ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-08-2019

By blogger on ಬುಧವಾರ, ಆಗಸ್ಟ್ 7, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-08-2019 

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 45/2019 ಕಲಂ 420, 379 ಐಪಿಸಿ:-ದಿನಾಂಕ 07.08.219 ರಂದು ಬೆಳಗ್ಗೆ 11:15 ಗಂಟೆಗೆ ಪಿಯರ್ಾದಿ ದೇವಿನೇನಿ ಮುರಳಿಕೃಷ್ಣ ತಂದೆ ಸೂರ್ಯನಾರಾಯಣ ದೇವಿನೇನಿ ವ: 62 ವರ್ಷ ಉ: ಒಕ್ಕಲುತನ ಜಾ: ಹಿಂದೂ ಕಮ್ಮಾ ಸಾ: ದೇವತ್ಕಲ್ ಬೈಲಮಡ್ಡಿ ತಾ: ಸುರಪೂರ  ಮೋಬೈಲ್ ಪೋನ್ ನಂ:9901028189  ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ಬಂದ ಫಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ, ನಾನು ದೇವತ್ಕಲ್ ಸಿಮಾಂತರದಲ್ಲಿ  ಈಗ  33-35 ವರ್ಷಗಳಿಂದ ಗದ್ದೆಗಳನ್ನು ಲೀಜಿಗೆ ಹಾಕಿಕೊಂಡು ಒಕ್ಕಲುತನ ಮಾಡುತ್ತಿದ್ದು ದೇವತ್ಕಲ್ ಬೈಲಮಡ್ಡಿ ಕ್ಯಾಂಪ್ದಲ್ಲಿ ಗುಡಿಸಲು ಹಾಕಿಕೊಂಡು ಹೆಂಡತಿ ಮಕ್ಕಳೊಂದಿಗೆ ಉಪ ಜೀವಿಸುತ್ತೇನೆ. ನಾನು ವ್ಯವಹಾರದ ಸಲುವಾಗಿ ಕಕ್ಕೆರಾ ಎಸ್ಬಿಐ ಬ್ಯಾಂಕಿನಲ್ಲಿ ನನ್ನ ಹೆಸರಿನಲ್ಲಿ ಎಸ್ಬಿ ಅಕೌಂಟ್ ತೆರದಿದ್ದು ನನ್ನ ಬ್ಯಾಂಕ ಖಾತೆ ನಂಬರ:33891434358 ಇದ್ದು. ನಾನು ಸದರಿ ಖಾತೆಯ ಮೇಲೆ ಎಟಿಮ್ ಕಾರ್ಡ ಪಡೆದಿರುತ್ತೇನೆ ನನ್ನ ಎಟಿಮ್ ಕಾರ್ಡ ನಂಬರ 6074310101819903 ಇದ್ದು ಈ ಎಟಿಮ್ನಿಂದ ನಾನು ಆಗಾಗ ಹಣವನ್ನು ಡ್ರಾ ಮಾಡಿಕೊಂಡು  ಬಂದಿರುತ್ತೇನೆ. ಹೀಗಿದ್ದು ದಿನಾಂಕ: 31.07.2019 ರಂದು ಮದ್ಯಾಹ್ನ 2:58 ಗಂಟೆಗೆ  ನನ್ನ ಅಕೌಂಟನಲ್ಲಿರುವ ಹಣವನ್ನು ಪಡೆದುಕೊಳ್ಳುವ ಸಲುವಾಗಿ ಕಕ್ಕೇರಾ ಪಟ್ಟಣದಲ್ಲಿರುವ ಎಸ್ಬಿಐ ಎಟಿಮ್ದೊಳಗೆ ಹೋಗಿ ಎರಡು ಸಲ ನನ್ನ ಎಟಿಮ್ ಕಾರ್ಡ ಹಾಕಿ ಒಮ್ಮೆ 5,000/- ಮತ್ತೊಮ್ಮೆ 5,000/- ಹಣ ಡ್ರಾ ಮಾಡಿಕೊಂಡು ಎಟಿಎಮ್ ಹೊರಗೆ ಬಂದು ಸ್ವಲ್ಪ ಹೊತ್ತು ನಿಂತು ಮತ್ತೆ ನಾನು ಎಟಿಎಮ್ದೊಳಗೆ  ಹೋಗಿ ಬ್ಯಾಲೆನ್ಸ್ ಸ್ಟೇಟ್ಮೆಂಟ್ ಪಡೆಯಲು ನನ್ನ ಎಟಿಮ್ ಕಾರ್ಡನ್ನು ಹಾಕಿದಾಗ ಎಟಿಮ್ ಕಾರ್ಡ ಹೊರಗೆ ಬರದೆ ಸಿಕ್ಕಿಹಾಕಿಕೊಂಡಿದ್ದು