ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/04/2020

By blogger on ಗುರುವಾರ, ಏಪ್ರಿಲ್ 2, 2020




                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/04/2020 
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 56/2020 ಕಲಂ 341, 323, 504, 506 ಐಪಿಸಿ:-ನಿನ್ನೆ ದಿನಾಂಕ 31.03.2020 ರಂದು ಸಂಜೆ 4:00 ಗಂಟೆಗೆ ಫಿರ್ಯಾದಿಯ ಮಗನು ತಮ್ಮ ಸಂಬಂದಿಕರನ್ನು ಭೀಮನಳ್ಳಿ ಗೇಟ್ ವರೆಗೆ ಬಿಟ್ಟು ಮರಳಿ ಊರಿಗೆ ಬಂದಾಗ ಆರೋಪಿತನು ತನ್ನ ಮನೆಯ ಮುಂದೆ ಆತನನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಿದ್ದು ಅಲ್ಲದೇ ಇಂದು ದಿನಾಂಕ 01.04.2020 ರಂದು ಬೆಳಿಗ್ಗೆ 7:00 ಗಂಟೆಗೆ ಪುನಃ ಫಿರ್ಯಾದಿಯ ಮನೆಗೆ ಹೋಗಿ ಅವಾಚ್ಯವಾಗಿ ಬೈದು ಫಿರ್ಯಾದಿಯನ್ನು ಕರೆದು ಆತನಿಗೆ ಎತ್ತಿ ಹಾಕಿ ಕೈಯಿಂದ ಹೊಡೆ-ಬಡೆ ಮಾಡಿದ್ದು ಅದಲ್ಲೆ ಫಿರ್ಯಾದಿಯ ಮಗನಿಗೆ ಕಪಾಳಕ್ಕೆ ಬಾಯಿಂದ ಕಚ್ಚಿ ಜೀವದ ಬೆದರಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 56/2020 ಕಲಂ 341, 323, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.   

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- /2020 ಕಲಂ 143, 147, 341, 323, 326, 504, 506 ಸಂಗಡ 149 ಐಪಿಸಿ:-ದಿನಾಂಕ 31.03.2020 ರಂದು ಸಂಜೆ 6.00 ಗಂಟೆ ಸುಮಾರಿಗೆ ಪಿರ್ಯಾಧಿ ಆರೋಪಿತಿಗೆ ನಮ್ಮ ಓಣಿಗೆ ನೀರು ಬರುತ್ತಿಲ್ಲ ಏನು ಕೆಲಸ ಆಗಿಲ್ಲ ಅಂತಾ ಕೆಳಿದ್ದಕ್ಕೆ ಇಂದು ದಿನಾಂಕ 01.04.2020 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಗುಂಪುಕಟ್ಟಿಕೊಂಡು ಸಂಡಾಸಕ್ಕೆ ಹೋಗುತ್ತಿದ್ದಾಗ ಪಿರ್ಯಾಧಿಗೆ ತಡೆದು ನಿಲ್ಲಿಸಿ ನಮಗೆ ನೀರಿಲ್ಲ ಅಂತಾ ಕೆಲಸ ಕೇಳುತಿ ಸೂಳಿ ಮಗನ್ಯಾ ಅಂತಾ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಹೊಡೆದು ನಂತರ ಪಿರ್ಯಾದಿ ಬಲಕಾಲು ಮೇಲೆ ಕಲ್ಲು ಎತ್ತಿ ಹಾಕಿ ಭಾರಿ ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.


