ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/04/2020
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 57/2020 ಕಲಂ. 143.147.148.323,504,506 ಸಂ. 149 ಐಪಿಸಿ:-ಇಂದು ದಿನಾಂಕ 16.04.2020 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಹಣಮಂತ ತಂದೆ ಮಲ್ಲಯ್ಯ ದಾನನೋರ ಸಾ: ಕೂಡ್ಲೂರ ತಾ: ಜಿ: ಯಾದಗಿರಿ ಈತನು ಠಾಣೆಗೆ ಬಂದು ಒಂದು ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ನೀಡಿದ್ದು ಸಾರಾಂಶವೆನೇಂದರೆ, ಕೂಡ್ಲೂರ ಗ್ರಾಮದ ಅಜರ್ಿದಾರನ ಮನೆಯ ಮುಂದಿನ ಸಾರ್ವಜನಿಕ ನಳದ ನೀರು ಕಾಲುವೆ ಮೂಲಕ ಮಾರ್ಕಂಡಯ್ಯ ಇವರ ಮನೆಯ ಮುಂದಿನಿಂದ ಹೋಗುತ್ತದೆ. ಸದರಿ ವಿಷಯದಲ್ಲಿ ನೀರು ನಮ್ಮ ಮನೆಯ ಮುಂದೆ ಬರಬಾರದು ಅಂತ ತಕರಾರು ಮಾಡಿದ್ದು, ಇಂದು ದಿನಾಂಕ. 16.04.2020 ರಂದು ಬೆಳಿಗ್ಗೆ 8.00 ಗಂಟೆಗೆ ಆರೋಪಿತರು ಗುಂಪುಕಟ್ಟಿಕೊಂಡು ಕೈಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದು ಅಜರ್ಿದಾರ ಮತ್ತು ಆತನ ಹೆಂಡತಿ ಹಾಗೂ ಅಕ್ಕನಿಗೆ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ದೂರು ನೀಡಿದ್ದು ಇರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 45/2020 ಕಲಂ 87 ಕೆಪಿ ಯ್ಯಾಕ್ಟ:- ಇಂದು ದಿನಾಂಕ 16/04/2020 ರಂದು 09.30 ಪಿ.ಎಮ್.ಕ್ಕೆ ಭೀ.ಗುಡಿಯ ಬಿ.ಎಸ್.ಎನ್.ಎಲ್ ಆಫಿಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 10.45 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 08 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 20,900/- ರೂ, 52 ಇಸ್ಪೇಟ ಎಲೆಗಳನ್ನು 10.45 ಪಿ.ಎಮ್ ದಿಂದ 11.45 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 44/2019 ಕಲಂ 273, 328 ಐಪಿಸಿ:- ಇಂದು ದಿನಾಂಕ: 16/04/2020 ರಂದು 08.10 ಪಿಎಮ್ ಕ್ಕೆ ಶ್ರೀ ಸೋಮಲಿಂಗ್ ಒಡೆಯರ ಪಿಎಸ್.ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ವರದಿ ನೀಡಿದ್ದು, ಸದರಿ ವರದಿ ಸಾರಾಂಶವೆನೆಂದರೆ, ಗೋಗಿ ಸೇವುನಾಯ್ಕ ತಾಂಡಾ ದಿಂದ ಗಂಗೂನಾಯಕ ತಾಂಡಾ ಕಡೆಗೆ ಹೊಗುವ ರೋಡಿ ಕ್ರಾಸ್ ದಲ್ಲಿ ರಸ್ತೆ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿಯು ಮಾನವ ಜೀವಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದು, ಕೂಡ ಕಳ್ಳ ಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಕೊಂಡು 06.30 ಪಿಎಂಕ್ಕೆ ದಾಳಿ ಮಾಡಿ ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಓಡಿ ಹೋಗಿದ್ದು, ಅವನ ಹೆಸರು ವಿಚಾರಿಸಿಲಾಗಿ ಕುಮಾರ ತಂದೆ ಶಂಕರ ರಾಠೊಡ ವ:25 ಉ: ಕೂಲಿ ಸಾ: ಸೇವುನಾಯ್ಕ ತಾಂಡಾ ಗೋಗಿ ಕೆ ತಾ: ಶಹಾಪೂರ. ಅಂತಾ ತಿಳಿದ ಬಂದಿದ್ದು, ಸ್ಥಳದಲ್ಲಿ ಮೇಲಿನ ಮುದ್ದೆ ಮಾಲು, ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಮುದ್ದೆಮಾಲು, ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 44/2020 ಕಲಂ: 273, 328 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using