ಆಗ ಅಲ್ಲಿದ್ದ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನನಗೆ ಎಟಿಎಮ್ ಕಾರ್ಡ ತಾನು ತೆಗೆದುಕೊಡುತ್ತೇನೆ ಅಂತಾ ಹೇಳಿ ಎಟಿಎಮ್ ಕಾರ್ಡನ್ನು ಹೊರಗೆ ತೆಗೆದಿದ್ದು ನಂತರ ಅವನು ನನ್ನ ಎಟಿಎಮ್ ಕಾರ್ಡ ಮರಳಿ ಕೊಡುವಾಗ ಮೋಸತನದಿಂದ ನನ್ನ ಕಾರ್ಡನ್ನು ಕಳ್ಳತನ ಮಾಡಿ ತನ್ನಲ್ಲಿ ಇಟ್ಟುಕೊಂಡು ನನಗೆ ಗೊತ್ತಾಗದ ಹಾಗೆ ತನ್ನ ಹತ್ತಿರ ಇದ್ದ ಬೇರೆ ಕಾರ್ಡನ್ನ ಮೋಸತನದಿಂದ ನನಗೆ ಕೊಟ್ಟಿರುತ್ತಾನೆ. ಅದನ್ನು ನಾನು ನಂತರದಲ್ಲಿ ನೋಡಿದಾಗ ಗೊತ್ತಾಗಿರುತ್ತದೆ. ನಂತರ ದಿನಾಂಕ:01.08.2019 ರಂದು ಬೆಳಗ್ಗೆ 11:00 -11;30 ಗಂಟೆಯ ಸುಮಾರಿಗೆ ನನ್ನ ಪೋನ್ ನಂಬರ 9901028189 ನೆದ್ದಕ್ಕೆ ನನ್ನ ಬ್ಯಾಂಕ ಖಾತೆ ನಂಬರ:33891434358  ನೇದ್ದರಿಂದ  10,000/- ಮತ್ತು 30,000/ರೂ ನಾನು ಬಾಬುಮಾಬುಸಾಬ ಅಂಬುವರಿಗೆ ಟ್ರಾನ್ಸಪರ್ ಮಾಡಿದ ಹಾಗೆ ಮೇಸೇಜ್ ಬಂದಿದ್ದು ನಂತರ ನಾನು ಅದೆ ದಿವಸ ಗಾಬರಿಯಾಗಿ ನಮ್ಮ ಕ್ಯಾಂಪಿನ ಬಿ ವೆಂಕಟಶಿವ ತಂದೆ ಬಿ ನಾಗೇಶ್ವರರಾವ್ ರವರರೊಂದಿಗೆ ಕಕ್ಕೇರಾ ಎಸ್ಬಿಐ ಬ್ಯಾಂಕಿಗೆ ಹೋಗಿ ಅಲ್ಲಿನ ಸಿಬ್ಬಂದಿಯವರಿಗೆ  ಬೇಟಿಯಾಗಿ ಪರಿಶೀಲಿಸಿ ನೋಡಿದಾಗ  ನನ್ನ ಖಾತೆಯಿಂದ ದಿನಾಂಕ:31.07.2019 ರಂದು 19,955/- ರೂ, 29,955/- ರೂ 10,000/- ರೂ 30,000/- ರೂ ಹಾಗೂ ದಿನಾಂಕ:01.08.2019 ರಂದು 10,000/- ರೂ 50,000/- 30,000/- 20,000/- ರೂಗಳು ಒಟ್ಟು 1,99,910 ರೂಗಳು  ನನ್ನ ಖಾತೆಯಿಂದ ಟ್ರಾನ್ಸಪರ್ ಆದ ಬಗ್ಗೆ  ಈ ಹಣ ನಾಗಬೂಷಣ ಪೆಟ್ರೋಲ್  ಬಂಕನಲ್ಲಿ ಸ್ವೈಪ್ ಮಾಡಿ, ಬಾಬು ಮಾಬುಸಾಬ ಅಂಬುವರಿಗೆ ಟ್ರಾನ್ಸ್ಪರ್ ಮಾಡಿ ಮತ್ತು ಡ್ರಾ ಮಾಡಿಕೊಂಡ ಬಗ್ಗೆ ಗೊತ್ತಾಗಿರುತ್ತದೆ. ಕಾರಣ ನಾನು ದಿನಾಂಕ:31.07.2019 ರಂದು ಮದ್ಯಾಹ್ನ 2:58 ಗಂಟೆಯ ಸುಮಾರಿಗೆ ಕಕ್ಕೆರಾ ಎಸ್ಬಿಐ ಎಟಿಎಮ್ದಲ್ಲಿ ಹಣ ಡ್ರಾ ಮಾಡಿಕೊಂಡು ಬ್ಯಾಲೆನ್ಸ್ ಸ್ಟೆಟ್ಮೆಂಟ್ ತೆಗೆದುಕೊಳ್ಳಲು ಎಟಿಎಮ್ ಕಾರ್ಡ ಹಾಕಿದಾಗ ಎಟಿಎಮ್ ಕಾರ್ಡ  ಹೊರಗೆ ಬರದೆ ಸಿಕ್ಕಿಕೊಂಡಾಗ ಅಲ್ಲಿದ್ದ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನನಗೆ ಎಟಿಎಮ್  ಕಾರ್ಡ ತೆಗೆಕೊಡುತ್ತೇನೆ ಅಂತಾ ಹೇಳಿ ಕಾರ್ಡ ತೆಗೆದು ನನಗೆ ಗೊತ್ತಿಲ್ಲದಂತೆ  ಮೋಸತನದಿಂದ ಕಾರ್ಡನ್ನು ಬದಲಾಯಿಸಿ ನನ್ನ ಕಾರ್ಡನನ್ನು ಕಳ್ಳತನ ಮಾಡಿಕೊಂಡು ತನ್ನಲ್ಲಿಯ  ಒಂದು ಕಾರ್ಡನ್ನು ನನಗೆ ಮೋಸತನದಿಂದ ಕೊಟ್ಟಿದ್ದು. ದಿನಾಂಕ:31.07.2019 ಮತ್ತು ದಿನಾಂಕ:01.08.2019 ರಂದು ನನ್ನ ಎಟಿಎಮ್ ಕಾರ್ಡನ್ನು  ಮೋಸತನದಿಂದ ಉಪಯೋಗ ಮಾಡಿ ನಗದು ಹಣ  ಒಟ್ಟು 1,99,910 ರೂಗಳನ್ನು ಡ್ರಾ ಹಾಗೂ ವಿವಿಧ ರೂಪದಲ್ಲಿ ಕಳ್ಳತನ ಮಾಡಿದ್ದು ಅವನನ್ನು ಪತ್ತೆ ಮಾಡಿ ಅವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಮುಂದೆ ನಾನು ನೋಡಿದಲ್ಲಿ ಅವನನ್ನು ಗುರುತಿಸುತ್ತೇನೆ ಮನೆಯಲ್ಲಿ ಮತ್ತು ನನ್ನ ಸಂಬಂದಿಕರಿಗೆ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಇದ್ದು ಸದರ ಪಿರ್ಯಾಧಿಯ ಅಜರ್ಿಯ  ಸಾರಾಂಶದ  ಮೇಲಿಂದ ಠಾಣೆಯ ಗುನ್ನೆ ನಂ 45/2019 ಕಲಂ: 420, 379, ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 70/2019 ಕಲಂ. 279 304(ಎ) ಐಪಿಸಿ & 187 ಐಎಂವಿ ಕಾಯ್ದೆ:- ದಿನಾಂಕ:07/08/2019 ರಂದು ನಡೆದುಕೊಂಡು ಹೊಲದಿಂದಾ ಮನೆಗೆ ಬರುವಾಗ ಸಾಯಂಕಾಲ 7.45 ಗಂಟೆಯ ಸುಮಾರಿಗೆ ತಾಳಿಕೋಟಿ-ಹುಣಸಗಿ ರೋಡಿನ ಮೇಲೆ ಆಶ್ರಯ ಕಾಲೋನಿ ಹತ್ತಿರ ಹುಣಸಗಿ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಯಾವೋದೋ ಒಂದು ವಾಹನ ಮೃತನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಮೃತನಿಗೆ ಮೂಗಿಗೆ ಹರಿದು ಭಾರಿ ರಕ್ತಗಾಯ, ತೆಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯ, ಮತ್ತು ಬಲಗಾಲ ಮೊಳಕಾಲ ಕೆಳಗೆ ತರಚಿದ ರಕ್ತಗಾಯವಾಗಿ ಎರಡು ಕಿವಿಯಿಂದಾ ರಕ್ತ ಸೋರಿದ್ದು, ಹೆಚ್ಚಿನ ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಯಿಂದಾ ಕಲಬುಗರ್ಿ ದವಾಖಾನೆಗೆ ತೆಗೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ 9.30 ಪಿ.ಎಂ ಕ್ಕೆ ಹುಣಸಗಿ ಸರಕಾರಿ ದವಾಖಾನೆಯಲ್ಲಿ ಮೃತಪಟ್ಟಿದ್ದು ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.   
