ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-01-2020

By blogger on ಗುರುವಾರ, ಜನವರಿ 9, 2020


                              ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-01-2020 
ಯಾದಗಿರಿ ನಗರ ಪೊಲೀಸ್ ಠಾಣೆ:- ಗುನ್ನೆ ನಂ.08/2020 ಕಲಂ: 392 ಐಪಿಸಿ ;- ದಿನಾಂಕ.09/01/2020 ರಂದು 7-30 ಪಿಎಂಕ್ಕೆ ಶ್ರೀಮತಿ ಪದ್ಮಾವತಿ ಗಂಡ ಚನ್ನಪ್ಪ ಬೊರಡ್ಡಿ ವ;45 ಜಾ; ಲಿಂಗಾಯತ ಉ; ಮನೆಗೆಲಸ ಸಾ; ಹಿರೇ ವಡಗೇರಾ ತಾ; ವಡಗೇರಾ ಹಾ.ವ; ಲಕ್ಷ್ಮೀ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರಪಡಿಸಿದ್ದು ಸಾರಾಂಶವೆನೆಂದರೆ, ನಮ್ಮ ಊರಾದ ಹಿರೇ ವಡಗೇರಾದಲ್ಲಿ ನಾವು ಹೊಸ ಮನೆ ಕಟ್ಟಿಸುತ್ತಿದ್ದರಿಂದ, ಕಳೆದ 3 ತಿಂಗಳಿಂದ ಲಕ್ಷ್ಮೀನಗರದ ಭಾಗಣ್ಣ ದೊರೆ ಸಾ; ಕಂಚಗಾರಹಳ್ಳಿ  ಈತನ ಮನೆಯಲ್ಲಿ ಬಾಡಿಗೆಗೆ ಇದ್ದು ಮನೆಯಲ್ಲಿ ನಾನು, ನನ್ನ ತಾಯಿ ನಾಗರತ್ನಮ್ಮ ಹಾಗೂ ತಮ್ಮ ಲಿಂಗನಗೌಡ ತಂದೆ ಬಸಣಗೌಡ  ವಾಸವಾಗಿರುತ್ತೇವೆ.
         ಹೀಗಿದ್ದು ಇಂದು ದಿನಾಂಕ 09/01/2020 ರಂದು ಮಧ್ಯಾಹ್ನ ನಾನು ಮತ್ತು ನಮ್ಮ ಪರಿಚಯಸ್ಥರಾದ ಸಂಗಮ್ಮ ಗಂಡ ಮಹಾದೇವಪ್ಪಗೌಡ, ಬಸ್ಸಮ್ಮ ಗಂಡ ಚನ್ನಾರೆಡ್ಡಿ ಮೂರು ಜನ ಸೇರಿ ಖಾಸಗಿ ಕೆಲಸದ ಕುರಿತು ಮಾಕರ್ೆಟಿಗೆ  ಹೋಗುವ ಸಲುವಾಗಿ 3-30 ಗಂಟೆ ಸುಮಾರಿಗೆ ಮನೆಯಿಂದ ಹೊರಟು ಲಕ್ಷ್ಮೀನಗರದ, ಲಕ್ಷ್ಮೀದೇವಿ ಗುಡಿಯ ಮುಂದೆ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ, ಬಸವೇಶ್ವರ ನಗರದ ಕಡೆಯಿಂದ ನಮ್ಮ ಎದುರಿಗೆ ಯಾರೋ ಅಪರಿಚಿತರಿಬ್ಬರು ಒಂದು ಮೋಟರ್ ಸೈಕಲ್ ಮೇಲೆ ಬಂದು, ಹಿಂದೆ ಕುಳಿತವನು ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿ ಇದ್ದ 1) ಒಂದು 3 1/2  ತೊಲೆಯ ಬಂಗಾರದ ಸಾದಾ ಚೈನ್ ಅ.ಕಿ. 1,22,500/- 2) ಒಂದು 1 ತೊಲೆಯ ಬಂಗಾರದ ಚೈನ ಕಿತ್ತಿಕೊಂಡಾಗ ನಾನು ಕೆಳಗಡೆ ಬಿದ್ದಿದ್ದು 1 ತೊಲೆಯ ಬಂಗಾರದ ಚೈನದಲ್ಲಿ 1/2 ತೊಲೆ ಬಂಗಾರದ ಚೈನ ನನ್ನ ಕೊರಳಲ್ಲಿ ಉಳಿದಿದ್ದು ಇನ್ನುಳಿದ 1/2 ತೊಲೆಯ ಬಂಗಾರದ ಚೈನ ಅ.ಕಿ.17,500/- ರೂ ನೇದ್ದವುಗಳನ್ನು ತೆಗೆದುಕೊಂಡು ಮೋಟರ್ ಸೈಕಲ್ ಮೇಲೆ ಹೋದರು. ಆಗ ನಾನು ಮತ್ತು ನನ್ನ ಜೊತೆಯಿದ್ದ ಸಂಗಮ್ಮ, ಬಸ್ಸಮ್ಮ 3 ಜನರು ಕೂಡಿಕೊಂಡು ಕಳ್ಳ, ಕಳ್ಳ ಹಿಡಿರಿ ಅಂತಾ ಕೂಗುತ್ತಾ ಬೆನ್ನತ್ತಿ ಹಿಂದೆ ಓಡಿದರು ಅವರು ಸಿಗಲಿಲ್ಲ. ನಂತರ ನಾವು ಮನೆಗೆ ಬಂದು ನನ್ನ ತಾಯಿ ಮತ್ತು ತಮ್ಮ ಲಿಂಗನಗೌಡ ಇವರಿಗೆ ತಿಳಿಸಿದೆನು. ಆಗ ಎಲ್ಲರು ಕಳ್ಳತನ ಮಾಡಿದವರ ಬಗ್ಗೆ ವಿಚಾರಿಸಿ, ಎಲ್ಲಾ ಕಡೆ ಹುಡುಕಾಡಿದರೂ ಅವರು ಸಿಗಲಿಲ್ಲ. ಮೋಟರ್ ಸೈಕಲ್ ನಡೆಸುವವನು, ಹೆಲ್ಮೇಟ್ ಹಾಕಿದ್ದು ಪ್ಯಾಂಟ ಶರ್ಟ ಧರಿಸಿದ್ದು, ಹಿಂದೆ ಕುಳಿತವನು ಕೂಡಾ ಪ್ಯಾಂಟ ಶಟರ್್ ಧರಿಸಿದ್ದು, ಇಬ್ಬರು ಸಾದಾರಣ ಮೈಕಟ್ಟು ಹೊಂದಿದ್ದು ಮೋಟರ್ ಸೈಕಲ್ಗೆ ನಂಬರ ಇರಲಿಲ್ಲ. ಮುಂದೆ ನೋಡಿದಲ್ಲಿ ಅವರನ್ನು ಗುತರ್ಿಸುತ್ತೇನೆ.    
        ಕಾರಣ ಇಂದು ದಿನಾಂಕ 09/01/2020 ರಂದು ಮಧ್ಯಾಹ್ನ 3-30 ಗಂಟೆಯಿಂದ 3-45 ಗಂಟೆಯ ಅವಧಿಯಲ್ಲಿ ಖಾಸಗಿ ಕೆಲಸದ ಮೇರೆಗೆ ನಾವು ಮಾಕರ್ೆಟಿಗೆ ಲಕ್ಷ್ಮೀ ನಗರದ  ಲಕ್ಷ್ಮೀ ದೇವಿಯ ಗುಡಿಯ ಮುಂದುಗಡೆ ರೋಡಿನ ಮೇಲೆ ಹೋಗುತ್ತಿರುವಾಗ ಯಾರೋ ಇಬ್ಬರು ಮೋಟರ್ ಸೈಕಲ್ ಮೇಲೆ ಎದುರುಗಡೆಯಿಂದ ಬಂದು ನನ್ನ ಕೊರಳಿನಲ್ಲಿದ್ದ 1) ಒಂದು 3 1/2  ತೊಲೆಯ ಬಂಗಾರದ ಸಾದಾ ಚೈನ್ ಅ.ಕಿ. 1,22,500/- 2) ಒಂದು 1/2 ತೊಲೆಯ ಬಂಗಾರದ ಚೈನ್ ಅ.ಕಿ.17,500/- ರೂ. ಒಟ್ಟು  4 ತೊಲೆಯ ಬಂಗಾರದ ಚೈನಗಳು ಅ.ಕಿ. 1,40,000/- ರೂ. ಕಿತ್ತುಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.08/2020 ಕಲಂ.392 ಐಪಿಸಿ ಅಡಿಯಲ್ಲಿ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ. ಗುನ್ನೆ ನಂ:- 08/2020.ಕಲಂ, 323,324,354,504,506ಸಂ,149. ಐ.ಪಿ.ಸಿ.;- ದಿನಾಂಕ 09/01/2020 ರಂದು 13-00 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಸಿಬ್ಬಂದಿಯಾದ ರಾಮಣ್ಣ ಪಿ.ಸಿ. 424 ರವರು ಕೋರ್ಟ ಕರ್ತವ್ಯದಿಂದ ಠಾಣೆಗೆ ಬಂದು ಪಿಯರ್ಾದಿ ಶ್ರೀ ಮಲ್ಲಪ್ಪ ತಂದೆ ಅಂಬ್ಲಪ್ಪ ಉಮರದೊಡ್ಡಿ ವ|| 60 ಉ|| ಒಕ್ಕಲುತನ ಸಾ|| ತಿಪನಳ್ಳಿ ತಾ|| ಶಹಾಪೂರ ಇವರು ಮಾನ್ಯ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ ಶಹಾಪೂರ ರವರಲ್ಲಿ ಕನ್ನಡದಲ್ಲಿ ಸಲ್ಲಿಸಿದ ಖಾಸಗಿ ದೂರು ಸಂಖ್ಯೆ 01/2020 ನ್ನೇದ್ದನ್ನು ತಂದು ಹಾಜರ ಪಡಿಸಿದ್ದ ಸಾರಾಂಶ ವೆನೆಂದರೆ.ಪಿಯರ್ಾದಿದಾರನ ಮಗನ ಮದುವೆಯ ವಿಷಯವಾಗಿ ಹಲವು ತಿಂಗಳಿಂದ ವೈಷಮ್ಯ ಉಂಟಾಗಿದ್ದು ಇರುತ್ತದೆ. ದಿನಾಂಕ 29/12/2019 ರಂದು ಬೆಳಿಗ್ಗೆ 8 ಸುಮಾರಿಗೆ ಪಿಯರ್ಾದಿದಾರನು ತನ್ನ ಮನೆಯ ಮುಂದೆ ಹೆಂಡತಿ ಭೀಮಬಾಯಿ ಜೋತೆ ಮಾತನಾಡುತ್ತಾ ಕುಳಿತುಕೊಂಡಿದ್ದಾಗ ಅಲ್ಲಿಗೆ ಆರೋಪಿಗಳಾದ 1 ರಿಂದ 7 ಆಗಮಿಸಿ ಲೇ ಬೋಸಡಿ ಮಗನೆ ಮಲ್ಲ್ಯಾ ನಿನ್ನ ಹೆಂಡತಿ ಜೋತೆ ಏನು ಮಾತನಾಡುತ್ತಾ ಕುಳಿತು ಕೊಂಡಿರುವೆ. ಸೊಕ್ಕು ಬಾಳಾ ಆಗ್ಯಾದ. ನಾನು ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವೆ. ನನಗೆ ಯಾರು ಏನು ಮಾಡುವದಿಲ್ಲ ಅಂತ ಆರೋಪಿ ನಂ 1 ಅವರು ಪಿಯರ್ಾದಿದಾರನಿಗೆ ಕಪಾಳಕ್ಕೆ ಹೊಡೆದ. ಆಗ ಪಿರ್ಯದಿದಾರನ ಹೆಂಡತಿ ಭಿಮಬಾಯಿ ಜಗಳ ಬಿಡಿಸಲು ಬಂದಾಗ ಆರೋಪಿ ನಂಬರ 1 ಅವರು ಪಿಯರ್ಾದಿದಾರನಿಗೆ ಕಪಾಳಕ್ಕೆ  ಹೋಡೆದ. ಆಗ ಪಿಯರ್ಾದಿದಾರನ ಹೆಂಡತಿ ಭಿಮಬಾಯಿ ಜಗಳ ಬಿಡಿಸಲು ಬಂದಾಗ ಆರೋಪಿ ನಂ 1 ಅವರು ಭಿಮಾಬಾಯಿಯ ಸೀರೆ ಸೇರಗು ಹಿಡಿದು ಜಗ್ಗ್ಯಾಡಿ. ತಲೆಯ ಕುದಲು ಹಿಡಿದು ಜಗ್ಗ್ಯಾಡಿ ಮಾನಬಂಗಕ್ಕೆ ಯತ್ನಿಸಿದ. ಆಗ ಆರೋಪಿ ನಂ 2 ಅವರು ಪಿಯರ್ಾದಿದಾರನ ಬೆನ್ನಿಗೆ ಹೋಡೆದರು. ಆರೋಪಿ ನಂ 4 ಅವರು ಪಿಯರ್ಾದಿದಾರನನ್ನು ಕೆಡವಿ ಹಾಕಿ ಕಾಲಿನಿಂದ ಒದ್ದರು ಆರೋಪಿ ನಂ 5 ಅವರು ಪಿಯರ್ಾದಿದಾರನ ತೊಡೆಗೆ ಒದ್ದರು ಆರೋಪಿ ನಂ 6 ಮತ್ತು 7 ಅವರು ಪಿಯರ್ಾದಿದಾರನ ಸೊಂಟಕ್ಕೆ ಮತ್ತು ಹೊಟ್ಟೆಗೆ ಗುದ್ದಿ ಗುಪ್ತಗಾಯ ಪಡಿಸಿದರು. ಆಗ ಮನೆಯ ಮುಂದೆ ನಿಂತಿದ್ದ ಸಾಕ್ಷಿದಾರರು ಜಗಳ ಬಿಡಿಸಿ ಸಮಾದಾನ ಪಡಿಸಿದರು.
