ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-09-2019

By blogger on ಶುಕ್ರವಾರ, ಸೆಪ್ಟೆಂಬರ್ 20, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-09-2019 

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 107/2019 ಕಲಂ 302, 201 ಐಪಿಸಿ:-ದಿನಾಂಕ:19/09/2019 ರಂದು ಮುಂಜಾನೆ 10 ಗಂಟೆ ಸುಮಾರಿಗೆ ನನ್ನ ಮಗನಾದ ಚಿನ್ನ್ಯಾ @ ಸಿದ್ದಾರ್ಥ ಈತನು ಮನೆಯಿಂದ ಹೋದನು. ನಾನೂ ಸಹ ಕೆಲಸಕ್ಕೆ ಹೋಗಿ ರಾತ್ರಿ 7 ಗಂಟೆ ಸುಮಾರಿಗೆ ಮನೆಗೆ ಬಂದೆನು. ರಾತ್ರಿಯಾದರೂ ನನ್ನ ಮಗ ಮನೆಗೆ ಬರದೇ ಇದ್ದುದರಿಂದ ನನ್ನ ಮಗನಿಗೆ ವಿಚಾರಿಸಿಕೊಂಡು ಬಸ್ ನಿಲ್ದಾಣ ಹತ್ತಿರ ಹೋದಾಗ ನನ್ನ ಮಗನು ರಾತ್ರಿ 8 ಗಂಟೆ ಸುಮಾರಿಗೆ ಕಾವೇರಿ ಬಾರದಿಂದ ಹೊರಗೆ ಹೋಗಿರುವ ವಿಷಯ ನನಗೆ ಗೊತ್ತಾಯಿತು. ನಂತರ ನಾನು ಮನೆಗೆ ಬಂದು ಮಲಗಿಕೊಂಡೆನು. ದಿನಾಂಕ: 20/09/2019 ರಂದು ಸಾಯಂಕಾಲ 6.30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮಗನಾದ ಚಿನ್ನ್ಯಾ @ ಸಿದ್ದಾರ್ಥ ಈತನ ಶವವು ಭೀಮಾ ನದಿಯ ಸನ್ನತ್ತಿ ಬ್ರಿಜ್ ಕಂ ಬ್ಯಾರೇಜ್ನಲ್ಲಿ ಸಿಕ್ಕಿದ್ದು ನನ್ನ ಮಗನ ಶವವನ್ನು ಅಲ್ಲಿಂದ ತೆಗೆದುಕೊಂಡು ಬಂದು ಶಹಾಪುರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಭೀ.ಗುಡಿ ಪೊಲೀಸ್ ಠಾಣೆಯ ಪೊಲೀಸರು ತಂದು ಹಾಕಿರುತ್ತಾರೆ ಅಂತಾ ನನ್ನ ತಮ್ಮನಾದ ಚೆನ್ನಬಸಪ್ಪ ಈತನು ಫೋನ್ ಮಾಡಿ ನನಗೆ ತಿಳಿಸಿದ್ದರಿಂದ ನಾನು, ನನ್ನ ಹೆಂಡತಿ ಮಲ್ಲಮ್ಮ, ನಮ್ಮ ತಮ್ಮನಾದ ಚೆನ್ನಬಸಪ್ಪ ತಂದೆ ಸಿದ್ದಪ್ಪ ಭಾವಿಮನಿ, ನನ್ನ ಮಗನ ಗೆಳೆಯನಾದ ಪ್ರೇಮಕುಮಾರ ತಂದೆ ಯಮನಪ್ಪ ಕಟ್ಟಿ ಹಾಗೂ ಇತರರು ಕೂಡಿ ಶಹಾಪುರದ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಲಾಗಿ ಸದರಿ ಶವ ನನ್ನ ಮಗನದ್ದೇ ಆಗಿದ್ದು ನನ್ನ ಮಗನ ಎರಡೂ ಕೈ ಕಾಲುಗಳನ್ನು ಟೆಂಗಿನ ನಾರಿನ ಹಗ್ಗದಿಂದ ಕಟ್ಟಿದ್ದು ಕಂಡು ಬಂದಿತು. ನನ್ನ ಮಗನ ಕುತ್ತಿಗೆಗೆ ಹಗ್ಗದಿಂದ ಉರುಲು ಹಾಕಿದ ಗಾಯದ ಕಲೆ ಕಂಡು ಬಂದಿದ್ದು ನನ್ನ ಮಗನ ತಲೆಗೆ, ಎಡ ಹುಬ್ಬಿಗೆ, ಎಡಗಣ್ಣಿಗೆ ಗಾಯವಾಗಿದ್ದು ಎದೆ, ಹೊಟ್ಟೆ, ಬೆನ್ನಿಗೆ ಕಂದುಗಟ್ಟಿದ ಗಾಯಗಳು ಕಂಡು ಬಂದಿರುತ್ತವೆ. ನನ್ನ ಮಗನ ಎಡಗೈ ಮುಂಗೈ ಹತ್ತಿರ ಕೈ ಮುರಿದಿದ್ದು ಕಂಡು ಬಂದಿರುತ್ತದೆ. ದಿನಾಂಕ:19/09/2019 ರಂದು ರಾತ್ರಿ 8 ಗಂಟೆಯಿಂದ ಇಂದು ದಿನಾಂಕ:20/9/2019 ರಂದು ಮುಂಜಾನೆ 8 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಗ ಚಿನ್ನ್ಯಾ @ ಸಿದ್ದಾರ್ಥ ವ:20ವರ್ಷ ಈತನಿಗೆ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ಎಲ್ಲಿಯೋ ಕುತ್ತಿಗೆಗೆ ಉರುಲು ಹಾಕಿ ಹೊಡೆದು ಕೊಲೆ ಮಾಡಿ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ನನ್ನ ಮಗನ ಶವವನ್ನು ಭೀಮಾ ನದಿಯ ಸನ್ನತ್ತಿ ಬ್ರಿಜ್ ಕಂ ಬ್ಯಾರೇಜನ 22ನೇ ಗೇಟ ಮುಂದೆ ನೀರಿನಲ್ಲಿ ಎಸೆದು ಹೋಗಿರುತ್ತಾರೆ. ಕಾರಣ ನನ್ನ ಮಗನಿಗೆ ಕೊಲೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಫಿಯರ್ಾದಿ ಇರುತ್ತದೆ. 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 180/2019 ಕಲಂ 78[3] ಕೆ.ಪಿ ಆಕ್ಟ:- ದಿನಾಂಕ 20/09/2019 ರಂದು 14:10 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ (ಕಾಸೂ) ಸುರಪೂರ ಪೊಲೀಸ್ ಠಾಣೆ. ರವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 20/09/2019 ರಂದು 11:00 ಗಂಟೆಗೆ ಠಾಣೆಯಲ್ಲಿದ್ದಗ ಸುರಪೂರ ನಗರದ ಬಸ್ ನಿಲ್ದಾಣದ ಹತ್ತಿರ ಇವರು ಅಂಬೇಡ್ಕರ ಮೂತರ್ಿ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಫಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಮಾನ್ಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಕುರಿತು ಸುರಪೂರ ಬಸ್ ನಿಲ್ದಾಣದ ಹತ್ತಿರ ಹೋಗಿ ನೋಡಲಾಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆತನ ಅಂಗಶೋಧನೆ ಮಾಡಿದಾಗ ನಗದು ಹಣ 1510=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಒಂದು ಮಟಕಾ ಚೀಟಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಮದ್ಯಾಹ್ನ 14:10 ಗಂಟೆಗೆ ಠಾಣೆ ಗುನ್ನೆ ನಂಬರ 180/2019 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                                                                               
