ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/04/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 45/2020 ಕಲಂ 188 ಐಪಿಸಿ:- ಇಂದು ದಿನಾಂಕ 07/04/2020 ರಂದು ರಾತ್ರಿ 8-30 ಗಂಟೆಗೆ ಶ್ರೀ ಬಸರೆಡ್ಡಿ ಸಿ.ಹೆಚ್.ಸಿ-94 ರವರು ಠಾಣೆಗೆ ಬಂದು ವರದಿ ಕೊಟ್ಟಿದ್ದೆನೆಂದರೆ ನಾನು ಬಸರೆಡ್ಡಿ ಸಿ.ಹೆಚ್.ಸಿ-94 ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಈ ಮೂಲಕ ವರದಿ ಕೊಡುವುದೆನೆಂದರೆ ಇಂದು ದಿನಾಂಕ 07/04/2020 ರಂದು ಬಂದಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಇದ್ದ ಪ್ರಯುಕ್ತ ನನಗೆ ಮತ್ತು ನಮ್ಮ ಠಾಣೆಯ ಶ್ರೀ ಮಹೇಶ ಸಿಪಿಸಿ-358 ರವರಿಗೆ ಬಂದೋಬಸ್ತ ಕರ್ತವ್ಯ ಕುರಿತು ಹಾಕಿದ್ದರು, ಅಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀಮತಿ ಅನುರಾಧ ಗಂಡ ವೀರಭದ್ರಪ್ಪ ಬಂದಳ್ಳಿಕರ ಸಾಃ ಯಡ್ಡಳ್ಳಿ ಇವರು ಗ್ರಾಮ ಪಂಚಾಯತಿಯ ಅಭಿವೃಧಿ ಅಧಿಕಾರಿಯವರಾದ ಗಿರಿಮಲ್ಲಣ್ಣ ಮತ್ತು ಗ್ರಾಮ ಪಂಚಾಯತಿಯ ಅಕೌಂಟಂಟ ರಾಜು ಇವರ ಸಮಕ್ಷಮದಲ್ಲಿ ಬಂದಳ್ಳಿಯ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನದ ಪ್ರಭಾರವನ್ನು ಇಂದು ಮಧ್ಯಾಹ್ನ 12-15 ಗಂಟೆಗೆ ವಹಿಸಿಕೊಂಡಿದ್ದು ಇರುತ್ತದೆ, ಈಗ ಸಧ್ಯ ಕೋರೊನೋ ವೈರಾಣು ಸಂಬಂಧ ಈಡಿ ದೇಶದಲ್ಲಿ ಲಾಕ್ ಡೌನ್ ಇದ್ದು, ಮಾನ್ಯ ಕನರ್ಾಟಕ ಸರಕಾರ ಮತ್ತು ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆಧೇಶ ಪ್ರಕಾರ ಕೋರೊನೋ ವೈರಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾದ್ಯತೆ ಇರುವದರಿಂದ ಒಬ್ಬರಿಗೊಬ್ಬರೂ ಮೂರು ಫೀಟಿನಷ್ಟು ಅಂತರ ಕಾಯ್ದು ಕೊಂಡು ಇರಬೇಕು ಅಂತಾ ಆಧೇಶವಿದ್ದಿದ್ದು, ಆ ಸಮಯದಲ್ಲಿ ಶ್ರೀ ವೀರಭದ್ರಪ್ಪ ತಂದೆ ಹಣಮಂತ ಬಂದಳ್ಳಿಕರ, ಗ್ರಾಮ ಪಂಚಾಯತ ಸದಸ್ಯರು ಮತ್ತು ಇನ್ನಿತರೆ ಕೆಲವು ಸಾರ್ವಜನಿಕರು ಎಲ್ಲರೂ ಕೂಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೆ ಸನ್ಮಾನ ಮಾಡಿರುತ್ತಾರೆ, ನಾವು ಎಷ್ಟು ಸಲ ಹೇಳಿದರೂ ಕೂಡಾ ಮತ್ತು ಪಂಚಾಯಿತಿಯಿಂದ ಜನರಿಗೆ ಹೊರಗಡೆ ಕಳುಹಿಸಿದರೂ ಕೂಡಾ ನಮ್ಮ ಮಾತು ಕೆಳದೇ ಪಂಚಾಯಿತಿಯಲ್ಲಿ ಗುಂಪು ಗುಂಪಾಗಿ ನಿಂತು ಮಾನ್ಯ ಜಿಲ್ಲಾಧಿಕಾರಿಗಳ ಆಧೇಶ ಉಲ್ಲಂಘನೆ ಮಾಡಿರುತ್ತಾರೆ, ಗ್ರಾಮ ಪಂಚಾಯತಿಗೆ ಸಂಬಂಧಪಟ್ಟವರು ಯಾರು ಬಂದು ಫಿರ್ಯಾಧಿ ಕೊಡದ ಕಾರಣ ನಾನು ತಡವಾಗಿ ವರದಿ ಕೊಟ್ಟಿರುತ್ತೆನೆ ಆದ್ದರಿಂದ ಸರಕಾರದ ಆಧೇಶವನ್ನು ಪಾಲನೆ ಮಾಡದೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ. ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/2020 ಕಲಂ 188 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 48/2020 ಕಲಂ 87 ಕೆ.