                                                                                       

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 27/2019 ಕಲಂ: 323,324,354,504,506, ಸಂಗಡ 34,ಐಪಿಸಿ:-ದಿನಾಂಕ 06/08/2019 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ಪಿಯರ್ಾದಿ ಮತ್ತು ಪಿಯರ್ಾದಿ ಗಂಡ ತಮ್ಮ ಮನೆಯ ಮುಂದೆ ಇದ್ದಾಗ ಅವರ  ಅಣ್ಣ ತಮ್ಮಕೀಯವರಾದ ಗಂಗಪ್ಪ ಈತನ ಮಕ್ಕಳಾದ ಯಮನೂರ ತಂದೆ ಗಂಗಪ್ಪ, ಗದ್ದೆಪ್ಪ ತಂದೆ ಗಂಗಪ್ಪ, ಗಂಗಪ್ಪ ತಂದೆ ಗಂಗಪ್ಪ ಜಾ:ಎಲ್ಲರೂ ಕೋರವರ ಸಾ: ನಾರಾಯಣಪೂರ ಇವರು ಪಿಯರ್ಾದಿಯ ಮನೆಯ ಮುಂದೆ ಬಂದು ಪಿಯರ್ಾದಿಗೆ ಮತ್ತು ಪಿಯರ್ಾದಿ ಗಂಡನಿಗೆ ಬೋಸುಡಿ ಮಕ್ಕಳೆ ನೀವು ನಾರಾಯಣಪೂರದಲ್ಲಿನ ನಮ್ಮ ಹಂದಿಗಳನ್ನು ಏಕೆ ಮಾರಾಟ ಮಾಡಿದ್ದಿರಿ ಅಂತಾ ಪಿಯರ್ಾದಿದಾರರೊಂದಿಗೆ ತಕರಾರು ತಗೆದರು  ಆಗ ಪಿಯರ್ಾದಿ ಮತ್ತು ಪಿಯರ್ಾದಿ ಗಂಡ ಅವರಿಗೆ ನಾವು ನಿಮ್ಮ ಹಂದಿಗಳನ್ನು ಮಾರಾಟ ಮಾಡಿಲ್ಲ ಮೇಲಿನಗಡ್ಡಿಯಲ್ಲಿ ಇರುವ ನಮ್ಮ ಹಂದಿಗಳನ್ನು ಮಾರಾಟ ಮಾಡಿದ್ದೇವೆ ಅಂತಾ ಹೇಳಿದರೂ ಸಹಿತ ಆರೋಪಿತರು  ಪಿಯರ್ಾದಿಗೆ ಮತ್ತು ಪಿಯರ್ಾದಿ ಗಂಡನಿಗೆ ಬೋಸುಡಿ ಮಕ್ಕಳೆ ನೀವು ಸುಳ್ಳು ಹೇಳುತ್ತಿರಿ ಅಂತಾ ನಮ್ಮೊಂದಿಗೆ ತಕರಾರು ತಗೆದು ಅವರಲ್ಲಿಯ ಯಮನೂರ ತಂದೆ ಗಂಗಪ್ಪ ಈತನು ಪಿಯರ್ಾದಿ ಗಂಡನಿಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ಸೊಂಟಕ್ಕೆ ಒದ್ದನು ನಂತರ ಗದ್ದೆಪ್ಪ ತಂದೆ ಗಂಗಪ್ಪ ಈತನು ಅಲ್ಲಿಯೇ ಇದ್ದ ಬಡಿಗೆಯನ್ನು ತಗೆದುಕೊಂಡು ಬಲಗಡೆ  ಮಲಕಿಗೆ ಹೊಡೆದಿದ್ದು ಇದರಿಂದ ಪಿಯರ್ಾದಿ ಗಂಡನಿಗೆ ಬಲಗಡೆ ಮಲಕಿಗೆ  ರಕ್ತಗಾಯವಾಗಿದ್ದು ನಂತರ ಬಡಿಗೆಯಿಂದ ಬಲಬುಜಕ್ಕೆ ಬಡಿಗೆಯಿಂದ ಹೊಡೆದಿದ್ದು ಇದರಿಂದ  ಬಲಬುಜಕ್ಕ ಒಳಪೆಟ್ಟಾಗಿದ್ದು ಆಗ ಪಿಯರ್ಾದಿಯವರು ತಮ್ಮ  ಗಂಡನಿಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಳ್ಳಲು ಹೋದಾಗ ಗಂಗಪ್ಪ ಈತನು ಪಿಯರ್ಾದಿಯನ್ನು ಹಿಡಿದುಕೊಂಡು ಪಿಯರ್ಾದಿಯ ಸೀರೆಹಿಡಿದು ಎಳೆದಾಡಿ ಮಾನಬಂಗ ಪಡಿಸಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿಯರ್ಾದಿ.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 204/2019 ಕಲಂ 78[3] ಕೆ.ಪಿ ಆಕ್ಟ:- ದಿನಾಂಕ 07/08/2019 ರಂದು ಸಾಯಂಕಾಲ 17-00 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಣ್ಣ ಎ.ಎಸ್.