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 181/2019 ಕಲಂ 78[3] ಕೆ.ಪಿ ಆಕ್ಟ:- ದಿನಾಂಕ 20/09/2019 ರಂದು ಮುಂಜಾನೆ 16:10 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶರಣಪ್ಪ ಹವಲ್ದಾರ ಪಿ.ಎಸ್.ಐ (ಅವಿ) ಸುರಪೂರ ಪೊಲೀಸ್ ಠಾಣೆ. ರವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 20/09/2019 ರಂದು 13:00 ಗಂಟೆಗೆ ಠಾಣೆಯಲಿ ಸೂರಪೂರದ ರಂಗಂಪೇಠ ಅಂಬೇಡ್ಕರ ಮೂತರ್ಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಫಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಮಾನ್ಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಕುರಿತು ಸೂರಪೂರದ ರಂಗಂಪೇಠ ಅಂಬೇಡ್ಕರ ಮೂತರ್ಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆತನ ಅಂಗಶೋಧನೆ ಮಾಡಿದಾಗ ನಗದು ಹಣ 1430=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಒಂದು ಮಟಕಾ ಚೀಟಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಮದ್ಯಾಹ್ನ 16:10 ಗಂಟೆಗೆ ಠಾಣೆ ಗುನ್ನೆ ನಂಬರ 181/2019 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- ಕಲಂ, 279, 337, ಐಪಿಸಿ ಸಂಗಡ 187 ಐಎಂವಿ ಯಾಕ್ಟ-ದಿನಾಂಕ: 20/09/2019 ರಂದು 03.30 ಪಿಎಮ್ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರ ದಿಂದ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಹೋಗಿ ಸದರಿ ಗಾಯಾಳು, ಶ್ರೀ. ಗೋಪಾಲ ತಂದೆ ದೇವಲು ಚವ್ಹಾಣ ವಯಾ:40 ಉ: ಕೂಲಿ ಕೆಲಸ ಜಾ: ಲಂಬಾಣಿ ಸಾ: ದಂಡ ಸೊಲ್ಲಾಪೂರ ಚಾಮನಾಳ ತಾ: ಶಹಾಪೂರ. ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು ಸದರಿ ಹೇಳಿಕೆ ಸಾರಂಶದ ಸಾರಂಶ ಏನಂದರೆ,  ಇಂದು ದಿನಾಂಕ: 20/09/2019 ರಂದು ಬೆಳಿಗ್ಗೆ 06.00 ಎಎಂ ಕ್ಕೆ ಮಾಕರ್ೆಟಗೆಂದು ಶಹಾಪೂರಕ್ಕೆ ನನ್ನ ಮೋಟಾರ ಸೈಕಲ್ ನಂ: ಕೆಎ-33-ಕ್ಯೂ-9052 ನೇದ್ದರ ಮೇಲೆ ಬಂದಿದ್ದೇನು, ಶಹಾಪೂರದಲ್ಲಿ ಒಂದು ಚೀಲ ಉಳ್ಳಾಗಡ್ಡಿ ತಗೆದುಕೊಂಡು ಮರಳಿ ನಮ್ಮೂರಿಗೆ ಹೋಗುವಾಗ 11.00 ಎಎಂ ಸುಮಾರಿಗೆ ಗೋಗಿ ಕಾಟ್ನ ಮಿಲ್ ದಾಟಿ ಸಣ್ಣ ಕೆನಾಲ್ ಹತ್ತಿರ ಹೊಗುತ್ತಿದ್ದಾಗ, ಗೋಗಿ ಕಡೆಯಿಂದ ಒಂದು ಪಲ್ಸರ್ ಮೋಟಾರ ಸೈಕಲ್ ಚಾಲಕ ಎದರುಗಡೆಯಿಂದ ಅತೀವೆಗ ಮತ್ತು ಅಲಕ್ಷತನದಿಂದ ತನ್ನ ವಾಹನವನ್ನು ನಡೆಸಿಕೊಂಡು ತನ್ನ ಮುಂದೆ ಹೋಗುತ್ತಿದ್ದ ವಾಹನಗಳಿಗೆ ಓವರ್ ಟೇಕ್ ಮಾಡುತ್ತಾ ರಾಂಗ್ ಸೈಡ್ ನಲ್ಲಿ ಬಂದು ನನ್ನ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡೆಸಿದನು. ಪರಿಣಾಮವಾಗಿ ನಾನು ಮೋಟಾರ್ ಸೈಕಲ್ ಸಮೇತವಾಗಿ ಕೆಳಗೆ ಬಿದ್ದೇನು. ಅದರಿಂದ ನನ್ನ ತಲೆಗೆ ರಕ್ತಗಾಯ ಆಗಿದ್ದು, ಬಲಗೈ ಭುಜಕ್ಕೆ ಗುಪ್ತಗಾಯವಾಗಿರುತ್ತದೆ. ಎದರುಗಡೆಯಿಂದ ಬಂದ ಪಲ್ಸರ ವಾಹನದ ಚಾಲಕನಿಗೆ ವಿಚಾರಿಸಲಾಗಿ ಆತನ ಹೆಸರು ಚಿದಾನಂದ ತಂದೆ ಮಲ್ಲಿಕಾಜರ್ುನ ಗೌಡ್ರ ಸಾ: ಚಾಮನಾಳ ಅಂತಾ ತಿಳಿಸಿದ ಮತ್ತು ಜನರು ಜಮಾ ಆಗಿದ್ದು ನೋಡಿ ಚಿದಾನಂದ ಅಲ್ಲಿಂದ ಓಡಿ ಹೋಗಿರುತ್ತಾನೆ. ಅಪಘಾತ ಮಾಡಿದ ಪಲ್ಸರ ಮೋಟಾರ್ ಸೈಕಲ್ ನಂಬರ ನೊಡಲಾಗಿ ನೋಂದಣಿ ನಂಬರ ಇರಲಿಲ್ಲ ಅದರ ಚೆಸ್ಸಿ ನಂ: ನೋಡಲಾಗಿ ಒಆ2ಂ92ಅಙಘಿಎಅಈ37351 ಅಂತಾ ಇರುತ್ತದೆ. ನನಗೆ ಅಪಘಾತ ಆದ ಬಗ್ಗೆ ನನ್ನ ಮಗನಿಗೆ ಪೋನ ಮಾಡಿ ತಿಳಿಸಿದ್ದು ನನ್ನ ಮಗನಾದ ದೇವರಾಜ ಈತನು ಬಂದು ನನಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಶಹಾಪೂರದಲ್ಲಿ ಕಾಯಿಪಲ್ಲೆ ಮಾರುತ್ತಿದ್ದ ನನ್ನ ಹೆಂಡತಿ ಆಸ್ಪತ್ರೆಗೆ ಬಂದು ನೋಡಿರುತ್ತಾಳೆ.ನಾನು ನನ್ನ ಮೋಟಾರ್ ಸೈಕಲ ಮೇಲೆ ನಿದಾನವಾಗಿ ಶಹಾಪೂರ ದಿಂದ ನಮ್ಮೂರಾದ ದಂಡ ಸೋಲ್ಲಾಪೂರ ಗ್ರಾಮಕ್ಕೆ ಹೋಗುವಾಗ ಎದುರಿನಿಂದ ಬಂದ ಪಲ್ಸರ ಮೋಟಾರ್ ಸೈಕಲ್ ಚೆಸ್ಸಿ ನಂ:   ಒಆ2ಂ92ಅಙಘಿಎಅಈ37351 ನೇದ್ದರ ಚಾಲಕ ಚಿದಾನಂದ ತಂದೆ ಮಲ್ಲಿಕಾಜರ್ುನ ಗೌಡ್ರ ಸಾ: ಚಾಮನಾಳ ಈತನ ಮೇಲೆ ಕಾನೂನು ಕ್ರಮ ಜರುಗಿಸಬೆಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 100/2019 ಕಲಂ, 279, 337 ಐಪಿಸಿ ಸಂಗಡ 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!