ಪಿ ಕಾಯ್ದೆ:- ಇಂದು ದಿನಾಂಕ: 07-04-2020 ರಂದು 05-00 ಪಿಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಬಂದು ಕೂಡ್ಲೂರ ಗ್ರಾಮದ ಸರಕಾರಿ ಶಾಲೆಯ ಹತ್ತರ ಸಾರ್ವಜನಿಕ ಸ್ಥಳದಲ್ಲಿ ಸಾಯಂಕಾಲ 03-30 ಗಂಟೆಗೆ ಅಂದರ ಬಾಹರ ಇಸ್ಪೆಟ ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿತರನ್ನು ಹಾಗೂ ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 48/2020 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 06/2020 174 ಸಿ.ಆರ್.ಪಿ.ಸಿ:- ದಿನಾಂಕ:30/03/2020 ರಂದು 12;30 ಪಿಎಮ್ ಮೃತಳು ತನ್ನ ವಾಸದ ಮನೆಯಲ್ಲಿ ಸಿಲಿಂಡ ಗ್ಯಾಸ್ ಹಚ್ಚಿ ಕುಕ್ಕರನಲ್ಲಿ ಬೆಳೆಯನ್ನು ಹಾಕಿ ಬೇಳೆ ಬೇಯಲು ಇಟ್ಟು ರೊಟ್ಟಿ ಬಡೆಯತ್ತಿದ್ದಾಗ ಆಕಸ್ಮಿಕವಾಗಿ ಕುಕ್ಕರ ಸಿಡಿದು (ಬಸ್ಟ್) ಆಗಿ ಮೈಯಿಗೆ ಕೈಯಿಗೆ ಮತ್ತು ಬೆನ್ನಿಗೆ ಮತ್ತು ಹೊಟ್ಟೆಗೆ ಸುಟ್ಟ ಗಾಯಗಳಾಗಿದ್ದು ಉಪಚಾರ ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಯಲ್ಲಿ ದಾಖಲಿಸಿದ್ದು ಉಪಚಾರ ಪಡೆಯತ್ತಾ ದಿನಾಂಕ 06-04-2020 ರಂದು ಸುಮಾರು 10-45 ಪಿಎಮ್ಕ್ಕೆ ಮೃತಪಟ್ಟಿರುತ್ತಾಳೆ ಸದರಿ ಘಟನೆ ಆಕಸ್ಮಿಕ ಕುಕ್ಕರ (ಬಸ್ಟ್)ದಿಂದ ಸಂಭವಿಸಿದ್ದು ಯಾರ ಮೇಲೆ ಯಾವುದೇ ಸಂಶಯ-ಫಿರ್ಯಾಧಿ ಇರುವುದಿಲ್ಲ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 06/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಠಾಣೆ ಗುನ್ನೆ ನಂ;- 35/2020 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994.:- ಇಂದು ದಿನಾಂಕ: 07/04/209 ರಂದು 9-15 ಎಎಮ್ ಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಶಹಾಪೂರ ವೃತ್ತ ರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್ನ್ನು ಚಾಲಕನೊಂದಿಗೆ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 07/04/2020 ರಂದು 5-30 ಎಎಮ್ ಸುಮಾರಿಗೆ, ಕೊರೊನಾ ಪ್ರಯುಕ್ತ ವಿಶೇಷ ಪೆಟ್ರೋಲಿಂಗ್ ಕರ್ತವ್ಯದ ಮೇಲೆ ಭೀ.ಗುಡಿಯಲ್ಲಿದ್ದಾಗ ಸುರಪೂರ ಕಡೆಯಿಂದ ಶೆಟ್ಟಿಕೇರಾ ಮಾರ್ಗವಾಗಿ ಹೊಸಕೇರಾ ಕಡೆಗೆ ಟ್ರ್ಯಾಕ್ಟರ್ದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು, ನಾನು ಮತ್ತು ಚಾಲಕ ಮಲಕಾರಿ ಎ.ಹೆಚ್.ಸಿ-07 ರವರೊಂದಿಗೆ ಸರಕಾರಿ ಜೀಪ್ ನಂ: ಕೆಎ-33 ಜಿ-0153 ನೇದ್ದರಲ್ಲಿ ಭೀ.ಗುಡಿಯಿಂದ 6-00 ಎಎಮ್ ಕ್ಕೆ ಹೋರಟು ಗೋಗಿಯಲ್ಲಿ ಪ್ರೇಮಸಿಂಗ್ ಪಿಸಿ-318, ಗೋಗಿ ಪೊಲೀಸ್ ಠಾಣೆ ರವರನ್ನು ಕರೆದುಕೊಂಡು ಹೊಸಕೇರಾ ಗ್ರಾಮದ ಶೇಟ್ಟಿಕೇರಾ ಕ್ರಾಸ್ ಹತ್ತಿರ ನಿಂತಾಗ 7-30 ಎಎಮ್ ಕ್ಕೆ ಶೆಟ್ಟಿಕೇರಾ ಕಡೆಯಿಂದ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ನೋಡಿ, ಸದರಿ ಟ್ರ್ಯಾಕ್ಟರ್ ನಿಲ್ಲಿಸಿ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಮಂಜುನಾಥ ತಂದೆ ಚನ್ನಬಸಪ್ಪ ಚಿಂತಿ ವಯ|| 28 ವರ್ಷ ಜಾ|| ಲಿಂಗಾಯತ ಉ|| ಡ್ರೈವರ್ ಸಾ|| ಮಂಡಗಳ್ಳಿ ತಾ|| ಶಹಾಪೂರ ಅಂತಾ ತಿಳಿಸಿದ್ದು, ಸದರಿ ಟ್ರ್ಯಾಕ್ಟರದಲ್ಲಿಯ ಮರಳಿನ ಬಗ್ಗೆ ರಾಯಲ್ಟಿ ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಅಂತಾ ತಿಳಿಸಿದ್ದು, ತನ್ನ ಟ್ರ್ಯಾಕ್ಟರ್ ಮಾಲೀಕ ಬಸನಗೌಡ ತಂದೆ ಮಡಿವಾಳಪ್ಪಗೌಡ ಪೊಲೀಸ್ ಪಾಟೀಲ್ ಸಾ|| ದರ್ಶನಾಪೂರ ಇವರು ತನಗೆ ಮರಳು ತುಂಬಿಕೊಂಡು ಬರಲು ತಿಳಿಸಿದ್ದರಿಂದ ತೆಗೆದುಕೊಂಡು ಹೊರಟಿರುವುದಾಗಿ ತಿಳಿಸಿದನು. ಟ್ರ್ಯಾಕ್ಟರ್ನ್ನು ಪರಿಶೀಲಿಸಲಾಗಿ 1) ಜಾನ್ ಡೀರ್ ಕಂಪನಿಯ ಟ್ರ್ಯಾಕ್ಟರ್ ನಂ: ಕೆಎ-33 ಟಿಬಿ-0100 ಅ.ಕಿ.1,00,000=00 ಮತ್ತು 2) ಟ್ರ್ಯಾಲಿ ನಂ: ಕೆಎ-33 ಟಿಬಿ-0101 ಅ.ಕಿ.50,000=00 ಸದರಿ ಟ್ರ್ಯಾಲಿಯಲ್ಲಿ 3) ಅಂದಾಜು ಒಂದು ಬ್ರಾಸ್ ಮರಳು ಅ.ಕಿ.1500=00 ರೂ ಇದ್ದು, ಸದರಿ ಟ್ರ್ಯಾಕ್ಟರ್ನ ಚಾಲಕ ಮತ್ತು ಮಾಲೀಕನು ಸರಕಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿರುವುದಾಗಿ ತಿಳಿದುಬಂದಿದ್ದರಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಚಾಲಕ ಮಂಜುನಾಥ ಇವನೊಂದಿಗೆ ಠಾಣೆಗೆ 9-15 ಎಎಮ್ ಕ್ಕೆ ತಂದು ಹಾಜರ್ ಪಡಿಸಿದ್ದು, ಸಕರ್ಾರಕ್ಕೆ ಹಣ ತುಂಬದೇ ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 35/2020 ಕಲಂ, 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994 ನೇದ್ದರ ಪ್ರಕಾರ ಗುನ್ನೆ ದಾಖಲೆ ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 06/2020 174 ಸಿ.ಆರ್.ಪಿ.ಸಿ :- ಇಂದು ದಿನಾಂಕ: 07/04/2020 ರಂದು 01.30 ಪಿಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಭಾಗ್ಯಶ್ರೀ ಗಂಡ ಮಡಿವಾಳಪ್ಪಗೌಡ ಅಸ್ಕಿ ವಯ|| 20 ವರ್ಷ ಜಾ|| ರಡ್ಡಿ ಉ|| ಮನೆಗೆಲಸ ಸಾ|| ಕರಕಳ್ಳಿ ತಾ|| ಶಹಾಪೂರ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನಾನು ಭಾಗ್ಯಶ್ರೀ ಗಂಡ ಮಡಿವಾಳಪ್ಪಗೌಡ ಅಸ್ಕಿ ವಯ|| 20 ವರ್ಷ ಜಾ|| ರಡ್ಡಿ ಉ|| ಮನೆಗೆಲಸ ಸಾ|| ಕರಕಳ್ಳಿ ತಾ|| ಶಹಾಪೂರ ಇದ್ದು, ದಿನಾಂಕ:22/04/2019 ರಂದು ಮಡಿವಾಳಪ್ಪಗೌಡ ತಂದೆ ಸಿದ್ದಣ್ಣ ಅಸ್ಕಿ ವಯಾ:28 ವರ್ಷ ಉ: ಒಕ್ಕಲುತನ ಜಾ: ರಡ್ಡಿ ಸಾ: ಕರಕಳ್ಳಿ ಇವರೊಂದಿಗೆ ನನ್ನ ಮದುವೆಯು ಆಗಿದ್ದು, ನಮಗೆ ಇನ್ನು ಮಕ್ಕಳಾಗಿರುವದಿಲ್ಲ, ನಮ್ಮ ಮಾವನಿಗೆ ನನ್ನ ಗಂಡ ಕಿರಿಯ ಮಗ ಆಗಿದ್ದು, ನಮ್ಮ ಭಾವನಾದ ಮಲ್ಲಣ್ಣ ತಂದೆ ಸಿದ್ದಣ್ಣ ಇವರು ದೊಡ್ಡ ಮಗ ಇರುತ್ತಾರೆ. ನಮಗೆ ಕರಕಳ್ಳಿ ಸವರ್ೇ ನಂ:36 ರಲ್ಲಿ 07 ಎ. 16 ಗುಂಟೆ ಜಮೀನು ಇದ್ದು, ನನ್ನ ಗಂಡನಾದ ಮಡಿವಾಳಪ್ಪಗೌಡ ಮತ್ತು ನಮ್ಮ ಭಾವ ಮಲ್ಲಣ್ಣ ಇಬ್ಬರು ಒಕ್ಕಲುತನ ಮಾಡಿಕೊಂಡಿದ್ದರು, ಸಂಸಾರದಲ್ಲಿ ಎಲ್ಲಾ ವ್ಯವಹಾರ ನನ್ನ ಗಂಡನಾದ ಮಡಿವಾಳಪ್ಪಗೌಡ ಈತನು ಮಾಡುತ್ತಿದ್ದ, ಕೃಷಿ ಕೆಲಸಕ್ಕಾಗಿ ಮತ್ತು ಸಂಸಾರದ ಅಡಚಣೆಗಾಗಿ ಗೋಗಿ ಎಸ್.