ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-01-2020
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 24/2020 ಕಲಂ: 78 () ಕೆ.ಪಿ. ಕಾಯ್ದೆ :- 20/01/2020 ರಂದು 3-15 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಶರಣಪ್ಪ ಹವಾಲ್ದಾರ ಪಿ.ಎಸ್.ಐ (ಅ.ವಿ) ಸಾಹೇಬರು ಒಬ್ಬ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ದಿನಾಂಕ:20/01/2020 ರಂದು 01:15 ಪಿ.ಎಮ್. ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪಟ್ಟಣದ ಶ್ರೀ ಗೋಪಾಲಸ್ವಾಮಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ 1) ಶ್ರೀ ಭಾಗಣ್ಣ ಎ.ಎಸ್.ಐ ಸಿಬ್ಬಂದಿಯವರಾದ 2) ಸುಭಾಸ್ ಸಿಪಿಸಿ-174 3) ಪರಮೇಶ ಸಿಪಿಸಿ-142, ಇವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಪರಶುರಾಮ ತಂದೆ ಅಂಬ್ರಪ್ಪ ಬಂಗಾರಿ ವ|| 22 ವರ್ಷ ಜಾ|| ಬೇಡರ ಉ|| ಹಾಸ್ಟೆಲ್ನಲ್ಲಿ ಕುಕ್ಕರ ಕೆಲಸ ಸಾ|| ಖಾನಕೇರಿ ಏರಿಯಾ ಸುರಪುರ 2) ಅಶೋಕ ತಂದೆ ಬಸವರಾಜ ಹಡಪದ ವ|| 39 ವರ್ಷ ಜಾ|| ಹಡಪದ ಉ|| ಕೂಲಿಕೆಲಸ ಸಾ|| ಉದ್ದಾರ ಓಣಿ ಸುರಪುರ ತಾ|| ಸುರಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 01:25 ಪಿ.ಎಮ್ ಕ್ಕೆ ಠಾಣೆಯಿಂದ ಒಂದು ಖಾಸಗಿ ವಾಹನದಲ್ಲಿ ಹೊರಟು 01:45 ಪಿ.ಎಮ್ ಕ್ಕೆ ಶ್ರೀ ಗೋಪಾಲಸ್ವಾಮಿ ಗುಡಿಯ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಶ್ರೀ ಗೋಪಾಲಸ್ವಾಮಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 01:50 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಗುರುಪಾದಪ್ಪ @ ಗುರು ತಂದೆ ಮಲ್ಲಪ್ಪ ಗೋಗಿ ಜಾ:ನಾಯಿಂದ (ಹಡಪದ) ವಯಾ:25 ವರ್ಷ ಉ:ಡ್ರೈವರ ಸಾ:ಕಬಾಡಗೇರಿ ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1100=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 01:50 ಪಿ.ಎಮ್ ದಿಂದ 02:50 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರು ಪಡಿಸಿ ಆದೇಶ ನೀಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 2020 ಕಲಂ.279, 304(ಎ) ಐಪಿಸಿ & 187 ಐಎಂವಿ:- ದಿನಾಂಕ:20/01/2020 ರಂದು 14.10 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿಸಿದ ದೂರು ಕೊಟ್ಟಿದ್ದೇನೆಂದರೆ, ಇಂದು ದಿನಾಂಕ:20/01/2020 ರಂದು ನಮ್ಮ ತಮ್ಮನಾದ ಹಣಮಂತ ಹಾಗೂ ಅವನ ಗೆಳೆಯ ಇಬ್ಬರೂ ಹಣಮಂತನ ಮೋಟಾರ್ ಸೈಕಲ್ ನಂ. ಕೆಎ-33 ವಾಯ್-1280 ನೇದ್ದರ ಮೇಲೆ ಹುಣಸಗಿಗೆ ಹೊರಟಾಗ ಕುಪ್ಪಿ ಕ್ರಾಸ್ ದಾಟಿ ಒಂದು ಕಾರ್ ಚಾಲಕ ಹಣಮಂತನ ಮೋಟಾರ್ ಸೈಕಲಗೆ ಅಪಘಾತ ಮಾಡಿದ್ದರಿಂದಾ ಅಪಘಾತದಲ್ಲಿ ಹಣಮಂತ ಮತ್ತು ಸಾಯಿಬಣ್ಣ ಇಬ್ಬರಿಗೂ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಅಪಘಾತ ಮಾಡಿದ ಕಾರ ಚಾಲಕ ವಾಹನದೊಂದಿಗೆ ಓಡಿ ಹೋಗಿದ್ದು ಇರುತ್ತದೆ. ಅಂತಾ ಟೈಪ್ ಮಾಡಿಸಿದ ದೂರಿನ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ.10/2020 ಕಲಂ. 32 34 ಕನರ್ಾಟಕ ಅಭಕಾರಿ ಕಾಯ್ದೆ:- ದಿನಾಂಕ:20/01/2020 ರಂದು 16.10 ಗಂಟೆಯ ಸುಮಾರಿಗೆ ಆರೋಪಿತನು ಹೆಬ್ಬಾಳ ಕೆ ಗ್ರಾಮದ ಕ್ರಾಸ್ ಹತ್ತಿರ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾಗ ಖಚಿತ ಬಾತ್ಮಿ ಬಂದ ಮೇರೆಗೆ ಪಿಯರ್ಾದಿ ಹಾಗೂ ಸಿಬ್ಬಂದಿಯಾದ ಹೆಚ್.ಸಿ-07, 10 ರವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಿದ್ದು ದಾಳಿ ಕಾಲಕ್ಕೆ ಆರೋಪಿತನು ಓಡಿಹೋಗಿದ್ದು ನಂತರ ಪಂಚರ ಸಮಕ್ಷಮದಲ್ಲಿ ಆರೋಪಿತನು ಮಾರಾಟ ಮಾಡುತ್ತಿದ್ದ 1) 180 ಎಂ.ಎಲ್.ದ ಓಟಿ ವಿಸ್ಕಿ ಡಬ್ಬಿಗಳು 18 ಒಂದರ ಬೆಲೆ 74.13 ರೂ ಒಟ್ಟು 1334.34 ರೂ 2) ಬಿಪಿ ವಿಸ್ಕಿ ಡಬ್ಬಿಗಳು 180 ಎಂ.ಎಲ್ದು 16 ಇದ್ದು ಒಂದರ ಬೆಲೆ 9.21 ರೂ ಒಟ್ಟು 1443.36 ರೂ 3) 90 ಎಂ.