ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/02/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 20/2020 ಕಲಂ;419,420,465,468,471 ಐಪಿಸಿ:- ಇಂದು ದಿನಾಂಕ; 14/02/2020 ರಂದು 6-30 ಪಿಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀ ವರದೇಂದ್ರ ತಂದೆ ಹಣಮಂತಚಾರ್ ವೈಕರ್ ವಃ 62 ಜಾಃ ಬ್ರಾಹ್ಮಣ ಉಃ ನಿವೃತ್ತ ಎ.ಬಿ.ಎಲ್. ಖಾಕರ್ಾನೆ ಆಫೀಸ್ ಅಸಿಸ್ಟಂಟ ನೌಕರ ಸಾ; ಆನೂರು(ಕೆ) ತಾಃ ಯಾದಗಿರಿ ಹಾಃವಃ ಶ್ರೀನಿವಾಸ ಪ್ಲಾಟ ನಂ.5 ಗಣೇಶ ನಗರ ಪಿ & ಟಿ ಕ್ವಾಟ್ರಸ ಎದುರುಗಡೆ ಮನೆ ನಂ.1-892/72/5 ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ತಂದೆಯವರಾದ ಹಣಮಂತಚಾರ್ ತಂದೆ ಶ್ರೀನಿವಾಸಚಾರ್ ಇವರ ಹೆಸರಿನ ಮೇಲೆ ಆನೂರು(ಕೆ) ಗ್ರಾಮದಲ್ಲಿ ಜಮೀನು ಸವರ್ೆ ನಂ.31 ಒಟ್ಟು ವಿಸ್ತೀರ್ಣ 11 ಎಕರೆ 17 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನನ್ನು ಶ್ರೀ ಶಿವಪ್ಪ ತಂದೆ ಮಲ್ಲಪ್ಪ ಇವರು ನಮ್ಮ ತಂದೆಯ ಜೀವಿತ ಕಾಲದಲ್ಲಿ ಸಾಗುವಳಿ ಮಾಡುತ್ತಿದ್ದರು. ಅವರು ತೀರಿದ ನಂತರ ಅವರ ಮಗನಾದ ಬಸವರಾಜ ತಂದೆ ಶಿವಪ್ಪ ಸಾ; ಆನೂರು(ಕೆ) ಹಾ:ವ: ಬಸವನಗರ ಕಲಬುರಗಿ ಇವರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ನನ್ನ ತಂದೆಯವರು ದಿನಾಂಕ. 17/01/2004 ರಂದು ನಮ್ಮ ಕಲಬುರಗಿ ಮನೆಯಲ್ಲಿ ಮೃತಪಟ್ಟಿರುತ್ತಾರೆ. ಮರಣ ಪ್ರಮಾಣ ಪ್ರತಿಯನ್ನು (ಡೆತ್ಸಟರ್ಿಪಿಕೆಟ್) ಈ ದೂರಿನೊಂದಿಗೆ ಲಗತ್ತಿಸಿದ್ದೇನೆ. ಆದರೆ ಶ್ರೀಮತಿ ಶಾರದಾಬಾಯಿ ಗಂಡ ಶಿವಪ್ಪ ಇವರು ಬೇರೊಬ್ಬ ವ್ಯಕ್ತಿಯನ್ನು ನಿಲ್ಲಿಸಿ ನೊಂದಣಿ ಅಧಿಕಾರಿಗಳ ಕಾಯರ್ಾಲಯ ಯಾದಗಿರಿಯಲ್ಲಿ ನನ್ನ ತಂದೆಯವರ ಹೆಸರಿನಲ್ಲಿದ್ದ ಸದರಿ ಸವರ್ೆ ನಂಬರ ಆಸ್ತಿಯನ್ನು ತನ್ನ ಹೆಸರಿಗೆ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಮತ್ತು ತನ್ನ ಹೆಸರಿನಲ್ಲಿ ದಿನಾಂಕ;29/03/2018 ರಂದು ನೊಂದಣಿ ಮಾಡಿಕೊಂಡಿರುತ್ತಾರೆ. ಆದ ಕಾರಣ ಸದರಿ ಶಾರದಾಬಾಯಿ ಮತ್ತು ನನ್ನ ತಂದೆಯ ಬದಲಾಗಿ ನೊಂದಣಾಧಿಕಾರಿಗಳ ಕಾಯರ್ಾಲಯ ಯಾದಗಿರಿಯಲ್ಲಿ ನಿಂತ ಬೇರೊಬ್ಬ ವ್ಯಕ್ತಿ ಮತ್ತು ಇದಕ್ಕೆ ಸಾಕ್ಷಿಯಾಗಿ ಸಹಿ ಮಾಡಿದ ಇನ್ನೀತರ ವ್ಯಕ್ತಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಂಡು ಅವರ ಮೇಲೆ ಕೇಸು ನೊಂದಣಿ ಮಾಡಿಕೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿ ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.20/2020 ಕಲಂ.419,420,465,468,471 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 12/2020 ಕಲಂ: 279,338,304(ಎ) ಐಪಿಸಿ:- ಇಂದು ದಿನಾಂಕ: 11/02/2020 ರಂದು 12-30 ಪಿಎಮ್ ಕ್ಕೆ ಶ್ರೀಮತಿ ಶರಣಮ್ಮ ಗಂಡ ಬಸ್ಸಯ್ಯ ಸ್ವಾಮಿ, ವ:45, ಜಾ:ಜಂಗಮ, ಉ:ಮನೆಕೆಲಸ ಸಾ:ಚಟಾನ ಏರಿಯಾ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನನಗೆ 1) ಮಹಾದೇವಿ, 2) ಶಿವಕುಮಾರ ಮತ್ತು 3) ವಿರೇಶ ಹೀಗೆ ಒಟ್ಟು 3 ಜನ ಮಕ್ಕಳಿರುತ್ತಾರೆ. ನಾನು ನನ್ನ ಗಂಡ-ಮಕ್ಕಳೊಂದಿಗೆ ಮನೆಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 07/02/2020 ರಂದು ಸಾಯಂಕಾಲ ನಾನು ಮನೆಯಲ್ಲಿದ್ದಾಗ ನನ್ನ ಮಗ ಶಿವಕುಮಾರ ವ:18 ವರ್ಷ ಈತನು ಹಾಲಗೇರಾ ಯಲ್ಲಮ್ಮ ಆಯಿ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ನಮ್ಮ ಮೋಟರ್ ಸೈಕಲ್ ನಂ. ಕೆಎ 33 ವೈ 4229 ನೇದ್ದರ ಮೇಲೆ ಹೋದನು. ಅವನು ರಾತ್ರಿಯಾದರು ಮನೆಗೆ ವಾಪಸ ಬರಲಿಲ್ಲ. ರಾತ್ರಿ ಅಲ್ಲಿಯೇ ಜಾತ್ರೆಯಲ್ಲಿ ಉಳಿದುಕೊಂಡಿರಬಹುದು ಎಂದು ತಿಳಿದು ಸುಮ್ಮನಾದೆವು. ಮರು ದಿವಸ ದಿನಾಂಕ: 08/02/2020 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಮ್ಮ ಮನೆ ಬಾಜುದವರಾದ ಲೋಕೇಶ ತಂದೆ ಸಿದ್ದಯ್ಯ ಸ್ವಾಮಿ ಇವರು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ನನ್ನ ಸ್ನೇಹಿತ ಶರಣಯ್ಯ ತಂದೆ ರಾಚಯ್ಯ ಹಿರೆಮಠ್ ಇಬ್ಬರೂ ಹಾಲಗೇರಾದಿಂದ ನಮ್ಮ ಮೋಟರ್ ಸೈಕಲ್ ಮೇಲೆ ಯಾದಗಿರಿಗೆ ಹೊರಟಿದ್ದೇವು. ನಮ್ಮ ಮುಂದುಗಡೆ ನಿನ್ನ ಮಗ ಶಿವಕುಮಾರನು ತನ್ನ ಮೋಟರ್ ಸೈಕಲ್ ಮೇಲೆ ಹೋಗುತ್ತಿರುವಾಗ ಯಾದಗಿರಿ-ವಡಗೇರಾ ಮೇನ ರೋಡ ಹುಲಕಲ್ (ಜೆ) ಕ್ರಾಸ ಸಮೀಪ 6 ಎಎಮ್ ಸುಮಾರಿಗೆ ಶಿವಕುಮಾರನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟಾಗ ಎದುರುಗಡೆಯಿಂದ ಯಾವುದೋ ಒಂದು ಲಾರಿ ಬರುತ್ತಿದ್ದಾಗ ಶಿವಕುಮಾರನು ಮೋಟರ್ ಸೈಕಲ್ ಸಿಡ್ಡ ಮಾಡಿಕೊಂಡು ಬಿದ್ದುಬಿಟ್ಟನು. ನಾವು ಹೋಗಿ ನೋಡಿದಾಗ ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ತೆಲೆಗೆ ಭಾರಿ ಒಳಪೆಟ್ಟಾಗಿ ಬೆವೋಹಷ ಆಗಿರುತ್ತಾನೆ. ನಾವು ಆತನಿಗೆ 108 ಅಂಬ್ಯೂಲೇನ್ಸಗೆ ಫೊನ ಮಾಡಿ ಕರೆಸಿ, ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತರುತ್ತಿದ್ದೇವೆ ಎಂದು ಹೇಳಿದರು. ಆಗ ಗಾಬರಿಯಾದ ನಾನು ನನ್ನ ಗಂಡನಿಗೆ ವಿಷಯ ತಿಳಿಸಿ, ಇಬ್ಬರೂ ಸರಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ಘಟನೆ ನಿಜವಿದ್ದು, ನನ್ನ ಮಗ ಶಿವಕುಮಾರನಿಗೆ ಈ ಮೇಲಿನಂತೆ ಗಾಯಗಳಾಗಿದ್ದವು. ಅಲ್ಲಿಯೇ ಇದ್ದ ಲೊಕೇಶ ಮತ್ತು ಅವನ ಗೆಳೆಯ ಶರಣಯ್ಯ ಇವರಿಗೆ ಕೇಳಿದಾಗ ಯಾದಗಿರಿ-ವಡಗೇರಾ ಮೇನ ರೋಡ ಹುಲಕಲ್ ಕ್ರಾಸ ಸಮೀಪ ಶಿವಕುಮಾರನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟಾಗ ಎದುರುಗಡೆಯಿಂದ ಯಾವುದೋ ಒಂದು ಲಾರಿ ಬರುತ್ತಿದ್ದಾಗ ಶಿವಕುಮಾರನು ತನ್ನ ಮೋಟರ್ ಸೈಕಲ್ ಒಮ್ಮೆಲೆ ಎಡಗಡೆ ಸೈಡ ತೆಗೆದುಕೊಳ್ಳುವಾಗ ಮೋಟರ್ ಸೈಕಲ್ ಅವನ ನಿಯಂತ್ರಣ ತಪ್ಪಿ ಸ್ಕಿಡ್ಡಾಗಿ ಬಿದ್ದುಬಿಟ್ಟನು. ನಾವು ಹೋಗಿ ನೋಡಿದಾಗ ಶಿವಕುಮಾರನಿಗೆ ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ತೆಲೆಗೆ ಭಾರಿ ಒಳಪೆಟ್ಟಾಗಿ ಬೆವೋಹಷ ಆಗಿದ್ದನು ಅಂತಾ ಹೇಳಿದರು. ವೈದ್ಯಾಧಿಕಾರಿಗಳು ಯಾದಗಿರಿ ರವರು ಅರ್.ಟಿ.ಎ ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದರು. ಆಗ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿದಾಗ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು ಎಂದು ಹೇಳಿದ್ದರಿಂದ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನ್ನ ಮಗನಿಗೆ ಕಲಬುರಗಿ ಸರಕಾರಿ ದವಾಖಾನೆಯಲ್ಲಿ ತೋರಿಸಿದಾಗ ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ಇಲ್ಲವೆ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿರುತ್ತಾರೆ. ಆದರೆ ನಮಗೆ ಹಣಕಾಸಿನ ಅಡಚಣೆ ಇದ್ದುದ್ದರಿಂದ ನನ್ನ ಮಗ ಶಿವಕುಮಾರನಿಗೆ ಪುನಃ ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನನ್ನ ಮಗ ಶಿವಕುಮಾರನು ಕೋಮಾ ಸ್ಥಿತಿಯಲ್ಲಿರುತ್ತಾನೆ. ಕಾರಣ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕಂಪ್ಯೂಟರ್ ಟೈಪ ಮಾಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 12/2020 ಕಲಂ: 279,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹೀಗಿದ್ದು ಇಂದು ದಿನಾಂಕ: 14/02/2020 ರಂದು ಬೆಳಗ್ಗೆ 9-15 ಗಂಟೆಗೆ ಸದರಿ ಪ್ರಕರಣದಲ್ಲಿಯ ಮೃತ ಶಿವಕುಮಾರನ ತಂದೆಯಾದ ಬಸಯ್ಯ ತಂದೆ ಗುರುಲಿಂಗಯ್ಯ ಸ್ವಾಮಿ, ವ:50, ಜಾ:ಜಂಗಮ, ಉ:ಪೂಜಾರಿ ಸಾ:ಚಟಾನ ಏರಿಯಾ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ಮಗನಾದ ಶಿವಕುಮಾರ ತಂದೆ ಬಸಯ್ಯ ಸ್ವಾಮಿ ವ:18 ವರ್ಷ ಸಾ:ಚಟಾನ ಏರಿಯಾ ಯಾದಗಿರಿ ಈತನು ದಿನಾಂಕ: 08/02/2020 ರಂದು ಮೋಟರ್ ಸೈಕಕಲ್ ಸ್ಕಿಡ್ಡ ಮಾಡಿಕೊಂಡು ಬಿದ್ದು, ಭಾರಿ ಗಾಯಗೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಉಪಚಾರ ಪಡೆಯುತ್ತಿದ್ದವನು ಇಂದು ದಿನಾಂಕ: 14/02/2020 ರಂದು ಬೆಳಗ್ಗೆ 6-35 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ಕಾರಣ ನನ್ನ ಮಗ ಶಿವಕುಮಾರನು ಮೋಟರ್ ಸೈಕಲ್ ಅನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ ಲಾರಿ ಬರುತ್ತಿದ್ದಾಗ ಮೋಟರ್ ಸೈಕಲನ್ನು ಸ್ಕಿಡ್ಡ ಮಾಡಿಕೊಂಡು ಬಿದ್ದು ಭಾರಿ ಗಾಯಗೊಂಡು ಉಪಚಾರ ಪಡೆಯುತ್ತಾ ಮೃತಪಟ್ಟಿರುತ್ತಾನೆ. ಮೃತ ನನ್ನ ಮಗನ ಶವವು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಇರುತ್ತದೆ. ಆದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಪುರವಣಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಈಗಾಗಲೇ ದಾಖಲಾದ ಠಾಣಾ ಗುನ್ನೆ ನಂ. 