ಬಿ.ಐ ಬ್ಯಾಂಕನಲ್ಲಿ 90,000=00 ರೂ ಸಾಲ ಮತ್ತು ಕೃಷಿ ಸಹಕಾರಿ ಬ್ಯಾಂಕ ನಲ್ಲಿ 16,500=00 ರೂ ಸಾಲ ಮತ್ತು ಕೈಸಾಲ ಅಂತಾ 3,00,000=00 ರೂ ಸಾಲ ಇತ್ತು ಅಂತಾ ಆಗಾಗ ಮನೆಯಲ್ಲಿ ನಮ್ಮ ಮಾವ ಮತ್ತು ಬಾವನ ಮುಂದೆ, ನನ್ನ ಮುಂದೆ ಹೇಳುತ್ತಿದ್ದ, ಆಗ ನಮ್ಮ ಮಾವ ಮತ್ತು ಭಾವನವರು ಎಲ್ಲರೂ ಕೂಡಿ ದುಡಿದು ಮುಟ್ಟಿಸೊಣ ಅಂತಾ ಸಮಾದಾನ ಹೇಳುತ್ತಿದ್ದರು. ನಾನು ಕೂಡ ಯಾಕೆ ಚಿಂತಿ ಮಾಡುತ್ತಿರಿ ಈಗ ಸಾಲ ಇಲ್ಲದವರು ಯಾರು ಇಲ್ಲ ಸಾಲ ಮುಟ್ಟಿಸಿದರಾಯಿತು ಅಂತಾ ಸಮಾದಾನ ಹೇಳುತ್ತಿದ್ದೆನು. ಈ ವರ್ಷ ಹತ್ತಿ ಮತ್ತು ತೋಗರಿ ಬೇಳಿ ಹಾಕಿದ್ದು ಸರಿಯಾಗಿ ಇಳುವರಿ ಬರದಿದ್ದ ಕಾರಣ ಸಾಲ ತಿರಿಸುವದು ಹೇಗೆ ಅಂತಾ ಮನಸ್ಸಿಗೆ ಹಚ್ಚಿಕೊಂಡಿದ್ದನು. ಹೀಗಿದ್ದು, ಈಗ ಸುಮಾರು 03 ತಿಂಗಳ ಹಿಂದೆ ನಾನು ಸಂಕ್ರಾತಿ ಹಬ್ಬಕ್ಕೆ ಅಂತಾ ನಮ್ಮ ತವರು ಮನೆಗೆ ಹೊಗಿದ್ದೆನು, ಮತ್ತು ಈಗ ಕೊರೋನಾ ರೋಗದ ಸಲುವಾಗಿ ಎಲ್ಲವೂ ಬಂದ ಆಗಿದ್ದರಿಂದ ನನ್ನ ಗಂಡನ ಮನೆಗೆ ಬರದೆ ತವರೂರಾದ ದೇವರ ಹಿಪ್ಪರಗಿ ತಾಲೂಕಿನ ಹರನಾಳ ಗ್ರಾಮದಲ್ಲಿಯೇ ಇದ್ದೆನು.
ಹೀಗಿದ್ದು, ಇಂದು ದಿನಾಂಕ:07/04/2020 ರಂದು ನಾನು ಮತ್ತು ನಮ್ಮ ತಾಯಿ ಮಂಜುಳಾ ಗಂಡ ಬಸವರಾಜ ಚೌದ್ರಿ, ನಮ್ಮ ತಂದೆಯವರಾದ ಬಸವರಾಜ ತಂದೆ ಪರಮಪ್ಪ ಚೌದ್ರಿ ಎಲ್ಲರೂ ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಮಾವನವರು ಪೋನ ಮಾಡಿ ವಿಷಯ ತಿಳಿಸಿದ್ದೇನಂದರೆ, ಇಂದು ದಿ: 07/04/2020 ರಂದು 09.00 ಎಎಂ ಸುಮಾರಿಗೆ ನಮ್ಮ ಮಾವ ಸಿದ್ದಣ್ಣ ನನ್ನ ಗಂಡನಾದ ಮಡಿವಾಳಪ್ಪಗೌಡ, ನಮ್ಮ ಬಾವ ಮಲ್ಲಣ್ಣ, ಮತ್ತು ನಮ್ಮ ನೆಗೆಣ್ಣಿ ಉಮಾದೇವಿ ಎಲ್ಲರೂ ನಮ್ಮ ಸಜ್ಜಿ ಹೊಲಕ್ಕೆ ತೆನಿ ಕ್ಯೊಯಲು ಹೋಗಿದ್ದು, ನನ್ನ ಗಂಡನಾದ ಮಡಿವಾಳಪ್ಪಗೌಡ ಈತನು ಚೀಲಗಳನ್ನು ತರುತ್ತೇನೆ ಅಂತಾ ಮನೆಗೆ ಬಂದು ಸಾಲದ ಬಗ್ಗೆ ಮನಸ್ಸಿಗೆ ಹಚ್ಚಿಕೊಂಡು ಸಜ್ಜಿ ಬೆಳೆಯಿಂದ ಎಷ್ಟು ಸಾಲ ಮುಟ್ಟುತ್ತದೆ ಅಂತಾ ಸಾಲದ ಚಿಂತೆಯಲ್ಲಿ, ಮನನೊಂದು ಮನೆಯಲ್ಲಿ ಯಾರು ಇಲ್ಲದ್ದನ್ನು ನೋಡಿ ಇಂದು ಬೆಳಿಗ್ಗೆ 11.00 ಎಎಂ ಸುಮಾರಿಗೆ ಮನೆಯಲ್ಲಿ ಕ್ರೀಮಿನಾಶಕ ವಿಷ ಸೇವನೆ ಮಾಡಿದ್ದು, ಅದರಿಂದಾಗಿ ವಾಕರಿಕೆ ಮಾಡಿಕೊಳ್ಳುವಾಗ ಪಕ್ಕದ ಮನೆಯವರಾದ ರಾಚಮ್ಮ ಗಂಡ ಮಲ್ಲಣ್ಣ ಮತ್ತು ಬೋರಮ್ಮ ಗಂಡ ಸೊಮನಗೌಡ ಇವರುಗಳು ನೊಡಿ ಓಣಿಯಲ್ಲಿ ಎಲ್ಲರಿಗೂ ಕರೆದಿದ್ದು, ನನ್ನ ಗಂಡನು ಸಾಲದ ಚಿಂತೆಯಿಂದ ಎಣ್ಣಿ ಕುಡಿದಿದ್ದಾಗಿ ಹೇಳಿದ್ದು, ಕೂಡಲೆ ಮಹಿಪಾಲರಡ್ಡಿ ತಂದೆ ಲಿಂಗನಗೌಡ ಮಾಲಿಪಾಟೀಲ ಮತ್ತು ಸಿದ್ದಪ್ಪ ತಂದೆ ಪಿಲ್ಲಪ್ಪ ಹರಿಜನ ಇವರು ಶಹಾಪುರ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು, ಶಹಾಪೂರ ಆಸ್ಪತ್ರೆಗೆ ಹೋದಾಗ 11.30 ಎಎಂ ಸುಮಾರಿಗೆ ವೈದ್ಯಾಧಿಕಾರಿಗಳು ದಾರಿಯಲ್ಲಿಯೇ ಮೃತಪಟ್ಟಿದ್ದಾಗಿ ಹೇಳಿದ್ದಾರೆ, ನಾವು ಶಹಾಪುರಕ್ಕೆ ಹೊಗುತ್ತಿದ್ದೇವೆ, ನೀವು ಬನ್ನಿ ಅಂತಾ ತಿಳಿಸಿದರು.
ಆಗ ನಾನು, ನಮ್ಮ ತಂದೆಯವರು, ನನ್ನ ತಾಯಿಯವರು, ಕುಡಿ ಶಹಾಪುರಕ್ಕೆ ಬಂದು ನನ್ನ ಗಂಡನ ಶವವನ್ನು ನೋಡಿರುತ್ತೇನೆ. ನನ್ನ ಗಂಡನು ಸಾಲದ ಚಿಂತೆಯಲ್ಲಿ ಮನನೊಂದು ಇಂದು ದಿನಾಂಕ: 07/04/2020 ರಂದು ಬೆಳಿಗ್ಗೆ 11.00 ಎಎಂ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕ್ರೀಮಿನಾಶಕ ವಿಷ ಸೇವನೆ ಮಾಡಿ ಮೃತಪಟ್ಟಿದ್ದು, ನನ್ನ ಗಂಡನ ಸಾವಿನ ವಿಷಯದಲ್ಲಿ ಯಾರ ಮೇಲು ಯಾವುದೇ ರೀತಿಯ ಸಂಶಯ ಇರುವದಿಲ್ಲ ಅಂತಾ ಇಂದು ದಿನಾಂಕ: 07/04/2020 ರಂದು 05.30 ಪಿಎಂ ಕ್ಕೆ ಠಾಣೆಗೆ ಬಂದು ಈ ಅಜರ್ಿ ನೀಡಿದ್ದು, ಮುಂದಿನ ಕ್ರಮ ಜರುಗಿಸಬೇಕೆಂದು ಮಾನ್ಯರವರಲ್ಲಿ ವಿನಂತಿ. ಅಂತಾ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್ ನಂ: 06/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 21/2020 ಕಲಂ:323, 324, 326, 504, 506 ಐಪಿಸಿ:-ಫಿಯರ್ಾದಿಯು ನಳಗುಂಡ ತಾಂಡಾದವನಾದ ತಿರುಪತಿ ತಂದೆ ವಾಲಪ್ಪ ರಾಠೋಡ ಇವನಿಂದ ಸುಮಾರು 5-6 ತಿಂಗಳುಗಳ ಹಿಂದೆ ಪಡೆದುಕೊಂಡ ಮೂರು ಸಾವಿರ ಹಣವನ್ನು ಕೊಡಬೇಕಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಬಾಯಿ ಮಾತಿನ ಜಗಳವಾಗಿದ್ದು, ಅವಾಗಿನಿಂದ ಮಾತು ಬಿಟ್ಟಿದ್ದು, ದಿನಾಂಕ:05.04.2020 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ಫಿಯರ್ಾದಿ ಬೆಳ್ಳಿಗುಂಡ ತಾಂಡಾದ ತನ್ನ ಮಾವನವರಾದ ಭೀಮಸಿಂಗ್ ರಾಠೋಡ ಇವರ ಮನೆಯಲ್ಲಿ ಇದ್ದಾಗ ತಿರುಪತಿ ತಂದೆ ವಾಲಪ್ಪ ರಾಠೋಡ ಸಾ:ನಳಗುಂಡ ತಾಂಡಾ ಈತನು ಬಂದು ನಿಮ್ಮ ಅಳಿಯ ನನಗೆ ಮೂರು ಸಾವಿರ ಹಣ ಕೊಡಬೇಕು ಇಲ್ಲಿಯವರೆಗೆ ಕೊಟ್ಟಿಲ್ಲ. ಇನ್ನು ಮುಂದೆ ಕೊಡದಿದ್ದರೆ ಜಗಳವಾಗುತ್ತದೆ ಎಂದು ಬೈದು ಹೋಗಿದ್ದು, ನಂತರ ಫಿಯರ್ಾದಿಗೆ ಅವರ ಮಾವನು ಅಂತವರ ಹತ್ತಿರ ಹಣ ಏಕೆ ಪಡೆದುಕೊಂಡಿಯಾ ಅಂತಾ ಬುದ್ದಿ ಮಾತು ಹೇಳಿದ್ದು, ನಂತರ ಫಿಯರ್ಾದಿಯು ತಿರುಪತಿಗೆ ಫೋನ್ ಮಾಡಿ ನೀನು ಈ ವಿಷಯವನ್ನು ಯಾಕೆ ಕೇಳಿದಿಯಾ? ನನಗೆ ಕೇಳಿದರೆ ಹಣ ಕೊಡುತ್ತಿದ್ದೇನಲ್ಲ ಅಂದಾಗ, ಲೇ ಸೂಳಿ ಮಗನೇ ನಮ್ಮ ಹತ್ತಿರ ಬಾ ಇಲ್ಲೇ ಮಾತನಾಡೋಣ ಅಂತಾ ಕೇಳಿದಾಗ ಫಿಯರ್ಾದಿಯು ತನ್ನ ಗೆಳೆಯನಾದ ಮಾರುತಿ ತಂದೆ ಶಾಂತಿಲಾಲ ರಾಠೋಡ ಸಾ:ಮಾವಿನಗಿಡದ ತಾಂಡಾ ಇವನಿಗೆ ಕರೆದುಕೊಂಡು ಜೋಗುಂಡಬಾವಿ ಗ್ರಾಮದ ಕನಕ ವೃತ್ತದ ಹತ್ತಿರ ದಿನಾಂಕ:05.04.2020 ರಂದು ರಾತ್ರಿ 8:30 ಪಿ.