     ಆಗ ಆರೋಪಿ ನಂ 3 ಅವರು ಲೇ ಸೂಳಿ ಬೀಮಿ ನಮ್ಮ ಮುಂದೆ ಸೊಕ್ಕು ತೋರಿಸಿ ಮೈಮುರಿಸಿಕೊಳ್ಳಬ್ಯಾಡ ನಮ್ಮ ಅಪ್ಪ ನ್ಯಾಯಾಂಗ ಇಲಾಕೆಯಲ್ಲಿ ಕೆಲಸ ಮಾಡುತ್ತಾನಾ ಮಗಳೆ ನಾವು ನಿಮಗೆ ಎಲ್ಲಿ ಬೆಕಾದರ ಹಾಕಿ ಒದ್ದು ತಾರಿಸಿಕೊಳ್ಳುವ ತಾಕತ್ತು ನಮಗೆ ಇದೆ ಎಂದು ಗದರಿಸಿದರು. ಆಗ ಆರೋಪಿಗಳಾದ 1. 2. ಮತ್ತು 4 ರಿಂದ 7 ಅವರು ಇವತ್ತು ನಿಮ್ಮ ದೈವ ಚೋಲೊ ಆದ ಸಾಕ್ಷಿದಾರರು ಬಂದು ಜಗಳ ಬಿಡಿಸ್ಯಾರ ಅಂತ ನಿಮ್ಮಜೀವ ಉಳದಾದ ಇಲ್ಲಾ ಅಂದರ ನಿನ್ನ ಹೆಂಡತಿಗಿ ಮತ್ತು ನಿನಗೆ ಪೇಟ್ರೋಲ್ ಹಾಕಿ ಸುಡ್ತವಿ ಎಂದು ಆರೋಪಿಗಳಾದ 1 ರಿಂದ 7 ಅವರು ಪಿಯರ್ಾದಿದಾರನಿಗೆ ಮತ್ತು ಅವನ ಹೆಂಡತಿಗೆ ಜೀವ ಬೆದರಿಕೆ ಹಾಕಿದರು ಅಂತ ಇತ್ಯಾದಿ ಖಾಸಗಿ ಪಿಯರ್ಾದಿ ಇದ್ದು. ಸದರಿ ಖಾಸಗಿ ಪಿಯರ್ಾದಿ ಆಧಾರದ ಮೇಲೆ ಆರೋಪಿತರ ವಿರುದ್ದ ಗುನ್ನೆ ನಂ 08/2020 ಕಲಂ 323. 324. 354. 504. 506. ಸಂ.149 ಐ.ಪಿ.ಸಿ. ನ್ನೇದ್ದರಲ್ಲಿ  ಪ್ರಕರಣದಾಖಲಿಸಿಕೊಂಡು ತನಿಕೆ ಕೈಕೊಂಡೆನು.   

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 09/2020. ಕಲಂ 378, 383, 323, 324, 354, 503,504,506 ಐ.ಪಿ.ಸಿ.;- ದಿನಾಂಕ: 09-01-2020 ರಂದು 5:30 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ ರಾಮಣ್ಣ ಪಿ.ಸಿ. 424 ರವರು ಕೋರ್ಟ ಕತವ್ಯದಿಂದ ಠಾಣೆಗೆ ಬಂದು ಒಂದು ಖಾಸಗಿ ಧಾವೆ ನಂ.02/2020 ನೇದ್ದನ್ನು ತಂದು ಹಾಜರು ಪಡಿಸಿದ್ದರ ಸಾರಾಂಶವೇನಮದರೆ ಫಿಯರ್ಾದಿ ಶ್ರೀಮತಿ ಬಿಯಮ್ಮ ಗಂಡ ರಾಜಾಸಾಬ ಸೈಯದ ವಯ: 40 ವರ್ಷ ಜಾ: ಮುಸ್ಲೀಂ ಉ: ಒಕ್ಕಲುತನ ಸಾ: ಪರಸಾಪೂರ ತಾ: ಶಹಾಪೂರ ಇವರ ಬೀರನೂರ ಸೀಮಾಂತರದ ಹೊಲ ಸವರ್ೆ ನಂ. 71/3/2 ರ 3 ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ಬೆಳೆದಿದ್ದು  ಅವರ ಪಕ್ಕದ ಹೊಲದವರಾದ ಆರೋಪಿತರಾದ 1) ಮರೆಮ್ಮ ಗಂಡ ಯಂಕಪ್ಪ ಕೊಳ್ಳೂರ 2) ಮೌನೇಶ ತಂದೆ ಯಂಕಪ್ಪ ಕೊಳ್ಳುರ ಮತ್ತು 3) ಹನಮಂತ ತಂದೆ ಯಂಕಪ್ಪ ಕೊಳ್ಳೂರ ಸಾ: ಬೀರನೂರ ಇವರು ಕೂಡಿಕೊಂಡು ದಿನಾಂಕ: 10-12-2019 ರಂದು 10:00 ಎ.ಎಮ್.ಕ್ಕೆ ಫಿಯರ್ಾದಿದಾರರ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ  ಹತ್ತಿ ಬೆಳೆಯನ್ನು ಬಿಡಿಸಿಕೊಂಡಿದ್ದು ಅದಕ್ಕೆ ಫಿಯರ್ಾದಿದಾರರು ತಡೆದರೆ ಅವಾಚ್ಯ ಶಬ್ದಗಳಿಂದ ಬೈದು ಅವಳನ್ನು ದಬ್ಬಿ ಬಡಿಗೆಯಿಂದ ಹೊಡೆದು ಅವಮಾನ ಮಾಡಿ ಮುಖಕ್ಕೆ ಹೊಡೆದಿದ್ದು ಅಲ್ಲದೇ ಮತ್ತು ಜೀವದ ಬೆದರಿಕೆ ಹಾಕಿರುತ್ತಾರೆ  ಅಂತಾ ಇತ್ಯಾದಿ ಇದ್ದ ಖಾಸಗಿ ಧಾವೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.09/2020 ಕಲಂ.378, 383, 323, 324, 354, 503, 504,506 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.           

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 10/2020.ಕಲಂಃ 78(3) ಕೆ.ಪಿ.ಆ್ಯಕ್ಟ;- ದಿನಾಂಕ 09/01/2020 ರಂದು 18-00 ಗಂಟೆಗೆ ಸ|| ತ|| ಪಿಯರ್ಾದಿ ವೆಂಕಣ್ಣ ಎ.ಎಸ್.ಐ. ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 09/01/2020 ರಂದು 15-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಪಾಲ್ಕಮ್ಮ ದೇವಿ ಗುಡಿಯ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ ಅಂತ ಮಾಹಿತಿ ಬಂದಮೇರೆಗೆ ಠಾಣೆಯ ಸಿಬ್ಬಂದಿಯವರಾದ ಭಾಗಣ್ಣ ಪಿ.ಸಿ.194, ಬೀಮನಗೌಡ ಪಿ.ಸಿ.402. ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಭಾಗಣ್ಣ ಪಿ.ಸಿ.194 ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|ಠಿ| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 15-20 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮಿ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.
        ದಾಳಿ ಮಾಡಲು ನಾನು ಪಂಚರು ಠಾಣೆಯ ಸಿಬ್ಬಂದಿಯವರು ಒಂದು ಖಾಸಗಿ ಜೀಪನಲ್ಲಿ ಕುಳಿತುಕೊಂಡು ಠಾಣೆಯಿಂದ 15-30 ಗಂಟೆಗೆ ಹೊರಟು ಪಾಲ್ಕಮ್ಮ ದೇವಿ ಗುಡಿಯ ಹತ್ತೀರ ಸ್ವಲ್ಪ ದೂರದಲ್ಲಿ 15-40 ಗಂಟೆಗೆ ಹೋಗಿ ಜೀಪನಿಲ್ಲಿಸಿ ಜೀಪಿನಿಂದ ಎಲ್ಲರು ಇಳಿದು ನಡೆದುಕೊಂಡು ಹೋಗಿ ಮನೆಗಳ ಗೋಡೆಯ ಮರೆಯಲ್ಲಿನಿಂತು ನಿಗಾಮಾಡಿ ನೊಡಲಾಗಿ ಪಾಲ್ಕಮ್ಮದೇವಿ ಗುಡಿಯ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದನು ಆಗ ನಾವೆಲ್ಲರೂ ಸದರಿಯವನು ಸಾರ್ವಜನಿಕರಿಂದ ಹಣಪಡೆದು ಮಟಕಾ ಅಂಕಿ ಅಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು 15-50 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಸಾರ್ವಜನಿಕರಿಗೆ ಕೂಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವನು ಸಿಕ್ಕಿಬಿದ್ದಿದ್ದು, ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ, ನಾನು, ಪಂಚರ ಸಮಕ್ಷಮದಲ್ಲಿ ದಾಳಿಯಲ್ಲಿ ಸಿಕ್ಕ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಜರ್ುನ ತಂದೆ ಮರೆಪ್ಪ ಹೋತಪೇಟ ವ|| 33 ಜಾ|| ಕಬ್ಬಲಿಗ ಉ|| ಮಟಕಾಬರೆದುಕೊಳ್ಳುವದು ಸಾ|| ಗಂಗಾನಗರ ಶಹಾಪೂರ ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 1910/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ: 00-00 ರೂ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಚಿಟಿಸಸಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 16-00 ರಿಂದ 17-00 ಗಂಟೆಯ ರವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 17-30 ಗಂಟೆಗೆ ಬಂದು ವರದಿಯನ್ನು ತಯಾರಿಸಿ ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು 18-00 ಗಂಟೆಗೆ ಮುಂದಿನ ಕ್ರಮಕೈಕೊಳ್ಳುವಂತೆ ವರದಿ ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ,ನಂ 03/2020 ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ದಾಖಲಿಸಿಕೊಂಡು. ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ರಾಮಪ್ಪ ಪಿ,ಸಿ, 424. ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 18-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 10/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 4/2020 ಕಲಂ 78(3)  ಕೆ.ಪಿ ಯಾಕ್ಟ;- ದಿನಾಂಕ:08/01/2020 ರಂದು 17.30 ಗಂಟೆಯ ಸುಮಾರಿಗೆ ಆರೋಪಿತನು ಕಾಮನಟಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಕಲ್ಯಾಣ ರಾತ್ರಿ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, 133 ಪಿಸಿ-155 152 233 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತನಿಂದ 1040=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ. 