ಐ, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ಒಬ್ಬ ವ್ಯಕ್ತಿಯನ್ನು, ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 07/08/2019 ರಂದು ಮದ್ಯಾಹ್ನ 14-15 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಹಳೆ ಬಸ್ ನಿಲ್ದಾಣದ ಆವರಣದಲ್ಲಿ  ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಸದರಿ ವ್ಯಕ್ತಿ ಸಿಕ್ಕಿದ್ದು, ಹೆಸರು ವಿಳಾಸ ವಿಚಾರಿಸಲು 1) ಗಂಗಪ್ಪ ತಂದೆ  ನಾಗಪ್ಪ ತಡಿಬಿಡಿ ವಯ 22 ವರ್ಷ ಜಾತಿ ಪ.ಜಾತಿ(ಹೊಲೆಯ) ಉಃ  ಮಟಕಾ ಅಂಕಿ ಬರೆದುಕೊಳ್ಳುವದು ಸಾಃ ಬೆನಕನಳ್ಳಿ(ಜೆ)  ತಾಃ ಶಹಾಪೂರ  ಅಂತ ಹೇಳಿದ್ದು ಸದರಿಯವನ ಅಂಗಶೋಧನೆ ಮಾಡಿದಾಗ ನಗದು ಹಣ 1450=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಮದ್ಯಾಹ್ನ 15-15 ಗಂಟೆಯಿಂದ ಸಾಯಂಕಾಲ 16-15 ಗಂಟೆಯ ಅವಧಿಯಲ್ಲಿ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ದ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 48/2019 ಕಲಂ 78(3)  ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 17-30 ಗಂಟೆಗೆ  ಠಾಣೆ ಗುನ್ನೆ ನಂಬರ 204/2019 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                          

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 69/2019 78(3)  ಕೆ.ಪಿ ಯಾಕ್ಟ :- ದಿನಾಂಕ:06/08/2019 ರಂದು 13.45 ಗಂಟೆಯ ಸುಮಾರಿಗೆ ಆರೋಪಿತನು ಚನ್ನುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಕಲ್ಯಾಣ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, 133, 178 ಪಿಸಿ-233, ರವರೊಂದಿಗೆ ದಾಳಿ ಮಾಡಿದ್ದು ಆರೋಪಿತನಿಂದ 580=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ.

ಭೀ. ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 95/2019 ಕಲಂ 78[3] ಕೆಪಿ ಎಕ್ಟ:- ದಿನಾಂಕ 07/08/2019 ರಂದು 9.10 ಪಿ.ಎಮ್.ಕ್ಕೆ ಮುಡಬೂಳ ಗ್ರಾಮದ ವಾಲ್ಮೀಕಿ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಕಲ್ಯಾಣ ಮಟಕಾ ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1170=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 9.20 ಪಿಎಮ್ ದಿಂದ 10.20 ಪಿಎಮ್ ವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು 11.00 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ದಿನಾಂಕ:08/08/2019 ರಂದು 12.30 ಎ.ಎಮ್ ಕ್ಕೆ ಠಾಣೆ ಗುನ್ನೆ ನಂ 95/2019 ಕಲಂ 78[3] ಕೆ.ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!