ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/03/2020
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 72/2019 ಕಲಂ 279, 338, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್_ ದಿನಾಂಕ 25/11/2019 ರಂದು ಮದ್ಯಾಹ್ನ 2 ಪಿ.ಎಂ. ದ ಸುಮಾರಿಗೆ ಯಾದಗಿರಿ ನಗರದ ಗಂಗಾನಗರ ಕ್ರಾಸ್ ಹನುಮಾನ ಮಂದಿರದ ಬಳಿ ಮುಂದಿನ ಮುಖ್ಯ ರಸ್ತೆ ಮೇಲೆ ಈ ಕೇಸಿನ ಗಾಯಾಳು ಮಲ್ಲಪ್ಪ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಆರ್-5796 ನೇದ್ದರ ಮೇಲೆ ಯಾದಗಿರಿಯಿಂದ ಹೆಡಗಿಮದ್ರಿಗೆ ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಕೊಟ್ಟಿದ್ದರಿಂದ ಗಾಯಾಳು ಮಲ್ಲಪ್ಪನಿಗೆ ತಲೆಗೆ ಬಾರೀ ರಕ್ತಗಾಯ, ಬಲಗಾಲಿನ ಮೊಣಕಾಲು ಕೆಳಗೆ, ಬಲಗೈ ಮುಂಗೈ ಹತ್ತಿರ ಬಾರೀ ರಕ್ತಗಾಯ, ಬಲಭುಜಕ್ಕೆ ತರಚಿದ ರಕ್ತಗಾಯವಾಗಿದ್ದು ಮೂಚರ್ೆ ಹೋಗಿದ್ದು ಇರುತ್ತದೆ ಅಪಘಾತ ಪಡಿಸಿದ ವಾಹನವನ್ನು ಪತ್ತೆ ಮಾಡಿ ಅದರ ಚಾಲಕನ ಮೇಲೆ ಕಾನೂನಿನ ಮುಂದಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಿಯರ್ಾದು ಮೇಲಿಂದ ಠಾಣೆ ಗುನ್ನೆ ನಂ.72/2019 ಕಲಂ 279, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
ಹೀಗಿದ್ದು ಇಂದು ದಿನಾಂಕ 01/03/2020 ರಂದು ಬೆಳಿಗ್ಗೆ 7 ಎ.ಎಂ.ಕ್ಕೆ ಸದರಿ ಪ್ರಕರಣದಲ್ಲಿನ ಪಿಯರ್ಾದಿ ಶ್ರೀ ಶಿವಪ್ಪ ತಂದೆ ಬೀಮರಾಯ ಬಾವುರ ವಯ;45 ವರ್ಷ, ಉ;ಒಕ್ಕುಲುತನ, ಜಾ;ಕಬ್ಬಲಿಗ, ಸಾ;ಹೆಡಗಿಮದ್ರಿ, ತಾ;ಜಿ;ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಪುರವಣಿ ಹೇಳಿಕೆ ಸಲ್ಲಿಸಿದ್ದೇನೆಂದರೆ ಗಾಯಾಳು ನನ್ನ ಅಳಿಯನಿಗೆ ದಿನಾಂಕ 25/11/2019 ರಂದು ಅಪಘಾತದ ನಂತರ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಕಲಬುರಗಿಯ ದನ್ವಂತರಿ ಆಸ್ಪತ್ರೆ, ನಂತರ ಹೈದ್ರಾಬಾದ್ನ ಯಶೋಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಮರಳಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆತಂದಿದ್ದು ಗಾಯಾಳು ಮಲ್ಲಪ್ಪನು ಅಪಘಾತದ ದಿನದಿಂದ ಇಲ್ಲಿಯವರೆಗೆ ಕೋಮಾ ಸ್ಥಿತಿಯಲ್ಲಿದ್ದುದರಿಂದ ಮನೆಗೆ ಕರೆದುಕೊಂಡು ಹೋಗಿದ್ದು ನಿನ್ನೆ ದಿನಾಂಕ 29/02/2020 ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ಮಲ್ಲಪ್ಪನಿಗೆ ಅಪಘಾತದಲ್ಲಾದ ಗಾಯಗಳ ಬಾದೆಯಿಂದ ಹೆಡಗಿಮದ್ರಿ ಗ್ರಾಮದ ಮನೆಯಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಪುರವಣಿ ಹೇಳಿಕೆ ನೀಡಿದ್ದು ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 24/2020 ಕಲಂ: 457, 380 ಐ ಪಿ ಸಿ:- ಇಂದು ದಿನಾಂಕ 01.03.2020 ರಂದು 3:30 ಪಿ.ಎಮ್ ಗಂಟೆಗೆ ಪಿಯರ್ಾದಿ ಶ್ರೀ.