ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-08-2019

By blogger on ಗುರುವಾರ, ಆಗಸ್ಟ್ 8, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-08-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 120/19 ಕಲಂ ಮನುಷ್ಯ ಕಾಣೆಯಾದ ಬಗ್ಗೆ:-ದಿನಾಂಕ 08-08-2019 ರಂದು 12 ಪಿ.ಎಮ್ ಕ್ಕೆ ಶ್ರೀ ಶ್ರೀಶ್ಯಲ್ ಹೆಚ್.ಸಿ-98 ರವರು ಠಾಣೆಗೆ ತಂದು ಒಂದು ಹೇಳಿಕೆ ಫಿರ್ಯಾಧೀಯನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾಧೀಯು ಕೌಳುರು ಗ್ರಾಮದಲ್ಲಿ ಶ್ರೀ  ಬಸವರಾಜ ತಂದೆ ಚಂದ್ರಾರೆಡ್ಡಿ ಡೊಂಗೇರ ವಯಸ್ಸು 30 ವರ್ಷ ಜಾತಿ: ಕಬ್ಬಲಿಗ ಉದ್ಯೋಗ: ಒಕ್ಕಲುತನ ಸಾ: ಕೌಳೂರು  ಇವರು ಇಂದು ದಿನಾಂಕ 08-08-2019 ರಂದು ಕೌಳುರು ಗ್ರಾಮದಲ್ಲಿ  ಸಲ್ಲಿಸಿದ ಫಿರ್ಯಾಧಿ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪಜೀವನ ಮಾಡುತ್ತಿದ್ದೇನೆ ನಮ್ಮ ತಂದೆ-ತಾಯಿಗೆ ನಾವು ಐದು ಜನ ಗಂಡು ಮಕ್ಕಳು ಇರುತ್ತೇವೆ ನನ್ನ ಅಣ್ಣ ಸಾಬರೆಡ್ಡಿ ಡೋಂಗೇರ ಈತನಿಗೆ ಮದುವೆಯಾಗಿದ್ದು ಮೂರು ಜನ ಮಕ್ಕಳು ಇರುತ್ತಾರೆ. ಭೀಮಾನದಿಯ ದಂಡೆಗೆ ನಮ್ಮ ಹೋಲವಿದ್ದು ಹೊಲದ ನೀರಾವರಿ ಮಾಡುವ ಸಲುವಾಗಿ ಭೀಮಾ ನದಿಗೆ ಮೋಟಾರು ಕೂಡಿಸಿರುತ್ತೆವೆ .
     ಹೀಗಿದ್ದು ದಿನಾಂಕ 08-08-2019 ರಂದು ಬೆಳಗ್ಗೆ 9 ಗಂಟೆಗೆ ನಾನು ಮತ್ತು ನಮ್ಮ ಅಣ್ಣನಾದ ಸಾಬರೆಡ್ಡಿ ಮತ್ತು ಗೆಳೆಯರಾದ ಯಂಕಪ್ಪ ಬಾಗಲಿ ದೊಡ್ಡಪ್ಪಾ ಬಾವೂರ, ಸಾಬರೆಡ್ಡಿ ಬಾಡದೋರ ಎಲ್ಲರೂ ಕೂಡಿ  ಬೀಮಾನದಿ ಹತ್ತಿರ ಹೋಗಿ ನಮ್ಮ ಹೋಲಕ್ಕೆ ಕೂಡಿಸಿರುವ ಮೋಟಾರದ ಪ್ಯಪ ನೀರಿನಲ್ಲಿ ಹರಿದುಕೊಂಡು ಹೋಗುತ್ತದೆ ಅಂತ ತಿಳಿದು ಅದನ್ನು ತೆಗೆಯುವುದಕ್ಕೆ ನನ್ನ ಅಣ್ಣನು ತನ್ನ ಟೊಂಕಕ್ಕೆ ಹಗ್ಗವನ್ನು ಕಟ್ಟಿಕೊಂಡು ನದಿಯ ನೀರಿನಲ್ಲಿ ಇಳಿದಿದ್ದನು.  ನಾವೆಲ್ಲರೂ ಮೇಲೆ ನಿಂತು ಹಗ್ಗವನ್ನು ಹಿಡಿದುಕೊಂಡಿದ್ದೆವು ಆಗ ನೀರಿನ ಒತ್ತಡ ಜಾಸ್ತಿಯಾದಾಗ ನನ್ನ ಅಣ್ಣನು ಹಗ್ಗ ತನ್ನ ಹೊಟ್ಟೆಗೆ ಬಿಗಿಯಾಗಿತ್ತಿದೆ ನೀವು- ಬಿಟ್ಟುಬಿಡಿ ಈಜಾಡಿ ಬರುತ್ತೇನೆ ಅಂತ ಅಂದನು. ಆಗ ಅವನು ನೀರಿನಲ್ಲಿ ಮುಳುಗಿ ಹೋದವನು ಇಲ್ಲಿಯವರೆಗೆ ಬಂದಿರುವುದಿಲ್ಲಾ. ನೀರಿನಲ್ಲಿ ಕಾಣೆಯಾಗಿರುತ್ತಾನೆ. ಅವನ ಚಹರೆ ಪಟ್ಟಿ ದುಂಡು ಮುಖ, ಕಪ್ಪು ಬಣ್ಣ, ಸಾದಾ ಮ್ಯಕಟ್ಟು ಹೊಂದಿದ್ದು ಅರಿಶಿಣ ಕಲರ ಚೆಡ್ಡಿ ಹಾಕಿಕೊಂಡಿರುತ್ತಾನೆ. ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಈ ಘಟನೆ ಇಂದು ಬೆಳಗ್ಗೆ 9-30 ಗಂಟೆಗೆ ನಡೆದಿರುತ್ತದೆ. ಅವನನ್ನು ಕೊಡಲು ಮನವಿ ಅಂತಾ ಹೇಳಿಕೆ ಸಾರಾಂಶವಿರುತ್ತದೆ. ಸದರಿ ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 120/2019 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕ್ಯಗೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 133/2019 ಕಲಂ 279, 337, 338 ಐಪಿಸಿ:-ದಿನಾಂಕ 07.08.2019 ರಂದು ಮಧ್ಯಾಹ್ನ 1:30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಆತನ ತಾಯಿ ಯಾದಗಿರಿಗೆ ಹೋಗುವ ಕುರಿತು ಗುರುಮಠಕಲ್ ಡಿಪೊ ಬಸ್ ನಂ: ಕೆಎ-33-ಎಫ್-0235 ನೇದ್ದರಲ್ಲಿ ಕಂದಕೂರ ಗೇಟ್ನಿಂದ ಯಾದಗಿರಿ ಕಡೆಗೆ ಹೋಗುತ್ತಿದ್ದಾಗ ಪಸಪುಲ್ ಗೇಟ್ ದಾಟಿದ ನಂತರ ಗೋಪಳಾಪೂರ ಗೇಟ್ನ ನಡುವೆ ಬಸ್ ಚಾಲಕ ಬಸ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅಪಘಾತ ಪಡಿಸಿದ್ದರ ಪರಿಣಾಮವಾಗಿ ಗಾಯಾಳುದಾರರಿಗೆ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾದಿಯು ಇಂದು ದಿನಾಂಕ 08.08.2019 ರಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 133/2019 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.  
                                                                                       

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 205/2019. ಕಲಂ 78 (3).ಕೆ.ಪಿ.ಯಾಕ್ಟ:- ದಿನಾಂಕ 08/08/2019 ರಂದು 1:35 ಪಿಎಂ ಕ್ಕೆ  ಆರೋಪಿತನು ಗುಂಡಗುತರ್ಿ ಗಾಮದ ಬಸ್ ನಿಲ್ದಾಣದ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಫಿಯರ್ಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ  ಆತನ ಹತ್ತಿರ ನಗದು ಹಣ 1780/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ್ ಪೆನ್  ಅವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 08/08/2019 ರಂದು 3:.20 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 4.00 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 205/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 168/2019 ಕಲಂ. 