ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/03/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 41/2020 ಕಲಂ 323, 341, 427, 447, 504, 506 ಸಂ 34 ಐಪಿಸಿ:-ದಿನಾಂಕ 26/03/2020 ರಂದು ಮಧ್ಯಾಹ್ನ 3-00 ಗಂಟೆಗೆ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾಧಿ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಫಿರ್ಯಾಧಿ ಮತ್ತು ಅವನ ತಂದೆಯ ಜೋತೆಗೆ ಜಗಳ ತೆಗೆದು ಏ ಸೂಳೇ ಮಕ್ಕಳೆ ನೀವು ನಮ್ಮ ಹೊಲದಿಂದ ನಿಮ್ಮ ಹೊಲಕ್ಕೆ ಹೋಗಬೇಡಿರಿ ಅಂತಾ ಎಷ್ಟು ಸಲ ಹೇಳಿದರೂ ಕೂಡಾ ನೀವು ಕೇಳುತ್ತಿಲ್ಲ ನಿಮಗೆ ಬಹಳ ಸೊಕ್ಕುಯಿದೆ ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು, ಜೀವದ ಭಯ ಹಾಕಿ ಕೈಯಿಂದ ಹೊಡೆಬಡೆ ಮಾಡಿ ಫಿರ್ಯಾಧಿಯ ಹೊಲದಲ್ಲಿಯ ಗಿಡಗಳು ಕಡಿದು ಮತ್ತು ವಿಧ್ಯೂತ್ ವಾಯರದ ಕಟ್ಟಿಗೆ ಕಂಬಗಳನ್ನು ಮುರಿದು 2000/ರೂ ಯಷ್ಟು ಲೂಕ್ಸಾನ ಮಾಡಿದ ಬಗ್ಗೆ.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 42/2020 ಕಲಂ 427 ಐಪಿಸಿ;-ದಿನಾಂಕ 27-03-2020 ರಂದು 6 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ಶರತ್ ತಂದೆ ಚನ್ನಕೇಶವ ಇರನಾಪಲ್ಲಿ ವಯಾಃ 23 ವರ್ಷ ಜಾಃ ಮುನ್ನುರೆಡ್ಡಿ ಉಃ ಗ್ರಾಮ ಲೇಖಾಧಿಕಾರಿಗಳು ಯರಗೋಳ ಮೋ.ನಂ 8861049294 ಇದ್ದು ದಿನಾಂಕ 25/03/2020 ರಂದು ನಾನು ಪ್ರತಿನಿತ್ಯದಂತೆ ಕರ್ತವ್ಯ ಕುರಿತು ಯರಗೋಳ ಗ್ರಾಮಕ್ಕೆ ಹೋಗಿ ನನ್ನ ಆಫೀಸಿನಲ್ಲಿ ಇರುವಾಗ, ಮಾಹಿತಿ ಬಂದಿದ್ದೆನೆಂದರೆ ಯರಗೋಳ-ಯಾಗಾಪೂರ ರೋಡಿನ ಮೇಲೆ ಯಾರೋ ದುಷ್ಕಮರ್ಿಗಳು ಬೇರೆಯ ಊರಿನಿಂದ ತಮ್ಮೂರಿಗೆ ಯಾರು ಬರಬಾರದು ಕರೋನಾ ವೈರಸ್ ತಮಗೆ ಬರುತ್ತದೆ ಅಂತಾ ಅಂದಾಜ ಮೂರು ಫೀಟ ತಗ್ಗು ತೋಡಿ ಹಾಳು ಮಾಡಿರುತ್ತಾರೆ ಅಂತಾ ಮಾಹಿತಿ ಗೋತ್ತಾಗಿ ನಾನು ಅಲ್ಲಿಗೆ ಹೋಗಿ ನೋಡಿದಾಗ ಈ ರೀತಿ ಘಟನೆ ನಡೆದಿದ್ದು, ಯಾರೋ ದುಷ್ಕಮರ್ಿಗಳು ಸಾರ್ವಜನಿಕ ರೋಡನ್ನು ತಗ್ಗು