ಎಲ್ದ ಎಂಸಿ ರಮ್ ಡಬ್ಬಿಗಳು 12 ಇದ್ದು ಒಂದರ ಬೆಲೆ 45.10 ರೂ ಒಟ್ಟು 541.20 ರೂ 4) ಓರಿಜನಲ್ ಚಾಯ್ಸ್ ವಿಸ್ಕಿ ಡಬ್ಬಿಗಳು 90 ಎಂ.ಎಲ್ದು 53 ಇದ್ದು ಒಂದರ ಬೆಲೆ 30.32 ರೂ ಒಟ್ಟು 1606.96 ರೂ 5) ಒಂದು ರಟ್ಟಿನ ಬಾಕ್ಸನಲ್ಲಿ ಕೆ.ಎಫ್.ಸ್ಟ್ರಾಂಗ ಬೀರ್ 330 ಎಂ.ಎಲ್ ದು 20 ಬಾಟಲಿಗಳು ಇದ್ದು ಒಂದರ ಬೆಲೆ 80.00 ರೂ ಒಟ್ಟು 1600.00 ರೂ 6) ಇನ್ನೊಂದು ರಟ್ಟಿನ ಬಾಕ್ಸನಲ್ಲಿ ಕೆ.ಎಫ್.ಸ್ಟ್ರಾಂಗ ಬೀರ್ 650 ಎಂ.ಎಲ್ ದು 12 ಬಾಟಲಿಗಳು ಇದ್ದು ಒಂದರ ಬೆಲೆ 145.00 ರೂ ಒಟ್ಟು 1740.00 ರೂ ಇದ್ದು ಹೀಗೆ ಒಟ್ಟು 8265.86 ರೂ ಕಿಮ್ಮತ್ತಿನ ಮೌಲ್ಯದ ಸರಾಯಿಯನ್ನು ಜಪ್ತಿ ಮಾಡಿಕೊಂಡು ಸ್ಥಳದಲ್ಲಿ ಪಂಚನಾಮೆ ಬರೆದುಕೊಂಡು ಬಂದಿದ್ದು ಅಂತಾ ಇತ್ಯಾದಿ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಕೊಡೆಕಲ್ ಪೊಲೀಸ್ ಠಾಣೆ ಗುನ್ನೆ ನಂ:- 08/2020 ಕಲಂ: 279 337 338 ಐಪಿಸಿ08/2020 ಕಲಂ: 279 337 338 ಐಪಿಸಿ:-ನಾನು ಎಮ್ಎಲ್ಸಿ ವಿಚಾರಣೆ ಕುರಿತು ಲಿಂಗಸೂರು ಪೊಲೀಸ್ ಠಾಣೆಗೆ ಹೋಗಿ ಗಾಯಾಳುಗಳ ಎಮ್ಎಲ್ಸಿ ಯಾದಿ ಪಡೆದುಕೊಂಡು ನಂತರ ಹರ್ಷವರ್ದನ ಆಸ್ಪತ್ರೆ ಲಿಂಗಸೂರುಕ್ಕೆ ಇಂದು ದಿನಾಂಕ:20.01.2020 ರಂದು 12:30 ಬೇಟಿ ನೀಡಿ ಸದರಿ ಆಸ್ಪತ್ರೆೆಯಲ್ಲಿ ಉಪಚಾರ ಹೊಂದುತ್ತಿರುವ ಗಾಯಾಳು ಶರಣಪ್ಪ ತಂದೆ ಆದಪ್ಪ ಗೋರೆಬಾಳ ವ:28 ವರ್ಷ ಉ: ಒಕ್ಕಲುತನ ಜಾ: ಲಿಂಗಾಯತ ಸಾ: ರಾಜವಾಳ ತಾ: ಹುಣಸಗಿ ಇತನು ಹೇಳಿಕೆಯನ್ನು 12:30 ಪಿಎಮ್ ದಿಂದ 1:30 ಪಿಎಮ್ದ ವರೆಗೆ ಸದರಿ ಆಸ್ಪತ್ರೆಯಲ್ಲಿ ಪಡೆದುಕೊಂಡು ಮರಳಿ ಠಾಣೆ ಈ ದಿವಸ 3:30 ಪಿಎಮ್ ಕ್ಕೆ ಬಂದಿದ್ದು ಆಸ್ಪತ್ರೆಯಲ್ಲಿ ಪಡೆದ ಪಿರ್ಯಾಧಿಯ ಹೇಳಿಕೆಯ ಸಾರಾಂಶವೆನೆಂದರೆ ನಾವು ನಮ್ಮ ಜಮೀನುಗಳಲ್ಲಿ ಬಿತ್ತಿದ ಭತ್ತದ ಬೆಳೆಯ ರಾಶಿಯನ್ನು ಮಾಡಿ. ರಾಜನಕೊಳೂರು ಗ್ರಾಮದ ಹೆಚ್ಸಿ ಪಾಟೀಲ್ ರವರ ಶಂಕರ್ ರೈಸ್ ಮಿಲ್ ಹತ್ತಿರ ಹಾಕಿದ್ದು. ದಿನಾಲು ನಾನು ನಮ್ಮ ಭತ್ತದ ರಾಶಿ ನೋಡಲು ನನ್ನ ಮೋಟರ್ ಸೈಕಲ್ ನಂ ಕೆಎ-28 ಇಎಫ್-2692 ನೇದ್ದರ ಮೇಲೆ ಬಂದು ಹೋಗುತ್ತಿದ್ದು ನಾವು