ಸೈಯದ್ಸಾಬ ತಂದೆ ಅಮೀರ ಅಲಿ ಬೂದನೂರ ವ:34 ವರ್ಷ ಉ: ಪೋಟೋ ಸ್ಟೂಡಿಯೋ ಜಾ: ಮುಸ್ಲಿಂ ಸಾ: ಕಕ್ಕೇರಾ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪೂಟರ್ದಲ್ಲಿ ಟೈಪ್ ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ, ನನ್ನದೊಂದು ಪೋಟೋ ಸ್ಟೋಡಿಯೋ ಕಕ್ಕೇರಾ ಪಟ್ಟಣದ ಅಂಬೇಡ್ಕರ ವೃತ್ತದ ಹತ್ತಿರ ಜಕಾತಿ ರವರ ಕಾಂಪ್ಲೇಕ್ಸ್ ದಲ್ಲಿ ಇದ್ದು. ನನ್ನ ಸ್ಟೋಡಿಯೋದ ಹೆಸರು ಅಮಾನ ಸ್ಟೋಡಿಯೋ ಅಂತ ಇದ್ದು. ನನ್ನಂತೆ ಚಂದ್ರಹಾಸ ತಂದೆ ಮುತ್ತಣ್ಣ ಕರಿಹೊಳಿ ರವರ ವಿನಯ ಪ್ಯಾಶನ್ ಅಂತ ಹೆಸರಿನ ಬಟ್ಟೆ ಅಂಗಡಿಯು ನನ್ನ ಸ್ಟೋಡಿಯೋದ ಸಮೀಪದಲ್ಲಿಯೇ ಡಾ: ವಾಯ್ ಜಿ ಬೇವೂರ ರವರ ಕಾಂಪ್ಲೇಕ್ಸ್ ದಲ್ಲಿ ಇದ್ದು. ನಾನು ಮತ್ತು ಸಂಪತ್ತ ಕುಮಾರ ತಂದೆ ಲಾಲುನಾಯಕ ರಾಠೋಡ ರವರು ನಮ್ಮ ಸ್ಟೋಡಿಯೋದಲ್ಲಿ ಕೆಲಸ ಮಾಡುತ್ತಿದ್ದು ನಾವು ನಿನ್ನೆಯ ದಿನ ಸಾಯಂಕಾಲ 6:00 ಪಿಎಮ್ ಸುಮಾರಿಗೆ ನಮ್ಮ ಸ್ಟೋಡಿಯೋವನ್ನು ಬಂದ್ ಮಾಡಿಕೊಂಡು ಶೇಟರ್ಗೆ ಕೀಲಿ ಹಾಕಿಕೊಂಡು ಮನಗೆ ಹೋಗಿದ್ದು. ಚಂದ್ರಹಾಸ ತಂದೆ ಮುತ್ತಣ್ಣ ಕರಿಹೊಳೆ ಇವರು ತಮ್ಮ ಬಟ್ಟೆ ಅಂಗಡಿಯನ್ನು ನಿನ್ನೆ ದಿನ ರಾತ್ರಿ 8:30 ಗಂಟೆಯ ಸುಮಾರಿಗೆ ಬಂದ್ ಮಾಡಿಕೊಂಡು ಶೇಟರ್ಗೆ ಕೀಲಿ ಹಾಕಿಕೊಂಡು ಮನಗೆ ಹೋಗಿದ್ದು. ಚಂದ್ರಹಾಸ ರವರ ಬಟ್ಟೆ ಅಂಗಡಿಯಲ್ಲಿ ನಾಗರಾಜ ತಂದೆ ಲಕ್ಕಪ್ಪ ಚಿಂಚೋಡಿ ಮತ್ತು ಗಂಗಾಧರ ತಂದೆ ಪರಮಣ್ಣ ಮುರಡ್ಡಿ ರವರು ಕೆಲಸ ಮಾಡುತ್ತಿದ್ದು. ಈ ದಿವಸ ಮುಂಜಾನೆ 9:00 ಗಂಟೆಯ ಸುಮಾರಿಗೆ ನಾನು ದಿನನಿತ್ಯದಂತೆ ನಮ್ಮ ಸ್ಟೋಡಿಯೋಕ್ಕೆ ಹೋಗಿ ಸ್ಟೋಡಿಯೊದ ಶೆಟರ್ಗೆ ಹಾಕಿದ ಕೀಲಿ ತೆರೆಯಲು ಹೋದಾಗ ಶೆಟರ್ ಕೀಲಿ ಮುರಿದಿದ್ದು ಕಂಡು ಬಂದಿದ್ದು. ಶೆಟರ್ ಎತ್ತಿ ಒಳಗೆ ಹೋಗಿ ನೋಡಲಾಗಿ ನನ್ನ ಸ್ಟೂಡಿಯೋದಲ್ಲಿಯ 1) ಒಂದು ನಿಕಾನ್ ಕಂಪನಿಯ ಕ್ಯಾಮರ ಅ:ಕಿ:37,000/- 2) ಒಂದು ನಿಕಾನ್ ಕಂಪನಿಯ ಕ್ಯಾಮರ ಅ:ಕಿ:27,000/- 3) ಒಂದು ಸೋನಿ ಸೈಬರ್ ಸೂಟ್ ಕಂಪನಿಯ ಕ್ಯಾಮರ ಅ:ಕಿ:34,000/- 4) ಒಂದು ಕೋಡಕ್ ಕಂಪನಿ ಕ್ಯಾಮರ ಅ:ಕಿ:23,000/- ರೂ 5) ಎರಡು ಸಿಪೆಂಕ್ಸ್ ಕಂಪನಿಯ ಪ್ಲ್ಯಾಸುಗಳು ಅ:ಕಿ 6,000/- ರೂ ಹೀಗೆೆ ಒಟ್ಟು 1,27,000/- ರೂ ಆಗುತ್ತಿದ್ದು. ಇವುಗಳನ್ನು ನಿನ್ನೆ ದಿನಾಂಕ:29.02.2020 ರಂದು ರಾತ್ರಿ 10:00 ಪಿಮ್ ದಿಂದ ಇಂದು ದಿನಾಂಕ: 01.03.2020 ರ ಬೆಳಗಿನ 6:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರೋ ನಮ್ಮ ಸ್ಟೂಡಿಯೋದ ಶೆಟರಿಗೆ ಹಾಕಿದ ಕೀಲಿಯನ್ನು ಮುರಿದು ಒಳಗೆ ಹೋಗಿ ಕಳ್ಳತನ ಮಾಡಿಕೊಂಡು ಹೋಗಿದ್ದು. ನಾನು ನನ್ನ ಸ್ಟೋಡಿಯೋದಲ್ಲಿ ಇರುವಾಗಲೇ ನಮ್ಮ ಸ್ಟೋಡಿಯೋದ ಸಮೀಪದಲ್ಲಿರುವ ಚಂದ್ರಹಾಸ ತಂದೆ ಮುತ್ತಣ್ಣ ಕರಿಹೊಳೆ ರವರ ವಿನಯ ಪ್ಯಾಶನ್ ಬಟ್ಟೆ ಅಂಗಡಿಯನ್ನು ಕಳ್ಳರು ಕಳುವು ಮಾಡಿರುತ್ತಾರೆ ಅಂತ ಸುದ್ದಿ ಗೊತ್ತಾಗಿ ನಾನು ಅಲ್ಲಿಗೆ ಹೋಗಿ ನೋಡಲಾಗಿ ಅಂಗಡಿಯಲ್ಲಿ ಚಂದ್ರಹಾಸ ರವರು ಇದ್ದು. ನೋಡಲಾಗಿ ಅವರ ಬಟ್ಟೆ ಅಂಗಡಿಯ ಶೆಟ್ಟರಿಗೆ ಹಾಕಿದ ಕೀಲಿಯನ್ನು ಮುರಿದಿದ್ದು ಕಂಡು ಬಂದಿದ್ದು ನಾನು ಚಂದ್ರಹಾಸ ರವರಿಗೆ ವಿಚಾರಿಸಲಾಗಿ ನಾನು ಈ ದಿವಸ ಮುಂಜಾನೆ 9:00 ಗಂಟೆಗೆ ಅಂಗಡಿಗೆ ಬಂದು ಶೆಟರ್ಗೆ ಹಾಕಿದ ಕೀಲಿ ತೆರೆಯಲು ಹೋದಾಗ ಕೀಲಿಯನ್ನು ಯಾರೋ ಕಳ್ಳರು ಮುರಿದು ಅಂಗಡಿಯೊಳಗೆ ಹೋಗಿ ನನ್ನ ಅಂಗಡಿಯಲ್ಲಿಯ 1) 150 ಎಸ್,ಎಮ್, ಎಲ್, ಎಕ್ಸ್ಎಲ್ ಸೈಜಿನ ರೆಡಿಮೆಂಟೆ ಶೆರ್ಟಗಳು ಅ:ಕಿ: 45,000/- ರೂ 