ತೋಡಿ ಅಂದಾಜ 10,000/ರೂ ಯಷ್ಟು ಲೂಕ್ಸಾನ ಮಾಡಿರುತ್ತಾರೆ, ಈ ಘಟನೆಯು ದಿನಾಂಕ 25/03/2020 ರಂದು ಬೆಳಿಗ್ಗೆ 6-00 ಗಂಟೆಯ ಸಮಯದಲ್ಲಿ ನಡೆದಿರಬಹುದು, ಈ ವಿಷಯದ ಬಗ್ಗೆ ನಾನು ನಮ್ಮ ಮೇಲಾಧಿಕಾರಿರವರಲ್ಲಿ ವಿಚಾರಣೆ ಮಾಡಿ ಇಂದು ದಿನಾಂಕ 27/03/2020 ಸಾಯಂಕಾಲ 6-00 ಗಂಟೆಗೆ ಠಾಣೆಗೆ ಬಂದು ಅಜರ್ಿ ಕೊಟ್ಟಿದ್ದು, ಸದರಿ ದುಷ್ಕಮರ್ಿಗಳನ್ನು ಪ್ತತೆ ಮಾಡಿ ಕ್ರಮ ಕೈಕೊಳ್ಳಲು ನೀಡಿದ ಅಜರ್ಿ ಸಾರಾಂಶವು ಅಸಂಜ್ಞೆಯ ಕಲಂ 427 ಐಪಿಸಿ ಅಪರಾಧ ವ್ಯಾಪ್ತಿಗೆ ಒಳಪಡುತ್ತಿದ್ದುದ್ದರಿಂದ ಗುನ್ನೆ ದಾಖಲು ಮಾಡಿಕೊಳ್ಳಲು ಮಾನ್ಯ ಅಡಿಷನಲ್ ಜೆ.ಎಮ್.ಎಫ್.ಸಿ ಕೊರ್ಟ ಯಾದಗಿರಿರವರಿಂದ ಇಂದು ದಿನಾಂಕ 28-03-2020 ರಂದು 12 ಪಿ.ಎಮ್ ಕ್ಕೆ ಪರವಾನಿಗೆ ಪಡೆದುಕೊಂಡಿದ್ದು ಅಜರ್ಿ ಸಾರಂಸದ ಮೇಲಿಂದ ಠಾಣೆ ಗುನ್ನೆ ನಂ: 42/2020 ಕಲಂ 427 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 54/2020 ಕಲಂ: 32, 34 ಕೆಇ ಆಕ್ಟ್:- ಇಂದು ದಿನಾಂಕ 28.03.2020 ರಂದು ಮಧ್ಯಾಹ್ನ 2:30 ಗಂಟೆಗೆ ಆರೋಪಿತನು ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲಿಗಳನ್ನು ದಂತಾಪೂರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್. ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ತನ್ನ ವಶದಲ್ಲಿದ್ದ ವಿವಿಧ ನಮೂನೆಯ ಒಟ್ಟು 7410=72 ರೂ ಬೆಲೆಯ ಮುದ್ದೆ ಮಾಲನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಆ ಬಗ್ಗೆ ಠಾಣಾ ಗುನ್ನೆ ನಂ: 54/2020 ಕಲಂ: 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಶೊರಾಪೂರ ಪೊಲೀಸ ಠಾಣೆ ಗುನ್ನೆ ನಂ:- 82/2020 ಕಲಂ 323, 324, 354, 504, 506 ಸಂ. 34 ಐಪಿಸಿ:- ಇಂದು ದಿನಾಂಕ:28/03/2020 ರಂದು 4 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿ ಶ್ರೀ ಶಾಂತಪ್ಪ ತಂದೆ ಬಸಣ್ಣ ಬನಗುಂಡಿ ವ|| 35 ವರ್ಷ ಜಾ|| ನೇಕಾರ ಉ|| ಒಕ್ಕಲುತನ ಸಾ|| ಖಾನಾಪೂರ ಎಸ್.