ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-09-2019

By blogger on ಶನಿವಾರ, ಸೆಪ್ಟೆಂಬರ್ 28, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-09-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 80/2019 ಕಲಂ.143,147,341 ಸಂ.149 ಐಪಿಸಿ:-ದಿನಾಂಕ; 28/09/2019 ರಂದು 3-30 ಪಿಎಮ್ ಕ್ಕೆ ಮಾನ್ಯ ಬಾಪುಗೌಡ ಪಾಟೀಲ (ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ಒಂದು ವರದಿಯನ್ನು ಮುಂದಿನ ಕ್ರಮಕ್ಕಾಗಿ ಒಂದು ವರದಿ ನೀಡಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ; 28/09/2019 ರಂದು ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನನಗೆ ಮಾಹಿತಿ ಬಂದಿದ್ದೆನೆಂದರೆ, ಯಾದಗಿರಿ ನಗರದ ಶಾಸ್ತ್ರಿಚೌಕ ಹತ್ತಿರ 8 ರಿಂದ 10 ಜನರು ಸೇರಿ ಯಾರೋ ಪೊಲೀಸರು ಯಾವುದೋ ಬೈಕ ಸವಾರನಿಗೆ ಹೊಡೆದಿದ್ದಾರೆ ಅಂತಾ ರಸ್ತೆ ತಡೆಮಾಡಿ ವಾಹನಗಳ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಶೇಖ್ಮಹಿಬೂಬ ಪಿಸಿ-02 ಕೂಡಿಕೊಂಡು ಸ್ಥಳಕ್ಕೆ ಹೋದಾಗ ಅಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ, ಜಗದೀಶ ಹೆಚ್.ಸಿ.144, ಬೂದೆಣ್ಣ ಪಿಸಿ-429, ಚಂದ್ರು ಪಿಸಿ-354 ರವರು ಇದ್ದು  ಅಷ್ಠರಲ್ಲಿ ಈ ವಿಷಯ ತಿಳಿದು ಮಾನ್ಯ ಸಿ.ಪಿ.ಐ ಸಾಹೇಬರು ಯಾದಗಿರಿ ವೃತ್ತ ರವರು ಅಲ್ಲಿಗೆ ಬಂದಿದ್ದು ನಾವೆಲ್ಲರೂ ಸೇರಿ ರಸ್ತೆ ತಡೆಮಾಡಿದ ಜನರನ್ನು ಅಲ್ಲಿಂದ ಚದುರಿಸಿ ರಸ್ತೆ ಸಂಚಾರ ಸುಗಮಗೊಳಿಸಿದ್ದು ಇರುತ್ತದೆ. ನಮಗೆ ಭಾತ್ಮೀದಾರರಿಂದ ರಸ್ತೆ ತಡೆಮಾಡಿದವರಲ್ಲಿ ಕೆಲವರ ಹೆಸರು ತಿಳಿದುಕೊಳ್ಳಲಾಗಿ ವಿಶ್ವನಾಥ ತಂದೆ ಬಸಣ್ಣ ಹೂಗಾರ ಸಾ; ನಾಯ್ಕಲ್, ಅಬ್ರಾಹಂ ಮಾತಪಳ್ಳಿ ಅಂಬೇಡ್ಕರ ನಗರ ಯಾದಗಿರಿ, ವಾಸೀಫ್ ಮೆಕ್ಯಾನಿಕ್, ನರೇಂದ್ರ ತಂ. ರುದ್ರಪ್ಪ ಅಂತಾ ತಿಳಿದು ಬಂದಿದ್ದು ಇನ್ನಿತರರ ಹೆಸರುಗಳು ಗೊತ್ತಾಗಿರುವುದಿಲ್ಲ ಮುಂದೆ ಅವರನ್ನು ನೋಡಿದಲ್ಲಿ ಗುರುತಿಸುತ್ತೇನೆ. ಮರಳಿ ಠಾಣೆಗೆ 3-30 ಪಿಎಮ್ ಕ್ಕೆ ಬಂದಿದ್ದು