ವಡಗೇರಾಪೊಲೀಸ್ ಠಾಣೆ ಗುನ್ನೆ ನಂ:- 33/2020 ಕಲಂ: 279,337,338 ಐಪಿಸಿ:- ಇಂದು ದಿನಾಂಕ: 01/04/2020 ರಂದು 5 ಪಿಎಮ್ ಕ್ಕೆ ಶ್ರೀ ಭೀಮಣ್ಣ ತಂದೆ ಕಡ್ಲಪ್ಪ ಸುರಪೂರದೋರ, ವ:47, ಜಾ:ಉಪ್ಪಾರ, ಉ:ಕೂಲಿ ಸಾ:ಕಕ್ಕಸಗೇರಾ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ಮಗ ಅಂಬ್ರೇಶನಿಗೆ ಚಿತ್ತಾಪೂರ ತಾಲ್ಲೂಕಿನ ಭೀಮನಳ್ಳಿ ಗ್ರಾಮದಲ್ಲಿ ಹೆಣ್ಣು ನೋಡಿ ಗಟ್ಟಿ ಮಾಡಿರುತ್ತೇವೆ. ಹೀಗಿದ್ದು ದಿನಾಂಕ: 29/03/2020 ರಂದು ನಮ್ಮ ಮನೆಯಲ್ಲಿ ಒಂದಿಬ್ಬರಿಗೆ ಅರಾಮ ಇಲ್ಲದ ಪ್ರಯುಕ್ತ ನನ್ನ ಮಗನ ಬೀಗರಾದ ಹುಡುಗಿ ತಾಯಿ ವಿಜಮ್ಮ ಗಂಡ ಸಾಬಣ್ಣ ಉಳ್ಳೆಸೂಗೂರು, ಅವರ ಹಿರಿ ಮಗಳಾದ ಭೀಮಬಾಯಿ ತಂದೆ ಸಾಬಣ್ಣ ಉಳ್ಳೆಸೂಗೂರು ಹಾಗೂ ಮಗನಾದ ಮೌನೇಶ ತಂದೆ ಸಾಬಣ್ಣ ಉಳ್ಳೆಸೂಗೂರು ಈ ಮೂರು ಜನರು ಅರಾಮ ಇಲ್ಲದವರಿಗೆ ಮಾತಾಡಿಸಲು ನಮ್ಮ ಮನೆಗೆ ಬಂದು ರಾತ್ರಿ ಇಲ್ಲಿಯೇ ಉಳಿದುಕೊಂಡಿದ್ದರು. ಮರು ದಿವಸ ದಿನಾಂಕ: 30/03/2020 ರಂದು ಬೆಳಗಿನ ಜಾವ ನನ್ನ ಮಗನ ಅತ್ತೆಯಾದ ವಿಜಮ್ಮ ಇವರ ಸಂಬಂಧಿಕರು ಭೀಮನಳ್ಳಿಯಲ್ಲಿ ತೀರಿಕೊಂಡಿರುತ್ತಾರೆ ಎಂದು ಸಾವು ಸುದ್ದಿ ಬಂದಿದ್ದರಿಂದ ತುತರ್ಾಗಿ ಭೀಮನಳ್ಳಿಗೆ ಹೋಗಬೇಕು ಅಂತಾ ನಮ್ಮೂರಿಂದ ಮಾರುತಿ ಕಾರ ನಂ. ಕೆಎ 04 ಎಎ 4843 ನೇದ್ದನ್ನು ತೆಗೆದುಕೊಂಡು ನನ್ನ ಮಗ ಅಂಬ್ರೇಶ, ಅವನ ಅತ್ತೆಯಾದ ವಿಜಮ್ಮ ಹಾಗೂ ಅವಳ ಮಕ್ಕಳಾದ ಭೀಮಬಾಯಿ, ಮೌನೇಶ ಇವರು ಕಾರಿನಲ್ಲಿ ಭೀಮನಳ್ಳಿಗೆ ಹೋದರು. ಸದರಿ ಕಾರನ್ನು ಮಲ್ಲಿಕಾಜರ್ುನ @ ಮಲ್ಲಪ್ಪ ತಂದೆ ಕಡ್ಲಪ್ಪ ಸಾ:ಕಕ್ಕಸಗೇರಾ ಈತನು ಚಲಾಯಿಸಿಕೊಂಡು ಹೋದನು. ನಾನು ಮನೆಯಲ್ಲಿಯೇ ಉಳಿದೆನು. ಅವರು ಹೋದ ಕೆಲ ಹೊತ್ತಿನ ನಂತರ 6 ಎಎಮ್ ಸುಮಾರಿಗೆ ನನ್ನ ಮಗನೊಂದಿಗೆ ಹೋಗಿದ್ದ ಅಳಿಯ ಮೌನೇಶ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ಅಂಬ್ರೇಶ ಮಾಮ, ನಮ್ಮಮ್ಮ, ನಮ್ಮ ಅಕ್ಕ ಭೀಮಬಾಯಿ ಎಲ್ಲರೂ ಕಾರಿನಲ್ಲಿ ಊರಿಗೆ ಹೋಗುತ್ತಿದ್ದಾಗ ಬೆಳಗ್ಗೆ 5-45 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ನಾಯ್ಕಲ್ ಗ್ರಾಮ ಮತ್ತು ಪೆಟ್ರೋಲ್ ಬಂಕಗಳು ದಾಟಿದ ನಂತರ ಸದರಿ ಕಾರಿನ ಡ್ರೈವರ ಮಲ್ಲಿಕಾಜರ್ುನ @ ಮಲ್ಲಪ್ಪ ಈತನು ಕಾರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟು ತಿರುವಿನಲ್ಲಿ ಒಮ್ಮಲೇ ಕಾರನ್ನು ಎಡಗಡೆ ಕಟ್ ಹೊಡೆದಿದ್ದರಿಂದ ಕಾರ ಅವನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರೋಡಿನ ಕೆಳಗಡೆ ಬಿದ್ದುಬಿಟ್ಟಿರುತ್ತದೆ. ಅಪಘಾತದಲ್ಲಿ ನನ್ನ ಎಡಕೈ ಹಾಗೂ ಎಡ ಕುತ್ತಿಗೆಗೆ ಸಣ್ಣಪುಟ್ಟ ಗುಪ್ತಗಾಯಗಳಾಗಿದ್ದು, ಅಂಬ್ರೇಶ ಮಾಮನಿಗೆ ಹಣೆಗೆ ರಕ್ತಗಾಯ ಮತ್ತು ಬಲಗಡೆ ಎದೆಗೆ ಭಾರಿ ಒಳಪೆಟ್ಟಾಗಿರುತ್ತದೆ. ನಮ್ಮ ಅಕ್ಕ ಭೀಮಬಾಯಿ ಮತ್ತು ನಮ್ಮಮ್ಮ ವಿಜ್ಜಮ್ಮಳಿಗೆ ಕೂಡಾ ಸಣ್ಣಪುಟ್ಟ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ. ಯಾರೋ ದಾರಿ ಮೇಲೆ ಹೋಗುವವರು ನಮಗೆ ನೋಡಿ 108 ಅಂಬ್ಯುಲೇನ್ಸ ಕರೆಸಿ, ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ನೀವು ಬೇಗನೆ ಬರ್ರಿ ಎಂದು ಹೇಳಿದನು. ಆಗ ಗಾಬರಿಯಾದ ನಾನು ಅಲ್ಲಿಂದ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ನೋಡಿದ್ದು, ನನ್ನ ಮಗ ಆಂಬ್ರೇಶನಿಗೆ ಹಣೆಗೆ ರಕ್ತಗಾಯ ಮತ್ತು ಬಲಗಡೆ ಎದೆಗೆ ಭಾರಿ ಒಳಪೆಟ್ಟಾಗಿತ್ತು. ನಮ್ಮ ಬೀಗರಾದ ವಿಜಮ್ಮ, ಭೀಮಬಾಯಿ ಮತ್ತು ಮೌನೇಶ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಯಾದಗಿರಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆಯ ಪೊಲೀಸರು ವಿಚಾರಣೆ ಮಾಡಲು ಬಂದಾಗ ನಾವು ಸದ್ಯ ನನ್ನ ಮಗನಿಗೆ ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ಕರೆದುಕೊಂಡು ಹೋಗಿ ತೋರಿಸುವವರು ಯಾರು ಇಲ್ಲದ್ದರಿಂದ ನಂತರ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಕಾರಣ ಕಾರ ನಂ. ಕೆಎ 04 ಎಎ 4843 ನೇದ್ದನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ, ಪಲ್ಟಿ ಮಾಡಿ ನನ್ನ ಮಗ ಅಂಬ್ರೇಶ ಹಾಗೂ ನಮ್ಮ ಸಂಬಂಧಿಕರಿಗೆ ಭಾರಿ ಮತ್ತು ಸಾದಾಗಾಯಪಡಿಸಿದ ಕಾರ ಡ್ರೈವರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 33/2020 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ಸೈದಾಪೂರ ಠಾಣೆ ಗುನ್ನೆ ನಂ;- 47/2020 ಕಲಂ 32,34 ಕೆ,ಇ ಯಾಕ್ಟ್:- ಇಂದು ದಿನಾಂಕ: 01-04-2020 ರಂದು ರಾತ್ರಿ 8-15 ಗಂಟೆಗೆ ಪಿ.ಎಸ್.ಐ ರವರು   ನಂದೆಪಲ್ಲಿ ಗ್ರಾಮದ ಆಂಜನೇಯ ಗುಂಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ಜ್ಞಾಪನ ಪತ್ರದೊಂದಿಗೆ ಮದ್ಯದ ಬಾಟಲಿಗಳನ್ನು ಮತ್ತು ಜಪ್ತಿಪಂಚನಾಮೆಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 47/2020 ಕಲಂ. 32, 34 ಕೆ.ಇ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!