12/2020 ಕಲಂ: 279,338 ಐಪಿಸಿ ನೇದ್ದರಲ್ಲಿ ಕಲಂ: 304(ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ತನಿಖೆ ಕೈಕೊಳ್ಳಲಾಗಿದೆ.
ಶಹಪೂರ ಪೊಲೀಸ ಠಾಣೆ ಗುನ್ನೆ ನಂ:- 44/2020 ಕಲಂ 279, 337, 304(ಎ) ಐ.ಪಿ.ಸಿ 44/2020 ಕಲಂ 279, 337, 304(ಎ) ಐ.ಪಿ.ಸಿ:- ಇಂದು ದಿನಾಂಕ: 14/02/2020 ರಂದು 1.00 ಪಿ.ಎಂ.ಕ್ಕೆ ಶ್ರೀ ವಿರುಪಾಕ್ಷಪ್ಪ ತಂ/ ನಾಗಪ್ಪ ಕುಂಬಾರ ಸಾ|| ಕುಂಬಾರ ಓಣಿ ಶಹಾಪುರ ತಾ||ಶಹಾಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶ ಏನೆಂದರೆ, ನಿನ್ನೆ ದಿನಾಂಕ: 13/02/2020 ರಂದು ಬೆಳಿಗ್ಗೆ 5.00 ಎ.ಎಂ.ಕ್ಕೆ ಎಂದಿನಂತೆ ನನ್ನ ಮಗ ನಾಗರಾಜನು ಮನೆಯಿಂದ ವಾಕಿಂಗ್ ಕುರಿತು ಹೋಗಿದ್ದನು. 6.20 ಎ.ಎಂ. ಸುಮಾರಿಗೆ ನಮ್ಮ ಸಂಬಂಧಿ ಶಂಕರಲಿಂಗ ತಂ/ ಮಲ್ಲಣ್ಣ ಕೆರೋಟಗಿ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ನಾನು ಸ್ಪಂದನ ಆಸ್ಪತ್ರೆಯಲ್ಲಿ ರಾತ್ರಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುತ್ತಿದ್ದಾಗ 6.15 ಎ.ಎಂ. ಸುಮಾರಿಗೆ ಶಹಾಪುರ-ಭೀ.ಗುಡಿ ಮುಖ್ಯ ರಸ್ತೆಯಲ್ಲಿರುವ ಕರುಣೇಶ್ವರ ರೆಸ್ಟೋರೆಂಟ್ ಮುಂದೆ ರೋಡಿನ ಎಡ ಸೈಡಿನಲ್ಲಿ ನಿಮ್ಮ ಮಗ ನಾಗರಾಜನು ನಡೆದುಕೊಂಡು ಸಿ.ಬಿ. ಕಮಾನ್ ಕಡೆಗೆ ಹೊರಟಿದ್ದನು. ಶಹಾಪುರ ಕೆ.ಇ.ಬಿ ಕಡೆಯಿಂದ ಒಂದು ಹೊಂಡಾ ಆಕ್ಟಿವ್ ಮೋಟರ ಸೈಕಲದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ಸಿ.ಬಿ. ಕಮಾನ ಕಡೆಗೆ ಹೋಗುತ್ತಿದ್ದಾಗ ಮೋಟರ ಸೈಕಲ್ ಚಾಲಕನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ನಾಗರಾಜನಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ನಾಗರಾಜ ಮತ್ತು ಮೋಟರ ಸೈಕಲ್ ಸಮೇತ ಸವಾರರು ಬಿದ್ದರು ಆಗ ನಾನು ಹತ್ತಿರ ಹೋಗಿ ನೋಡಲಾಗಿ ನಿಮ್ಮ ಮಗ ನಾಗರಾಜನಿಗೆ ತಲೆಯ ಹಿಂದೆ ಬಾರಿ ಒಳಪೆಟ್ಟಾಗಿ ಬಾವು ಬಂದಿದ್ದು, ಎಡ ಮೆಲಕಿಗೆ ಭಾರಿ ಒಳಪೆಟ್ಟು, ಎಡಗೈ ಮೊಳಕೈಗೆ ತರಚಿದ ಗಾಯವಾಗಿರುತ್ತದೆ. ಮೋಟರ ಸೈಕಲ್ ಸವಾರರಿಗೆ ನೋಡಲಾಗಿ ಅದರಲ್ಲಿ ಮೋಟರ ಸೈಕಲ್ ಹಿಂದೆ ಕುಳಿತಿದ್ದ ಅಂಬ್ರೇಶ ತಂ/ ಬಸಣ್ಣ ಟಣಕೇದಾರ ಸಾ|| ಬಾಪುಗೌಡನಗರ ಶಹಾಪುರ ಈತನಿಗೆ ಎಡಗಣ್ಣ ಹುಬ್ಬಿಗೆ ಒಳಪೆಟ್ಟಾಗಿ ಬಾವು ಬಂದಿದ್ದು, ಬಲಗಾಲ ಮೊಳಕಾಲಿಗೆ ತರಚಿದಗಾಯವಾಗಿರುತ್ತದೆ. ಮೊಟರ ಸೈಕಲ್ ನಡೆಸಿದವನ ಹೆಸರು ವಿಚಾರಿಸಲಾಗಿ ಮಹೇಶಕುಮಾರ ತಂ/ ಹಂಪಣ್ಣ ಸಾ||ಶಹಾಪುರ ಅಂತಾ ಹೇಳಿದ್ದು ಅವನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಅಲ್ಲಿಯೇ ಇದ್ದ ಅಪಘಾತಪಡಿಸಿದ ವಾಹನದ ನಂಬರ ನೋಡಲಾಗಿ ಹೋಂಡಾ ಆಕ್ಟಿವಾ ಮೋಟರ ಸೈಕಲ್ ಇದ್ದು, ಅದರ ನಂ. ಕೆಎ-23 ಇ.ಆರ್-6485 ಅಂತಾ ಇರುತ್ತದೆ. ಒಂದು ಖಾಸಗಿ ವಾಹನದಲ್ಲಿ ಗಾಯಾಳುಗಳಿಗೆ ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಹೊರಟಿದ್ದೇನೆ ನೀವು ಬನ್ನಿ ಅಂತಾ ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ಚೌಡಮ್ಮ, ಮತ್ತು ಅಳಿಯ ನಿಂಗಣ್ಣ ಕೆರೋಟಗಿ 3 ಜನರು ಕೂಡಿ ಶಹಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗನಿಗೆ ಮತ್ತು ಮೋಟರ ಸೈಕಲ್ ಸವಾರ ಅಂಬ್ರೇಶನಿಗೆ ಮೇಲ್ಕಾಣಿಸಿದಂತೆ ಗಾಯಗಳಾಗಿದ್ದು, ನನ್ನ ಮಗ ನಾಗರಾಜನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಂತರ ಗಾಯಾಳುಗಳಿಗೆ ತಪಾಸಣೆ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿದರಿಂದ ನನ್ನ ಮಗನಿಗೆ ನಿನ್ನೆ ದಿನಾಂಕ: 13/02/2020 ರಂದು ಕಲಬುರಗಿಯ ಯುನೆಟೆಡ್ ಆಸ್ಪತ್ರೆಗೆ ಕರೆಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದಾಗ ಇಂದು ದಿನಾಂಕ: 14/02/2020 ರಂದು ಬೆಳಿಗ್ಗೆ 6.00 ಎ.