2) 60 ರೆಡಿಮೆಂಟ್ ಜೀನ್ಸ್ ಪ್ಯಾಂಟ್ಗಳು 30, 32 ಸೈಜಿನ ಅ:ಕಿ:30,000/- ರೂ 3) 20 ಬ್ರಾಂಡೇಡ್ ಜೀನ್ಸ್ ಪ್ಯಾಂಟೆ ಗಳು 32 ಸೈಜಿನ ನವು ಅ:ಕಿ: 17,000/- ರೂ 4) 30 ಬ್ರಾಂಡೇಡ್ ಶೆರ್ಟಗಳು ಅ:ಕಿ:12,000/- ರೂ 5) ಗಲ್ಲ್ಲಾಪೆಟ್ಟಿದಲ್ಲಿಯ ನಗದು ಹಣ 2,000/- ರೂ ಹೀಗೆೆೆ ಒಟ್ಟು 1,06,000/- ರೂ ಕಿಮ್ಮತ್ತಿನ ಬಟ್ಟೆಗಳನ್ನು ಹಾಗೂ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿ ತಿಳಿಸಿದ್ದು. ನನ್ನ ಪೋಟೋ ಸ್ಟೋಡಿಯೋ ಹಾಗೂ ಚಂದ್ರಹಾಸ ಬಟ್ಟೆ ಅಂಗಡಿಯನ್ನು ಯಾರೋ ಕಳ್ಳರು ನಿನ್ನೆ ದಿನಾಂಕ:29.02.2020 ರಂದು ರಾತ್ರಿ 10:00 ಪಿಮ್ ದಿಂದ ಇಂದು ದಿನಾಂಕ: 01.03.2020 ರ ಬೆಳಗಿನ 6:00 ಗಂಟೆಯ ಮಧ್ಯದ ಅವಧಿಯಲ್ಲಿ ಶೆಟರ್ಗಳ ಕೀಲಿ ಮುರಿದು ಒಳಗೆ ಹೋಗಿ ಕಳ್ಳತನ ಮಾಡಿಕೊಂಡು ಹೋಗಿದ್ದು. ಒಟ್ಟು ನನ್ನದು ಹಾಗೂ ಚಂದ್ರಹಾಸ ರವರದ್ದು ಸೇರಿ ಹೀಗೆೆ ಒಟ್ಟು 2,33,000/- ಕಿಮ್ಮತ್ತಿನ ಕ್ಯಾಮಾರಗಳು ಹಾಗೂ ಬಟ್ಟೆ ಬರೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು. ನಾನು ಕಳುವಾದ ನನ್ನ ಕ್ಯಾಮರಗಳನ್ನು ನೋಡಿದಲ್ಲಿ ಗುರುತಿಸುತ್ತೇನೆ ಕಳುಮಾಡಿಕೊಂಡ ಹೋದ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:24/2020 ಕಲಂ:457, 380 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರ ಪೊಲೀಸ ಠಾಣೆ ಗುನ್ನೆ ನಂ:- 25/2020 ಕಲಂ 379, 109 ಐಪಿಸಿ:- ದಿನಾಂಕ 29-02-2020 ರಂದು ಬೆಳಿಗ್ಗೆ 6-00 ಗಂಟೆಗೆ 5 ಜನ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾಧಿ ಹೊಲದಲ್ಲಿ ಹೋಗಿ ಹೊಲದಲ್ಲಿ ಇದ್ದ 5 ಟ್ರ್ಯಾಕ್ಟರ ಜೋಳದ ಸ್ವಪ್ಪೆ ಅ.ಕಿ. 25,000/ರೂ ನೆದ್ದನ್ನು ಕಳವು ಮಾಡಿಕೊಂಡು ಹೋಗಿದ್ದು, ಏಳು ಜನ ಆರೋಪಿತರು ಕಳವು ಮಾಡುವದಕ್ಕೆ ಪ್ರಚೋದನೆ ನೀಡಿರುತ್ತಾರೆ, ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 33/2020 ಕಲಂ 323, 324, 504, 506 ಸಂಗಡ 34 ಐಪಿಸಿ:-ದಿನಾಂಕ 29.02.2020 ರಂದು ಬೆಳಿಗ್ಗೆ 11:00 ಗಂಟೆಗೆ ಆರೋಪಿತರು ಫಿರ್ಯಾದಿಗೆ ಸೇರಿದ ಜಾಗವನ್ನು ಫಿರ್ಯಾದಿಯ ಭಾವನಾದ ನಾಣ್ಯನಾಯಕ ಈತನಿಂದ ಖರೀದಿ ಮಾಡಿದ್ದು ಅದನ್ನು ಫಿರ್ಯಾದಿಯು ತನ್ನ ದೊಡ್ಡಿಯಿಂದ ಬೇರೆಕಡೆಗೆ ಕೊಡುವುದಾಗಿ ಹೇಳಿದರು ಸಹ ಕೇಳದೇ ಫಿರ್ಯಾದಿಗೆ ಸೇರಿದ ದೊಡ್ಡಿಗೆ ಹೊಂದಿಕೊಂಡು ತಾನು ಜಾಗ ತಗೊಂಡಿದ್ದಾಗಿ ಹೇಳಿ ಕಲ್ಲು ಹಾಕುತ್ತಿದ್ದಾಗ ಅದನ್ನು ತಡೆದಿದ್ದಕ್ಕೆ ಆರೋಪಿತರು ಸೇರಿ ಅವಾಚ್ಯವಾಗಿ ಬೈದು ಫಿರ್ಯಾದಿಯ ಕಾಲ ಮೇಲೆ ಕಲ್ಲು ಎತ್ತಿ ಹಾಕಿ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಮನೆಯಲ್ಲಿ ವಿಚಾರಿಸಿದ ನಂತರ ತಡವಾಗಿ ಇಂದು ದಿನಾಂಕ 01.03.2020 ರಂದು ಖುದ್ದಾಗಿ ಠಾಣೆಗೆ ಬಂದು ನೀಡಿದ ಫಿರ್ಯಾದಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 33/2020 ಕಲಂ 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಗುರಮಿಠಕಲ ಪೊಲೀಸ ಠಾಣೆ ಗುನ್ನೆ ನಂ:- 34/2020 ಕಲಂ: 87 ಕೆ.