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 5/2020 ಕಲಂ 143, 147, 148, 323, 324, 325, 307, 354, 504, 506, 109 ಸಂಗಡ 149 ಐಪಿಸಿ;- ದಿನಾಂಕ: 05/01/2020 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಫಿರ್ಯಾದಿಯು ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪ್ನ ತನ್ನ ಮಗನ ಮನೆಯಲ್ಲಿದ್ದಾಗ ಫಿರ್ಯಾದಿಯ ಹಿರಿಯ ಮಗ ವೀರಭದ್ರಪ್ಪ ಮತ್ತು ಆತನ ಹೆಂಡತಿ ಪಾರ್ವತಿ ನಡುವೆ ತಕರಾರು ಆಗಿದ್ದು, ಅಲ್ಲದೆ ಸೊಸೆಯದ ಪಾರ್ವತಿ ಅವರ ತಾಯಿ ಶಾಂತಮ್ಮ & ಫಿರ್ಯಾದಿ ಇವರಿಗೆ ಮಾತಿನ ಚಕಮುಕಿ ಆಗಿದ್ದರಿಂಧ ಅದೆ ವೈಷ್ಯಮ್ಯದಿಂದ ಆರೋಪಿತರೆಲ್ಲರೂ ಅಕ್ರಮ ಕುಟ ಕಟ್ಟಿಕೊಂಡು ದಿನಾಂಕ:06/01/2020 ರಂದು ಬೆಳಿಗ್ಗೆ 08.00 ಗಂಟೆಯ ಸುಮಾರಿಗೆ ಆರೋಪಿತರೆಲ್ಲರೂ ಸೇರಿ ಅಕ್ರಮ ಕೂಟ ಕಟ್ಟಿಕೊಂಡು 3 ಸೈಕಲ್ಲ ಮೋಟರಗಳ ಮೇಲೆ ಫಿರ್ಯಾದಿಯು ವಾಸಿಸುವ ಮನೆಯ ಮುಂದೆ ನಿಂತು ಫಿರ್ಯಾದಿಗೆ ರಾಡಿನಿಂದ ಎಡಗಣ್ಣಿನ ಮೇಲೆ ಹೊಡೆದು ಭಾರಿ ರಕ್ತಗಾಯಪಡಿಸಿದ್ದು, ಅಲ್ಲದೆ ಅಂಗಿ ಹಿಡಿದು ಎಳೆದಾಡಿದ್ದು, ಅಲ್ಲದೆ ಕಲ್ಲುಗಳಿಂದ ಮತ್ತು ಕೈಯಿಂದ ಹೊಡೆದು ಕನ್ನಡಿಯ ಗಾಜನ್ನು ಹೊಡೆದು ಫಿರ್ಯಾದಿ ಎದೆಗೆ ಕೊಲೆ ಮಾಡಲು ಪ್ರಯತ್ನಿಸಿ ಚುಚ್ಚಲು ಹೋದಾಗ ಫಿರ್ಯಾದಿ ತಪ್ಪಿಸಿಕೊಂಡಿದ್ದು, ಫಿರ್ಯಾದಿಯ ಹೆಂಡತಿಗೆ ತಲೆ ಕೂದಲು ಹಿಡಿದು ಎಳೆದಾಡಿ ಜಂಪರ ಮತ್ತು ಸೀರೆ ಹಿಡಿದು ನೆಲಕ್ಕೆ ಕೆಡವಿ ಹೊಡೆದಿದ್ದು ಮತ್ತು ಫಿರ್ಯಾದಿಯ ಹಿರಿಯ ಮಗ ಶಿವಪ್ಪನಿಗೂ ಸಹ ಹೊಡೆದು ರಕ್ತಗಾಯಪಡೆಸಿದ್ದು, ಫೀರ್ಯಾದಿಯ ಎರಡೂ ಕೈಗಳನ್ನು ಒಡ್ಡುಮುರಿದು, ಮತ್ತು ಮನೆಯ ಬಾಗಿಲು ಮುರಿದಿದ್ದು ಅಲ್ಲದೆ ಬಡಿಗೆಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿ ಇನ್ನುಳಿದ ಆರೋಪಿತರಿಗೆ ಆರೋಪಿ ನಂ:4 ನೇದ್ದವನು ಪ್ರಚೋದನೆ ಮಾಡಿ ಹೊಡೆಬಡೆ ಮಾಡಿದ ಬಗ್ಗೆ ಅಪರಾದ

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 6/2020 ಕಲಂ 323, 324, 498(ಎ),  354, 109, 504, 506, ಸಂ. 149 ಐಪಿಸಿ;- ಪಾರ್ವತಿ ಗಂಡ ವೀರಭದ್ರಪ್ಪ ಚಲುವಾದಿ ಮಾವ ಮತ್ತು ಗಂಡ ಇವರು ಹೊಡೆಬಡೆ ಮಾಡಿ ನಿನಗೆ ಗಂಡು ಮಕ್ಕಳು ಆಗಿಲ್ಲ ಅಂತಾ ಸುಮಾರು ದಿನಾಗಳಿಂದ ಮಾನಸಿಕ ಹಿಂಸೆ ಕೊಡುತ್ತಿದ್ದು,  ಫಿರ್ಯಾದಿಗೆ ಹೊಡೆಬಡೆ ಮಾಡುತ್ತಿದ್ದರಿಂದ, ದಿನಾಂಕ:06/01/2020 ರಂದು ಬೆಳಿಗ್ಗೆ 08.00 ಗಂಟೆಯ ಸುಮಾರಿಗೆ ಫಿರ್ಯಾದಿಯ ತಂದೆ-ತಾಯಿ, ತಮ್ಮ ಕೂಡಿ ಬಂದು ಕೇಳಲು ಬಂದಿದ್ದರಿಂದ ಫಿರ್ಯಾದಿಗೆ ಆರೋಪಿ ನಂಬರ 01 ರಿಂದ 04 ರವರೆಗಿನವರು ಕೂಡಿ ಎಲೆ ಸೂಳಿ ಬಸವಿ ರಂಡಿ ಅಂತಾ ಬೈದು ಮತ್ತು ಅವಳು ತಲೆಯ ಕೂದಲು ಹಿಡಿದು ಎಳೆದಾಡಿ ಹೊಡೆದು ನೆಲಕ್ಕೆ ಕೆಡವಿ ಜೀವ ಬೆದರಿಕೆ ಹಾಕಿದ್ದು, ಅಲ್ಲದೆ ಇನ್ನುಳಿದ ಆರೋಪಿತರು ಸಹ ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಮತ್ತು ಫೀರ್ಯಾದಿಯ ಗಂಡನಿಗೆ  ಆರೋಫಿ ನಂಭರ 04 & 