ಎಮ್ ಗಂಟೆಗೆ ಹೋದಾಗ ಅಲ್ಲಿಯೇ ಇದ್ದ ತಿರುಪತಿ ತಂದೆ ವಾಲಪ್ಪ ರಾಠೋಡ ಸಾ:ನಳಗುಂಡ ತಾಂಡಾ ಈತನಿಗೆ ಫಿಯರ್ಾದಿಯು ಇನ್ನೂ ಸ್ವಲ್ಪ ದಿನದಲ್ಲಿ ನಿನಗೆ ಕೊಡಬೇಕಾದ ಮೂರು ಸಾವಿರ ಹಣವನ್ನು ಕೊಡುತ್ತಿದ್ದೆ ನೀನು ಏಕೆ ನಮ್ಮ ಮಾವನ ಮನಗೆ ಬಂದು ಅವರಿಗೆ ಈ ವಿಷಯವನ್ನು ತಿಳಿಸಿದಿ ಅಂತಾ ಕೇಳಿದಾಗ ಅವನು ಲೇಸೂಳಿ ಮಗನೇ ಇನ್ನೂ ಎಷ್ಟು ದಿವಸ ಬೇಕು ನಿನಗೆ ಹಣ ಕೊಡಲು ನೀನು ಹಣ ಕೊಡೋದು ಬೇಡ ನಿನ್ನ ಜೀವಂತ ಬಿಡುವದಿಲ್ಲ ಅಂದು ಜೀವದ ಬೆದರಿಕೆ ಹಾಕಿ ಜಗಳ ತೆಗೆದು ಎಡ ಮಲಕಿಗೆ, ಬಾಯಿಗೆ ಬಾಯಿಯಿಂದ ಕಡಿದು ರಕ್ತಗಾಯಪಡಿಸಿದ್ದು, ನಂತರ ಬಲಗೈ ಮುಂಗೈ ಮೇಲೆ ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ಹೊಡೆದು ಭಾರಿ ಗುಪ್ತಪೆಟ್ಟುಪಡಿಸಿದ್ದು ಇರುತ್ತದೆ. ಈ ಜಗಳವನ್ನು ಮಾರುತಿ ತಂದೆ ಶಾಂತಿಲಾಲ ರಾಠೋಡ ಸಾ:ಮಾವಿನಗಿಡದ ತಾಂಡಾ ಈತನು ಬಿಡಿಸಿದ್ದು ಇರುತ್ತದೆ. ಕಾರಣ ತನಗೆ ಅವಾಚ್ಯ ಬೈದು, ಹೊಡೆದು ಭಾರಿ ಗಾಯಪೆಟ್ಟುಪಡಿಸಿದವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:21/2020 ಕಲಂ 323, 324, 326, 504, 506 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 07/2020 107 ಸಿ.ಆರ್.ಪಿ.ಸಿ :- ದಿನಾಂಕ:07/04/2020 ರಂದು 18.10 ಗಂಟೆಗೆ ಠಾಣೆಯ ಶ್ರೀ ಭೀರಪ್ಪ ಹೆಚ್.ಸಿ-10(ಬಿ) ರವರು ಠಾಣೆಗೆ ಬಂದು ಒಂದು ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:07/04/2020 ರಂದು ನಾನು ಕೋಳಿಹಾಳ ಗ್ರಾಮಕ್ಕೆ ಬೇಟಿಗೆಂದು ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಬಸಣ್ಣ ತಂದೆ ಜುಮ್ಮಣ್ಣ ಪೂಜಾರಿ ಮತ್ತು ಸಂಗಡಿಗರು ಮತ್ತು ಅದೇ ಗ್ರಾಮದ ಬಾಲಪ್ಪ ತಂದೆ ಭೀಮಪ್ಪ ವಾಲಿಕಾರ ಮತ್ತು ಸಂಗಡಿಗರ ಮದ್ಯ ಕೋಳಿಹಾಳ ಸೀಮೆಯ ಹೊಲ ಸವರ್ೆ ನಂ.151 ರಲ್ಲಿ 8 ಎಕರೆ 7 ಗುಂಟೆಯ ಜಮೀನದಲ್ಲಿ ಪ್ಲಾಟಗಳ ಮಾರಾಟದ ವಿಷಯದಲ್ಲಿ ಸುಮಾರು ದಿನಗಳಿಂದಾ ತಕರಾರು ಇದ್ದು, ಸದರಿ ವಿಷಯದಲ್ಲಿ ಈ ಮೊದಲು ಜಗಳವಾಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ಪಾಟರ್ಿಯವರು ಒಂದೇ ಊರಿನವರಿದ್ದ ಮುಂಭರುವ ದಿನಗಳಲ್ಲಿ ಮತ್ತೆ ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಮೇಲ್ಕಂಡವರ ಮೇಲೆ ಮುಂಜಾಗೃತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 61/2020 ಕಲಂ: 379 ಐ.ಪಿ.ಸಿ ಮತ್ತು 21 (3) (4) ಎಮ್ಎಮ್ಡಿಆರ್ ಆಕ್ಟ 1957:- ಇಂದು ದಿ: 07/04/2020 ರಂದು 4 ಪಿಎಮ್ಕ್ಕೆ ಶ್ರೀ ವೆಂಕಟೇಶ ಡಿ ಎಸ್ ಪಿ ಸುರಪೂರ ಉಪ-ವಿಭಾಗ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 07.04.2020 ರಂದು 01.00 ಪಿಎಮ್ಕ್ಕೆ ಪೆಟ್ರೋಲಿಂಗ ಕುರಿತು ಸಿಬ್ಬಂದಿಯವರಾದ ರಾಘವೇಂದ್ರ ಪಿಸಿ 339 ಹಾಗು ಬಸವರಾಜ ಪಿಸಿ 116 ನೇದ್ದವರೊಂದಿಗೆ ಕೆಂಭಾವಿ ಕಡೆಗೆ ಬಂದಾಗ ಮಾಹಿತಿ ಬಂದಿದ್ದೇನೆಂದರೆ, ಬೈಚಬಾಳ ಕಡೆಯಿಂದ ತೆಗ್ಗೆಳ್ಳಿ ಕ್ರಾಸ್ ಕಡೆಗೆ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ರಾಘವೇಂದ್ರ ಪಿಸಿ 339 ರವರ ಮುಖಾಂತರ ಇಬ್ಬರೂ ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ಹಾಗೂ ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ಸಾ|| ಇಬ್ಬರೂ ಕೆಂಭಾವಿ ಈ ಎರಡು ಜನರಿಗೆ ಕೆಂಭಾವಿ ಠಾಣೆಗೆ ಕರೆಯಿಸಿ ಸದರಿಯವರಿಗೂ ಸಹ ಭಾತ್ಮಿ ವಿಷಯ ತಿಳಿಯಿಸಿ ಸದರ ಪಂಚರು ಹಾಗೂ ನಾವು ಠಾಣೆಯಿಂದ 01.30 ಪಿಎಮ್ಕ್ಕೆ ಸರಕಾರಿ ಜೀಪ್ ನಂಬರ ಕೆಎ-33 ಜಿ-0253 ನೇದ್ದರಲ್ಲಿ ಹೊರಟು 2 ಪಿಎಮ್ಕ್ಕೆ ತೆಗ್ಗೆಳ್ಳಿ ಕ್ರಾಸ ಹತ್ತಿರ ನಿಂತಾಗ ಬೈಚಬಾಳ ಗ್ರಾಮದ ಕಡೆಯಿಂದ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬಂದಿದ್ದು, ಸದರಿ ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದೊಂದಿಗೆ 2.15 ಪಿ.ಎಮ್ ಕ್ಕೆ ಹಿಡಿದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲು ಆತನು ತನ್ನ ಹೆಸರು ಮಲೀಕ್ ತಂದೆ ಗುಡುಬೈಹಿ ವಡಕೇರಿ ಸಾ|| ಕೆಂಭಾವಿ ಅಂತ ತಿಳಿಸಿದ್ದು, ಚಾಲಕನಿಗೆ ಮರಳಿನ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಮತ್ತು ಸರಕಾರಕ್ಕೆ ರಾಜಧನ ಕಟ್ಟಿರುವುದಿಲ್ಲಾ ಅಂತ ತಿಳಿಸಿದ್ದು, ನಂತರ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ ಹೊಸ ಸ್ವರಾಜ್ಯ ಟ್ರ್ಯಾಕ್ಟರ ಇದ್ದು ನೊಂದಣಿ ಸಂಖ್ಯೆ ಇರುವದಿಲ್ಲ ಅದರ ಇಂಜಿನ ನಂಬರ ನೋಡಲಾಗಿ 39.1357/ಎಸ್ಬಿಎ00780 ಅಂತ ಇದ್ದು ಹಾಗು ಟ್ರೈಲಿಗೆ ಯಾವದೇ ನಂಬರ ಇರುವದಿಲ.್ಲ ಸದರ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು ಅದರ ಮಾಲಿಕನ ಹೆಸರು ಕೇಳಿ ತಿಳಿಯಲಾಗಿ ರಸೂಲ ತಂದೆ ಅನೀಸಾಬ ಕಾಚೂರ ಸಾ|| ಕೆಂಭಾವಿ ಅಂತಾ ತಿಳಿಸಿರುತ್ತಾನೆ. ಸದರಿ ಟ್ರಾಕ್ಟರದಲ್ಲಿ ಅಂದಾಜು 1600/- ರೂ ಕಿಮ್ಮತ್ತಿನ ಮರಳು ಇತ್ತು. ಸದರಿ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ 2.15 ಪಿಎಮ್ದಿಂದ 3.15 ಪಿಎಮ್ದವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಕೈಕೊಂಡು ಸದರಿ ಟ್ರ್ಯಾಕ್ಟರನ್ನು ಮರಳು ಸಮೇತ ಜಪ್ತ ಪಡೆಸಿಕೊಂಡಿದ್ದು ಇರುತ್ತದೆ. ನಂತರ ಸದರಿ ಟ್ರಾಕ್ಟರನ್ನು, ಆರೋಪಿ ಟ್ರಾಕ್ಟರ ಚಾಲಕ ಮಲೀಕ್ ತಂದೆ ಗುಡೂಬೈಹಿ ವಡಕೇರಿ ಈತನ ಸಹಾಯದಿಂದ ಮರಳು ತುಂಬಿದ ಟ್ರಾಕ್ಟರನ್ನು 04 ಪಿಎಮ್ಕ್ಕೆ ಠಾಣೆಗೆ ತಂದು ಮುಂದಿನ ಕ್ರಮ ಜರುಗಿಸಲು ಒಪ್ಪಿಸಿದ್ದು, ಸದರಿ ವರದಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 61/2020 ಕಲಂ: 379 ಐಪಿಸಿ & 21 (3) (4) ಎಮ್ಎಮ್ಆರ್ಡಿ ಆಕ್ಟ ನೇದ್ದರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- ಯುಡಿಆರ್ ನಂ 07/2020 ಕಲಂ 174 ಸಿಆರ್ಪಿಸಿ:-ಇಂದು ದಿನಾಂಕ 07.04.2020 ರಂದು 07.30 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಆಮನಿಂಗಪ್ಪ ತಂದೆ ತಿಪ್ಪಣ್ಣ ಸುಂಕದ್ ವಯಾ|| 35 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ಪತ್ತೆಪೂರ ತಾ|| ಸುರಪೂರ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನಮ್ಮ ತಂದೆ ತಾಯಿಗೆ ನಾವು ಮೂರು ಜನ ಗಂಡು ಮಕ್ಕಳು ಇದ್ದು ಎಲ್ಲರೂ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತೇವೆ. ಹೀಗಿದ್ದು ಇಂದು ದಿನಾಂಕ: 07.04.2020 ರಂದು ಬೆಳಿಗ್ಗೆ ಸಾಯಿನಗರದ ರಡ್ಡಿ ಇವರ ಹೊಲಕ್ಕೆ ನಾನು ಹಾಗು ನನ್ನ ತಮ್ಮ ನಿಂಗಪ್ಪ ಇಬ್ಬರೂ ಕೂಡಿಕೊಂಡು ಕೂಲಿಕೆಲಸಕ್ಕೆಂದು ರಾಂಪೂರ ಸೀಮಾಂತರದ ರಡ್ಡಿ ಇವರ ಹೊಲ ಸವರ್ೆ ನಂಬರ 17/4 ನೇದ್ದಕ್ಕೆ ಹೋಗಿದ್ದು ಇರುತ್ತದೆ. ನಂತರ ನಾವಿಬ್ಬರೂ ಸದರ ರಡ್ಡಿ ರವರ ಹೊಲದ ಕವಳಿ ಬೆಳೆಯ ಡೋಣದಲ್ಲಿನ ಹುಲ್ಲು ತೆಗೆಯುತ್ತಿದ್ದಾಗ ಅಂದಾಜು 11 ಎಎಮ್ ಸುಮಾರಿಗೆ ಸದರ ಡೋಣದಲ್ಲಿದ್ದ ಒಂದು ನಾಗರ ಹಾವು ನನ್ನ ತಮ್ಮನ ಎಡಗಾಲ ಹಿಂಬಡಿಗೆ ಕಚ್ಚಿದ್ದು ಆಗ ನನ್ನ ತಮ್ಮ ತನಗೆ ಹಾವು ಕಚ್ಚಿದ ಅಂತ ಭಲವಾಗಿ ಚೀರಿದಾಗ ನಾನು ಕೂಡಲೇ ನಮ್ಮ ತಮ್ಮನ ಹತ್ತಿರ ಹೋಗಿ ನೋಡಲು ಒಂದು ನಾಗರ ಹಾವು ಪೊದೆಯಲ್ಲಿ ಹೋಯಿತು. ನಂತರ ನಾನು ಕೂಡಲೇ ನನ್ನ ತಮ್ಮನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ವೈದ್ಯರು ಕೂಡಲೇ ಕಲಬುಗರ್ಿಗೆ ಹೋಗಲು ತೀಳಿಸಿದಾಗ ಸದರ ನನ್ನ ತಮ್ಮ ನಿಂಗಪ್ಪ ಈತನಿಗೆ ಉಪಚಾರ ಕುರಿತು ಕಲಬುಗರ್ಿಗೆ ಕರೆದುಕೊಂಡು ಹೊಗುವಾಗ ದಾರಿಯ ಮದ್ಯ ಕಲಬುಗರ್ಿಯ ಹತ್ತಿರ 04-30 ಪಿಎಮ್ ಕ್ಕೆ ಮೃತಪಟ್ಟಿದ್ದು ಇರುತ್ತದೆ. ಕಾರಣ ನನ್ನ ತಮ್ಮನು ಕೂಲಿಕೆಲಸಕ್ಕೆಂದು ರಡ್ಡಿ ಇವರ ಹೊಲಕ್ಕೆ ಹೋಗಿ ಕೃಷಿ ಚಟುವಟಿಕೆಯಲ್ಲಿರುತ್ತಾ ಹೊಲದ ಬಾಂದಾರಿಯಲ್ಲಿದ್ದ ಹುಲ್ಲು ಕೀಳುತ್ತಿದ್ದಾಗ ಆಕಸ್ಮಿಕವಾಗಿ ನಾಗರಹಾವು ಆತನ ಎಡಗಾಲ ಹಿಂಬಡಿಗೆ ಕಚ್ಚಿ ಮೃತಪಟ್ಟಿದ್ದು ಸದರ ಘಟನೆ ಆಕಸ್ಮಿಕವಾಗಿ ಜರುಗಿದ್ದು ತಾವು ಬಂದು ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ 07/2020 ಕಲಂ 174 ಸಿಆರ್ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ
ಭಿಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 40/2020 ಕಲಂ 87 ಕೆಪಿ ಯ್ಯಾಕ್ಟ:- ಇಂದು ದಿನಾಂಕ 07/04/2020 ರಂದು 06.00 ಪಿ.ಎಮ್. ಕ್ಕೆ ಶಿರವಾಳ ಗ್ರಾಮದ ಸೀಮಾಂತರದಲ್ಲಿನ ನರಿಹಳ್ಳದ ಪಕ್ಕದಲ್ಲಿ ಸಾಯಬಣ್ಣ ಗುಡಗುಂಟಿ ಇವರ ಹೊಲದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 10.30 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 02 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 2000/- ರೂ, 52 ಇಸ್ಪೇಟ ಎಲೆಗಳನ್ನು 10.30 ಪಿ.ಎಮ್ ದಿಂದ 11.45 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ದಿನಾಂಕ:08/04/2020 ರಂದು 00.30 ಎ.ಎಮ್ ಕ್ಕೆ ಮುಂದಿನ ಕ್ರಮ ಕುರಿತು ಒಪ್ಪಿಸಿರುತಾರೆ.
Hello There!If you like this article Share with your friend using