ಪಿ. ಆಕ್ಟ್:- ದಿನಾಂಕ 01.03.2020 ರಂದು ಸಂಜೆ 04:00 ಗಂಟೆಗೆ ಸುಮಾರಿಗೆ ಈ ಮೇಲ್ಕಂಡ ಆರೋಪಿತರು ಗುರುಮಠಕಲ್ ಪಟ್ಟಣದ ಕಾಳೀಕಾದೇವಿ ವೂಡ್ ವರ್ಕ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳೀ ಮಾಡಿದಾಗ 02 ಆರೋಪಿತರು ಸಿಕ್ಕಿಬಿದ್ದಿದ್ದು 02 ಜನ ಆರೋಪಿತರು ಓಡಿ ಹೋದರು. ಸಿಕ್ಕಬಿದ್ದ ಆರೋಪಿತರನ್ನು ಹಿಡಿದು ಅವರ ವಶದಲ್ಲಿದ್ದ 1500/- ಮತ್ತು 52 ಇಸ್ಪೀಟ್ ಎಲೆಗಳನ್ನು ಸೇರಿ ಒಟ್ಟು 1500/- ರೂ ಬೆಲೆಯ ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ: 34/2020 ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 05/2020 ಕಲಂ. 110 (ಇ) &(ಜಿ) ಸಿ.ಆರ್.ಪಿ.ಸಿ:- ಇಂದು ದಿನಾಂಕ 01.03.2020 ರಂದು ಬೆಳಿಗ್ಗೆ 11.30 ಪಿ.ಎಂ ಕ್ಕೆ ಗುರುಮಠಕಲ ಪಟ್ಟಣದ ನಗರೇಶ್ವರ ದೇವಸ್ಥಾನದ ಹತ್ತಿರ ಒಬ್ಬ ವ್ಯಕ್ತಿಯು ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಜೋರಾದ ದ್ವನಿಯಲ್ಲಿ ಕೂಗಾಡುತ್ತ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈಉತ್ತ ಸಾರ್ವಜನಿಕರಿಗೆ ತೊಂದರೆ ಕೊಡುತ್ತ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುವ ರೀತಿಯಲ್ಲಿ ವತರ್ಿಸುತ್ತಿದ್ದರಿಂದ ಪಿರ್ಯಧಿಯು ಸದರಿಯವನಿಗೆ ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ಮೇಲೆ ಮುಂಜಾಗೃತ ಕ್ರಮ ಕುರಿತು ಕಲಂ 110 (ಇ) &(ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 64/2019 ಕಲಂ 32, 34 ಕೆ.ಇ ಆಕ್ಟ:- ಇಂದು ದಿನಾಂಕ 01/03/2020 ರಂದು 20-00ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರಡ್ಡೆಪ್ಪ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರು ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ವರದಿ ಹಾಜರ ಪಡಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 01/03/2020 ರಂದು 17-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಸತ್ಕಾರ ದಾಬಾದಲ್ಲಿ ಪರಮೇಶ್ವರ ತಂದೆ ಭೀಮಾಶಂಕರ ಘನಮುಖಿ ಸಾ|| ಶಹಾಪೂರ ಈತನು ಅಕ್ರಮವಾಗಿ ಲೈಸೇನ್ಸ್ ಹೊಂದದೆ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತಿದ್ದಾನೆ ಅಂತ ನನಗೆ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಬಾಬು ಹೆಚ್.ಸಿ 162 ಶರಣಪ್ಪ ಹೆಚ್,ಸಿ,164, ಭೀಮನಗೌಡ.ಪಿ.402. ಹಾಗೂ ಜೀಪ್ ಚಾಲಕ ನಾಗರೆಡ್ಡಿ ಎ.ಪಿ.ಸಿ 161 ರವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ ಬಾಬು ಹೆಚ್,ಸಿ, 162 ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 29 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 50 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 17-15 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮಿ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.