ಎಂ.ಕ್ಕೆ ನನ್ನ ಮಗ ನಾಗರಾಜನು ಅಪಘಾತದಲ್ಲಿ ತನಗೆ ಆದ ಗಾಯಗಳಿಂದ ಗುಣಮುಖನಾಗದೆ ಮೃತಪಟ್ಟಿರುತ್ತಾನೆ. ಕಲಬುರಗಿಯಿಂದ ನನ್ನ ಮಗನ ಮೃತ ದೇಹವನ್ನು ತಂದು ಶಹಾಪುರ ಸರಕಾರಿ ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿ ಹಾಕಿರುತ್ತೇವೆ. ನಿನ್ನೆ ಅಪಘಾತ ಜರುಗಿದ ನಂತರ ನನ್ನ ಮಗನಿಗೆ ಉಪಚಾರ ಕುರಿತು ಕಲಬುರಗಿಗೆ ಹೋಗಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಹೋಂಡಾ ಆಕ್ಟಿವಾ ಮೋಟರ ಸೈಕಲ್.ನಂ. ಕೆಎ-23 ಇ.ಆರ್-6485 ನೇದ್ದರ ಚಾಲಕ ಮಹೇಶಕುಮಾರ ತಂ/ ಹಂಪಣ್ಣ ಸಾ|| ಶಹಾಪುರ ಇವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 44/2020 ಕಲಂ 279,337, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 45/2020 ಕಲಂ 279, 337, 338, 304(ಎ) ಐ.ಪಿ.ಸಿ & 187 ಐ.ಎಂ.ವಿ ಯಾಕ್ಟ :- ಇಂದು ದಿನಾಂಕ: 14/02/2020 ರಂದು 4.00 ಪಿ.ಎಂ.ಕ್ಕೆ ಶ್ರೀ ರಾಮಚಂದ್ರ ತಂ/ ಯಂಕೋಬ ಹವಾಲ್ದಾರ ಸಾ|| ನಗನೂರು ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶ ಏನೆಂದರೆ, ಇಂದು ದಿನಾಂಕ: 14/02/2020 ರಂದು ಬೆಳಿಗ್ಗೆ 4 ಎ.ಎಂ.ಕ್ಕೆ ಶಹಾಪುರ ಕುರಿಬಜಾರನಲ್ಲಿ ಕುರಿ ಮಾರಾಟ ಮಾಡಿ ಬರುತ್ತೇನೆ ಅಂತಾ ಹೇಳಿ ನನ್ನ ಮಾವ ಸಿದ್ದಪ್ಪ ತಂ/ ತಮ್ಮಣ್ಣ ಹಂಗರಗಿ ಈತನು ಮನೆಯಿಂದ ಒಂದು ಕುರಿ ಮರಿ ತೆಗೆದುಕೊಂಡು ಹೋಗಿದ್ದನು. ಬೆಳಿಗ್ಗೆ 11.30 ಎ.ಎಂ. ಸುಮಾರಿಗೆ ನಮ್ಮೂರ ಗುರಪ್ಪ ತಂ/ ಭೀಮಪ್ಪ ಭಾಗಪ್ಪಗೋಳ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ಶಹಾಪುರ ಸಂತೆಯಿಂದ ನಾನು ಮತ್ತು ನಿಮ್ಮ ಮಾವ ಸಿದ್ದಪ್ಪ, ನಮ್ಮೂರ ನಿಂಗಪ್ಪ ಹಾಲಗೂರ, ನಮ್ಮ ಓಣಿಯ ದೇವಪ್ಪ ರಾವುತಪ್ಪಗೋಳ, ನಿಂಗಮ್ಮ ಮಾನಪ್ಪಗೋಳ ಹಾಗೂ ಅಬ್ಬಾಸ ಅಲಿ ನದಾಫ ಎಲ್ಲರೂ ಕೂಡಿ ನಮ್ಮೂರ ರಸೂಲಸಾಬ ತಂ/ ನಬಿಸಾಬ ನದಾಫನ ಅಟೋ ನಂ. ಕೆಎ-33/8095 ನೇದ್ದರಲ್ಲಿ ಕುಳಿತು ನಗನೂರಿಗೆ ಹೊರಟಿದ್ದಾಗ ಶಹಾಪುರ-ಭೀ.ಗುಡಿ ರಸ್ತೆಯಲ್ಲಿರುವ ಶಹಾಪುರ ಡಿಗ್ರಿ ಕಾಲೇಜ ಮುಂದೆ ತನ್ನ ಆಟೋವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗುತ್ತಾ ದಿಗ್ಗಿ ಕಮಾನ ದಾಟಿ 50 ಮೀಟರ ಮುಂದೆ ಹೊರಟಿದ್ದಾಗ ಮುಂಜಾನೆ 11-15 ಗಂಟೆಯ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಅಟೋ ಪಲ್ಟಿಯಾಗಿ ಬಿದ್ದ ಪರಿಣಾಮ ಅಟೋದಲ್ಲಿದ್ದ 1) ನಿಮ್ಮ ಮಾವ ಸಿದ್ದಪ್ಪ ಹಂಗರಗಿ, 2) ನಿಂಗಪ್ಪ ಹಾಲಗೂರ, 3) ಅಬ್ಬಾಸ ಅಲಿ ನಧಾಪ್ ರವರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು, 4) ದೇವಪ್ಪ ರಾವುತಪ್ಪಗೋಳ ಈತನಿಗೆ ತಲೆಗೆ ತರಚಿದ ರಕ್ತಗಾಯ ವಾಗಿರುತ್ತದೆ. ನನಗೆ ಮತ್ತು ನಿಂಗಪ್ಪ ಮಾನಪ್ಪಗೋಳ ಹಾಗೂ ಆಟೋ ಚಾಲಕ ರಸೂಲಸಾಬ ರವರಿಗೆ ಯಾವುದೇ ಗಾಯವಗೈರೆ ಆಗಿರುವುದಿಲ್ಲ. ಅಪಘಾತ ಪಡಿಸಿದ ಅಟೋ ಚಾಲಕ ರಸೂಲಸಾಬ ಈತನು ತನ್ನ ಅಟೋ ಬಿಟ್ಟು ಓಡಿಹೋಗಿರುತ್ತಾನೆ. ನಂತರ ಅಪಘಾತವಾದ ಸ್ಥಳಕ್ಕೆ 108 ವಾಹನ ಬಂದಿದ್ದು, ಗಾಯಾಳುದಾರರಿಗೆ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದೆನೆ ನೀವು ಆಸ್ಪತ್ರಗೆ ಬನ್ನಿ ಅಂತ ತಿಳಿಸಿದ ಮೇರೆಗೆ, ನಾನು ಮತ್ತು ಮಲ್ಲಿಕಾಜರ್ುನ ಹಾಲಗೂರ ಇಬ್ಬರೂ ಶಹಾಪೂರಕ್ಕೆ ಹೊರಟಿದ್ದಾಗ ಮದ್ಯಾಹ್ನ 12-00 ಪಿ.ಎಮ. ಸುಮಾರಿಗೆ ಗುರಪ್ಪನು ಪೋನ್ ಮಾಡಿ ಭೀ-ಗುಡಿ ಹತ್ತಿರ ನಿಲ್ಲಲು ತಿಳಿಸಿದ್ದರಿಂದ ನಾವಿಬ್ಬರೂ ಭೀ-ಗುಡಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಸ್ವಲ್ಪ ಸಮಯದಲ್ಲಿಯೇ ಗಾಯಾಳುದಾರರನ್ನು ಹಾಕಿಕೊಂಡು ಬಂದ ಅಂಬುಲೇನ್ಸದಲ್ಲಿ ನಾವಿಬ್ಬರೂ ಹತ್ತಿ ಹೊರಟೇವು. ಗಾಯಾಳುದಾರರನ್ನು ಕಲಬುರಿಗೆ ಕರೆದುಕೊಂಡು ಹೋಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ 1-20 ಪಿ.ಎಮ್.