05 ನೇದ್ದವರು ಪ್ರಚೋದನೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾದ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 12/2020 ಕಲಂ 143, 147, 148, 323, 324, 448, 427, 504, 506 ಸಂಗಡ 149 ಐಪಿಸಿ;- ದಿನಾಂಕ:09/01/2020 ರಂದು 2:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗಗೌಡಪ್ಪತಂದೆ ಹಣಮಂತ್ರಾಯ ಚಿಕ್ಕನಳ್ಳಿ ಸಾ:ಮಂಗಿಹಾಳ ತಾ:ಸುರಪೂರಇವರ ಹೇಳಿಕೆ ಸಾರಾಂಶವೇನೆಂದರೆ, ನಮ್ಮೂರರಾಚಯ್ಯಾ ಮುತ್ಯಾದೇವಸ್ಥಾನದ ಹತ್ತಿರ ನಮ್ಮತಾಯಿ ಪದ್ದಮ್ಮಇವರ ಹೆಸರಿನಲ್ಲಿಕ್ರಮ ಸಂಖ್ಯ 40 ರಲ್ಲಿ 30*40 ಖುಲ್ಲಾಜಾಗವಿದ್ದು ಸದರಿಜಾಗದಲ್ಲಿ ನಮ್ಮೂರವರಾದ ಭಲವಂತ್ರಾಯತಂದೆ ಬಸನಗೌಡ ಮಾಲಿ ಪಾಟೀಲ್ಇವರು ನಮ್ಮೂರ ಹಳ್ಳದಿಂದ ಅವರ ಹೊಲಗಳಿಗೆ ಪೈಪ್ ಲೈನ್ ಮುಖಾಂತರ ನಡುಊರಲ್ಲಿ ಪೈಪ್ ಹಾಕಿ ಈಗ 4 ವರ್ಷಗಳ ಹಿಂದೆ ನೀರಾವರಿ ಮಾಡಿದ್ದುಇರುತ್ತದೆ. ನಾವು ಒಂದು ತಿಂಗಳ ಹಿಂದೆ ನಮ್ಮಜಾಗದಲ್ಲಿ ಮನೆ ಕಟ್ಟಬೇಕುಅಂತಾ ಜೆ.ಸಿ.ಬಿತಂದು ಬುನಾದಿ ತೊಡುತ್ತಿರುವಾಗ ನಮ್ಮೂರ ಭಲವಂತ್ರಾಯಗೌಡಇತನುಇಲ್ಲಿ ನಮ್ಮ ಪೈಪ್ ಲೈನ್ಇರುತ್ತದೆ. ಇಲ್ಲಿ ಮನೆ ಕಟ್ಟಬೇಡರಿ ಮತ್ತು ಬುನಾದಿ ತೊಡಬೇಡರಿ ನಮ್ಮ ಪೈಪ್ಏನಾದರೂಒಡೆದರೆ ನಿಮ್ಮಗೆ ಸುಮ್ಮನೆ ಬಿಡುವದಿಲ್ಲ ಅಂತಾ ನಮ್ಮೊಂದಿಗೆತಕರಾರು ಮಾಡಿದಾಗ ನಾವು ನಮ್ಮಜಾಗಇರುತ್ತದೆ. ನಾವು ಮನೆಕಟ್ಟವರೆಅಂತಾ ಹೇಳಿದ್ದಕ್ಕೆ ಅವರಿಗೂ ನಮಗೂ ವೈಮನಸ್ಸುಉಂಟಾಗಿತ್ತು. ನಾವು ನಮ್ಮ ಮನೆ ಬುನಾದಿ ತೊಡುವಾಗ ಭಲವಂತ್ರಾಯಗೌಡ ಹಾಕಿದ ಪೈಪು ಒಡೆದಿದ್ದು ನಾವು ನಮ್ಮ ಮನೆ ಕಟ್ಟಡ ಪ್ರಾರಂಭಿಸಿದ್ದು ಈ ಸದ್ಯಕಟ್ಟಡ ಬೆಸ್ಮಿಂಟ ನಾಲ್ಕು ತರಆಗಿರುತ್ತದೆ.
ಹಿಗಿದ್ದು ನಿನ್ನೆ ದಿನಾಂಕ: 08/01/2020 ರಂದು ಬೆಳಿಗ್ಗೆ ಸುಮಾರಿಗೆ ಹೊಲಕ್ಕೆ ಹೊಗಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಸಾಯಂಕಾಲ 7:00 ಗಂಟೆ ಸುಮಾರಿಗೆ ನಾನು ನಮ್ಮ ಮಾವನಾದ ಸಿದ್ದಪ್ಪ ತಂದೆ ಭೀಮಣ್ಣ ಯಾಳಗಿ, ನಮ್ಮದೊಡ್ಡಪ್ಪನ ಮಕ್ಕಳಾದ ಬೀರಲಿಂಗತಂದೆ ಗೋಪಾಲ ಗುಂಡಗುತರ್ಿ ಮತ್ತು ಕೃಷ್ಣಾ ತಂದೆ ಗೋಪಾಲ ಗುಂಡಗುತರ್ಿಎಲ್ಲರೂ ನಮ್ಮ ಮನೆಗೆ ಬಂದು ನೊಡಲು ನಮ್ಮೂರ 1) ಬಲವಂತ್ರಾಯಗೌಡತಂದೆ ಬಸನಗೌಡ ಮಾಲಿಪಾಟೀಲ್ 2) ಯಂಕರಡ್ಡಿತಂದೆ ಬಸನಗೌಡ ಮಾಲಿಪಾಟೀಲ್, 3) ಈರಣಗೌಡತಂದೆ ಶಾಂತಗೌಡ ಮಾಲಿಪಾಟೀಲ್, 4) ಮಲ್ಲನಗೌಡತಂದೆ ಶಾಂತಗೌಡ ಮಾಲಿ ಪಾಟೀಲ್, 5) ಮಡಿವಾಳಪ್ಪ ತಂದೆಯಲ್ಲಪ್ಪಅಗಸರ, 6) ಯಲ್ಲಪ್ಪತಂದೆ ಮಡಿವಾಳಪ್ಪ ಅಗಸರ, 7) ಪ್ರಭುಗೌಡತಂದೆದಂಡಪ್ಪಗೌಡ ಪೊಲೀಸ್ ಪಾಟೀಲ್, 8) ನಾನಾಗೌಡತಂದೆ ಭೀಮನಗೌಡ ಮಾಲಿ ಪಾಟೀಲ್, 9) ಯಲ್ಲಪ್ಪತಂದೆ ಮಾಹಾದೇವಪ್ಪಅಗಸರಇವರೆಲ್ಲರು ನಮ್ಮಕಟ್ಟಡ ಮಾಡುತಿದ್ದಗೊಡೆಯನ್ನುಕೆಡವುತ್ತಿರುವದನ್ನು ನೋಡಿಅವರಿಗೆಯಾಕೆ ನಮ್ಮಗೊಡೆಯನ್ನುಕಡೆವುತ್ತಿದ್ದರಿಅಂತಾ ಕೇಳಿದ್ದಕ್ಕೆ ಅವರೆಲ್ಲರುಕೂಡಿದವರೆ ಏ ಸುಳೆ ಮಕ್ಕಳೆ ನೀವೇನು ಕೇಳುತ್ತಿರಿ ನಮ್ಮ ಪೈಪ್ ಲೈನ್ಒಡೆದ್ದಿದ್ದಿರಿಇವತ್ತು