ಭತ್ತವನ್ನ ಮಾರಾಟ ಮಾಡಿದ್ದರಿಂದ ನಿನ್ನೆ ದಿನಾಂಕ:19.01.2020 ರಂದು ಭತ್ತ ಕಾಟ ಮಾಡಲು ಬರುವರಿದ್ದು ಕಾರಣ ನಾನು ಭತ್ತದ ರಾಶಿಯ ಹತ್ತಿರ ನಿನ್ನೆ ಬರುವಾಗ ನನ್ನ ಮೋಟರ್ ಸೈಕಲ್ ಮೇಲೆ ನನ್ನ ಅಣ್ಣಂದಿರ ಮಕ್ಕಳಾದ ಕುಮಾರಿ ಕಾವೇರಿ ತಂದೆ ಅಮರೇಶ ಗೋರೆಬಾಳ ವಯ:7 ವರ್ಷ ಮತ್ತು ಸಿದ್ದು ತಂದೆ ಚನ್ನಪ್ಪ ಗೋರೆಬಾಳ ವಯ:9 ವರ್ಷ ಇವರಿಗೆ ಕ್ಷೌರ ಮಾಡಿಸಲು ಕರೆದುಕೊಂಡು ಬಂದು ಕ್ಷೌರ ಮಾಡಿಸಿದ ನಂತರ ಅವರನ್ನು ಮನೆಗೆ ಕಳಿಸಬೇಕಿತ್ತು ಆದರೆ ಇವರು ಸಣ್ಣ ಮಕ್ಕಳು ಇದ್ದದ್ದರಿಂದ ಮತ್ತೆ ಮೋಟರ್ ಸೈಕಲ್ ಮೇಲೆ ಕೂಡಿಸಿಕೊಂಡು ನಾವು ಭತ್ತ ರಾಶಿ ಹಾಕಿದ ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಗೆ ಹೊಂದಿ ಇರುವ ಹೆಚ್ಸಿ ಪಾಟೀಲ್ ಶಂಕರ ರೈಸ್ ಮಿಲ್ ಕಡೆಗೆ ಹೋಗಲು ನಿನ್ನೆ ದಿನಾಂಕ:19.01.2020 ರಂದು ಮಧ್ಯಹ್ನ 3:00 ಗಂಟೆಯ ಸುಮಾರಿಗೆ ನನ್ನ ಸೈಕಲ್ ಮೋಟರ್ ಮೇಲೆ ರಸ್ತೆಯ ಎಡಮಗ್ಗಲಾಗಿ ಬೋರಕಾ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಎದುರಿನಿಂದ ಹುಣಸಗಿ ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ನನ್ನ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿದ್ದು ಇದರಿಂದಾಗಿ ಮೋಟರ್ ಸೈಕಲ್ ನಡೆಸುತ್ತಿದ್ದ ನಾನು ಮತ್ತು ಹಿಂದೆ ಕುಳಿತ್ತಿದ್ದ ನನ್ನ ಅಣ್ಣಂದಿರ ಮಕ್ಕಳಾದ ಕಾವೇರಿ ಮತ್ತು ಸಿದ್ದು ರವರು ಬಿದ್ದಿದ್ದು ಇದರಿಂದಾಗಿ ನನಗೆ ಬಲಗಾಲು ತೊಡೆಯ ಮೇಲೆ ಮತ್ತು ಬಲಗಾಲು ಮೊಳಕಾಲು ಕೆಳಗೆ ಭಾರಿ ಒಳಪೆಟ್ಟಾಗಿ ಕಂದು ಗಟ್ಟಿದ ನಮೂನೆ ಗಾಯವಾಗಿ ಮುರಿದಿದ್ದು. ಬಲಗೈ ಮುಂಗೈ ಮೇಲೆ ರಕ್ತಗಾಯವಾಗಿದ್ದು ನನ್ನ ಅಣ್ಣನ ಮಗಳು ಕಾವೇರಿ ಇವಳಿಗೆ ಬಲಗಾಲು ಮೋಳಕಾಲು ಕೆಳಗೆ ಭಾರಿ ಒಳಪೆಟ್ಟಾಗಿ ಮುರಿದಂತೆ ಕಾಣಿಸುತ್ತಿದ್ದು ಮತ್ತು ಎಡಗೈ ಮೊಳಕೈಗೆ ತೆರೆಚಿದ ರಕ್ತಗಾಯವಾಗಿದ್ದು. ನನ್ನ ಅಣ್ಣನ ಮಗ ಸಿದ್ದು ಇತನಿಗೆ ಬಲಗಾಲು ತೊಡೆಯ ಮೇಲೆ ರಕ್ತಗಾಯವಾಗಿದ್ದು ಮತ್ತು ಬಲಗಾಲ ಪಾದದ ಹಿಂಬಂಡಿಗೆ ಮತ್ತು ಬೆನ್ನಿನ ಮೇಲೆ ತೆರೆಚಿದ ಗಾಯಗಳಾಗಿದ್ದು.