ಕ್ಕೆ ನಿಂಗಪ್ಪ ತಂದೆ ಮಹಾದೇವಪ್ಪ ಹಾಲಗೂರ ಈತನು ಮೃತ ಪಟ್ಟಿರುತ್ತಾನೆ ಮತ್ತು ಸಿದ್ದಣ್ಣ ತಂದೆ ತಮ್ಮಣ್ಣ ಹಂಗರಗಿ ಈತನು ಮದ್ಯಾಹ್ನ 1-30 ಪಿ.ಎಮ್ಕ್ಕೆ ಮೃತ ಪಟ್ಟಿರುತ್ತಾನೆ. ನಂತರ ಮೃತ ದೇಹಗಳನ್ನು ಶಹಾಪುರಕ್ಕೆ ತಂದು ಸರಕಾರಿ ಆಸ್ಪತ್ರೆಗೆ ಮರ್ಚರಿ ಕೋಣೆಯಲ್ಲಿ ಹಾಕಿರುತ್ತೆವೆ. ಕಾರಣ ಸದರಿ ಅಪಘಾತಕ್ಕೆ ಕಾರಣನಾದ ಆಟೋ ನಂ ಕೆಎ-33/8095 ರ ಚಾಲಕ ರಸೂಲಸಾಬ ತಂದೆ ನಬಿಸಾಬ ನಧಾಪ್ ಸಾಃ ನಗನೂರ ಈತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/2020 ಕಲಂ 279, 337, 338, 304(ಎ) ಐ.ಪಿ.ಸಿ & 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 17/2020 ಕಲಂ: 279, 304(ಎ) ಐಪಿಸಿ17/2020 ಕಲಂ: 279, 304(ಎ) ಐಪಿಸಿ:- ಇಂದು ದಿನಾಂಕ:14.2.2020 ರಂದು ಬೆಳಿಗ್ಗೆ 9:15 ಗಂಟೆಗೆ ಪಿರ್ಯಾಧಿ ಶ್ರೀ. ಜೆಟ್ಟೆಪ್ಪ ತಂದೆ ಭೀಮಣ್ಣ ಶುಕ್ಲಾ ವ:55 ವರ್ಷ ಉ: ಒಕ್ಕಲುತನ ಜಾ: ಹಿಂದೂ ಬೇಡರ ಸಾ: ಬೈಲಕುಂಟಿ ತಾ; ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದುಕೊಂಡು ಬಂದ ಪಿರ್ಯಾಧಿ ಅಜರ್ಿಯನ್ನು ಹಾಜರ ಪಡಿಸಿದ್ದು. ಸದರ ಅಜರ್ಿಯ ಸಾರಾಂಶವೆನೆಂದರೆ ನನಗೆ ಅಂಬ್ರೇಶ, ಭೀಮಾರಾಯ, ಬಸವರಾಜ ಅಂತ ಮೂರು ಜನ ಗಂಡು ಮಕ್ಕಳಿದ್ದು. ಮೂರು ಜನರದು ಮದುವೆಯಾಗಿದ್ದು. ಎಲ್ಲರು ತಮ್ಮ ತಮ್ಮ ಹೆಂಡತಿ ಮಕ್ಕಳೊಂದಿಗೆ ಬೇರೆ-ಬೇರೆ ಇರುತ್ತಾರೆ. ಈಗಿರುವಾಗ ನಿನ್ನೆ ದಿನಾಂಕ:13.02.2020 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನನ್ನ ಮಗನಾದ ಬಸವರಾಜ ಇತನು ತನ್ನ ಹೆಂಡತಿಯಾದ ಸಾವಿತ್ರಿರವರು ತನ್ನ ತವರೂರು ಗುಡಗುಂಟಿಗೆ ಹೋಗಿದ್ದರಿಂದ. ತಾನು ಅಲ್ಲಿಗೆ ಹೋಗಿ ಬರುತ್ತೇನೆ ಅಂತ ನನಗೆ ತಿಳಿಸಿ ತನ್ನ ಮೋಟರ್ ಸೈಕಲ್ ನಂಬರ ಕೆಎ-36 ಇಎಸ್4703 ನೇದ್ದನ್ನು ತೆಗೆದುಕೊಂಡು ಮನೆಯಿಂದ ಹೋಗಿದ್ದು ಇರುತ್ತದೆ. ನಂತರ ನಾವು ಊಟ ಮಾಡಿ ಮಲಗಿಕೊಂಡಿದ್ದು. ಈ ದಿವಸ ಮುಂಜಾನೆ 7:45 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನಗೆ ಪರಿಚಯದ ಗೆದ್ದಲಮರಿ ತಾಂಡಾದ ತಿಪ್ಪಣ್ಣ ತಂದೆ ದೀರಪ್ಪ ಪವ್ಹಾರ ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ. ನಾನು ಈ ದಿವಸ ಮುಂಜಾನೆ 7:30 ಗಂಟೆ ಸುಮಾರಿಗೆ ನಮ್ಮ ಹೊಲದಿಂದ ಗೆದ್ದಲಮರಿ ತಾಂಡಾಕ್ಕೆ ನನ್ನ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ದಾರಿ ಮಧ್ಯ ರಾಮಚಂದ್ರಪ್ಪ ತಂದೆ ಪೀರಪ್ಪ ರಾಠೋಡ ರವರ ಹೊಲದಲ್ಲಿ ನಿಮ್ಮ ಮಗ ಬಸವರಾಜನು ಮೋಟರ್ ಸೈಕಲ್ ಸಮೇತ ಅಪಘಾತವಾಗಿ ಸತ್ತು ಬಿದ್ದಿದ್ದು ಇರುತ್ತದೆ. ಅಂತ ತಿಳಿಸಿದ್ದು. ಕೂಡಲೇ ನಾನು ಮತ್ತು ನನ್ನ ಮಕ್ಕಳಾದ ಅಂಬ್ರೇಶ, ಭೀಮರಾಯ ನನ್ನ ಹೆಂಡತಿ ದೇವಮ್ಮ ಹಾಗೂ ನಮ್ಮೂರ ದೇವಪ್ಪ ತಂದೆ ರಂಗಪ್ಪ ಶುಕ್ಲಾ, ಹುಲಗಪ್ಪ ತಂದೆ ಲಾಲಪ್ಪ ದೊಡ್ಡಮನಿ, ಶರಣಪ್ಪ ತಂದೆ ಅಯ್ಯಣ್ಣ ದೇಸಾಯಿ, ನಿಂಗಪ್ಪ ತಂದೆ ಛತ್ರಪ್ಪ ಗುಳಬಾಳ ಹಾಗೂ ಇತರರು ಕೂಡಿ ಬೆಳಿಗ್ಗೆ 8:15 ಗಂಟೆ ಸುಮಾರಿಗೆ ತಿಪ್ಪಣ್ಣನು ಹೇಳಿದ ಸ್ಥಳಕ್ಕೆ ಬಂದು ನೋಡಲಾಗಿ ಬಲಶೆಟ್ಟಿಹಾಳ-ಗೆದ್ದಲಮರಿ ತಾಂಡಾದ ಮುಖ್ಯ ರಸ್ತೆಯ ಪಕ್ಕದಲ್ಲಿ ಗೆದ್ದಲಮರಿ ಸೀಮಾಂತರ ರಾಮಚಂದ್ರಪ್ಪ ತಂದೆ ಪೀರಪ್ಪ ರಾಠೋಡ ರವರ ಹೊಲದಲ್ಲಿ ರಸ್ತೆಯ ಉತ್ತರದ ಬದಿಗೆ ನನ್ನ ಮಗನು ತನ್ನ ಮೋಟರ್ ಸೈಕಲ್ ಸಮೇತ ಬಿದ್ದಿದ್ದು. ನೋಡಲಾಗಿ ನನ್ನ ಮಗನು ಸತ್ತಿದ್ದು. ನನ್ನ ಮಗ ಬಸವರಾಜನ ಬಲಗಣ್ಣಿನ ಕೆಳಬಾಗದಲ್ಲಿ ತೆರಚಿದ ರಕ್ತಗಾಯವಾಗಿದ್ದು. ಮೂಗಿನಲ್ಲಿ ರಕ್ತಸ್ರಾವುವಾಗಿದ್ದು. ಎಡಗೈ ಅಂಗೈ ಮೇಲೆ ರಕ್ತಗಾಯವಾಗಿದ್ದು. ಬಲಗಾಲು ಹೆಬ್ಬ್ಬೆರಳು ಪಕ್ಕದ ಬೆರಳಿಗೆ ರಕ್ತಗಾಯವಾಗಿದ್ದು. ಸದರ ಸ್ಥಳದಲ್ಲಿ ಹೊಲದಲ್ಲಿ ಭತ್ತ ನಾಟಿ ಮಾಡಿದ್ದು. ಜಮೀನಿನಲ್ಲಿ ಸ್ವಲ್ಪ ನೀರು ನಿಂತಿದ್ದು. ನನ್ನ ಮಗ ಬಸವರಾಜನು ನಿನ್ನೆ ದಿನಾಂಕ:13.02.2020 ರಂದು ರಾತ್ರಿ 8:15 ಗಂಟೆ ಸುಮಾರಿಗೆ ಗುಡಗುಂಟಿಗೆ ಹೋಗಲು ತನ್ನ ಮೋಟರ್ ಸೈಕಲ್ ನಂಬರ ಕೆಎ-36 ಇಎಸ್ 4703 ನೇದ್ದನ್ನು ನಡಿಸಿಕೊಂಡು ಹೋಗುತ್ತಿರುವಾಗ ಮೋಟರ್ ಸೈಕಲ್ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡದಿಡ್ಡಿಯಾಗಿ ನಡಿಸಿಕೊಂಡು ಹೋಗಿ ಮೋಟರು ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿಯ ದೊಡ್ಡ ಕಲ್ಲಿನ ಮೇಲೆ ಆಯಿಸಿ ನಂತರ ಭತ್ತ ನಾಟಿ ಮಾಡಿದ ರಾಮಚಂದ್ರಪ್ಪ ರಾಠೋಡ ರವರ ಹೊಲದಲ್ಲಿ ಮೋಟರ್ ಸೈಕಲ್ ಸಮೇತ ಬಿದ್ದಿದ್ದರಿಂದ ನನ್ನ ಮಗನ ಮೈ ಮೇಲೆ ಗಾಯಾಗಳಾಗಿ ಸ್ಥಳದಲ್ಲಿಯೇ ಸತ್ತಿದ್ದು. ಈ ಅಪಘಾತವು ನನ್ನ ಮಗ ಬಸವರಾಜ ತಂದೆ ಜೆಟ್ಟೆಪ್ಪ ಶುಕ್ಲಾ ವ;26 ವರ್ಷ ಉ: ಒಕ್ಕಲುತನ ಜಾ: ಹಿಂದೂ ಬೇಡರ ಸಾ:ಬೈಲಕುಂಟಿ ಇತನ ನಿರ್ಲಕಷತನದಿಂದಲೇ ಸಂಬವಿಸಿದ್ದು. ನನ್ನ ಮಗನ ಶವವನ್ನು ಅಪಘಾತ ಸ್ಥಳದಿಂದ ಮೇಲೆ ತೆಗೆದಿದ್ದು. ರಸ್ತೆಯ ಪಕ್ಕದಲ್ಲಿ ಹಾಕಿದ್ದು. ನಾನು ನನ್ನ ಮಗನ ಶವವನ್ನು ನೋಡಿ ಬಂದು ದೂರು ಕೊಡುತ್ತಿದ್ದು. ಕಾನೂನು ಕ್ರಮ ಜರುಗಿಸಲು ಅಂತ ಪಿರ್ಯಾಧಿ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:17/2020 ಕಲಂ:279, 304(ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಠಾಣೆ ಗುನ್ನೆ ನಂ:-. 31/2020 ಕಲಂ: 279, 337,338, 304(ಎ) ಐ.ಪಿ.ಸಿ ಸಂ 187 ಐಎಮ್ವಿ:- ಇಂದು ದಿನಾಂಕ 14.02.2020 ರಂದು 00.30 ಗಂಟೆಗೆ ಪಿರ್ಯಾದಿ ಶ್ರೀ ಭೀಮಣ್ಣ ತಂದೆ ಮಲ್ಲಪ್ಪ ಅಸ್ಕಿ ವಯಾ: 26 ವರ್ಷ ಜಾತಿ: ಕಬ್ಬಲಿಗ ಉ: ಸರಕಾರಿ ನೌಕರ ಸಾ|| ಯಕ್ತಾಪೂರ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶ ವೆನೆಂದರೆ ಇಂದು ದಿನಾಂಕ 14.02.2020 ರಂದು ಯಕ್ತಾಪೂರ ಗ್ರಾಮ ದೇವತೆ ಜಾತ್ರೆ ಇದ್ದುದ್ದರಿಂದ ನಾನು ನಿನ್ನೆ ದಿನಾಂಕ 13.02.2020 ರಂದು ನಮ್ಮೂರ ಜಾತ್ರೆಗೆ ಬರುವ ಕುರಿತು ರಾತ್ರಿ 09.30 ಗಂಟೆ ಸುಮಾರಿಗೆ ಮಲ್ಲಾ ಕ್ರಾಸ್ ಹತ್ತಿರ ಬಂದು ನಿಂತಿದ್ದೆನು. ಹೀಗಿದ್ದು ನಿನ್ನೆ ದಿನಾಂಕ 13.02.2020 ರಂದು 09.30 ಪಿ.ಎಮ್ ಕ್ಕೆ ನಾನು ಮಲ್ಲಾ ಕ್ರಾಸ್ ಹತ್ತಿರ ನಿಂತಾಗ ಶಹಾಪೂರ ಕಡೆಯಿಂದ ಒಂದು ಟಂಟಂ ಆಟೋ ನಂಬರ ಕೆಎ.36/6754 ನೇದ್ದರಲ್ಲಿ 1) ರೆಣುಕಾ ಗಂಡ ಲಕ್ಷ್ಮಣ ನಾಟೇಕಾರ 2) ಅಂಬೋಜಿ ತಂದೆ ಮಾನಶಪ್ಪ 3) ಲಕ್ಷ್ಮಣ ತಂದೆ ಮಾನಪ್ಪ ಎಲ್ಲರೂ ಸಾ: ಗೋಗಿ ಇವರೆಲ್ಲರೂ ಕೂಡಿ ಟಂಟಂ ದಲ್ಲಿ ಮಲ್ಲಾ ಕ್ರಾಸ್ ಹತ್ತಿರ ಬಂದಾಗ ನಾನು ಕೆಂಭಾವಿಗೆ ಹೋಗುವ ಕುರಿತು ಸದರಿ ಟಂಟಂ ಆಟೋದಲ್ಲಿ ಕುಳಿತಿದ್ದು ನನ್ನಂತೆಯೇ ಪ್ರಶಾಂತ ಅಣಜಿ ಸಾ: ಪರಸನಳ್ಳಿ ಈತನು ಕುಳಿತುಕೊಂಡನು. ಸದರಿ ಟಂಟಂ ಆಟೋ ಚಾಲಕನು ತನ್ನ ಟಂಟಂ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಕೆಂಭಾವಿ ಕಡೆಗೆ ಬರುತ್ತಿದ್ದಾಗ ಸದರಿ ಚಾಲಕನಿಗೆ ಸಾವಕಾಶವಾಗಿ ಚಲಾಯಿಸು ಅಂತಾ ಹೇಳಿದರೂ ಸಹ ಸದರಿ ಚಾಲಕನು ಸಾವಕಾಶವಾಗಿ ಚಲಾಯಿಸದೇ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಾ ಸುಸ್ವಾಗತಂ ಕಮಾನ ಹತ್ತಿರ ರಸ್ತೆ ಮೇಲೆ ಬರುತ್ತಿರುವಾಗ ಕೆಂಭಾವಿ ಕಡೆಯಿಂದ ಒಂದು ಸಿಲ್ವರ ಬಣ್ಣದ ಪಲ್ಸರ ಮೊಟಾರ ಸೈಕಲ್ ನೇದ್ದಕ್ಕೆ ಡಿಕ್ಕಿ ಪಡಿಸಿದ್ದು ಸದರಿ ಮೊಟಾರ ಸೈಕಲ್ ನೇದ್ದರ ಚಾಲಕನು ರಸ್ತೆ ಮೇಲೆ ಬಿದ್ದು ತಲೆಗೆ, ಎದೆಗೆ, ಭಾರೀ ರಕ್ತಗಾಯ ಆಗಿ ಮತ್ತು ಎರಡು ಮೋಳಕಾಲು ಹತ್ತಿರ ಮುರಿಂದಂತೆ ಆಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಟಂಟಂ ಆಟೋದಲ್ಲಿ ಕುಳಿತ ನನಗೂ ಕೂಡಾ ಬಲಕೈ ಮುಷ್ಠಿಯ ಹತ್ತಿರ ಒಳಪೆಟ್ಟು ಮತ್ತು ಎಡಕೈ ಮೊಳಕೈ ಹತ್ತಿರ ತರಚಿದ ರಕ್ತಗಾಯ ಆಗಿದ್ದು ಅಲ್ಲದೇ ಪ್ರಶಾಂತ ಅಣಜಿ ಸಾ: ಪರಸನಳ್ಳಿ ಈತನಿಗೆ ಬಲಕಾಲು ಹೆಬ್ಬರಳಿಗೆ ಮತ್ತು ಎಡಕಾಲು ಕಿರುಬೆರಳಿಗೆ ರಕ್ತಗಾಯ ಆಗಿದ್ದು ಇರುತ್ತದೆ. ಮತ್ತು ಟಂಟಂ ಆಟೋದಲ್ಲಿ ಕುಳಿತ ರೆಣುಕಾ ಗಂಡ ಲಕ್ಷ್ಮಣ, ಅಂಬೊಜಿ ತಂದೆ ಮಾನಶಪ್ಪ, ಲಕ್ಷ್ಮಣ ತಂದೆ ಮಾನಪ್ಪ ಎಲ್ಲರಿಗೂ ಅಲ್ಲಲ್ಲಿ ತರಚಿದ ರಕ್ತಗಾಯ, ಹಾಗೂ ಒಳಪೆಟ್ಟು ಆಗಿರುತ್ತವೆ. ಸದರಿ ಮೃತಪಟ್ಟ ಪಲ್ಸರ ಮೋಟಾರ ಸೈಕಲ್ ನಂಬರ ನೋಡಲಾಗಿ ಸದರಿ ಮೊಟಾರ ಸೈಕಲ ಹೊಸದು ಇದ್ದು ಯಾವುದೆ ನಂಬರ ಇರುವುದಿಲ್ಲ. ಸದರಿ ಮೃತಪಟ್ಟ ವ್ಯಕ್ತಿಯು ಹೆಸರು ತಿಳಿಯಲಾಗಿ ಆತನ ಹೆಸರು ನಿಂಗಪ್ಪ ತಂದೆ ಶಿವಾನಂದ ಕೊಪ್ಪದ ಸಾ: ಸೀಮಿಕೆರಿ ತಾ: ಬೀಳಗಿ ಜಿಲ್ಲಾ: ಬಾಗಲಕೊಟ ಅಂತಾ ಗೊತ್ತಾಗಿರುತ್ತದೆ. ಟಂಟಂ ಆಟೋದಲ್ಲಿ ಕುಳಿತ ರೆಣುಕಾ, ಅಂಬೊಜಿ ಹಾಗೂ ಲಕ್ಷ್ಮಣ ಇವರೆಲ್ಲರೂ ಅಷ್ಟೇನು ಗಾಯಾಗಳು ಆಗದೇ ಇರುವುದರಿಂದ ಯಾವುದೇ ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ಸದರಿ ಟಂಟಂ ಆಟೊ ಚಾಲಕನು ತನ್ನ ಟಂಟಂ ಆಟೋವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಆತನಿಗೂ ಸಹ ಸಣ್ಣ ಪುಟ್ಟ ತರಚಿದ ರಕ್ತಗಾಯ ಆಗಿರುತ್ತವೆ. ನಾನು ಮತ್ತು ಪ್ರಶಾಂತ ಅಣಜಿ ಇಬ್ಬರೂ ಕೆಂಭಾವಿ ಖಾಸಗಿ ಆಸ್ಪತ್ರೆಗೆ ಉಪಚಾರ ಪಡೆದುಕೊಂಡು ಠಾಣೆಗೆ ಬಂದು ಈ ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಸದರಿ ಅಪಘಾತವಾದಾಗ ಅಂದಾಜು ಸಮಯ ರಾತ್ರಿ 10 ಗಂಟೆ ಆಗಿತ್ತು. ಕಾರಣ ಟಂಟಂ ಆಟೋ ನೇದ್ದರ ಚಾಲನು ತನ್ನ ಟಂಟಂ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆ ಬರುತ್ತಿದ್ದ ಪಲ್ಸರ ಮೊಟಾರ ಸೈಕಲ್ ನೇದ್ದಕ್ಕೆ ಅಪಘಾತಪಡಿಸಿ ನಿಂಗಪ್ಪ ತಂದೆ ಶಿವಾನಂದ ಕೊಪ್ಪದ ಈತನ ಸಾವಿಗೆ ಕಾರಣನಾದ ರವಿ ತಂದೆ ನಾಗಪ್ಪ ನಾಟೇಕಾರ ಸಾ; ಗೋಗಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ವಿನಂತಿ ಅಜರ್ಿ ಇರುತ್ತದೆ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 31/2020 ಕಲಂ: 279, 337, 338, 304 (ಎ) ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 05/2020 ಕಲಂ: 110 (ಇ)&(ಜಿ) ಸಿ.ಆರ್.ಪಿ.ಸಿ:-
ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಶರಣಪ್ಪ ಹವಲ್ದಾರ ಪಿ.ಎಸ್.ಐ (ಅ&ವಿ) ಸುರಪೂರ ಪೊಲೀಸ ಠಾಣೆ, ಸರಕಾರಿ ತಪರ್ೆ ಫಿರ್ಯಾದಿ ಏನೆಂದರೆ, ಇಂದು ದಿನಾಂಕ: 14/02/2020 ರಂದು 2 ಪಿ.ಎಂ. ಸುಮಾರಿಗೆ ನಾನು ಠಾಣೆಯ ಶ್ರೀ ಸೋಮಯ್ಯಾ ಸಿಪಿಸಿ-235 ಇವನನ್ನು ಸಂಗಡ ಕರೆದುಕೊಂಡು ಸುರಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಾ ಕಬಾಡಗೇರಾ ಏರಿಯಾದ ಹತ್ತಿರ 3-30 ಪಿ.ಎಂ. ಸುಮಾರಿಗೆ ಕಬಾಡಗೇರಾ ಕಡ್ಲೆಪ್ಪ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಎದುರುದಾರನು ರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ಯುತ್ತಾ, ಅಸಭ್ಯವಾಗಿ ವತರ್ಿಸುತ್ತಾ, ಕೈಯಲ್ಲಿ ಕಲ್ಲು ಹಿಡಿದುಕೊಂಡು ಇವತ್ತು ಧಮ್ಮಿದರೆ ನನ್ನ ಹತ್ತಿರ ಬನ್ನಿ ಅಂತಾ ಅನ್ನುತ್ತಾ ಹೋಗಿ ಬರುವ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಾ ಗುಂಡಾ ಗೀರಿ ಪ್ರದರ್ಶನ ಮಾಡುತ್ತಾ ಹೋಗಿ ಬರುವ ಸಾರ್ವಜನಿಕರೊಂದಿಗೆ ಕಿರಕಿರಿ ಮಾಡುತ್ತಿದ್ದು ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ ಸದರಿಯವನನ್ನು ಸ್ಥಳದಲ್ಲಿಯೇ ವಶಕ್ಕೆ ತಗೆದುಕೊಂಡು ಠಾಣೆಗೆ ತಂದಿದ್ದು ಇರುತ್ತದೆ. ಸದರಿಯವನು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದ್ದಿದ್ದರಿಂದ ಅವನ ವಿರುದ್ಧ ಮುಂಜಕಾಗೃತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸುವ ಕುರಿತು ಸರಕಾರದ ತಪರ್ೆಯಾಗಿ ಠಾಣೆ ಪಿ.ಎ.ಆರ್ ನಂ. 05/2020 ಕಲಂ 110 (ಇ)&(ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:-.18/2020 ಮಹಿಳೆ ಕಾಣೆಯಾದ ಬಗ್ಗೆ :- ದಿನಾಂಕಃ 14/02/2020 ರಂದು 10.00 ಎ.ಎಂ ಗಂಟೆಗೆ ಪಿಯರ್ಾದಿ ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಕೊಟ್ಟಿದ್ದು ಏನೆಂದರೆ, ನಾನು ಮತ್ತು ನನ್ನ ಮಗಳು ಚೈತ್ರಾ ಇಬ್ಬರೂ ಹುಣಸಗಿಯಲ್ಲಿ ನಮ್ಮ ಅಕ್ಕ ಮೀನಾಕ್ಷಿ ಆಂದೇಲಿ ಇವರ ಮನೆಯಲ್ಲಿದ್ದು, ದಿನಾಂಕ:23/01/2020 ರಂದು ನಾನು ಮತ್ತು ನನ್ನ ಮಗಳು ರಾತ್ರಿ ಮಲಗಿಕೊಂಡಿದ್ದ, ದಿನಾಂಕ:24/01/2020 ರಂದು ಬೆಳಿಗ್ಗೆ ಎದ್ದು ನೋಡಲು ನನ್ನ ಮಗಳು ಚೈತ್ರಾ ಕಾಣಲಿಲ್ಲಾ ಮನೆಯಿಂದಾ ಹೋಗಿದ್ದಳು, ಚೈತ್ರಾ ಇವಳು ದಿ:23/01/2020 ರಂದು ರಾತ್ರಿ 11.00 ಗಂಟೆಯಿಂದಾ ದಿ:24/01/2020 ರಂದು ಬೆಳಗಿನ ಜಾವ 05.00 ಗಂಟೆಯ ಮದ್ಯದಲ್ಲಿ ನಮ್ಮಕ್ಕ ಮೀನಾಕ್ಷಿ ಇವರ ಮನೆಯಿಂದಾ ಹೋಗಿ ಕಾಣೆಯಾಗಿದ್ದು ಇದುವರಗೆ ನಮ್ಮ ಸಂಭಂಧಿಕರ ಊರು ಹಾಗೂ ಇನ್ನಿತರ ಕಡೆಗಳಲ್ಲಿ ಹುಡುಕಾಡಿದರು ಸಿಕ್ಕಿರುವದಿಲ್ಲಾ ಅಂತಾ ಇಂದು ಠಾಣೆಗೆ ತಡವಾಗಿ ಬಂದು ದೂರು ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 46/2019.