ಮಾನ್ಯ ಎಸ್,ಪಿ, ಸಾಹೇಬರು ಯಾದಗಿರಿ, ಮತ್ತು ಪಿ,ಐ, ಡಿ,ಸಿ,ಐ,ಬಿ, ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಸತ್ಕಾರ ದಾಬಾದ ಮೇಲೆ ದಾಳಿ ಮಾಡಲು ನಾನು ಮತ್ತು ಪಂಚರು ಠಾಣೆಯ ಸಿಬ್ಬಂದಿಯವರು ಎಲ್ಲರು ಕೂಡಿ ಠಾಣೆಯ ಜೀಪ ನಂ ಕೆಎ-33ಜಿ-0138 ನೇದ್ದರಲ್ಲಿ ಕುಳಿತುಕೊಂಡು 17-25 ಗಂಟೆಗೆ ಠಾಣೆಯಿಂದ ಹೋರಟೆವು. ಸದರಿ ಜೀಪನ್ನು ನಾಗರೆಡ್ಡಿ ಎ,ಪಿ,ಸಿ,161 ರವರು ಚಲಾಯಿಸುತ್ತ ನೇರವಾಗಿ 17-40 ಗಂಟೆಗೆ ಶಹಾಪೂರದ ಸತ್ಕಾರ ದಾಬಾದ ಹತ್ತಿರ ಹೋಗಿ ಜೀಪನಿಲ್ಲಿಸಿ ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ದಾಬಾದ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯಕ್ತಿ ದಾಬಾದಲ್ಲಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ ಮದ್ಯದ ಪಾಕೇಟಗಳನ್ನು ಮತ್ತು ಬಾಟಲ್ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತಿದ್ದನು. ಸದರಿ ವ್ಯಕ್ತಿ ಮದ್ಯದ ಪಾಕೇಟಗಳು, ಬಾಟಲ್ಗಳು ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಪಡಿಸಿಕೊಂಡು, ಪಂಚರ ಸಮಕ್ಷಮದಲ್ಲಿ ಸದರಿಯವನ ಮೇಲೆ 17-50 ಗಂಟೆಗೆ ದಾಳಿ ಮಾಡಿದಾಗ ಸದರಿ ವ್ಯಕ್ತಿಯು ಓಡಿ ಹೋಗಿದ್ದು ಹಿಂಬಾಲಿಸಿದರು ಸಿಕ್ಕಿರುವುದಿಲ್ಲ. ಓಡಿಹೋಗುವಾಗ ಲೈಟಿನ ಬೆಳಕಿನಲ್ಲಿ ಅವನ ಮುಖ ನೋಡಿದ್ದು ಪುನ:ಹ ನೋಡಿದಲ್ಲಿ ಗುರುತ್ತಿಸುತ್ತೆನೆ, ನಂತರ ಸದರಿ ದಾಬಾದಲ್ಲಿ ನಾನು ಪಂಚರ ಸಮಕ್ಷಮದಲ್ಲಿ ಪರೀಶಿಲಿಸಿ ನೋಡಲಾಗಿ ಒಂದು ಬಿಳಿ ಪ್ಲಾಸ್ಟೀಕ ಚೀಲವಿದ್ದು ಅದರಲ್ಲಿ ಮದ್ಯದ ಪಾಕೇಟಗಳು, ಬಾಲ್ಗಳು ಇದ್ದು. ಪರಿಶೀಲಿಸಿನೋಡಲಾಗಿ
1] 90 ಎಮ್.ಎಲ್.ನ್ 70 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದು, ಒಂದು 90 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 30 ರೂಪಾಯಿ 32 ಪೈಸೆ ಇರುತ್ತದೆ. ಒಟ್ಟು 70 ಮದ್ಯದ ಪಾಕೇಟಿನ ಕಿಮ್ಮತ್ತ 2122./- ರೂಪಾಯಿ 4 ಪೈಸೆ ಆಗುತ್ತದೆ.
2] 180 ಎಮ್.ಎಲ್.ನ್ 24 ಮ್ಯಾಕಡೊವೆಲ್ಸ ಡಿಲಕ್ಸ ಎಕ್ಸ.ಎಕ್ಸ.ಎಕ್ಸ. ರಮ್ ಪಾಕೇಟ್ ಇದ್ದು, ಒಂದು 180 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 90 ರೂಪಾಯಿ 21 ಪೈಸೆ ಇರುತ್ತದೆ. ಒಟ್ಟು 24 ಮದ್ಯದ ಪಾಕೇಟಿನ ಕಿಮ್ಮತ್ತ 2165/- ರೂಪಾಯಿ 4 ಪೈಸೆ ಆಗುತ್ತದೆ.
3] 180 ಎಮ್.ಎಲ್.ನ್ 48 ಬೆಂಗಳೂರ ಮಾಲ್ಟ ವಿಸ್ಕಿ ಪಾಕೇಟ್ ಇದ್ದು, ಒಂದು 180 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 47 ರೂಪಾಯಿ 75 ಪೈಸೆ ಇರುತ್ತದೆ. ಒಟ್ಟು 48 ಮದ್ಯದ ಪಾಕೇಟಿನ ಕಿಮ್ಮತ್ತ 2292./- ರೂಪಾಯಿ ಆಗುತ್ತದೆ.
4] 180 ಎಮ್.ಎಲ್.ನ್ 24 ಬೆಂಗಳೂರ ರಮ್ ಪಾಕೇಟ್ ಇದ್ದು, ಒಂದು 180 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 47 ರೂಪಾಯಿ 75 ಪೈಸೆ ಇರುತ್ತದೆ. ಒಟ್ಟು 24 ಮದ್ಯದ ಪಾಕೇಟಿನ ಕಿಮ್ಮತ್ತ 1146./- ರೂಪಾಯಿ ಆಗುತ್ತದೆ.
5] 180 ಎಮ್.ಎಲ್.ನ್ 48 ಓಲ್ಡ ಟವರಿನ ವಿಸ್ಕಿ ಪಾಕೇಟ್ ಇದ್ದು, ಒಂದು 180 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 74 ರೂಪಾಯಿ 13 ಪೈಸೆ ಇರುತ್ತದೆ. ಒಟ್ಟು 48 ಮದ್ಯದ ಪಾಕೇಟಿನ ಕಿಮ್ಮತ್ತ 3558/- ರೂಪಾಯಿ 24 ಪೈಸೆ ಆಗುತ್ತದೆ.