ನನಗೆ ಆದ ಅಪಘಾತವನ್ನು ನೋಡಿ ಅಲ್ಲಿಯೇ ಇದ್ದ ರಾಜನಕೊಳುರು ಗ್ರಾಮದ ಹುಸನಪ್ಪ ತಂದೆ ಬೀಮಪ್ಪ ಹರಿಜನ, ಬಾಲಪ್ಪ ತಂದೆ ನಾಗಪ್ಪ ಕವಳಿಕಂಟಿ ಇವರುಗಳು ಬಂದು ನೋಡಿ ನಮಗೆ ಎಬ್ಬಿಸಿದ್ದು ನಮಗೆ ಅಪಘಾತ ಪಡಿಸಿದ ಕಾರ್ ಚಾಲಕನು ಸ್ವಲ್ಪ ಮುಂದೆ ಹೋಗಿ ಕಾರನ್ನು ನಿಲ್ಲಿಸಿ ನಮ್ಮ ಹತ್ತಿರ ಬಂದು ನಮಗೆ ನೋಡಿದ್ದು ನಾವು ಸದರಿಯವನಿಗೆ ವಿಚಾರಿಸಲಾಗಿ ತನ್ನ ಹೆಸರು ಅಶೋಕರೆಡ್ಡಿ ತಂದೆ ಬಲವಂತರೆಡ್ಡಿ ಲಿಂಗದಳ್ಳಿ ಸಾ: ಹೋತಪೇಟ್ ತಾ: ಶಹಾಪೂರ ಅಂತ ತಿಳಿಸಿದ್ದು. ನಮಗೆ ಅಪಘಾತ ಪಡಿಸಿದ ಕಾರ ನಂಬರ ನೋಡಲಾಗಿ ಕಾರ್ ನಂ:ಕೆಎ-33 ಎಮ್-3954 ಇದ್ದು ನಂತರ ಕಾರ ಚಾಲಕ ಅಶೋಕರೆಡ್ಡಿ ಹಾಗೂ ಅಲ್ಲಿಯೇ ಇದ್ದ ಹುಸನಪ್ಪ ತಂದೆ ಬೀಮಪ್ಪ ಹರಿಜನ, ಬಾಲಪ್ಪ ತಂದೆ ನಾಗಪ್ಪ ಕವಳಿಕಂಟಿ ಇವರುಗಳು ಇದೇ ಕಾರಿನಲ್ಲಿ ನಮಗೆ ಕೂಡಿಸಿಕೊಂಡು ಉಪಚಾರಕ್ಕಾಗಿ ರಾಜನಕೊಳುರು ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ರಾಜನಕೊಳುರು ಆಸ್ಪತ್ರೆಯ ವೈದ್ಯರು ನಮಗೆ ಪ್ರಥಮೋಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಇಲ್ಲಿಗೆ ಹೋಗಲು ತಿಳಿಸಿದ್ದರಿಂದ ಸುದ್ದಿ ತಿಳಿದು ರಾಜನಕೊಳೂರು ಆಸ್ಪತ್ರೆಗೆ ಬಂದಿದ್ದ ನಮ್ಮ ಸಂಬಂಧಿ ಆಮಲಿಂಗಪ್ಪ ತಂದೆ ಅಮರಪ್ಪ ವಠಾರ ಮತ್ತು ಆಶೋಕ ತಂದೆ ಸೋಮನಗೌಡ ಸಾಸನೂರು ರವರು ನಾವು ಮೂರು ಜನರಿಗೆ ನಿನ್ನೆ ದಿನ ಹೆಚ್ಚಿನ ಉಪಚಾರಕ್ಕಾಗಿ ಇಲ್ಲಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನಾವು ಮೂರು ಜನರು ಇನ್ನೂ ಉಪಚಾರ ಹೊಂದುತ್ತಿದ್ದು. ಈ ಅಪಘಾತವು ಕಾರ್ ನಂಬರ್ ಕೆಎ-33 ಎಮ್ 3954 ನೇದ್ದರ ಚಾಲಕ ಅಶೋಕರೆಡ್ಡಿ ಇತನ ನಿರ್ಲಕ್ಷತನದಿಂದಲೇ ಸಂಬವಿಸಿದ್ದು ಅವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:08/2020 ಕಲಂ:279 337 338 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು .
Hello There!If you like this article Share with your friend using