ಕಲಂ 279.337. ಐ.ಪಿ.ಸಿ.:- ಇಂದು ದಿನಾಂಕ 14/02/2020 ರಂದು ರಾಯಚೂರ ರಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ನಾನು ಬೆಳಿಗ್ಗೆ 9-00 ಗಂಟೆಗೆ ಎಂ.ಎಲ್.ಸಿ. ಕುರಿತು ಹೋರಟು, ರಾಯಚೂರಿನ ರೀಮ್ಸ ಆಸ್ಪತ್ರೆಗೆ ಹೋಗಿ ಗಾಯಾಳುದಾರನಾದ ಶ್ರೀ ಭೀಮಣ್ಣ ತಂದೆ ಶಾಂತಪ್ಪ ಚವ್ಹಾಣ ವ|| 40 ಜಾ|| ಲಮಾಣಿ ಉ|| ಗೌಂಡಿ ಕೆಲಸ ಸಾ|| ಸಾಸಿವಿಗೇರಾ ತಾ|| ದೇವದುಗರ್ಾ ಇವರ ಹೇಳಿಕೆಯನ್ನು ಮದ್ಯಾಹ್ನ 13-00 ಗಂಟೆಯಿಂದ 14-00 ಗಂಟೆಯವೆಗೆ ಪಡೆದುಕೊಂಡು ಮರಳಿ ಠಾಣೆಗೆ 18-00 ಗಂಟೆಗೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ ನಮ್ಮೂರಿನಲ್ಲಿ ನಮ್ಮ ಸಂಬಂದಿಕರ ಮದುವೆ ಇದ್ದ ಪ್ರಯುಕ್ತ ನಮ್ಮ ಊರಿಗೆ ಸುಮಾರು 3-4 ದಿನಗಳ ಹಿಂದೆ ಬಂದಿರುತ್ತೆನೆ. ಹೀಗಿದ್ದು ನನ್ನ ತಾಯಿಯಾದ ಹೋನ್ನಮ್ಮ ಗಂಡ ಶಾಂತಪ್ಪ ಇಕೆಗೆ ಕಿಡ್ನಿ ಸಮಸ್ಯ ಇದ್ದುದ್ದರಿಂದ ಉಪಚಾರ ಕುರಿತು ಕಲಬುರಗಿಗೆ ಹೋಗುವ ಸಲುವಾಗಿ ನಾನು ಮತ್ತು ನನ್ನ ಹೆಂಡತಿಯಾದ ಗೋಪಮ್ಮ, ನನ್ನ ತಾಯಿ ಹೋನ್ನಮ್ಮ, ನನ್ನ ತಮ್ಮನಾದ ಅಂಬ್ರೀಷ, ನಾಲ್ಕು ಜನ ಕುಡಿಕೊಂಡು ನಮ್ಮ ಸಂಬಂದಿಕರ ವಾಹನ ನಂಬರ ಎಂಎಚ್-12ಎಲ್ಜೆ-4194 ಎರಿಟಿಗಾ ವಾಹನದ್ಲಲಿ ನಮ್ಮ ಸ್ವತ: ಗ್ರಾಮವಾದ ಸಾಸಿವಿಗೇರಾದಿಂದ ಕುಳಿತುಕೊಂಡು ಸದರಿ ವಾಯಹನವು ನನ್ನ ತಮ್ಮನಾದ ಅಂಬ್ರೀಷ ಈತನು ಚಾಲಾಯಿಸುತ್ತಿದ್ದನು. ನಮ್ಮ ಮನೆ ಬಿಟ್ಟಾಗ ದಿನಾಂಕ 13/02/2020 ರಂದು 12-00 ಗಂಟೆಯಾಗಿತ್ತು. ದೇವದುಗರ್ಾದಲ್ಲಿ ಸ್ವಲ್ಪ ಸಮಯ ನಿಂತ್ತಿದ್ದೆವು, ನಂತರ ಗುಲ್ಬಗರ್ಾಕ್ಕೆ ಹೋಗಬೆಕೆಂದುಕೊಂಡು ಗುಲ್ಬಗರ್ಾಕ್ಕೆ ಹೋಗುವ ಮಾರ್ಗ ಮದ್ಯ ಹತ್ತಿಗುಡೂರ ಗ್ರಾಮ ದಾಟಿ ಮುಂದೆ 1 1/2 ಕಿ,ಮೀ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎಡಗಡೆಯಿಂದ ಒಂದು ನಾಯಿ ಒಮ್ಮಿಂದೋಮ್ಮಲೆ ರಸ್ತೆಯ ಮೇಲೆ ಬಂದಾಗ ನಾವು ಹೋಗುತ್ತಿದ್ದ ವಾಹನವನ್ನು ಬ್ರೇಕ ಹಾಕಿ ಸ್ವಲ್ಪ ಬಲಗಡೆ ತಿರುಗಿಸಿದಾಗ ನಮ್ಮ ವಾಹನವು ರಸ್ತೆಯ ಬದಿಗೆ ಹಾಕಿದ ಕಲ್ಲಿಗೆ ಡಿಕ್ಕಿ ಹೋಡೆದು ನಮ್ಮ ವಾಹನವು ಪಲ್ಟಿ ಹೋಡೆದು ರಸ್ತಯ ಬಲದಿಯ ಕೆಳಗಡೆ ಬಿದ್ದಿದ್ದರಿಂದ ವಾಹನವು ನುಜ್ಜು ಗಜ್ಜು ವಾಯಿತು, ಅದರಲ್ಲಿ ಕುಳಿತ್ತಿದ್ದ ನನಗೆ ಬೆನ್ನಿಗೆ ಒಳಪೆಟ್ಟು ಮತು ಎಡಗಣ್ಣಿಗೆ ಒಳಪೆಟ್ಟಾಯಿತು, ಮತ್ತು ನನ್ನ ಹೆಂಡತಿಯಾದ ಗೋಪಮ್ಮ ಇಕೆಗೆ ಬೆನ್ನಿಗೆ ಒಳಪೆಟ್ಟು, ಕುತ್ತಿಗೆಗೆ ಒಳಪೆಟ್ಟು ಮತ್ತು ಸೊಂಟದ ಕೆಳಗಡೆ ಒಳಪೆಟ್ಟಾಗಿದ್ದು ಮತ್ತು ನನ್ನ ತಾಯಿಯಾದ ಹೋನ್ನಮ್ಮ ಇಕೆಗೆ ಎಡ ಮೋಣಕಾಳಿಗೆ ರಕ್ತಗಾಯ, ಬಲಕಿವಿಯ ಮೇಲೆ ರಕ್ತಗಾಯ, ಬಲಬುಜಕ್ಕೆ ಒಳಪೆಟ್ಟು, ಪಕ್ಕೆಲುಬಿಗೆ ಒಳಪೆಟ್ಟು, ಬಲಗಣ್ಣಿನ ಮೇಲೆ ತರುಚಿದ ಗಾಯ, ಬಲಗಣ್ಣಿಗೆ ಒಳಪೆಟ್ಟುಯಾಗಿದ್ದು ಮತ್ತು ವಾಹನ ಚಲಾಯಿಸುತ್ತಿದ್ದ ನನ್ನ ತಮ್ಮನಾದ ಅಂಬ್ರೀಷ ಈತನಿಗೆ ಬೆನ್ನಿಗೆ ಒಳಪೆಟ್ಟು ಸೊಂಟಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ, ಉಪಚಾರಕುರಿತು ಒಂದು ಟಂಟಂ ವಾಹನದಲ್ಲಿ ಕುಳಿತು ಸರಕಾರಿ ಆಸ್ಪತ್ರೆ ಶಹಾಪೂರದಲ್ಲಿ ಸೇರಿಕೆಯಾಗಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ಸರಕಾರಿ ಅಂಬುಲೇನ್ಸನಲ್ಲಿ ಕುಳಿತು ರಾಯಚೂರಿನ ರೀಮ್ಸ ಆಸ್ಪತ್ರೆಯಲ್ಲಿ ಸುಮಾರು 7-00 ಗಂಟೆಗೆ ಸೇರಿಕೆಯಾಗಿದ್ದು ಇರುತ್ತದೆ. ಸದರಿ ಘಟನೆಯು ದಿನಾಂಕ 13/02/2020 ರಂದು ಮದ್ಯಾಹ್ನ 1-30 ಗಂಟೆಗೆ ಸುಮಾರಿಗೆ ಜರುಗಿರುತ್ತದೆ. ಕಾರಣ ನಾವು ಕುಳಿತುಕೊಂಡ ವಾಹನದ ಚಾಲಕ ಅತಿವೇಗ ಮತ್ತು ನಿಷ್ಕಾಳಜಿತನದಿಂದ ವಾಹನವನ್ನು ಚಲಾಯಿಸಿದರಿಂದ ಅಪಘಾತವಾಗಿದ್ದು ಸದರಿ ವಾಹನದ ಚಾಲಕನ ವಿರುದ್ದ ಕ್ರಮ ಕೈಗೊಳ್ಳಬೆಕು ಅಂತ ಹೆಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 46/2019 ಕಲಂ 279,337, ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
Hello There!If you like this article Share with your friend using