6] 650 ಎಮ್.ಎಲ್.ನ್ 12 ಕಿಂಗ್ಪೀಷರ್ ಸ್ರಾಂಗ್ ಬಿಯರ ಬಾಟಲ್ ಇದ್ದು, ಒಂದು 650 ಎಮ್.ಎಲ್ ನ ಮದ್ಯದ ಬಾಟಲನ ಕಿಮ್ಮತ್ತ 145 ರೂಪಾಯಿ ಇರುತ್ತದೆ. ಒಟ್ಟು 12 ಬಿಯರ ಬಾಟಲ್ ಕಿಮ್ಮತ್ತ 1740/- ರೂಪಾಯಿ ಆಗುತ್ತದೆ. 1 ರಿಂದ 6 ರವರೆಗೆ ಒಟ್ಟು 13024 ರೂಪಾಯಿ 4 ಪೈಸೆ ಆಗುತ್ತದೆ. ಮತ್ತು ಸದರಿಯವನು ಮದ್ಯ ಮಾರಾಟ ಮಾಡಿದ ಹಣ 4500 ರೂಪಾಯಿಗಳು ಸ್ಥಳದಲ್ಲಿ ಬಿದ್ದಿದ್ದವುಗಳನ್ನು ವಶಪಡಿಸಿಕೊಂಡಿದ್ದು ಒಂದು ಬಿಳಿ ಪ್ಲಾಸ್ಟೀಕ ಚೀಲದ ಅ:ಕಿ: 00=00 ನೇದ್ದು, ಸದರಿ ವ್ಯಕ್ತಿಯು ಮದ್ಯ ಮಾರಾಟ ಪರವಾನಿಗೆ ಪತ್ರ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿಟ್ಟು ಮಾರಾಟ ಮಾಡುತಿದ್ದ ಬಗ್ಗೆ ದೃಡಪಟ್ಟಿರುತ್ತದೆ. ಕ್ರ.ಸಂಖ್ಯೆ 1 ರಿಂದ 6 ರವರೆಗೆ ವಶಪಡಿಸಿಕೊಂಡ ಮದ್ಯವನ್ನು ಜಪ್ತಿಮಾಡಿಕೊಂಡಿದ್ದರಲ್ಲಿ ಮಾದರಿಗಾಗಿ ಒಂದೊಂದು ಪಾಕೇಟ ಮತ್ತು ಬಾಟಲವನ್ನು ತಜ್ಞರ ಪರೀಕ್ಷೆಗಾಗಿ ಕಳುಹಿಸುವ ಸಲುವಾಗಿ ಬಿಳಿ ಬಟ್ಟೆಯ ಪ್ರತ್ಯೆಖ ಚೀಲದಲ್ಲಿ ಒಂದೊಂದು ಹಾಕಿ ಅದರ ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ ಮಾದರಿ ಶಿಲ್ ಹಾಕಿ ಪಂಚರು ಸಹಿನಿಸಿದ ಚೀಟಿಗಳು ಅಂಟಿಸಿ ಮುಂದಿನ ತನಿಖೆಗಾಗಿ ತಾಬೆಗೆ ತೆಗೆದುಕೊಂಡೆನು, ಉಳಿದ ಮುದ್ದೆ ಮಾಲನ್ನು 18-00 ಗಂಟೆಯಿಂದ 19-00 ಪಿ.ಎಂ. ವರೆಗೆ ಜಪ್ತಿ ಪಂಚನಾಮೆಯನ್ನು ದಾಬಾದ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆಯನ್ನು ಮಾಡಿ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲಿನೊಂದಿಗೆೆ ಮರಳಿ ಠಾಣೆಗೆ 19-30 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಓಡಿ ಹೋದ ಆರೋಪಿ ಪರಮೇಶ್ವರನ ವಿರುದ್ಧ ವರದಿಯನ್ನು ತಯಾರಿಸಿ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 20-00 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 64/2019 ಕಲಂ 32, 34 ಕೆ.ಇ. ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 23/2020 ಕಲಂ 279 337 338 ಐಪಿಸಿ & 187 ಐಎಂವಿ ಕಾಯ್ದೆ:- ದಿನಾಂಕ:01/03/2020 ರಂದು ಹುಣಸಗಿ ಸರಕಾರಿ ದವಾಖಾನೆಯಿಂದಾ 13.00 ಗಂಟೆಗೆ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರಗೆ ಬೇಟಿ ಕೊಟ್ಟು ಗಾಯಳುದಾರರಿಗೆ ವಿಚಾರಿಸಲು ದೇವರಾಜ ತಂದೆ ಮಾನಪ್ಪ ಗೋಡಿಹಾಳಕರ್ ಸಾ:ಕನ್ನಳ್ಳಿ ಇವರು ಹೇಳಿಕೆ ಕೊಟ್ಟಿದ್ದು ಏನೆಂದರೆ, ನಾನು ಮತ್ತು ನನ್ನ ಗೆಳೆಯನಾದ ಗೋಪಿಕೃಷ್ಣ ಸಮೇದ ಇಬ್ಬರೂ ಕೂಡಿ ನನ್ನ ಮೋಟಾರ್ ಸೈಕಲ್ ನಂ. ಕೆಎ-33 ಎಕ್ಸ್-9722 ನೇದ್ದರ ಮೇಲೆ ಹುಣಸಗಿಯಿಂದಾ ಕನ್ನಳಿಗೆ ದೇವಾಪುರ ರೋಡಿನ ಮೇಲೆ ಹೊರಟಾಗ ಎಲ್&ಟಿ ಶೋರುಂ ಹತ್ತಿರ ನಮ್ಮ ಮುಂದೆ ಮುಂದೆ ಹೊರಟ ಬೋಲೆರೋ ಜೀಪ್ ನಂ. ಕೆಎ-33 ಎಂ-6067 ನೇದ್ದರ ಚಾಲಕನು ಒಮ್ಮೇಲೆ ತನ್ನ ಜೀಪನ್ನು ರೋಡಿನ ಬಲಕ್ಕೆ ನಿರ್ಲಕ್ಷತನದಿಂದಾ ತಿರುಗಿಸಿ ನಮ್ಮ ಮೋಟಾರ್ ಸೈಕಲಗೆ ಡಿಕ್ಕಿಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ನನಗೆ ಹಾಗೂ ಗೋಪಿಕೃಷ್ಣನಿಗೆ ಇಬ್ಬರಿಗೂ ಭಾರಿ ಮತ್ತು ಸಾಧಾಗಾಯವಾಗಿದ್ದು ಇರುತ್ತದೆ ಅಂತಾ ಇತ್ಯಾದಿ ಹೇಳಿಕೆ ದೂರು ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 24/2020 143 147 323 355 504 506 ಸಂ. 