಂದು 18.10 ಗಂಟೆಯ ಸುಮಾರಿಗೆ ಪಿಯರ್ಾದಿ ಅಣ್ಣನ ಮಗನಾದ ಮಾನಪ್ಪ ಬಡಿಗೇರ ಈತನು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಕೊಟ್ಟಿದ್ದು ಏನೆಂದರೆ, ದಿನಾಂಕ:29/04/2020 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ಪಿಯರ್ಾದಿ ಆಶ್ರಯ ಕಾಲೋನಿಯಲ್ಲಿ ತಮ್ಮ ಜಾಗದಲ್ಲಿ ಹಾಕಿದ ಕಲ್ಲನ್ನು ಆರೋಪಿ ಬಸವರಾಜ ತಳವಾರು ಇವರು ತೆಗೆದುಕೊಂಡು ಮನೆಯನ್ನು ಕಟ್ಟುತ್ತಿದ್ದಾಗ ಪಿಯರ್ಾದಿ ಹಾಗೂ ಅವರ ಮಗಳು ಲಲಿತಾ ಇಬ್ಬರೂ ಹೋಗಿ ಯಾಕೆ ನಮ್ಮ ಕಲ್ಲು ತೆಗೆದುಕೊಳ್ಳುತ್ತಿದ್ದಿರಿ ಅಂತಾ ಕೇಳಿದಾಗ ಬಸವರಾಜ ಮತ್ತು ಸಂಗಡಿಗರು ಕೂಡಿ ಪಿಯರ್ಾದಿಗೆ ಕೈಯಿಂದಾ ಬಡಿಗೆಯಿಂದಾ ಹೊಡೆಬಡೆ ಮಾಡಿದ್ದು, ಆಗ ಮಗಳು ಲಲಿತಾ ನಡುವೆ ಬಿಡಿಸಲು ಬಂದಾಗ ಅವಳಿಗೂ ಕೂಡಾ ಆರೋಪಿತರು ಕೊಲೆ ಮಾಡುವ ಉದ್ದೇಶದಿಂದಾ ಕಲ್ಲಿನಿಂದಾ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ಪಿಯರ್ಾದಿ ಬಿಡಿಸಲು ಹೋದರೆ ಆರೋಪಿತರು ಕುತ್ತಿಗೆಯನ್ನು ಹಿಚುಕಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದು, ಆರೋಪಿತರಿಗೆ ಹೊಡೆದು ಕೊಲೆ ಮಾಡುವಂತೆ ಸುರಪುರದಲ್ಲಿರುವ ಮಾನಪ್ಪ ಕಟ್ಟಿಮನಿ ಹಾಗೂ ಮಲ್ಲಿಕಾಜರ್ುನ ಕ್ರಾಂತಿ ಇವರ ಕುಮ್ಮಕ್ಕು ನೀಡಿದ್ದು ಇರುತ್ತದೆ. ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ



ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 45/2020 143 147 148 323 324 307 504 506 188 270 109 ಸಂಗಡ 149 ಐಪಿಸಿ:-ದಿನಾಂಕ:01/05/2020 ರಂದು18.50ಗಂಟೆಯ ಸುಮಾರಿಗೆ ಪಿಯರ್ಾದಿ ಅಣ್ಣನಾದ ಬಸವರಾಜ ತಂದೆ ಕನಕಪ್ಪ ತಳವಾರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಕೊಟ್ಟಿದ್ದು ಏನೆಂದರೆ, ಈ ಮೊದಲು ಆಶ್ರಯ ಕಾಲೋನಿಯ ಜಾಗದಲ್ಲಿ ಕಲ್ಲುಗಳನ್ನು ಹಾಕಿದ್ದು ದಿನಾಂಕ:29/04/2020 ರಂದು ಸಾಯಂಕಾಲ 06.00 ಗಂಟೆಯ ಸುಮಾರಿಗೆ ಪಿಯರ್ಾದಿ ಆಶ್ರಯ ಕಾಲೋನಿಯಲ್ಲಿ ತಮ್ಮ ಜಾಗಕ್ಕೆ ಹೋದಾಗ ಆರೋಪಿ ಶಿವಪ್ಪ ಬಡಿಗೇರ ಈತನು ಪಿಯರ್ಾದಿ ಜಾಗದಲ್ಲಿ ಹಾಕಿದ ಕಲ್ಲುಗಳನ್ನು ತೆಗೆದುಕೊಂಡು ತಮ್ಮ ಕಲ್ಲುಗಳೋಂದಿಗೆ ಹಾಕಿಕೊಳ್ಳುತ್ತಿದ್ದಾಗ ಯಾಕೆ ನಮ್ಮ ಕಲ್ಲುಗಳನ್ನು ತೆಗೆದುಕೊಳ್ಳುತ್ತಿದ್ದಿ ಎಂದು ಕೇಳಿದರೆ, ಆರೋಪಿತರು ಎಲ್ಲರೂ ಕೂಡಿ ಪಿಯರ್ಾದಿಯೊಂದಿಗೆ ಜಗಳಕ್ಕೆ ಬಿದ್ದು ಹೊಡೆಯುವಾಗ ಪಿಯರ್ಾದಿ ಅಣ್ಣಂದಿರು ಬಂದು ಬಿಡಿಸುವಾಗ ಆರೋಫಿತರು ಅವರಿಗೂ ಕೂಡಾ ಬಿಡಗೆಯಿಂದಾ ಹೊಡೆಬಡೆ ಮಾಡಿದ್ದು, ಜಗಳದಲ್ಲಿ ಗಾಯವಾದ ನಾವು ಹುಣಸಗಿ ಸರಕಾರಿದವಾಖಾನೆಗೆ ಬಂದುತೋರಿಸಿದ್ದು ಅವರಲ್ಲಿ ಸಿದ್ದಪ್ಪನಿಗೆ ಹೆಚ್ಚಿನ ಉಪಚಾರಕ್ಕೆಂದು ಲಿಂಗಸ್ಗೂರದವಾಖಾನೆಗೆ ಕಳಿಸಿ ದವಾಖಾನಗೆ ಹಣ ಜಮಾಯಿಸಿಕೊಂಡು ಬರಲು ನಮ್ಮೂರ ನಾಗಪ್ಪ ಬಡಿಗೇರ ಇವರ ಅಟೋದಲ್ಲಿ ಕಲ್ಲದೇವನಳ್ಳಿಗೆ ಹೊರಟಾಗಚನ್ನೂರ ಪೆಟ್ರೋಲ್ ಬಂಕ್ ಹತ್ತಿರ ಆರೋಪಿತರು ಅಟೋವನ್ನು ನಿಲ್ಲಿಸಿ ನನಗೆ ಅಟೋದಿಂದಾ ಹೊರಗಡೆ ಎಳೆದು ಕಲ್ಲಿನಿಂದಾ ಹೊಡೆಬಡೆ ಮಾಡಿದ್ದು, ಆರೋಪಿತರಿಗೆ ನಾಗಪ್ಪ ಕಲ್ಲದೇವನಳ್ಳಿ ಈತನು ಹೊಡೆದು ಸಾಯಿಸಿರಿ ಅಂತಾ ಪ್ರಚೋದನೆ ಮಾಡಿರುತ್ತಾನೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾಕ್ರಮ ಜರುಗಿಸಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!