ಮೇಲ್ಕಂಡ ಆರೋಪಿತರು ಅಕ್ರಮ ಕೂಟ ಕಟ್ಟಿಕೊಂಡು  ರಸ್ತೆ ತಡೆಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದ್ದು ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇಲಿಂದ ಠಾಣೆಯ ಗುನ್ನೆ ನಂ.80/2019 ಕಲಂ.143,147,341 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 242/2019.ಕಲಂ 279.337.338 ಐ.ಪಿ.ಸಿ.:- ದಿನಾಂಕ 28/09/2019 ರಂದು 14-00 ಗಂಟೆಗೆ ಶ್ರೀಮತಿ ಯಂಕಮ್ಮ ಗಂಡ ಚಂದ್ರರೆಡ್ಡಿ ಮಾಲಿಬಿರಾದಾರ ವ||23 ಜಾ|| ಕಬ್ಬಲಿಗ ಉ||ಮನೆಕೆಲಸ ಸಾ|| ಟೋಕಾಪೂರ ತಾ||ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ಅಜರ್ಿ ನಿಡಿದ್ದೆನೆಂದರೆ, ನನಗೆ ಆಸ್ಪತ್ರೆಗೆ ತೋರಿಸುವ ಸಲುವಾಗಿ ದಿನಾಂಕ-23/09/2019 ರಂದು ಬೆಳಿಗ್ಗೆ ನಾನು ಮತ್ತು ನನ್ನ ತಾಯಿ ಹನಮಂತಿ ಗಂಡ ಯಲ್ಲಪ್ಪ ಬಡಿಗೇರ ಇಬ್ಬರೂ ಕೂಡಿಕೊಂಡು ನಮ್ಮೂರಿನ ರಾಮು ತಂದೆ ಬಸಪ್ಪ ತಳವಾರ ಇತನ ಆಟೋ ನಂ-ಕೆ,ಎ-33 ಎ-9039 ನೇದ್ದರಲ್ಲಿ ಕುಳಿತುಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ನನಗೆ ತೋರಿಸಿಕೊಂಡು ಮರಳಿ ನಮ್ಮ ಊರಿಗೆ ಹೋಗುವ ಸಲುವಾಗಿ ಆಸ್ಪತ್ರೆಯ ಮುಂದೆ ನಿಂತಿದ್ದಾಗ ಸದರಿ ರಾಮು ಇತನು ತನ್ನ ಆಟೋವನ್ನು ತೆಗೆದುಕೊಂಡು ಬಂದು ಟೋಕಾಪೂರಕ್ಕೆ ಹೋರಟಿದ್ದೇನೆ ಎಂದು ತಿಳಿಸಿದ್ದರಿಂದ ನಾನು ಮತ್ತು ನನ್ನ ತಾಯಿ ಹನುಮಂತಿ ಇಬ್ಬರೂ ಆಟೋ ದಲ್ಲಿ ಕುಳಿತುಕೊಂಡು ಹೋರಟೇವು. ಆಗ ರಾಮು ಇತನು ತನ್ನ ಆಟೋ ನಂ- ಕೆ,ಎ-33 ಎ-9039 ನೇದ್ದನ್ನು ಚಲಾಯಿಸಿಕೊಂಡು ಶಹಾಪೂರ-ಟೋಕಾಪೂರ ರಸ್ತೆಯ ಮೇಲೆ ಬೆನಕನಹಳ್ಳಿ ದಾಟಿ ಅಂದಾಜು 200 ಮೀ ಅಂತರದಲ್ಲಿ ಮಧ್ಯಾಹ್ನ 01-20 ಗಂಟೆಗೆ ಹೋಗುತ್ತಿರುವಾಗ ರಾಮು ಇತನು ತನ್ನ ಆಟೋವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮಲೇ ಎಡಕ್ಕೆ ಕಟ್ ಮಾಡಿದ್ದರಿಂದ ಸದರಿ ಆಟೋ ಪಲ್ಟಿಯಾಗಿ ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ನನಗೆ ಸಣ್ಣ ಪುಟ್ಟ ಗುಪ್ತಗಾಯಗಳಾಗಿದ್ದು ಇರುತ್ತದೆ. ನಾನು ನನ್ನ ತಾಯಿ ಹನುಮಂತಿಗೆ ನೋಡಲಾಗಿ ಬಲಗಡೆ ತಲೆಗೆ ಭಾರಿ ಸ್ವರೂಪದ ರಕ್ತಗಾಯವಾಗಿ ಎರಡೂ ಕಿವಿಯಿಂದ ರಕ್ತ ಬಂದಿದ್ದು ಇರುತ್ತದೆ. ಬಲ ಕಪಾಳಕ್ಕೆ, ಕಿವಿಗೆ, ಗಲ್ಲಕ್ಕೆ, ಕುತ್ತಿಗೆಗೆ ರಕ್ತಗಾಯ, ಬಲಬುಜಕ್ಕೆ ಭಾರಿರಕ್ತಗಾಯ ಹಾಗೂ ಎದೆಗೆ, ಹೊಟ್ಟೆಗೆ, ಬಲಮೋಳಕೈಗೆ, ಹಸ್ತದ ಮೇಲೆ, ಬಲತೊಡೆಗೆ ರಕ್ತಗಾಯ, ಎರಡು ಮೋಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ನಮಗೆ ಅಪಘಾತ ಮಾಡಿದ ಆಟೋ ಚಾಲಕ ರಾಮು ಇತನಿಗೆ ನೋಡಲಾಗಿ ಎಡಗಾಲಿಗೆ, ಬಲಬುಜಕ್ಕೆ ತರಚಿದ ಗಾಯಗಳಾಗಿದ್ದು ಇರುತ್ತದೆ. ನಮಗೆ ಅಪಘಾತ ಮಾಡಿದ ಆಟೋ ನಂ ಕೆ,ಎ-33 ಎ-9039 ನೇದ್ದು ಜಖಂಗೊಂಡಿದ್ದು ಇರುತ್ತದೆ. ಸದರಿ ಅಪಘಾತವು ಮಧ್ಯಾಹ್ನ 01-20 ಗಂಟೆಯ ಸುಮಾರಿಗೆ ಅಪಘಾತವಾಗಿರುತ್ತದೆ. ಆಗ ನಾನು ಮತ್ತು ರಾಮು ಇಬ್ಬರೂ ಕೂಡಿ ಅಲ್ಲೆ ಹೋರಟಿದ್ದ ಒಂದು ಆಟೋ ನಿಲ್ಲಿಸಿ ನನ್ನ ತಾಯಿಗೆ ಆಟೋದಲ್ಲಿ ಕರೆದುಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು ಇರುತ್ತದೆ. ರಾಮು ಇತನು ಆಸ್ಪತ್ರೆಗೆ ಸೇರಿಕೆಯಾಗಿದ್ದು ನನಗೆ ಸಣ್ಣ-ಪುಟ್ಟ ಗುಪ್ತಗಾಯವಾಗಿದ್ದರಿಂದ ಆಸ್ಪತ್ರೆ ತೋರಿಸಿಕೊಂಡಿರುವದಿಲ್ಲ. ನಾನು ನನ್ನ ತಂದೆಗೆ ಪೋನ ಮಾಡಿ ಅಪಘಾತದ ವಿಷಯ ತಿಳಿಸಿದ್ದರಿಂದ ನನ್ನ ತಂದೆ ಯಲ್ಲಪ್ಪ ತಂದೆ ಭೀಮರಾಯ ಬಡೀಗೇರ ಮತ್ತು ನನ್ನ ಗಂಡ ಚಂದ್ರಾರೆಡ್ಡಿ ತಂದೆ ಖಂಡಪ್ಪ ಮಾಲಿಬಿರಾದಾರ ಇಬ್ಬರೂ ಆಸ್ಪತ್ರೆಗೆ ಬಂದು ನೋಡಿ ವಿಚಾರಿದ್ದು ಆಗ ನನ್ನ ತಾಯಿಗೆ ಉಪಚಾರ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಮತ್ತು ನನ್ನ ತಂದೆ ಯಲ್ಲಪ್ಪ, ನನ್ನ ಗಂಡ ಚಂದ್ರರೆಡ್ಡಿ ಎಲ್ಲರೂ ಕೂಡಿ ನನ್ನ ತಾಯಿಗೆ ಅಂಬುಲೆನ್ಸದಲ್ಲಿ ಕರೆದುಕೊಂಡು ಕಲಬುರಗಿಯ ಸರಕಾರಿ (ಜಯದೇವ) ಆಸ್ಪತ್ರೆಗೆ ಸೇರಿಕೆ ಮಾಡಿದ್ದರಿಂದ ಉಪಚಾರ ಪಡೆಯುತ್ತಿದ್ದುದು ಇರುತ್ತದೆ. ನನ್ನ ತಾಯಿಗೆ ಉಪಚಾರ ಮಾಡಿಸುವುದು ಅವಶ್ಯಕತೆ ಇದ್ದುದರಿಂದ ಮತ್ತು ನಮ್ಮ  ಹಿರಿಯರಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿಸಲ್ಲಿಸಿದ್ದು. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 242/2019 ಕಲಂ 279,337,338, ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 243/2019. ಕಲಂ 87 ಕೆ.ಪಿ.ಆಕ್ಟ:- ದಿನಾಂಕ:28-09-2019 ರಂದು 4:35 ಪಿ.ಎಮ್.ಕ್ಕೆ  ಆರೋಪಿತರು ಶಹಾಪೂರ ನಗರದ ಆಶ್ರಯ ಕಾಲೋನಿಯ ಹತ್ತಿರ ದುಗರ್ಾದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 2080/- ರೂ. ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶ ಪಡಿಸಿಕೊಂಡು ಬಂದು ಕ್ರಮ ಜರುಗಿಸಲು ಸೂಚಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 243/2019 ಕಲಂ. 87 ಕೆ.ಪಿಇ.ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 244/2019 ಕಲಂ 78[3] ಕೆ.ಪಿ ಆಕ್ಟ:- ದಿನಾಂಕ 28/09209 ರಂದು ಸಾಯಂಕಾಲ 19-00 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹನುಮರೆಡ್ಡೆಪ್ಪ ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ಒಬ್ಬ ವ್ಯಕ್ತಿಯನ್ನು, ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 28/09/2019 ರಂದು ಸಾಯಂಕಾಲ 16-30 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರದ ದೇವಿ ನಗರ ಏರಿಯಾದ ಶ್ರೀ ಮರೆಮ್ಮ ದೇವಿ ಗುಡಿಯ ಹತ್ತಿರ  ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ದಾಳಿ ಕುರಿತು ಶ್ರೀ ಮರೆಮ್ಮ ಗುಡಿಯ ಹತ್ತಿರ  ಹೋಗಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ಸಾಯಂಕಾಲ 17-25 ಗಂಟೆಗೆ ದಾಳಿ ಮಾಡಿದಾಗ ಸದರಿ ವ್ಯಕ್ತಿ ಸಿಕ್ಕಿದ್ದು, ಹೆಸರು ವಿಳಾಸ ವಿಚಾರಿಸಲು ಚಂದ್ರಶೇಖರ ತಂದೆ ದ್ಯಾವಪ್ಪ ಟಣಕೇದಾರ ವಯ 49 ವರ್ಷ ಜಾತಿ ಕುರುಬ ಉದ್ಯೋಗ ಮಟಕಾ ಅಂಕಿ ಬರೆದುಕೊಳ್ಳುವುದು ಸಾಃ ಅನ್ವರ ತಾಃ ಶಹಾಪೂರ. ಅಂತ ಹೇಳಿದ್ದು ಸದರಿಯವನ ಅಂಗಶೋಧನೆ ಮಾಡಿದಾಗ ನಗದು ಹಣ 950=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಸಾಯಂಕಾಲ 17-30 ಗಂಟೆಯಿಂದ 18-30 ಗಂಟೆಯ ಅವಧಿಯಲ್ಲಿ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ದ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ರಾತ್ರಿ 20-00 ಗಂಟೆಗೆ  ಠಾಣೆ ಗುನ್ನೆ ನಂಬರ 244/2019 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 104/2019 ಕಲಂ, 87 ಕೆ.