149 ಐಪಿಸಿ:- ಇಂದು ದಿನಾಂಕ:01/03/2020 ರಂದು 15.40 ಗಂಟೆಗೆ ಯಲ್ಲಪ್ಪ ತಂದೆ ಶಿವಪ್ಪ ಕಡದರಗಡ್ಡಿ ವಯ:48 ವರ್ಷ ಉ:ಕೂಲಿಕೆಲಸ ಸಾ:ಗೆದ್ದಲಮರಿ ತಾ:ಹುಣಸಗಿ ಜಿ:ಯಾದಗಿರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಬರೆಯಿಸಿದ ಅಜರ್ಿ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:29/02/2020 ರಂದು ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ಪಿಯರ್ಾದಿ ಹುಣಸಗಿ ಉಡಪಿ ಗಣೇಶ ಹೊಟೇಲದಲ್ಲಿ ಚಹಾ ಕುಡಿಯುವಾಗ ಆರೋಪಿತರು ಅಕ್ರಮಕೂಟ ಕಟ್ಟಿಕೊಂಡು ಬಂದು ಏಕಾಏಕಿ ಪಿಯರ್ಾದಿಗೆ ಚಪ್ಪಲಿಯಿಂದಾ ಕೈಯಿಂದಾ ಮನಬಂದಂತೆ ಹೊಡೆದು ಮಲ್ಲಪ್ಪ ದೈಹಿಕ ಶಿಕ್ಷಕರು ಯಲ್ಲೇನಗೆ ಹೊಡೆದು ಸಾಯಿಸಿ ಬಿಡರಿ ಎಂದು ದೋತಿಯನ್ನು ಕೊರಳಿಗೆ ಹಾಕಿ ಜಗ್ಗಿ ಹಿಡಿದು ಕೈಯಿಂದಾ ಹೊಡೆಯುತ್ತಿದ್ದಾಗ ಪಿಯರ್ಾದಿ ಸಂಗಡ ಇದ್ದವರು ಬಿಡಿಸಿ ಮಲ್ಲಪ್ಪ ದೈಹಿಕ ಶಿಕ್ಷಕರಿಗೆ ಬುದ್ದಿ ಮಾತು ಹೇಳುವಾಗ ಈ ಯಲ್ಲೇನೆಗೆ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 44/2020 ಕಲಂ: 279,337,338 ಐ.ಪಿ.ಸಿ :- ಇಂದು ದಿನಾಂಕ 01/03/2020 ರಂದು 6.45 ಪಿಎಮ್ಕ್ಕೆ ಪಿರ್ಯಾದಿ ಅಜರ್ಿದಾರರಾದ ಶ್ರೀ ಬಾಗಪ್ಪ ತಂದೆ ಹಣಮಪ್ಪ ಬಡಿಗೇರ ವ|| 65 ಜಾ|| ಹರಿಜನ ಉ|| ಕೂಲಿಕೆಲಸ ಸಾ|| ಯಕ್ತಾಪೂರ ತಾ|| ಸುರಪೂರ ಆದ ನಾನು ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ಇಂದು ದಿನಾಂಕ 01/03/2020 ರಂದು ಬೆಳಿಗ್ಗೆ 10 ಗಂಟೆಗೆ ನಾನು ಹತ್ತಿ ಮಾರಿ ಬಂದರಾಯಿತು ಅಂತ ಮುದನೂರದ ಶರಣಗೌಡ ತಂದೆ ನಿಂಗಣಗೌಡ ನಗನೂರ ಇವರು ನಡೆಸುವ ಇವರದೇ ಆದ ಕೆಎ-33 ಬಿ-0572 ನೇದ್ದರ ಮಹಿಂದ್ರಾ ಗೂಡ್ಸ ವಾಹನದಲ್ಲಿ ಹತ್ತಿ ಹಾಕಿಕೊಂಡು ತಾಳಿಕೋಟಿಗೆ ಹೋಗಿದ್ದು ನನ್ನಂತೆ ಕರಡಕಲ ಗ್ರಾಮದ ಪ್ರಭುಗೌಡ ತಂದೆ ಭೀಮಣಗೌಡ ಕಚಕನೂರ ಇವರು ಸಹ ಹತ್ತಿ ತೆಗೆದುಕೊಂಡು ಬಂದಿದ್ದು ಇಬ್ಬರೂ ಕೂಡಿ ತಾಳಿಕೋಟಿಗೆ ಹೋಗಿ ಹತ್ತಿ ಮಾರಾಟ ಮಾಡಿದ್ದು ನಂತರ ಪ್ರಭುಗೌಡ ಇವರು ತಮ್ಮ ಅಂಗಡಿಗೆ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡಿದ್ದು ಸದರಿ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಸದರ ಗೂಡ್ಸ ವಾಹನದಲ್ಲಿ ಹಾಕಿಕೊಂಡು ಮರಳಿ ಊರಿಗೆ ಬರುವ ಕುರಿತು ಸದರ ವಾಹನದಲ್ಲಿ ಮಾಲು ಹಾಕಿಕೊಂಡು ಬರುತ್ತಿದ್ದಾಗ ಅಂದಾಜು 01-30 ಪಿಎಮ್ ಸುಮಾರಿಗೆ ಕಾಚಾಪೂರ ಕ್ರಾಸ ಹತ್ತಿರ ನಾವು ಕುಳಿತ ಗೂಡ್ಸ ವಾಹನ ನಂಬರ ಕೆಎ-33 ಬಿ-0572 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಒಮ್ಮಲೇ ಸದರ ವಾಹನದ ಮುಂದಿನ ಟೈರ ಬ್ಲಾಸ್ಟ ಆಗಿ ನಾವು ಕುಳಿತ ಗೂಡ್ಸ ವಾಹನ ರೋಡಿನ ತಗ್ಗಿನಲ್ಲಿ ಬಿದ್ದಿದ್ದು ಸದರ ಅಪಘಾತದಲ್ಲಿ ನನಗೆ ಗುಪ್ತಗಾಯಗಳಾಗಿದ್ದು ಆದರೆ ನನ್ನೊಂದಿಗೆ ಇದ್ದ ಪ್ರಭುಗೌಡ ಇವರಿಗೆ ಕಾಲಿಗೆ , ಕೈಗೆ ಹಾಗು ಮೈಗೆ ಗುಪ್ತಗಾಯವಾಗಿದ್ದು ಆದರೆ ಬಲಗಾಲ ತೊಡೆಯಲ್ಲಿ ಭಾರೀ ಗುಪ್ತಗಾಯವಾಗಿ ಕಾಲು ಮುರಿದಂತಾಗಿದ್ದು ಇರುತ್ತದೆ. ಮತ್ತು ನಮ್ಮ ವಾಹನದ ಚಾಲಕ ಶರಣಗೌಡ ತಂದೆ ನಿಂಗಣಗೌಡ ನಗನೂರ ಸಾ|| ಮುದನೂರ ಈತನಿಗೂ ಸಹ ತರಚಿದ ರಕ್ತಗಾಯ ಹಾಗು ಭಾರೀ ಗುಪ್ತಗಾಯಗಳಾಗಿದ್ದು ಇರುತ್ತದೆ. ನಂತರ ನಾನು ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡಿದ್ದು ಆದರೆ ಪ್ರಭುಗೌಡ ಈತನು ಉಪಚಾರ ಕುರಿತು ಮಾತೋಶ್ರೀ ಆಸ್ಪತ್ರೆ ವಿಜಯಪುರಕ್ಕೆ ಹೋಗಿದ್ದು ಮತ್ತು ಚಾಲಕನಾದ ಶರಣಗೌಡ ಈತನು ಉಪಚಾರ ಕುರಿತು ಬಿ ಎಮ್ ಆಸ್ಪತ್ರೆ ವಿಜಯಪುರಕ್ಕೆ ಹೋಗಿದ್ದು ಇರುತ್ತದೆ. ಅಂತ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 44/2020 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 61/2020 ಕಲಂ 87 ಕೆ.