ನಿಮ್ಮಗೆ ಸುಮ್ಮನೆ ಬಿಡುವದಿಲ್ಲ ಅವಾಚ್ಯ ಬೈದು ನಮ್ಮ ನಾಲ್ವರಿಗೂ ನೆಲ್ಲಕ್ಕೆಕೆಡವಿ ಕಾಲಿನಿಂದ ಮೈಕೈಗೆ ಒದ್ದು ಗುಪ್ತ ಪೆಟ್ಟು ಪಡಿಸಿದ್ದು ಅವರಲ್ಲಿಯ ಬಲವಂತ್ರಾಯ, ಯಂಕರಡ್ಡಿಇಬ್ಬರುಅಲ್ಲೆಇದ್ದ ಬಡಿಗೆಗಳನ್ನು ತಗೆದುಕೊಂಡವರೆ ಬಲವಂತ್ರಾಯಇತನು ನನಗೂ ಹಾಗೂ ಸಿದ್ದಪ್ಪ ಇಬ್ಬರಿಗೆಎದೆಗೆ ಹಾಗೂ ಯಂಕರಡ್ಡಿಇತನು ಬೀರಲಿಂಗನ ಬಲಗೈಗೆ ಹಾಗೂ ಕೃಷ್ಣ ಇತನಎದೆಗೆ ಬೆನ್ನಿಗೆ ಹೊಡೆದು ಹೊಡೆ ಮಾಡುತ್ತಿರುವಾಗಗ್ರಾಮದರೆಡ್ಡಪ್ಪಗೌಡತಂದೆದಂಡಪ್ಪಗೌಡ ಪರಸನಳ್ಳಿ, ಹಣಮಂತ್ರಾಯತಂದೆ ಪರಮಣ್ಣ ಚಿಕ್ಕನಳ್ಳಿ ಇವರು ಬಂದು ಜಗಳವನ್ನು ನೋಡಿ ಬಿಡಿಸದರು, ಆಗ ಅವರೆಲ್ಲರುಇನ್ನೊಮ್ಮೆ ನಮ್ಮತಂಟೆಗೆಏನಾದರು ಬಂದರೆಊರೇ ಕಾಲಿ ಮಾಡಿಸುತ್ತೇವೆ ಮಕ್ಕಳೆ ಅಂತಾಜೀವದ ಬೇದರಿಕೆ ಹಾಕಿ ಹೋದರು. ನಿನ್ನೆ ನಾವು ಅಂಜಿಊರಲ್ಲಿಯೇಇದ್ದು ನಮ್ಮತಂದೆಯಾದ ಹಣಮಂತ್ರಾಯ, ನಮ್ಮದೊಡ್ಡಪ್ಪನಾದ ಗೋಪಾಲ ತಂದೆಯಂಕಣ್ಣಗುಂಡಗುತರ್ಿ, ಇವರಿಗೆ ವಿಚಾರ ಮಾಡಿಇಂದುತಡವಾಗಿಠಾಣೆಗೆ ಬಂದು ಫಿಯರ್ಾದಿ ನೀಡಿದ್ದುಇರುತ್ತದೆ. ನಮ್ಮಜಾಗದಲ್ಲಿಅಕ್ರಮ ಪ್ರವೇಶ ಮಾಡಿ ಗುಂಪು ಕಟ್ಟಿಕೊಂಡುಕಟ್ಟಿದಗೊಡೆಯನ್ನುಕೆಡವಿ ಅಂದಾಜು 10,000=00 ರೂಗಳ ಹಾನಿ ಮಾಡಿಕೈಯಿಂದ ಹೊಡೆದು ಕಾಲಿನಿಂದಒದ್ದು ಬಡಿಗೆಗಳಿಂದ ಹೊಡೆ ಬಡೆ ಮಾಡಿ ಗುಪ್ತ ಗಾಯ ಪಡಿಸಿ ಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದ್ದ 9 ಜನರ ಮೇಲೆ ಕಾನೂನು ಕ್ರಮಜರುಗಿಸಬೇಕು ಮತ್ತು ನಮ್ಮ ನಾಲ್ವರಿಗೂ ಮೈಕೈ ನೋವಾಗಿದ್ದುಉಪಚಾರಕುರಿತುಆಸ್ಪತ್ರೆಗೆ ಕಳುಹಿಸಿಕೊಡಲು ವಿನಂತಿ. ಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.


 ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 13/2020 ಕಲಂ: 143,147,148,323,324,504,506 ಸಂಗಡ 149 ಐಪಿಸಿ ಮತ್ತು 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989;- ದಿನಾಂಕಃ 09/01/2020 ರಂದು 8-15 ಪಿ.ಎಮ್ ಕ್ಕೆ ಶ್ರೀ ಸಿದ್ರಾಮೇಶ ತಂದೆ ದೇವಿಂದ್ರಪ್ಪ ಟಣಕೇದಾರ ಸಾ: ಮಂಗಿಹಾಳ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಬೆಳಿಗ್ಗೆ ನಮ್ಮೂರಿನಿಂದ ನಾನು ಮತ್ತು ನಮ್ಮೂರಿನ ಯಲ್ಲಪ್ಪ ತಂದೆ ಮಹಾದೇವಪ್ಪ ಮಡಿವಾಳ ಇಬ್ಬರೂ ಮೋ.ಸೈಕಲ್ ನಂಬರ ಕೆ.ಎ 33 ಕ್ಯೂ 1576 ನೇದ್ದರ ಮೇಲೆ ಸುರಪೂರಕ್ಕೆ ಬರುತ್ತಿರುವಾಗ 9-30 ಎ.ಎಮ್ ಸುಮಾರಿಗೆ ಸುರಪೂರ ನಗರದ ಬಿ.ಎಸ್.ಎನ್.ಎಲ್ ಆಫೀಸ್ ಹತ್ತಿರ ನಮ್ಮ ಜನಾಂಗದ 1) ಶ್ರಾವಣಕುಮಾರ ತಂದೆ ಖಾನಪ್ಪ ಚಿನ್ನಾಕಾಯಿ, 2) ಕುಮಾರ ತಂದೆ ಖಾನಪ್ಪ ಚಿನ್ನಾಕಾಯಿ, 3) ಹಣಮಂತ ತಂದೆ ಖಾನಪ್ಪ ಚಿನ್ನಾಕಾಯಿ ಮೂವರು ಸಾ: ಡೊಣ್ಣಿಗೇರಿ ಸುರಪೂರ ಹಾಗು ನನ್ನೊಂದಿಗೆ ವೈಮನಸ್ಸು ಬೆಳೆಸಿಕೊಂಡಿರುವ ನಮ್ಮೂರಿನ 4) ಕ್ರೀಷ್ಣಪ್ಪ ತಂದೆ ಗೋಪಾಲ ಗುಂಡಗುತರ್ಿ ಜಾತಿ: ಕುರುಬ, 5) ಬೀರಪ್ಪ ತಂದೆ ಗೋಪಾಲ ಗುಂಡಗುತರ್ಿ ಜಾತಿ: ಕುರುಬ, 6) ಈರಣಗೌಡ ತಂದೆ ದಂಡಪ್ಪಗೌಡ ಪರಸನಳ್ಳಿ ಜಾತಿಃ ಲಿಂಗಾಯತ, 7) ಪರಮಣ್ಣ ತಂದೆ ಹಣಮಂತರಾಯ ಚಿಕ್ಕನಹಳ್ಳಿ ಜಾತಿಃ ಕುರುಬ, 8) ಸಿದ್ದಪ್ಪ ತಂದೆ ಭೀಮಣ್ಣ ಯಾಳಗಿ ಜಾತಿಃ ಕುರುಬ, 9) ನಾನಪ್ಪಗೌಡ ತಂದೆ ದಂಡಪ್ಪಗೌಡ ಪರಸನಳ್ಳಿ ಜಾತಿಃ ಲಿಂಗಾಯತ, 10) ಹಣಮಂತರಾಯ ತಂದೆ ಪರಮಣ್ಣ ಚಿಕ್ಕನಹಳ್ಳಿ ಜಾತಿಃ ಕುರುಬ, 11) ಗೋಪಾಲ ತಂದೆ ಯಂಕಪ್ಪ ಗುಂಡಗುತರ್ಿ ಜಾತಿಃ ಕುರುಬ ಇವರೆಲ್ಲರೂ ಅಕ್ರಮಕೂಟ ಸೇರಿಕೊಂಡು ರಸ್ತೆಗೆ ಅಡ್ಡಗಟ್ಟಿ ನಿಂತು ನಮ್ಮ ಮೋ.ಸೈಕಲ್ ತಡೆದು ನಿಲ್ಲಿಸಿ ಅವರಲ್ಲಿ ಶ್ರಾವಣಕುಮಾರನು ಏನಲೇ ಸೂಳೆ ಮಗನೇ

 ಸಿದ್ಯಾ ಊರಲ್ಲಿ ಪರಮಣ್ಣನಿಗೆ ಮನೆ ಕಟ್ಟಲು ಬಿಡುವದಿಲ್ಲಾ ಏನಲೇ, ಬಹಳ ಸೊಕ್ಕು ಐತಿ ಮಕ್ಕಳೇ ನಿಮಗೆ
 ಅನ್ನುತ್ತ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಮೋಟರ ಸೈಕಲ್ ಮೇಲಿಂದ ಎಳೆದಾಗ, ಕುಮಾರ ತಂದೆ ಖಾನಪ್ಪ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದಿರುತ್ತಾನೆ. ಹಣಮಂತ ತಂದೆ ಖಾನಪ್ಪ ಇತನು ತನ್ನ ಮುಷ್ಠಿಯಲ್ಲಿ ಕಲ್ಲು ಹಿಡಿದುಕೊಂಡು ನನ್ನ ಬೆನ್ನಿಗೆ ಹೊಡೆದಿರುತ್ತಾನೆ. ಕ್ರೀಷ್ಣಪ್ಪ ತಂದೆ ಗೋಪಾಲ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಜೊತೆಗಿದ್ದ ಯಲ್ಲಪ್ಪ ಮಡಿವಾಳ ಇತನ ಬೆನ್ನಿಗೆ ಹೊಡೆದು ಬಳಿಕ ತನ್ನ ಜೊತೆಗಿದ್ದವರಿಗೆ ಯಾಕೆ ನಿಂತಿರಿ ಹೊಡೆದು ಖಲಾಸ ಮಾಡ್ರಿ ಸೂಳೆ ಮಕ್ಕಳಿಗೆ ಅಂತ ಹೇಳಿದನು. ಆಗ ಬೀರಪ್ಪ ಗುಂಡಗುತರ್ಿ ಇತನು ನನಗೆ ಲೇ ಸಿದ್ಯಾ ಬ್ಯಾಡರ ಕೀಳು ಜಾತಿ ಸೂಳೆ ಮಗನೇ ಊರಲ್ಲಿ ಎಷ್ಟು ಸೊಕ್ಕು ತೋರಿಸುತ್ತೀ ಮಗನೇ, ಈಗ ಡೊಣ್ಣಿಗೇರಿ ಹುಡುಗರು ಬಂದಿದ್ದಾರೆ, ನಿನ್ನ ಸೊಕ್ಕು ಮುರಿಸುತ್ತೇವೆ ಅಂತ ಹೇಳಿ, ಬೀರಪ್ಪ ಹಾಗು ಈರಣಗೌಡ ಇಬ್ಬರೂ ನನಗೆ ಬಿಗಿಯಾಗಿ ಹಿಡಿದುಕೊಂಡಾಗ ಶ್ರಾವಣಕುಮಾರ ಹಾಗು ಪರಮಣ್ಣ ಚಿಕ್ಕನಹಳ್ಳಿ ಇಬ್ಬರೂ ನನಗೆ ಕೈಯಿಂದ ಕಪಾಳಕ್ಕೆ ಹೊಡೆದಿರುತ್ತಾರೆ. ನಂತರ ಸಿದ್ದಪ್ಪ ಯಾಳಗಿ ಹಾಗು ನಾನಪ್ಪಗೌಡ ಪರಸನಳ್ಳಿ ಇಬ್ಬರೂ ಯಲ್ಲಪ್ಪ ಮಡಿವಾಳ ಇತನ ಅಂಗಿ ಹಿಡಿದು ಎಳೆದಾಡಿ ಹರಿದು, ಕೈಯಿಂದ ಆತನ ಎರಡು ಕಪಾಳಕ್ಕೆ ಹೊಡೆದಿರುತ್ತಾರೆ. ಹಣಮಂತರಾಯ ಚಿಕ್ಕನಹಳ್ಳಿ ಹಾಗು ಗೋಪಾಲ ಗುಂಡಗುತರ್ಿ ಇಬ್ಬರೂ ನನಗೆ ಬ್ಯಾಡ ಸೂಳಿಮಗನೇ ಅಂತ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಕೈಯಿಂದ ಕಪಾಳಕ್ಕೆ, ಹೊಟ್ಟೆಗೆ ಹೊಡೆದು ನೂಕಿಸಿ ನೆಲಕ್ಕೆ ಕೆಡವಿದಾಗ ಕುಮಾರ, ಹಣಮಂತ ಹಾಗು ಕ್ರೀಷ್ಣಪ್ಪ ಮೂವರು ನನ್ನ ಬೆನ್ನಿಗೆ, ಹೊಟ್ಟೆಗೆ ಮನಸ್ಸೋ ಇಚ್ಚೇ ಒದ್ದಿರುತ್ತಾರೆ. ಆಗ ಡೊಣ್ಣಿಗೇರಿಯ ಮೂರು ಜನರು ಮಕ್ಕಳೇ ಮಂಗಿಹಾಳ ಗ್ರಾಮದಲ್ಲಿ ಏನಾದರೂ ತಕರಾರು ಮಾಡಿದರೇ ಅಲ್ಲೆ ಮನೆಗೆ ಬಂದು ಖಲಾಸ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 13/2020 ಕಲಂ. 143, 147,148,341,323,324,504,506 ಸಂಗಡ 149 ಐಪಿಸಿ ಮತ್ತು 3(1)(ಆರ್), 3(1)(ಎಸ್) ಎಸ್.ಸಿ/ ಎಸ್.ಟಿ ಪಿ.ಎ ಆಕ್ಟ್ 1989 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!