ಹೆಚ್ ತಾ|| ಸುರಪೂರ ಇದ್ದು ಅಜರ್ಿ ಸಾರಾಂಶ ವೆನಂದರೆ, ನಮ್ಮ ತಂದೆ ತಾಯಿಗೆ ಮೂರು ಜನ ಗಂಡು ಮಕ್ಕಳಿದ್ದು ಎಲ್ಲರು ಬೇರೆಯಾಗಿ ಉಪ ಜೀವನ ಸಾಗಿಸುತ್ತೇವೆ. ನಮ್ಮ ತಂದೆಯವರ ಹೆಸರಿನಲ್ಲಿದ್ದ ಹೊಲ ಸವರ್ೇ ನಂ. 49/2, ನೇದ್ದನ್ನು ನಮ್ಮ ತಂದೆಯವರು ಬದುಕಿರುವಾಗ ನನ್ನ ಹೆಸರಿಗೆ ಮಾಡುತ್ತೇನೆ ಅಂತಾ ಹೇಳಿದ್ದು ಇನ್ನೂ ಎರಡು ಹೊಲ ಸವರ್ೇ ನಂ. 124/ಅ ನೇದ್ದನ್ನು ನಮ್ಮ ಅಣ್ಣನಾದ ದೇವಿಂದ್ರಪ್ಪ ತಂದೆ ಬಸಣ್ಣ ಇತನ ಹೆಸರಿನಲ್ಲಿದ್ದು, 123 ನೇದ್ದನ್ನು ಮಲ್ಲಿಕಾಜರ್ುನ ತಂದೆ ಬಸಣ್ಣ ಇತನ ಹೆರಿನಲ್ಲಿರುತ್ತದೆ. ಹಿಗೆ ಮೂರು ಹೊಲಗಳಿದ್ದು ನಮ್ಮ ಅಣ್ಣ ತಮ್ಮಂದಿಯರು 5 ವರ್ಷಗಳಿಂದ ನನಗೆ ಉಪಜೀವನಕ್ಕೆ ಹೊಲ ನೀಡುತ್ತಿರಲಿಲ್ಲ. ನಮ್ಮ ತಂದೆಯ ಹೆಸರಿನಲ್ಲಿದ್ದ ಹೊಲವನ್ನು ನಾನು ನನ್ನ ಹೆಸರಿಗೆ ಮಾಡಿಕೊಡಲು ನಮ್ಮ ಅಣ್ಣಂದಿಯರಿಗೆ ಕೇಳಿದಾಗ ಅವರು ಮಾಡಿ ಕೊಡುವದಿಲ್ಲ ಅಂತಾ ಹೇಳಿದರು. ಹಿಗಿದ್ದು ನಿನ್ನೆ ದಿನಾಂಕ:27/03/2020 ರಂದು ಸಾಯಂಕಾಲ 6 ಗಂಟೆಗೆ ಹೊಲ ಸವರ್ೇ ನಂ.49/2 ನೇದ್ದರ ಹೊಲದಲ್ಲಿ ಟ್ರ್ಯಾಕ್ಟರ ಮೂಲಕ ಕುಂಟಿ ಹೊಡಯುವದನ್ನು ನನಗೆ ಗೊತ್ತಾಗಿದ್ದು ನಾನು ಹೊಲಕ್ಕೆ ಹೊಗಿ ಕುಂಟಿ ಹೊಡೆಯುವದನ್ನು ನಿಲ್ಲಿಸಿ ಮನಗೆ ಬಂದಿರುತ್ತೇನೆ. ರಾತ್ರಿ 8:30 ಗಂಟೆ ಸುಮಾರಿಗೆ ಊಟ ಮಾಡಿ ನಾನು ಮತ್ತು ನನ್ನ ಹೆಂಡತಿ ಗುರುಬಾಯಿ ಬನಗುಂಡಿ, ಇಬ್ಬರು ಕೂಡಿ ಹೊರಗಡೆ ಮಾತನಾಡುತ್ತಾ ನಿಂತಾಗ, ಅದೇ ಸಮಯಕ್ಕೆ ನಮ್ಮ ಅಣ್ಣ ದೇವಿಂದ್ರಪ್ಪ ತಂದೆ ಬಸಣ್ಣ ಬನಗುಂಡಿ, ಅಣ್ಣನ ಹೆಂಡತಿ ರಾಚಮ್ಮ ಗಂಡ ದೇವಿಂದ್ರಪ್ಪ ಬನಗುಂಡಿ, ಅಣ್ಣನ ಮಗಳಾದ ಸುಧಾ ತಂದೆ ದೇವಿಂದ್ರಪ್ಪ ಬನಗುಂಡಿ, ಅಣ್ಣನ ಮಗನಾದ ಶಿವರಾಜ ತಂದೆ ದೇವಿಂದ್ರಪ್ಪ ಬನಗುಂಡಿ ಎಲ್ಲರು ಕೂಡಿ ಕೈಯಲ್ಲಿ ಕಲ್ಲು ಮತ್ತು ಬಿಡಿಗೆಯ ಹಿಡಿದುಕೊಂಡು ಬಂದು ನನಗೆ ಏ ಸೂಳೆಮಗನೆ ಹೊಲದಲ್ಲಿ ಕುಂಟಿ ಹೊಡೆಯುವದನ್ನು ನಿಲ್ಲಿಸಿದಿಯಾ ಅಂತಾ ಅವಾಚ್ಯವಾಗಿ ಬೈಯುತ್ತಾ ನಮ್ಮ ಅಣ್ಣ ದೇವಿಂದ್ರಪ್ಪ ಇತನು ತನ್ನ ಕೈಯಲ್ಲಿದ್ದು ಬಡಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಅಣ್ಣನ ಮಗಾನಾದ ಶಿವರಾಜ ಇತನು ನನಗೆ ಕಲ್ಲಿನಿಂದ ಎಡಗೈ ರಿಸ್ಟ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ನನ್ನ ಹೆಂಡತಿಗೆ ಅಣ್ಣನ ಹೆಂಡತಿ ಮತ್ತು ಅಣ್ಣನ ಮಗಳು ಇಬ್ಬರು ಕೂಡಿ ಕೈಯಿಂದ ಕಪಾಳಕ್ಕೆ ಹೊಡೆದರು ಮತ್ತು ಅಣ್ಣನ ಮಗ ಶಿವರಾಜ ಇತನು ನನ್ನೆ ಹೆಂಡತಿಗೆ ಕಲ್ಲಿನಿಂದ ಬೆನ್ನಿಗೆ ಹೊಡೆದು ಸೀರೆ ಸೆರಗ ಹಿಡಿದು ಜಗ್ಗಾಡಿ ಅವಮಾನ ಗೊಳಿಸಿದನು. ಅಲ್ಲೆ ರಸ್ತೆಯ ಮುಖಾಂತರ ಬರುತ್ತಿದ್ದ ಶಿವಪ್ಪ ಬಂಕಪಿರಿ ಸಾ|| ಖಾನಾಪುರ ಎಸ್.ಹೆಚ್ ಮತ್ತು ವಿಶ್ವನಾಥ ತಂದೆ ಬಸಣ್ಣ ಪುಜಾರಿ ಸಾ|| ವಂಕಟಾಪುರ ಇಬ್ಬರು ಜಗಳವನ್ನು ಬಿಡಿಸಿದರು. ಇವರು ಬಂದು ಬಿಡಿಸಿದ್ದಾರೆ ಅಂತ ಇವತ್ತ ನಿಮ್ಮನ್ನು ಬಿಟ್ಟಿವಿ, ಇನ್ನೊಮ್ಮ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತಾ ಹೇಳಿ ಎಲ್ಲರು ಹೊದರು. ನಂತರ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ಸೇರಿಕೆಯಾಗಿ ಉಪಚಾರ ಪಡಿಸಿಕೊಂಡು ನಮ್ಮ ಹಿರಿಯರ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರ ನೀಡಿರುತ್ತೇನೆ. ಕಾರಣ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆ ಬಡಿ ಮಾಡಿದ ದೇವಿಂದ್ರಪ್ಪ, ರಾಚಮ್ಮ, ಸುಧಾ ಹಾಗೂ ಶಿವರಾಜ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಲಸು ವಿನಂತಿ.ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 82/2020 ಕಲಂ: 323, 324, 354, 504, 506 ಸಂ. 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- ಯುಡಿಆರ್ ನಂ 06/2020 ಕಲಂ 174 ಸಿಆರ್ಪಿಸಿ:- ಇಂದು ದಿನಾಂಕ 28/03/2020 ರಂದು 1.30 ಪಿ ಎಮ್ ಕ್ಕೆ ಫಿಯರ್ಾದಿ ಅಜಿದಾರರಾದ ಶ್ರೀ ದತ್ತಾತ್ರಿ ತಂದೆ ಅಮೃತ ಕೋಳಿ ವಯಾ|| 42 ವರ್ಷ ಜಾತಿ|| ಕಬ್ಬಲಿಗ ಉ|| ಖಾಸಗಿ ಕೆಲಸ ಸಾ|| ಬಸವಂತಪೂರ ತಾ:ಜಿ: ಬೀದರ ಹಾ:ವ: ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ತನಗೆ ದರ್ಶನ ವಯಾ: 14 ವರ್ಷ ಹಾಗೂ ಸಮೃದ್ದಿ ವಯಾ: 5 ವರ್ಷ ಎನ್ನುವ ಇಬ್ಬರು ಮಕ್ಕಳಿದ್ದು ಸದ್ಯ ಶಾಲೆ ರಜೆ ಇರುವುದರಿಂದ ತನ್ನ ಮಗನು ಮನೆಯಲ್ಲಿ ಇರುತ್ತಾನೆ. ಆತನು ಆಗಾಗ ಕೆಂಭಾವಿಯ ಮೇನ್ ಕೆನಾಲ್ದಲ್ಲಿ ಈಜಾಡಲು ಹೋಗುತ್ತಿದ್ದನು.