ಪಿ. ಕಾಯ್ದೆ :- ಇಂದು ದಿನಾಂಕ: 01/03/2020 ರಂದು 5-10 ಪಿ.ಎಮ್. ಕ್ಕೆ ಶ್ರೀ ಶರಣಪ್ಪ ಹವಾಲ್ದಾರ ಪಿ.ಎಸ್.ಐ (ಅ.ವಿ) ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 3 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ನೀಡಿದ್ದು, ಸಾರಾಂಶವೆನೆಂದರೆಇಂದು ದಿನಾಂಕ:01-03-2020 ರಂದು 2-30 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಲಕ್ಷ್ಮಿಪೂರ ಹಳ್ಳದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ ಹೆಚ್ಸಿ-105 3) ಶ್ರೀ ವಿರೇಶ ಸಿಪಿಸಿ-374 4) ಶ್ರೀ ಸುಭಾಸ ಸಿಪಿಸಿ-174 5) ಶ್ರೀ ಶರಣಪ್ಪ ಸಿಪಿಸಿ-224 6) ಶ್ರೀ ಬಸವರಾಜ ಸಿಪಿಸಿ-395 7) ಶ್ರೀ ರವಿಕುಮಾರ ಸಿಪಿಸಿ-376 8) ಶ್ರೀ ಮಾನಯ್ಯಾ ಸಿಪಿಸಿ-372 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಹಣಮಗೌಡ ತಂದೆ ಚಂದಪ್ಪಗೌಡ ಮಾಲೀ ಪಾಟೀಲ ವಯಾ:50 ವರ್ಷ ಉ:ಕೂಲಿ ಜಾತಿ:ಬೇಡರ ಸಾ: ಲಕ್ಷ್ಮಿಪೂರ ತಾ:ಸುರಪೂರ 2) ಶ್ರೀ ಯಂಕಪ್ಪ ತಂದೆ ಹಣಮಂತ ಗಾಳಿ ವಯಾ:50 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಲಕ್ಷ್ಮಿಫುರ ಇವರನ್ನು 02-45 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3 ಪಿ.ಎಮ್ ಕ್ಕೆ ಠಾಣೆಯ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಹೊರಟು 03-30 ಪಿ.ಎಮ್ ಕ್ಕೆ ಲಕ್ಷ್ಮಿಪೂರ ಹಳ್ಳದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹಳ್ಳದ ಪಕ್ಕದಲ್ಲಿರುವ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 03-35 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಮೂರು ಸಿಕ್ಕಿದ್ದು ಅವರು ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಬೀಮಣ್ಣ ತಂದೆ ಹಣಮಂತ ಜಾಲಳ್ಳಿ ವಯಾ:42 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಲಕ್ಷ್ಮಿಪೂರ ತಾ:ಸುರಪೂರ ಇವನ ಹತ್ತಿರ 480=00 ರೂಗಳು ದೊರೆತವು 2) ಯಲ್ಲಪ್ಪ ತಂದೆ ದ್ಯಾವಪ್ಪ ಹಳಿಸಗರ ವಯಾ:45 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಲಕ್ಷ್ಮಿಪೂರ ಇವನ ಹತ್ತಿರ 360=00 ರೂಗಳು ದೊರೆತವು 3) ರಾಚಯ್ಯಾ ತಂದೆ ಚನ್ನಬಸಯ್ಯಾ ಸ್ವಾಮಿ ವಯಾ:35 ವರ್ಷ ಉ:ಕೂಲಿ ಜಾತಿ:ಲಿಂಗಾಯತ ಸಾ:ಲಕ್ಷ್ಮಿಪೂರ ಇವನ ಹತ್ತಿರ 460=00 ರೂಗಳು ದೊರೆತವು ಇದಲ್ಲದೆ ಪಣಕ್ಕೆ ಇಟ್ಟ ಹಣ 300/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 1600/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 03:40 ಪಿ.ಎಮ್.ದಿಂದ 04-40 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ ಮೂರು ಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಮೂರು ಜನ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
Hello There!If you like this article Share with your friend using