363 ಐಪಿಸಿ:-ದಿನಾಂಕಃ 08/08/2019 ರಂದು 3 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀ ಬಲಬೀಮ ತಂದೆ ಶಂಕರಾವ್ ಪವಾರ ಸಾ:ಹಾವಿನಾಳ ಇವರುಠಾಣೆಗೆ ಹಾಜರಾಗಿಒಂದುಗಣಕೀಕೃತಅಜರ್ಿ ನಿಡಿದ್ದು, ಸಾರಾಂಶವೆನೆಂದರೆ, ನನಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬನುಗಂಡು ಮಗನಿರುತ್ತಾನೆ. ಗಂಡು ಮಗನಾದ ಆಕಾಶ ಈತನುಕೊನೆಯ ಮಗನಾಗಿದ್ದು, ಸುರಪೂರದ ಶೀ ಅಂಬೇಡ್ಕರ ಹೈಸ್ಕೂಲದಲ್ಲಿ 10 ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದನು. ನನ್ನ ಮಗನಾದ ಆಕಾಶ ಈತನುಯಾವಾಗಲುಒಬ್ಬಂಟಿಯಾಗಿರುತ್ತಿದ್ದುಯಾರಜೋತೆಯೂ ಬೆರೆಯುತ್ತಿರಲಿಲ್ಲ. ಈಗ ಒಂದು ವರ್ಷದ ಹಿಂದೆ ಮನೆಯಿಂದ ಹೇಳದೆ ಕೇಳದೆ ಮನೆ ಬಿಟ್ಟು ಕಲಬುರಗಿ ಹೋಗಿ ಕಲಬುರಗಿಯಲ್ಲಿ ಪೋಲಿಸರ  ಕೈಗೆ ಸಿಕ್ಕಿದಾಗ ಅವರು ನನಗೆ ಪೋನ ಮಾಡಿ ಹೇಳಿದಾಗ ನಾನು ಅವನನ್ನುಕರೆದುಕೊಂಡು ಬಂದಿದ್ದೆನು. ಹೀಗಿರುವಾಗ ದಿನಾಂಕ:22-07-2019 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿಯಾದ ಸರೋಜ ಮಗಳಾದ ನಾಗವೇಣಿ ಮೂವರು ಮನೆಯಲ್ಲಿರುವಾಗ ನನ್ನ ಮಗನಾದ ಆಕಾಶ ಈತನು ಬಸ್ಸ ಪಾಸ ತಗೆಸಬೇಕುಅಂತಾ 1000=00 ರೂಪಾಯಿಗಳನ್ನು ತಗೆದುಕೊಂಡು ಮನೆಯಿಂದ ಸುರಪೂರ ಬಸ್ಸ ನಿಲ್ದಾಣಕ್ಕೆ 9-45 ಎ.ಎಂ.ಕ್ಕೆ ಬಂದವನು ಮರಳಿ ಮನೆಗೆ ಬಂದಿರುವದಿಲ್ಲ. ಅವನನ್ನುಯಾರೋಅಪಹರಣ ಮಾಡಿಕೊಂಡು ಹೋಗಿರಬಹದು ನಾವು ಎಲ್ಲಾಕಡೆ ಹುಡುಕಾಡಿದ್ದುಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ಮಗನಾದ ಆಕಾಶ ಈತನು ಬಗ್ಗೆ ಶಾಲೆಯಲ್ಲಿ ವಿಚಾರಿಸಲು ಅವನು ಯಾವಾಗರೆಒಂದು ದಿನ ಶಾಲೆಗೆ ಬಂದಿದ್ದು ಹೆಚ್ಚಾಗಿ ಶಾಲೆಗೆ ಗೈರು ಹಾಜರುಇರುತ್ತಾನೆ. ಅಂತಾ ಶಾಲೆಯ ಗುರುಗಳಿಂದ ಗೊತ್ತಾಗಿರುತ್ತದೆ. ನನ್ನ ಮಗ ಮನೆಯಿಂದ ಹೋಗುವಾಗ ಚೌಕಳಿ ಕಪ್ಪು ಬಿಳಿ ಬಣ್ಣದ ಅಂಗಿ, ನೀಲಿ ಬಣ್ಣದಜೀನ್ಸ ಪ್ಯಾಂಟತೊಟ್ಟಿದ್ದು, ಸಾಧಾಕೆಂಪು ಬಣ್ಣ ಹೊಂದಿದ್ದುದುಂಡನೆ ಮುಖ ಎತ್ತರ 4,6' ಇಂಚು ಇದ್ದುಕನ್ನಡ ಮತ್ತು ಮರಾಠಾ ಬಾಷೆ ಬಲ್ಲವಾನಿರುತ್ತಾನೆ. ನನ್ನ ಮಗ ಆಕಾಶನನ್ನುಯಾರೋಯಾವೋದೋಉದ್ದೇಶಕ್ಕಾಗಿಅಪಹರಣ ಮಾಡಿಕೊಂಡು ಹೋಗಿರಬಹದು. ಎಲ್ಲಾಕಡೆ ಪತ್ತೆ ಮಾಡಿಠಾಣೆಗೆತಡವಾಗಿ ಬಂದಿದ್ದುಇರುತ್ತದೆ. ನನ್ನ ಮಗ ಅಪಹರಣವಾದ ಬಗ್ಗೆ  ಪ್ರಕರಣ ದಾಖಲಿಸಿ ಮಗನನ್ನು  ಪತ್ತೆ ಮಾಡಿಕೊಡಲು ವಿನಂತಿ. ಅಂತಾಕೊಟ್ಟಅಜರ್ಿ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!