ಪಿ ಆ್ಯಕ್ಟ್:- ದಿನಾಂಕ 28/09/2019 ರಂದು 11.45 ಪಿಎಮ್ ಕ್ಕೆ ಆರೋಪಿತರೆಲ್ಲರೂ ಸಿಂಗನಳ್ಳಿ ಗ್ರಾಮದ ಹನುಮನ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ಜೂಜಾಟ ಆಡುತ್ತಿದ್ದಾಗ ಮಾನ್ಯ ಸುರೇಶ ಬಾಬು ಪಿಎಸ್ಐ ಗೋಗಿ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 06 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 2500=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 11.45 ಪಿಎಮ್ ದಿಂದ 12.45 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು  ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 14.20 ಪಿಎಂ ಕ್ಕೆ ಠಾಣೆ ಗುನ್ನೆ ನಂ 104/2019 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ.:- 108/2019 ಕಲಂ: 279,337,338 ಐ.ಪಿ.ಸಿ:- ದಿನಾಂಕ28.09.2019 ರಂದು 07.15 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಶೇಖಪ್ಪ ತಂದೆ ಲಕ್ಷ್ಮಣ ಹೆರಕಲ ವಯಾ: 38 ವರ್ಷ  ಜಾತಿ: ಕುರುಬ ಉ: ಕೂಲಿಕೆಲಸ ಸಾ|| ಬಸವನ ಬಾಗೆವಾಡಿ ಜಿ|| ವಿಜಯಪೂರ ಇವರು  ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ  ದಿನಾಂಕ: 28.09.2019 ರಂದು ಬೆಳಿಗ್ಗೆ 10.00 ಘಂಟೆಗೆ ಕೆಂಭಾವಿಯಲ್ಲಿ ಖಾಸಗಿ ಕೆಲಸ ಇದ್ದ ಕಾರಣ ನಾನು ಹಾಗೂ ನನ್ನ ಗೆಳೆಯನಾದ ಹನೀಫ್ ತಂದೆ ಲಾಲಸಾಬ ಮಕಾಶಿ ಸಾ: ಕಾಗೆ ಅಗಸಬಾಳ ತಾ: ಮುದ್ದೆಬಿಹಾಳ ಈತನ ಕವಾಸಕಿ ಕ್ಯಾಲಿಬಾರ ಮೊಟಾರ ಸೈಕಲ್ ನಂ ಕೆ.