ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-09-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 129/19 ಕಲಂ 279,338 ಐಪಿಸಿ:-ದಿನಾಂಕ 12-09-2019 ರಂದು ರಾತ್ರಿ 8-30 ಗಂಟೆಗೆ ಆರೋಪಿ ವಿಯಕುಮಾರ ತಂದೆ ಸುಭಾಸ ಮ್ಯಾಗೇರಿ ವಯಾ: 26 ಉ: ಕೂಲಿ ಜಾ: ಕಬ್ಬಲಿಗೇರ ಸಾ: ಬಂಕೂರ ತಾಜಿ: ಚಿತಾಪೂರ ಜಿಲ್ಲಾ: ಕಲಬುರಗಿ ಇತನು ತನ್ನ ಮೋಟಾರ ಸೈಕಲ್ ನಂ ಕೆ.ಎ-32/ಎಸ್-1254 ನೆದ್ದನ್ನು ನಡೆಸಿಕೊಂಡು ಮೈಲಾಪೂರ ಗ್ರಾಮದಿಂದ ಯಾದಗಿರಿ ಮಾರ್ಗವಾಗಿ ತಮ್ಮ ಸ್ವಂತ ಊರಾದ ಬಂಕೂರ ಗ್ರಾಮಕ್ಕೆ ಹೊರಟಾಗ ಅಲ್ಲಿಪೂರ ಮತ್ತು ಯರಗೊಳ ಮಧ್ಯ ಆರೋಪಿತನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಹೋಗಿ ಯರಗೋಳ ಸಮೀಪ ರೋಡಿನ ಮೇಲೆ ಸ್ಕೀಡ್ ಆಗಿ ಬಿದ್ದು ಭಾರಿ ಗಾಯಹೊಂದಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 238/2019. ಕಲಂ 78 (3) ಕೆ.ಪಿ.ಆಕ್ಟ:- ದಿನಾಂಕ:19-09-2019 ರಂದು 3:00 ಪಿ.ಎಮ್.ಕ್ಕೆ ಆರೋಪಿತನು ಕನ್ಯಾಕೊಳುರು ಗ್ರಾಮದ ಅಂಬಿಗರ ಚೌಡಯ್ಯ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಒಂದು ರೂಪಾಯಿಗೆ 80 ರೂ ಬರುತ್ತದೆ. ದೈವದ ಆಟಾ ಆಡಿರಿ ಎಂದು ಕೂಗಿ ಕರೆಯುತ್ತಾ ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಫಿಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿಮಾಡಿ ಹಿಡಿದು ಅವರಿಂದ 1) ನಗದು ಹಣ 780/- 2) ಒಂದು ಬಾಲ್ ಪೆನ್ .ಕಿ.00=00 3) ಒಂದು ಮಟಕಾ ಚೀಟಿಗಳು ಅ.ಕಿ. 00=00 ಜಪ್ತಿ ಪಡಿಸಿಕೊಂಡು ಮರಳಿ ಠಣೆಗೆ ಬಂದು ಕ್ರಮ ಜರುಗಿಸಿದ್ದು ಇದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 498(ಎ) 323 341 504 506 ಸಂಗಡ 34 ಐಪಿಸಿ:-ದಿನಾಂಕ:14/09/2019 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಗಂಡನಾದ ಚಂದಪ್ಪನಿಗೆ ಕರೆಯಲು ತಮ್ಮ ಮೈದುನನ ಮನೆಗೆ ಹೋಗಿ ಕರೆದಾಗ ಮೈದುನ ಗುಂಡಪ್ಪನು ನಾನು ನಮ್ಮ ಅಣ್ಣನಿಗೆ ಕಳಿಸುವದಿಲ್ಲಾ ಅಂತಾ ಬೈದಾಗ ಪಿಯರ್ಾದಿ ಮರಳಿ ಮನೆಗೆ ಬರುತ್ತಿದ್ದಾಗ, ಗಂಡ ಹಾಗೂ ಮೈದುನ ಇಬ್ಬರು ಕೂಡಿ ಬಂದು ಪಿಯರ್ಾದಿಗೆ ರೋಡಿನ ಮೇಲೆ ಅಡ್ಡಗಟ್ಟಿ ನಿಲ್ಲಿಸಿ ಮೈದುನ ಕೈಯಿಂದಾ ಕಪಾಳಿಗೆ ಹೊಡೆದು ನೆಲಕ್ಕೆ ಕೆಡವಿದಾಗ ಪಿರ್ಯದಿಯ ತೆಲೆಯ ಮುಂದಿನ ಭಾಗಕ್ಕೆ ಒಳಪೆಟ್ಟಾಗಿದ್ದು, ಪಿಯರ್ಾದಿ ಗಂಡ ನಾನು ಮನೆಗೆ ಬರುವದಿಲ್ಲಾ ಏನು ಮಾಡುತ್ತಿ ಮಾಡಿಕೊ ಎಂದು ಅವಾಚ್ಯ ಶ್ಬದಗಳಿಂದಾ ಬೈದಿದ್ದು ಇರುತ್ತದೆ ಅಂತಾ ಒಂದು ಲಿಖತ ದೂರನ್ನು ಹಾಜರಪಡಸಿದ್ದರ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.
Hello There!If you like this article Share with your friend using