ಹೀಗಿದ್ದು ದಿನಾಂಕ 27/03/2020 ರಂದು 02.00 ಪಿ.ಎಮ್ ಸುಮಾರಿಗೆ ನನ್ನ ಮಗನಾದ ದರ್ಶನ ಈತನು ಕೆಂಭಾವಿಯ ಮೇನ್ ಕೆನಾಲ್ದಲ್ಲಿ ಈಜಾಡಿ ಬರುತ್ತೇನೆ ಅಂತಾ ಹೇಳಿ ಹೋದನು. ನಾನು ನಮ್ಮ ಮನೆಯಲ್ಲಿದ್ದಾಗ 02.30 ಪಿಎಮ್ ಕ್ಕೆ ಯಾರೋ ನನಗೆ ಪೋನ ಮಾಡಿ ಕೆನಾಲಕ್ಕೆ ಈಜಾಡಲು ಹೋದ ನನ್ನ ಮಗ ಕೆನಾಲ ನೀರಿನ ಸಸುಳಿಗೆ ಸಿಲುಕಿ ನೀರಿನಲ್ಲಿ ಮುಳಗಿ ಹೋಗಿರುತ್ತಾನೆ ಅಂತ ತಿಳಿಸಿದಾಗ ನಾನು ಗಾಬರಿಯಾಗಿ ಕೆನಾಲದಲ್ಲಿ ಎಲ್ಲಾ ಕಡೆ ಹುಡುಕಾಡಿದರು ನನ್ನ ಮಗ ಸಿಗಲಿಲ್ಲ.
ನಂತರ ಇಂದು ದಿನಾಂಕ 28/03/2019 ರಂದು ಸದರ ನನ್ನ ಮಗನನ್ನು ಹುಡುಕಾಡುತ್ತಾ ಮಾಲಗತ್ತಿ ಸೀಮಾಂತರದ ಬೂದಿಹಾಳ ಗೇಟ ಹತ್ತಿರ ಕೆನಾಲದಲ್ಲಿ ಹುಡುಕಾಡುತ್ತಾ ಹೋರಟಾಗ ಮದ್ಯಾಹ್ನ 12.30 ಗಂಟೆಗೆ ನನ್ನ ಮಗನ ಶವ ಪತ್ತೆಯಾಗಿದ್ದು ಪರೀಶಿಲಿಸಿ ನೋಡಲು ಅದು ನನ್ನ ಮಗನ ಶವವಾಗಿತ್ತು. ನನ್ನ ಮಗನ ದೇಹಕ್ಕೆ ಜಲಚರ ಪ್ರಾಣಿಗಳು ತಿಂದಿದ್ದರಿಂದ ಕಣ್ಣು,ಕಿವಿ, ಮೂಗು ,ಬಾಯಿ ಹಾಗು ಎರಡು ಮೊಲಕಾಲು ಹಾಗು ಮೊಳಗೈಗಳಿಗೆ ಗಾಯಗಳಾಗಿದ್ದು ಇರುತ್ತದೆ. ನನ್ನ ಮಗನು ಕೆನಾಲಕ್ಕೆ ಈಜಾಡಲು ಹೋಗಿ ಆಕಸ್ಮಿಕವಾಗಿ ನೀರಿನ ಸೆಳುವಿಗೆ ಸಿಲುಕಿ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದು ಸದರ ಘಟನೆ ಆಕಸ್ಮಿಕವಾಗಿ ಜರುಗಿದ್ದು ಸದರ ನನ್ನ ಮಗನ ಸಾವಿನಲ್ಲಿ ನನ್ನದು ಯಾರ ಮೇಲೂ ಯಾವದೇ ರೀತಿಯ ಸಂಶಯ ವಗೈರೆ ಇರುವದಿಲ್ಲ ಕಾರಣ ತಾವು ಬಂದು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ವಿನಂತಿ ಇರುತ್ತದೆ. ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂಬರ 06/2020 ಕಲಂ 174 ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using