ಎ-31/ಜೆ-5777 ನೇದ್ದನ್ನು ತೆಗೆದುಕೊಂಡು ಕೆಂಭಾವಿಗೆ ಬಂದು ಕೆಲಸ ಮುಗಿಸಿ ವಾಪಸ್ಸು ಊರಿಗೆ ಹೋಗುವ ಕುರಿತು ಇವತ್ತು ಸಾಯಾಂಕಾಲ 03.30 ಘಂಟೆ ಸುಮಾರಿಗೆ ಐನಾಪೂರ ಕ್ರಾಸ ಸಮೀಪ ಸಿದ್ದನಗೌಡ ತಂದೆ ಶರಣಪ್ಪಗೌಡ ಬಿರಾದಾರ ಇವರ ಹೋಲದ ಹತ್ತಿರ ನಾವು ಮೋಟಾರ ಸೈಕಲ್ ಮೇಲೆ ಹೊಗುವಾಗ ನಮ್ಮ ಎದುರುಗಡೆ ತಾಳಿಕೋಟಿ ರಸ್ತೆ ಕಡೆಯಿಂದ ಒಂದು ಮೋಟಾರ ಸೈಕಲ್ ನೇದ್ದರ ಚಾಲಕನು ಬರುತ್ತಿದ್ದನು, ನಮ್ಮ ಮೊಟಾರ ಸೈಕಲ್ ಚಲಾಯಿಸುತ್ತಿದ್ದ ಹನೀಫ ತಂದೆ ಲಾಲಸಾಬ ಮಕಾಶಿ ಈತನು ತನ್ನ ಮೊಟಾರ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಎದುರುಗಡೆ ಬರುತ್ತಿದ್ದ ಮೊಟಾರ ಸೈಕಲಿಗೆ ಡಿಕ್ಕಿ ಪಡಿಸಿದಾಗ ಎರಡು ಮೊಟಾರ ಸೈಕಲ್ ಸಮೇತ ಎಲ್ಲರೂ ರಸ್ತೆಯ ಮೇಲೆ ಬಿದ್ದಾಗ  ನನಗೆ ಬಲಕಣ್ಣಿನ ಹುಬ್ಬಿನ ಮೇಲೆ ರಕ್ತಗಾಯ, ಗದ್ದಕ್ಕೆ ರಕ್ತಗಾಯ  ಆಗಿದ್ದು, ನಮ್ಮ ಮೊಟಾರ ಸೈಕಲ್ ಚಲಾಯಿಸುತ್ತಿದ್ದ ಹನೀಫ್ ಈತನಿಗೆ ಗದ್ದಕ್ಕೆ, ಬಲಕಾಲು ಮೊಳಕಾಲಿಗೆ ತರಚಿದ ರಕ್ತಗಾಯ ಆಗಿದ್ದು ಅಲ್ಲದೇ ಹನೀಫ್ ಮಕಾಶಿ ಈತನು ಡಿಕ್ಕಿ ಪಡಿಸಿದ ಮೊಟಾರ ಸೈಕಲ್ ನಂ ನೋಡಲಾಗಿ ಕೆ.ಎ.33/ಜೆ-3615 ನೇದ್ದು ಇದ್ದು ಆತನಿಗೆ ಬಲಕಾಲು ಹಿಂಬಡಿಗೆ, ಗದ್ದಕ್ಕೆ, ಬಲಕೈ ಅಂಗೈಗೆ ರಕ್ತಗಾಯ, ಮತ್ತು ಎಡಬುಜಕ್ಕೆ ಹಾಗೂ ಎಡಕೈ ಮುಷ್ಠಿ ಹತ್ತಿರ ಬಾರೀ ಒಳಪೆಟ್ಟು ಆಗಿ ಬೇವುಸ ಆಗಿ ಬಿದ್ದಿರುತ್ತಾನೆ. ಆತನ ಹೆಸರು ಚಿದಾನಂದ ತಂದೆ ನಾಗಪ್ಪ ಬಸರಿಗಿಡ ಸಾ: ಕೆಂಭಾವಿ ಅಂತಾ ಗೊತ್ತಾಗಿರುತ್ತದೆ. ನಾವೆಲ್ಲರೂ ರಸ್ತೆಯ ಮೇಲೆ ಬಿದ್ದು ಚಿರಾಡುವಾಗ ಅಲ್ಲೆ ಇದ್ದ ಮಲ್ಲಪ್ಪ ತಂದೆ ಬಸಪ್ಪ ದೇವರಮನಿ ಸಾ: ಐನಾಪುರ ರವರು 108  ವಾಹನಕ್ಕೆ ಕರೆ ಮಾಡಿ ಉಪಚಾರ ಕುರಿತು ಪ್ರಾಥಮಿಕ ಆರೊಗ್ಯ ಕೇಂದ್ರ ಕೆಂಭಾವಿಗೆ ಸೇರಿಕೆ ಮಾಡಿರುತ್ತಾನೆ. ವೈದ್ಯರು  ಚಿದಾನಂದ ತಂದೆ ನಾಗಪ್ಪ ಬಸರಿಗಿಡ ಈತನು ಬೇವುಸ ಆಗಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ವಾತ್ಸಲ್ಯೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಇರುತ್ತದೆ. ನಾನು ಕೆಂಭಾವಿ ಆಸ್ಪತ್ರೆಯಲ್ಲಿಯೇ ಉಪಚಾರ ಪಡೆದುಕೊಂಡು ಠಾಣೆಗೆ ಬಂದು ಈ ಪಿರ್ಯಾದಿ ಅಜರ್ಿ ನೀಡಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 108/2019 ಕಲಂ 279.337.338 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!